Police Bhavan Kalaburagi

Police Bhavan Kalaburagi

Tuesday, September 22, 2020

BIDAR DISTRICT DAILY CRIME UPDATE 22-09-2020

                       ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 22-09-2020

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 119/2020 ಕಲಂ 87 ಕೆ.ಪಿ. ಕಾಯ್ದೆ :-

 

ದಿನಾಂಕ:21-09-2020 ರಂದು 11:00 ಗಂಟೆಗೆ  ಎಂ. ಅಲೀಮ್ ಪಿ.ಎಸ್. (.ವಿ) ಬಸವಕಲ್ಯಾಣ ನಗರ ಠಾಣೆಯಲ್ಲಿರುವಾಗ ಬಸವಕಲ್ಯಾಣ ನಗರದ ತ್ರೀಪೂರಾಂತ ಹನುಮಾನ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಕೊಂಡು ಹಣ ಹಚ್ಚಿ ಪಣ ತೋಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ನೋಡಲು ಭಾತ್ಮಿಯಂತೆ ಬಸವಕಲ್ಯಾಣ ನಗರದ ತ್ರೀಪೂರಾಂತ ಹನುಮಾನ ಮಂದಿರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 5 ಜನರು ಗುಂಪಾಗಿ ಕುಳಿತು ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರುವಾಗ ದಾಳಿಮಾಡಿ  1] ನಾಗನಾಥ ತಂದೆ ಮಾರುತಿ ಜಮಾದಾರ ವಯಸ್ಸು//31 ವರ್ಷ  ಇವನ ಅಧೀನದಿಂದ ನಗದು ಹಣ 500/-ರೂ ಸಿಕ್ಕ್ಕಿರುತ್ತವೆ, 2] ಭೀಮಣ್ಣಾ ತಂದೆ ಕಂಟೆಪ್ಪಾ ಉದರೆ ವಯಸ್ಸು//55 ವರ್ಷ  ಇವನ ಅಂಗ ಶೋಧನೆ ಮಾಡಲು ಅವನ ಅಧಿನದಿಂದ ನಗದು ಹಣ 600/-ರೂ ಸಿಕ್ಕ್ಕಿರುತ್ತವೆ, 3] ಲಕ್ಷ್ಮಣ ತಂದೆ ದೇವಿಂದ್ರಪ್ಪಾ ಭಂಡಾರೆ ವಯಸ್ಸು//32 ವರ್ಷ  ಅಂಗ ಶೋಧನೆ ಮಾಡಲು ಅವನ ಅಧೀನದಿಂದ ನಗದು ಹಣ 700/-ರೂ ಸಿಕ್ಕ್ಕಿರುತ್ತವೆ, 4] ನಾಮದೇವ ತಂದೆ ಮಾರುತಿ ಚಾಮಲೆ ವಯಸ್ಸು//33 ವರ್ಷ  ಇವನ ಅಧೀನದಿಂದ ನಗದು ಹಣ 300/-ರೂ   ಮತ್ತು 5] ನಾಮದೇವ ತಂದೆ ಲಕ್ಷ್ಮಣ ಬೋಕ್ಕೆ ವಯಸ್ಸು//50 ವರ್ಷ  ಇವನ ಅಧೀನದಿಂದ ನಗದು ಹಣ 300/-ರೂ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಠಾಣೆ ಅಪರಾಧ ಸಂಖ್ಯ 78/2020 ಕಲಂ 78(3) ಕೆ.ಪಿ. ಕಾಯ್ದೆ :-

ದಿನಾಂಕ: 21/09/2020 ರಂದು 15:00 ಗಂಟೆಗೆ ಪಿಎಸ್ಐ ಠಾಣೆಯಲ್ಲಿದ್ದಾಗ ಗೋಕುಳ ಗ್ರಾಮದ ಹನುಮಾನ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜನರಿಂದ ಹಣವನ್ನು ಪಡೆದುಕೊಂಡು 1 ರೂ ಗೆ 80 ರೂಪಾಯಿ ಕೊಡುತ್ತೇನೆ. ಅಂತಾ ಜನರಿಗೆ ಮಟಕಾ ನಂಬರ ಚೀಟಿ ಬರೆದು ಕೊಡುತಿದ್ದಾನೆ, ಅಂತಾ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಗೋಕುಳ ಗ್ರಾಮದ ಹನುಮಾನ ಮಂದಿರದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲು ಹನುಮಾನ ಮಂದೀರದ ಹತ್ತಿರ ಒಬ್ಬನು ಸಾರ್ವಜನಿಕ ಸ್ಥಳದಲ್ಲಿ 1 ರೂ ಗೆ 80 ರೂಪಾಯಿ ಕೊಡುತ್ತೇನೆ, ಅಂತಾ ಜೋರಾಗಿ ಕೂಗಿ ಕೂಗಿ ಕರೆದು ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿ ಬರೆದು ಕೊಡುವಾಗ ಖಚಿತಪಡಿಸಿಕೊಂಡು  ದಾಳಿ ಮಾಡಿ ಹಿಡಿದು ಆತನಿಗೆ ವಿಚಾರಿಸಲು ತನ್ನ ಹೆಸರು ವಿಠ್ಠಲ ತಂದೆ ಶ್ರೀಪತಿ ಮುಚಳಂಬೆ ವಯ;27 ವರ್ಷ ಜಾತಿ; ಮರಾಠಾ :ಕೂಲಿಕೆಲಸ ಸಾ; ಗೋಕುಳ ಅಂತಾ ತಿಳಸಿದನು ಸದರಿಯವನ ಅಂಗ ಜಡ್ತ ಮಾಡಲು ಇತನ ಹತ್ತಿರ 1) ನಗದು ಹಣ 375/-2) ಮೂರು ಮಟಕಾ ನಂಬರ ಬರೆದ ಚೀಟಿಗಳು 3) ಒಂದು ಬಾಲ ಪೆನ್ನು ಜಪ್ತಿ ಮಾಡಿಕೊಂಡು ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

No comments: