ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 15-12-2020
ನೂತನ ನಗರ ಪೊಲೀಸ್ ಠಾಣೆ ಬೀದರ ಅಪರಾಧ ಸಂ. 139/2020, ಕಲಂ. 143, 147, 341, 427 ಜೊತೆ 149 ಐಪಿಸಿ ಮತ್ತು ಕಲಂ. 3(2) (ಇ) ಆಪ್ ದಿ ಪ್ರೆವೆನಷನ್ ಆಪ್ ಡ್ಯಾಮೆಜ್ ಟು ಪಬ್ಲಿಕ್ ಪ್ರಾಪರ್ಟಿ ಕಾಯ್ದೆ 1984 :-
ಸುಮಾರು 4 ದಿವಸಗಳಿಂದ ಕರ್ನಾಟಕ ರಾಜ್ಯ ಸರಕಾರದಲ್ಲಿ ಸಾರಿಗೆ ಸಂಸ್ಥೆಯಿಂದ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ಸಾರಿಗೆ ಸಂಸ್ಥೆಯ ಎಲ್ಲಾ ನೌಕರರು ಮುಷ್ಕರ ಹಮ್ಮಿಕೊಂಡಿದ್ದು ಇರುತ್ತದೆ, ನಂತರ ಸಾಯಂಕಾಲ ಸಾರಿಗೆ ಸಂಸ್ಥೆಯ ಪದಾದಿಕಾರಿಗಳು ಮತ್ತು ಸರಕಾರದ ಮಧ್ಯ ಒಪ್ಪಂದ ಆಗಿರುವುದರಿಂದ ಮುಷ್ಕರ ಹಿಂಪಡೆದಿರುವುದಾಗಿ ತಿಳಿಸಿರುವ ವಿಷಯ ಫಿರ್ಯಾದಿ ಸಿದ್ರಾಮಪ್ಪ ತಂದೆ ಖೊಬ್ರೆಪ್ಪ ಆಲೂರೆ ವಯ: 37 ವರ್ಷ, ಜಾತಿ: ಲಿಂಗಾಯತ, ಉ: ಕೆ.ಎಸ್.ಆರ್.ಟಿ.ಸಿ ಯಲ್ಲಿ ಚಾಲಕ/ನಿರ್ವಾಹಕ ಕಲಬುರ್ಗಿ ಘಟಕ-1, ಸಾ: ತಂಬಾಕವಾಡಿ, ತಾ: ಆಳಂದ ರವರಿಗೆ ಗೊತ್ತಾಗಿರುತ್ತದೆ, ಹೀಗಿರುವಲ್ಲಿ ದಿನಾಂಕ 14-12-2020 ರಂದು 0600 ಗಂಟೆಗೆ ದಿನನಿತ್ಯದಂತೆ ಫಿರ್ಯಾದಿಯವರು ತಮ್ಮ ಡಿಪೊದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಾಗ ಡಿಪೊ ಮ್ಯಾನೇಜರವರು ಫಿರ್ಯಾದಿಗೆ ಬಸ್ ನಂ. ಕೆಎ-32/ಎಫ್-2309 ನೇದ್ದರ ಮೇಲೆ ಚಾಲಕ ಮತ್ತು ನಿರ್ವಾಕನಾಗಿ ಬಸವಂತ ಬ್ಯಾಚ್ ನಂ. 3308 ರವರಿಗೆ ಕಲಬುರ್ಗಿಯಿಂದ ಬೀದರ ಹೋಗಲು ಕರ್ತವ್ಯಕ್ಕೆ ನೇಮಕ ಮಾಡಿ ಆದೇಶ ಮಾಡಿದ ಮೇರೆಗೆ ಇಬ್ಬರು ಸದರಿ ಬಸ್ಸಿನಲ್ಲಿ ಕಲಬುರ್ಗಿ ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಕೂಡಿಸಿಕೊಂಡು ಹುಮನಾಬಾದ ಹಳ್ಳಿಖೇಡ [ಬಿ] ಮಾರ್ಗವಾಗಿ ಬೀದರಗೆ ಬರುವಾಗ ಬೀದರ ನಗರದ ಬರಿದಶಾಹಿ ಗಾರ್ಡನ್ ಮುಂಭಾಗದಿಂದ ಬರುತ್ತಿರುವಾಗ ಗಾರ್ಡನ ಒಳಗಡೆಯಿಂದ ಅಪರಿಚಿತ 4-5 ಜನರು ಸಮಾನ ಉದ್ದೇಶದಿಂದ ಅಕ್ರಮ ಕೂಟ ರಚಿಸಿಕೊಂಡು ತಮ್ಮ - ತಮ್ಮ ಕೈಯಲ್ಲಿ ಕಲ್ಲು ಹಿಡಿದುಕೊಂಡು ಬಂದು ಬಸ್ಸಿನ ಮುಂದೆ ಹೋಗದಂತೆ ತಡೆದು ಮುಷ್ಕರ ಇದೆ ಏಕೆ ಕರ್ತವ್ಯಕ್ಕೆ ಬಂದಿದ್ದಿರಿ ಅಂತ ಫಿರ್ಯಾದಿಯವರೊಂದಿಗೆ ವಾದ-ವಿವಾದ ಮಾಡಿ ನಂತರ ಕಲ್ಲು ತೆಗೆದುಕೊಂಡು ಸಾರ್ವಜನಿಕ ಆಸ್ತಿಯಾಗಿರುವ ಸರಕಾರಿ ಬಸ್ಸಿಗೆ ಕಲ್ಲಿನಿಂದ ಬಸ್ಸಿನ ಮುಂಭಾಗದ ಕನ್ನಡಿ ಮತ್ತು ಹಿಂಭಾಗದ ಕನ್ನಡಿಗೆ ಹೊಡೆದು ಒಡೆದು ಹಾಕಿ ಅಂದಾಜು 30,000/- ರೂ. ಹಾನಿ ಮಾಡಿ ಓಡಿ ಹೋಗಿರುತ್ತಾರೆ, ನಂತರ ಫಿರ್ಯಾದಿಯು ತಮ್ಮ ಬಸ್ಸಿನ ಸಮೇತ ಬೀದರ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ವಿಚಾರಿಸಲಾಗಿ ಬಸ್ಸಿಗೆ ತಡೆದು ಕಲ್ಲಿನಿಂದ ಹೊಡೆದು ಹಾನಿ ಮಾಡಿದವರ ಹೆಸರುಗಳು 1] ಸಂಜಯ ತಂದೆ ರಾಮಚಂದರ ಠಾಕೂರ ಬೀದರ ಘಟಕ-2 ನೇದ್ದರಲ್ಲಿ ಚಾಲಕ, 2] ಅಶೋಕ ಚಾಲಕ, 3] ಜಗನ್ನಾಥ ಚಾ/ನಿ ಡಿಪೊ-1, 4] ಶಾಂತು ಚಾ/ನಿ ಡಿಪೋ-1 ಹಾಗೂ 5] ರಾಹುಲ ಕಂಟಿ ಚಾ/ನಿ ಬೀದರ ಘಟಕ-2 ಅಂತ ಗೊತ್ತಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹಳ್ಳಿಖೇಡ(ಬಿ) ಪೊಲೀಸ ಠಾಣೆ ಅಪರಾಧ ಸಂ. 152/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 14-12-2020 ರಂದು ಹಳ್ಳಿಖೇಡ (ಬಿ) ಪೊಲೀಸ ಠಾಣೆಯ ವ್ಯಾಪ್ತಿಯ ದುಬಲಗುಂಡಿ ಗ್ರಾಮದ ಶಿವಾರ ಶಿವಪ್ಪಾ ಚೀಲಾ ರವರ ಹೊಲದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗಾದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ 3 ಎಲೆಯ ನಸೀಬಿನ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ ನಿಂಗಪ್ಪಾ ಮಣ್ಣೂರ ಪಿ.ಎಸ್.ಐ ಹಳ್ಳಿಖೇಡ(ಬಿ) ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ದುಬಲಗುಂಡಿ ಗ್ರಾಮದ ಶಿವಪ್ಪಾ ಚೀಲಾ ರವರ ಹೊಲದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಶಿವಪ್ಪಾ ಚೀಲಾ ರವರ ಹೊಲದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗಾದಲ್ಲಿ ಆರೋಪಿತರಾದ 1) ವೀರಪ್ಪಾ ತಂದೆ ಬಂಡೇಪ್ಪಾ ಮುಸ್ತಾರಿ ವಯ: 61 ವರ್ಷ, ಜಾತಿ: ಲಿಂಗಾಯತ, ಇತನು ಹಾಗು ಇನ್ನೂ 6 ಜನ ಎಲ್ಲರು ಸಾ: ದುಬಲಗುಂಡಿ ಇವರೆಲ್ಲರೂ ಗೋಲಾಕಾರವಾಗಿ ಕುಳಿತು ಇಸ್ಪಿಟ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತರ ಮೇಲೆ ದಾಳಿ ಮಾಡಿ 7 ಜನ ಆರೋಪಿತರನ್ನು ಹಿಡಿದುಕೊಂಡು ಅವರಿಂದ ಜೂಜಾಟಕ್ಕೆ ಸಂಬಂಧಪಟ್ಟ ಒಟ್ಟು 23,950/- ರೂ. ನಗದು ಹಣ ಹಾಗೂ 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment