ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 17-12-2020
ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 39/2020, ಕಲಂ. 498(ಎ), 323, 324, 504, 506 ಜೊತೆ 34 ಐಪಿಸಿ :-
ದಿನಾಂಕ 16-12-2020 ರಂದು ಫಿರ್ಯಾದಿ ನಾಜೇರಾ ಬೆಗಂ ಗಂಡ ಸೈಯದ ಉಮರ ಅಲಿ ವಯ: 33 ವರ್ಷ, ಜಾತಿ: ಮುಸ್ಲಿಂ, ಸಾ: ಲೇಬರ ಕಾಲೋನಿ ಶಹಾಗಂಜ ಬೀದರ ರವರ ಮದುವೆಯು ದಿನಾಂಕ 02-08-2018 ರಂದು ಶಹಾಗಂಜದ ಸೈಯದ ಸಾದತ್ತ ಅಲಿ ರವರ ಮಗನಾದ ಸೈಯದ ಉಮರ ಅಲಿ ಇತನ ಜೊತೆಯಲ್ಲಿ ಮದುವೆ ಆಗಿರುತ್ತದೆ, ಗಂಡ ಕಂಪ್ಯೂಟರ್ ಆಪರೆಟರ್ ಆಗಿದ್ದು, ಗಂಡನದೇ ಆದ ಕ್ಯಾಂಬ್ರಿಜ್ ಸ್ಪೊಕನ್ ಇಂಗ್ಲಿಷ ಇನ್ಸ್ಟಿಟ್ಯೂಟ್ ಇರುತ್ತದೆ, ಗಂಡನಾದ ಸೈಯದ ಉಮರ ಅಲಿ ಇತನು ಫಿರ್ಯಾದಿಗೆ ವಿನಃ ಕಾರಣ ತೊಂದರೆ ಕೊಡುತ್ತಾ ಬಂದು ತು ಮುಜೆ ಪಸಂದ ನಹಿ ಹೈ, ತುಜೆ ಚುಪ್ ಜಬರದಸ್ತಿ ರಖಾ ಹೂ ನಿನಗೆ ನನ್ನ ಜೊತೆಯಲ್ಲಿ ದೊಡ್ಡವರು ಮದುವೆ ಮಾಡಿರುತ್ತಾರೆ ಅಂತ ಕೈಯಿಂದ ಹೊಡೆ ಬಡೆ ಮಾಡುತ್ತಾ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ ಹಾಗು ಅತ್ತೆಯಾದ ರಹಿಮುನ್ನಿಸಾ ಬೆಗಂ, ನಾದಣಿಯಂದಿರಾದ ನಸೀಮ್ ಬೆಗಂ ಗಂಡ ಜಮೀಲ್ ಅಹ್ಮದ, ನಸ್ರೀನ್ ಬೆಗಂ ಗಂಡ ಹಮೀದ ಖಾನ ಮತ್ತು ನಾದಣಿಯ ಗಂಡನಾದ ಹಮೀದ ಖಾನ ರವರೆಲ್ಲರೂ ಕೂಡಿ ಗಂಡ ಹೊಡೆಯುತ್ತಿರುವಾಗ ಮರದ ಹೈ ಮಾರತಾ, ಆವಾರಾ ಹೈ ತುಜೆ ಚಪಲ್ಲಸೆ ಮಾರತೆ, ತುಜೆ ಇಸ್ ಘರಮೆ ರಹೆನಾ ಹೈ ತೊ ಹಮ್ ಜೈಸೆ ಬೊಲತೆ ವೈಸೆ ರಹನಾ ನಹಿತೋ ಚಲೆ ಜಾನಾ, ಮರದ ಆದಮಿ ಹೈ ಕ್ಯಾಬಿ ಕರತಾ ಅಂತ ಅತ್ತೆ, ನಾದಣಿಯಂದಿರು ಕೂದಲು ಹಿಡಿದು ಹೊಡೆ ಬಡೆ ಮಾಡುತ್ತಾ ಬಂದು ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾರೆ, ಫಿರ್ಯಾದಿಗೆ ಗಂಡ ಹಾಗು ಗಂಡನ ಮನೆಯವರು ಕಿರುಕುಳ ಕೊಡುವ ಬಗ್ಗೆ ತನ್ನ ತಂದೆಯಾದ ಮಹ್ಮದ ಶರಿಫೋದ್ದಿನ, ತಾಯಿಯಾದ ಬಿಜಾನ್ ಬೆಗಂ, ಅಕ್ಕಳಾದ ತಹೆನಿಯತ್ ಬೆಗಂ, ತಮ್ಮನಾದ ಮಹ್ಮದ ಸಿಜಾವೋದ್ದಿನ್ ರವರಿಗೆ ತಿಳಿಸಿದಾಗ ಅವರೆಲ್ಲರೂ ನನ್ನ ಗಂಡ ಹಾಗು ಗಂಡನ ಮನೆಯವರಿಗೆ ಬುದ್ದಿವಾದ ಹೇಳಲು ಹೋದಾಗ ಅವರೆಲ್ಲರೂ ತಂದೆಗೆ ಭಾಡಕಾವ್ ಸಾಲಾ ಕ್ಯಾ ಕರತೆ ಅಂತ ಬೈದು ಅವರಿಗೆ ವಾಪಸ್ ಕಳಿಸಿರುತ್ತಾರೆ, ಹೀಗಿರುವಾಗ ದಿನಾಂಕ 16-12-2020 ರಂದು ಫಿರ್ಯಾದಿಯು ಶಾಲೆಗೆ ಹೋಗಲು ತಯಾರಾಗುತ್ತಿರುವಾಗ ಗಂಡ ಫಿರ್ಯಾದಿಗೆ ನೀನು ಕೆಲಸ ಮಾಡಿರುವುದಿಲ್ಲ, ಕೆಲಸ ಮಾಡಿ ಹೋಗು ಅಂತ ಜಗಳ ತೆಗೆದಾಗ ಮನೆಯಲ್ಲಿ ಅತ್ತೆ, ನಾದಣಿಯರೆಲ್ಲರೂ ಕೂಡಿ ಅವಾಚ್ಯ ಶಬ್ದಗಳಿಂದ ಬೈದು ಅತ್ತೆ ಕೂದಲು ಹಿಡಿದು ಎಳೆದು, ಕೈಯಿಂದ ಪಕಾಳದ ಮೇಲೆ ಹೊಡೆದಾಗ ಗಂಡ ಬಡಿಗೆಯಿಂದ ಎಡಗಣ್ಣಿನ ಕೆಳಗೆ ಹೊಡೆದಿರುವುದರಿಂದ ರಕ್ತ ಕಂದುಗಟ್ಟಿ ರಕ್ತಗಾಯ ಆಗಿರುತ್ತದೆ ಮತ್ತು ನಾದಣಿಯಂದಿರು ಕೈಮುಷ್ಟಿ ಮಾಡಿ ಹೊಟ್ಟೆಯಲ್ಲಿ, ಎದೆಯಲ್ಲಿ, ಬೆನ್ನಲ್ಲಿ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ, ಸದರಿ ಜಗಳವನ್ನು ಪರಿಚಯ ಇರುವ ಶಿವಕುಮಾರ ತಂದೆ ಕಾಮರಾಜ ಕಾಂತೆ ಮತ್ತು ಸೈಯದ ಸಮಿಉಲ್ಲಾ ತಂದೆ ಕಾಜಮ್ ಉಲ್ಲಾ ರವರು ಕಣ್ಣಾರೆ ನೋಡಿ ಬಿಡಿಸಿಕೊಂಡಿರುತ್ತಾರೆ, ನಂತರ ಫಿರ್ಯಾದಿಯ ತಂದೆಯವರಿಗೆ ಜಗಳದ ವಿಷಯ ತಿಳಿಸಿದಾಗ ತಂದೆ, ಅಕ್ಕ, ತಮ್ಮನಾದ ಸಿಜಾವೋದ್ದಿನ್ ರವರೆಲ್ಲರೂ ಕೂಡಿ ಮನೆಗೆ ಬಂದಾಗ ಆರೋಪಿತರಾದ ಗಂಡ ಹಾಗೂ ಗಂಡನ ಮನೆಯವರೆಲ್ಲರೂ ಕೂಡಿ ತಂದೆಗೆ ತುಮ್ ಹಮಾರೆ ಘರಕೂ ಕೈಕು ಆಯೆ ಅಂತ ಬೈದು, ಬಡಿಗೆಯಿಂದ ತಮ್ಮನಿಗೆ ಬಲ ಭುಜಕ್ಕೆ ಹೊಡೆದು ಗುಪ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿರುತ್ತಾರೆ, ನಂತರ ಫಿರ್ಯಾದಿಗೆ ಮತ್ತು ಫಿರ್ಯಾದಿಯ ತಮ್ಮನಿಗೆ ತಂದೆಯವರು ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 167/2020, ಕಲಂ. 379 ಐಪಿಸಿ :-
ದಿನಾಂಕ 15-12-2020 ರಂದು ಫಿರ್ಯಾದಿ ಸಾಗರ ತಂದೆ ರಾಜಪ್ಪಾ ಮೂಲಗೆ ವಯ: 24 ವರ್ಷ, ಜಾತಿ: ಲಿಂಗಾಯತ, ಸಾ: ಲಿಂಗದಳ್ಳಿ, ತಾ: ಬಸವಕಲ್ಯಾಣ ರವರು ತನ್ನ ಕೆಲಸ ಮುಗಿಸಿಕೊಂಡು ಪಿ.ವಾಯ್.ಸಿ ಬಾರದಿಂದ ತನ್ನ ಮೋಟಾರ ನಂ. ಎಂ.ಎಚ-01/ಎ.ಯು-4588 ನೇದರ ಮೇಲೆ ಹುಮನಾಬಾದ ರುದ್ರಂ ಲಾಡ್ಜಗೆ ಬಂದು ಲಾಡ್ಜ ಕೆಳಗೆ ಸದರಿ ವಾಹನವನ್ನು ನಿಲ್ಲಿಸಿ ಲಾಡ್ಜದಲ್ಲಿ ಮಲಗಿಕೊಂಡು ಮುಂಜಾನೆ ದಿನಾಂಕ 16-12-2020 ರಂದು ಎದ್ದು ನೋಡಲು ಸದರಿ ಮೋಟಾರ ಸೈಕಲ ಇರಲಿಲ್ಲ, ಫಿರ್ಯಾದಿಯು ಎಲ್ಲಾ ಕಡೆ ಹುಡಕಾಡಿ ನೋಡಲು ಎಲ್ಲಿಯು ಸಿಕ್ಕಿರುವುದಿಲ್ಲ, ಕಳುವಾದ ವಾಹನದ ವಿವರ 1) ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ. ಎಂ.ಎಚ-01/ಎ.ಯು-4588, 2) ಚಾಸಿಸ್ ನಂ. ಎಂ.ಡಿ.2.ಡಿ.ಹೆಚ್.ಡಿ.ಹೆಚ್.ಝಡ್.ಝಡ್.ಟಿ.ಸಿ.ಇ.76641, 3) ಇಂಜಿನ್ ನಂ. ಡಿ.ಹೆಚ್.ಜಿ.ಬಿ.ಟಿ.ಇ.65542, 4) ಬಣ್ಣ: ಕಪ್ಪು ಬಣ್ಣ ಹಾಗೂ 5) ಅ.ಕಿ 30,000/- ರೂ. ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 16-12-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 104/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 16-12-2020 ರಂದು ರಾಜೇಶ್ವರ ಗ್ರಾಮದ ಮೌನೇಶ್ವರ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜನರಿಂದ ಹಣವನ್ನು ಪಡೆದುಕೊಂಡು ಜನರಿಗೆ ಮಟಕಾ ನಂಬರ ಚೀಟಿ ಬರೆದು ಕೊಡುತ್ತಿದ್ದಾನೆಂದು ವಸೀಮ ಪಟೇಲ್ ಪಿ.ಎಸ.ಐ (ಕಾಸು) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ರಾಜೇಶ್ವರ ಗ್ರಾಮದ ಮೌನೇಶ್ವರ ಮಂದಿರದಿಂದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಮೌನೇಶ್ವರ ಮಂದಿರದ ಹತ್ತಿರ ಒಬ್ಬನು ಸಾರ್ವಜನಿಕ ಸ್ಥಳದಲ್ಲಿ ಒಂದು ರೂಪಾಯಿಗೆ 80/- ರೂ. ಕೊಡುತ್ತೇನೆ ಅಂತಾ ಜೋರಾಗಿ ಕೂಗಿ ಕೂಗಿ ಜನರಿಗೆ ಕರೆದು ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿ ಬರೆದು ಕೊಡುವಾಗ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಾಹಾಯದಿಂದ ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ಆತನಿಗೆ ವಿಚಾರಿಸಲು ತನ್ನ ಹೆಸರು ಮಹೇಬೂಬ ತಂದೆ ಚಾಂದಸಾಬ ಶೇಕ ವಯ: 32 ವರ್ಷ, ಜಾತಿ: ಮುಸ್ಲಿಂ, ಸಾ: ಹಿಮ್ಮತ ನಗರ ರಾಜೇಶ್ವರ ಅಂತಾ ತಿಳಸಿದನು, ಸದರಿಯವನ ಅಂಗ ಜಡ್ತಿ ಮಾಡಲು ಆತನ ಹತ್ತಿರ 1) ನಗದು ಹಣ 1,200/- ರೂ. 2) 4 ಮಟಕಾ ನಂಬರ ಬರೆದ ಚೀಟಿಗಳು ಹಾಗೂ 3) ಒಂದು ಬಾಲ ಪೆನ್ನು ಸಿಕ್ಕಿರುತ್ತದೆ, ತಾನು ಮಟಕಾ ನಂಬರ ಬರೆದ ಚೀಟಿಗಳನ್ನು ಬರೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು ಅಲ್ಲದೆ ತಾನು ಬರೆದ ಮಟಕಾ ನಂಬರ ಚೀಟಿ ಮತ್ತು ಹಣವನ್ನು ತಮ್ಮೂರ ಶಬ್ಬೀರ ತಂದೆ ಅಬ್ದುಲ್ಲಾ ಅಲಮಾರಿವಾಲೆ ರವರಿಗೆ ಕೋಡುತ್ತೇನೆ, ಸದರಿಯವರು ನನಗೆ 100/- ರೂಪಾಯಿಗೆ 20/- ರೂ ಕಮಿಷನ ಕೋಡುತ್ತಾರೆ ಅಂತಾ ತಿಳಿಸಿರುತ್ತಾನೆ, ಸದರಿ ಆರೋಪಿ ಮಹೇಬೂಬ ಮತ್ತು ಆತನ ಹತ್ತಿರ ಸಿಕ್ಕ ನಗದು ಹಣ, ಮಟಕಾ ಚೀಟಿ ಮತ್ತು ಬಾಲ ಪೆನ್ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment