ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 10-11-2020
ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 59/2020, ಕಲಂ. 279, 338, 304(ಎ) ಐಪಿಸಿ :-
ದಿನಾಂಕ 09- 09-2020 ರಂದು ಫಿರ್ಯಾದಿ ಅಂಕುಶ ತಂದೆ ಮಾರುತಿ ನಿಂಬಾಳೆ ವಯ: 34 ವರ್ಷ, ಜಾತಿ: ಕುರುಬ, ಸಾ: ರಾಂಪೂರ ವಾಡಿ, ತಾ: ಬಸವಕಲ್ಯಾಣ ರವರು ತನ್ನ ಜೊತೆ ಕೆಲಸ ಮಾಡುವ ಮಹೇಶ ತಂದೆ ಜಗನಾಥರಾವ ಇಗ್ವೆ ವಯ: 29 ವರ್ಷ, ಸಾ: ನಾರಾಯಣಪೂರ ಇಬ್ಬರು ಕೂಡಿಕೊಂಡು ಖಾಸಗಿ ಕೆಲಸ ಕುರಿತು ಬಸವಕಲ್ಯಾಣ – ಬಂಗ್ಲಾ ರೋಡಿಗೆ ಇರುವ ಕೆ.ಇ.ಬಿ ಹತ್ತಿರ ರೋಡಿನ ಪಕ್ಕದಲ್ಲಿ ನಿಂತಿರುವಾಗ ಯು-ಟರ್ನ ಸ್ಥಳದಲ್ಲಿ ಸ್ಕೂಟಿ ಮೋಟರ ಸೈಕಲ್ ನಂ. ಕೆಎ- 56/ಜೆ- 3779 ನೇದರ ಚಾಲಕನಾದ ಬಸವರಾಜ ತಂದೆ ಚನ್ನಮಲ್ಲಯ್ಯಾ ಮಠಪತಿ ವಯ: 85 ವರ್ಷ, ಸಾ: ಎನ್.ಜಿ.ಓ ಕಾಲೋನಿ ಬಸವಕಲ್ಯಾಣ ರವರು ತನ್ನ ಸ್ಕೂಟಿಯ ಬಲಗಡೆ ಇಂಡಿಕೇಟರ್ ಹಾಕಿ ತನ್ನ ವಾಹನವನ್ನು ಬಸವಕಲ್ಯಾಣ ಕಡೆಗೆ ಯು-ಟರ್ನ ತೆಗೆದುಕೊಳ್ಳುತ್ತಿರುವಾಗ, ಬಂಗ್ಲಾ ಕಡೆಯಿಂದ ಕ್ರೂಸರ್ ನಂ. ಕೆಎ-36/3862 ನೇದರ ಚಾಲಕನಾದ ಆರೋಪಿ ಅಜಯಕುಮಾರ ತಂದೆ ಮಚೇಂದ್ರ ಗಡ್ಡದ ವಯ: 21 ವರ್ಷ, ಜಾತಿ: ಎಸ್.ಸಿ (ಹೊಲಿಯಾ), ಸಾ: ಕೊಹೀನೂರ, ತಾ: ಬಸವಕಲ್ಯಾಣ ಇತನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟಿಗೆ ಡಿಕ್ಕಿ ಮಾಡಿದ್ದು, ಸದರಿ ಅಪಘಾತದಿಂದ ಬಸವರಾಜ ರವರ ತಲೆಯ ಹಿಂದೆ ಭಾರಿ ರಕ್ತ-ಗುಪ್ತ ಗಾಯ, ಬಲಗೈ ಬೆರಳುಗಳಿಗೆ ಭಾರಿ ರಕ್ತಗಾಯ, ಬಲ ಭುಜಕ್ಕೆ ಕುತ್ತಿಗೆ ಹತ್ತಿರ ಗುಪ್ತಗಾಯವಾಗಿರುತ್ತದೆ, ನಂತರ ಗಾಯಗೊಂಡ ಸ್ಕೂಟಿ ಚಾಲಕನಿಗೆ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು, ನಂತರ ಕಲಬುರ್ಗಿ ಯುನೈಟೇಡ್ ಆಸ್ಪತ್ರೆಯಲ್ಲಿ ಬಸವರಾಜ ರವರು ಚಿಕಿತ್ಸೆ ಫಲಕಾರಿಯಾಗದೇ ಮ್ರತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಲಸೂರ ಪೊಲೀಸ ಠಾಣೆ ಅಪರಾಧ ಸಂ. 83/2020, ಕಲಂ. 498(ಎ), 323, 504, 506, ಜೊತೆ 149 ಐಪಿಸಿ :-
ಫಿರ್ಯಾದಿ ಸುಷ್ಮಾ ಗಂಡ ಕೀಶೋರ ಬಿರಾದಾರ ಸಾ: ನೇಲವಾಡ, ಸದ್ಯ: ತೋಗಲೂರ ರವರ ತಂದೆ-ತಾಯಿಯವರು ನೇಲವಾಡ ಗ್ರಾಮದ ಕೀಶೋರ ತಂದೆ ವಿಶ್ವನಾಥ ಬಿರಾದಾರ ಈತನೊಂದಿಗೆ ದಿನಾಂಕ 02-05-2018 ರಂದು ಚಳಕಾಪುರದ ಹನುಮಾನ ಮಂದಿರದಲ್ಲಿ ಮದುವೆ ಮಾಡಿಕೊಟ್ಟಿರುತ್ತಾರೆ, ಗಂಡನಾದ ಕಿಶೋರ ಬಿರಾದಾರ ಮತ್ತು ಆತನ ಕುಟುಂಬದವರು ಫಿರ್ಯಾದಿಯವರ ಜೊತೆ ಸುಮಾರು 6 ತಿಂಗಳವರೆಗೆ ಚೆನ್ನಾಗಿದ್ದು, ನಂತರ ಗಂಡ ಕಿಶೋರ ಬಿರಾದರ, ಅತ್ತೆ ಭಾರತಬಾಯಿ ಗಂಡ ವಿಶ್ವನಾಥರಾವ ಬಿರಾದಾರ ಮತ್ತು ಮಾವ ವಿಶ್ವನಾಥರಾವ ತಂದೆ ವಿಠಲರಾವ ಬಿರಾದಾರ ರವರೆಲ್ಲರೂ ನಿನಗೆ ಚೆನ್ನಾಗಿ ಕೆಲಸ ಮಾಡಲು ಬರುವುದಿಲ್ಲ ಮತ್ತು ನೀನು ನೋಡಲು ಸರಿಯಾಗಿಲ್ಲ ಅಂತ ದಿನನಿತ್ಯ ಹಿಯಾಳಿಸಿ ಮಾನಸಿಕ ತೊಂದರೆ ನೀಡಿರುತ್ತಾರೆ, ಮದುವೆಯಾದ ಸುಮಾರು 8 ತಿಂಗಳ ನಂತರ ಗಂಡ ಮತ್ತು ಪಿರ್ಯಾದಿ ಹೈದ್ರಾಬಾದಗೆ ಹೋಗಿ ಇಬ್ಬರು ಹೈದ್ರಾಬಾದ ಚಿಲಕಾ ನಗರದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದು, ಫಿರ್ಯಾದಿಯು ಹೈದರಾಬಾದದಲ್ಲಿರುವಾಗ ಗಂಡ ಮತ್ತು ಭಾವ, ನೆಗೆಣಿ, ನಾದಿನಿ, ದೊಡ್ಡ ನಾದಿನಿಯ ಗಂಡ, ಸಣ್ಣ ನಾದಿನಿ ರವರೆಲ್ಲರೂ ಗಂಡನ ಜೊತೆಗೂಡಿ ಫಿರ್ಯಾದಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಾ ಬಂದಿರುತ್ತಾರೆ, ಅವರೆಲ್ಲರ ಕಿರಕುಳ ಹೆಚ್ಚಾಗಿ ತಾಳಲಾರದೇ ಸದರಿ ವಿಷಯವನ್ನು ಫಿರ್ಯಾದಿಯು ತನ್ನ ತಂದೆ-ತಾಯಿಯವರಿಗೆ ತಿಳಿಸಿದಾಗ ಅವರು ಬಂದು ನಮ್ಮ ಮಗಳಿಗೆ ಯಾಕೆ ತೊಂದರೆ ಕೊಡುತ್ತಿದ್ದಿರಿ ಅಂತ ವಿಚಾರಿಸಲು ಗಂಡ ಕಿಶೋರ ಈತನು ನಿಮ್ಮ ಮಗಳಿಗೆ ಮನೆಗೆಲಸ ಮಾಡಲು ಬರುವದಿಲ್ಲ ಅಂತ ಸುಳ್ಳು ನೆಪ ಹೇಳಿ ನಿಮ್ಮ ಮಗಳಿಗೆ ಕರೆದುಕೊಂಡು ಹೋಗಿ ಅಂತ ಹೇಳಿದ್ದರಿಂದ ಬೇರೆ ದಾರಿ ಇಲ್ಲದೆ ಫಿರ್ಯಾದಿಗೆ ತೋಗಲೂರ ಗ್ರಾಮಕ್ಕೆ ಕರೆದುಕೊಂಡು ಬಂದಿರುತ್ತಾರೆ, ನಂತರ ದಿನಾಂಕ 03-11-2020 ರಂದು ಗಂಡನಾದ ಕೀಶೋರ ಬಿರಾದಾರ ಈತನು ತೋಗಲೂರ ಗ್ರಾಮದ ಮನೆಗೆ ಬಂದು ನೀನು ಯಾಕೆ ನಿನ್ನ ಸಂಬಂಧಿಕರಿಗೆ ನಮ್ಮ ಮನೆಗೆ ಕಳುಹಿಸಿದ್ದಿ ಅಂತ ಅವಾಚ್ಯವಾಗಿ ಬೈದು ಕೈಯಿಂದ ಬೆನ್ನ ಮೇಲೆ, ಹೊಟ್ಟೆಗೆ ಒದ್ದು ಇನ್ನೊಮ್ಮೆ ನೀವು ಯಾರಾದರೂ ನಮ್ಮ ಮನೆಗೆ ಬಂದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವ ಬೆದರಿಕೆ ಹಾಕಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 09-11-2020 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 100/2020, ಕಲಂ. 379, 411 ಐಪಿಸಿ, 86, 87 ಅರಣ್ಯ ಕಾಯ್ದೆ :-
ದಿನಾಂಕ 07-11-2020 ರಂದು ಔರಾದ ಪಟ್ಟಣದ ಜನತಾ ಕಾಲೋನಿಯ ಬಾಬು ತಂದೆ ಮಾರುತಿ ಪವಾರ ಸಾ: ಜನತಾ ಕಾಲೋನಿ ಔರಾದ ಇತನ ಮನೆಯಲ್ಲಿ ಶ್ರೀಗಂಧದ ಕಟ್ಟಿಗೆಗಳನ್ನು ಕಳ್ಳತನ ಮಾಡಿಕೊಂಡು ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹ ಮಾಡಿರುತ್ತಾರೆ ಅಂತಾ ಜಗದೀಶ ನಾಯಕ ಪಿ.ಎಸ್.ಐ (ಕಾಸು) ಔರಾದ(ಬಿ) ಪೋಲಿಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಔರಾದ ಪಟ್ಟಣದ ಜನತಾ ಕಾಲೋನಿಗೆ ಹೋಗಿ ಆರೋಪಿ ಬಾಬು ತಂದೆ ಮಾರುತಿ ಪವಾರ ವಯ: 35 ವರ್ಷ, ಜಾತಿ: ವಡ್ಡರ, ಸಾ: ಜನತಾ ಕಾಲೋನಿ ಔರಾದ(ಬಿ) ಇತನ ಮನೆಯ ಶೋಧನ ಮಾಡಲು ಹೊಗಿ ಶೋಧನೆ ವಾರೆಂಟ್ ತೋರಿಸಿ ಮನೆಯಲ್ಲಿ ಶೋಧನೆ ಮಾಡಿದಾಗ ಅಲ್ಲಿ 1) 10 ಕೆ.ಜಿ ಶ್ರೀಗಂಧದ ಕಟ್ಟಿಗೆ ಅ.ಕಿ 60,000/- ರೂ., 2) ಮೋಟಾರ ಸೈಕಲ ಕೆಎ-38/ ಎಕ್ಸ-3242 ಅ.ಕಿ 60,000/- ರೂ., 3) ನಗದು ಹಣ 6000/- ರೂ., 4) ಸ್ಯಾಮಸಂಗ್ ಕಂಪನಿಯ 2 ಮೋಬೈಲಗಳು ಅ.ಕಿ 4400/- ರೂ., 5) ಒಂದು ವಿವೋ ಕಂಪನಿಯ ಮೋಬೈಲ್ ಅ.ಕಿ 5000/- ರೂ., 6) ಒಂದು ಚಿಕ್ಕದ್ದು ತೂಕ ಮಾಡುವ ತಕ್ಕಡ್ಡಿ ಮತ್ತು ಅದರೊಂದಿಗೆ 2 ತೂಕದ ಕಲ್ಲುಗಳು (1 ಕೆ.ಜಿಯ ಒಂದು ಕಲ್ಲು ಮತ್ತು 500 ಗ್ರಾಂ ತೂಕದ ಒಂದು ಕಲ್ಲು, ಹಾಗೂ 7) ಒಂದು ಕಬ್ಬಿಣದ ಕೊಡಲಿ ಅದಕ್ಕೆ 2 ಫೀಟ 3 ಇಂಚು ಉದ್ದವುಳ್ಳ ಕಟ್ಟಿಗೆಯ ಕಾವು ನೇದವುಗಳು ಸಿಕ್ಕಿದ್ದು, ನೇದವುಗಳನ್ನು ಜಪ್ತಿ ಮಾಡಿಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 101/2020, ಕಲಂ. 457, 380 ಐಪಿಸಿ :-
ದಿನಾಂಕ 09-11-2020 ರಂದು ಫಿರ್ಯಾದಿ ಕ್ರಿಷ್ಟಿನಾ ಗಂಡ ಸಂತೋಷ ಬಸನೂರೆ ವಯ: 29 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಬೀದರ ರವರ ತಂದೆ ತಾಯಿಯವರು ಖತಗಾಂವದಲ್ಲಿರುವ ಅವರ ಮನೆಗೆ ಬೀಗ ಹಾಕಿ ಹೈದ್ರಾಬಾದಗೆ ಹೋದಾಗ ಯಾರೋ ಅಪರಿಚಿತ ಕಳ್ಳರು ಮನೆಯ ಬೀಗ ಮುರಿದು ಮನೆಯಲ್ಲಿನ ಅಲಮಾರಾ ಮುರಿದು ಅಲಮಾರಾದಲ್ಲಿದ್ದ 1) 1,45,000/- ರೂ., 2) ಒಂದು 5 ಗ್ರಾಮದ ಬಂಗಾರದ ಉಂಗುರು ಅ.ಕಿ 26,000/- ರೂ., 3) ಬಂಗಾರದ ಉಂಗುರು 5 ಗ್ರಾಮ ಅ.ಕಿ 26,000/- ರೂ., 4) ಒಂದು ಮಿನಿ ಗಂಟನ್ 15 ಗ್ರಾಮ ಅ.ಕಿ 78,000/- ರೂ., 5) ಬಂಗಾರದ ಕಿವಿಯಲ್ಲಿನ ಹೂ 3 ಗ್ರಾಮ ಅ.ಕಿ 15,000/- ರೂ., 6) ಮಕ್ಕಳ ಬೆಳ್ಳಿಯ ಕಾಲಗಡಗ 5 ತೋಲೆ ಅ.ಕಿ 3000/- ರೂ. ಹೀಗೆ ಒಟ್ಟು 2,93,000/- ರೂಪಾಯಿಯಷ್ಟು ರಾತ್ರಿ ವೇಳೆಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment