Police Bhavan Kalaburagi

Police Bhavan Kalaburagi

Thursday, November 12, 2020

BIDAR DISTRICT DAILY CRIME UPDATE 12-11-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 12-11-2020

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 221/2020, ಕಲಂ. 279, 304(ಎ) ಐಪಿಸಿ :-

ಫಿರ್ಯಾದಿ ಝರೆಮ್ಮಾ ಗಂಡ ಘಾಳೆಪಾ್ಪ ಮುತಗುಂಡೆ ವಯ: 35 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಖಟಕ ಚಿಂಚೋಳಿ ರವರ ಗಂಡ ಘಾಳೆಪ್ಪಾ ರವರು 10 ವರ್ಷಗಳಿಂದ ಭಾಲ್ಕಿ ಘಟಕದಲ್ಲಿ ಬಸ್ಸ್ಚಾಲಕ ಕಂ ನಿರ್ವಾಹಕ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದರು, ಹೀಗಿರುವಾಗ ದಿನಾಂಕ 11-11-2020 ರಂದು 1730 ಗಂಟೆಗೆ ಡಿಪೋದಲ್ಲಿ ಕೆಲಸ ಮುಗಿಸಿಕೊಂಡು ಹಣ ಕಟ್ಟಲು ಡಿಪೋ ಒಳಗೆ ಕ್ಯಾಶ ವಿಭಾಗಕ್ಕೆ ಹೋಗಿ ಕ್ಯಾಶ ತುಂಬಿ ಡಿಪೋ ಮ್ಯಾನೇಜರ ರವರಿಗೆ ಮನೆಯ ಗೃಹ ಪ್ರವೇಶದ ಸಲುವಾಗಿ ರಜೆ ಕೇಳುವ ಸಲುವಾಗಿ ಹೋಗುವಾಗ ಡಿಪೋ ಒಳಗಡೆ ಇರುವ ಕೆ.ಎಸ್.ಆರ್.ಟಿ.ಸಿ ಬಸ್ಸ್ನಂ. ಕೆ.-38/ಎಫ್-1183 ನೇದನ್ನು ಡಿಪೋದಲ್ಲಿರುವ ಮೇಕಾನಿಕ ಅಂತಾ ಕೆಲಸ ಮಾಡುವ ಹಣಮಂತ ಇವನು ಸದರಿ ವಾಹನವನ್ನು ಅತಿವೇಗದಿಂದ ಚಲಾಯಿಸಿಕೊಂಡು ಬಂದು ಡಿಪೋ ಮ್ಯಾನೇಜರ ಕಛೇರಿ ಕಡೆಗೆ ಹೋಗುತ್ತಿರುವ ಘಾಳೇಪ್ಪಾ ರವರಿಗೆ ಜೋರಾಗಿ ಗಾಡಿಯ ಮುಂಭಾಗದಿಂದ ಡಿಕ್ಕಿ ಮಾಡಿ ಪ್ರಯುಕ್ತ ಘಾಳೆಪ್ಪಾ ರವರು ಕೆಳಗೆ ಬೀಳಲು ಬಸ್ಸಿನ ಹಿಂಭಾಗದ ಗಾಲಿಯೂ ಹೊಟ್ಟೆ ಮತ್ತು ಎರಡು ತೋಡೆಯ ಮೇಲಿಂದ ಹಾದು ಹೋಗಿರುತ್ತದೆ, ಆಗ ಅಲ್ಲೆ ಇದ್ದ ಅನೀಲ ತಂದೆ ಕಾಶೇಪ್ಪಾ ರಟಕಲೆ ಮತ್ತು ಡಿಪೋ ಮ್ಯಾನೇಜರ ಶ್ರೀಮಂತ ತಂದೆ ಮರೇಪ್ಪಾ ಘಂಟೆ, ತುಕಾರಾಮ ರಡ್ಡಿ ಬಸ್ಸ್ಚಾಲಕ ರವರು ಕೂಡಿ ಅವರನ್ನು ಎಬ್ಬಿಸಿ ಮ್ಮ ಕೆ.ಎಸ್.ಆರ್.ಟಿ.ಸಿ ಬಸ್ಸ್ನಂ. ಕೆ.-38/ಎಫ್-1088 ರಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದಾಗ ವೈಧ್ಯಾಧಿಕಾರಗಳು ಫಿರ್ಯಾದಿಯವರ ಗಂಡನಿಗೆ ಪರೀಕ್ಷಿಸಿ ನೋಡಲು ಅವರು ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.      

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 104/2020, ಕಲಂ. 279, 338 ಐಪಿಸಿ :-

ದಿನಾಂಕ 11-11-2020 ರಂದು ಫಿರ್ಯಾದಿ ಆದಿನಾಥ ತಂದೆ ದೀಪಕ ಸೂರ್ಯವಂಶಿ ವಯ: 20 ವರ್ಷ, ಜಾತಿ: ಎಸ್.ಸಿ, ಸಾ: ಬಟಗೇರಾ, ತಾ: ಬಸವಕಲ್ಯಾಣ ರವರ ಅಜ್ಜ ತಾತೇರಾವ ತಂz ಪುಂಡಲಿಕ ಸೂರ್ಯವಂಶಿ ವಯ: 65 ವರ್ಷ ಇವರಿಗೆ ಆರಮವಿಲ್ಲದ ಕಾರಣ ಚಿಕಿತ್ಸೆ ಕುರಿತು ಮ್ಮ ಅಜ್ಜಿ ಭಾರತಬಾಯಿ ಇಬ್ಬರೂ ಕೂಡಿ ಅಜ್ಜ ತಾತೇರಾವ ಇವರಿಗೆ ಮಂಠಾಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಕುರಿತು ಮ್ಮೂರ ಬಸನಿಲ್ದಾಣದ ಹತ್ತಿರ ಇದ್ದಾಗ ಅಷ್ಟರಲ್ಲಿಯೆ ಫಿರ್ಯಾದಿಗೆ ಪರಿಚಯಸ್ಥನಾದ ಸಂಗಮೇಶ ತಂದೆ ಸುಭಾಷ ವಯ: 29 ವರ್ಷ, ಸಾ: ಬಸವಕಲ್ಯಾಣ ಇವನು ತನ್ನ ಹಿರೋ ಸ್ಪ್ಲೇಂಡರ್ ಪ್ಲಸ್ ಮೋಟಾರ್ ಸೈಕಲ್ ನಂ. ಕೆಎ-56/ಹೆಚ್-1991 ನೇದನ್ನು ಚಲಾಯಿಸಿಕೊಂಡು ಫಿರ್ಯಾದಿಯ ಹತ್ತಿರ ಬಂದಾಗ ಆತನ ಮೋಟಾರ್ ಸೈಕಲ ಮೇಲೆ ಅಜ್ಜಿ ಭಾರತಬಾಯಿಗೆ ಮತ್ತು ಫಿರ್ಯಾದಿಯು ಫ್ಯಾಶನ್ ಫ್ರೋ ಮೋಟಾರ್ ಸೈಕಲ ನಂ. ಕೆಎ-56/-4860 ನೇದರ ಮೇಲೆ ಅಜ್ಜ ತಾತೇರಾವ ಇವರಿಗೆ ಕೂಡಿಸಿಕೊಂಡು ಮಂಠಾಳ ಗ್ರಾಮಕ್ಕೆ ಆಲಗೂಡ-ಮಂಠಾಳ ಟಾರ ರೋಡ ಮುಖಾಂತರ ಚಲಾಯಿಸಿಕೊಂಡು ಬರುತ್ತಿರುವಾಗ ದಾರಿಯಲ್ಲಿ ಆಲಗೂಡ ಧರಿ ದಾಟಿದ ನಂತರ ಸಂಗಮೇಶ ಇವನು ತನ್ನ ಮೋಟಾರ್ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ಮೇಲಿನ ಹಿಡಿತ ಕಳೆದುಕೊಂಡು ಆಲಗೂಡ ಶಿವಾರದಲ್ಲಿ ರೋಡಿನ ಪಕ್ಕದಲ್ಲಿರುವ ಪಪ್ಪಾಯಿ ಬೆಳೆಯ ಹೊಲದ ಮುಂದೆ ರೋಡಿನ ಮೇಲೆ ಫಿರ್ಯಾದಿಯ ವಾಹನಕ್ಕೆ ಸೈಡ್ ಹೊಡೆಯಲು ಹೋಗಿ ಫಿರ್ಯಾದಿಯ ವಾಹನಕ್ಕೆ ಹಿಂದಿನಿಂದ ಮ್ಮೇಲೆ ಜೋರಾಗಿ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಬಲಗಾಲು ಪಾದಕ್ಕೆ ಭಾರಿ ಗುಪ್ತ ಮತ್ತು ರಕ್ತಗಾಯ, ಮೂಗಿನ ಮೇಲೆ ಎರಡು ತುಟಿಗಳಿಗೆ, ಡಗಣ್ಣಿನ ಹುಬ್ಬಿನ ಮೇಲೆ ರಕ್ತಗಾಯ ಹಾಗು ಡಗೈ ಭುಜಕ್ಕೆ, ಡಮುಂಗೈ ಡಗಾಲು ಪಾದಕ್ಕೆ ತರಚಿದ ರಕ್ತಗಾಯವಾಗಿದ್ದು,  ಅಜ್ಜ ತಾತೇರಾವ ಇವರಿಗೆ ಬಲಗಾಲು ತೊಡೆಗೆ, ಬಲ ಮೊಳಕಾಲ ಮೇಲೆ ಮತ್ತು ಬಲ ಮೊಳಕಾಲ ಕೆಳಗೆ ಮುಳೆ ಮುರಿದು ಭಾರಿ ಹರಿದ ರಕ್ತಗಾಯವಾಗಿ ಡಭುಜದ ಹತ್ತಿರ ರಕ್ತಗಾಯವಾಗಿದ್ದು ಹಾಗು ಅಜ್ಜಿ ಭಾರತಬಾಯಿ ಇವರಿಗೆ ಎಡಗೈ ಮುಂಗೈ ಹತ್ತಿರ ಮುಳೆ ಮುರಿದು ಭಾರಿ ಗುಪ್ತಗಾಯವಾಗಿರುತ್ತದೆ, ಸಂಗಮೇಶ ಇವನಿಗೆ ಅಂತಹ ಯಾವುದೇ ಗಾಯಳು ಆಗಿರುವುದಿಲ್ಲ, ನಂತರ ತಮ್ಮೂರಿನ ಶಿವಾನಂದ ರವರು ಬಂದು ಗಾಯಗೊಂಡ ಎಲ್ಲರಿಗೂ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಪಾಟೀಲ ಆಸ್ಪತೆ್ರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.    

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 158/2020, ಕಲಂ. 279, 338 ಐಪಿಸಿ :-

ದಿನಾಂಕ 11-11-2020 ರಂದು ಫಿರ್ಯಾದಿ ಸಯ್ಯದ ರಿಯಾಜ ತಂದೆ ಚಾಂದಪಾಶಾ ಮೋಜನ, ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ವಳಕಿಂಡಿ, ತಾ: ಚಿಟಗುಪ್ಪಾ ರವರು ತಮ್ಮ ಚಿಕ್ಕಪ್ಪನಾದ ಸಯ್ಯದ ಮುಸ್ತಫಾ ತಂದೆ ನಬಿಸಾಬ ಮೋಜನ ವಯ: 60 ವರ್ಷ ಗುರುರಾಜ ಮೋಳಕೇರಾ ರವರ ಹೋಲದಲ್ಲಿ ಸಮಾಧಿ ಮುಂದೆ ಲಾರಿ ನಂ. .ಪಿ-24/ವಾಯ್-4146 ನೇದರಲ್ಲಿನ ಗ್ರಾನೇಟ ಲೋಡ ಇಳಿಸುವ ಕೆಲಸ ಮಾಡುತ್ತಿರುವಾಗ ಸದರಿ ಲಾರಿ ಚಾಲಕನಾದ ಆರೋಪಿ ತಿರುಪತಿ ಗೌಡ ತಂದೆ ಪೆಂಟಯ್ಯಾ ಮುಚ್ಚುನೂರಿ, ವಯ: 39 ವರ್ಷ, ಜಾತಿ: ಗೌಡ, ಸಾ: ಮನೆ ನಂ. 11-325 ಸಂಜಯಗಾಂಧಿ ನಗರ, ಐ.ಡಿ.ಎ ಜೇಡಿಮೇಟ್ಲಾ, ಕುತುಬುಲ್ಲಾಪೂರ, ಮೆಡಚಲ, ಹೈದ್ರಾಬಾದ ಈತನು ತನ್ನ ಲಾರಿಯನ್ನು ಒಮ್ಮೇಲೆ ನಿಷ್ಕಾಳಿಜಿತನದಿಂದ ಚಲಾಯಿಸಿದ್ದರಿಂದ ಲಾರಿ ಒಳಗೆ ನಿಂತ ಚಿಕ್ಕಪ್ಪ ನವರ ಬಲಗಾಲ ಮೇಲೆ ಗ್ರಾನೇಟ ಪರ್ಸಿಗಳು ಬಿದ್ದು ಅಪಘಾತವಾಗಿದ್ದು, ಸದರಿ ಅಪಘಾತದಿಂದ ಚಿಕ್ಕಪ್ಪ ರವರ ಬಲಗಾಲ ಮೋಳಕಾಲಿನಿಂದ ಪಾದದವರೆಗೆ 2-3 ಕಡೆ ಮೂಳೆ ಮುರಿದು ಭಾರಿ ರಕ್ತಗಾಯವಾಗಿರುತ್ತದೆ, ನಂತರ ಚಿಕ್ಕಪ್ಪ ರವರಿಗೆ ಖಾಸಗಿ ವಾಹನದಲ್ಲಿ ಫಿರ್ಯಾದಿಯು ಚಿಕಿತ್ಸೆ ಕುರಿತು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 159/2020, ಕಲಂ. 379 ಐಪಿಸಿ :-

ಫಿರ್ಯಾದಿ ಗಣಪತಿ ತಂದೆ ಧೂಳಪ್ಪ ಕತಗಾಂವಿ ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ಕೆ.ಹೆಚ್.ಬಿ. ಕಾಲೋನಿ ಬೀದರ ರವರು ಚಿಟಗುಪ್ಪ ಪಟ್ಟಣದ ಇಟಗಾ ರೋಡಿನ ಹತ್ತಿರವಿರುವ ಡಿ.ಕೆ. ಪೆಟ್ರೋಲಿಯಮ್ಸ್ ಮಾಲಿಕನಾಗಿದ್ದು, ತಮ್ಮ ಪೆಟ್ರೋಲ್ ಬಂಕ್  2005 ನೇ ಸಾಲಿನಲ್ಲಿ ಪ್ರಾರಂಭವಾಗಿದ್ದು, ಹೀಗಿರುವಾಗ ದಿನಾಂಕ 11-11-2020 ರಂದು ಸದರಿ ಪೆಟ್ರೋಲ್ ಬಂಕನಲ್ಲಿ ಕೆಲಸ ಮಾಡುವ ಮ್ಯಾನೇಜರ ರಾಜಕುಮಾರ ತಂದೆ ಕಾಶಿನಾಥ ಗೂಳಶೆಟ್ಟಿ ರವರು ಫಿರ್ಯಾದಿಗೆ ಕರೆ ಮಾಡಿ ತಿಳಿಸಿದ್ದೆನೆಂದರೆ, ದಿನಾಂಕ 10-11-2020 ರಂದು ನಮ್ಮ ಪೆಟ್ರೋಲ್ ಬಂಕಿನಲ್ಲಿ 6732 ಲೀಟರ್ ಸ್ಟಾಕ ಇದ್ದು, ನಿನ್ನೆ 836 ಲೀ. ಡಿಸೇಲ ಮಾರಾಟವಾಗಿರುತ್ತದೆ, ಇಂದು ಮುಂಜಾನೆ ಸದರಿ ಬಂಕಿನಲ್ಲಿ ಸ್ಟಾಕ ಚೆಕ್ ಮಾಡಲಾಗಿ 2984 ಲೀ. ಮಾತ್ರ ಸ್ಟಾಕ ಇರುತ್ತದೆ ಅಂತಾ ತಿಳಿಸಿದ್ದು, ನಂತರ ಫಿರ್ಯಾದಿಯು ಪೆಟ್ರೋಲ ಬಂಕಿಗೆ ಬಂದು ಅಂಡರ ಗ್ರೌಂಡ ಟ್ಯಾಂಕ ಚೆಕ ಮಾಡಲಾಗಿ 5396 ಲೀ. ಇರಬೇಕಾಗಿದ್ದು, 2984 ಲೀ. ಮಾತ್ರ ಇರುತ್ತದೆ, ದಿನಾಂಕ 10-11-2020 ರಂದು 2300 ಗಂಟೆಯಿಂದ ದಿನಾಂಖ 11-11-2020 ರಂದು 0500 ಗಂಟೆಯ ಅವಧಿಯ ಯಾರೋ ಅಪರಿಚಿತರು 2 ಅಂಡರ ಗ್ರೌಂಡ ಟ್ಯಾಂಕನಿಂದ ಸುಮಾರು 2412 ಲೀ. ಡೀಸೇಲ ಸುಮಾರು 1,80,000 (ಪ್ರ.ಲೀ. ಬೆಲೆ 75/-ರೂ.) ಮೌಲ್ಯದ ಡಿಸೇಲನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 141/2020, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 11-11-2020 ರಂದು ಸುಲ್ತಾನಬಾದ ವಾಡಿ ಗ್ರಾಮ ಶಿವಾರ ಯಲ್ಲಪ್ಪಾ ಖಾನಾಪುರೆ ರವರ ಹೊಲದ ಹತ್ತಿರ ಸರಕಾರಿ ಖುಲ್ಲಾ ಜಾಗದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ 3 ಎಲೆಯ ನಸೀಬಿನ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ ಫಿರ್ಯಾದಿ ನಿಂಗಪ್ಪಾ ಮಣ್ಣೂರ ಪಿ.ಎಸ್. (ಕಾಸು) ಹಳ್ಳಿಖೇಡ(ಬಿ) ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸುಲ್ತಾನಬಾದ ವಾಡಿ ಗ್ರಾಮ ಶಿವಾರ ಯಲ್ಲಪ್ಪಾ ಖಾನಾಪುರೆ ರವರ ಹೊಲದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಸುಲ್ತಾನಬಾದ ವಾಡಿ ಗ್ರಾಮ ಶಿವಾರ ಯಲ್ಲಪ್ಪಾ ಖಾನಾಪುರೆ ರವರ ಹೊಲದ ಹತ್ತಿರ ಸರಕಾರಿ ಖುಲ್ಲಾ ಜಾಗದಲ್ಲಿ ಆರೋಪಿತರಾದ 1) ಎಮ್.ಡಿ ಖಲೀಲ ತಂದೆ ಎಮ್.ಡಿ ಆಜಾಮಸಾಬ ಜಮಾದಾರ ಸಾ: ಖಟಕ ಚಿಂಚೋಳಿ ಹಾಗೂ ಇನ್ನೂ 6 ಜನ ಇವರೆಲ್ಲರೂ ಗೋಲಾಕಾರವಾಗಿ ಕುಳಿತು ಅವರ ಪಕ್ಕದಲ್ಲಿ ಎರಡು ಮೋಟಾರ್ ಸೈಕಲಗಳು ಅಡ್ಡಲಾಗಿ ಮರೆಯಾಗಿ ನಿಲ್ಲಿಸಿಕೊಂಡು ಇಸ್ಪಿಟ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿಯವರ ಮೇಲೆ ದಾಳಿ ಮಾಡಲು ಇಬ್ಬರು ಓಡಿ ಹೋಗಿದ್ದು, ಉಳಿದ 5 ಜನರನ್ನು ಹಿಡಿದುಕೊಂಡು ಅವರಿಂದ ಜೂಜಾಟಕ್ಕೆ ಸಂಬಂಧಪಟ್ಟ ಒಟ್ಟು 60,980/- ರೂ. ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಹಾಗೂ ಎರಡು ಮೋಟಾರ ಸೈಕಲಗಳು ಮತ್ತು 5 ಜನ ಆರೋಪಿತರನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: