ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 16-12-2020
ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 38/2020, ಕಲಂ. 498(ಎ), 323, 504 ಜೊತೆ 149 ಐಪಿಸಿ ಮತ್ತು ಕಲಂ. 3 & 4 ಡಿಪಿ ಕಾಯ್ದೆ :-
ಫಿರ್ಯಾದಿ ಸೌಮ್ಯ ಗಂಡ ಶಿವಕುಮಾರ ಹೆಬ್ಬಾಳೆ ವಯ: 29 ವರ್ಷ, ಜಾತಿ: ಲಿಂಗಾಯತ, ಸಾ: ಗಣೇಶ ನಗರ ಬೀದರ ರವರ ಮದುವೆಯು ನಾವದಗೇರಿಯ ಚಂದ್ರಶೇಖರ್ ಹೆಬ್ಬಾಳೆ ರವರ ಮಗನಾದ ಶಿವಕುಮಾರ ರವರ ಜೊತೆಯಲ್ಲಿ ತಮ್ಮ ಧರ್ಮದ ಪ್ರಕಾರ ದಿನಾಂಕ 23-05-2018 ರಂದು ಝಿರಾ ಕನವೆಶನ್ ಹಾಲನಲ್ಲಿ ಆಗಿರುತ್ತದೆ, ನಿಶ್ಚಿತಾರ್ಥದ ಸಮಯದಲ್ಲಿ ಫಿರ್ಯಾದಿಯವರ ತಂದೆ ತಾಯಿಯವರು ವರೋಪಚಾರವಾಗಿ 25 ಲಕ್ಷ ರೂಪಾಯಿ, 25 ತೊಲೆ ಬಂಗಾರ, ಮನೆ ಬಳಕೆಯ ಸಮಾನುಗಳು ಕೊಡುವದಾಗಿ ಮಾತನಾಡಿದಂತೆ ಮದುವೆಯ ಖರ್ಚಿಗಾಗಿ 20 ಲಕ್ಷ ರೂಪಾಯಿ ಕೊಟ್ಟಿರುತ್ತಾರೆ, ಮದುವೆಯಲ್ಲಿ 25 ತೊಲೆ ಬಂಗಾರ, ಮನೆ ಬಳಕೆಯ ಸಮಾನುಗಳು ಹಾಗು ಬೆಳ್ಳಿಯ ಸಾಮಾನುಗಳು ನೀಡಿರುತ್ತಾರೆ, ನಿಶ್ಚಿತಾರ್ಥದ ಸಮಯದಲ್ಲಿ ಗಂಡ ಇಂಜಿನಿಯರ್ ಇರುತ್ತಾರೆ ಅಂತ ಹೇಳಿ ಮದುವೆ ಮಾಡಿರುತ್ತಾರೆ, ಆದರೆ ಗಂಡ ನೌಕರಿ ಬಿಟ್ಟು ಊರಲ್ಲಿಯೇ ಇದ್ದು, ಮನಸ್ಸಿಗೆ ಹತ್ತುವ ಹಾಗೆ ಮಾತನಾಡುತ್ತಾ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ ಹಾಗೂ ಆರೋಪಿತರಾದ ಮಾವ ಚಂದ್ರಶೇಖರ್, ಅತ್ತೆ ಮಲ್ಲಮ್ಮಾ, ಭಾವ ಅಶೋಕ, ನೆಗಣಿ ಮುನ್ನೆಮ್ಮಾ, ಮೈದುನ ದಿಲೀಪ, ಅತ್ತೆಯ ತಂಗಿ ಮಹಾದೇವಿ ಅಗಸಗಿರಿ ರವರೆಲ್ಲರೂ ಕೂಡಿಕೊಂಡು ಶಿವಕುಮಾರನಿಗೆ ಬೆಂಗಳೂರಿನಲ್ಲಿ ಫ್ಲ್ಯಾಟ್ ಕೊಡಿಸಿ ಅಂತ ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡುತ್ತಾ ಬಂದಿರುತ್ತಾರೆ, ಸದರಿ ವಿಷಯವನ್ನು ಫಿರ್ಯಾದಿಯು ತನ್ನ ತಂದೆ, ತಾಯಿ, ಅಣ್ಣನ ಗೆಳೆಯ ನವೀನ್ ತಂದೆ ನಾರಾಯಣ, ಅಮೀತ ತಂದೆ ದಶರಥ ರವರಿಗೆ ತಿಳಿಸಿದಾಗ ಅವರೆಲ್ಲರೂ ಕೂಡಿ ಗಂಡ ಹಾಗು ಗಂಡನ ಮನೆಯವರು ನನಗೆ ಕಿರುಕುಳ ಕೊಡುವ ಬಗ್ಗೆ ವಿಚಾರಿಸಿದಾಗ, ಸದರಿ ಆರೋಪಿತರೆಲ್ಲರೂ ಶಿವಕುಮಾರನಿಗೆ ಫ್ಲ್ಯಾಟ್ ಕೊಡಿಸಿ ಅಂತ ಕೇಳಿದಾಗ ತಂದೆಯವರು ಬೀದರದಲ್ಲಿ ಅಣ್ಣನ ಹೆಸರಿನಲ್ಲಿದ್ದ ಪ್ಲಾಟ ನಂ. 112 ಜಿಪಿ ನಂ. 3/273 ಸರ್ವೆ ನಂ. 40/1ಎ ಟು 40/1ಡಿ ನೇದನ್ನು ಚಂದ್ರಕಾಂತ ತಂದೆ ಗಣಪತ್ತರಾವ ಸಾ: ನ್ಯೂ ಆದರ್ಶ ಕಾಲೋನಿ ಬೀದರ ರವರಿಗೆ 41 ಲಕ್ಷಕ್ಕೆ ಮಾರಾಟ ಮಾಡಿ, ಸದರಿ 41 ಲಕ್ಷ ರೂಪಾಯಿ ಮತ್ತು ಮನೆಯಲ್ಲಿದ್ದ 9 ಲಕ್ಷ ಹೀಗೆ ಒಟ್ಟು 50 ಲಕ್ಷ ರೂಪಾಯಿ ನಗದು ಹಣವನ್ನು ದಿನಾಂಕ 01-11-2018 ರಂದು ನವೀನ್ ಮತ್ತು ಅಮೀತ್ ರವರ ಸಮಕ್ಷಮದಲ್ಲಿ ಫಿರ್ಯಾದಿಯವರ ತಂದೆಯವರು ಫಿರ್ಯಾದಿಯ ಗಂಡನಿಗೆ ನೀಡಿರುತ್ತಾರೆ, ನಂತರ ಫಿರ್ಯಾದಿಯವರ ತಂದೆಯವರು ಮದುವೆಯಲ್ಲಿಟ್ಟಿದ್ದ ಎಲ್ಲಾ ಒಡವೆಗಳನ್ನು ಆರೋಪಿತರಾದ ಅತೆ ಮಲ್ಲಮ್ಮಾ ಹೆಬ್ಬಾಳೆ, ಅತ್ತೆಯ ತಂಗಿ ಮಹಾದೇವಿ, ನೆಗೆಣಿ ಮುನ್ನೆಮ್ಮಾ ರವರೆಲ್ಲರೂ ಕೂಡಿ ಫಿರ್ಯಾದಿಗೆ ಬೈದು ಕೈಯಿಂದ ಹೊಡೆ ಬಡೆ ಮಾಡಿ ಎಲ್ಲಾ ಒಡªೆಗಳನ್ನು ತೆಗೆದುಕೊಂಡಿರುತ್ತಾರೆ, ಅಲ್ಲದೇ ಮಹಾದೆವಿ ಇವಳು ಯಾವಾಗಲು ಗಂಡನಿಗೆ ಕಿವಿ ತುಂಬಿ ನಿನಗೆ ಇನ್ನೊಂದು ಮದುವೆ ಮಾಡುತ್ತೇವೆಂದು ಪ್ರಚೋದನೆ ಮಾಡಿರುತ್ತಾಳೆ, ಭಾವ, ಮೈದುನ, ಬಾಯಿಗೆ ಬಂದಂತೆ ಬೈಯುವದು, ಕೆಟ್ಟ ದೃಷ್ಟಿಯಿಂದ ನೋಡುವದು, ಯಾವಾಗಲು ಹಿಯ್ಯಾಳಿಸಿ ಮನಸ್ಸಿಗೆ ಹತ್ತುವ ಹಾಗೆ ಮಾತನಾಡುತ್ತಾರೆ, ಮಾವ ಚಂದ್ರಶೇಖರ್ ರವರು ರಿಂಗ್ ರೋಡ್ ಹತ್ತಿರ ಇದ್ದ ಫಿರ್ಯಾದಿಯ ತಂದೆಯವರ 1 ಎಕರೆ ಹೊಲವನ್ನು ನನ್ನ ಮಗನಿಗೆ ಕೊಡಿರಿ ಆತನು ವ್ಯಾಪಾರದಲ್ಲಿ ಹುಶಾರ ಇದ್ದಾನೆ ಅಂತ ಹೇಳಿ ಫಿರ್ಯಾದಿಗೆ ತೊಂದರೆ ಕೊಡುತ್ತಾ ಬಂದಿದ್ದು, ಅಲ್ಲದೆ ಗಂಡ, ಅತ್ತೆ, ಮಾವ ರವರು ಫಿರ್ಯಾದಿಯವರ ಹೆಸರಿನ ಮೇಲೆ ಡಿಸಿಸಿ ಬ್ಯಾಂಕ ಅಕೌಂಟ ನಂ. 04120100005851 ನೇದರಲ್ಲಿದ್ದ 8 ಲಕ್ಷ ರೂಪಾಯಿ ಹಣವನ್ನು ಚೆಕ್ಕಿನ ಮೇಲೆ ಫಿರ್ಯಾದಿಯವರ ಸಹಿ ಬಲವಂತವಾಗಿ ಪಡೆದು ದಿನಾಂಕ 26-12-2018 ರಂದು ತೆಗೆದುಕೊಂಡು ದಿನಾಂಕ 27-12-2018 ರಂದು ಫಿರ್ಯಾದಿಗೆ ಮನೆಯಿಂದ ಹೊರಗೆ ಹಾಕಿರುತ್ತಾರೆ, ನಂತರ ಗಂಡ ಬೇರೆಯವರ ಜೊತೆಯಲ್ಲಿ ಮದುವೆ ಮಾಡಿಕೊಂಡಿರುತ್ತಾನೆಂದು ಸಂಶಯ ಇರುತ್ತದೆ, ಫಿರ್ಯಾದಿಯು ತನ್ನ ಉಪ ಜೀವನಕ್ಕಾಗಿ ಬೀದರ ನ್ಯಾಯಾಲಯದಲ್ಲಿ ಖಾಸಗಿ ದಾವೆ ಹಾಕಿದ್ದು ಅದರ ನಂಬರ 01/2020 ಇರುತ್ತದೆ ಹಾಗೂ ದಿನಾಂಕ 06-11-2020 ರಂದು ಸದರಿ ಆರೋಪಿತರೆಲ್ಲರೂ ಸೇರಿ ಫಿರ್ಯಾದಿಯ ತವರು ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ನಿನಗೆ ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬಾ ಅಂದರೆ ಇಲ್ಲೆ ಉಳಿದುಕೊಂಡಿದ್ದಿ ಅಂತ ಜಗಳ ಮಾಡುತ್ತಿರುವಾಗ ಜಗಳದ ಶಬ್ದವನ್ನು ಕೇಳಿ ಮನೆಯಲ್ಲಿ ಬಾಡಿಗೆಯಿಂದ ವಾಸವಾಗಿರುವ ಸಂತೋಷ ತಂದೆ ಬಸಣ್ಣಾ ಕೇರೂರ್, ನಾಗಾರ್ಜುನ್ ತಂದೆ ಭೀಮರಾವ ಮತ್ತು ಸಚಿನ್ ತಂದೆ ರವಿಂದ್ರ ರವರು ಬಂದು ಜಗಳವನ್ನು ಕಣ್ಣಾರೆ ನೋಡಿ ಬಿಡಿಸಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 15-12-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 61/2020, ಕಲಂ. 279, 338, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 15-12-2020 ರಂದು ಫಿರ್ಯಾದಿ ಭೀಮರಾವ ತಂದೆ ನಿಂಗಪ್ಪಾ ಸುಗುರ ವಯ: 30 ವರ್ಷ, ಜಾತಿ: ಗೊಲ್ಲ, ಸಾ: ವಿಠ್ಠಲಪುರ ರವರು ತನ್ನ ತಾಯಿ ಮೊಗಲಮ್ಮಾ ವಯ: 55 ವರ್ಷ ಹಾಗೂ ತಂದೆಯಾದ ನಿಂಗಪ್ಪಾ ವಯ: 60 ವರ್ಷ ಮೂರು ಜನರು ಸೇರಿಕೊಂಡು ಮನೆಯ ಕಿರಾಣಿ ಸಾಮಾನುಗಳನ್ನು ತರಲು ಮನ್ನಾಎಖೇಳ್ಳಿ ಗ್ರಾಮಕ್ಕೆ ಹೋಗಿ ಕಿರಾಣಿ ಸಾಮಾನುಗಳನ್ನು ಖರೀದಿ ಮಾಡಿಕೊಂಡು ಮರಳಿ ಮೂರು ಜನರು ಮನ್ನಾಎಖೇಳ್ಳಿಯಿಂದ ಚಿಂಚೋಳಿ ಬಸ್ಸಿನಲ್ಲಿ ಕುಳಿತುಕೊಂಡು ವಿಠ್ಠಲಪುರಗೆ ಬಂದು ತಮ್ಮೂರ ಬಸ್ ನಿಲ್ದಾಣದ ಹತ್ತಿರ ಮೂರು ಜನರೂ ಬಸ್ಸಿನಿಂದ ಇಳಿದು ಚಿಂಚೋಳಿ-ಬೀದರ ರಾಜ್ಯ ಹೆದ್ದಾರಿ-15 ರೋಡ್ ದಾಟುವಾಗ ಚಾಂಗ್ಲೇರಾ ಕಡೆಯಿಂದ ಒಬ್ಬ ಕ್ರೂಜರ್ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರೋಡ್ ದಾಟುತ್ತಿದ್ದ ತಂದೆ ನಿಂಗಪ್ಪಾ ಮತ್ತು ತಾಯಿ ಮೊಗಲಮ್ಮಾ ಇವರಿಗೆ ಡಿಕ್ಕಿ ಮಾಡಿ ವಾಹನ ನಿಲ್ಲಿಸದೇ ವಾಹನ ಸಮೇತ ಮೀನಕೇರಾ ಗ್ರಾಮದ ಕಡೆ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ತಾಯಿ ಮೊಗಲಮ್ಮಾ ಇವರಿಗೆ ಹಣೆಗೆ ರಕ್ತಗಾಯ, ತಲೆಯ ಎಡಭಾಗಕ್ಕೆ ಭಾರಿ ರಕ್ತಗಾಯ ಮತ್ತು ಬಲಗೈ ಮುಂಗೈ ಹತ್ತಿರ ಕೈ ಮುರಿದು ಭಾರಿ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ, ತಂದೆ ನಿಂಗಪ್ಪಾ ಇವರಿಗೆ ತಲೆಯ ಎಡಭಾಗಕ್ಕೆ ಭಾರಿ ರಕ್ತಗಾಯ, ಹಣೆಗೆ ರಕ್ತಗಾಯ ಹಾಗೂ ಎಡಭುಜಕ್ಕೆ ಭಾರಿ ಗುಪ್ತಗಾಯವಾಗಿರುತ್ತದೆ, ಕೂಡಲೇ ಫಿರ್ಯಾದಿ ಮತ್ತು ತಮ್ಮೂರ ಝರಣಪ್ಪ ಸುಗುರ್, ರಮೇಶ ಪಾಲಾಡಿ ರವರು ಕೂಡಿಕೊಂಡು ಮೃತಪಟ್ಟ ತನ್ನ ತಾಯಿಗೆ ಮತ್ತು ಗಾಯಗೊಂಡ ತನ್ನ ತಂದೆಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಸಕಾರ್ರಿ ಆಸ್ಪತ್ರೆ ಮನ್ನಾಎಖೇಳ್ಳಿಗೆ ತಂದು ದಾಖಲು ಮಾಡಿದ್ದು ಇರುತ್ತದೆ, ನಂತರ ಮನ್ನಾಎಖೇಳ್ಳಿ ವೈದ್ಯಾಧಿಕಾರಿಯವರು ತಂದೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ತಿಳಿಸಿದ್ದರಿಂದ 108 ಅಂಬುಲೇನ್ಸದಲ್ಲಿ ಹಾಕಿಕೊಂಡು ರಮೇಶ, ಝರಣಪ್ಪ ರವರು ತಂದೆಗೆ ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಸಂಚಾರ ಪೊಲೀಸ ಠಾಣೆ ಅಪರಾಧ ಸಂ. 103/2020, ಕಲಂ. 279, 304(ಎ) ಐಪಿಸಿ :-
ದಿನಾಂಕ 15-12-2020 ರಂದು ಫಿರ್ಯಾದಿ ಅಮೃತ ತಂದೆ ನರಸಪ್ಪಾ ನಟ್ಟಿ ಸಾ: ಕೋಳಿವಾಡ ಹುಮನಾಬಾದ ರವರು ಮೋಟಾರ್ ಸೈಕಲ ಮೇಲೆ ತನ್ನ ಮನೆಯಿಂದ ಅಂಜನಾದೇವಿ ಪೆಟ್ರೋಲ್ ಬಂಕಗೆ ಹೋಗಿ ಪೆಟ್ರೋಲ್ ಹಾಕಿಸಿಕೊಂಡು ತನ್ನ ಖಾಸಗಿ ಕೆಲಸದ ಪ್ರಯುಕ್ತ ಹಳೆ ಆರ್.ಟಿ.ಓ ಚೆಕ್ ಪೋಸ್ಟ್ ಕಡೆಗೆ ಹೋಗುತ್ತಿರುವಾಗ ಸಂಬಂಧಿ ಆರೋಪಿ ನಂ. 1) ಸಂಜುಕುಮಾರ ತಂದೆ ಅಡೆಪ್ಪಾ ಬಂಡೆನೋರ್ ಸಾ: ಕೋಳಿವಾಡ ಹುಮನಾಬಾದ ಇವನು ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಮೇಲೆ ತಮ್ಮ ಸಂಬಂಧಿ ಅಶೋಕ ತಂದೆ ಭೀಮಣ್ಣಾ ನಟ್ಟಿ ಸಾ: ಕೋಳಿವಾಡ ಹುಮನಾಬಾದ ರವರಿಗೆ ಕೂಡಿಸಿಕೊಂಡು ಚಿದ್ರಿ ಬೈಪಾಸ್ ಕಡೆಯಿಂದ ತನ್ನ ಮೋಟಾರ್ ಸೈಕಲನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಐ.ಬಿ ಕಡೆಗೆ ಬರುತ್ತಿರುವಾಗ ಅದೇ ಸಮಯಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಸಂ. ಕೆಎ-32/ಎಫ್-1843 ನೇದರ ಚಾಲಕನಾದ ಆರೋಪಿ ನಂ. 2) ಕೈಲಾಸ ತಂದೆ ಕಾಶಿನಾಥ ಪೂಸ್ತಾರ ಬಸವಕಲ್ಯಾಣ ಡಿಪೋ ಇವನು ಸಹ ತಾನು ಚಲಾಯಿಸುತ್ತಿದ್ದ ಬಸ್ಸನ್ನು ಐ.ಬಿ ಕಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಅಂಜನಾದೇವಿ ಪೆಟ್ರೋಲ್ ಬಂಕ್ ಹತ್ತಿರ ಬಂದಾಗ ಇಬ್ಬರೂ ಮುಖಾಮುಖಿ ಡಿಕ್ಕಿ ಮಾಡಿಕೊಂಡಿರುತ್ತಾರೆ, ಸದರಿ ಡಿಕ್ಕಿಯಿಂದ ಸಂಜುಕುಮಾರ ಇವನಿಗೆ ತಲೆ, ಮುಖ ಮತ್ತು ಕುತ್ತಿಗೆ ಭಾಗ ತೀವ್ರ ರಕ್ತಗಾಯಗಳು ಆಗಿ ಚಿದಿ ಚಿದಿಯಾಗಿ ಬಲಗೈಗೆ ತೀವ್ರ ರಕ್ತಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ, ಅಶೋಕ ಇವನಿಗೆ ತಲೆಗೆ ತೀವ್ರ ಗುಪ್ತಗಾಯವಾಗಿ ಎರಡು ಕಿವಿಗಳಿಂದ ಮತ್ತು ಮೂಗಿನಿಂದ ರಕ್ತಸ್ತಾವವಾಗಿ ಇತನು ಸಹ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ, ನಂತರ ಫಿರ್ಯಾದಿಯು ದಾರಿ ಹೋಕರ ಸಹಾಯದಿಂದ ಇಬ್ಬರ ಮೃತ ದೇಹಗಳನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಹುಮನಾಬಾದ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ತಂದು ಇಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 176/2020, ಕಲಂ. 457, 380 ಐಪಿಸಿ :-
ದಿನಾಂಕ 15-12-2020 ರಂದು 0030 ಗಂಟೆಯಿಂದ 0500 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಎಸ್.ಡಿ.ಎ ಚರ್ಚ ಮುಖ್ಯದ್ವಾರ ಬಾಗಿಲು ಮುರಿದು ಒಳಗಡೆ ಇದ್ದ ಎಂಪ್ಲಿಫಾಯರ ಉಪಕರಣ ಅ.ಕಿ 5000/- ರೂ. ಬೆಲೆಬಾಳುವುದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ನಾಗಶೆಟ್ಟಿ ತಂದೆ ಗುಂಡಪ್ಪಾ ಸಾಂಗ್ಲೆಕರ ಸಾ: ಮುಸ್ತರಿ ರವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 151/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 15-12-2020 ರಂದು ಬಸವಕಲ್ಯಾಣ ನಗರದ ಸದಾನಂದ ಮಠದ ಕಂಪೌಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಹಣ ಹಚ್ಚಿ ಪಣ ತೋಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ಎಂಬ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆಂದು ಜಿ.ಎಂ.ಪಾಟೀಲ್ ಪಿ.ಎಸ್.ಐ (ಕಾ&ಸೂ) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವೆರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಸದಾನಂದ ಮಠದ ಕಂಪೌಂಡ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಬಸವಕಲ್ಯಾಣ ನಗರದ ಸದಾನಂದ ಮಠದ ಕಂಪೌಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಈಶ್ವರ ತಂದೆ ಜನಾರ್ಧನ ದೇವಕರ ವಯ: 51 ವರ್ಷ, ಜಾತಿ: ಮರಾಠಾ, ಸಾ: ಶಿವಾಜಿನಗರ ಬಸವಕಲ್ಯಾಣ, 2) ಶ್ರೀಕಾಂತ ತಂದೆ ಮಹಾಲಿಂಗಯ್ಯಾ ಸ್ವಾಮಿ ವಯ: 27 ವರ್ಷ, ಸಾ: ತ್ರೀಪುರಾಂತ ಬವಸಕಲ್ಯಾಣ, 3) ಇಸ್ಮಾಯಿಲ್ ತಂದೆ ಗಫೂರಸಾಬ ಜಾಮವಾಲೆ ವಯ: 31 ವರ್ಷ, ಜಾತಿ: ಮುಸ್ಲಿಂ, ಸಾ: ಕರಿಮಕಾಲೋನಿ ಬಸವಕಲ್ಯಾಣ, 4) ಫೆರೋಜ ತಂದೆ ಮಕ್ಬುಲಸಾಬ ಶೇಖ ವಯ: 32 ವರ್ಷ, ಜಾತಿ: ಮುಸ್ಲಿಂ, ಸಾ: ವಿಠಲ ಮಂದಿರ ಬಸವಕಲ್ಯಾಣ ಹಾಗೂ 5) ಫಸಿವೋದ್ದಿನ ತಂದೆ ಶಫಿವೋದ್ದಿನ ಬಾಜೆ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಶಾಹಪುರ ಗಲ್ಲಿ ಬಸವಕಲ್ಯಾಣ ಇವರೆಲ್ಲರೂ ಗುಂಪಾಗಿ ಕುಳಿತು ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರುವುದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಹಿಡಿದುಕೊಂಡು ಅವರಿಂದ ಒಟ್ಟು ನಗದು ಹಣ 34,350/- ರೂ. ಹಾಗೂ 52 ಇಸ್ಪಿಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 76/2020, ಕಲಂ. 279, 337, 338 ಐಪಿಸಿ :-
ದಿನಾಂಕ 15-12-2020 ರಂದು ಫಿರ್ಯಾದಿ ಸೈಯ್ಯದ ಮೋಹಿಯೊದ್ದಿನ್ ತಂದೆ ಇಸ್ಮಾಯಿಲಸಾಬ ವಯ: 40 ವರ್ಷ, ಜಾತಿ: ಮುಸ್ಲಿಂ, ಸಾ: ಹಿಮ್ಮತ ನಗರ ಬಸವಕಲ್ಯಾಣ ರವರು ತನ್ನ ಚಿಕ್ಕಮ್ಮ ಸಾಬೇರಾಬೆಗಂ ಗಂಡ ರಾಜೇಸಾಬ ವಯ: 45 ವರ್ಷ & ತಂಗಿಯಾದ ಮಸ್ತಾನಬೀ ಗಂಡ ಹಾಜಿ ಶೇಖ ವಯ: 23 ವರ್ಷ, ತಂಗಿ ಗಂಡ ಹಾಜಿ ತಂದೆ ನಬಿಸಾಬ ಶೇಖ ವಯ: 35 ವರ್ಷ ಎಲ್ಲರು ಕೂಡಿಕೊಂಡು ಕಿರಾಣಿ ತೆಗೆದುಕೊಂಡು ಬರಲು ನಗರದ ಗಾಂಧಿ ಚೌಕ್ ಕಡೆ ಬಂದು ಕಿರಾಣಿ ಸಾಮಾನುಗಳು ತೆಗೆದುಕೊಂಡು ನಡೆದುಕೊಂಡು ಮನೆಗೆ ಹೋಗುವಾಗ ಚಿಕ್ಕಮ್ಮ & ತಂಗಿ ಮುಂದೆ-ಮುಂದೆ ನಡೆದುಕೊಂಡು ಹೋಗುತ್ತಿದ್ದು, ಫಿರ್ಯಾದಿ ಮತ್ತು ಹಾಜಿ ಶೇಖ ಹಿಂದೆ-ಹಿಂದೆ ನಡೆದುಕೊಂಡು ಹೋಗುವಾಗ ಪರ್ತಾಪೂರ ರೋಡಿಗೆ ಇರುವ ಸಿರಾಜಖಾನ ಕಟ್ಟಿಗೆ ಮಶೀನ ಹತ್ತಿರ ಹಿಂದಿನಿಂದ ಅಂದರೆ ಗಾಂಧಿ ಚೌಕ್ ಕಡೆಯಿಂದ ಕಾರ ನಂ. ಎಮ್.ಎಚ್-03/ಸಿ.ಎಸ್-0665 ನೇದರ ಚಾಲಕನಾದ ಆರೋಪಿ ನಾಗೇಶ ತಂದೆ ಬಾಬುರಾವ ಕಂಬಾರ ವಯ: 32 ವರ್ಷ, ಜಾತಿ: ಲಿಂಗಾಯತ, ಸಾ: ಕಾನೇಗಾಂವ ರೋಡ್ ಲೋಹಾರಾ ತಾ: ಲೋಹಾರಾ ಇತನು ತನ್ನ ಕಾರನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಚಿಕ್ಕಮ್ಮ & ತಂಗಿ ರವರಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಅಪಘಾತದಿಂದ ಚಿಕ್ಕಮ್ಮ ರವರಿಗೆ ತಲೆಯ ಹಿಂಭಾಗ ಭಾರಿ ರಕ್ತ-ಗುಪ್ತ ಗಾಯವಾಗಿ ಮೂಗಿನಿಂದ ಬರುತ್ತಿತ್ತು & ತಂಗಿ ಇವಳಿಗೆ ಎಡಗಡೆ ತಲೆಗೆ & ಎಡಗಡೆ ಸೋಂಟಕ್ಕೆ ಗುಪ್ತಗಾಯವಾಗಿರುತ್ತದೆ, ಕೂಡಲೆ ಫಿರ್ಯಾದಿ ಮತ್ತು ಹಾಜಿ ಕೂಡಿಕೊಂಡು ಗಾಯಗೊಂಡ ಚಿಕ್ಕಮ್ಮ & ತಂಗಿ ರವರಿಗೆ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತಿನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 101/2020, ಕಲಂ. 279, 337, 338 ಐಪಿಸಿ :-
ದಿನಾಂಕ 15-12-2020 ರಂದು ಫಿರ್ಯಾದಿ ದತ್ತಾತ್ರಿ ತಂದೆ ಬೀರಣ್ಣಾ ಮೇತ್ರೆ ಸಾ: ಖಟಕಚಿಂಚೋಳಿ ತಾ: ಭಾಲ್ಕಿ ರವರು ತಮ್ಮೂರ ಸುನೀಲ ತಂದೆ ಮಡೇಪ್ಪಾ ಉಪ್ಪಾರ ಈತನು ಚಲಾಯಿಸುತ್ತಿದ್ದ ಹೀರೊ ಗ್ಲಾಮರ್ ಮೋಟಾರ್ ಸೈಕಲ್ ಸಂ. ಟಿ.ಎಸ್-15/ಇ.ವಿ-9269 ನೇದರ ಮೇಲೆ ಮೆಕಾನಿಕ್ ಕೆಲಸ ಮಾಡಲು ಇಬ್ಬರೂ ಕೂಡಿಕೊಂಡು ಖಟಕಚಿಂಚೋಳಿಯಿಂದ ಜಲಸಂಗಿ ಗ್ರಾಮದ ಮಾರ್ಗವಾಗಿ ಹುಮನಾಬಾದಗೆ ಹೋಗುತ್ತಿರುವಾಗ ಜಲಸಂಗಿ ಗ್ರಾಮದ ಹತ್ತಿರ ಬಂದಾಗ ಎದುರಿನಿಂದ ಅಂದರೆ ಹುಮನಾಬಾದ ಕಡೆಯಿಂದ ಮೋಟಾರ್ ಸೈಕಲ್ ನಂ. ಕೆಎ-38/ಜೆ-5238 ನೇದರ ಚಾಲಕನಾದ ಆರೋಪಿ ಶ್ರೀಕಾಂತ ತಂದೆ ಜ್ಞಾನದೇವ ಗಾಂವ ವಯ: 12 ವರ್ಷ, ಸಾ: ಜಲಸಂಗಿ ಇತನು ಸದರಿ ವಾಹನದ ಮೇಲೆ ಫಿರೋಜ ತಂದೆ ಲಾಯಕ ಪಟೇಲ್ ಸಾ: ಜಲಸಂಗಿ ಇತನಿಗೆ ಕೂಡಿಸಿಕೊಂಡು ತನ್ನ ಮೋಟಾರ್ ಸೈಕಲನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುನೀಲ ಇವನು ಚಲಾಯಿಸುತ್ತಿದ್ದ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಪಡೆಸಿದ್ದರಿಂದ ಫಿರ್ಯಾದಿಯ ಹಣೆಗೆ ಮತ್ತು ಎರಡು ತುಟಿಗಳಿಗೆ ಸಾದಾ ರಕ್ತಗಾಯ ಹಾಗೂ ಮುಖದ ಬಲಗಡೆಗೆ ತರಚಿದ ರಕ್ತಗಾಯಗಳು ಆಗಿರುತ್ತವೆ, ಸುನೀಲ ಇವನಿಗೆ ಎರಡು ತುಟಿಗಳಿಗೆ ಸಾದಾ ರಕ್ತಗಾಯ, ಹಣೆಯ ಎಡಗಡೆಗೆ, ಎಡಗಣ್ಣಿನ ಹುಬ್ಬಿಗೆ ಮತ್ತು ಸೊಂಟಕ್ಕೆ ತರಚಿದ ರಕ್ತಗಾಯಗಳು ಆಗಿರುತ್ತವೆ, ಮೋಟಾರ್ ಸೈಕಲ್ ಚಾಲಕ ಚಿಕ್ಕ ಹುಡುಗನಿಗೆ ಎಡಗಾಲ ಮೊಣಕಾಲ ಕೆಳಗೆ ತೀವ್ರ ಗುಪ್ತಗಾಯ ಮತ್ತು ಎಡಗೈಗೆ ಸಾದಾ ಗುಪ್ತಗಾಯಗಳು ಆಗಿರುತ್ತವೆ, ಮೋಟಾರ್ ಸೈಕಲ್ ಹಿಂದೆ ಕುಳಿತವನಿಗೆ ಎಡಗಾಲ ಮೊಣಕಾಲಗೆ ತೀವ್ರ ರಕ್ತಗಾಯ ಮತ್ತು ಎಡಪಾದಕ್ಕೆ ತರಚಿದ ರಕ್ತಗಾಯಗಳು ಆಗಿರುತ್ತವೆ, ನಂತರ ಅಲ್ಲೇ ಇದ್ದ ಒಬ್ಬರು ಅಪಘಾತದಲ್ಲಿ ಗಾಯಗೊಂಡ ಎಲ್ಲರಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 153/2020, ಕಲಂ. ಮಹಿಳೆ ಕಾಣೆ :-
ಫಿರ್ಯಾದಿ ಸಂತೋಷಕುಮಾರ ತಂದೆ ನಿಲಕಂಠರಾವ ಕಂಟೆ ವಯ: 40 ವರ್ಷ, ಜಾತಿ: ಎಸ್.ಸಿ, ಸಾ: ಕಣಜಿ ರವರ ಮಗಳಾದ ಉರ್ಮಿಳಾ ಇವಳು ಪಿ.ಯು.ಸಿ ದ್ವಿತೀಯ ವರ್ಷದಲ್ಲಿ ಫೇಲಾಗಿ ಮುಂದಿನ ವಿಧ್ಯಾಬ್ಯಾಸ ಮಾಡದೆ ಮನೆಯಲ್ಲಿ ಇರುತ್ತಾಳೆ, ಹೀಗಿರುವಾಗ ದಿನಾಂಕ 15-12-2020 ರಂದು 0930 ಗಂಟೆಯ ಸುಮಾರಿಗೆ ಉರ್ಮಿಳಾ ಇವಳು ಕೆನಾಲಗೆ ಹೊಗಿ ಬಟ್ಟೆಗಳು ಒಗೆದುಕೊಂಡು ಬರುತ್ತೇನೆಂದು ಹೇಳಿ ಮನೆಯಲ್ಲಿನ ಒಗೆಯುವ ಬಟ್ಟೆಗಳು ತೆಗೆದುಕೊಂಡು ಹೊದವಳು ಮರಳಿ ಮನೆಗೆ ಬರಲಿಲ್ಲಾ, ನಂತರ 1200 ಗಂಟೆಗೆ ಉರ್ಮಿಳಾ ಇವಳಿಗೆ ಹುಡುಕುತ್ತಾ ಗ್ರಾಮದ ಕೆನಾಲಗೆ ಹೊಗಿ ನೊಡಲು ಅಲ್ಲಿ ಬಟ್ಟೆಗಳು ಇದ್ದು ಉರ್ಮಿಳಾ ಇವಳು ಇರಲಿಲ್ಲಾ ಕಾಣೆಯಾಗಿರುತ್ತಾಳೆ, ಕಾಣೆಯಾದ ಮಗಳ ಚಹರೆ ಪಟ್ಟಿ 1) ಹೆಸರು: ಉರ್ಮಿಳಾ, ತಂದೆ ಸಂತೋಷಕುಮಾರ ಕಂಟೆ, 2) ವಯ: 19 ವರ್ಷ, 3) ಜಾತಿ: ಎಸ.ಸಿ, 4) ಚಹರೆ ಪಟ್ಟಿ: ದುಂಡು ಮುಖ, ಸಾಧಾರಣ ಮೈಕಟ್ಟು, ಗೊಧಿ ಬಣ್ಣ, 5) ಅಂದಾಜು 5 ಎಡಿ ಎತ್ತರ, 6) ಧರಿಸಿದ ಬಟ್ಟೆಗಳು: ಹಸಿರು ಬಣ್ಣದ ನೂರಿ ಹಾಗು ಕೆಂಪು ಬಿಳಿ ಬಣ್ಣದ ಓಡನಿ ಹಾಗೂ 7) ಮಾತಾಡುವ ಭಾಷೆ: ಕನ್ನಡ ಮತ್ತು ಹಿಂದಿ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment