Police Bhavan Kalaburagi

Police Bhavan Kalaburagi

Saturday, November 21, 2020

BIDAR DISTRICT DAILY CRIME UPDATE 21-11-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 21-11-2020

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 103/2020, ಕಲಂ. 279, 337, 338 ಐಪಿಸಿ :-

ದಿನಾಂಕ 20-11-2020 ರಂದು ಫಿರ್ಯಾದಿ ನರೇಂದ್ರ ತಂದೆ ತುಕಾರಾಮ ನಿರೆಡ್ಡಿ : 19 ವರ್ಷ, ಜಾತಿ: ಕಬ್ಬಲೀಗ, ಸಾ: ಐನೋಳ್ಳಿ, ತಾ: ಚಿಂಚೋಳಿ, ಜಿ: ಕಲಬುರಗಿ ರವರಿಗೆ ಹುಮನಾಬಾದ ತಹಸೀಲ ಕಛೇರಿಯಲ್ಲಿ ಕೆಲಸ ಇರುವ ಕಾರಣ ನ್ನ ಗೆಳೆಯ ವಿನೋದಕುಮಾರ ಇಬ್ಬರೂ ಕೂಡಿ ಅವನ ಆಟೋ ನಂ. ಕೆಎ-32/ಸಿ-8294 ನೇದರಲ್ಲಿ ಹುಮನಾಬಾದ ತಹಸೀಲ ಕಛೇರಿಗೆ ಹೋಗಿ ಕೆಲಸ ಮುಗಿಸಿಕೊಂಡು ರಾ.ಹೆ ನಂ. 65 ಮುಖಾಂತರ ಮನ್ನಾಎಖೇಳ್ಳಿ ಬೈ ಪಾಸ್ ದಾಟಿ ಮುಂದೆ ಬೋರಾಳ ಬ್ರೀಜ್ ಹತ್ತಿರ ಬಂದಾಗ ಆರೋಪಿ ವಿನೋದಕುಮಾರ ತಂದೆ ರವಿಕುಮಾರ ಸಾ: ಐನೋಳ್ಳಿ ತಾ: ಚಿಂಚೋಳಿ ಇತನು ತನ್ನ ಆಟೋವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸುತ್ತಾ ತನ್ನ ಆಟೋ ಕಂಟ್ರೋಲ್ ಮಾಡದೇ ಒಮ್ಮೇಲೆ ರೋಡಿನ ಡಿವೈಡರಗೆ ಡಿಕ್ಕಿ ಮಾಡಿದ್ದರಿಂದ ಆಟೋ ಪಲ್ಟಿಯಾಗಿದ್ದು, ಆಟೋ ಪಲ್ಟಿಯಿಂದ ಫಿರ್ಯಾದಿಗೆ ಎಡಗೈ ಮುಂಗೈ ಹತ್ತಿರ ರಕ್ತಗಾಯ, ಎಡಗಡೆ ಭುಜಕ್ಕೆ ತರಚಿದ ರಕ್ತಗಾಯ, ಎಡಗಾಲ ಮೊಳಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ, ಆರೋಪಿ ವಿನೋದಕುಮಾರ ಇತನಿಗೆ ಎಡಗಡೆ ಕಣ್ಣಿನ ಮೇಲೆ ರಕ್ತಗಾಯ, ಎಡಗಣ್ಣಿನ ಹುಬ್ಬಿನ ಕೆಳಗೆ ತರಚಿದ ರಕ್ತಗಾಯ, ಎಡಗೈ ಮುಂಗೈಗೆ ತರಚಿದ ರಕ್ತಗಾಯ, ಬಲಗೈ ಮುಂಗೈಗೆ ತರಚಿದ ರಕ್ತಗಾಯ, ಎಡ ಭುಜಕ್ಕೆ ಭಾರಿ ಗುಪ್ತಗಾಯ, ತರಚಿದ ಗಾಯ, ಎಡಗಾಲ ಮೊಳಕಾಲಿಗೆ ರಕ್ತಗಾಯ, ಎಡಗಾಲ ಪಾದದ ಮೇಲೆ ರಕ್ತಗಾಯ, ಬಲಗಾಲ ಮೊಳಕಾಲಿಗೆ ತರಚಿದ ರಕ್ತಗಾಯ ಆಗಿರುತ್ತದೆ, ನಂತರ ಫಿರ್ಯಾದಿಯು ಕೂಡಲೇ ಗಾಯಗೊಂಡ ವಿನೋದಕುಮಾರ ಇತನಿಗೆ ಅಂಬುಲೇನ್ಸದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಮನ್ನಾಎಖೇಳ್ಳಿ ಸರ್ಕಾರಿ ಆಸ್ಪತ್ರೇಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 225/2020, ಕಲಂ. 457, 380 ಐಪಿಸಿ :-

ದಿನಾಂಕ 20-11-2020 ರಂದು ರಾತ್ರಿ 00:30 ಗಂಟೆಯಿಂದ 05:00 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚೀತ ಕಳ್ಳರು ಫಿರ್ಯಾದಿ ವಿರೇಶ ತಂದೆ ರಾಮಚಂದ್ರ ತೂಗಾಂವಕರ ಸಾ: ಲೇಕ್ಚರ ಕಾಲೋನಿ ಭಾಲ್ಕಿ ಡಿವಿಡಿ ಅಂಗಡಿಯ ಮೇಲಿನ ತಗಡ ಎತ್ತಿ ಅಂಗಡಿಯಲ್ಲಿ ಪ್ರವೇಶ ಮಾಡಿ ಅಂಗಡಿಯಲ್ಲಿಟ್ಟಿದ್ದ ನಗದು ಹಣ 8000/- ರೂ, ಮತ್ತಿತರೆ ಸಾಮಾನುಗಳು ಸೇರಿ ಒಟ್ಟು .ಕಿ 29,500/- ರೂ., ದಷ್ಟು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 227/2020, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 20-11-2020 ರಂದು ಭಾಲ್ಕಿ ಜೋಶಿ ನಗರದಲ್ಲಿರುವ ತಿಪ್ಪಣ್ಣ ಅಲಕುಂಟೆ ರವರ ಕಿರಾಣಾ ಅಂಗಡಿಯ ಮುಂದೆ ಮೂರು ಜನರು ತಮ್ಮ ಹತ್ತಿರ ಸಂಬಂಧಪಟ್ಟ ಇಲಾಖೆಯಿಂದ ಯಾವುದೆ ಅನುಮತಿ ಪತ್ರ ಇಲ್ಲದೆ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುವ ಕುರಿತು ತಮ್ಮ ವಶದಲ್ಲಿ ಇಟ್ಟುಕೊಂಡು ಕುಳಿತ್ತಿದ್ದಾರೆಂದು ಅಮರ ಕುಲಕರ್ಣಿ ಪೊಲೀಸ್ ಉಪನಿರೀಕ್ಷಕರು ಭಾಲ್ಕಿ ನಗರ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಜೋಶಿ ನಗರದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ತಿಪ್ಪಣ್ಣ ಅಲಕುಂಟೆ ರವರ ಕಿರಾಣಾ ಅಂಗಡಿಯ ಮುಂದೆ ಆರೋಪಿತರಾದ 1) ಸುನಿಲ ತಂದೆ ಹಣಮಂತ ದೋತೆ್ರ ಸಾ: ಘಾಟಬೋರಾಳ, ಸದ್ಯ: ಭೀಮ ನಗರ ಭಾಲ್ಕಿ, 2) ಶಾಮರಾಯ ತಂದೆ ತಿಪ್ಪಣ್ಣಾ ಅಲಕುಂಟೆ ಮತ್ತು 3) ಯಲ್ಲಪ್ಪಾ ರಾಮಲೆ ಇಬ್ಬರು ಸಾ: ಪಾಪವ್ವಾ ನಗರ ಭಾಲ್ಕಿ ಹಾಗೂ ಇಬ್ಬರು ಎಲ್ಲರು ಸಾ: ಭಾಲ್ಕಿ ಇವರೆಲ್ಲರೂ ತಮ್ಮ ವಶದಲ್ಲಿ ಒಂದು ಕಾಟನ ಇಟ್ಟುಕೊಂಡು ಕುಳಿತಿರುವಾಗ ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡುವಷ್ಟರಲ್ಲಿ ಆರೋಪಿ ನಂ. 2, 3 ಇವರಿಬ್ಬರು ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ, ನಂತರ ಸುನಿಲ ಇತನ ವಶದಲ್ಲಿದ್ದ ಕಾಟನ ಪರಿಶೀಲಿಸಿ ನೋಡಲು ಅದರಲ್ಲಿ 1) ಬ್ಯಾಗ್ ಪೈಪರ್ ಡಿಲಕ್ಸ್ ವಿಸ್ಕಿ 180 ಎಂ.ಎಲ್ ವುಳ್ಳ 20 ಪೇಪರ ಪಾಕೇಟಗಳು ಅ.ಕಿ 2124.60 ರೂ., 2) ಆಫಿಸರ್ ಚಾಯಿಸ್ 180 ಎಂ.ಎಲ್ ವುಳ್ಳ 10 ಪೇಪರ ಪಾಕೇಟಗಳು 1062.30 ರೂ., 3) ಓಲ್ಡ್ ಟಾವರ್ನ ವಿಸ್ಕಿ 180 ಎಂ.ಎಲ್ ವುಳ್ಳ 15 ಪೇಪರ ಪಾಕೇಟಗಳು 1301.25 ರೂ., 4) ಯು.ಎಸ್ ವಿಸ್ಕಿ 90 ಎಂ.ಎಲ್ ವುಳ್ಳ 13 ಪ್ಲಾಸ್ಟಿಕ ಬಾಟಲಿಗಳು ಅ.ಕಿ 456.69 ರೂ. ಹಾಗೂ 5) ಓರಿಜಿನಲ್ ಚಾಯಿಸ್ ವಿಸ್ಕಿ 90 ಎಂ.ಎಲ್ ವುಳ್ಳ 47 ಪೇಪರ ಪಾಕೇಟಗಳು 1651.11 ರೂ. ನೇದವುಗಳು ಸಿಕ್ಕಿದ್ದು, ನಂತರ ಆರೋಪಿ ಸುನಿಲ ಇತನಿಗೆ ಸದರಿ ಮಧ್ಯ ತನ್ನ ವಶದಲ್ಲಿ ಇಟ್ಟುಕೊಂಡ ಬಗ್ಗೆ ಸಂಬಂಧಪಟ್ಟ ಇಲಾಖೆಯವರಿಂದ ಪಡೆದ ಯಾವುದಾರು ಅನುಮತಿ ಪತ್ರ ಇದ್ದಲ್ಲಿ ಹಾಜರು ಪಡಿಸುವಂತೆ ತಿಳಿಸಿದಾಗ ತನ್ನ ಹತ್ತಿರ ಯಾವದೆ ಅನುಮತಿ ಪತ್ರ ಇರುವದಿಲ್ಲಾ ಅಂತಾ ತಿಳಿಸಿದ್ದರಿಂದ ಪಂಚರ ಸಮಕ್ಷಮ ಸದರಿ ಸರಾಯಿ ಅ.ಕಿ 6595/- ರೂ. ದಷ್ಟು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 74/2020, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 20-11-2020 ರಂದು ಜನವಾಡಾ ಗ್ರಾಮದ ಮೌನೇಶ್ವರ ಮಂದಿರದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗದಲ್ಲಿ ಕೆಲವು ಜನರು ಅಂದರ ಬಾ ಸ್ಪಿಟ್ ಜೂಜಾಟ ಆಡುತ್ತಿದ್ದಾರೆಂದು ಅಂತಾ ಶಿವರಾಜ ಪಾಟೀಲ್ ಪಿಎಸ್ಐ (ಕಾ&ಸು) ಜನವಾಡಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಆರೋಪಿತರಾದ 1) ಗಣೇಶ ತಂದೆ ಮಾದಪ್ಪಾ ಕಾಂಬಳೆ, ಸಾ: ಜನವಾಡಾ, 2) ಶಿವಕುಮಾರ ತಂದೆ ತುಕಾರಾಮ ತಾಕತದಾರ ಸಾ: ಜನವಾಡಾ, 3) ಸಿದ್ರಾಮ ತಂದೆ ಭಿಮಪ್ಪಾ ಕ್ರೀಶ್ಚಿಯನ್ ಸಾ: ಜನವಾಡಾ, 4) ಗುಂಡಾರೆಡ್ಡಿ ತಂದೆ ಹಣಮರೆಡ್ಡಿ ಸಾ: ದದ್ದಾಪುರ, 5) ಸಂಜುಕುಮಾರ ತಂದೆ ಪುಂಡಲೀಕ ಸಾಗರ, ಸಾ: ಜನವಾಡಾ ಇವರೆಲ್ಲರ ಮೇಲೆ ದಾಳಿ ಮಾಡಿ ಅವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ತೋಡಗಿಸಿದ ಟ್ಟು ನಗದು ಹಣ 6980/- ರೂ ಹಾಗು 52 ಇಸ್ಪೀಟ್ ಎಲೆಗಳು ಪಂಚಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

No comments: