Police Bhavan Kalaburagi

Police Bhavan Kalaburagi

Wednesday, May 12, 2021

BIDAR DISTRICT DAILY CRIME UPDATE 12-05-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 12-05-2021

 

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ಸಂ. 05/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಮಹ್ಮದ ದಸ್ತಗೀರ ತಂದೆ ಅಹ್ಮದಸಾಬ ಇಮ್ಲಿಝಾಂಡ ವಾಲೆ, ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಫಾತ್ಮಾಪೂರ ರವರ ತಂಗಿಯಾದ ಶೇಮಿನಾಬೇಗಂ ಇವಳು ಮಾನಸೀಕ ಅಸ್ವಸ್ಥಳಿರುತ್ತಾಳೆ, ಹೀಗಿರುವಾಗ ದಿನಾಂಕ 11-05-2021 ರಂದು ಫಿರ್ಯಾದಯವರು ತನ್ನ ಹೆಂಡತಿ ಮಸ್ತಾನಬೀ ಹಾಗೂ ತಂಗಿ ಶೇಮಿನಾಬೇಗಂ ರವರೊಂದಿಗೆ ಹೋಲಕ್ಕೆ ಹೋಗಿ ಹೊಲದಲ್ಲಿ ಕಸಕಡ್ಡಿಯನ್ನು ಆಯ್ದು ಮರಳಿ ನಡೆದುಕೊಂಡು ಮನೆಗೆ ಬರುವಾಗ ಫಿರ್ಯಾದಿ ಹಾಗೂ ಫಿರ್ಯಾದಿಯವರ ಹೆಂಡತಿ ಸ್ವಲ್ಪ ಮುಂದೆ ಬಂದಾಗ ತಂಗಿ ಸ್ವಲ್ಪ ಹಿಂದೆ ಇರುತ್ತಾಳೆ, ಊರಿನ ಕರೆಯ ಹತ್ತಿರ ಐದು ಬೀದಿನಾಯಿಗಳು ಬಂದು ತಂಗಿ ಶೆಮಿನಾಬೇಗಂ ಇವಳಿಗೆ ಕಚ್ಚುತ್ತಿರುವಾಗ ಫಿರ್ಯಾದಿ ತನ್ನ ಹೆಂಡತಿಯೊಂದಿಗೆ ಹೋಗಿ ಹೊಡೆಯುವಷ್ಟರಲ್ಲಿ ತಂಗಿಯ ತಲೆಯ ಹಿಂದೆ ಭಾರಿ ರಕ್ತಗಾಯ ಮತ್ತು ಎಡ & ಬಲಗೈಗಳಿಗೆ ಕಚ್ಚಿದ ರಕ್ತಗಾಯ ಮತ್ತು ಎಡಗಾಲ ತೊಡೆಯಿಂದ ಪಾದದವರೆಗೆ ಕಚ್ಚಿದ ರಕ್ತಗಾಯಗಳಾಗಿರುತ್ತವೆ, ದಾರಿ ಹೋಕರಾದ ಜಗನಾಥ ಗುರಾಣಿ ಮತ್ತು ಸತ್ತಾರಮಿಯ್ಯಾ ಅಲ್ಲೂರ ರವರೆಲ್ಲರೂ ನೋಡಿ ನಾಯಿಗಳನ್ನು ಓಡಿಸಿ ನಂತರ 108 ಅಂಬುಲೇನ್ಸಗೆ  ಕರೆ ಮಾಡಿ ಚಿಕಿತ್ಸೆ ಕುರಿತು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ನೀಡುತ್ತಿರುವಾಗ ಬೀದಿ ನಾಯಿಗಳು ಕಚ್ಚಿದ್ದರಿಂದ ಫಿರ್ಯಾದಿಯವರ ತಂಗಿ ಮೃತಪಟ್ಟಿರುತ್ತಾಳೆ, ಅವಳ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧಸಂ. 46/2021, ಕಲಂ. 279, 337, 338 ಐಪಿಸಿ :-

ದಿನಾಂಕ 08-05-2021 ರಂದು ಫಿರ್ಯಾದಿ ಕರಣ ತಂದೆ ಭಿಕ್ಕುಭಾಯಿ ಮುಕವಾನಾ, ವಯ: 28 ವರ್ಷ, ಜಾತಿ: ರಬ್ಬಾರಿ, ಸಾ: 63 ರಬರಿ ಕೇಡು, ವಡೋದರಾ, ತಾ: ಜಿ: ಪೋರಬಂದರ, ಗುಜರಾತ ರವರು ಮೋರಬೀ ದಿಂದ ಲಾರಿ ನಂ. ಜಿಜೆ-37/ಟಿ-9889 ನೇದರಲ್ಲಿ ಟೈಲ್ಸ್ ಲೋಡ್ ಮಾಡಿಕೊಂಡು ರಾ.ಹೆ ನಂ. 65 ಮುಖಾಂತರವಾಗಿ ಹೈದ್ರಾಬಾದಗೆ ಹೋಗುವಾಗ ಮಹಾರಾಷ್ಟ್ರ ಬಾರ್ಡರ್ ದಾಟಿದ ನಂತರ ದಿನಾಂಕ 11-05-2021 ರಂದು ಚಂಡಕಾಪೂರ ಗ್ರಾಮದ ಸಮೀಪ ಹಿಂದಿನಿಂದ ಕಾರ ನಂ. ಎಮ್.ಹೆಚ್-12/ಎಲ್.ಡಿ-9992 ನೇದರ ಚಾಲಕನಾದ ಆರೋಪಿ ರವನಯ್ಯಾ ಶೆಟ್ಟಿ ತಂದೆ ಉತ್ತಮ ಶೆಟ್ಟಿ ವಯ: 38 ವರ್ಷ, ಜಾತಿ: ಯಾದವ, ಸಾ: ಕೆಶವನಗರ ಪುಣೆ (ಎಮ್.ಎಸ್) ಇತನು ತನ್ನ ಕಾರನ್ನು ಅತಿವೇಗ & ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಲಾರಿಗೆ ಬಲಗಡೆ ಹಿಂಭಾಗ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಆತನ ಹಣೆಗೆ ರಕ್ತಗಾಯವಾಗಿರುತ್ತದೆ ಹಾಗೂ ಸದರಿ ಕಾರಿನಲ್ಲಿ ಇನ್ನು ಇಬ್ಬರು ವ್ಯಕ್ತಿಗಳು ಇದ್ದು ಅದರಲ್ಲಿ ಒಬ್ಬನು ತನ್ನ ಹೆಸರು ನಾರಾಯಣ ತಂದೆ ಚನ್ನಯ್ಯಾ ರಾಗಸಾನಿ ವಯ: 49 ವರ್ಷ, ಸಾ: ಕೆಶವ ನಗರ ಪುಣೆ ಅಂತ ತಿಳಿಸಿದ್ದು ಆತನ ಬಲ ಭುಜಕ್ಕೆ ಗುಪ್ತಗಾಯವಾಗಿರುತ್ತದೆ, ಮತ್ತೊಬ್ಬ ವ್ಯಕ್ತಿಗೆ ವಿಚಾರಿಸಲು ಅವನು ತನ್ನ ಹೆಸರು ತಿರುಪತಯ್ಯಾ ತಂದೆ ಗುರವಯ್ಯಾ ರಾಗಸಾನಿ ವಯ: 48 ವರ್ಷ, ಸಾ: ಕೆಶವನಗರ ಪುಣೆ ಅಂತಾ ತಿಳಿಸಿದ್ದು ಆತನಿಗೆ ಎಡಗಡೆ ಸೊಂಟದಲ್ಲಿ ಭಾರಿ ಗುಪ್ತಗಾಯ, ತಲೆಗೆ ಗುಪ್ತಗಾಯವಾಗಿರುತ್ತದೆ, ಅಷ್ಟರಲ್ಲೆ ಒಂದು ಅಂಬುಲೆನ್ಸ ಬಂದಿದ್ದು ಅದರಲ್ಲಿ ಗಾಯಗೊಂಡ ಮೂವರಿಗೂ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 46/2021, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 11-05-2021 ರಂದು ಫಿರ್ಯಾದಿ ಸಿದ್ದಪ್ಪ ತಂದೆ ಲಕ್ಷ್ಮಣ ಜಾಭಾ ವಯ: 64 ವರ್ಷ, ಸಾ: ಸೀರಕಟನಳ್ಳಿ ರವರು ತನ್ನ ಮಗ ಮೋಹನ ಇಬ್ಬರು ಕಬ್ಬಿಗೆ ನೀರು ಬಿಡಲು ಸೀರಕಟನಳ್ಳಿಯಿಂದ ಮ್ಮ ಹೊಲಕ್ಕೆ ಬಂದಾಗ ಫಿರ್ಯಾದಿಯವರ ತಮ್ಮ ಸಂಬಣ್ಣ ಇತನು ಕೂತನ್ನ ಕಬ್ಬಿಗೆ ನೀರು ಬಿಡುತ್ತಿದ್ದನು, ನಂತರ 2100 ಗಂಟೆಯ ಸುಮಾರಿಗೆ ಸಂಬಣ್ಣ ಇತನು  ನಾನು ತಾಳಮಡಗಿ ಗ್ರಾಮದಲ್ಲಿ ಹೋಗಿ ಚಹಾ ಕುಡಿದು ಬರುತ್ತನೆ ಅಂತಾ ಹೋಗಿ ರಾ.ಹೆ ನಂ. 65 ರೋಡ ದಾಟುತ್ತಿರುವಾಗ ಯಾವುದೋ ಅಪರಿಚಿತ ವಾಹಾನದ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಸಂಬಣ್ಣ ಇತನಿಗೆ ಡಿಕ್ಕಿ ಹೊಡೆದು ಓಡಿ ಹೋಗಿದ್ದು ಇರುತ್ತದೆ, ಸದರಿ ಡಿಕ್ಕಿಯಿಂದ ಸಂಬಣ್ಣ ಇತನ ಎಡ ತಲೆಗೆ ಭಾರಿ ರಕ್ತಗಾಯ, ಎಡ ಮೊಳಕಾಲು ಕೆಳಗೆ ಭಾರಿ ಗುಪ್ತಗಾಯ, ಎಡಣ್ಣಿನ ಹುಬ್ಬಿನ ಮೇಲೆ ಗುಪ್ತಗಾಯ, ಬಲಕಿವಿಯಿಂದ ರಕ್ತಗಾಯ, ಬಲಮೋಳಕಾಲ ಕೆಳಗೆ ರಚಿದ ಗಾಯಗಳಾಗಿದ್ದರಿಂದ ಆತನಿಗೆ ಕೂಡಲೆ ಅಂಬುಲೆನ್ಸ ವಾಹಾನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆ ಮನ್ನಾಎಖೇಳ್ಳಿಗೆ ತಂದು ದಾಖಲು ಮಾಡಿದ್ದು ರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: