ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ: 12-12-2020
ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ
ಸಂಖ್ಯೆ 47/2020 ಕಲಂ
279, 337, 304 (ಎ) ಐಪಿಸಿ
ಜೊತೆ 187 ಐಎಮ್.ವಿ.
ಕಾಯ್ದೆ
:-
ದಿನಾಂಕ:
11-12-2020 ರಂದು ಫಿರ್ಯಾದಿ ಗೌಸೋದ್ದಿನ್
@ ಫಯಾಜ್ ತಂದೆ ನಜೀಮೋದ್ದಿನ್@ಮುನ್ನಾಪಾಶಾ
ವಯ||20 ವರ್ಷ ಜಾ||ಮುಸ್ಲಿಂ
ಉ||ಕೂಲಿ ಸಾ||
ಮನೆ
ನಂ 17-02-102 ಮೈಲೂರ ರೋಡ ಗಾಂಧಿ ನಗರ ಕಾಲೋನಿ ಬೀದರ ರವರು
ನೀಡಿದ ಫಿರ್ಯಾದಿಯ ಸಾರಾಂಶವೆನೆಂದರೆ ದಿನಾಂಕ:11-12-2020 ರಂದು
ಬರೂರು ಗ್ರಾಮದಲ್ಲಿ ಮಾವನ ಮಗನಾದ ಮೋಯೀಜ್ ಈತನ ಮದುವೆ ಇದ್ದ ಕಾರಣ ಮನೆಯಿಂದ ಮೋ.ಸೈ.ಹೀರೋ
ಸ್ಪ್ಲೆಂಡರ್ ನಂ ಕೆಎ-38-ಎಲ್-5696
ನೇದರ
ಮೇಲೆ ಫಿರ್ಯಾದಿ ಮತ್ತು ತಮ್ಮನಾದ ರಿಯಾಜೋದ್ದಿನ ಮತ್ತು
ನಮ್ಮ ಸಂಬಂಧಿಯಾದ ಸರ್ಫರಾಜ್ ಅಲಿ ಮೂವರು ಸೇರಿಕೊಂಡು ಮನೆಯಿಂದ
11:15 ಗಂಟೆಗೆ ಬಿಟ್ಟು ಮೋ.ಸೈ
ನಾನು ಚಲಾಯಿಸುತ್ತಿದ್ದು ಹಿಂದೆ ಸರ್ಫರಾಜ್ ಮತ್ತ ಅವನ ಹಿಂದೆ ರಿಯಾಜೋದ್ದಿನ್ ಕುಳಿತುಕೊಂಡು
ಬರೂರು ಗ್ರಾಮಕ್ಕೆ ಹೋಗುವಾಗ 12:00 ಗಂಟೆಯ
ಸುಮಾರಿಗೆ ಮೋ.ಸೈ
ನಾಗೂರಾ ಗ್ರಾಮದ ಹತ್ತಿರ ತಿರುವಿನಲ್ಲಿ ಬಂದಾಗ ಎದುರಿನಿಂದ ಒಂದು ಟ್ರ್ಯಾಕ್ಟರ್ ಚಾಲಕನು ತನ್ನ ವಾಹನವನ್ನು
ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋ.ಸೈ
ನಂ. ಕೆ.ಎ-38-ಎಲ್-5696
ನೇದಕ್ಕೆ
ಡಿಕ್ಕಿ ಹೊಡೆದ ಪರಿಣಾಮ 3 ಜನರು ಕೆಳಗೆ ಬಿದ್ದಿದ್ದು
ಎಡ
ಮೊಳಕಾಲಿಗೆ ತರಚಿದ ಗಾಯವಾಗಿರುತ್ತದೆ. ಮತ್ತು
ಎಡ ಮುಂಗಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ. ಮತ್ತು
ಸರ್ಫರಾಜ್ ಇವನಿಗೆ ನೋಡಲಾಗಿ ಎಡ ಮುಂಗೈ ಹತ್ತಿರ ಮತ್ತು ಎಡ ಮೊಳಕಾಲು ಹತ್ತಿರ ತರಚಿದ ರಕ್ತಗಾಯವಾಗಿದ್ದು,
ಮತ್ತು
ಹೊಟ್ಟೆಗೆ ಗುಪ್ತಗಾಯ ವಾಗಿರುತ್ತದೆ. ಮತ್ತು
ನಮ್ಮ ತಮ್ಮ ರಿಯಾಜೋದ್ದಿನ್ ಈತನಿಗೆ ನೋಡಲಾಗಿ ಆತನಿಗೆ ಬಲ ತೊಡೆಯ ಹತ್ತಿರ ಬಾರಿ ರಕ್ತಗಾಯ ವಾಗಿದ್ದು
ಮತ್ತು ಕಾಲು ಮುರಿದಂತೆ ಕಾಣುತ್ತಿದ್ದು ಮೂಗಿನಿಂದ ಭಾರಿ ರಕ್ತ ಸೋರುತ್ತಿದ್ದು,
ಅವನು
ಮಾತನಾಡದ ಸ್ಥಿತಿಯಲ್ಲಿ ಇರಲಿಲ್ಲಾ 108 ಅಂಬುಲೆನ್ಸ್ ಮೂಲಕ ಬೀದರ ಸರಕಾರಿ ಆಸ್ಪತ್ರೆಗೆ ಸೇರೆಸಿದಾಗ ವೈದ್ಯರು ರಿಯಾಜೋದ್ದಿನ್
ಈತನಿಗೆ ಪರೀಕ್ಷೀಸಿ ಮದ್ಯಹ್ನ
13:20 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ.
ಅಂತಾ ನೀಡಿದ ದೂರಿನ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್
ಠಾಣೆ ಅಪರಾಧ ಸಂಖ್ಯೆ 234/2020 ಕಲಂ
457, 380 ಐಪಿಸಿ :-
ದಿನಾಂಕ 11/12/2020
ರಂದು 12:30 ಗಂಟೆಗೆ ಫಿಯರ್ಾದಿ
ಶ್ರೀಮತಿ ಸವಿತಾ ಗಂಡ ಸಂಗಮೇಶ ಪೌಶೆಟ್ಟೆ ವಯ 37
ವರ್ಷ ಜಾತಿ ಲಿಂಗಾಯತ ಸಾ: ಡೊಣಗಾಪೂರ ಸದ್ಯ
ಲೇಕ್ಚರರ ಕಾಲೋನಿ ಭಾಲ್ಕಿ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ ಇವರ ಅಕ್ಕ
ಬಾಡಿಗೆ ಮನೆಯಲ್ಲಿರುವ ಮನೆಯ ಬಾಗಿಲದ ಕೀಲಿ ಮುರಿದಿದ್ದು ಸಂದುಕಿನಲ್ಲಿ ಇಟ್ಟಿದ್ದ 5
ಗ್ರಾಂ ಬಂಗಾರದ ಝುಮಕಾ ಅ/ಕಿ 25000
ರೂಪಾಯಿ, 5 ಗ್ರಾಂ ಬಂಗಾರದ ಗುಂಡಿನ
ಮಣಿಗಳು ಅ/ಕಿ 25000 ರೂಪಾಯಿ,
18 ತೋಲೆ ಬೇಳ್ಳಿಯ ಚೈನಗಳು ಅ/ಕಿ 7200
ರೂಪಾಯಿ ಹೀಗೆ ಒಟ್ಟು ಎಲ್ಲಾ ಸೆರಿ 57200
ರೂಪಾಯಿ ದಷ್ಟು ದಿನಾಂಕ 10/12/2020
ರಂದು ರಾತ್ರಿ ಸಮಯ ಯಾರೋ ಅಪರಿಚಿತ ಕಳ್ಳರು ಮನೆಗೆ ಕಿಲಿ ಇರುವದನ್ನು ನೋಡಿ ಕೀಲಿ ಮುರಿದು
ಮನೆಯಲ್ಲಿ ಹೋಗಿ ಸಂದುಕಿನಲ್ಲಿ ಇಟ್ಟಿದ್ದ ಬಂಗಾರ ಮತ್ತು ಬೆಳ್ಳಿಯ ಓಡವೆಗಳು ಕಳವು ಮಾಡಿಕೊಂಡು
ಹೋಗಿದ್ದು ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೋಳ್ಳಲಾಗಿದೆ.
No comments:
Post a Comment