ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 13-03-2021
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 41/2021, ಕಲಂ. 457, 380 ಐಪಿಸಿ :-
ದಿನಾಂಕ 06-03-2021 ರಂದು ಫಿರ್ಯಾದಿ ಅಬ್ದುಲ ಖಶ್ತರ ತಂದೆ ಅಬ್ದುಲ ಸಮಿ ವಯ: 27 ವರ್ಷ, ಜಾತಿ: ಮುಸ್ಲಿಂ, ಸಾ: ಮನೆ ನಂ. 17-1-355 ಹಳೆ ಮೈಲೂರ ಬೀದರ ರವರು ತನ್ನ ಕುಟುಂಬದವರೊಂದಿಗೆ ಮೋದಲನೆಯ ಮಹಡಿಯಲ್ಲಿ ಮಲಗಿರುವಾಗ ದಿನಾಂಕ 07-03-2021 ರಂದು ಅಂದಾಜು 0230 ಗಂಟೆಯಿಂದ 0300 ಗಂಟೆಯ ಅವಧಿಯಲ್ಲಿ ಯಾರೋ ಒಬ್ಬ ಕಳ್ಳ ಮನೆಗೆ ನುಗ್ಗಿ ಮನೆಯ ಎರಡನೆಯ ಮಹಡಿಯಲ್ಲಿರುವ ಬಾಗಿಲಿನ ಕೊಂಡಿ ಮುರಿದು ಕೋಣೆಯಲ್ಲಿಟ್ಟಿದ್ದ ಅಲಮಾರಾದ ಕೀಲಿ ಮುರಿದು ಅದರಲ್ಲಿದ್ದ 1) 40 ಗ್ರಾಂ ಬಂಗಾರದ ಸರ ಅ.ಕಿ. 1,80,000/- ರೂ., 2) 10 ಗ್ರಾಂ ಬಂಗಾರದ ನೆಕ್ಲೇಸ ಅ.ಕಿ 45,000/- ರೂ., 3) 5 ಗ್ರಾಂ ಕಿವಿಯ ಬಾಲಿಗಳು ಅ.ಕಿ 22,500/- ರೂ., 4) 3 ರಿಂಗಗಳು 07 ಗ್ರಾಂ ಅ.ಕಿ 31,500/- ರೂ., 5) 10 ಗ್ರಾಂ ಬಂಗಾರದ ಸರ ಅ.ಕಿ 45,000/-ರೂ. ಮತ್ತು ಕೊಣೆಯಲ್ಲಿದ್ದ 6) 04 ಮೋಬೈಲಗಳು ಅ.ಕಿ 40,000/- ರೂ. ಹಾಗೂ 7) ನಗದು ಹಣ 1000/- ರೂಪಾಯಿ ಹೀಗೆ ಒಟ್ಟು 3,65,000/- ರೂ ಬೇಲೆ ಬಾಳುವ ಬಂಗಾರದ ಒಡವೆಗಳು, ಮೋಬೈಲಗಳು ಮತ್ತು ನಗದು ಹಣ ಕಳವು ಮಾಡಿಕೊಂಡು ಹೊಗಿರುತ್ತಾನೆ, ಕಳವು ಮಾಡಿದ ಮೋಬೈಲಗಳ ಮಾಹಿತಿ 1) ರೇಡಮಿ ಸನಸೇಟ ಐ.ಎಂ.ಇ.ಐ ನಂ. 864161044883077, 864161044883085, 2) ವಿವೋ ಐ.ಎಂ.ಇ.ಐ ನಂ. 868326055992036, 868326055992028, 3) ಓಪ್ಪೋ ಐ.ಎಂ.ಇ.ಐ ನಂ. 862719042480691, 862719042480683 ಹಾಗೂ 4) ಓಪ್ಪೋ ಐ.ಎಂ.ಇ.ಐ ನಂ. 866904043132139, 866904043132121 ಇರುತ್ತವೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 12-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 50/2021, ಕಲಂ. 454, 457, 380 ಐಪಿಸಿ :-
ದಿನಾಂಕ 03-03-2021 ರಂದು 0730 ಗಂಟೆಯಿಂದ ದಿನಾಂಕ 11-03-2021 ರಂದು 1830 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ವಜೀರಪಾಶಾ ತಂದೆ ಉಸ್ಮಾನಸಾಬ ತಲಾಬವಾಲೆ, ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ನಾನಾ ಹಜರತ ದರ್ಗಾ ಹತ್ತಿರ ಚಿಟಗುಪ್ಪಾ, ಸದ್ಯ: ಸೋಲಾಪೂರ ಹತ್ತಿರ ಮಂಗಲವೇಡಾ ರವರು ಮಂಗಲವೇಡಾಗೆ ಹೋದಾಗ ಫಿರ್ಯಾದಿಯವರ ಮನೆಯ ಕೀಲಿ ಹಾಗು ಬೇಡರೂಮಿನ ಕೀಲಿಯನ್ನು ಮುರಿದು ಮನೆಯಲ್ಲಿದ್ದ ಅಲಮಾರಿಯ ಎಡಬಾಗಿಲ ಕೆಲಭಾಗದ ಬಾಗಿಲನ್ನು ಮುರಿದು ಅದರಲ್ಲಿದ್ದ ತನ್ನ ಹೆಂಡತಿಯ 1) 2 ತೊಲೆ ಬಂಗಾದರ ನೆಕ್ಲೆಸ್ ಅ.ಕಿ 80,000/- ರೂ., 2) ಕಿವಿಯಲ್ಲಿನ ಬಂಗಾರದ ಝುಮಕಾಗಳು 12 ಗ್ರಾಮವುಳ್ಳದ್ದು ಅ.ಕಿ 48,000/- ರೂ., 3) 3 ತೊಲೆ 5 ಗ್ರಾಂ ವುಳ್ಳ ಬಂಗಾರದ ಸರ ಅ.ಕಿ 1,40,000/- ರೂ. ಹೀಗೆ ಒಟ್ಟು 67 ಗ್ರಾಂ ಅ.ಕಿ 2,68,000/- ರೂ. ಬೆಲೆಬಾಳುವ ಬಂಗಾರದ ಆಭರಣ ಹಾಗೂ ನಗದು ಹಣ 5000/- ರೂ. ನೇದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 12-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 51/2021, ಕಲಂ. 363 ಐಪಿಸಿ :-
ದಿನಾಂಕ 11-03-2021 ರಂದು 1430 ಗಂಟೆಗೆ ಫಿರ್ಯಾದಿ ಅರವಿಂದ ತಂದೆ ಕೇಶವರಾವ ಜಿಂದೆ ಸಾ: ಭಾಲ್ಕಿ ರವರ ಅಣ್ಣನ ಮಗನಾದ ಅಭಿಷೇಕ 26 ಇತನು ಮನೆಯಿಂದ ಹೊರಗೆ ಹೊಗಿದ್ದು ರಾತ್ರಿಯಾದರು ಮನೆಗೆ ಬರದೆ ಇದ್ದಾಗ ಆತನಿಗೆ ಎಲ್ಲಾ ಕಡೆ ವಿಚಾರಣೆ ಮಾಡಿ ಆತನ ಮೋಬೈಲ ನಂ. 9590009284 ನೇದಕ್ಕೆ ಕರ ಮಾಡಲು ಅದು ಸ್ವಿಚ್ಡ್ ಆಫ್ ಆಗಿರುತ್ತದೆ, ನಂತರ ದಿನಾಂಕ 12-03-2021 ರಂದು ಮುಂಜಾನೆ ಪುನಃ ಅವನಿಗೆ ಹುಡುಕಾಡುತ್ತಾ ಹೊಗುವಾಗ ಮನೆ ಮುಂದೆ ಇರುವ ಶ್ರಿನಾಥ ಹೆಡಾ ಮಾರವಾಡಿ ರವರ ಅಂಗಡಿ ಮುಂದೆ ಅಳವಡಿಸಿದ ಸಿಸಿ ಕ್ಯಾಮೇರಾದಲ್ಲಿ ಅಭಿಷೇಕನಿಗೆ ಮೂರು ಜನ ಕೂಡಿ ಕೈ ಹಿಡಿದುಕೊಂಡು ಹೊಗುವುದನ್ನು ಸೆರೆ ಯಾಗಿದ್ದು ಇರುತ್ತದೆ, ಅಭಿಷೇಕ ಇವನನ್ನು ಯಾರೋ ಮೂರು ಜನ ಅಪರೀಚಿತರು ಯಾವುದೋ ಕಾರಣಕ್ಕಾಗಿ ಅಪಹರಿಸಿಕೊಂಡು ಹೊದಂತೆ ಕಂಡು ಬರುತ್ತದೆ ಅಂತ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 28/2021, ಕಲಂ. ಮಹಿಳೆ ಕಾಣೆ :-
ಫಿರ್ಯಾದಿ ತುಕಾರಾಮ ತಂದೆ ಮಸ್ತಾನ ಬಾಜೇನೋರ ವಯ: 35 ವರ್ಷ, ಜಾತಿ: ಎಸ್.ಸಿ ಮಾದೀಗ, ಸಾ: ಶಮತಾಬಾದ ಗ್ರಾಮ ರವರ ಹೆಂಡತಿ ಉಷಾ ಇವಳು ದಿನಾಂಕ 11-03-2021 ರಂದು 0300 ಗಂಟೆಯ ಸುಮಾರಿಗೆ ಮನೆಯಿಂದ ಯಾರಿಗೂ ಹೇಳದೇ ಕೇಳದೆ ಮನೆಯಿಂದ ಹೋರಟು ಹೊಗಿರುತ್ತಾಳೆ, ಫಿರ್ಯಾದಿ ಮತ್ತು ತಮ್ಮನಾದ ಸಾಗರ, ತಾಯಿ ಸಂಪತಿ, ಸೋದರತ್ತಿ ಗಂಗಮ್ಮ ಎಲ್ಲರೂ ಕೂಡಿ ಎಲ್ಲಾ ಕಡೆ ಹುಡುಕಾಡಿದರೂ ಅವಳು ಕಾಣೆಯಾದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಮತ್ತು ಕಾಣೆಯಾದ ತನ್ನ ಹೆಂಡತಿ ಉಷಾ ಇವಳ ಚಹರೆ ಪಟ್ಟಿ 1) ಹೆಸರು: ಉಷಾ ಗಂಡ ತುಕಾರಾಮ, ವಯ: 30 ವರ್ಷ, 2) ಚಹರೆ: ದುಂಡು ಮುಖ, ಸಾಧಾರಣ ಮೈಕಟ್ಟು, 3) ಭಾಷೆ: ಕನ್ನಡ, ಹಿಂದಿ ಮಾತನಾಡುತ್ತಾಳೆ, 4) ಧರಿಸದ ಬಟ್ಟೆ: ಹಸಿರು ಬಣ್ಣದ ಸೀರೆ, ಕಾವಿ ಬಣ್ಣದ ಬ್ಲೌಸ್, 5) ಕೂದಲು: ಕಪ್ಪು ಬಣ್ಣದ ಕೂದಲು ಬಾಬ ಕಟ್ ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 12-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 22/2021, ಕಲಂ. 279, 337, 338 ಐಪಿಸಿ :-
ದಿನಾಂಕ 12-03-2021 ರಂದು ಫಿರ್ಯಾದಿ ಸುವರ್ಣಾ ಗಂಡ ರಮಾಕಾಂತ ಬಿರಾದಾರ ವಯ: 36 ವರ್ಷ, ಜಾತಿ: ಮರಾಠಾ, ಸಾ: ಸಾವಳಿ, ತಾ: ಕಮಲನಗರ ರವರ ಗಂಡ ರಮಾಕಾಂತ ತಂದೆ ಮದನರಾವ ಬಿರಾದಾರ ವಯ: 38 ವರ್ಷ ರವರು ಹೋಳಸಮುದ್ರಕ್ಕೆ ಹೋಗಿ ಮೇಡಿಕಲನಲ್ಲಿ ಗುಳಿಗೆ ತರುತ್ತೆನೆ ಅಂತಾ ಹೇಳಿ ತನ್ನ ಕಾರ ನಂ. ಎಮ್ ಎಚ್-12/ಕೆ-5066 ನೇದರಲ್ಲಿ ಹೋಗಿ ಮರಳಿ ಬರುವಾಗ ಹೋಳಸಮುದ್ರ - ಸಾವಳಿ ಮಧ್ಯ ತನ್ನ ಕಾರನ್ನು ಅತೀವೇಗ ಹಾಗೂ ನೀಷ್ಕಾಳಜಿಯಿಂದ ಚಲಾಯಿಸಿ ಕಾರನ್ನು ರೋಡಿನ ಉತ್ತರ ಬದಿಯಲ್ಲಿ ತಗ್ಗಿನಲ್ಲಿ ಪಲ್ಟಿ ಮಾಡಿರುತ್ತಾರೆ, ಸದರಿ ಪಲ್ಟಿಯಿಂದ ಅವರ ಎಡಭುಜಕ್ಕೆ ಭಾರಿ ಗುಪ್ತಗಾಯ, ಎಲುಬು ಮುರಿದಿರುತ್ತದೆ, ಕುತ್ತಿಗೆಗೆ, ಎಡಗಾಲ ಪಾದಕ್ಕೆ ತರಚಿದ ರಕ್ತಗಾಯ ಹಾಗೂ ಅಲ್ಲಲ್ಲಿ ಗುಪ್ತಗಾಯವಾಗಿರುತ್ತದೆ, ನಂತರ ಅವರಿಗೆ 112 ಪೊಲೀಸ ಸಹಾಯದಿಂದ ಮೇಲೆ ತೆಗೆದು 112 ವಾಹನದಲ್ಲಿ ಕಮಲನಗರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 13-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment