ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 07-10-2020
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 85/2020, ಕಲಂ. 279, 337, 338, 304 (ಎ) ಐಪಿಸಿ :-
ದಿನಾಂಕ 05-10-2020 ರಂದು ಫಿರ್ಯಾದಿ ಶಂಕರ ತಂದೆ ಶಿವಪ್ಪ ಜಮಾದರ್ ವಯ: 25 ವರ್ಷ, ಜಾತಿ: ಕಬ್ಬಲಿಗ, ಸಾ: ಕಪ್ಪರಗಾಂವ್, ತಾ: ಹುಮನಾಬಾದ, ಉ: ಲಾರಿ ನಂ. ಕೆಎ-39/ಎ-0575 ನೇದರ ಮೇಲೆ ಸುಮಾರು 01 ವರ್ಷದಿಂದ ಕ್ಲಿನರ್ ಕೆಲಸ ರವರು ಹೈದ್ರಾಬಾದ ಹತ್ತಿರ ಇರುವ ಕೊಂಪಲ್ಲಿಯಿಂದ ಸದರಿ ಲಾರಿಯಲ್ಲಿ ಕೋಳಿ ತತ್ತಿಗಳನ್ನು ಲೋಡ್ ಮಾಡಿಕೊಂಡು ಜಹೀರಾಬಾದ ಮಾರ್ಗವಾಗಿ ಹುಮನಾಬಾದ ಕಡೆಗೆ ರಾ. ಹೆದ್ದರಿ ನಂ. 65 ರೋಡಿನ ಮೂಲಕ ಹೋಗುತ್ತಿರುವಾಗ ಮನ್ನಾಎಖೇಳ್ಳಿ ಶಿವಾರದ ಗುಲಶಾನ್ ಧಾಬಾದ ಸಮೀಪ ಬಂದಾಗ ದಿನಾಂಕ 06-10-2020 ರಂದು 0645 ಗಂಟೆಯ ಸುಮಾರಿಗೆ ಚಹಾ ಕುಡಿಯಲು ತಮ್ಮ ಲಾರಿಯನ್ನು ನಿಧಾನವಾಗಿ ಸೈಡಿಗೆ ತೆಗೆದುಕೊಳ್ಳುತ್ತಿರುವಾಗ ಅದೇ ಸಮಯಕ್ಕೆ ಲಾರಿಯ ಹಿಂದಿನಿಂದ ಕಾರ ನಂ. ಎಪಿ-39/ಸಿಎಚ್-9186 ನೇದರ ಚಾಲಕನು ತನ್ನ ಕಾರನ್ನು ಅತೀವೇಗ ಹಾಗೂ ನಿಷ್ಕಾಳಜೀತನಿದಿಂದ ಚಲಾಯಿಸಿಕೊಂಡು ಬಂದು ಲಾರಿಯ ಬಲ ಹಿಂಭಾಗಕ್ಕೆ ಡಿಕ್ಕಿ ಮಾಡಿ 3-4 ಸಲ ರೋಡಿನ ಮೇಲೆ ಪಲ್ಟಿಯಾಗಿ ಲಾರಿಯ ಪಕ್ಕದಲ್ಲಿ ರೋಡಿನ ಮೇಲೆ ಭಾರಿ ಶಬ್ದದೋಂದಿಗೆ ಬಿದ್ದಿರುವುದು ನೋಡಿ, ಕೂಡಲೇ ಲಾರಿಯನ್ನು ಸ್ಥಳದಲ್ಲಿಯೇ ನಿಲ್ಲಿಸಿ ಫಿರ್ಯಾದಿ ಮತ್ತು ಲಾರಿಯ ಚಾಕನಾದ ರಾಜಪ್ಪ ತಂದೆ ವಿಠ್ಠಲ ಇಬ್ಬರು ಕೆಳಗೆ ಇಳಿದು ಕಾರಿನ ಹತ್ತಿರ ಹೋಗಿ ನೋಡಲು ರೋಡಿನ ಮೇಲೆ ಅಂದರೆ ಕಾರಿನ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಭಾರಿ ರಕ್ತಾಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಹಾಗೂ ಇನ್ನೂ ಇಬ್ಬರು ರೋಡಿನ ಡಿವೈಡರ್ ಹತ್ತಿರ ಕುಳಿತುಕೊಂಡಿದ್ದು, ಅವರಿಗೂ ಕೂಡ ರಕ್ತಗಾಯ ಮತ್ತು ಗುಪ್ತಾಗಾಯಗಳು ಆಗಿರುತ್ತವೆ, ಘಟನೆ ಸ್ಥಳದಲ್ಲಿ ಗಾಯಾಳು/ಮಾತಾಡುವ ಸ್ಥಿಯಲ್ಲಿದ್ದ ವ್ಯಕ್ತಿಗೆ ತನ್ನ ಹೆಸರು ವಿಚಾರಿಸಲು ಆತನು ತನ್ನ ಹೆಸರು ಶೇಕ್ ಮಹ್ಮದ್ ತಂದೆ ಶೆಕ್ ಅನ್ಸರ್ ಭಾಷಾ ಸಾ: ಕಡಪಾ (ಆಂದ್ರಪದೇಶ) ಅಂತಾ ತಿಳಿಸಿದ್ದು, ಆತನಿಗೆ ಎಡಗೈ ಹತ್ತಿರ ರಕ್ತಗಾಯ, ಎದೆಯಲ್ಲಿ ಗುಪ್ತಗಾಯ, ಎಡ ಕಪಾಳದ ಹತ್ತಿರ ತರಚಿದ ಗಾಯ ಹಾಗೂ ತಲೆಯ ಹಿಂಭಾಗದಲ್ಲಿ ರಕ್ತಗಾಯಗಳು ಆಗಿರುತ್ತವೆ, ನಂತರ ಇನ್ನೊಬ್ಬ ಗಾಯಾಳುವಿಗೆ ವಿಚಾರಿಸಲು ಆತನು ತನ್ನ ಹೆಸರು ಮಹ್ಮದ್ ಇಮ್ತಿಯಾಜ್ ತಂದೆ ಅಲ್ತಾಫ್ ಹುಸೇನ್ ಸಾ: ಕಡಪಾ ಅಂತ ತಿಳಿಸಿದ್ದು, ಆತನ ಮೈಮೇಲಿನ ಗಾಯಗಳು ನೋಡಲು ಸದರಿಯವನಿಗೆ ಎಡಗೈ ಹತ್ತಿರ ತರಚಿದ ಗಾಯ, ಎಡ ತೊಡೆಯ ಹತ್ತಿರ ಗುಪ್ತಗಾಯ, ಹಣೆಯ ಹತ್ತಿರ ಗುಪ್ತಗಾಯ ಹಾಗೂ ಎದೆಯ ಹತ್ತಿರ ಗುಪ್ತಗಾಯ ಆಗಿರುತ್ತದೆ, ನಂತರ ಸ್ಥಳದಲ್ಲಿಯೇ ಮೃತಪಟ್ಟವರ ಬಗ್ಗೆ ಶೇಕ್ ಮಹ್ಮದ್ ಇತನಿಗೆ ವಿಚಾರಿಸಲು ಆತನು ತಿಳಿಸಿದ್ದೆನೆಂದ್ದರೆ ಮೃತಪಟ್ಟ ಇಬ್ಬರಲ್ಲಿ ಒಬ್ಬರು ತಂದೆಯಾದ ಶೇಕ್ ಅನ್ಸರ್ ಭಾಷಾ ತಂದೆ ಶೇಕ್ ಜಾಫರ್ ಭಾಷಾ ವಯ: 50 ವರ್ಷ ಅಂತಾ ತಿಳಿಸಿದ್ದು, ಇನ್ನೋಬ್ಬ ಮೃತಪಟ್ಟಿದವನ ಹೆಸರು ವಂಗಾಲಯ ತಂದೆ ಸುಬ್ಬರಾಯ್ಡು ವಯ: 52 ವರ್ಷ, ಸಾ: ಪೆಲ್ಲಿಮರಿ ಮಂಡಲ್ ಕಡಪಾ ಅಂತಾ ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಹಿಳಾ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 31/2020, ಕಲಂ. 498(ಎ), 313, 323, 504, 506 ಜೊತೆ 149 ಐಪಿಸಿ ಮತ್ತು ಕಲಂ. 3 & 4 ಡಿಪಿ ಕಾಯ್ದೆ :-
ಫಿರ್ಯಾದಿ ಭೂಮಿ @ ಚಾಮುಂಡೇಶ್ವರಿ ಗಂಡ ಶಿವಾನಂದ ಸಾ: ಹಾಲಹಳ್ಳಿ(ಕೆ), ಸದ್ಯ: ಗಣೇಶ ಮೈದಾನ ಬೀದರ ರವರ ಮದುವೆಯು ದಿನಾಂಕ 30-04-2018 ರಂದು ಶಿವಾನಂದ ತಂದೆ ನೆಹರು ಸಾ: ಹಾಲಹಳ್ಳಿ ಇತನ ಜೊತೆಯಲ್ಲಿ ಆಗಿದ್ದು, ಮದುವೆಯಲ್ಲಿ 20 ತೊಲೆ ಬಂಗಾರ ಹಾಗು ಎರಡು ಕೆಜಿ ಬೆಳ್ಳಿ, ಎರಡು ಲಕ್ಷ ರೂಪಾಯಿ ಶಿವಾನಂದ ಇತನಿಗೆ ಕೊಟ್ಟಿರುತ್ತಾರೆ, ಮದುವೆಯಾದ ನಂತರ ಆರೋಪಿಯು ಫಿರ್ಯಾದಿಗೆ ಮುಂಬೈಗೆ ಕರೆದುಕೊಂಡು ಹೋಗಿ ಅಲ್ಲಿಯೂ ಸಹ ಅವಳಿಗೆ ವರದಕ್ಷಿಣೆ ಕಿರುಕುಳ ನಿಡುತ್ತಾ ಬಂದಿರುತ್ತಾನೆ, ಫಿರ್ಯದಿಯು ಗರ್ಭಿಣಿ ಆದಾಗ ಅವಳ ಗರ್ಭಪಾತ ಮಾಡಿದ್ದು ಅಲ್ಲದೆ ದಿನಾಂಕ 08-08-2020 ರಂದು ಬೀದರ ಗಣೇಶ ಮೈದಾನ ಹತ್ತಿರ ಇದ್ದ ಮನೆಗೆ ಆರೋಪಿತರಾದ 1) ಶಿವಾನಂದ ತಂದೆ ನೆಹರು 2) ಸರಸ್ವತಿ ಗಂಡ ನೆಹರು 3) ನೆಹರು ಬಾಯಪ್ಪಾ ತಂದೆ ಬಸಪ್ಪಾ 4) ಸತೀಶ ತಂದೆ ನೆಹರು 5) ಸಂಗಮೇಶ ತಂದೆ ನೆಹರು 6) ರಾಜಕುಮಾರ ತಂದೆ ಬಸವಣಪ್ಪಾ ಧನ್ನೂರೆ 7) ಭೀಮರಾವ ತಂದೆ ಬಸವಣ್ಣಪ್ಪಾ ಧನ್ನೂರೆ 8) ಸೂರ್ಯಕಾಂತ ತಂದೆ ಸುಭಾಷ ರವರೆಲ್ಲರೂ ಕೂಡಿ ಇನ್ನೂ ಹೆಚ್ಚಿಗೆ 11 ಲಕ್ಷ ರೂಪಾಯಿ ತರುವಂತೆ ಒತ್ತಾಯ ಮಾಡಿ ಫಿರ್ಯಾದಿಗೆ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದು, ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 06-10-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 88/2020, ಕಲಂ. 279, 337, 338 ಐಪಿಸಿ :-
ದಿನಾಂಕ 06-10-2020 ರಂದು ಫಿರ್ಯಾದಿ ಮಲ್ಲಿಕಾರ್ಜುನ ತಂದೆ ನಾಗೀಂದ್ರಪ್ಪಾ ಕಲ್ಯಾಣ ವಯ: 37 ವರ್ಷ, ಜಾತಿ: ಲಿಂಗಾಯತ, ಸಾ: ಮಹಾಗಾಂವ, ಸದ್ಯ: ಭೋಸಗಾ ಗ್ರಾಮದ ಕೆ.ಇ.ಬಿ ಕಾರ್ಯ ಮತ್ತು ಪಾಲನೆ ಶಾಖೆ ರವರು ಪಲ್ಸರ್ ದ್ವೀಚಕ್ರ ವಾಹನ ನಂ. ಕೆಎ-32/ಇಪಿ-8003 ನೇದರ ಮೇಲೆ ಕೆ.ಇ.ಬಿ ಕೆಲಸ ಕುರಿತು ಭೋಸಗಾ ಗ್ರಾಮದಿಂದ ಲಾಡವಂತಿ ಗ್ರಾಮಕ್ಕೆ ಕೋಹಿನೂರ-ಕೋಹಿನೂರ ಪಹಾಡ ಗ್ರಾಮದ ಟಾರ ರೋಡ ಮುಖಾಂತರ ಚಲಾಯಿಸಿಕೊಂಡು ಹೋಗುತ್ತಿರುವಾಗ ಕೋಹಿನೂರ ಪಹಾಡ ಕಡೆಯಿಂದ ಹಿರೋ ಸ್ಪ್ಲೇಂಡರ್ ಮೋಟಾರ್ ಸೈಕಲ ನಂ. ಎಮ್.ಹೆಚ್-14/ಎಫ್.ಯು-5759 ನೇದರ ಚಾಲಕನಾದ ಆರೋಪಿ ದತ್ತಾತ್ರಿ ತಂದೆ ದಿಗಂಬರ ಕಾರಬಾರಿ ವಯ: 55 ವರ್ಷ, ಜಾತಿ: ಮರಾಠಾ, ಸಾ: ರಾಮತೀರ್ಥ(ಡಿ) ಇತನು ತಾನು ಚಲಾಯಿಸುತ್ತಿದ್ದ ದ್ವೀಚಕ್ರ ವಾಹನದ ಮೇಲೆ ಇನ್ನೋಬ್ಬ ವ್ಯಕ್ತಿಗೆ ಕೂಡಿಸಿಕೊಂಡು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತಾನು ಚಲಾಯಿಸುತ್ತಿದ್ದ ದ್ವೀಚಕ್ರ ವಾಹನದ ಮೇಲಿನ ನಿಂಯಂತ್ರಣ ಕಳೆದುಕೊಂಡು ಕೋಹಿನೂರ ಪಹಾಡ ಧರಿ ಕೆಳಗೆ ಟಾರ್ ರೋಡಿನ ಮೇಲೆ ಫಿರ್ಯಾದಿಯು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲಿಗೆ ಒಮ್ಮೆಲೆ ಜೋರಾಗಿ ಎದುರಿನಿಂದ ಡಿಕ್ಕಿ ಮಾಡಿದ್ದು, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಬಲ ಮೊಳಕಾಲು ಕೆಳಗೆ ಭಾರಿ ಗುಪ್ತಗಾಯವಾಗಿ ಫ್ರಾಕ್ಚರ್ ಆಗಿದ್ದು ಮತ್ತು ಬಲ ಮೊಳಕಾಲಿಗೆ, ಬಲಗಾಲು ಪಾದದ ಮೇಲೆ ಹೆಬ್ಬೆಟ್ಟಿನ ಹತ್ತಿರ ತರುಚಿದ ರಕ್ತಗಾಯವಾಗಿರುತ್ತದೆ ಹಾಗೂ ಆರೋಪಿಗೆ ಬಲಗೈಗೆ, ತಲೆಗೆ ತರುಚಿದ ರಕ್ತಗಾಯ ಮತ್ತು ಬಲಗಾಲು ಕಿರುಬೆರಳಿಗೆ ರಕ್ತಗಾಯವಾಗಿರುತ್ತದೆ, ಅವನ ಹಿಂದೆ ಕುಳಿತಿದ್ದ ವ್ಯಕ್ತಿಯ ಹೆಸರು ಅರ್ಜುನ ತಂದೆ ಕ್ರೀಷ್ಣಾಜಿ ಇಂದುಕಾಂದೆ ವಯ: 54 ವರ್ಷ, ಸಾ: ರಾಮತೀರ್ಥ(ಡಿ) ಇವನಿಗು ಸಹ ತಲೆಗೆ ರಕ್ತ ಮತ್ತು ಗುಪ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯು ತಮ್ಮ ಕಚೇರಿಯ ಮ್ಯಾನೇಜರಾದ ಶಿವರಾಜ ಕರಣೆ ರವರಿಗೆ ಕರೆ ಮಾಡಿ ಕರೆಯಿಸಿದಾಗ ಅವರು ಒಂದು ಖಾಸಗಿ ಕಾರು ತಗೆದುಕೊಂಡು ಬಂದು ಅದರಲ್ಲಿ ಫಿರ್ಯಾದಿಗೆ ಚಿಕಿತ್ಸೆ ಕುರಿತು ಮಂಠಾಳ ಸರ್ಕಾರಿ ಆಸ್ಪತೆ್ರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಂತಾಕಿ ಪೊಲೀಸ್ ಠಾಣೆ ಅಪರಾಧ ಸಂ. 46/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 06-10-2020 ರಂದು ಎಕಲಾರ ಗ್ರಾಮದ ಶಿವರಾಯ ತಂದೆ ಕಲ್ಲಪ್ಪಾ ಜಿರ್ಗೆ ರವರ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುತ್ತಾನೆಂದು ಟಿ.ಆರ್ ರಾಘವೇಂದ್ರ ಸಿಪಿಐ ಔರಾದ (ಬಿ) ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಎಕಲಾರ ಗ್ರಾಮದ ಬಸಪ್ಪ ಭಾಲ್ಕೆ ರವರ ಹೋಟಲ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ರವಿಂದ್ರ ತಂದೆ ಕಲ್ಲಪ್ಪಾ ಜಿರ್ಗೆ ಸಾ: ಎಕಲಾರ ಗ್ರಾಮ ಇತನು ಕಲ್ಲಪ್ಪಾ ತಂದೆ ಶಿವರಾಯ ಜಿರ್ಗ ರವರ ಮನೆಯ ಹತ್ತಿರ ಸಾರ್ವಜನಿಕ ರೆಸ್ತೆಯ ಮೇಲೆ ಕುಳಿತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಕೂಗಿ ಕರೆದು ಅದೃಷ್ಟ ಸಂಖ್ಯೆಗೆ ಹಣ ಹಚ್ಚ್ಚಿದರೆ ಒಂದು ರೂಪಯಿಗೆ 80/- ರೂ. ಹಾಗೂ 10/- ರೂಪಾಯಿಗೆ 800/- ರೂ ಕೊಡುತ್ತೇನೆ ಎಂದು ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅನ್ನುವ ಅಂಕಿ ಸಂಖ್ಯೆಯ ಚೀಟಿಗಳು ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚಿತಪಡಿಸಿಕೊಂಡು ಸದರಿ ಆರೋಪಿಯು ಸ್ಥಳದಿಂದ ಓಡಿ ಹೋಗುವ ಸಂಭವ ಕಂಡು ಬಂದಿರುವ ಕಾರಣ ಪಂಚರ ಸಮಕ್ಷಮ ಸದರಿಯವನ ಮೇಲೆ ದಾಳಿ ಮಾಡಿದಾಗ ಅದೃಷ್ಟ ಸಂಖ್ಯೆಗೆ ಹಣ ಕೊಡುತ್ತಿದ್ದ ಜನರು ಅಲ್ಲಿಂದ ಓಡಿ ಹೋಗಿರುತ್ತಾರೆ, ನಂತರ ಸದರಿ ಆರೋಪಿಗೆ ಹಿಡಿದುಕೊಂಡು ಪಂಚರ ಸಮಕ್ಷಮ ಆತನ ಅಂಗ ಶೋಧನೆ ಮಾಡಿದಾಗ ಆತನ ಹತ್ತಿರ ನಗದು ಹಣ 1380/- ರೂ. ಅಂಕಿ ಸಂಖ್ಯೆ ಬರೆದ 1 ಮಟಕಾ ಚೀಟಿ, ಒಂದು ಪೆನ್ನು ಹಾಗು ಎಂ.ಐ ಕಂಪನಿಯ ಮೋಬೈಲ್ ಇದ್ದು, ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 128/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 06-10-2020 ರಂದು ಬಸವಕಲ್ಯಾಣ ನಗರದ ನಾಗಣ್ಣಾ ಕಟ್ಟಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆಂದು ಜಿ.ಎಂ.ಪಾಟೀಲ್ ಪಿ.ಎಸ.ಐ [ಕಾ&ಸು] ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ನಾಗಣ್ಣಾ ಕಟ್ಟಾ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ನಾಗಣ್ಣಾ ಕಟ್ಟಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಮೋಹನ ತಂದೆ ಮಧುಕರ ಸೂರ್ಯವಂಶಿ ವಯ: 30 ವರ್ಷ, ಜಾತಿ: ಸಮಗಾರ, ಸಾ: ಪಾಂಡ್ರಿ ಗಲ್ಲಿ ತ್ರೀಪೂರಾಂತ ಬಸವಕಲ್ಯಾಣ, 2) ಪ್ರಭು ತಂದೆ ಜನಾರ್ಧನ ಕುಂಬಾರ ವಯ: 29 ವರ್ಷ, ಜಾತಿ: ಕುಂಬಾರ, ಸಾ: ತ್ರೀಪೂರಾಂತ ಬಸವಕಲ್ಯಾಣ ಹಾಗೂ 3) ಮಹೇಶ ತಂದೆ ಕಂಟೆಪ್ಪಾ ಕೋಳಿ ವಯ: 25 ವರ್ಷ, ಜಾತಿ: ಕಬ್ಬಲಿಗ, ಸಾ: ಹಿಮ್ಮತ ನಗರ ಬಸವಕಲ್ಯಾಣ ಇವರೆಲ್ಲರೂ ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ 2 ಜನ ಆರೋಪಿತರಿಗೆ ಹಿಡಿದು ಅವರಿಂದ ಒಟ್ಟು ನಗದು ಹಣ 20,065/- ರೂ., 06 ಮಟಕಾ ಚಿಟಿಗಳು ಮತ್ತು 3 ಬಾಲ್ ಪೆನ್ ನೇದ್ದವುಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಸಂತಪೂರ ಪೋಲಿಸ ಠಾಣೆ ಅಪರಾಧ ಸಂ. 74/2020, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 06-10-2020 ರಂದು ಜೋಜನಾ ಗ್ರಾಮದಲ್ಲಿ ಸಂತೊಷ ತಂದೆ ಕಲ್ಲಯ್ಯಾ ಸ್ವಾಮಿ ಇತನು ತನ್ನ ಕಿರಾಣಾ ಅಂಗಡಿಯಲ್ಲಿ ಅನಧೀಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆ ಅಂತ ಟಿ.ಆರ ರಾಘವೇಂದ್ರ ಸಿ.ಪಿ.ಐ ಔರಾದ ರವರಿಗೆ ಮಾಹಿತಿ ಬಂದ ಮೇರೆಗೆ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಜೋಜನಾ ಗ್ರಾಮದ ಹನುಮಾನ ಮಂದಿರದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಸಂತೋಷ ಇತನ ಕಿರಾಣಾ ಅಂಗಡಿಗೆ ಜನರು ಹೋಗಿ ಸರಾಯಿ ಕುಡಿದು ಬರುತ್ತಿರುವುದನ್ನು ಖಚಿತ ಪಡಿಸಿಕೊಂಡು ಸದರಿ ಅಂಗಡಿಯ ಮೇಲೆ ದಾಳಿ ಮಾಡಿದಾಗ ಆರೋಪಿ ಸಂತೋಷ ತಂದೆ ಕಲ್ಲಯ್ಯಾ ಸ್ವಾಮಿ ವಯ: 40 ವರ್ಷ, ಜಾತಿ: ಸ್ವಾಮಿ, ಸಾ: ಜೋಜನಾ ಇತನು ಓಡಿ ಹೋಗಿರುತ್ತಾನೆ, ನಂತರ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಅಂಗಡಿಯನ್ನು ಪರಿಶೀಲಿಸಲಾಗಿ ಅಂಗಡಿಯಲ್ಲಿ 1) 650 ಎಂ.ಎಲ್ ವುಳ್ಳ 23 ಕಿಂಗಫಿಶರ್ ಬಿಯರ್ ಬಾಟಲ್ಗಳು 3450/- ರೂ., 2) 90 ಎಂ.ಎಲ ವುಳ್ಳ 27 ಓರಿಜಿನಲ್ ಚಾಯ್ಸ್ ಪೌಚಗಳು ಅ.ಕಿ 948.50 ಪೈಸೆ, 3) 180 ಎಂ.ಎಲ್ ವುಳ್ಳ 9 ಓಲ್ಡ ಟಾವರ್ನ ಪೌಚಗಳು ಅ.ಕಿ 780.75/- ಪೈಸೆ, 4) 180 ಎಂ.ಎಲ್ ವುಳ್ಳ ಬ್ಯಾಗ ಪೈಪರ್ ಪೌಚ್ಗಳು ಅ.ಕಿ 425/- ರೂ ಹೀಗೆ ಒಟ್ಟು 5604.25 ರೂ. ಇರುತ್ತದೆ, ನಂತರ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 127/2020, ಕಲಂ. ಮನುಷ್ಯ ಕಾಣೆ :-
ಫಿರ್ಯಾದಿ ಜಗದೇವಿ ಗಂಡ ಪ್ರೇಮಸಾಗರ ಮಂಠಾಳೆ ವಯ: 35 ವರ್ಷ, ಜಾತಿ: ಮಾಲಗಾರ, ಸಾ: ನಾರಾಯಣಪೂರ, ತಾ: ಬಸವಕಲ್ಯಾಣ, ಸದ್ಯ: ಗಂಜ ಕಾಲೋನಿ ಕಲಬುರಗಿ ರವರ ಗಂಡನಾದ ಪ್ರೇಮಸಾಗರ ತಂದೆ ಬಾಬು ಮಂಠಾಳೆ ವಯ: 40 ವರ್ಷ, ಸಾ: ನಾರಾಯಣಪೂರ, ತಾ: ಬಸವಕಲ್ಯಾಣ ಇತನು ದಿನಾಂಕ 26-09-2020 ರಂದು 1500 ಗಂಟೆಗೆ ಕೆ.ಇ.ಬಿ ಬಿಲ್ ಕಟ್ಟಲು ಹೋಗುತ್ತಿದ್ದೆನೆಂದು ಮನೆಯ ಹತ್ತಿರ ಇದ್ದ ಚೇತನ್ ತಂದೆ ಚಂದ್ರಕಾಂತ ಚಂಡಕಾಪೂರೆ ಇತನಿಗೆ ತಿಳಿಸಿ ಮನೆಯಿಂದ ಹೋದವನು ಇಲ್ಲಿಯವರೆಗೆ ಮರಳಿ ಮನೆಗೆ ಬಂದಿರುವುದಿಲ್ಲ, ಆತನಿಗೆ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ, ಆತನು ಮನೆ ಬಿಟ್ಟು ಹೋಗುವಾಗ ಗಂಡನ ಮೈ ಮೇಲೆ ಕಾಫಿ ಬಣ್ಣದ ಶರ್ಟ ಮತ್ತು ತಿಳಿ ಕಪ್ಪು ಬಣ್ಣದ ಪ್ಯಾಂಟ ಇರುತ್ತದೆ, ಗಂಡನ ಚಹರೆ ಪಟ್ಟಿ ದುಂಡು ಮುಖ, ದಪ್ಪ ಮೂಗು, ಸಾದಾ ಕಪ್ಪು ಮೈಬಣ್ಣ ತುಂಬಿದ ದೇಹಧೃಡತೆ ಎತ್ತರ 5'6 ಅಡಿ ಉದ್ದ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 06-10-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment