Police Bhavan Kalaburagi

Police Bhavan Kalaburagi

Thursday, May 13, 2021

BIDAR DISTRICT DAILY CRIME UPDATE 13-05-2021

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 13-05-2021

 

ಸಿ.ಇ.ಎನ್ ಕ್ರೈಮ್ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 03/2021, ಕಲಂ. 419, 420 ಐಪಿಸಿ ಮತ್ತು 66(ಡಿ) .ಟಿ ಕಾಯ್ದೆ :-

ದಿನಾಂಕ 12-05-2021 ರಂದು ಫಿರ್ಯಾದಿ ಡಾ: ಚಂದ್ರಪ್ರಕಾಶ ತಂದೆ ಶಾಂತಲಿಂಗಪ್ಪಾ ರಗಟೆ ವಯ: 62 ವರ್ಷ, ಸಾ: ಶಿವನಗರ ಬೀದರ ರವರ ಭಾವನವರಾದ ಅಶೋಕ ಪಾಟೀಲ ರವರು ಕೋವಿಡ-19 ರೋಗದಿಂದ ಬಳಲುತ್ತಿದ್ದು ಅವರಿಗೆ ದಿನಾಂಕ 06-05-2021 ರಂದು ಬೀದರ ಬ್ರಿಮ್ಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗಾಗಿ ದಾಖಲಿಸಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 10-05-2021 ರಂದು ಅವರ ಆರೋಗ್ಯ ಸ್ಥಿತಿ ಕಳವಳಕಾರಿಯಾಗಿರುವುದರಿಂದ ಫಿರ್ಯಾದಿಯವರು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಚರ್ಚಿಸಿ ಅವರ ಆರೋಗ್ಯಸ್ಥಿತಿ ಉತ್ತಮಗೊಳಿಸಲು Tocilizumab 400mg 2 Injection ನೀಡಲು ನಿಶ್ಚಯಿಸಿದ್ದು, ನಂತರ ಫಿರ್ಯಾದಿಯವರು ತಮ್ಮ ಹೆಲ್ತ ಕೇರ ಸರ್ವಿಸನಲ್ಲಿದ್ದಾಗ ಸದರಿ ಇಂಜೆಕ್ಷನ್ ಸಲುವಾಗಿ ಇಂಟರನೆಟ್ ನಲ್ಲಿ ಸರ್ಚ ಮಾಡಿ HLL Life care limited Bengaluru ರವರ -ಮೇಲ ಐಡಿ hlllifecarelimited29@gmail.com ನೇದ್ದಕ್ಕೆ 21.05 ಗಂಟೆಗೆ ಕೋರಿಕೆ ಸಲ್ಲಿಸಿದಾಗ ಅವರು ತಮ್ಮ ವಾಟ್ಸಾಪ್ ಸಂ. 8722104580 ನೇದರಿಂದ ಚಾಟ ಮಾಡಿ ರೂಪಾಯಿ 42687/- ಕ್ಕೆ ಒಂದರಂತೆ ಇಂಜೆಕ್ಷನ ಸರಬರಾಜು ಮಾಡುವುದಾಗಿ ತಿಳಿಸಿ, ತಮ್ಮ HLL LIFECARE LIMITED ಹೆಸರಿಗೆ ಇರುವ ಕಾರ್ಪೊರೇಶನ ಬ್ಯಾಂಕ ಖಾತೆ ಸಂ. 520101267402570 IFSC Code CORP0000074 ಶಾಖೆ ಜಯನಗರಗೆ ಒಟ್ಟು 85374/- ರೂ. ಗಳನ್ನು ಸಂದಾಯಿಸಲು ತಿಳಿಸಿ ರೋಗಿಯ ಹೆಸರು ಹಾಗು ವೈದ್ಯರ ಔಷಧಿಯ ಶಿಫಾರಸ್ಸು ಪತ್ರ ಕಳುಹಿಸಲು ತಿಳಿಸಿದರು, ಅದರಂತೆ ಫಿರ್ಯಾದಿಯವರು ದಿನಾಂಕ 11-05-2021 ರಂದು ಅವರಿಗೆ ರೋಗಿಯ ಹೆಸರು ಹಾಗು ವೈದ್ಯರ ಔಷಧಿಯ ಶಿಫಾರಸ್ಸು ಪತ್ರ ವಾಟ್ಸಾಪ್ ಮೂಲಕ ಕಳುಹಿಸಿ ನಂತರ 85,374/- ರೂ. ಗಳನ್ನು ತನ್ನ ಎಸ್.ಬಿ. ನೌಬಾದ ±Áಖೆ ಬೀದರನ ಉಳಿತಾಯ ಖಾತೆ ಸಂ. 62129316699 ನೇದರಿಂದ NEFT/RTGS ಮಾಡಿದ್ದು, (Transaction ID No. SBIN421131571040) ನಂತರ ಅವರೊಂದಿಗೆ ಹಣ ತಲುಪಿದೆಯಾ ಎಂದು ವಾಟ್ಸಾಪ ನಲ್ಲಿ ಕೇಳಿದಾಗ ಅವರ ಅಕೌಂಟೆಂಟನ ತಪ್ಪಿನಿಂದಾಗಿ ಫಲಾನುಭವಿಯ ಹೆಸರು HLL Life care limited ಆಗಿರದೆ ಅದು ಮಿಸ್ ಅನಿಕಾಳಿ ಆಗಿರುತ್ತದೆ, ಆದರೆ ಅಕೌಂಟ ಸಂ. ಬ್ಯಾಂಕ ಎಲ್ಲವು ಮೊದಲಿನಂತೆ ಇರುತ್ತದೆ ಎಂದು ತಿಳಿಸಿದರು, ಅದೆ ಸಮಯದಲ್ಲಿ ಫಿರ್ಯಾದಿಯು ಕಳುಹಿಸಿದ 85,374/- ರೂ. ವಾಪಸ್ಸು ಫಿರ್ಯಾದಿಯವರ ಉಳಿತಾಯ ಖಾತೆಯಲ್ಲಿ ಜಮಾ ಆಗಿರುವ ಸಂದೇಶ ಬಂದಿರುತ್ತದೆ, ತದನಂತರ ಫಿರ್ಯಾದಿಯು ಎಸ್.ಬಿ. ನೌಬಾದ ಶಾಖಾ ವ್ಯವಸ್ಥಾಪಕರಿಗೆ ವಿನಂತಿಸಿಕೊಂಡು ರೋಗಿಯ ಸ್ಥಿತಿ ಕಳವಳಕಾರಿಯಾಗಿರುವುದಿರಂದ Injection Tocilizumab 400mg 2 ಸಂಖ್ಯೆ ಅವಶ್ಯಕತೆ ಇರುವುದರಿಂದ ಪುನ್ಹ ಆರ್.ಟಿ.ಜಿ.ಎಸ್ ಮಾಡಲು ವಿನಂತಿಸಿದಾಗ ಅದರಂತ ದಿನಾಂಕ 11-05-2021 ರಂದು 85374/- ರೂ. ಗಳನ್ನು NEFT/RTGS ಮುಖಾಂತರ ಅನಿ ಕಾಳಿ ಎಂಬುವರ ಹೆಸರಿಗೆ ಇರುವ ಕಾರ್ಪೊರೇಶನ ಬ್ಯಾಂಕ ಖಾತೆ ಸಂ. 520101267402570 IFSC Code CORP0000074 ಶಾಖೆ ಜಯನಗರಗೆ ಒಟ್ಟು 85,374/- ರೂ. ಗಳನ್ನು ಸಚಿದಾಯ ಮಾಡಿದ್ದು ಅದರ Transaction ID No. SBIN421131827620 ಇರುತ್ತದೆ, ನಂತರ ಅವರೊಂದಿಗೆ ಫಿರ್ಯಾದಿಯು ಅವರ ವಾಟ್ಸಾಪ್ ಸಂ. 8722104580 ನೇದಕ್ಕೆ ವಾಟ್ಸಾಪ್ ಚಾಟ ಹಾಗು ಕರೆ ಮಾಡಲು ಅವರು ನಾನು ಡಿಟಿಡಿಸಿ ಕೊರಿಯರನಲ್ಲಿ ಇಂಜೆಕ್ಷನಗಳನ್ನು ಪ್ಯಾಕ ಮಾಡಿ ಕಳುಹಿಸಲು ಕಾಯುತ್ತಿದ್ದೆನೆ ಅಂತ ಹೇಳುತ್ತಾ ಸಮಯ ಹಾಳು ಮಾಡುತ್ತಿದ್ದರು, ಫಿರ್ಯಾದಿಯು ಪುನ್ಹ ಅವರಿಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಲು ಅವರು ಇಲ್ಲಿ ತುಂಬಾ ಮಳೆಯಾಗುತ್ತಿದೆ ಮತ್ತು ಸರ್ವರ Äಂಬಾ ನಿಧಾನವಾಗಿದೆ ಅಂತ ತಿಳಿಸಿ 2146 ಗಂಟೆಗೆ ತನ್ನ ಮೊಬೈಲ ನಂ. 8722104580 ನೇದನು್ನ ಸ್ವಿಚ್ ಆಫ ಮಾಡಿಕೊಂಡಿರುತ್ತಾನೆ, ನಂತರ ಫಿರ್ಯಾದಿಯು ಅವರ ವಾಟ್ಸಾಪ್ ಹಾಗು ಮೇಲಗೆ ಸುಮಾರು ಸಲ ಸಂದೇಶಗಳನ್ನು ಕಳುಹಿಸಿದರು ಅವರಿಂದ ಯಾವುದೆ ಉತ್ತರ ಬಂದಿರುವುದಿಲ್ಲ, ನಂತರ ದಿನಾಂಕ 12-05-2021 ರಂದು 0809 ಗಂಟೆಗೆ ಹಾಗು 1350 ಗಂಟೆಗೆ ವಾಟ್ಸಾಪ್ ಸಂದೇಶ ಕಳುಹಿಸಲು ಯಾವುದೇ ಉತ್ತರ ನೀಡಿರುವುದಿಲ್ಲ ಮತ್ತು ಅವರ -ಮೇಲ ಐಡಿಗೂ ಸಹ ಮೇಲ ಮಾಡಿದರು ಯಾವುದೆ ಉತ್ತರ ನೀಡಿರುವುದಿಲ್ಲ, ಕಾರಣ HLL Life care limited Bengaluru ಕಂಪನಿಯವರು ಅಂತ ಸುಳ್ಳು ಹೇಳಿ Tocilizumab 2 ಇಂಜೆಕ್ಷನ್ ಕಳುಹಿಸಿಕೊಡುತ್ತೇನೆ ಅಂತ ನಂಬಿಸಿ ಅನಿ ಕಾಳಿ ಎಂಬುವವರ ಹೆಸರಿಗೆ ಇದ್ದ ಕಾರ್ಪೊರೇಶನ ಬ್ಯಾಂಕ ಖಾತೆ ಸಂ. 520101267402570 ನೇದಕ್ಕೆ ಒಟ್ಟು 85374/- ರೂ. ಹಣ ಮೋಸದಿಂದ ಹಾಕಿಸಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಖಟಕಚಿಂಚೊಳಿ ಪೊಲೀಸ್ ಠಣೆ ಅಪರಾಧ ಸಂ. 39/2021, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 12-05-2021 ರಂದು ಖಟಕ ಚಿಂಚೋಳಿ ಗ್ರಾಮದ ಬಸವೇಶ್ವರ ವೃತ್ತದ ಹತ್ತಿರದಿಂದ ಹರಿಜನ ಓಣಿಯ ಕಡೆಗೆ ಒಬ್ಬ ವ್ಯಕ್ತಿ ಒಂದು ಪ್ಲಾಸ್ಟೀಕ್ ಚೀಲದಲ್ಲಿ ಅನಧಿಕೃತವಾಗಿ ಸಾರಾಯಿ ಹಾಕಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ತೆಗೆದುಕೊಂಡು ಹೊಗುತ್ತಿದ್ದಾನೆ ಅಂತ ಹುಲೆಪ್ಪ ಪಿ.ಎಸ್.ಐ ಖಟಕ ಚಿಂಚೋಳಿ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೊಗಿ ಒಂದು ಅಂಗಡಿಯ ಮರೆಯಾಗಿ ನಿಂತು ನೊಡಲು ಖಟಕ ಚಿಂಚೋಳಿ ಗ್ರಾಮದ ಬಸವೇಶ್ವರ ವೃತ್ತದ ಹತ್ತಿರ ಇರುವ ಒಂದು ಬೇವಿನ ಮರದ ಕೆಳಗೆ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿ ಲಕ್ಷ್ಮಣ ತಂದೆ ಬಾಬುರಾವ ಮುಡ್ಡರ ವಯ: 30 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಖಟಕ ಚಿಂಚೋಳಿ ಇತನು ಒಂದು ಪ್ಲಾಸ್ಟೀಕ್ ಚೀಲದಲ್ಲಿ ಅನಧಿಕೃತವಾಗಿ ಸಾರಾಯಿ ಮಾರಾಟ ಮಾಡುವ ಉದ್ದೇಶದಿಂದ ತೆಗೆದುಕೊಂಡು ಹೊಗುತ್ತಿರುವುದನ್ನು ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯ ಸಹಾಯದೊಂದಿಗೆ ದಾಳಿ ಮಾಡಿ ಆತನಿಗೆ ಹಿಡಿದುಕೊಂಡು ನಂತರ ಲಕ್ಷ್ಮಣ ಇತನ ಹತ್ತಿರವಿದ್ದ ಒಂದು ಪ್ಲಾಸ್ಟೀಕ್ ಚೀಲವನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೊಡಲು ಅದರಲ್ಲಿ ಯು.ಎಸ್ ವಿಸ್ಕಿ 90 ಎಮ್.ಎಲ್ ನ 92 ಪ್ಲಾಸ್ಟೀಕ್ ಬಾಟಲಿಗಳಿದ್ದು ಅ.ಕಿ 3161.70 ಪೈಸೆ ಇರುತ್ತದೆ, ನಂತರ ಸದರಿ ಆರೋಪಿಗೆ ಈ ಸರಾಯಿ ಎಲ್ಲಿಂದ ಮತ್ತು ಎಲ್ಲಿಗೆ ತೆಗೆದುಕೊಂಡು ಹೊಗುತ್ತಿರುವೆ ಅಂತ ವಿಚಾರಿಸಲು ಆತನು ಸದರಿ ಸರಾಯಿಯನ್ನು ತಮ್ಮ ಓಣಿಯ ಲಕ್ಷ್ಮಿಬಾಯಿ ಗಂಡ ಪ್ರಕಾಶ ಮುಡ್ಡರ ರವರು ನನಗೆ ಹಣ ನೀಡಿ ನಮ್ಮೂರ ಖಟಕ ಚಿಂಚೋಳಿ ಗ್ರಾಮದ ಎಮ್.ಎಸ್.ಐ.ಎಲ್ ವೈನ್ ಶಾಪನಿಂದ ಸರಾಯಿ ಮಾರಾಟ ಮಾಡುವ ಉದ್ದೇಶದಿಂದ ತೆಗೆದುಕೊಂಡು ಬಾ ಅಂತ ತಿಳಿಸಿದ ಮೇರೆಗೆ ನಾನು ನಮ್ಮೂರ ಖಟಕ ಚಿಂಚೋಳಿ ಗ್ರಾಮದ ಎಮ್.ಎಸ್.ಐ.ಎಲ್ ವೈನ್ ಶಾಪನ ರವರಿಂದ ಸರಾಯಿಯನ್ನು ಈ ಪ್ಲಾಸ್ಟೀಕ್ ಚೀಲದಲ್ಲಿ ಹಾಕಿಕೊಂಡು ಹೊಗುತ್ತಿದ್ದೆನೆ ಅಂತ ತಿಳಿಸಿರುತ್ತಾನೆ, ನಂತರ ಆತನಿಗೆ ಈ ಸರಾಯಿ ತೆಗೆದುಕೊಂಡು ಹೋಗಲು ಮತ್ತು ಮಾರಾಟ ಮಾಡಲು ಯಾವುದಾದರೂ ಇಲಾಖೆಯಿಂದ ಅನುಮತಿ ಪಡೆದಿದ್ದಿಯಾ ಅಂತ ವಿಚಾರಿಸಲು ಸದರಿ ವ್ಯಕ್ತಿ ನನ್ನ ಹತ್ತಿರ ಯಾವುದೇ ಅನುಮತಿ ಅಥವಾ ಪರವಾನಗಿ ಇರುವುದಿಲ್ಲ ಅಂತ ತಿಳಿಸಿರುತ್ತಾನೆ, ನಂತರ ಸದರಿ ಆರೋಪಿಯ ಅಂಗ ಝಡ್ತಿ ಮಾಡಿ ನೋಡಲು ಆತನ ಹತ್ತಿರ ಯಾವುದೆ ವಸ್ತುಗಳು ಸಿಕ್ಕಿರುವುದಿಲ್ಲಾ, ನಂತರ ಸದರಿ ಸರಾಯಿ ಪ್ಲಾಸ್ಟೀಕ್ ಬಾಟಲಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿತರಾದ 1) ಲಕ್ಷ್ಮಣ ತಂದೆ ಬಾಬುರಾವ ಮುಡ್ಡರ ಸಾ: ಖಟಕ ಚಿಂಚೋಳಿ, 2) ಲಕ್ಷ್ಮಿಬಾಯಿ ಗಂಡ ಪ್ರಕಾಶ ಮುಡ್ಡರ ಸಾ: ಖಟಕ ಚಿಂಚೋಳಿ ಹಾಗೂ 3) ಎಮ್.ಎಸ್.ಐ.ಎಲ್ ವೈನ್ ಶಾಪನ ಮ್ಯಾನೇಜರ್ ಖಟಕ ಚಿಂಚೋಳಿ ಇವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: