ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 11-11-2020
ಹುಮನಾಬಾದ ಸಂಚಾರ ಪೊಲೀಸ ಠಾಣೆ ಅಪರಾಧ ಸಂ. 84/2020, ಕಲಂ. 279, 304(ಎ) ಐಪಿಸಿ :-
ದಿನಾಂಕ 09-11-2020 ರಂದು ಫಿರ್ಯಾದಿ ಸಂತೋಷ ತಂದೆ ವಿಠಲ ಹೊನಗೊಂಡ ಸಾ: ಜಲಸಂಗಿ ತಾ: ಹುಮನಾಬಾದ ರವರ ಅಣ್ಣ ಪಂಡಿತ ತಂದೆ ವಿಠಲ ಹೊನಗೊಂಡ ಈತನು ತನ್ನ ಹೀರೊ ಹೊಂಡಾ ಫ್ಯಾಷನ್ ಪ್ರೋ ಮೋಟಾರ್ ಸೈಕಲ್ ನೇದನ್ನು ಚಲಾಯಿಸಿಕೊಂಡು ತನ್ನ ಖಾಸಗಿ ಕೆಲಸದ ಪ್ರಯುಕ್ತ ಸೇಡೋಳ ಗ್ರಾಮಕ್ಕೆ ಹೋಗಿ ಬರುತ್ತೇನೆ ಅಂತ ತಿಳಿಸಿ ಜಲಸಂಗಿಯಿಂದ ಸೇಡೋಳ ಗ್ರಾಮದ ಕಡೆಗೆ ಹೋಗಿ ಮರಳಿ ಜಲಸಂಗಿಗೆ ಬರುತ್ತಿರುವಾಗ ರಾತ್ರಿಯ ಸಮಯದಲ್ಲಿ ತನ್ನ ಮೋಟಾರ್ ಸೈಕಲನ್ನು ಚೀನಕೇರಾ - ಜಲಸಂಗಿ ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಪಾಂಡುರಂಗ ತಂದೆ ಖಂಡಗೊಂಡ ರವರ ಹೊಲದ ಹತ್ತಿರ ಬಂದು ರಸ್ತೆ ತಿರುವಿನಲ್ಲಿ ತನ್ನ ನಿಯಂತ್ರಣ ತಪ್ಪಿದ್ದರಿಂದ ಮೋಟಾರ್ ಸೈಕಲ್ ಸಮೇತ ರೋಡಿನ ಬದಿಯ ಮುಳ್ಳಿನ ಕಂಟಿಗಳಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ, ಹೀರೊ ಹೊಂಡಾ ಫ್ಯಾಷನ್ ಪ್ರೋ ಮೋಟಾರ್ ಸೈಕಲನ ನೋಂದಣಿ ಸಂಖ್ಯೆ ಇರುವುದಿಲ್ಲಾ, ಅದರ ಚಾಸಿಸ್ ನಂ. MBLHA10EVBHB03134 ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-11-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿ ಗಂಜ ಪೊಲೀಸ್ ಠಾಣೆ ಬೀದರ ಅಪರಾಧ ಸಂ. 170/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 10-11-2020 ರಂದು ಹಳೆ ಆದರ್ಶ ಕಾಲೋನಿಯ ರೈಲ್ವೆ ಗೇಟ ಹತ್ತಿರ ಇರುವ ಹಿರೋ ಹೊಂಡಾ ಸರ್ವಿಸ ಸೆಂಟರ ಹಿಂಭಾಗದಲ್ಲಿ ಇಸ್ಪಿಟ ಎಲೆಗಳಿಂದ ಅಂದರ ಬಾಹರ ಎನ್ನುವ ಜೂಜಾಟ ಆಡುತ್ತಿದ್ದ ಬಗ್ಗೆ ಮಂಜನಗೌಡ ಪಾಟೀಲ್ ಪಿ.ಎಸ್.ಐ. ಗಾಂಧಿ ಗಂಜ ಠಾಣೆ ಬೀದರ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಆರೋಪಿತರಾದ 1) ಪ್ರಕಾಶ ತಂದೆ ವಿಠಲ ಚವ್ಹಾಣ ವಯ: 32 ವರ್ಷ, ಸಾ: ಸೇವಾ ನಗರ ತಾಂಡಾ, 2) ರಾಜೇಂದ್ರ ತಂದೆ ಚಾಮ್ಲಾ ರಾಠೋಡ ವಯ: 33 ವರ್ಷ, ಸಾ: ಆಣದೂರ, 3) ಕೃಷ್ಣಾ ತಂದೆ ಭೂಮರೆಡ್ಡಿ ವಯ: 60 ವರ್ಷ, ಸಾ: ಆಣದೂರ, 4) ವಿಕಾಸ ತಂದೆ ಗಣಪತಿ ಜಾಧವ ವಯ: 22 ವರ್ಷ, ಸಾ: ಸೇವಾ ನಗರ ತಾಂಡಾ, 5) ಜಿಜೇಂದ್ರ ತಂದೆ ಸತ್ಯನಾರಾಯಣ ಪಾಂಡೆ ವಯ: 40 ವರ್ಷ, ಸಾ: ಬ್ಯಾಂಕ ಕಾಲೋನಿ ಬೀದರ, 6) ಸಂಜುಕುಮಾರ ತಂದೆ ವೇಣು ರಾಠೋಡ ವಯ: 35 ವರ್ಷ, ಸಾ: ಹಾಲಹಳ್ಳಿ ತಾಂಡಾ, 7) ಮಾರುತಿ ತಂದೆ ಜಿಲಾಲ ಪವಾರ ವಯ: 25 ವರ್ಷ, ಸಾ: ಸೇವಾ ನಗರ ಇವರೆಲ್ಲರ ಮೇಲೆ ದಾಳಿ ಮಾಡಿ ಜೂಜಾಟಕ್ಕೆ ತೊಡಗಿಸಿದ ಒಟ್ಟು 59,650/- ರೂ. ಹಾಗೂ 52 ಇಸ್ಪಿಟ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿ ಗಂಜ ಪೊಲೀಸ್ ಠಾಣೆ ಬೀದರ ಅಪರಾಧ ಸಂ. 169/2020, ಕಲಂ. 454, 457, 380 ಐಪಿಸಿ :-
ದಿನಾಂಕ 08-11-2020 ರಂದು 1730 ಗಂಟೆಯಿಂದ ದಿನಾಂಕ 10-11-2020 ರಂದು 0030 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಮೊಹ್ಮದ ಶಫಿಯೊದ್ದಿನ ತಂದೆ ಮೊಹ್ಮದ ಸಮಿಯೊದ್ದಿನ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಮನೆ ನಂ. 17/1/408-1 ಸಿದ್ರಮಯ್ಯಾ ಲೇಔಟ ಬೀದರ ರವರು ವಾಸವಾಗಿರು ಮನೆಯ ಬಾಗಿಲಿನ ಕೊಂಡಿ ಮುರಿದು ಒಳಗೆ ಪ್ರವೇಶಿಸಿ ಅಲಮಾರಾ ಲಾಕರ ಕೀಲಿ ಮುರಿದು ಅಲಮಾರಾದಲ್ಲಿರುವ 1) 35 ಗ್ರಾಮ ಬಂಗಾರದ ನೇಕ್ಲೇಸ, 10 ಕೈ ಉಂಗುರುಗಳು ಮಕ್ಕಳು ಹಾಕುವ 15 ಗ್ರಾಮ ಹೀಗೆ ಒಟ್ಟು 50 ಗ್ರಾಮ ಬಂಗಾರದ ಒಡವೆಗಳು ಅ.ಕಿ 2,50,000/- ರೂ., 2) ಬೇಳ್ಳಿಯ ಕಾಲುಚೇನಗಳು ಅ.ಕಿ 250 ಗ್ರಾಮ ಅ.ಕಿ 10,000/- ರೂ., 3) ನಗದು ಹಣ 2500/- ರೂ., ಹೀಗೆ ಒಟ್ಟು 2,62,500/- ರೂಪಾಯಿ ಮೌಲ್ಯದ ಬಂಗಾರ ಒಡವೆಗಳು, ಬೇಳ್ಳಿ ಮತ್ತು ನಗದು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-11-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 220/2020, ಕಲಂ. 457, 380 ಐಪಿಸಿ :-
ದಿನಾಂಕ 08-11-2020 ರಂದು ಫಿರ್ಯಾದಿ ಜ್ಞಾನೇಶ್ವರ ತಂದೆ ಶಿವಾಜಿ ಮಲ್ಲೇಶಿ ಸಾ: ವಾಗಲಗಾಂವ, ಸದ್ಯ: ರೈಲ್ವೆ ಸ್ಟೇಶನ ಹತ್ತಿರ ಭಾಲ್ಕಿ ರವರು ತಮ್ಮ ಮನೆಗೆ ಬೀಗ ಹಾಕಿ ಹೊಗುವುದನ್ನು ನೋಡಿ ಯಾರೋ ಅಪರೀಚಿತ ಕಳ್ಳರು ದಿನಾಂಕ 09-11-2020 ರಂದು 2300 ಗಂಟೆಯಿಂದ ದಿನಾಂಖ 10-11-2020 ರಂದು 0100 ಗಂಟೆಯ ಅವಧಿಯಲ್ಲಿ ಫಿರ್ಯಾದಿಯವರ ಮನೆಯ ಬಾಗಿಲ ಕೊಂಡಿ ಮುರಿದು ಮನೆಯಲ್ಲಿ ಪ್ರವೇಶ ಮಾಡಿ ಮನೆಯಲ್ಲಿನ ಅಲಮಾರಾ ಕೀಲಿ ಮುರಿದು ಅಲಮಾರಾದಲ್ಲಿರುವ 25 ಗ್ರಾಂ. ಬಂಗಾರದ ಒಂದು ಗಂಟನ ಸರ್ ಅ.ಕಿ 1,25,000/- ರೂ. ಹಾಗೂ ನಗದು ಹಣ 5,000/- ರೂಪಾಯಿ ಹೀಗೆ ಒಟ್ಟು 1,30,000/- ರೂ. ಬೆಲೆ ಬಾಳುವ ಬಂಗಾರ ಹಾಗೂ ನಗದು ಹಣ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಸಂತಪುರ ಪೊಲೀಸ್ ಠಾಣೆ ಅಪರಾಧ ಸಂ. 76/2020, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 10-11-2020 ರಂದು ಫಿರ್ಯಾದಿ ಶಂಕರ ತಂದೆ ಧನರಾಮ ಜಾಧವ ಸಾ: ಬೀಬಾನಾಯಕ ತಾಂಡಾ ವಡಗಾಂವ ರವರ ಮೊಮ್ಮಗ ಶೆಷೆರಾವ ತಂದೆ ಮಾರುತಿ ಇಬ್ಬರೂ ತಮ್ಮ ಹೊಲದಿಂದ ಮನೆಗೆ ನಡೆದುಕೊಂಡು ಬರುವಾಗ ಕೆಇಬಿ ಹತ್ತಿರ ಇರುವಾಗ ವಡಗಾಂವ ಚಿಂತಾಕಿ ರೋಡಿನ ಮೇಲೆ ತಾಂಡಾದ ಕಡೆಯಿಂದ ಬಂದ ಮೊಟಾರ ಸೈಕಲ್ ನಂ. ಕೆಎ-38/ಎಕ್ಸ್-0601 ನೇದರ ಚಾಲಕನಾದ ಆರೋಪಿಯು ತನ್ನ ಮೊಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಹೊಡೆದು ತನ್ನ ಮೊಟಾರ ಸೈಕಲ್ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಗೆ ಬಲಗಾಲ ಮೊಣಕಾಲ ಕೆಳಗೆ ಮೂಳೆ ಮುರಿದು ಭಾರಿ ಗುಪ್ತಗಾಯ, ಎಡಗೈ ಹೆಬ್ಬೆರಳಿಗೆ ತರಚಿದ ಗಾಯವಾಗಿರುತ್ತದೆ, ನಂತರ ಮೊಮ್ಮಗ ಶೇಷೆರಾವ ಈತನು ತನ್ನ ತಂದೆ ತಾಯಿಯವರಿಗೆ ಕರೆ ಮಾಡಿ ತಿಳಿಸಿದಾಗ ಅವರು ಬಂದು ಫಿರ್ಯಾದಿಗೆ 108 ಆಂಬುಲೇನ್ಸನಲ್ಲಿ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 93/2020, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 10-11-2020 ರಂದು ಫಿರ್ಯಾದಿ ಅಶೋಕ ತಂದೆ ಅಮರೇಶ ಮಡಿವಾಳ, ವಯ: 35 ವರ್ಷ, ಜಾತಿ: ಮಡಿವಾಳ, ಸಾ: ಯಲ್ಲಾಲಿಂಗ ನೌಬಾದ, ಬೀದರ ರವರ ಮಗನಾದ ಆಕಾಶ ತಂದೆ ಅಶೋಕ ಮಡಿವಾಳ, ವಯ: 8 ವರ್ಷ ಇತನು ಯಲ್ಲಾಲಿಂಗ ಕಾಲೋನಿ ಮನೆಯಿಂದ ಕಿರಣಾ ಅಂಗಡಿಗೆ ನಡೆದುಕೊಂಡು ರಾಜು ಕಾರ್ಪೇಂಟರ್ ಅಂಗಡಿ ಹತ್ತಿರ ಹೋದಾಗ ನೌಬಾದ ಬಸವೇಶ್ವರ ವೃತ್ತದ ಕಡೆಯಿಂದ ಕಾರ ನಂ. ಎಮ್.ಹೆಚ್-04/ಸಿ.ಝಡ್-2404 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಆಕಾಶ ಇತನಿಗೆ ಡಿಕ್ಕಿ ಮಾಡಿ ಕಾರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಆಕಾಶ ಇತನ ತಲೆಯಲ್ಲಿ ಭಾರಿ ರಕ್ತಗಾಯವಾಗಿ, ಎರಡು ಕಾಲುಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ, ನಂತರ ಆತನಿಗೆ ಚಿಕಿತ್ಸೆ ಕುರಿತು ಖಾಸಗಿ ವಾಹನದಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 100/2020, ಕಲಂ. 279, ,337, 338 ಐಪಿಸಿ :-
ದಿನಾಂಕ 10-11-2020 ರಂದು ಫಿರ್ಯಾದಿ ಪ್ರಕಾಶ ತಂದೆ ಶಾಮಣ್ಣ ಬುಳ್ಳಾನವರ ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ನಿರ್ಣಾ ರವರ ಗೆಳೆಯನಾದ ಸೂರ್ಯಕಾಂತ ತಂದೆ ಬಸವರಾಜ ಪರೀಟ ಸಾ: ನಿರ್ಣಾ ಇತನ ಜೊತೆಯಲ್ಲಿ ನಿರ್ಣಾ ಗ್ರಾಮದಿಂದ ಬನ್ನಳ್ಳಿ ಗ್ರಾಮಕ್ಕೆ ಮೋಟರ ಸೈಕಲ ನಂ. ಕೆಎ-39/ಎಲ್-8615 ನೇದರ ಮೇಲೆ ಹೋಗುವಾಗ ಮೋಟರ ಸೈಕಲನ್ನು ಸೂರ್ಯಕಾಂತ ಇವನು ಚಲಾಯಿಸುತ್ತಾ ನಿರ್ಣಾ-ಬನ್ನಳ್ಳಿ ರೋಡಿನ ಮೇಲೆ ನಿರ್ಣಾ ಗ್ರಾಮದ ಅಮೃತ ಕುಂಬಾರ ಇವರ ಹೋಲದ ಹತ್ತಿರ ಹೋಗುತ್ತಿರುವಾಗ ಬನ್ನಳ್ಳಿ ಕಡೆಯಿಂದ ತನ್ನ ಮೋಟರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸುತ್ತಾ ತನ್ನ ವಾಹನ ಕಂಟ್ರೋಲ್ ಮಾಡದೇ ರೋಡಿನ ಬಲಗಡೆ ಹೋಗಿ ಎದುರಿನಿಂದ ಬರುತ್ತಿದ್ದ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟರ ಸೈಕಲ ನಂ. ಕೆಎ-39/ಆರ್-7071 ನೇದಕ್ಕೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಗೆ ಯಾವದೇ ರೀತಿ ಗಾಯಗಳಾಗಿರುವುದಿಲ್ಲ, ಸೂರ್ಯಕಾಂತ ಇತನಿಗೆ ನೋಡಲು ಆತನ ಬಲಗಡೆ ಕಣ್ಣಿನ ಕೆಳಗೆ ಭಾರಿ ರಕ್ತಗಾಯವಾಗಿರುತ್ತದೆ, ಎದುರಿನಿಂದ ಬಂದ ಮೋಟರ ಸೈಕಲ್ ಚಾಲಕನಿಗೆ ವಿಚಾರಿಸಲು ತನ್ನ ಹೆಸರು ಯಲ್ಲಾಲಿಂಗ ತಂದೆ ಧನಶೇಟ್ಟಿ ದಸಗೊಂಡ ಸಾ: ಬೆಳಕೇರಾ ಅಂತ ಹೇಳಿದ್ದು ಇತನಿಗೆ ಬಲಗಡೆ ಕಿವಿಯ ಹತ್ತಿರ ರಕ್ತಗಾಯ, ಬಲಗಡೆ ಕಣ್ಣಿನ ಕೆಳಗೆ ರಕ್ತಗಾಯ, ಬಲ ಕಿವಿಯಿಂದ ರಕ್ತ ಬಂದು ಭಾರಿ ಗಾಯಗಳಾಗಿದ್ದು ಅವನ ಹಿಂದೆ ಕುಳಿತ ವ್ಯಕ್ತಿಗೆ ವಿಚಾರಿಸಲು ತನ್ನ ಹೆಸರು ಅನಿಲ ತಂದೆ ಕಲ್ಲಪ್ಪ ಹಿಪ್ಪರಗಿ ಸಾ: ಬೆಳಕೇರಾ ಅಂತ ಹೇಳಿದ್ದು ಆತನಿಗೆ ನೋಡಲು ಆತನ ಬಲ ಮೊಳಕಾಲ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯು ಕೂಡಲೇ ಗಾಯಗೊಂಡವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಸರ್ಕಾರಿ ಆಸ್ಪತ್ರೆ ಚಿಟಗುಪ್ಪಾಕ್ಕೆ ಕರೆದುಕೊಂಡು ಹೋಗಿದ್ದು, ನಂತರ 108 ಅಂಬುಲೆನ್ಸ ವಾಹನ ಬಂದ ನಂತರ ಗಾಯಗೊಂಡ ಸೂರ್ಯಕಾಂತ ಇತನಿಗೆ ಚಿಕಿತ್ಸೆ ಕುರಿತು ಸರ್ಕಾರಿ ಆಸ್ಪತ್ರೆ ಮನ್ನಾಎಖೇಳ್ಳಿಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment