Police Bhavan Kalaburagi

Police Bhavan Kalaburagi

Monday, March 29, 2021

BIDAR DISTRICT DAILY CRIME UPDATE 28-03-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 28-03-2021

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 09/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಲಕ್ಷ್ಮೀ ಗಂಡ ಬಬನ ಜಾಧವ ವಯ: 35 ವರ್ಷ, ಜಾತಿ: ಮರಾಠಾ, ಸಾ: ಚಂಡಕಾಪೂರ ರವರ ಗಂಡನಾದ ಬಬನ ತಂದೆ ಮಾಧವರಾವ ಜಾಧವ ವಯ: 40 ವರ್ಷ ರವರು ತಮ್ಮೂರ ಕೇನರಾ ಬ್ಯಾಂಕಿನಲ್ಲಿ ಪಡೆದ 5,00,000/- ರೂ. ಸಾಲವನ್ನು ಹೇಗೆ ತಿರಿಸಲಿ ಹಾಗೂ ಹೊಲದಲ್ಲಿ ಬೆಳೆ ಕೂಡಾ ಸರಿಯಾಗಿ ಬಂದಿರುವುದಿಲ್ಲಾ ಅಂತಾ ಮನನೊಂದು ದಿನಾಂಕ 27-03-2021 ರಂದು 1430 ಗಂಟೆಯಿಂದ 1500 ಗಂಟೆಯ ಅವಧಿಯಲ್ಲಿ ಮ್ಮ ಮನೆಯಲ್ಲಿರುವ ಫ್ಯಾನಿಗೆ ಓಡನಿಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾರೆ, ತನ್ನ ಗಂಡನ ಸಾವಿನಲ್ಲಿ ನನ್ನದು ಯಾರ ಮೇಲೆ ಯಾವುದೇ ದೂರು ಅಥವಾ ಸಂಶಯ ಇರುವುದಿಲ್ಲಾ ಅಂತಾ ಕೊಟ್ಟ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 60/2021, ಕಲಂ. 498(), 306, 304(ಬಿ) ಜೋತೆ 34 ಐಪಿಸಿ :-

ಫಿರ್ಯಾದಿ ಜಗನ್ನಾಥ ತಂದೆ ಲಕ್ಷ್ಮಣ ಹೇಡಗಾಪುರೆ ವಯ: 50 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಮುಸ್ತಾಪುರ ರವರ ಮಗಳಾದ ಸಂಗೀತಾ ಇವಳಿಗೆ ಈಗ 5 ವರ್ಷಗಳ ಹಿಂದೆ ವಾಗಲಗಾಂವ ಗ್ರಾಮದ ಜ್ಞಾನೇಶ್ವರ ತಂದೆ ಶಿವಾಜಿ ಮಲ್ಲೇಶಿ ಇವನಿಗೆ ಕೊಟ್ಟು ಮದುವೆ ಮಾಡಿದ್ದು ಮದುವೆ ಕಾಲಕ್ಕೆ ವರನಿಗೆ ವರದಕ್ಷೀಣೆಯಾಗಿ ನಗದು 15 ಲಕ್ಷ ರೂಪಾಯಿ ಮತ್ತು 5 ತೋಲೆ ಬಂಗಾರ ಕೊಟ್ಟು ತಮ್ಮ ಸಂಪ್ರದಾಯದ ಪ್ರಕಾರ ತಮ್ಮ ಮನೆಯ ಮುಂದೆ ಮುಸ್ತಾಪುರ ಗ್ರಾಮದಲ್ಲಿ ಮದುವೆ ಮಾಡಿಕೊಟ್ಟಿದ್ದು ಅವಳಿಗೆ 4 ವರ್ಷದ ಪ್ರಜ್ವಲ ಅಂತಾ ಒಬ್ಬ ಗಂಡು ಮಗ ಇರುತ್ತಾನೆ, ಮದುವೆಯಾದ ನಂತರ ಎರಡು ವರ್ಷದವರೆಗೆÀ ಮಗಳ ಗಂಡ, ಅತ್ತೆ, ಮಾವ ಮತ್ತು ನಾದಿಣಿಯರು ಮಗಳ ಜೋತೆ ಸರಿಯಾಗಿದ್ದು, ನಂತರ ಬರ-ಬರುತ್ತಾ ಸಂಗಿತಾ ಇವಳಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದು ಅಲ್ಲದೇ ಅಳಿಯ ಆಶಾ ಎಂಬುವಳೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರಿಂದ ಆಕೆ ಮಾತು ಕೇಳಿ ಸಂಗಿತಾಗೆ ಹೋಡೆ ಬಡೆ ಮಾಡುತ್ತಿದ್ದ ವಿಷಯ ಮಗಳು ಆಗಾಗ ತಿಳಿಸುತ್ತಿದ್ದಳು, ಹೀಗಿರುವಾಗ ದಿನಾಂಕ 27-03-2021 ರಂದು 1400 ಗಂಟೆಗೆ ಭಾಲ್ಕಿಯ ಶಾಹು ನಗರದ ಮನೋಹರ ನಿಟ್ಟೂರೆ ಇವರ ಮನೆಯಲ್ಲಿ ಬಾಡಿಗೆಯಿಂದ ಇರುವ ಶಿಲ್ಪಾ ಗಂಡ ಶಿವಕುಮಾರ ಐನಾಪುರೆ ರವರು ಫಿರ್ಯಾದಿಗೆ ಕರೆ ಮಾಡಿ ನಿಮ್ಮ ಮಗಳು ಮನೆಯಲ್ಲಿ ನೇಣು ಹಾಕಿಕೊಂಡಿರುತ್ತಾಳೆ ಅಂತಾ ತಿಳಿಸಿದ ಕೂಡಲೆ ಫಿರ್ಯಾದಿಯು ತನ್ನ ಅಣ್ಣ ಮಾರುತಿ, ಹೆಂಡತಿ ರುಕ್ಮಿಣಬಾಯಿ ಹಾಗೂ ಇತರರು ಭಾಲ್ಕಿಗೆ ಬಂದು ನೋಡಲು ಮಗಳು ಮನೆಯಲ್ಲಿಕರುವ ಪಲಂಗಿನ ಮೇಲೆ ಖುರ್ಚಿ ಇಟ್ಟು ಅದರ ಮೇಲೆ ನಿಂತು ಫ್ಯಾನಿಗೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಶವ ಜೋತು ಬಿದ್ದಿತು್ತ ಅವಳ ಕಾಲಿಗೆ ಹತ್ತಿ ಖುರ್ಚಿ ಬಿದ್ದಿತ್ತು, ಮಗಳಿಗೆ ಅವಳ ಗಂಡ ಜ್ಞಾನೇಶ್ವರ ತಂದೆ ಶಿವಾಜಿ ಮಲ್ಲೇಶಿ, ಅತ್ತೆ ಕಸ್ತೂರಬಾಯಿ ಗಂಡ ಶಿವಾಜಿ ಮಲ್ಲೇಶಿ, ಮಾವ ಶಿವಾಜಿ ತಂದೆ ಧರ್ಮಣ್ಣಾ ಮಲ್ಲೇಶಿ, ನಾದಿಣಿಯರಾದ ಕವೀತಾಬಾಯಿ ಗಂಡ ಸಂಜೀವಕುಮಾರ, ಸುನೀತಾ ತಂದೆ ಶಿವಾಜಿ ಮಲ್ಲೇಶಿ ರವರು ಸೇರಿ ತವರು ಮನೆಯಿಂದ ಇನ್ನೂ ಬಂಗಾರ ಮತ್ತು ಹಣ ತೆಗೆದುಕೊಂಡು ಅಂತಾ ನೀಡುತ್ತಿದ್ದ ಕಿರುಕುಳ ತಾಳಲಾರದೇ ಹಾಗೂ ತನ್ನ ಗಂಡ ಅನೈತಿಕ ಸಂಬಂಧ ಇಟ್ಟುಕೊಂಡ ಆಶಾ ಇವಳ ಕಿರುಕುಳ ತಾಳಲಾರದೇ ದಿನಾಂಕ 27-03-2021 ರಂದು 1300 ಗಂಟೆಯಿಂದ 1330 ಗಂಟೆ ಅವಧಿಯಲ್ಲಿ ಶಾಹು ನಗರದ ಮನೋಹರ ನಿಟ್ಟೂರೆ ರವರ ಮನೆಯಲ್ಲಿ ಹಗ್ಗದಿಂದ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 16/2021, ಕಲಂ. 279, 338 ಐಪಿಸಿ :-

ದಿನಾಂಕ 27-03-2021 ರಂದು ಫಿರ್ಯಾದಿ ನಾಗರೆಡ್ಡಿ ತಂದೆ ನರಸರೆಡ್ಡಿ ಶಿವರೆಡ್ಡಿ ವಯ: 60 ವರ್ಷ, ಜಾತಿ: ರೆಡ್ಡಿ, ಸಾ: ಮರ್ಜಾಪೂರ (ಎಮ್), ತಾ: ಜಿ: ಬೀದರ ರವರು ತನಗೆ ಆರಾಮ ಇಲ್ಲದ ಕಾರಣ ದಾವಖಾನೆಗೆ ತೋರಿಸಿಕೊಳ್ಳಲು ತನ್ನ ಮೋಟಾರ ಸೈಕಲ ನಂ. ಕೆಎ-38/ಕೆ-2812 ನೇದರ ಮೇಲೆ ಮರ್ಜಾಪೂರದಿಂದ ಕಮಠಾಣಗೆ ಬರುತ್ತಿರುವಾಗ ಮರ್ಜಾಪೂರ ಕ್ರಾಸ್ (ಬೀದರ- ಚಿಂಚೋಳಿ ರಸ್ತೆ) ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಬಗದಲ ಕಡೆಯಿಂದ ಟಾಟಾ ವಿನಗಾರ (ಶಾಲಾ ಬಸ್) ನಂ. ಕೆಎ-38/ಎ-1718 ನೇದರ ಚಾಲಕನಾದ ವಿಜಯಕುಮಾರ ತಂದೆ ಶಿವರಾಜ ಜಮಾದರ, ವಯ: 21 ವರ್ಷ, ಜಾತಿ: ಕೊಳಿ, ಸಾ: ನಾವದಗೇರಿ ಬೀದರ ಇತನು ತನ್ನ ವಾಹನನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ತಲೆಯಲ್ಲಿ ಭಾರಿ ಗುಪ್ತಗಾಯ, ಎರಡು ಮೊಳಕಾಲ ಮೇಲೆ ತರಚಿದ ರಕ್ತಗಾಯ, ಬಲ ಹಿಮ್ಮಡಿಗೆ ತರಚಿದ ಗಾಯ, ಮೂಗಿನ ಮೇಲೆ ತರಚಿದ ರಕ್ತಗಾಯ, ಎಡಗಲ್ಲದ ಮೇಲೆ ರಕ್ತಗಾಯವಾಗಿರುತ್ತದೆ, ಆಗ ಅಲ್ಲಿಂದಲೇ ಹೋಗುತ್ತಿದ್ದ ತಮ್ಮೂರ ರವಿ ತಂದೆ ಶರಣಪ್ಪಾ ರಾಜಗೀರೆ ಮತ್ತು ಶಾಂತಕುಮಾರ ತಂದೆ ಶಂಕರೆಪ್ಪಾ ಬಂಬುಳಗೆ ಮತ್ತು ಆರೋಪಿ ಮೂವರು ಸೇರಿ ಒಂದು ಖಾಸಗಿ ವಾಹನದಲ್ಲಿ  ಕಮಠಾಣಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 60/2021, ಕಲಂ. ಮನುಷ್ಯ ಕಾಣೆ :-

ದಿನಾಂಕ 10-02-2021 ರಂದು 0600 ಗಂಟಗೆ  ಫಿರ್ಯಾದಿ ರಿಟಾ ಗಂಡ ದಶರಥ @ ಇಮಾನುವೇಲ್ ರಟಕಲ್, ವಯ: 24 ವರ್ಷ, ಜಾತಿ: ಕ್ರೀಶ್ಚಿಯನ್, ಸಾ: ಯಶೋನಗರ ಚಿಟಗುಪ್ಪಾ ರವರ ಗಂಡ ಪ್ರತಿನಿತ್ಯದಂತೆ ಚಿಟಗುಪ್ಪಾದ ನಸೀರ ನಾಗಕೇರಾ ರವರ ಹೋಲದಲ್ಲಿ ಕೂಲಿ ಕೆಲಸಕ್ಕೆ ಹೋಗಿ ಕೆಲಸ ಮಾಡಿ 1800 ಗಂಟೆಗೆ ಮನೆಗೆ ಬಂದಿರುತ್ತಾರೆ, ನಂತರ ಚಿಟಗುಪ್ಪಾದ ತುಕಾರಾಮ ಢೋರ ರವರಿಂದ ಗಂಡನು ಬರುವ ಯುಗಾದಿಯಿಂದ ನೌಕರಿ ಮಾಡುತ್ತೇನೆಂದು ಮುಂಗಡ ಹಣ 11,000/- ರೂ. ತಂದಿರುವ ಬಗ್ಗೆ ತಿಳಿಸಿದ್ದು, ಆಗ ಫಿರ್ಯಾದಿಯು ತನ್ನ ಗಂಡನಿಗೆ ಅಷ್ಟೊಂದು ಹಣ ಏಕೆ ತಂದಿದ್ದಿರಿ ಅಂತಾ ಕೇಳಿದ್ದಕ್ಕೆ ಅವರು ನಾನು ದುಡಿದು ತರುವವನಿದ್ದೇನೆ ಅದನ್ನು ಕೇಳಲಿಕ್ಕೆ ನಿನ್ಯಾರು ಅಂತಾ ತಕರಾರು ಮಾಡಿ 2000 ಗಂಟೆಗೆ ಮನೆಯಿಂದ ಹೋಗಿದ್ದು ತಡರಾತ್ರಿಯಾದರೂ ಮನೆಗೆ ಬರದೇ ಇರುವಾಗ ಫಿರ್ಯದಿಯು ತನ್ನ ಗಂಡ ತಕರಾರು ಮಾಡಿಕೊಂಡಿದ್ದರಿಂದ ಅವರು ನೌಕರಿ ಉಳಿದ ಹೋಲದಲ್ಲಿಯೇ ಉಳಿದುಕೊಂಡಿರಬಹುದೆಂದು ಸುಮ್ಮನಾಗಿದ್ದು, ನಂತರ ಮರುದಿನ ಮುಂಜಾನೆ ಮನೆಗೆ ಬರದೇ ಇದ್ದಾಗ ಫಿರ್ಯಾದಿ, ಫಿರ್ಯಾದಿಯ ಅತ್ತೆ, ಫಿರ್ಯಾದಿಯ ತಂದೆ ಯಶೇಪ್ಪಾ, ತಾಯಿ ಶಾಂತಮ್ಮಾ ರವರೆಲ್ಲರೂ ಚಿಟಗುಪ್ಪಾದಲ್ಲಿ ಹುಡಕಾಡಲು ನ್ನ ಗಂಡನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ, ತಮ್ಮ ಸಂಬಂಧಿಕರ ಗ್ರಾಮಗಳಾದ ಕೂಡಂಬಲ, ಕಿಣ್ಣಿಸಡಕ, ಕೋಳಾರ ಕಡೆಗಳೆಲ್ಲ ಕರೆ ಮಾಡಿ ವಿಷಯ ತಿಳಿಸಿ ತಿಳಿದುಕೊಳ್ಳಲು ಗಂಡನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ, ಅವರು ಮನೆಗೆ ಬರದೇ ಕಾಣೆಯಾಗಿರುತ್ತಾರೆ, ಗಂಡನ ಮೋಬೈಲ್ ನಂ. 7338218992 ಇರುತ್ತದೆ, ಅವರ ಚಹರೆ ಪಟ್ಟಿ ಹಾಗು ವಿವರ 1)    ಹೆಸರು: ದಶರಥ @ ಇಮಾನುವೇಲ ತಂದೆ ಶರಣಪ್ಪಾ ರಟಕಲ್, ವಯ: 30 ವರ್ಷ, ಜಾತಿ: ಕ್ರೀಶ್ಚಿಯನ್, ಸಾ: ಯಶೋನಗರ ಚಿಟಗುಪ್ಪಾ, 2) ಎತ್ತರ: 5’ 3’’, 3) ಚಹರೆ ಪಟ್ಟಿ: ಸಾಧಾರಣ ಮೈಕಟ್ಟು & ಕಪ್ಪು ಬಣ್ಣ, 4) ಧರಿಸಿದ ಬಟ್ಟೆಗಳು: ಬಿಳ್ಳಿ ಶರ್ಟ, ಕಪ್ಪು ಪ್ಯಾಂಟ ಹಾಗೂ ಮಾತನಾಡುವ ಭಾಷೆ: ಕನ್ನಡ & ಹಿಂದಿ, ತೆಲಗು ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-03-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: