Police Bhavan Kalaburagi

Police Bhavan Kalaburagi

Tuesday, October 6, 2020

BIDAR DISTRICT DAILY CRIME UPDATE 06-10-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 06-10-2020

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 114/2020, ಕಲಂ. 41(ಡಿ), 102 ಸಿ.ಆರ.ಪಿ.ಸಿ. ಜೊತೆ 379 ಐಪಿಸಿ :-

ದಿನಾಂಕ 05-10-2020 ರಂದು ಭೀಮರಾಯ ಬಂಕಲಿ ಪಿ.ಎಸ್. (ಕಾ.ಸು-2) ನೂತನ ನಗರ ಪೊಲಿಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡೆನ ಬೀದರ ನಗರದ ಗುರುನಾನಕ ಕಾಲೋನಿಯಲ್ಲಿ ರಸ್ತೆಯ ಬದಿಯಲ್ಲಿ ಕೆಲವು ಮೋಟಾರ ಸೈಕಲಗಳನ್ನು ಪಕ್ಕದಲ್ಲಿ ಇಟ್ಟುಕೊಂಡು ಆರೋಪಿತರಾದ 1) ಆಕಾಶ ತಂದೆ ಶರಣಪ್ಪ ಸಾ: ಚಿದ್ರಿ ಬೀದರ, 2) ಮಹ್ಮದ ಇಬ್ರಾಹಿಂ ತಂದೆ ಮಹ್ಮದ ಅಜೀಜ ಸಾ: ಫೈಜಪುರಾ, ಬೀದರ, 3) ಶಿವಶಂಕರ ತಂದೆ ಧನರಾಜ ಸಾ: ಸಾಯಿ ನಗರ ಬೀದರ ಇವರೆಲ್ಲರೂ ಪೊಲೀಸ್ ಜೀಪನ್ನು ನೋಡಿ ಓಡಲಾರಂಭಿಸಿದಾಗ ಅವರ ಮೇಲೆ ಪಂಚರೊಂದಿಗೆ ದಾಳಿ ಮಾಡಿ ಹಿಡಿದು ಅವರ ವಶದಲ್ಲಿದ್ದ ಮೊಟರ ಸೈಕಲಗಳನ್ನು ನೋಡಲಾಗಿ 1) ಒಂದು ಕೆಂಪು ಬಣ್ಣದ ಹೀರೊ ಹೋಂಡಾ ಪ್ಯಾಶನ ಪ್ಲಸ್ ಮೊಟರ ಸೈಕಲ ಚೆಸ್ಸಿ ನಂ. 0321ಸಿ05377, ಇಂಜಿನ ನಂ. 0321ಎಮ್19465, 2) ಒಂದು ಕಪ್ಪು ಬಣ್ಣದ ಹೀರೊ ಹೊಂಡಾ ಸ್ಪ್ಲೆಂಡರ  ಮೊಟರ ಸೈಕಲ ಚೆಸ್ಸಿ ನಂ. 06ಸಿ16ಸಿ52330, ಇಂಜಿನ ನಂ. 06ಸಿ16ಎಮ್42009, 3) ಒಂದು ಕಪ್ಪು ಬಣ್ಣದ ಬಜಾಜ ಸಿಟಿ 100 ಮೊಟರ ಸೈಕಲ ಚೆಸ್ಸಿ ನಂ. ಎಮ್ಡಿ2ಡಿಡಿಯುಎಲರಡಎಮಡಬ್ಲುಜೆ09944, ಇಂಜಿನ ನಂ. ಡಿಯುಎಮಬಿಎಮಜೆ18503, 4) ಒಂದು ಸುಜುಕಿ ಎಕ್ಸಸ್ 125 ಮೊಟರ ಸೈಕಲ ನಂ. ಕೆಎ-32/ಡಬ್ಲು8815, ಚೆಸಿ್ಸ ನಂ. ಎಮ್.ಬಿಸಿಎಫ್4ಸಿಎಇಎ8141387, 5) ಒಂದು ಕಪು ಬಣ್ಣದ ಟಿ.ವಿ.ಎಸ್ ಸ್ಟಾರ ಸಿಟಿ ಮೊಟರ ಸೈಕಲ ಚೆಸ್ಸಿ £À. ಎಮ್.ಡಿ625ಎನ್ಎಫ್1781ಸಿ04609 ಇದ್ದು, ಸದರಿ ಮೊಟರ ಸೈಕಲಗಳು ಯಾರಿಗೆ ಸಂಬಂದಿಸಿವೆ ಅಂತ ಆರೋಪಿತರಿಗೆ ವಿಚಾರಿಸಲಾಗಿ ಪ್ರತಿಯೊಬ್ಬರು ಒಂದೊಂದು ಉತ್ತರ ನಿಡುತ್ತಿದ್ದು, ಯಾವುದೆ ªÀÄರ್ಪಕವಾದ ಉತ್ತರ ನೀಡಿರುವುದಿಲ್ಲ, ಕಾರಣ ಸದರಿ ಆರೋಪಿತರ ವಶದಲಿದ್ದ ಮೋಟಾರ ಸೈಕಲ ಬಗ್ಗೆ ಯಾವುದೆ ದಾಖಲಾತಿ iÀiÁಗಲಿ ಹಾಗೂ ಮೊಟರ ಸೈಕಲಗಳನ್ನು ಎಲ್ಲಿಂದ ತಂದಿದ್ದು ಎಂಬ ಬಗ್ಗೆ ಸರಿಯಾದ ಉತ್ತರ ನೀಡಲಿಲ್ಲ, ಕಾರಣ ಸದರಿ ಮೊಟರ ಸೈಕಲಗಳನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಬಂದು ಇಟ್ಟಿರುವ ಬಗ್ಗೆ ಸಂಶಯ ಬಂದು ಸದರಿ ಆರೋಪಿತರಿಗೆ ದಸ್ತಗಿರಿ ಮಾಡಿಕೊಂಡು, ಸದರಿ ಮೋಟಾರ್ ಸೈಕಲಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮೇಹಕರ ಪೊಲೀಸ್ ಠಾಣೆ, ಅಪರಾಧ ಸಂ. 70/2020, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 05-10-2020 ರಂದು ಬೊಳೆಗಾಂವ ಕ್ರಾಸ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರಾಯಿ ಮಾರಾಟ ಮಾಡುತ್ತಿದ್ದಾನೆಂದು ನಂದಕುಮಾರ ಪಿಎಸ್ಐ ಮೇಹಕರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬೊಳೆಗಾಂವ ಕ್ರಾಸ್ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬೊಳೆಗಾಂವ ಕ್ರಾಸ್ ಹತ್ತಿರ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ರೋಡಿನ ಮೇಲೆ ಆರೋಪಿ ಬಾಲಾಜಿ ತಂದೆ ಭೀಮರಾವ ಪವಾರ ವಯ: 34 ವರ್ಷ, ಜಾತಿ: ಲಮಾಣಿ, ಸಾ: ಪಂಡರಿ ತಾಂಡಾ ಇತನು ಒಂದು ಪ್ಲಾಸ್ಟಿಕ ಚೀಲದಲ್ಲಿ ಸಾರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಾ ನಿಂತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು, ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿದು ಅವನು ಮಾರಾಟ ಮಡುತ್ತಿದ್ದ ಪ್ಲಾಸ್ಟಿಕ ಚೀಲವನ್ನು ಪಂಚರ ಸಮಕ್ಷಮದಲ್ಲಿ ಪರಿಶೀಲಿಸಿ ನೋಡಲು ಅದರಲ್ಲಿ 90 ಎಮ್.ಎಲ್ ವುಳ್ಳ 56 ಯು.ಎಸ್ ವಿಸ್ಕಿ ಸಾರಾಯಿ ಪ್ಲಾಸ್ಟಿಕ ಬಾಟಲಗಳಿದ್ದು ಅ.ಕಿ 1960/- ರೂ., ಇದ್ದು, ನಂತರ ಅವನಿಗೆ ಸಾರಾಯಿ ಮಾರಾಟ ಮಾಡಲು ಸರಕಾರದಿಂದ ಪರವಾನಗಿ ಇದೆಯೇ ಅಂತ ವಿಚಾರಿಸಲು ಅವನು ನನ್ನ ಹತ್ತಿರ ಯಾವುದೆ ಸಾರಾಯಿ ಮಾರಾಟ ಮಾಡುವ ಪರವಾನಗಿ ಇಲ್ಲ ಅಂತ ಹೇಳಿರುತ್ತಾನೆ, ನಂತರ ಸದರಿ ಸರಾಯಿ ಬಾಟಲಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 125/2020, ಕಲಂ. 32, 34 ಕೆ. ಕಾಯ್ದೆ :-

ದಿನಾಂಕ 05-10-2020 ರಂದು ಕೌಡಿಯಾಳ(ಎಸ್) ಗ್ರಾಮದ ಹತ್ತಿರ ಇರುವ ಶಿಂಧೆ ಧಾಬಾ ಹತ್ತಿರ ಒಬ್ಬ ವ್ಯಕ್ತಿ ತನ್ನ ಹತ್ತಿರ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಸರಾಯಿವುಳ್ಳ ಬಾಟಲಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಅನಧಿಕೃತವಾಗಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾನೆಂದು ಕರೆ ಮುಖಾಂತರ ಜಿ.ಎಂ.ಪಾಟೀಲ್ ಪಿ.ಎಸ್.(ಕಾ&ಸು) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸದರಿ ಕೌಡಿಯಾಳ(ಎಸ್) ಗ್ರಾಮದ ಶಿಂಧೆ ಧಾಬಾದ ಹತ್ತಿರ ಹೋಗಿ ನೋಡಲು ಅಲ್ಲಿ ಆರೋಪಿ ದತ್ತಾತ್ರಿ ತಂದೆ ಪರಮೇಶ್ವರ ಶಿಂದೆ ವಯ: 28 ವರ್ಷ, ಜಾತಿ: ಎಸ್.ಸಿ ಢೋರ, ಸಾ: ಶಿವಾಜಿ ನಗರ ಬಸವಕಲ್ಯಾಣ ಇತನು ತನ್ನ ಹತ್ತಿರ ಒಂದು ಬಿಳಿ ಬಣ್ಣದ ಪ್ಲಾಸ್ಟೀಕ್ ಚೀಲವನ್ನು ಇಟ್ಟುಕೊಂಡು ಕುಳಿತ್ತಿದ್ದು ನೋಡಿ ಲ್ಲರೂ ನಡೆದುಕೊಂಡು ಹೋಗಿ ಅವನ ಮೇಲೆ ಒಮ್ಮೆಲೆ ದಾಳಿ ಮಾಡಿ ಆರೋಪಿತನಿಗೆ ಹಿಡಿದುಕೊಂಡು ನಿನ್ನ ಹತ್ತಿರ ಇರುವ ಪ್ಲಾಸ್ಟೀಕ್ ಚೀಲದಲ್ಲಿ ಏನಿದೆ? ಎಂದು ವಿಚಾರಿಸಿದಾಗ ಅವನು ಬೀಯರ್ ಬಾಟಲಗಳು ಇವೆ ಎಂದು ತಿಳಿಸಿದಾಗ ನಿನ್ನ ಹತ್ತಿರ ಇರುವ ಬೀಯರ ಬಾಟಲಗಳು ಮಾರಾಟ ಮತ್ತು ಸಾಗಾಟ ಮಾಡುವ ಬಗ್ಗೆ ಯಾವುದೇ ರೀತಿ ಲೈಸನ್ಸ್ ಮತ್ತು ದಾಖಲಾತಿ ಇದ್ದರೆ ಹಾಜರ ಪಡಿಸಲು ಸೂಚಿಸಿದಾಗ ಅವನು ನನ್ನ ಹತ್ತಿರ ಯಾವುದೇ ದಾಖಲಾತಿ ಇರುವುದಿಲ್ಲ ಎಂದು ತಿಳಿಸಿದಾಗ ಅವನಿಗೆ ನೀನು ಅನಧಿಕೃತವಾಗಿ ಬೀಯರ ಬಾಟಲಗಳು ಸಾರ್ವಜನಿಕರಿಗೆ ಮಾರಾಟ ಮಾಡಲು ಸಾಗಾಟ ಮಾಡುವುದು ಕಾನೂನು ಪ್ರಕಾರ ಅಪರಾಧ ಎಂದು ತಿಳಿಸಿ ಅವನ ಹತ್ತಿರವಿದ್ದ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲವನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಅದರಲ್ಲಿ 1) ಕಿಂಗ್ ಫಿಷರ್ ಪ್ರಿಮಿಯಂ ಬಿಯರ್ 650 ಎಂ.ಎಲ್ ವುಳ್ಳ 10 ಬಾಟಲಗಳು ಅ.ಕಿ 1500/- ರೂ., 2) ಕಿಂಗ್ ಫಿಷರ್ ಸ್ಟ್ರಾಂಗ್ ಪ್ರಿಮಿಯಂ ಬಿಯರ್ 650 ಎಂ.ಎಲ್ ವುಳ್ಳ 11 ಬಾಟಲಗಳು ಅ.ಕಿ 1650/- ರೂ., 3) ಟುಬರ್ಗ ಪ್ರಿಮಿಯಂ ಬಿಯರ್ 650 ಎಂ.ಎಲ್ ವುಳ್ಳ 16 ಬಾಟಲಗಳು ಅ.ಕಿ 2400/- ರೂ., 4) ಬಡವೈಸರ್ ಮ್ಯಾಗ್ನಮ್ ಬಿಯರ್ 650 ಎಂ.ಎಲ್ ವುಳ್ಳ 16 ಬಾಟಲಗಳು ಅ.ಕಿ 3120/- ರೂ. ಹೀಗೆ ಎಲ್ಲ ಬೀಯರ ಬಾಟಲಗಳ ಒಟ್ಟು ಬೆಲೆ 8670/- ರೂ. ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

No comments: