ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ:
19-03-2021
ಹುಮನಾಬಾದ ಪೊಲೀಸ್ ಠಾನೆ ಅಪರಾಧ ಸಂಖ್ಯೆ 51/2021 ಕಲಂ 420, 468, 471, 504, 506 ಜೊತೆ 149 ಐಪಿಸಿ :-
ದಿನಾಂಕ 18/03/2021 ರಂದು 1145 ಗಂಟೆಗೆ ನ್ಯಾಯಾಲಯ ಕರ್ತವ್ಯದ
ಸಿಪಿಸಿ 1128 ಮಾಣಿಕ ರವರು ಒಂದು ಖಾಸಗಿ ದೂರು ಸಂಖ್ಯೆ 10/2021 ನೇಧ್ದು ತಂದು ಹಾಜರ
ಪಡಿಸಿದ್ದು ಸದರಿ ದೂರಿನ ಸಾರಾಂಶವೆನೆಂದರೆ ಫಿರ್ಯಾದಿ ಶ್ರೀಮತಿ ಜೈಶ್ರೀ ಗಂಡ
ಸುಕೇಶಕುಮಾರ ಇವರಿಗೆ ಹುಮನಾಬಾದ ಪಟ್ಟಣದ ಸರ್ವೇ ನಂ 136/ಕೆ ನೇದ್ದರಲ್ಲಿ
30*40 ಪ್ಲಾಟ
ನೇದ್ದು ಕರ್ನಾಟಕ ರಾಜ್ಯ
ಸರಕಾರಿ ಡಿ ಗ್ರೂಪ ನೌಕರ ಸಂಘ (ರಿ) ಶಾಖೆ ಹುಮನಾಬಾವತಿಯಿಂದ ದಿನಾಂಕ 16/07/1995 ರಂದು ಪತಿ ಅವರ ಹಕ್ಕಂ ಪತ್ರದ ಮೂಲಕ ಹಂಚಿಕೆ ಮಾಡಿದ್ದು
ಇರುತ್ತದೆ. ದಿನಾಂಕ 28/02/2019 ರಂದು ಪತಿ
ಮೃತಪಟ್ಟಿದ್ದು ಇರುತ್ತದೆ. ಆರೋಪಿತರು ಖೂಲ್ಲಾ ನಿವೇಶನದ ಹಕ್ಕ ಪತ್ರವನ್ನು ಖೋಟಾ ಸ್ವರೂಪ
ದಾಖತಿಯನ್ನು ಸೃಷ್ಟಿಸಿ ತನ್ನ ಹೆಸರಿಗೆ ದಿನಾಂಕ 06/09/2019 ರಂದು ಪರಸಭೆಯಲ್ಲಿ ವರ್ಗಾವಣೆ
ಮಾಡಿಕೊಂಡಿರುತ್ತಾನೆ. ಸದರಿ ವರ್ಗವಣೆಗೆ ಸಹಕರಿಸಿದ ಆರೋಪಿ ನಂ 2 ಶಭುಲಿಂಗ ದೇಸಾಯಿ , ಆರೋಪಿ
ಶಿವಕುಮಾರ ಸ್ವಾಮಿ ಹಾಗೂ ಇತರರು ಕೂಡಿ ಸಮಾನ ಉದ್ದೇಶ ಹೊಂದಿ ಖೋಟಾ ಸ್ವರೂಪದ ನಿವೇಶ ಹಕ್ಕು ಪತ್ರ
ಸೃಷ್ಟಿಸಿ ಮೋಸ ಮತ್ತು ವಂಚನೆ ಮಾಢಿ ಅಪರಾಧ ಎಸಗಿರುತ್ತಾರೆ ಅಂತಾ ಇದ್ದು ಖಾಸಗಿ ದೂರಿನ ಸಾರಾಂಶದ
ಮೇರೆಗೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಮುಡಬಿ ಪೊಲೀಸ ಠಾಣೆ ಅಪರಾಧ ಸಂಖ್ಯೆ 17/2021 ಕಲಂ 78(3) ಕೆಪಿ ಕಾಯ್ದೆ ;-
ದಿನಾಂಕ 18-03-2021 ರಂದು 15.00 ಗಂಟೆಗೆ ಪಿಎಸ್ಐ ರವರು
ಠಾಣೆಯಲ್ಲಿದ್ದಾಗ
ಖಚಿತ ಬಾತ್ಮಿ ಬಂದಿದೆನೆಂದರೆ ಮುಡಬಿ ಶಿವಾರದ ಹಾರಕೂಡ ಕ್ರಾಸ್ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ವಿನೋದ ತಂದೆ ತುಕಾರಾಮ ನಾಣಾಪೂರ ಎಂಬುವವನು ಮಟಕಾ ಎಂಬ ನಸೀಬಿನ ಜೂಜಾಟದ ನಂಬರಗಳು
ಬರೆದುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 90 ರೂಪಾಯಿ ಕೊಡುವುದಾಗಿ ಹೇಳಿ ಮಟಕಾ
ಬರೆದುಕೊಳ್ಳುವದು ಮಾಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ
ಮುಡಬಿ
ಕಲಬುರಗಿ ರೋಡಿನ ಪಕ್ಕದಲ್ಲಿ ಹಾರಕೂಡ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ
ಸಾರ್ವಜನಿಕರಿಗೆ ಕೂಗುತ್ತಾ ಮಟಕಾ ನಂಬರಗಳು ಬರೆಯಿಸಿರಿ 01 ರೂಪಯಿಗೆ 90 ರೂಪಾಯಿ ಪಡೆಯಿರಿ ಅಂತ
ಕೂಗಾಡುತ್ತಿದ್ದು ಕಂಡು ನಾನು ಸಿಬ್ಬಂಧಿಯವರೊಂದಿಗೆ ಪಂಚರ ಸಮಕ್ಷಮ 16.30 ಗಂಟೆಗೆ ಸದರಿ ವ್ಯಕ್ತಿಯ
ಮೇಲೆ ದಾಳಿ ಮಾಡಿ ಅವನನ್ನು ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು
ವಿನೋದ ತಂದೆ ತುಕಾರಾಮ ನಾಣಾಪೂರ ವಯಃ 28 ವರ್ಷ ಜಾಃ ಕಬ್ಬಲಿಗಾ ಉಃ ಚಾಲಕ ಸಾ: ರೇಕುಳಗಿ ಸದ್ಯ
ಮುಡಬಿ ಅಂತ ತಿಳಿಸಿದನು. ನಂತರ ನಾನು ಪಂಚರ ಸಮಕ್ಷಮ ಸದರಿ ವ್ಯಕ್ತಿಯ ಅಂಗ ಜಡ್ತಿ ಮಾಡಲು ಅವನ
ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ 2500/- ರೂಪಾಯಿ ನಗದು ಹಣ ಮತ್ತು ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡು
ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಹುಮನಾಬಾದ ಸಂಚಾರ ಪೊಲೀಸ ಠಾಣೆ ಅಪರಾಧ
ಸಂಖ್ಯೆ 30/2021 ಕಲಂ 279,
304(ಎ) ಐಪಿಸಿ ಜೊತೆ 187 ಐಎಮ್.ವಿ. ಕಾಯ್ದೆ :-
ದಿನಾಂಕ: 18/03/2021
ರಂದು 0830 ಗಂಟೆಗೆ ಫಿರ್ಯಾದಿ ಶ್ರೀ ರಾಜಕುಮಾರ ತಂದೆ ಮಡೆಪ್ಪಾ ಕಾಣೆ ವಯ: 31 ವರ್ಷ ಜಾತಿ: ಎಸ್ ಸಿ ಮಾದಿಗ ಉ: ಕೂಲಿ ಕೆಲಸ ಸಾ: ಜನತಾನಗರ ಹುಡಗಿ ತಾ: ಹುಮನಾಬಾದ ರವರು ಖುದ್ದಾಗಿ ಪೊಲೀಸ ಠಾಣೆಗೆ ಹಾಜರಾಗಿ ಲಿಖಿತ ದೂರು
ಸಲ್ಲಿಸಿದರ ಸಾರಾಂಶವೇನೆಂದರೆ ದಿನಾಂಕ: 17/03/2021
ರಂದು ಖಾಸಗಿ ಕೆಲಸದ ಪ್ರಯುಕ್ತ ಜನತಾನಗರದಿಂದ ಹುಮನಾಬಾದಕ್ಕೆ ಬಂದು ಕೆಲಸವನ್ನು ಮುಗಿಸಿಕೊಂಡು ಮರಳಿ ಮನೆಗೆ ಹೋಗುತ್ತಿದ್ದಾಗ ರಾತ್ರಿ 8:00 ಗಂಟೆಯ ಸುಮಾರಿಗೆ ಠಾಕೂರ ಧಾಬಾದ ಹತ್ತಿರ ಹೋದಾಗ ಆ ಕಡೆಯಿಂದ ಒಬ್ಬ ಅಪರಿಚಿತ ವ್ಯಕ್ತಿ ರೋಡ ಡಿವೈಡರ್ ದಾಟಿಕೊಂಡು ಈ ಕಡೆಗೆ ಬರುತ್ತಿದ್ದಾಗ ಅದೇ ಸಮಯಕ್ಕೆ ರಾಷ್ಟ್ರೀಯ ಹೆದ್ದಾರಿ-65. ಸೋಲಾಪುರ - ಹೈದ್ರಾಬಾದ ರೋಡಿನ ಮೇಲೆ ಹಿಂದಿನಿಂದ ಅಂದರೆ ಹುಮನಾಬಾದ ಕಡೆಯಿಂದ ಯಾವುದೋ ಒಂದು ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರೋಡಿನ ಬದಿಯಲ್ಲಿ ಕಾಲ ನಡಿಗೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದು ಅಪಘಾತ ಪಡೆಸಿ ತನ್ನ ವಾಹನವನ್ನು ನಿಲ್ಲಿಸದೇ ವಾಹನ ಸಮೇತ ಹೈದ್ರಾಬಾದ ಕಡೆಗೆ ಓಡಿ ಹೋಗಿರುತ್ತಾನೆ. ನಂತರ ಫಿರ್ಯಾದಿಯು
ತನ್ನ ಮೋಟಾರ್ ಸೈಕಲನ್ನು ನಿಲ್ಲಿಸಿ ಹೋಗಿ ಪಾದಚಾರಿಗೆ ನೋಡಲಾಗಿ ತಲೆಗೆ, ಬಲಗಾಲ ತೋಡೆಗೆ ತೀವ್ರ ಗುಪ್ತಗಾಯ ಮತ್ತು ಬಲಗಾಲ ಪಾದಕ್ಕೆ ಸಾದಾ ರಕ್ತಗಾಯಗಳು ಆಗಿರುತ್ತವೆ. ನಂತರ ಮಾಹಿತಿ ಗೊತ್ತಾಗಿ ಹುಮನಾಬಾದ ಟ್ರಾಫಿಕ್ ಪಿಎಸ್ಐ ರವರು ಮತ್ತು ಹುಮನಾಬಾದ ಸಿಪಿಐ ರವರು ಘಟನೆ ಸ್ಥಳಕ್ಕೆ ಬಂದು ಮೃತ ದೇಹವನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಹೋಗಿರುತ್ತಾರೆ. ವಾಹನ ಮತ್ತು ಅದರ ಚಾಲಕನನ್ನು ನೋಡಿದಲ್ಲಿ ಗುರುತಿಸುತ್ತೇನೆ. ಮೃತ ವ್ಯಕ್ತಿಯ ಬಗ್ಗೆ ನಮ್ಮೂರ ಅಕ್ಕ ಪಕ್ಕದ ಗ್ರಾಮದ ಜನರಿಗೆ ಕೇಳಿ ವಿಚಾರಿಸಿಕೊಂಡು ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ ಅಂತಾ ನೀಡಿದ
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಕೂಶನೂರ ಪೊಲಿಸ್ ಠಾಣೆ ಅಪರಾಧ ಸಂಖ್ಯೆ 20/2021 ಕಲಂ: 78(3) ಕೆ.ಪಿ. ಆಕ್ಟ್ :-
ದಿನಾಂಕ:18/03/2021 ರಂದು ಪಿಎಸ್ಐ ರವರು ಠಾಣೆಯಲ್ಲಿದ್ದಾಗ
1600
ಗಂಟೆಗೆ ಬೆಳಕುಣಿ(ಸಿ) ಗ್ರಾಮದ ಬಸವೇಶ್ವರ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯವರಾದ ಸಿಪಿಸಿ 1826 ಮಲ್ಲಿಕಾರ್ಜುನ್
ಮತ್ತು ಸಿಹೆಸಿ 641 ಮಾಂತಯ್ಯಾ ರವರೊಂದಿಗೆ ಠಾಣೆ ಜೀಪ್ ನಂ. ಕೆಎ 38 ಜಿ-314 ನೇದರಲ್ಲಿ ಕುಳಿತು ಬೆಳಕುಣಿ(ಸಿ) ಗ್ರಾಮದ ಮಗದುಮ್ ರವರ ಪಾನ್ ಶಾಪ್ ಹತ್ತಿರ ಬಂದು ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ನಡೆದುಕೊಂಡು ಹೋಗಿ ನೋಡಲು ಬಸವೇಶ್ವರ ಚೌಕ್ ಹತ್ತಿರ ಇಬ್ಬರು ವ್ಯಕ್ತಿಗಳು ಸಾರ್ವಜನಿಕ ರೋಡಿನ ಮೇಲೆ ನಿಂತುಕೊಂಡು 1 ರೂಪಾಯಿಗೆ 90 ರೂಪಾಯಿ ಕೋಡುತ್ತೇವೆ ಮಟಕಾ ಚೀಟಿ ಬರೆಯಿಸಿರಿ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿದ್ದುದನ್ನು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ 1930 ಗಂಟೆಗೆ ಸದರಿ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಹಿಡಿದುಕೊಂಡಿದ್ದು ಉಳಿದ ಸಾರ್ವಜನಿಕರು ಅಲ್ಲಿಂದ ಓಡಿ ಹೋಗಿರುತ್ತಾರೆ. ಸದರಿಯವರಿಗೆ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಮೊದಲನೆಯವನು ತನ್ನ ಹೆಸರು ಅಲ್ಲಾವುದ್ದಿನ್ ತಂದೆ ಬಾಕರ್ ಅಲಿ ವ: 32 ವರ್ಷ ಉ: ಆಟೋ ಡ್ರೈವರ್ ಜಾ: ಮುಸ್ಲಿಂ ಸಾ: ಬೆಳಕುಣಿ(ಸಿ) ಗ್ರಾಮ ಅಂತ ತಿಳಿಸಿದ್ದು, ಇನ್ನೊಬ್ಬನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಈತ ತನ್ನ ಹೆಸರು ಅಲ್ಲಾವುದ್ದಿನ್ ತಂದೆ ಮೈನೊದ್ದಿನ್ ವ: 31 ವರ್ಷ ಉ: ಕೂಲಿಕೆಲಸ ಜಾ: ಮುಸ್ಲಿಂ ಸಾ: ಬೆಳಕುಣಿ(ಸಿ) ಗ್ರಾಮ ಅಂತ ತಿಳಿಸಿರುತ್ತಾರೆ. ಸದರಿ ವ್ಯಕ್ತಿಗಳಿಗೆ ಅಂಗ ಝಡ್ತಿ ಮಾಡಲಾಗಿ ಅಲ್ಲಾವುದ್ದಿನ್ ತಂದೆ ಬಾಕರ್ ಅಲಿ ಈತನ ಹತ್ತಿರ 100/- ರೂಪಾಯಿ ಮುಖಬೆಲೆಯ 40 ನೋಟುಗಳು ಹಾಗು 50/- ರೂಪಾಯಿ ಮುಖಬೆಲೆಯ 6 ನೋಟುಗಳು ಹೀಗೆ ಒಟ್ಟು 4,300/-ರೂಪಾಯಿಗಳು, ಮತ್ತು ಎರಡು ಅಂಕಿ ಸಂಖ್ಯೆಯುಳ್ಳ ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ದೊರೆತಿರುತ್ತದೆ. ಅಲ್ಲಾವುದ್ದಿನ್ ತಂದೆ ಮೈನೊದ್ದಿನ್ ಈತನ ಹತ್ತಿರ 100/- ರೂಪಾಯಿ ಮುಖಬೆಲೆಯ 22 ನೋಟುಗಳು ಹಾಗು 50/- ರೂಪಾಯಿ ಮುಖಬೆಲೆಯ 16 ನೋಟುಗಳು ಹೀಗೆ ಒಟ್ಟು 3,000/- ರೂಪಾಯಿ ಮತ್ತು ಒಂದು ಅಂಕಿ ಸಂಖ್ಯೆಯುಳ್ಳ ಮಟಕಾ ಚೀಟಿ ಹಾಗು ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡು
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 19/2021 ಕಲಂ
32, 34 ಕೆ.ಇ. ಕಾಯ್ದೆ :-
ದಿನಾಂಕ 18-03-2021
ರಂದು 1900 ಗಂಟೆಗೆ ಸಿದ್ದಲಿಂಗ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಪೆಟ್ರೋಲಿಂಗ ಮಾಡುತ್ತಾ
ನಾಗೂರ(ಎನ್) ಗ್ರಾಮದ ಕಡೆಗೆ ಹೋಗಿದ್ದಾಗ ನಾಗೂರ(ಎನ್) ಗ್ರಾಮದಲ್ಲಿ ಗುರುಲಿಂಗ ಈತನು ತನ್ನ
ಹೊಟೇಲ್ದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದಾನೆ ಎಂದು ಮಾಹಿತಿ ಬಂದ ಮೇರೆಗೆ ಗುರುಲಿಂಗಯ್ಯಾ ರವರ ಹೊಟೇಲ್ ಒಳಗೆ ಜನರು ಹೋಗಿ
ಸಾರಾಯಿ ಖರಿದಿಸಿಕೊಂಡು ಹೋಗುತ್ತಿದ್ದನ್ನು ನೋಡಿ ಖಚೀತ ಪಡಿಸಿಕೊಂಡು 1930 ಗಂಟಗೆ ಪಂಚರ ಸಮಕ್ಷಮ ಪೊಲೀಸ ಸಿಬ್ಬಂದಿಯೊಂದಿಗೆ ಗುರುಲಿಂಗಯ್ಯಾ
ಈತನ ಹೊಟೇಲ್ ಒಳಗೆ ಹೋಗಿ ದಾಳಿ ಮಾಡಿ ಹೊಟೇಲ್ ಒಳಗಡೆ ಚಾರ್ಜರ ಲೈಟಿನ ಬೆಳಕಿನಲ್ಲಿ ನಿಂತಿದ್ದ
ವ್ಯಕ್ತಿಯನ್ನು ಕರೆದು ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಗುರುಲಿಂಗ ತಂದೆ ರೇವಣಯ್ಯಾ ಮಠ ವಯ 28
ವರ್ಷ ಜಾತಿ ಸ್ವಾಮಿ ಉದ್ಯೊಗ ಹೊಟೇಲ್ ಕೆಲಸ ಸಾ: ನಾಗೂರ(ಎನ್)
ಎಂದು ತಿಳಿಸಿದ್ದು ಹೊಟೇಲ್ ಒಳಗೆ ಪರಿಶೀಲಿಸಿ ನೋಡಲು ಒಂದು ನೀಲಿ ಬಣ್ಣದ ಚೀಲದಲ್ಲಿ ಸಾರಾಯಿ
ಪಾಕೇಟಗಳು ಇದ್ದು ಅವುಗಳನ್ನು ಪರೀಶಿಲಿಸಿ
ನೋಡಲು 90 ಎಂ ಎಲ್ ಉಳ್ಳ
ಓರಿಜಿನಲ್ ಚಾಯಿಸ್ ಡಿಲಕ್ಸ ವಿಸ್ಕಿ ಒಟ್ಟು 44 ಟೇಟ್ರಾ
ಪಾಕೇಟಗಳು ಇದ್ದು ಪ್ರತಿಯೊಂದರ ಬೆಲೆ 35.13 ಇದ್ದು
ಒಟ್ಟು 1545.72/-ರೂ ನೇದವು ಜಪ್ತಿ
ಮಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
No comments:
Post a Comment