ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 18-12-2020
ನೂತನ ನಗರ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ನಂ. 23/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 17-12-2020 ರಂದು ಫಿರ್ಯಾದಿ ಸವಿತಾ ಗಂಡ ವಿಶ್ವನಾಥ ವಯ: 54 ವರ್ಷ, ಜಾತಿ: ಲಿಂಗಾಯತ, ಸಾ: ಬಸಂತಪುರ ರವರ ಮಗನಾದ ಪ್ರೇಮಕುಮಾರ ಇತನು ಸರಾಯಿ ಕುಡಿದು ಮನೆಯಲ್ಲಿ ಹೆಂಡತಿಯೊಂದಿಗೆ ಸರಿಯಾಗಿ ಇರದೇ ಜಗಳ ತಂಟೆ ಮಾಡುತ್ತಿದ್ದರಿಂದ ಆತನ ಮಾಲಾಶ್ರಿ ಇವಳು ತನ್ನ ಮಗನೊಂದಿಗೆ 3 ವರ್ಷಗಳ ಹಿಂದೆ ತನ್ನ ಗಂಡನನ್ನು ಬಿಟ್ಟು ತನ್ನ ತವರು ಮನೆಗೆ ಹೋಗಿ ಅಲ್ಲಿಯೇ ವಾಸವಾಗಿರುತ್ತಾಳೆ, ಅದೇ ಕಾರಣದಿಂದಾಗ ಪ್ರೆಮಕುಮಾರ ಇತನು ಸರಾಯಿ ಕುಡಿಯವುದು, ಹುಚ್ಚು ಹುಚ್ಚನಂತೆ ಮಾಡುತ್ತಾ ಎಲ್ಲೆಂದರಲ್ಲಿ ಹೋಗಿ ಬರುವುದು ಮಾಡುತ್ತಿದ್ದನು, ಸುಮಾರು 15 ದಿವಸಗಳ ಹಿಂದೆ ಮನೆ ಬಿಟ್ಟು ಹೋಗಿ ಅಲ್ಲಿ ಇಲ್ಲಿ ತಿರುಗಾಡುತ್ತಾ ದಿನಾಂಕ 17-12-2020 ರಂದು 1200 ಗಂಟೆಯಿಂದ 1500 ಗಂಟೆಯ ಮಧ್ಯದ ಅವಧಿಯಲ್ಲಿ ಬೀದರ ಕೇಂದ್ರ ಬಸ್ ನಿಲ್ದಾಣದಲ್ಲಿ ಅನ್ನ ನೀರು ಇಲ್ಲದೇ ಮೃತಪಟ್ಟಿರುತ್ತಾನೆ, ಪ್ರೇಮಕುಮಾರ ಇತನ ಸಾವಿನಲ್ಲಿ ಯಾರ ಮೇಲೆ ಯಾವ ರೀತಿಯ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 77/2020, ಕಲಂ. 279, 337, 338 ಐಪಿಸಿ :-
ದಿನಾಂಕ 17-12-2020 ರಂದು ಫಿರ್ಯಾದಿ ಜಗದೇವಿ ಗಂಡ ಉಲ್ಲಾಸ ಸಿಂಧೋಲ್ ವಯ: 25 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಬಗದಲ ಗ್ರಾಮ ಬೊಮ್ಮಗೊಂಡೇಶ್ವರ ಗುಡಿಯ ಹತ್ತಿರ, ತಾ: ಜಿ: ಬೀದರ ರವರು ತಮ್ಮೂರಿನಿಂದ ಬಗದಲ ಬ್ರೀಡ್ಜ್ ಮಾರ್ಗವಾಗಿ ಬ್ರೀಡ್ಜ್ ದಾಟಿ ಇರುವ ತಮ್ಮ ಹೊಲದಲ್ಲಿ ಕೆಲಸ ಮಾಡಲು ಹೊಗುತ್ತಿರುವಾಗ ಎದುರಗಡೆಯಿಂದ ಅಂದರೆ ಮೀನಕೆರಾ ಕ್ರಾಸ್ ಕಡೆಯಿಂದ ಕಾರ ನಂ. ಕೆಎ-32/ಪಿ-1530 ನೇದರ ಚಾಲಕನಾದ ಆರೋಪಿ ನಾಗರಾಜ ತಂದೆ ಸಂಗನ ಬಸಪ್ಪಾ ಬಿರಾದರ ವಯ: 29 ವರ್ಷ, ಜಾತಿ: ಲಿಂಗಾಯತ, ಸಾ: ಗಣಾಪೂರ ಇತನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಬೀದರ-ಮನ್ನಾಏಖೇಳ್ಳಿ ರೋಡಿನ ಮೇಲೆ ಬಗದಲ ಬ್ರೀಡ್ಜ್ ಹತ್ತಿರ ತನ್ನ ಎದುರಗಡೆಯಿಂದ ತನ್ನ ಸೈಡಿನಿಂದ ತಾನು ಹೊಗುತ್ತಿರುವ ಟಿವಿಎಸ್ ಮೊಪೇಡ್ ನಂ. ಕೆಎ-38/ಎ.ಜಿ-7127 ನೇದರ ಹಿಂಬದಿಗೆ ಜೋರಾಗಿ ಡಿಕ್ಕಿ ಮಾಡಿ ಒಮ್ಮೇಲೆ ಬ್ರೇಕ್ ಹಾಕಿ ನಂತರ ಕಾರ ಹಿಂದಕ್ಕೆ ಅಂದರೆ ಉಲ್ಟಾ ತಿರುಗಿ ಬಂದು ನಡೆದುಕೊಂಡು ಹೊಗುತ್ತಿದ್ದ ಫಿರ್ಯಾದಿಗೆ ಡಿಕ್ಕಿ ಮಾಡಿ ಫೋಲಿನ ಬಾರ್ಡರ್ ಪಟ್ಟಿಗೆ ಡಿಕ್ಕಿ ಮಾಡಿದಾಗ ಅದರ ಮುಂದಿನ ಟೈರ ಒಡೆದು ಕಾರ ನಿಂತಿರುತ್ತದೆ, ಸದರಿ ರಸ್ತೆ ಅಪಘಾತದಿಂದಾಗಿ ಫಿರ್ಯಾದಿಯ ಎಡಗಾಲಿನ ಕಣ್ಣಿನ ಹತ್ತಿರ ಹರಿದ ರಕ್ತಗಾಯ, ಎಡಗಡೆ ಎದೆಯಲ್ಲಿ ಗುಪ್ತಗಾಯ ಮತ್ತು ಎಡಗಡೆ ಛಪ್ಪೆಯಲ್ಲಿ ಗುಪ್ತಗಾಯವಾಗಿರುತ್ತದೆ ಮತ್ತು ಟಿವಿಎಸ್ ಚಾಲಕನಾದ ಫತ್ರು ಶರೀಫ ಸಾ: ಮರಕುಂದಾ ಇತನು ಜಾಪಳಕಾಯಿ ಇರುವ ಟಿವಿಎಸ್ ರೋಡಿನ ಮೇಲೆ ಬಿದ್ದ ಪ್ರಯುಕ್ತ ಸದರಿ ಫತ್ರುಶರೀಫನಿಗೂ ಸಹ ಅಲ್ಲಲ್ಲಿ ಸಾದಾ ಮತ್ತು ಭಾರಿ ರಕ್ತಗಾಯಗಳಾಗಿರುತ್ತವೆ, ನಂತರ ಹಾದಿ ಹೊಕರು ಕರೆ ಮಾಡಿದ್ದರಿಂದ ಫಿರ್ಯಾದಿಯವರ ಮಾಮನಾದ ಪ್ರಭು ಖಂಡ್ರೆ ಮತ್ತು ತಂದೆ ಚಂದ್ರಪ್ಪಾ, ಅಣ್ಣನಾದ ಆನಂದರ ರವರು ಬಂದು ಒಂದು ಖಾಸಗಿ ವಾಹನದಿಂದ ಬಗದಲ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 65/2020, ಕಲಂ. 379 ಐಪಿಸಿ :-
ದಿನಾಂಕ 24-11-2020 ರಂದು 1900 ಗಂಟೆಯಿಂದ ದಿನಾಂಕ 25-11-2020 ರಂದು 0600 ಗಂಟೆಯ ಮಧ್ಯಾವಧಿಯಲ್ಲಿ ಅಲ್ಲಿಪೂರ ತಾಂಡಾ ಶಿವಾರದ ಅರಣ್ಯ ಪ್ರದೇಶ ಸರ್ವೆ ನಂ. 37 ನೇದರಲ್ಲಿ ಸಸ್ಯ ಕ್ಷೆತ್ರ ಸಸಿಗಳಿಗೆ ನೀರುಣಿಸುಲು ಬಾವಿಗೆ ಅಳವಡಿಸಿದ ಒಂದು 5 ಹೆಚ್.ಪಿ ಡಿಸಲ್ ಇಂಜಿನ ಪಂಪ ಸೇಟ್ ಅ.ಕಿ 8000/- ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-12-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 154/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 17-12-2020 ರಂದು ನಿಟ್ಟೂರ ಗ್ರಾಮದ ಸರ್ಕಾರಿ ಆಸ್ಪತ್ರೆಯ ಎದರುಗಡೆ ಗೇಟ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಕೇಲವು ಜನರು ವ್ಯಕ್ತಿಗಳು 1/- ರೂ. ಗೆ 80/- ರೂ ಕೊಡುತ್ತೆವೆಂದು ಜನರಿಂದ ಹಣ ಪಡೆದು ಚೀಟಿ ಬರೆದುಕೊಟ್ಟು ಮಟಕಾ ಜೂಜಾಟ ನಡೆಸುತ್ತಿದ್ದಾರೆಂದು ಫಿರ್ಯಾದಿ ಸೂರ್ಯಕಾಂತ ಕರಂಜೆ ಪಿಎಸ್ಐ ಧನ್ನೂರ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಆಸ್ಪತ್ರೆಯಿಂದ ಸ್ವಲ್ಪ ದೂರದಿಂದ ಮರೆಯಾಗಿ ನಿಂತು ನೊಡಲು ನಿಟ್ಟೂರ ಸರ್ಕಾರಿ ಆಸ್ಪತ್ರೆಯ ಎದರುಗಡೆ ಗೇಟಿನ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಆರೋಪಿತರಾದ 1) ಗೋವಿಂದ ತಂದೆ ಚಿತ್ತಂಬರ ಬಾನಾ ವಯ: 31 ವರ್ಷ, ಜಾತಿ: ಮರಾಠಾ, 2) ಅಜೀಜ ತಂದೆ ಛೊಟುಮಿಯ್ಯಾ ಶೇಕ್ ವಯ: 27 ವರ್ಷ, ಜಾತಿ: ಮುಸ್ಲಿಂ ಮತ್ತು 3) ಈಶ್ವರ ತಂದೆ ವೇಂಕಟರಾವ ಕಣಜೆಮನೆ ವಯ: 28 ವರ್ಷ, ಜಾತಿ: ಮರಾಠಾ, ಮೂವರು ಸಾ: ನಿಟ್ಟೂರ ಇವರೆಲ್ಲರೂ 1/- ರೂಪಾಯಿಗೆ 80/- ರೂಪಾಯಿ ಕೊಡುತ್ತೆವೆಂದು ಬಾಂಬೆ ಕಲ್ಯಾಣ ಮಟಕಾ ನಡೆಯುತ್ತಿದೆ ಅಂತ ಕೂಗಿ ಕೂಗಿ ಜನರಿಗೆ ಆರ್ಕಷಣೆ ಮಾಡಿ ಜನರಿಗೆ ಕರೆಯುತ್ತಿರುವಾಗ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದು ಪಂಚರ ಸಮಕ್ಷಮ ಅವರೆಲ್ಲರ ಅಂಗ ಜಡ್ತಿ ಮಾಡಿ ಅವರಿಂದ ಮಟಕಾ ನಗದು ಹಣ 3100/- ರೂ., 3 ಮೋಬೈಲಗಳು, 2 ಬಾಲ್ ಪೆನ್ನ, ಮತ್ತು ಮಟಕಾ ನಂಬರ ಬರೆದ 12 ಚೀಟಿಗಳು ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 155/2020, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 17-12-2020 ರಂದು ಬೀದರ-ಭಾಲ್ಕಿ ರಸ್ತೆಯ ಹಲಬರ್ಗಾ ಗ್ರಾಮದ ಇಂಡಿಯನ್ ಧಾಭಾದಲ್ಲಿ ಅನಧಿಕೃತವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾರೆಂದು ಸೂರ್ಯಕಾಂತ ಕರಂಜೆ ಪಿಎಸ್ಐ ಧನ್ನೂರಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಇಂಡಿಯನ್ ಧಾಬಾದಿಂದ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೊಡಲು ಬೀದರ-ಭಾಲ್ಕಿ ರಸ್ತೆಯ ಹಲಬರ್ಗಾ ಗ್ರಾಮದ ಇಂಡಿಯನ್ ಧಾಬಾದ ಕೌಂಟರ ಹತ್ತಿರ ಆರೋಪಿ ಲಖನ ತಂದೆ ಅಶೋಕ ತೆಲಂಗ ವಯ: 28 ವರ್ಷ, ಜಾತಿ: ಇಡಗಾರ, ಸಾ: ಹಲಬರ್ಗಾ ಇತನು ಸಾರಾಯಿಗಳು ಇಟ್ಟುಕೊಂಡು ಊಟ ಮಾಡಲು ಬಂದ ಗೀರಾಕಿಗಳಿಗೆ ಸಾರಾಯಿ ಮಾರಾಟ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಕೌಂಟರದಲ್ಲಿ ಏನಿದೆ ತೊರಿಸಲು ಹೇಳಿದಾಗ ಆತನು ಕೌಂಟರದಲ್ಲಿ ಸಾರಾಯಿ ಇರುತ್ತವೆ ಅಂತ ಹೇಳಿ ಸಾರಾಯಿ ಬಾಟಲಗಳು ತೊರಿಸಿರುತ್ತಾನೆ, ಆಗ ಆತನಿಗೆ ಸಾರಾಯಿ ಮಾರಾಟ ಮಾಡುವ ಮತ್ತು ಸಾಗಾಟ ಮಾಡುವ ಸರ್ಕಾರದಿಂದ ಪಡೆದಿರುವ ಯಾವುದಾದರು ಪರವಾನಿಗೆ ತೊರಿಸಲು ಕೇಳಿದಾಗ ಆತನು ನನ್ನ ಹತ್ತಿರ ಯಾವುದೆ ಪರವಾನಿಗೆ ಪತ್ರ ಇರುವುದಿಲ್ಲ ನಾನು ವಿವಿಧ ವೈನ ಶಾಪಗಳಿಂದ ಕುಡಿಯಲು ಅಂತ ಖರಿದಿ ಮಾಡಿಕೊಂಡು ಬಂದು ಧಾಬಾದಲ್ಲಿ ಉಟ ಮಾಡಲು ಬರುವ ಕಿರಾಕಿಗಳಿಗೆ ಅನಧಿಕೃತವಾಗಿ ಹೆಚ್ಚಿನ ಬೇಲೆಗೆ ಮಾರಾಟ ಮಾಡುತ್ತಿದ್ದೆನೆ ಅಂತ ತಿಳಿಸಿರುತ್ತಾನೆ, ನಂತರ ಪಂಚರ ಸಮಕ್ಷಮ ಅವಮ ಹತ್ತಿರವದ್ದ ಸಾರಾಯಿ ಪರೀಶಿಲಿಸಿ ನೊಡಲು 1) ಯು.ಎಸ್ ವಿಸ್ಕಿ 90 ಎಂ.ಎಲ್ 2 30 ಬಾಟಲಗಳು ಅ.ಕಿ 1120/- ರೂ., 2) ಒಲ್ಡ ಟಾವರ್ನ ವಿಸ್ಕಿ 180 ಎಂಎಲ್ ನ 24 ಟೆಟ್ರಾ ಪಾಕೆಟಗಳು ಅ.ಕಿ 2064/- ರೂ., 3) ಇಂಪೆರಿಯಲ್ ಬ್ಲು 180 ಎಂ.ಎಲ್ ನ 13 ಬಾಟಲಗಳು ಅ.ಕಿ 2574/- ರೂ., 4) ಕಿಂಗಫಿಶರ ಸ್ಟ್ರಾಂಗ್ ಬಿಯರ್ 650 ಎಂ.ಎಲ್ ನ 10 ಬಾಟಲಗಳು ಅ.ಕಿ 1500/- ರೂ., 5) ಮ್ಯಾಕಡಾಲ್ ನಂ. 1 ವಿಸ್ಕಿ 180 ಎಂ.ಎಲ್ ನ 12 ಬಾಟಲಗಳು ಅ.ಕಿ 2376/- ರೂ. ಮತ್ತು 6) ಬ್ಯಾಗಪೈಪರ್ ವಿಸ್ಕಿ 180 ಎಂ.ಎಲ್ ನ 07 ಬಾಟಲಗಳು ಅ.ಕಿ 742/- ರೂ. ಹೀಗೆ ಒಟ್ಟು 10,376/- ರೂಪಾಯಿ ಹಾಗೂ ಒಟ್ಟು 19.28 ಲೀಟರ ಸಾರಾಯಿ ಇರುತ್ತದೆ, ನಂತರ ಸದರಿ ಸರಾಯಿಯನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment