Police Bhavan Kalaburagi

Police Bhavan Kalaburagi

Thursday, March 18, 2021

BIDAR DISTRICT DAILY CRIME UPDATE 18-03-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 18-03-2021

 

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 23/2021, ಕಲಂ. 379 ಐಪಿಸಿ :-

ದಿನಾಂಕ 09-02-2021 ರಂದು 1645 ಗಂಟೆಗೆ ಫಿರ್ಯಾದಿ ಚಂದ್ರಕಾಂತ ತಂದೆ ಹಾವಪ್ಪಾ ಕುಂದೆ ವಯ: 34 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ನಾಗೋರ (ಎಂ), ತಾ: ಔರಾದ(ಬಿ), ಸದ್ಯ: ನಾವದಗೇರಿ ಬೀದರ ರವರು ತನ್ನ ಸ್ನೇಹಿತ ಪುಟರಾಜು ತಂದೆ ಶಿರೋಮಣಿ ಇಬ್ಬರು ತನ್ನ ಮೊಟಾರ ಸೈಕಲ್ ನಂ. ಕೆಎ-38/ಆರ್-9029 ನೇದರ ಮೇಲೆ ಹೊಸ ಬಟ್ಟೆಗೆ ಕಾಜಾ ಮಾಡಿಸುವ ಕುರಿತು ನಯಾ ಕಮಾನ ಹತ್ತಿರದ ಸಲೀಮ ಕಾಜಾ ಅಂಗಡಿಗೆ ಹೋಗಿ ಅಂಗಡಿಯ ಹತ್ತಿರ ಮೊಟಾರ ಸೈಕಲ್ ನಿಲ್ಲಿಸಿ ಇಬ್ಬರು ಕಾಜಾದ ಅಂಡಿಯಲ್ಲಿ ಹೋಗಿ ಬಟ್ಟೆಗೆ ಕಾಜಾ ಮಾಡಿಸಿಕೊಂಡು 15 ನಿಮಿಷದಲ್ಲಿ ಮರಳಿ ಹೊರಗಡೆ ಬಂದಾಗ ಸದರಿ ಮೊಟಾರ ಸೈಕಲ್ ಇರಲ್ಲಿಲ್ಲಾ, ನಂತರ ಫಿರ್ಯಾದಿಯವರು ಸುತ್ತಾ ಮುತ್ತಾ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ಸದರಿ ಮೊಟಾರ್ ಸೈಕಲ್ ಸಿಕ್ಕಿರುವುದಿಲ್ಲ, ಯಾರೋ ಕಳ್ಳರು ಸದರಿ ವಾಹನದ ಹ್ಯಾಡಲ್ ಲಾಕ್ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ವಾಹನದ ಅ.ಕಿ 35,000/- ರೂ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 25/2021, ಕಲಂ. 379 ಐಪಿಸಿ :-

ದಿನಾಂಕ 05-02-2021 ರಂದು 1500 ಗಂಟೆಗೆ ಫಿರ್ಯಾದಿ ವಿದ್ಯಾಸಾಗರ ತಂದೆ ಗಣಪತರಾವ ಖೂಬಾ ವಯ: 47 ವರ್ಷ, ಜಾತಿ: ಲಿಂಗಾಯತ, ಸಾ: ಜೆ.ಪಿ ನಗರ ಬೀದರ ರವರು ಬೀದರ ನಂದಿ ಕಾಲೋನಿಯಲ್ಲಿರುವ ಪತಂಜಲಿ ಮೆಗಾ ಸ್ಟೋರ  ಎದುರಿಗೆ ತನ್ನ ಟಿ.ವಿ.ಎಸ್ ಎಕ್ಸ್.ಎಲ್ 100 ಮೋಟರ ಸೈಕಲ  ನಂ. KA-38/V-7418 ನೇದನ್ನು ನಿಲ್ಲಿಸಿ ಸ್ಟೋರನಲ್ಲಿ ಹೋಗಿ 1530 ಗಂಟೆಗೆ ಸ್ಟೋರದಿಂದ ಹೊರಗೆ ಬಂದು ನೋಡಿದಾಗ ಸದರಿ ವಾಹನ ಇರಲಿಲ್ಲ, ನಂತರ ಫಿರ್ಯಾದಿಯವರು ತನ್ನ ವಾಹನವನ್ನು ಎಲ್ಲಾ ಕಡೆಗೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ, ಸದರಿ ವಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ವಾಹನದ ವಿವರ 1) ಟಿ.ವಿ.ಎಸ್ ಎಕ್ಸ್.ಎಲ್ 100 ಮೋಟರ ಸೈಕಲ  ನಂ. KA-38/V-7418 2) ಚಾಸಿಸ್ ನಂ. MD621DP18H2447613, 3) ಇಂಜಿನ್ ನಂ. DP1HH2285169, 4) ಮಾಡಲ್: 2017, 5) ಬಣ್ಣ: GREEN ಹಾಗೂ 6) ಅ.ಕಿ 20,000/- ರೂ. ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 11/2021, ಕಲಂ. 279, 337, 338 ಐಪಿಸಿ :-

ದಿನಾಂಕ 17-03-2021 ರಂದು ಫಿರ್ಯಾದಿ ಬಾಬುರಾವ ತಂದೆ ವಿಠಲರಾವ ಭೈರಿ ವಯ: 50 ವರ್ಷ, ಜಾತಿ: ಮರಾಠಾ, ಸಾ: ಉಡುಮನಳ್ಳಿ ರವರು ಮತ್ತು ಸಂತೋಷ ಚೌಕಿ ಹಾಗು ತಮ್ಮ ಸಂಬಂಧಿಕರಾದ ವಾಸಂತಿ ಭಂಡಿಕಾರ, ಶಿಲ್ಪಾ ಸೆಂಡೆ ಹೀಗೆ ನಾಲ್ಕು ಜನರು ಕೂಡಿಕೊಂಡು ಹೈದ್ರಾಬಾದನ ಆಸ್ರಾ ಆಸ್ಪತ್ರೆಯಲ್ಲಿ ತಮ್ಮೂರ ವೈಜಿನಾಥ ಎಂಬುವವರು ಚಿಕಿತ್ಸೆ ಪಡೆಯುತ್ತಿದ್ದರಿಂದ ಮಾತನಾಡಿಕೊಂಡು ಬರಲು ತಮ್ಮ ಕಾರ ನಂ. ಕೆಎ-38/ಎಮ್-6204 ನೇದರಲ್ಲಿ ಕುಳಿತು ಮನೆಯಿಂದ ಬಿಟ್ಟು ಹೈದ್ರಾಬಾದಗೆ ಹೋರಟಿದ್ದು ಸರಿ ಕಾರನ್ನು ಸಂತೋಷ ಚೌಕಿ ಇವನು ಚಲಾಯಿಸುತ್ತಿದ್ದನು, ಉಡಮನಳ್ಳಿ ಬೇಮಳಖೇಡಾ ರೋಡಿನ ಮದ್ಯ ಅಂಬಣ್ಣಾ ಬೇಮಳಖೇಡಾ ರವರ ಹೋಲದ ಹತ್ತಿರ ರೋಡಿನ ಮೇಲೆ ಸಂತೋಷ ಇವನು ಸದರಿ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಬಲಭಾಗದ ಕೇಳಗೆ ಇರುವ ಬೇವಿನ ಮರಕ್ಕೆ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿಯ ಬಲಭಾಗದ ಎದೆಗೆ, ಬೆನ್ನಿನ ಹಿಂದೆ ಗುಪ್ತಗಾಯವಾಗಿರುತ್ತದೆ, ಕಾರಿನ ಹಿಂದೆ ಕುಳಿತ ವಾಸಂತಿ ಇವರಿಗೆ ಬಾಯಿಗೆ, ಎರಡು ತುಟಿಗೆ ಭಾರಿ ರಕ್ತಗಾಯವಾಗಿ 4-5 ಹಲ್ಲುಗಳು ಮುರಿದಿರುತ್ತವೆ, ಬಲ ತೊಡೆಗೆ, ಬಲಗೈಗೆ ಗುಪ್ತಗಾಯವಾಗಿರುತ್ತದೆ ಹಾಗೂ ಶಿಲ್ಪಾರವರ ಮೂಗಿಗೆ, ತುಟಿಗೆ ರಕ್ತಗಾಯ, ಬೆನ್ನಿನ ಎಡಭಾಗಕ್ಕೆ ಗುಪ್ತಗಾಯವಾಗಿರುತ್ತದೆ ಮತ್ತು ಸಂತೋಷ ಕಾರಚಾಲಕ ಇತನಿಗೆ ಎದೆಗೆ ಗುಪ್ತಗಾಯವಾಗಿರುತ್ತದೆ, ನಂತರ ಸುದ್ದಿ ತಿಳಿದು ತಮ್ಮೂರ ರಾಜು ಹಳಸೆ, ನಾಗೆಂದ್ರ ಭಂಡಿಕರ, ವಿನೋದಕುಮಾರ ಸೆಂಡೆರವರು ಸೇರಿಕೊಂಡು ಒಂದು ಖಾಸಗಿ ವಾಹನದಲ್ಲಿ ಗಾಯಗೊಂಡವರಿಗೆ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 54/2021, ಕಲಂ. 457, 380 ಐಪಿಸಿ :-

ಯಾರೋ ಅಪರಿಚಿತ ಕಳ್ಳರು ದಿನಾಂಕ 15-03-2021 ರಂದು 2000 ಗಂಟೆಯಿಂದ ದಿನಾಂಕ 16-03-2021 ರಂದು 0900 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಅಜಯಕುಮಾರ ತಂದೆ ತುಕಾರಾಮ ಭೊಸ್ಲೆ ವಯ: 24 ವರ್ಷ, ಜಾತಿ: ಮರಾಠಾ, ಸಾ: ಭಾಟ ಕಾಲೋನಿ ಭಾಲ್ಕಿ ರವರ ಮತ್ತು ಅಕ್ಕ ಪಕ್ಕದ ಅಂಗಡಿಯ ಮೇಲಿನ ತಗಡಗಳು ಎತ್ತಿ ಅಂಗಡಿಯಲ್ಲಿ ಇಳಿದು ಕೌಂಟರಗಳಲ್ಲಿ ಇಟ್ಟಿದ ನಗದು ಹಣ ಒಟ್ಟು 3100/- ರೂಪಾಯಿ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-03-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: