Police Bhavan Kalaburagi

Police Bhavan Kalaburagi

Thursday, September 10, 2020

KALABURAGI DISTRICT PRESS NOTE

                                                                             ¥ÀwæPÁ ¥ÀæPÀluÉ

 ಕಲಬುರಗಿ ಜಿಲ್ಲಾ ಪೊಲೀಸರ ಕಾರ್ಯಚರಣೆ :

ಮನೆ ಕನ್ನ ಕಳವು ಮತ್ತು ಮೋಟಾರ ಸೈಕಲ  ಕಳ್ಳನ ಬಂಧನ  ಅಂದಾಜು 11 ಲಕ್ಷ ರೂ ಮೌಲ್ಯದ, ಬಂಗಾರದ ಸಾಮಾನುಗಳು , ಮೋಟಾರ್ ಸೈಕಲಗಳು,  ಹಾಗೂ ನಗದು ಹಣ ಜಪ್ತಿ

ಕಲಬುರಗಿ ಜಿಲ್ಲೆಯಲ್ಲಿ ಉಪ ವಿಭಾಗವಾರು ಸ್ವತ್ತಿನ ಅಪರಾದ ಪ್ರಕರಣಗಳ ಪತ್ತೆಗಾಗಿ  ವಿಶೇಷ ತಂಡವನ್ನು ರಚಿಸಿದ್ದು ಶಹಾಬಾದ ಉಪ ವಿಭಾಗದ ತಂಡವು  ದಿನಾಂಕ: 08/09/2020 ರಂದು ಪತ್ತೆ ಕಾರ್ಯದಲ್ಲಿ ಇದ್ದಾಗ ಶಹಾಬಾದದ ವಾಡಿ ಕ್ರಾಸ ಹತ್ತಿರ ಒಬ್ಬ ಸಂಶಯಾಸ್ಪದ ವ್ಯಕ್ತಿಗೆ ಹಿಡಿದು ಅವನಿಗೆ ವಿಚಾರಿಸಲಾಗಿ ಅರೋಪಿತನು ತನ್ನ ಹೆಸರು  ಶಿವಪ್ಪ @ ಶಿವಾ ತಂದೆ ಮಲ್ಲಿಕಾರ್ಜುನ ಟಣಕೇದಾರ ವಯಾ: 28 ವರ್ಷ ಉ: ಡ್ರೈವರ ಕೆಲಸ ಜಾ: ಬೇಡರ ಸಾ: ಬಿರಾಳ (ಕೆ) ತಾ: ಜೇವರ್ಗಿ ಹಾ:ವ: ಹಸನಾಪೂರ ತಾ: ಶೋರಪೂರ ಜಿ: ಯಾದಗೀರ ಅಂತಾ ತಿಳಿಸಿದ್ದು ಅವನಿಗೆ ವಿಚಾರಣೆಗೆ ಒಳಪಡಿಸಿದಾಗ ಇತನು  ಶಹಾಬಾದ ನಗರ ಠಾಣೆಯ ವ್ಯಾಪ್ತಿಯಲ್ಲಿ 03 ಸ್ವತ್ತಿನ ಪ್ರಕರಣಗಳಲ್ಲಿ , ಮತ್ತು   ವಾಡಿ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ  03 ಸ್ವತ್ತಿನ ಪ್ರಕರಣಗಳಲ್ಲಿ, ಯಾಡ್ರಾಮಿ  ಪೊಲೀಸ ಠಾಣೆಯ ವ್ಯಾಪ್ತಿಯ 01 ಪ್ರಕರಣದಲ್ಲಿ ಮತ್ತು ಶಹಾಪೂರ ಪಟ್ಟಣದಲ್ಲಿ 05 ಮೋಟಾರ ಸೈಕಲಗಳು  ತಾನು ಮತ್ತು  ಸಚೀನ ತಂದೆ ದೇವಿಂದ್ರಪ್ಪ ಸಾ: ಬಿರಾಳ (ಕೆ)  ಮತ್ತು ಮರಲಿಂಗ ತಂದೆ ದೇವಪ್ಪ ಸಾ: ಯರಗೋಳ ಹಾ:ವ: ಕುಂಬಾರಹಳ್ಳಿ  ರವರು ಕೂಡಿಕೊಂಡು  ಮೇಲೆ ನಮೂದಿಸಿದ ಪ್ರಕರಣಗಳಲ್ಲಿ ಕಳವು ಮಾಡಿದ ಬಗ್ಗೆ ಅರೋಪಿ ಶಿವಾ @ ಶಿವಪ್ಪ ಇತನು ಒಪ್ಪಿಕೊಂಡಿದ್ದು ಅರೋಪಿ ಶಿವಾ @ ಶಿವಪ್ಪ ಇತನಿಂದ  163 ಗ್ರಾಂ ಬಂಗಾರದ ಸಾಮಾನುಗಳು ಅ.ಕಿ 8,96500-00 ರೂ ಹಾಗೂ 05 ಮೋಟಾರ ಸೈಕಲಗಳು ಅ.ಕಿ 2,00000-00 ರೂ ಮತ್ತು 50 ಸಾವಿರ  ರೂಪಾಯಿ ನಗದು ಹಣ ಹೀಗೆ ಒಟ್ಟು ಸುಮಾರು 11 ಲಕ್ಷ ಕಿಮ್ಮತ್ತಿನ ಮಾಲು ಜಪ್ತಿ ಪಡಿಸಿಕೊಂಡಿದ್ದು ಶಹಾಬಾದ ಉಪ ವಿಭಾಗದ ತಂಡದಲ್ಲಿ ಶ್ರೀ ವಿ ಎನ್ ಪಾಟೀಲ ಡಿ ಎಸ್ ಪಿ ಶಹಾಬಾದ ಉಪ ವಿಭಾಗ , ಶ್ರೀ ಬಿ ಅಮರೇಶ  ಪಿಐ ಶಹಾಬಾದ ನಗರ ಪೊಲೀಸ ಠಾಣೆ , ಶ್ರೀ ಕೆ ಎಸ್ ಕಲ್ಲದೇವರ ಸಿಪಿ ಐ ಚಿತ್ತಾಪೂರ , ಶ್ರೀ ತಿರುಮಲೇಶ ಪಿ ಎಸ್ ಐ (ಕಾಸು) ಶಹಾಬಾದ ನಗರ ಪೊಲೀಸ ಠಾಣೆ ,  ಶ್ರೀಮತಿ ದಿವ್ಯಾ ಮಹಾದೇವ ಪಿ ಎಸ್ ಐ (ಅ.ವಿ) ವಾಡಿ ಪೊಲೀಸ ಠಾಣೆ , ಶ್ರೀಮತಿ ಯಲಮ್ಮ ಪಿ ಎಸ್ ಐ (ಅ.ವಿ) ಶಹಾಬಾದ ನಗರ ಪೊಲೀಸ ಠಾಣೆ ಹಾಗೂ ಸಿಬ್ಬಂದಿಯವರಾದ ಶ್ರೀ ಗುಂಡಪ್ಪ , ಶ್ರೀ ನಾಗೇಂದ್ರ ತಳವಾರ , ಶ್ರೀ ಬಸವರಾಜ ಹಚ್ಚಡ , ಶ್ರೀ ಲಕ್ಷ್ಮಣ ಸಾವಳಗಿ , ಶ್ರೀ ಹಣಮಂತ್ರಾಯ , ಶ್ರೀ ಬಸವರಾಜ , ಶ್ರೀ ರಮಣಯ್ಯ  ತಂಡದಲ್ಲಿ ಇದ್ದರು  ಈ ಅರೋಪಿತನು ಹಗಲು ಕನ್ನ ಕಳವು ಮತ್ತು ರಾತ್ರಿ ಕನ್ನ ಕಳವು , ಮೋಟಾರ ಸೈಕಲ , ಕಳವು ಪ್ರಕರಣಗಳಲ್ಲಿ ಬಾಗಿಯಾಗಿದ್ದು ,ಅರೋಪಿತನಿಗೆ ಶಹಾಬಾದ ನಗರ ಪೊಲೀಸ ಠಾಣೆಯ ಪ್ರಕರಣಗಳಲ್ಲಿ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.      

                                                                                                      ಸಹಿ/-

                                                                                            ಪೊಲೀಸ್ ಅಧೀಕ್ಷಕರು,

                                                                                                  ಕಲಬುರಗಿ  ಜಿಲ್ಲೆ .

No comments: