Police Bhavan Kalaburagi

Police Bhavan Kalaburagi

Monday, November 23, 2020

BIDAR DISTRICT DAILY CRIME UPDATE 23-11-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 23-11-2020

 

ಬೀದರ ನೂತನ ನಗರ ಠಾಣೆ ಅಪರಾಧ ಸಂ. 131/2020, ಕಲಂ. ಮಹಿಳೆ ಕಾಣೆ :-

ಫಿರ್ಯಾದಿ ಡಾ|| ಕೃಷ್ಣಾ ರೆಡ್ಡಿ ತಂದೆ ಬಕ್ಕಾ ರೆಡ್ಡಿ ಲಕ್ಕಾ ವಯ: 46 ವರ್ಷ, ಜಾತಿ: ರೆಡ್ಡಿ, ಸಾ: ಮನೆ ನಂ. ಪ್ಲಾಟ್ ನಂ. 301 ರೆಡ್ಡಿ ಅಪಾರ್ಟಮೇಂಟ್ ಗುರುನಗರ ಬೀದರ ರವರ ಹೆಂಡತಿ ಮತ್ತು ಮಗಳು ಕ್ರಿಷಿತಾ ಇಬ್ಬರೂ ದಿನಾಂಕ 21-11-2020 ರಂದು 2230 ಗಂಟೆಯಿಂದ ದಿನಾಂಕ 22-11-2020 0800 ಗಂಟೆ ಮದ್ಯದ ಅವಧಿಯಲ್ಲಿ ಮನೆಯಿಂದ ಕಾಣೆಯಾಗಿರುತ್ತಾರೆ, ಕಾಣೆಯಾದ ಹೆಂಡತಿ ವಿವರ 1) ಹೆಸರು: ಮಾಧವಿ, 2) ಗಂಡ ಹೆಸರು: ಕೃಷ್ಣಾ ರೆಡ್ಡಿ ಲಕ್ಕಾ, ವಯ: 37 ವರ್ಷ, 3) ಎತ್ತರ: 5-5 ಫೀಟ, 4) ಚಹರೆ ಪಟ್ಟಿ: ತೆಳ್ಳನೆಯ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ, ಅಗಲ ಹಣೆ, ನೇರವಾದ ಮೂಗು, 5) ಧರಿಸಿದ ಬಟ್ಟೆ: ಕಪ್ಪು ಬಣ್ಣದ ನೈಟಿ & 6) ಮಾತನಾಡುವ ಭಾಷೆ: ಕನ್ನಡ, ಮರಾಠಿ, ಹಿಂದಿ ಭಾಷೆ ಮಾತನಾಡುತ್ತಾರೆ ಹಾಗೂ ಕಾಣೆಯಾದ ಮಗಳ ವಿವರ 1) ಹೆಸರು: ಕ್ರಿಷಿತಾ, 2) ತಂದೆ ಹೆಸರು: ಕೃಷ್ಣಾ ರೆಡ್ಡಿ ಲಕ್ಕಾ, 3) ವಯ: 13 ವರ್ಷ, 4) ಎತ್ತರ: 5,4 ಫೀಟ, 5) ಚಹರೆ ಪಟ್ಟಿ: ತೆಳ್ಳನೆಯ ಮೈಕಟ್ಟು, ಬಿಳಿ ಮೈಬಣ್ಣ, ಉದ್ದನೆಯ ಮುಖ, ಅಗಲ ಹಣೆ, ನೇರವಾದ ಮೂಗು, 6) ಧರಿಸಿದ ಬಟ್ಟೆಗಳು: ಪಿಂಕ ಕಲರ್ ಜಿನ್ಸ ಪ್ಯಾಂಟ್ ಮತ್ತು ಟೀಶರ್ಟ & 7) ಮಾತನಾಡುವ ಭಾಷೆ: ಕನ್ನಡ, ಮರಾಠಿ, ಹಿಂದಿ, ಇಂಗ್ಲಿಷ ಭಾಷೆ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶಧ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 58/2020, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 22-11-2020 ರಂದು ಬೇಮಳಖೇಡಾ ಶಿವಾರದ ಮಾಲಿ ಪಾಟೀಲರವರ ಹಳ್ಳದ ಕಡೆಗೆ ಹೋಗುವ  ರೋಡಿನ ಮೇಲೆ ಕೆಲವು ಜನರು ದುಂಡಾಗಿ  ಕುಳಿತುಕೊಂಡು ಹಣ ಹಚ್ಚಿ ಪಣ ತೊಟ್ಟು ನಸಿಬಿನ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆಂದು ಗಂಗಮ್ಮಾ ಪಿ.ಎಸ್.ಐ ಬೇಮಳಖೇಡಾ ಪೊಲೀಸ್ ಠಾಣೆ ರವರಿಗೆ ಖಚಿತ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬೇಮಳಖೇಡಾ ಗ್ರಾಮದ ಕಾಶಿನಾಥ ಗೊಲ್ಲಾ ರವರ ಹೊಲದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತರಾದ 1) ಹಣಮಂತರೆಡ್ಡಿ ತಂದೆ ತುಕ್ಕಾರೆಡ್ಡಿ ಮದರಗಿ ವಯ: 60 ವರ್ಷ, ಜಾತಿ: ರೆಡ್ಡಿ, ಹಾಗೂ ಇನ್ನೂ 5 ಜನ ಎಲ್ಲರೂ ಸಾ: ಬೇಮಳಖೇಡಾ ಇವರೆಲ್ಲರೂ ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ನಸಿಬಿನ ಇಸ್ಪಿಟ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಪಿಎಸ್ಐ ರವರು ಸಿಬ್ಬಂದಿಯವರ ಸಹಾಯದಿಂದ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 3850/-  ರೂ., ಹಾಗೂ 52 ಇಸ್ಪಿಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತಿನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 97/2020, ಕಲಂ. 279, 338 ಐಪಿಸಿ :-

ದಿನಾಂಕ 22-11-2020 ರಂದು ಫಿರ್ಯಾದಿ ಇಸ್ಮಾಯಿಲ ತಂದೆ ಖಾಸಿಮಸಾಬ ಪಿಂಜಾರೆ ವಯ: 29 ವರ್ಷ, ಸಾ: ಯರಂಡಗಿ ಗ್ರಾಮ ರವರು ಹೊಲಕ್ಕೆ ಕೆಲಸಕ್ಕೆ ಹೋಗಿ ಮರಳಿ ಮನೆಗೆ ಬಸವಕಲ್ಯಾಣ ಮುಡಬಿ ರೋಡಿನ ಪಕ್ಕದಿಂದ ನಡೆದುಕೊಂಡು ಹೋಗುವಾಗ ತಮ್ಮೂರಿನ ಬಾಬುರಾವ ಪೊಲೀಸ ಪಾಟೀಲ ರವರ ಹೋಲದ ಹತ್ತಿರ ಹೋದಾಗ ಹಿಂದಿನಿಂದ ಅಂದರೆ ಬಸವಕಲ್ಯಾಣ ಕಡಟೆಯಿಂದ ಮೋಟಾರ ಸೈಕಲ ನಂ. ಕೆಎ-39/ಜೆ-8883 ನೇದರ ಚಾಲಕನಾಧ ಆರೋಪಿ ಸೂರ್ಯಕಾಂತ ತಂದೆ ವಿಶ್ವನಾಥ ಗುಜ್ಜೆ ಸಾ: ಯರಂಡಗಿ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿದ್ದು, ಸದರಿ ಡಿಕ್ಕಿಯಿಂದ ಫಿರ್ಯಾದಿಗೆ ಎಡಗೈ ಮುಂಗೈಗೆ ಭಾರಿ ಗುಪ್ತಗಾಯ, ಬಲಗಾಲ ಮೊಣಕಾಲಿಗೆ ಗುಪ್ತಗಾಯ, ಬಲಗಾಲ ಹೆಬ್ಬರಳಿಗೆ ತರಚಿದ ರಕ್ತಗಾಯಗಳು ಆಗಿರುತ್ತವೆ, ನಂತರ ಫಿರ್ಯಾದಿಯ ತಮ್ಮ ಸಾಜೀದ ತಂದೆ ಖಾಸಿಮಸಾಬ ಇತನು ಸ್ಥಳಕ್ಕೆ ಬಂದು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 145/2020, ಕಲಂ. 279, 338 ಐಪಿಸಿ :-

ದಿನಾಂಕ 22-11-2020 ರಂದು ಫಿರ್ಯಾದಿ ಸತೀಶ ತಂದೆ ಮಾಣಿಕರಾವ ಕಮಠಾಣೆ ವಯ: 34 ವರ್ಷ, ಜಾತಿ: ಲಿಂಗಾಯತ, ಸಾ: ಹಜನಾಳ ರವರ ಭಾವನಾದ ರಾಚಪ್ಪಾ ತಂದೆ ಮಾರುತೇಪ್ಪಾ ಖಾಜಾಪುರೆ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಹಜನಾಳ ರವರು ಖಾನಾಪೂರ ಅಂಗಡಿಗೆ ಹೋಗಿ ಬರಲು ತಮ್ಮ ಗ್ರಾಮದ ನಿಜಾಂ ಪಟೇಲ ರವರ ಮೋಟಾರ ಸೈಕಲ ನಂ. ಕೆಎ-38/ಎಕ್ಸ-0017 ನೇದನ್ನು ತೆಗೆದುಕೊಂಡು ಹೊಗಿ ಮರಳಿ ಹಜನಾಳ ಗ್ರಾಮಕ್ಕೆ ಬರುವಾಗ ಸದರಿ ಮೋಟಾರ ಸೈಕಲವನ್ನು ಅತಿವೇಗ ಹಾಗು ನಿಸ್ಕಾಳಜಿಯಿಂದ ಹಾಲೆಪುರ್ಗಿ-ಜೈನಾಪೂರ ರೋಡಿಗೆ ಜೈನಾಪೂರ ಕ್ರಾಸ ಸಮೀಪ ರೋಡಿನ ಮೇಲೆ ಸ್ಕಿಡ ಮಾಡಿ ಮೊಟಾರ ಸೈಕಲ ಸಮೇತ ಬಿದ್ದಿರುತ್ತಾನೆ, ಇದರಿಂದ ಆತನ ಗಟಾಯಿಗೆ ಭಾರಿ ರಕ್ತಗಾಯ, ಕಪಾಳಕ್ಕೆ ಗುಪ್ತಗಾಯ ಹಾಗು ಎಡಗಾಲ ಬೆರಳುಗಳಿಗೆ ತರಚಿದ ರಕ್ತಗಾಯ, ಅಲ್ಲಲ್ಲಿ ತರಚಿದ ಗಾಯವಾಗಿದ್ದು ಇರುತ್ತದೆ, ನಂತರ 108 ಅಂಬುಲೆನ್ಸದಲ್ಲಿ ರಾಚಪ್ಪಾ ಇವರಿಗೆ ಚಿಕಿತ್ಸೆ ಕುರಿತು ಬೀದರನ ಶ್ರೀ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

 

ಖಟಕಚಿಂಚೊಳಿ ಪೊಲೀಸ್ ಠಾಣೆ ಅಪರಾಧ ಸಂ. 86/2020, ಕಲಂ. 323, 324, 498(), 504, 506 ಜೊತೆ 34 ಐಪಿಸಿ :-

ಫಿರ್ಯಾದಿ ಸುವರ್ಣಾ ಗಂಡ ಮಹಾದೇವ ಸಿಂದೆ ವಯ: 30 ವರ್ಷ, ಜಾತಿ: ಮರಾಠಾ, ಸಾ: ಗೋರ ಚಿಂಚೋಳಿ ಗ್ರಾಮ, ತಾ: ಭಾಲ್ಕಿ ರವರಿಗೆ ಸುಮಾರು 10 ವರ್ಷಗಳ ಹಿಂದೆ ಗೋರ ಚಿಂಚೋಳಿ ಗ್ರಾಮದ ಪ್ರಭುರಾವ ಸಿಂದೆ ರವರ ಮಗನಾದ ಮಹಾದೇವ ಸಿಂದೆ ರವರ ಜೊತೆ ಹಿಂದೂ ಧರ್ಮದ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿರುತ್ತಾರೆ, ಸುಮಾರು 5-6 ವರ್ಷಗಳ ಕಾಲ ಗಂಡ ಮಹಾದೇವ ರವರೊಂದಿಗೆ ಅನ್ಯೋನವಾಗಿದ್ದು, ತದನಂತರ 4 ವರ್ಷಗಳಿಂದ ಆರೋಪಿತರಾದ ಗಂಡ ಮಹಾದೇವ ತಂದೆ ಪ್ರಭುರಾವ ಸಿಂದೆ, ಅತ್ತೆ ಉತ್ತಮಬಾಯಿ ಗಂಡ ಪ್ರಭುರಾವ ಇಬ್ಬರು ಸಾ: ಗೋರಚಿಂಚೋಳಿ ಇವರಿಬ್ಬರು ಫಿರ್ಯಾದಿಗೆ ಆಗಾಗ ವಿನಾಃ ಕಾರಣ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಹೊಡೆ-ಬಡೆ ಮನಾಡುತ್ತಾ, ನಿನಗೆ ಅಡುಗೆ ಮಾಡಲು ಬರುವುದಿಲ್ಲಾ ಮತ್ತು ಯಾವುದೆ ಕೆಲಸ ಸರಿಯಾಗಿ ಮಾಡಲು ಬುರುವುದಿಲ್ಲಾ ಅಂತಾ ಅವಾಚ್ಯಾವಾಗಿ ಬೈದು ನೀನು ನಮ್ಮ ಮನೆಯಲ್ಲಿ ಇರಬೆಡ ನಿನ್ನ ತವರು ಮನೆಗೆ ಹೋಗು ನನ್ನ ಮಗನಿಗೆ ಬೇರೊಂದು ಲಗ್ನ ಮಾಡುತ್ತೆವೆ ಅಂತ ಕಿರುಕುಳ ನೀಡುತ್ತಿದ್ದರಿಂದ ಫಿರ್ಯಾದಿಯು ಸುಮಾರು 7-8 ತಿಂಗಳುಗಳಿಂದ ತಮ್ಮ ಓಣಿಯಲ್ಲಿಯೇ ಬಾಡಿಗೆ ಮನೆಯಲ್ಲಿ ಗಂಡ ಮಹಾದೇವ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದು ಮತ್ತು ನಾದನಿ ಸಾರಿಕಾ ಗಂಡ ಶಿವಾಜಿ ಇವಳು ದಿಪಾವಳಿ ಹಬ್ಬಕ್ಕೆ ಬಂದಿದ್ದು ಇವಳು ಕೂಡಾ ಅತ್ತೆ ಜೊತೆ ಸೇರಿ ಬಾಡಿಗೆ ಮನೆಗೆ ಬಂದು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿರುತ್ತಾಳೆ, ಹೀಗಿರುವಾಗ ದಿನಾಂಕ 21-11-2020 ರಂದು ಅತ್ತೆ ಹಾಗೂ ನಾದನಿ ಇಬ್ಬರು ಫಿರ್ಯಾದಿಯು ವಾಸವಾಗಿರುವ ಬಾಡಿಗೆ ಮನೆಗೆ ಬಂದು ಫಿರ್ಯಾದಿಯ ತಲೆಯ ಕೂದಲು ಹಿಡಿದು ಎಳೆದಾಡಿ ನೂಕಿರುತ್ತಾರೆ, ಕೈಯಿಂದ ಬೆನ್ನಲ್ಲಿ ಹೊಡೆದಿರುತ್ತಾರೆ, ನಂತರ ದಿನಾಂಕ 22-11-2020 ರಂದು ಆರೋಪಿತರಾದ ಗಂಡ, ನಾದನಿ ಮತ್ತು ಅತ್ತೆ ಇವರೆಲ್ಲರು ಬಾಡಿಗೆ ಮನೆಗೆ ಬಂದು ಗಂಡ ಅವಾಚ್ಯಾವಾಗಿ ಬೈದು ತಲೆಯ ಕೂದಲು ಹಿಡಿದು ಕೈಯಿಂದ ಮುಖದ ಮೇಲೆ ಹೊಡೆದಿರುತ್ತಾನೆ, ನಾದನಿ ಕಾಲಿನಿಂದ ಹೊಟ್ಟೆಯಲ್ಲಿ ಒದ್ದಿರುತ್ತಾಳೆ, ಅತ್ತೆ ಅವಾಚ್ಯಾವಾಗಿ ಬೈದು ಜೀವದ ಬೆದರಿಕೆ ಹಾಕಿ ತನ್ನ ಕೈಯಲ್ಲಿದ್ದ ಬಡಿಗೆಯಿಂದ ಬೆನ್ನ ಮೇಲೆ ಹೊಡೆದಿರುತ್ತಾಳೆ, ಈ ವೇಳೆಯಲ್ಲಿ ಅಲ್ಲೆ ಇದ್ದ ಓಣಿಯ ಬಸವರಾಜ ಗೋಳಶೆಟ್ಟೆ, ವಿನಾಯಕ ಸಿಂದೆ, ಪಂಡಿತ ಬೋರಳೆ ರವರುಗಳು ಜಗಳ ನೊಡಿ ಬಿಡಿಸಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: