ಮಟಕಾ ಜೂಜಾಟ ಪ್ರಕರಣ
ಶಹಾಬಾದ ನಗರ ಪೊಲೀಸ ಠಾಣೆ
ದಿನಾಂಕಃ 18/09/2020 ರಂದು 6-30 ಪಿ ಎಮ್ ಕ್ಕೆ ಪಿ.ಐ ಶಹಾಬಾದ ನಗರ ಪೊಲೀಸ ಠಾಣೆ ರವರು ಒಬ್ಬ ಆರೋಪಿ, ಮುದ್ದೇಮಾಲು ಮತ್ತು ಜಪ್ತಿಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ ದಿನಾಂಕಃ 18/09/2020 ರಂದು ಶಹಾಬಾದ ಪಟ್ಟಣದ ಬೆಂಡಿ ಬಜಾರ ತರಕಾರಿ ಮಾರ್ಕೆಟದ ಕೊಲಾರಕರ ಅಂಗಡಿಯ ಹತ್ತಿರ ಒಬ್ಬ ಮನುಷ್ಯ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚ ಜನರನ್ನು ಠಾಣೆಗೆ ಬರಮಾಡಿಕೊಂಡು ಠಾಣೆಯಲ್ಲಿದ್ದ ಸಿಬ್ಬಂದಿಯವರೊಂದಿಗೆ ಹೊರಟು ಶಹಾಬಾದ ಪಟ್ಟಣದ ಬೆಂಡಿ ಬಜಾರ ತರಕಾರಿ ಮಾರ್ಕೆಟ ಕೊಲಾರಕರ ಅಂಗಡಿಯ ಹತ್ತಿರ ಹೋಗಿ ಅಂಗಡಿಯ ಮರೆಯಾಗಿ ನಿಂತು ನೋಡಲಾಗಿ ತರಕಾರಿ ಅಂಗಡಿಯ ಮುಂದೆ ಕಟ್ಟೆಯ ಮೇಲೆ ಒಬ್ಬ ಮನುಷ್ಯ ಕುಳಿತು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರೊಂದಿಗೆ ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲು ಮಹ್ಮದ ತೌಸೀಫ ತಂದೆ ಗುಲಾಮ ರಸೂಲ ಸಾಬ ವಯಾ: 32 ವರ್ಷ ಉ: ಹೊಟೇಲ ಕೆಲಸ ಸಾ: ಖುರ್ಷಿದ ಮೊಹಲ್ಲಾ ಶಹಾಬಾದ ಅಂತಾ ತಿಳಿಸಿದನು ಅವನಿಂದ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ ನಗದು ಹಣ 1080- 00 ರೂಪಾಯಿ ಮತ್ತು ಒಂದು ಮಟಕಾ ನಂಬರ ಬರೇದ ಚೀಟಿ, ಒಂದು ಪೆನ್ನು ಜಪ್ತಿ ಮಾಡಿಕೊಂಡು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಸದರಿಯವನ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನ ಪತ್ರದ ಆಧಾರ ಮೇಲಿಂದ ಶಹಾಬಾದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಅಪ್ರಾಪ್ತ ಹೆಣ್ಣು ಮಗಳ ಅಪಹರಣ
ರೇವೂರ ಪೊಲೀಸ ಠಾಣೆ
No comments:
Post a Comment