ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 14-03-2021
ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 13/2021, ಕಲಂ. 457, 380 ಐಪಿಸಿ :-
ದಿನಾಂಕ 12-03-2021 ರಂದು 1700 ಗಂಟೆಯಿಂದ ದಿನಾಂಕ 13-03-2021 ರಂದು 0930 ಗಂಟೆಯ ಮಧ್ಯಾವಧಿಯಲ್ಲಿ ಬೀದರ ನಗರದ ನೂರ ಖಾನ ತಾಲೀಮ ಓಣಿಯ ಮಂಗಲಪೇಟ ಕಮಾನ ಹತ್ತಿರ ಇದ್ದ ಸರಕಾರಿ ಹಿರಿಯ ಪ್ರಾಥಮೀಕ ಉರ್ದು ಶಾಲೆಯಲ್ಲಿನ ಕಂಪ್ಯೂಟರ್ ಮತ್ತು ಇನವರ್ಟರಗೆ ಅಳವಡಿಸಿದ ಅಮರಾನ ಕೌಂಟಾ ಎಸ್.ಎಂ.ಎಫ್ ಕಂಪನಿಯ 6 ಬ್ಯಾಟರಿಗಳು ಅ.ಕಿ 12,000/- ರೂ. ನೇದವುಗಳನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ಎಂ.ಡಿ ಅಬ್ದುಲ್ ಸಲೀಮ ತಂದೆ ಎಂ.ಡಿ ಅಬ್ದುಲ್ ಖಾಲೇಕ್ ವಯ: 55 ವರ್ಷ, ಉ: ಪ್ರಭಾರಿ ಮುಖ್ಯ ಗುರುಗಳು ಸರಕಾರಿ ಹಿರಿಯ ಪ್ರಾಥಮೀಕ ಉರ್ದು ಶಾಲೆ, ಬೀದರ ಸಾ: ಮನೆ ನಂ. 5-3-122 ದುಲ್ಹನ ದರ್ವಾಜಾ ರೋಡ ಬೊರಾ ದಾಲಮಿಲ್ ಎದುರುಗಡೆ ಗೊಲೆಖಾನಾ, ಬೀದರ ರವರು ನೀಡಿದ ದೂರಿನ ಮೇರೆಗೆ ದಿನಾಂಕ 13-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ನೂತನ ನಗರ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 03/2021, ಕಲಂ. 174(ಸಿ) ಸಿ.ಆರ್.ಪಿ.ಸಿ :-
ಫಿರ್ಯಾದಿ ವಿಜಯಕುಮಾರ ತಂದೆ ವಿಶ್ವನಾಥರಾವ ಕಾಂಬಳೆ ವಯ: 52 ವರ್ಷ, ಜಾತಿ: ಸಮಗಾರ, ಸಾ: ರೇನಾ ಗಲ್ಲಿ ಬಸವಕಲ್ಯಾಣ ರವರ ಮಗನಾದ ವಿನಿತ ಈತನು ಬೀದರದಲ್ಲಿನ ಬ್ರಿಮ್ಸನಲ್ಲಿ ಎಮ್.ಬಿ.ಬಿಎಸ್ 4 ನೇ ವರ್ಷದಲ್ಲಿ ವಿದ್ಯಾಬ್ಯಾಸ ಮಾಡಿಕೊಂಡು ಬ್ರಿಮ್ಸನಲ್ಲಿನ ಹಾಸ್ಟೆಲನಲ್ಲಿ ಕೋಣೆ ನಂ. 37 ನೇದರಲ್ಲಿ ವಾಸವಾಗಿರುತ್ತಾನೆ, ಹೀಗಿರುವಾಗ ದಿನಾಂಕ 13-03-2021 ರಂದು ನಸುಕಿನ ಜಾವ ವಿನಿತ ಇತನು ಬ್ಯಾಂಡೇಜ ಮಾಡುವ ಪಟ್ಟಿಯಿಂದ ತನ್ನ ಕೋಣೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ಆತನು ಯಾವ ಕಾರಣಕ್ಕಾಗಿ ನೇಣು ಹಾಕಿಕೊಂಡು ಮೃತಪಟ್ಟಿರುತಾ್ತನೆಂದು ನಿಖರವಾಗಿ ಗೊತ್ತಿರುವುದಿಲ್ಲಾ, ತನ್ನ ಮಗನ ಸಾವಿನಲ್ಲಿ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 07/2021, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 13-03-2021 ರಂದು 1600 ಗಂಟೆಯಿಂದ 1630 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಫಿರ್ಯಾದಿ ಶಿವಾನಂದ ತಂದೆ ಮೈಲಾರಿ ಹೊಳಕುಂದೆ ವಯ: 40 ವರ್ಷ, ಜಾತಿ: ಕುರುಬ, ಸಾ: ಇಸ್ಲಾಂಪೂರ ರವರ ಮಗಳಾದ ಕು. ಅಮೂಲ್ಯ ತಂದೆ ಶಿವಾನಂದ ಹೋಳಕುಂದೆ ವಯ: 14 ವರ್ಷ, ಸಾ: ಇಸ್ಲಾಂಪೂರ ಇಕೆಯು ಹೊಲದಲ್ಲಿ ಓಡಾಡುವಾಗ ಆಕಸ್ಮೀಕವಾಗಿ ಹಾವು ಆಕೆಯ ಕಾಲಿನ ಮೇಲೆ ಕಚ್ಚಿದ್ದರಿಂದ ಆಕೆಯನ್ನು ಚಿಕಿತ್ಸೆ ಕುರಿತು ರಾಜೇಶ್ವರ ಸರಕಾರಿ ಆಸ್ಪತ್ರೆಗೆ ತಂದಾಗ ವೈದ್ಯಾಧಿಕಾರಿಗಳು ನೋಡಿ ಅಮೂಲ್ಯ ಇಕೆಯು ಮೃತಪಟ್ಟಿರುತ್ತಾಳೆಂದು ತಿಳಿಸಿರುತ್ತಾರೆಂ, ತನ್ನ ಮಗಳ ಸಾವಿನಲ್ಲಿ ನನ್ನದು ಯಾರ ಮೇಲೆ ಯಾವುದೇ ತರಹದ ಸಂಶಯ ಅಥವಾ ದೂರು ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 51/2021, ಕಲಂ. 379 ಐಪಿಸಿ :-
ದಿನಾಂಕ 12-03-2021 ರಂದು ರಾತ್ರಿ 2400 ಗಂಟೆಯಿಂದ ದಿನಾಂಕ 13-03-2021 ರಂದು ಮುಂಜಾನೆ 0500 ಗಂಟೆಯ ಮದ್ಯದ ಅವಧಿಯಲ್ಲಿ ಚಿಟಗುಪ್ಪಾ ಪಟ್ಟಣದ ಬಾಲಮ್ಮ ಮಂದಿರ ಹತ್ತಿರ ನಿಲ್ಲಿಸಿದ ಫಿರ್ಯಾದಿ ಅನೀಲರೆಡ್ಡಿ ತಂದೆ ಮಾಣಿಕರೆಡ್ಡಿ ಚೀನಕೇರಾ, ವಯ: 34 ವರ್ಷ, ಜಾತಿ: ರೆಡ್ಡಿ, ಸಾ: ಇಟಗಾ ರವರು ಅಶೋಕ ಲೆಲ್ಯಾಂಡ ಕಂಪನಿಯ ಲಾರಿ ನಂ. ಕೆಎ-39/6335 ಅ.ಕಿ 4,50,000/- ರೂ. ಬೆಲೆಬಾಳುವ ಲಾರಿಯನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment