ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 27-03-2021
ಗಾಂಧಿ ಗಂಜ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 11/2021, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ದಿಲೀಪ ತಂದೆ ದೇವಿದಾಸ ಪಾಟೀಲ್ ವಯ: 53 ವರ್ಷ, ಸಾ: ಚಂದನ ಹಳ್ಳಿ, ಸದ್ಯ: ಕೈಲಾಸ ನಗರ ಬೀದರ ರವರ ಮಗನಾದ ದಿನೇಶ ತಂದೆ ದಿಲೀಪ ಪಾಟೀಲ್ ವಯ: 24 ವರ್ಷ ಇತನು ಬೀದರ ನಗರದ ಶಿವನಗರದಲ್ಲಿರುವ ಜನ ಬ್ಯಾಂಕದಲ್ಲಿ ಲೋನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದನು, ಈಗ 6-7 ತಿಂಗಳ ಹಿಂದೆ ದಿನೇಶ ಇತನಿಗೆ ಬ್ಯಾಂಕನವರು ಲಾಕಡೌನ ನಿಮಿತ್ಯ ಕೆಲಸದಿಂದ ತೆಗೆದಿದ್ದು ಇರುತ್ತದೆ, ಸದ್ಯ ಯಾವುದೇ ಕೆಲಸವಿಲ್ಲದ ಕಾರಣ ಮನನೊಂದು ದಿನೇಶ ಇತನು ದಿನಾಂಕ 26-03-2021 ರಂದು 0900 ಗಂಟೆಯಿಂದ 0930 ಗಂಟೆಯ ಅವಧಿಯಲ್ಲಿ ಬಾಡಿಗೆ ಮನೆಯ ಬೇಡ್ ರೂಂನ ಸಿಲ್ಲಿಂಗ ಫ್ಯಾನಿಗೆ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ಆತನ ಸಾವಿನಲ್ಲಿ ಯಾರ ಮೇಲೆ ಯಾವುದೆ ಸಂಶಯ ಇರುವದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 33/2021, ಕಲಂ. 279, 337, 304(ಎ) ಐ.ಪಿ.ಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 25-03-2021 ರಂದು ಫಿರ್ಯಾದಿ ಸೈಯದ ಹಬೀಬ್ ತಂದೆ ಸೈಯದ ಇಮಾಮ್, ವಯ: 62 ವರ್ಷ, ಜಾತಿ: ಮುಸ್ಲಿಂ, ಸಾ: ಮೈಲೂರ ಬೀದರ ರವರು ತನ್ನ ಮೋಟಾರ ಸೈಕಲ ನಂ. ಕೆಎ-38/ಆರ್-4221 ನೇದರ ಮೇಲೆ ಮುಂದೆ ತನ್ನ ಮಗ ಸೈಯದ ಖಾಜಾ ಪಾಶಾ ತಂದೆ ಸೈಯದ ಹಬೀಬ್ ವಯ: 4 ವರ್ಷ ಇತನಿಗೆ ನಿಲ್ಲಿಸಿಕೊಂಡು ಮೈಲೂರದಿಂದ ತನ್ನ ಮಗಳ ಮನೆಗೆ ಶಹಾಗಂಜಗೆ ಹೋಗಲು ಬಿಜಿ ಸರ್ಕಲದಿಂದ ಮಹಾವೀರ ಸರ್ಕಲ್ ಕಡೆಗೆ ಹೋಗಲು ಅಂಡರ್ ಬ್ರೀಜ್ ದಾಟಿ ಸ್ವಲ್ಪ ಮುಂದೆ ಬಂದಾಗ ಹಿಂದಿನಿಂದ ಅಂದರೆ ಬಿಜಿ ಸರ್ಕಲ್ ಕಡೆಯಿಂದ ಅಪರಿಚಿತ ಮೋಟಾರ ಸೈಕಲ ನೇದರ ಚಾಲಕನಾದ ಆರೋಪಿಯು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿ ತನ್ನ ವಾಹನ ಸಮೇತ ಮಹಾವೀರ ವೃತ್ತದ ಕಡೆಗೆ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ತಲೆಗೆ ರಕ್ತಗಾಯ, ಬಲಭುಜಕ್ಕೆ ಗುಪ್ತಗಾಯ, ಬಲಗೈ ಬೆರಳಿಗೆ ರಕ್ತಗಾಯವಾಗಿರುತ್ತದೆ ಮತ್ತು ಮಗ ಸೈಯದ ಖಾಜಾ ಪಾಶಾ ಇತನ ತಲೆಗೆ ಗುಪ್ತಗಾಯವಾಗಿ, ಬಾಯಿಯಿಂದ ರಕ್ತ ಬಂದಿದ್ದರಿಂದ ಅಲ್ಲೆ ಇದ್ದ ಪರಿಚಿತರಾದ ಮಹಮ್ಮದ ಇಮ್ರಾನ ಇವರು ಗಾಯಗೊಂಡ ಇಬ್ಬರಿಗೂ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಗುರುಪಾದಪ್ಪಾ ನಾಗಮಾರಪಳ್ಳಿ ಆಸ್ಪತ್ರೆಗೆ ತಂದು ದಾಖಲಿಸಿರುತ್ತಾರೆ, ನಂತರ ಮಗನಾದ ಸೈಯದ ಖಾಜಾ ಪಾಶಾ ಇವನಿಗೆ ಬೀದರ ಸರಕಾರಿ ಆಸ್ಪತ್ರೆಗೆ ತಂದಾಗ ವೈದ್ಯಾಧಿಕಾರಿಗಳು ನೋಡಿ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಗೆ ಹೋಗಲು ತಿಳಿಸಿದ ಮೇರೆಗೆ ಹೈದ್ರಾಬಾದಗೆ ಹೋಗಿ ಹೈದ್ರಾಬಾದದಲ್ಲಿ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಮಗ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗಾಂಧಿ ಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 49/2021, ಕಲಂ. ಮನುಷ್ಯ ಕಾಣೆ :-
ಫಿರ್ಯಾದಿ ಜೈಶೀಲಾ ಗಂಡ ಸತೀಷ ಮಾಲೆ ಸಾ: ಗೌಳಿವಾಡಾ ಬೀದರ ರವರ ಗಂಡನಾದ ಸತೀಷ ತಂದೆ ಪುಂಡಲೀಕ ಮಾಲೆ, ವಯ: 50 ವರ್ಷ, ಉ: ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ ಬೀದರನಲ್ಲಿ ಪಿವುನ್ ಕೆಲಸ, ಸಾ: ಗೌಳಿವಾಡಾ, ಬೀದರ ರವರು ದಿನಾಂಕ 18-03-2021 ರಂದು 2200 ಗಂಟೆಗೆ ಮನೆಯಿಂದ ಹೊರಗಡೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದವರು ಇಂದಿನವgೆಗೆ ಮರಳಿ ಮನೆಗೆ ಬಂದಿರುವುದಿಲ್ಲ, ಅವರ ಬಗ್ಗೆ ತಮ್ಮ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ, ಆಪ್ತರಿಗೆ ವಿಚಾರಿಸಲು ಮತ್ತು ಬೀದರ ನಗರ ಹಾಗೂ ಇತರೆ ಕಡೆಗಳಲ್ಲಿ ಹುಡುಕಾಡಲು ಅವರ ಪತ್ತೆ ಆಗಿರುವುದಿಲ್ಲ, ಅವರು ಬೀದರ ನಗರದ ಗೌಳಿವಾಡಾ ಓಣಿಯಿಂದ ಕಾಣೆಯಾಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 12/2021, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 26-03-2021 ರಂದು ಆರೋಪಿ ಸುಭಾಷ ತಂದೆ ಗುಂಡಪ್ಪಾಸೀನಾ ವಯ: 54 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ದೇವರಾಜ ಅರಸ ಕಾಲೋನಿ ಬೀದರ ಇತನು ಬೀದರ ನಗರದ ಪೊಲೀಸ್ ಚೌಕ ಹತ್ತಿರ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುತ್ತಿದ್ದಾನೆಂದು ಕು. ಸಂಗೀತಾ ಪಿ.ಎಸ್.ಐ (ಕಾ.ಸು) ಮಾರ್ಕೆಟ ಪೊಲೀಸ್ ಠಾಣೆ ಬೀದರ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಪಂಚರ ಸಮಕ್ಷಮ ಸಿಬ್ಬಂದಿ ಜೋತೆ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಆರೋಪಿಗೆ ಹಿಡಿದು ಅವನಿಂದ ಮಟಕಾ ಜೂಜಾಟಕ್ಕ ಸಂಬಂಧಿಸಿದ 1) ನಗದು ಹಣ 605/- ರೂ., 2) 3 ಮಟಕಾ ಚೀಟಿಗಳು ಹಾಗೂ 3) ಬಾಲಪೇನ್ ಇವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 22/2021, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 26-03-2021 ರಂದು ಕುಶನೂರ ಗ್ರಾಮದ ಚರ್ಚ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿದ್ದ ಬಗ್ಗೆ ರೇಣುಕಾ ಪಿಎಸ್ಐ ಕುಶನೂರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು,
ಠಾಣೆಯ ಸಿಬ್ಬಂದಿಯವರೊಡನೆ ಕುಶನೂರ ಗ್ರಾಮದ ಅಂಬೇಡ್ಕರ್ ಭವನದ ಹತ್ತಿರ ಹೋಗಿ ನೋಡಲು ಚರ್ಚ ಮುಂದುಗಡೆ ಇರುವ ಕಟ್ಟೆಯ ಮೇಲೆ ಸಾರ್ವಜನಿಕರು ಸೇರಿದ್ದು ಅದರಲ್ಲಿ ಆರೋಪಿತರಾದ 1) ಅಮೀತ್ ತಂದೆ ದಿಲೀಪ ಕಾಂಬಳೆ ವಯ: 29 ವರ್ಷ, ಜಾತಿ: ಮಾಂಗರವಾಡಿ, 2) ಸಂಜುಕುಮಾರ ತಂದೆ ಸಂಗಪ್ಪಾ ಪವಾರ್ ವಯ: 40 ವರ್ಷ, ಇಬ್ಬರು ಸಾ: ಠಾಣಾ ಕುಶನೂರ ಗ್ರಾಮ ಇವರಿಬ್ಬರು
ಒಂದು ರೂಪಾಯಿಗೆ
90/- ರೂಪಾಯಿ ಕೋಡುತ್ತೇವೆ ಮಟಕಾ ಚೀಟಿ ಬರೆಯಿಸಿರಿ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವುದನ್ನು
ನೋಡಿ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಸಿಬ್ಬಂದಿಯವರ ಸಹಾಯದಿಂದ ಹಿಡಿದುಕೊಂಡಾಗ ಉಳಿದ ಸಾರ್ವಜನಿಕರು ಅಲ್ಲಿಂದ ಓಡಿ ಹೋಗಿರುತ್ತಾರೆ, ನಂತರ ಸದರಿ ಆರೋಪಿತರಿಗೆ ಪಂಚರ ಸಮಕ್ಷಮ ಅಂಗ ಝಡ್ತಿ ಮಾಡಲಾಗಿ ಅವರ ಹತ್ತಿರ 3,500/- ನಗದು ಹಣ, ಮಟಕಾ ಚೀಟಿಗಳು ಮತ್ತು ಬಾಲ್ ಪೆನ್ ದೊರೆತಿದ್ದು,
ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
No comments:
Post a Comment