ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 08-10-2020
ಗಾಂಧಿಗಂಜ
ಪೊಲೀಸ್ ಠಾಣೆ ಯು.ಡಿ.ಆರ್. ಸಂಖ್ಯೆ 22/2020 ಕಲಂ 174 ಸಿಆರ್.ಪಿ.ಸಿ :-
ದಿನಾಂಕ: 04/10/2020 ರಂದು ಫಿರ್ಯಾದಿ ಮೋಬಿನಾ ಬೇಗಂ ಗಂಡ ಖಾಜಾ ನವಾಜ್ ಪಾಷಾ ವಯ 29 ವರ್ಷ ಜಾತಿ ಮುಸ್ಲಿಂ ಉ: ಮನೆ ಕೆಲಸ ಸಾ: ಬದ್ರೋದ್ದಿನ್ ಕಾಲೋನಿ ಬೀದರ ಇವರ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ ಇವರ ಪತಿ ಖಾಜಾ ನವಾಜ್ ಪಾಷಾ ತಂದೆ ಅಬ್ದುಲ್ ರೆಹಮಾನ ಷಾ ವಯ 32 ವರ್ಷ ಇತನು ದಿನಾಲು ಸರಾಯಿ ಕುಡಿಯಲು ಹಣ ಕೊಡು ಅಂತಾ ಕೇಳಿದ ಆದರೆ ಇವರ ಹತ್ತಿರ ಹಣ ಇಲ್ಲಾ ಅಂತಾ ಅಂದಿದ್ದಕ್ಕೆ ಹೊರಗೆ ಹೋಗಿ ಸರಾಯಿ ಕುಡಿದು ಬಂದು ನಾನು ಸರಾಯಿ ಕುಡಿಯಲು ಹಣ ಕೇಳಿದರೆ ಕೊಡುವುದಿಲ್ಲಾ ಅಂತಾ ಅಂದವನೆ ಮನೆಯ ಒಳಗಡೆ ರೂಮಿನಲ್ಲಿ ಹೋಗಿ ಮನೆಯ ಛತ್ತಿನ ಡಿ ಹುಕ್ಕಿಗೆ ಓಡನಿಯಿಂದ ನೇಣು ಹಾಕಿಕೊಂಡಿದ್ದ ಕೂಡಲೆ ನೋಡಿ ಚೀರಿದಾಗ ಅಕ್ಕ-ಪಕ್ಕದ ಜನರು ಬಂದು ನನ್ನ ಗಂಡನಿಗೆ ಕೆಳಗೆ ಇಳಿಸಿ ನಂತರ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕ ಮಾಡಿದ್ದಾಗ ಚಿಕಿತ್ಸೆ ಕಾಲಕ್ಕೆ ಚಿಕಿತ್ಸೆ ಕಾಲಕ್ಕೆ ಗುಣಮುಖವಾಗದೆ ದಿನಾಂಕ: 06/10/2020 ರಂದು ರಾತ್ರಿ 8:20 ಗಂಟೆಗೆ ಮೃತಪಟ್ಟಿರುತ್ತಾನೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಮಾರ್ಕೆಟ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 67/2020 ಕಲಂ 379 ಐಪಿಸಿ :-
ದಿನಾಂಕ 07/10/2020 ರಂದು ಸಾಯಂಕಾಲ 1830 ಗಂಟೆಯ ಸುಮಾರಿಗೆ ಶ್ರೀ ಚಂದ್ರಕಾಂತ ತಂದೆ ಮಲಕಪ್ಪಾ ಎರನಳ್ಳಿ ವಯ:28 ವರ್ಷ ಜಾ:ಗೊಂಡಾ ಉ:ಖಾಸಗಿ ನೌಕರರು ಸಾ: ಮರಕುಂದಾ ಗ್ರಾಮ ತಾ:ಜಿ:ಬೀದರ ರವರು ಠಾಣೆಗೆ ಹಾಜರಾಗಿ ಮೌಖಿಕ ಹೇಳಿಕೆ ನೀಡಿದರ ಸಾರಾಂಶವೆನೆಂದರೆ, ಇವರ ಸಂಬಂದಿಕನಾದ ರಾಜಕುಮಾರ ತಂದೆ ಬೀರಪ್ಪಾ ದುಬಲಗುಂಡಿ ಇವರ ಹತ್ತಿರ ಒಂದು ಹೀರೋ ಸ್ಪೆಂಡರ್ ಪ್ಲಸ್ ದ್ವೀಚಕ್ರವಾನ ಇರುತ್ತದೆ ನಂ:ಕೆ.ಎ 38 ಯು 5741 ನೇದ್ದು ಇದ್ದು ಇದರ ಚೆಸ್ಸಿ ನಂ:ಎಮ್.ಬಿ.ಎಲ್.ಎಚ್.ಎ.ಆರ್.073ಎಚ್.ಎಚ್.ಜಿ.07060 ಇಂಜಿನ ನಂ: ಎಚ್.ಎ.10ಎಜಿಎಚ್.ಎಚ್.ಜಿ 07441 ಅಕಿ:28,000/-ರೂ ಬೆಲೆಬಾಳುವದನ್ನು ಬೀದರ ತಹಶಿಲ ಕಚೇರಿಗೆ ಬಂದು 1130 ಗಂಟೆಯ ಸುಮಾರಿಗೆ ನಿಲ್ಲಿಸಿ ಕಚೇರಿಯ ಒಳಗೆ ಹೋಗಿ ಮರಳಿ 1200 ಗಂಟೆಯ ಸುಮಾರಿಗೆ ಮರಳಿ ಕಚೇರಿಯ ಹೊರಗೆ ಬಂದು ನೋಡಿದಾಗ ಸದರಿ ದ್ವೀಚಕ್ರವಾಹನ ಇರಲಿಲ್ಲ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ 203//2020 ಕಲಂ 3, 14 ಬಾಲ ಕಾರ್ಮಿಕ ಕಾಯ್ದೆ :-
ದಿನಾಂಕ 07/10/2020 ರಂದು 13:00 ಗಂಟೆಗೆ ಶ್ರೀಮತಿ ಕೆ ಸುವರ್ಣ ಗಂಡ ಬಿ ಕಾಳಯ್ಯಾ ಕಾಮರ್ಿಕ ನಿರೀಕ್ಷಕರು ಭಾಲ್ಕಿ ವೃತ್ತ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಮಾನ್ಯ ಜಿಲ್ಲಾಧಿಕಾರಿ ಬೀದರರವರ ಆದೇಶದ ಮೇರೆಗೆ ದಿನಾಂಕ 24/09/2020 ರಂದು ಫಿರ್ಯಾದಿ ಮತ್ತು ತಹಶಿಲ್ದಾರರು ಅಣ್ಣಾರಾವ ಪಾಟೀಲ ಭಾಲ್ಕಿ, ಕಂದಯ ಇಲಾಖೆಯ ಪರಶುರಾಮ ತಂದೆ ಈರಪ್ಪಾ ತಳವಾರ, ಪ್ರೋಜಕ್ಟ ಡೈರೆಕ್ಟರ ಬೀದರ ಅಜರ್ುನ ಸೀತಾಳಗೇರ, ಚೈಲ್ಡ ಹೆಲ್ಪಲೈನ ಸೂರ್ಯಕಾಂತ ಮತ್ತು ಸಂದೀಪ ಭಾಲ್ಕಿ ಹಾಗೂ ಪೋಲೀಸ ಇಲಾಖೆಯ ರಾಜಣ್ಣಾ ಎಎಸ್ಐ ರವರು ಕೂಡಿ ಭಾಲ್ಕಿ ನಗರದೆಲ್ಲಿ ಬಾಲ ಕಾಮರ್ಿಕರ ತಪಾಸಣೆ ಮಾಡುವ ಕಾಲಕ್ಕೆ 1330 ಗಂಟೆಗೆ ಭಾಲ್ಕಿಯ ಅಂಬೇಡ್ಕರ ಚೌಕ ಬಳಿ ಇರುವ ವಿಕ್ರಮ ಸವರ್ಿಸ ಸೆಂಟರದ ಮೇಲೆ ದಾಳಿ ಮಾಡಿದಾಗ ಒಬ್ಬ ಬಾಲ ಕಾಮರ್ಿಕ ಪತ್ತೆಯಾಗಿದ್ದರಿಂದ ಅವನಿಗೆ ವಿಚಾರಿಸಲು ತನ್ನ ಹೆಸರು ಮಹಾದೇವ ತಂದೆ ವಿರಶೇಟ್ಟಿ ವಯ:16 ವರ್ಷ ಸಾ: ದೇಶಪಾಂಡೆಗಲ್ಲಿ ಹಳೆಭಾಲ್ಕಿ ಅಂತ ತಿಳಿಸಿದ್ದು ಪುನಃ ಅವನಿಗೆ ವಿಚಾರಣೆ ಮಾಡಲು ವಿಕ್ರಮ ಸವರ್ಿಸ ಸೆಂಟರ ಮಾಲಿಕರು ನನಗೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ದುಡಿಸಿಕೊಂಡು ದಿನಕ್ಕೆ 150 ರೂ ಕೂಲಿ ಕೊಡುತ್ತಾರೆ ಅಂತ ತಿಳಿಸಿದ್ದು ಇರುತ್ತದೆ. ಕಾರಣ ಸದರಿ ವಿಕ್ರಮ ಸವರ್ಿಸ ಸೆಂಟರ ಮಾಲಿಕರಾದ ವಿಕ್ರಮ ತಂದೆ ಪಾಂಡುರಂಗರಾವ ಇಂಗಳೆ ರವರ ಇರುದ್ದ ಕಾನೂನ ಕ್ರಮ ಜರುಗಿಸಲು ವಿನಂತಿ ಅಂತ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಯು.ಡಿ.ಆರ್. ಸಂಖ್ಯೆ 21/2020 ಕಲಂ 174 ಸಿಆರ್.ಪಿ.ಸಿ :-
ದಿನಾಂಕ 07/10/2020 ರಂದು 1430 ಗಂಟೆಗೆ ಫಿರ್ಯಾದಿ ಮಹ್ಮದ್ ಸಜ್ಜದಶಾ ತಂದೆ ಮಹ್ಮದ್ ಹನಿಫ್ ಶಾ ವಯ: 40 ವರ್ಷ, ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ದೂರು ಸಲ್ಲಿಸದರ ಸಾರಾಂಶವೆನೆದರೆ ಆಟೋದಲ್ಲಿ ಹಳ್ಳಿಗಳಿಗೆ ಹೋಗಿ ವ್ಯಾಪಾರ ಮಾಡಿಕೊಂಡಿದ್ದು ಇವರಿಗೆ 1] ಮಾಜೀದ ಶಾ, 2] ಸಲ್ಮಾನ ಶಾ, 3] ಸಾಹೇಬಾ ಬೀ, 4] ಫಜಲಶಾ @ ಗಫುರ, 5] ಉಜಾಮಾ ಬೆಗಂ, 6] ಸುಭಾನ ಶಾ ಮತ್ತು 7] ರುಕ್ಸಾರ ಬೆಗಂ ಅಂತಾ ಒಟ್ಟು 7 ಜನ ಮಕ್ಕಳಿರುತ್ತಾರೆ ನನ್ನ ಹೆಂಡತಿ ಫರಾನಾ ಬೆಗಂ ಇವಳು ಮನೆ ಕೆಲಸ ಮಾಡಿಕೊಂಡಿರುತ್ತಾಳೆ. ದಿನಾಂಕ 07/10/2020 ರಂದು ಮಧ್ಯಾಹ್ನ 1.30 ಗಂಟೆಗೆ ಫಿರ್ಯಾದಿ ಮನೆಯಲ್ಲಿದ್ದಾಗ ಓಣಿಯ ಜನರಿಂದ ಗೊತ್ತಾಗಿದೆನೆಂದರೆ ಫಿರ್ಯಾದಿ ಮಗ ಫಜಲಶಾ @ ಗಫುರ ಇವನು ಮಧ್ಯಾಹ್ನ 1.00 ಗಂಟೆಗೆ ಎನ.ಎಚ 65 ರೋಡಿನ ಪಕ್ಕದಲ್ಲಿರುವ ಹಾರಕೋಡೆ ಡಾಕ್ಟರ ರವರ ಹೋಲ ಸರ್ವೆ ನಂ 9 ರಲ್ಲಿ ಇರುವ ಬಾವಿಯಲ್ಲಿ ಈಜಲು ಹೋಗಿ ಆಕಸ್ಮಿಕವಾಗಿ ಮುಳಗಿ ಮೃತಪಟ್ಟಿರುತ್ತಾನೆ ಅಂತಾ ನೀಡಿದ ದೂರಿನ ಮೇರೆರೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment