ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 13-11-2020
ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 07/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 12-11-2020 ರಂದು ಫಿರ್ಯಾದಿ ಅಬ್ದುಲ್ ಗಫೋರ್ ತಂದೆ ಅಲೀಮೊದ್ದಿನ್ ಜರ್ದಿ ವಯ: 48 ವರ್ಷ, ಜಾತಿ: ಮುಸ್ಲಿಂ, ಸಾ: ಆಳಂದ, ಸದ್ಯ: ಬಿಲಾಲ ಕಾಲೋನಿ ನಿವ್ರತ್ತ ಎಎಸ್ಐ ಅಜೀಮೊದ್ದಿನ್ ರವರ ಮನೆಯ ಹತ್ತಿರ ಬೀದರ ರವರ ಅಣ್ಣನಾದ ಮೈನೊದ್ದಿನ್ ಜರ್ದಿ ವಯ: 50 ವರ್ಷ ಸಾ: ಆಳಂದ, ಸದ್ಯ: ಬಿಲಾಲ ಕಾಲೋನಿ ಬೀದರ ಈತನು ಸ್ವಲ್ಪ ಮಾನಸಿಕ ಅಸ್ವಸ್ಥನಿದ್ದ ಪ್ರಯುಕ್ತ ಅವನಿಗೆ ಮದುವೆಯಾಗಿರುವುದಿಲ್ಲಾ, ಸದರಿಯವರು ಈ ಹಿಂದೆ ಸುಮಾರು ಸಲ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೊರಟು ಹೊಗುತ್ತಿದ್ದನು, ಹೀಗಿರುವಲ್ಲಿ ಸದರಿ ಅಣ್ಣ ಮೈನೊದ್ದಿನ್ ಈತನು ದಿನಾಂಕ: 09-11-2020 ರಂದು 0800 ಗಂಟೆಯ ಸುಮಾರಿಗೆ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಹೊರಟು ಹೊಗಿ ದಿನಾಂಕ 11-11-2020 ರಂದು 1600 ಗಂಟೆಯ ಸುಮಾರಿಗೆ ಬಗದಲ ಬ್ರೀಡ್ಜ್ ಮೇಲೆ ಬಂದು ನದಿಯ ನೀರಿನ್ನು ನೋಡಲು ಕೆಳಗೆ ಹಣಕಿ ಹಾಕಿದಾಗ ಒಮ್ಮೆಲೆ ಫಿಡ್ಸ್ ಬೇನೆ ಬಂದು ಮತ್ತು ಚಕ್ಕರ ಬಂದು ನೀರಿನಲ್ಲಿ ಬಿದ್ದು ಈಜು ಬಾರದೆ ನೀರಿನಲ್ಲಿ ಮುಳುಗಿ ಮ್ರತಪಟ್ಟಿರುತ್ತಾನೆ, ಅಣ್ಣನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರವುದಿಲ್ಲಾ, ಸದರಿಯವನು ಮಾನಸಿಕ ಅಸ್ವಸ್ಥನಿದ್ದು, ಫೀಡ್ಸ್ ಕಾಯಿಲೆ ನೀರು ನೊಡಿದ ತಕ್ಷಣ ಬಂದ ಪ್ರಯುಕ್ತ ಆಕಸ್ಮಿವಾಗಿ ನೀರಿನಲ್ಲಿ ಮುಳುಗಿ ಮ್ರತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯರವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಸಿ.ಇ.ಎನ್ ಕ್ರೈಂ ಪೊಲೀಸ ಠಾಣೆ ಬೀದರ ಅಪರಾಧ ಸಂ. 14/2020, ಕಲಂ. 409, 420, 465, 468, 471 ಜೊತೆ 34 ಐಪಿಸಿ :-
ಫಿರ್ಯಾದಿ ಮಂಜುನಾಥ ಭಾಗವತ ಪ್ರಾದೇಶಿಕ ಪ್ರಬಂಧಕರು ಪ್ರಾದೇಶಿಕ ಕಛೇರಿ ಬೀದರ, ಕರ್ನಾಟಕ ಗ್ರಾಮೀಣ ಬ್ಯಾಂಕ ವಲಯ ಕಛೇರಿ ಬೀದರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಅರ್ಜಿ ಸಲ್ಲಿಸಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ 15-04-2020 ರಿಂದ ನಾನು ಪ್ರಾದೆಶೀಕ ಪ್ರಭಂಧಕರು ಎಂದು ಕಾರ್ಯನಿರ್ವಹಿಸುತ್ತಾ ಬಂದಿರುತ್ತೇನೆ, ಜಿಲ್ಲೆಯಲ್ಲಿರುವ 54 ಶಾಖೆಗಳ ಪೈಕಿ ಬೀದರ ತಾಲೂಕಿನ ಜನವಾಡಾ ಶಾಖೆ ಸಹ ಬೀದರ ಪ್ರಾದೇಶಿಕ ಕಛೇರಿಯ ವ್ಯಾಪ್ತಿಯಲ್ಲಿ ಬರುತ್ತದೆ, ಶ್ರೀ ದತ್ತಾತ್ರಿ ಮೇತ್ರೆ ಯವರು ಶಾಖಾ ವ್ಯಾವಸ್ಥಾಪಕರಾಗಿ ದಿನಾಂಕ 11-05-2017 ರಿಂದ 01-08-2019 ರ ವರೆಗೆ ಕಾರ್ಯ ನಿರ್ವಹಿಸಿರುತ್ತಾರೆ, ಶಾಖೆಯಲ್ಲಿ ಶಾಖಾ ವ್ಯಾವಸ್ಥಾಪಕರಾಗಿ ಶ್ರೀ ದತ್ತಾತ್ರಿ ಮೇತ್ರೆ ಹಾಗು 8 ಜನ ಮಧ್ಯವರ್ತಿಗಳಾದ 1) ಧನರಾಜ ತಂದೆ ಬಸವರಾಜ ಪಾಟೀಲ್ ಸಾ: ಜನವಾಡಾ, 2) ಅನೀಲಕುಮಾರ ತಂದೆ ಲಾಲಪ್ಪಾ ಸಾ: ಸಂಗಾವಿ, 3) ಪ್ರಕಾಶ ತಂದೆ ಗಣಪತರಾವ ಬಿರಾದಾರ ಸಾ: ಯರನಳ್ಳಿ (ದಿವಂಗತ), 4) ಉತ್ತಮಕುಮಾರ ತಂದೆ ವೀರಭದ್ರಪ್ಪಾ ಸಾ: ಸಿದ್ದಾಪುರ, 5) ತುಕಾರಾಮ ಹೊಸಮನಿ ಸಾ: ಹೊಸಮನಿ ಇಂಡಸ್ರ್ಟೀಸ್ ಜನವಾಡಾ, 6) ಸಂಗಮೇಶ ತಂದೆ ಕಾಶಿನಾಥ ಸಾ: ಯರನಳ್ಳಿ, 7) ಮಲ್ಲಪ್ಪಾ ಮಾಣೀಕಗೊಂಡ ಸಾ: ವಿಲಾಸಪುರ ಹಾಗೂ 8) ರಾಹುಲ್ ಕಲ್ಲೂರೆ ಗಣಪತರಾವ ಸಾ: ಭಾಲ್ಕಿ ಇವರೆಲ್ಲರ ಮೂಲಕ ಬ್ಯಾಂಕಿನ ವಿವಿಧ ಯೋಜನೆಗಳಡಿಯಲ್ಲಿ ಸಾಲ ಮಂಜೂರಾತಿ ಮಾಡಿ ಘಟಕಗಳ ಅನುಷ್ಠಾನ ಧೃಡಿಕರಿಸಿಕೊಳ್ಳದೇ ಸಾಲ ವಿತರಣೆ ಮಾಡಿ ಸಾಲದ ಭಾಗದ ಹಣವನ್ನು ಮಧ್ಯವರ್ತಿಗಳ ಉಳಿತಾಯ ಖಾತೆಗಳಿಗೆ ವರ್ಗಾವಣೆ ಮಾಡಿ ಬ್ಯಾಂಕಿನ ಸಾಲದ ಹಣವನ್ನು ಮಧ್ಯವರ್ತಿಗಳ ಜೊತೆಗೂಡಿ ಒಟ್ಟು 1,18,81,000/- ರೂಪಾಯಿ ದುರುಪಯೋಗ ಮಾಡಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 12-11-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 71/2020, ಕಲಂ. 279, 337, 338 ಐಪಿಸಿ ಜೋತೆ 187 ಐಎಂವಿ ಕಾಯ್ದೆ :-
ದಿನಾಂಕ 12-11-2020 ರಂದು ಫಿರ್ಯಾದಿ ಷಣ್ಮುಖ ತಂದೆ ವಿರಪ್ಪಾ ತಡಗೂರೆ ವಯ: 49 ವರ್ಷಮ ಜಾತಿ: ಲಿಂಗಾಯತ, ಸಾ: ಅಣದೂರ ಗ್ರಾಮ, ತಾ: & ಜಿ: ಬೀದರ ರವರು ತಮ್ಮೂರ ಅಶೋಕರೆಡ್ಡಿ ತಂದೆ ಲಚ್ಚಾರೆಡ್ಡಿ ಚಿದ್ರೆ, ಭಗವಂತ ತಂದೆ ಚೆನ್ನಪ್ಪಾ ಬಶೆಟ್ಟೆ ಇಬ್ಬರು ಅಣದೂರ ಗ್ರಾಮದ ತಮ್ಮ ಮನೆಯ ಕಡೆಯಿಂದ ಕೆರೆಯ ಕಡೆಗೆ ವಾಕಿಂಗ್ ಹೊಗುವಾಗ ಅಣದೂರ ಕೆರೆಯ ಹತ್ತಿರ ಹಿಂದಿನಿಂದ ಮೋಟಾರ ಸೈಕಲ್ ನಂ. ಕೆಎ-38/ಕ್ಯೂ-7218 ನೇದರ ಚಾಲಕನಾದ ಆರೋಪಿ ರಾಘವೆಂದ್ರ ತಂದೆ ರಾಣೋಜಿ ಸಾ: ಮಂಗಲಪೇಟ ಬೀದರ ಇತನು ತನ್ನ ಹೊಂಡಾ ಡ್ರೀಮ್ ಯುಗಾ ಮೋಟಾರ್ ಸೈಕಲನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ತನ್ನ ಮೋಟಾರ್ ಸೈಕಲ್ ಸ್ಥಳದಲ್ಲಿಯೇ ಬಿಟ್ಟು ಓಡಿಹೊಗಿತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಬಲಗಾಲು ಮೊಣಕಾಲು ಡಬ್ಬಿಯ ಕೆಳಗಡೆ ಭಾರಿ ರಕ್ತಗಾಯ ಮತ್ತು ಭಾರಿ ಗುಪ್ತಗಾಯವಾಗಿ ಕಾಲು ಮುರಿದಿರುತ್ತದೆ, ಎಡಗಾಲು ಮೋಣಕಾಲು ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯ ಜೋತೆ ವಾಕಿಂಗ್ ಮಾಡುತ್ತಿದ್ದ ಅಶೋಕರೆಡ್ಡಿ ಚಿದ್ರೆ, ಭಗವಂತ ಬಶೆಟ್ಟಿ ರವರು ಫಿರ್ಯಾದಯ ಮಗ ಸಂದೀಪ ಈತನಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಕೂಡಲೆ ಸಂದೀಪ ಇತನು ಬಂದು ಫಿರ್ಯಾದಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಬೀದರ ನಗರದ ಗುರುನಾನಕ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕುಶನೂರ ಪೊಲೀಸ ಠಾಣೆ ಅಪರಾಧ ಸಂ. 73/2020, ಕಲಂ. 379 ಐಪಿಸಿ :-
ದಿನಾಂಕ 28-10-2020 ರಂದು 2300 ಗಂಟೆಯಿಂದ ದಿನಾಂಕ 29-10-2020 ರಂದು 0600 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಶಿವಕಾಂತ ತಂದೆ ಬಸವರಾಜ ಬಾವಗೆ ವಯ: 22 ವರ್ಷ, ಜಾತಿ: ಲಿಂಗಾಯತ, ಸಾ: ಸಂಗಮ, ತಾ: ಕಮಲನಗರ ರವರ ಹೊಂಡಾ ಸಿ.ಬಿ. ಶೈನ್ ಮೋಟಾರ ಸೈಕಲ್ ನಂ. ಕೆಎ-38/ವಿ-6503 ಅ.ಕಿ 40,000/- ರೂ. ನೇದನ್ನು ಹೊಲದಲ್ಲಿ ತಗಡದ ಶೆಡ್ಡಿನ ಹೊರಗೆ ನಿಲ್ಲಿಸಿರುವುದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 12-11-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 78/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 12-11-2020 ರಂದು ಹಲಸಿ ತೂಗಾಂವ ಗ್ರಾಮದ ಊರ ಒಳಗೆ ಹೋಗುವ ಸಾರ್ವಜನಿಕ ರೋಡಿನ ಬದಿಯಲ್ಲಿ ಫುಲೆ ಚೌಕ ಹತ್ತಿರ ಕೆಲವು ಜನರು ಅಂದರ ಬಾಹರ ಅನ್ನುವ ನಸೀಬಿನ ಜೂಜಾಟ ಆಡುತ್ತಿದ್ದಾರೆಂದು ನಂದಕುಮಾರ ಪಿ.ಎಸ.ಐ ಮೇಹಕರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಲಸಿ ತೂಗಾಂವ ಗ್ರಾಮದಲ್ಲಿ ಹೋಗುವಾಗ ರೋಡಿಗೆ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಜ್ಯೋತಿಭಾ ಫುಲೆ ಚೌಕ ಹತ್ತಿರ ಸಾರ್ವಜನಿಕ ರೋಡಿನ ಬದಿಯಲ್ಲಿ ಆರೋಪಿತರಾದ 1) ಶರದ ತಂದೆ ವಿಠಲರಾವ ಗಾಜರೆ 35 ವರ್ಷ, ಜಾತಿ: ಮರಾಠಾ, ಸಾ: ತೂಗಾಂವ(ಹೆಚ್) ಹಾಗೂ ಇನ್ನೂ 6 ಜನ ಇವರೆಲ್ಲರೂ ಗುಂಪಾಗಿ ಕುಳಿತು ಅಂದರ ಬಾಹಾರ ಅನ್ನುವ ನಸೀಬಿನ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಅವರಿಂದ 52 ಇಸ್ಪಿಟ್ ಎಲೆಗಳು ಹಾಗೂ 7550/- ರೂ. ನಗದು ಹಣ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment