Police Bhavan Kalaburagi

Police Bhavan Kalaburagi

Thursday, August 5, 2021

BIDAR DISTRICT DAILY CRIME UPDATE 05-08-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 05-08-2021

 

ಸಂತಪೂ ಪೊಲೀಸ್ ಠಾಣೆ ಅಪರಾಧ ಸಂ. 56/2021, ಕಲಂ. 279, 337, 338 ಐಪಿಸಿ :-

ದಿನಾಂಕ 04-08-2021 ರಂದು ಫಿರ್ಯಾದಿ ಚಿ ತಂದೆ ಗೌತಮ ಕಾಂಬಳೆ ಸಾ: ಜೊಜನಾ, ತಾ: ಔರಾದ(ಬಿ) ರವರು ತನ್ನ ತಂದೆಯಾದ ಗೌತಮ ತಂದೆ ಲಕ್ಷ್ಮೀಣ ಕಾಂಬಳೆ ಇಬ್ಬರೂ ಮೋಟಾರ ಸೈಕಲ್ ನಂ. ಎಪಿ-28/ಎಬಿ-9734 ನೇದರ ಮೇಲೆ ಜಮಗಿ ಗ್ರಾಮಕ್ಕೆ ಹೋಗುವಾಗ ಸಂತಪುರ ವಡಗಾಂವ ರೋಡಿನ ಮೇಲೆ ಗುಡಪಳ್ಳಿ ಕ್ರಾಸ ದಾಟಿದ ನಂತರ ನಾಗೂರ(ಎನ್) ಗ್ರಾಮದ ಹತ್ತಿರ  ಎದುರಿನಿಂದ ಒಂದು ಮೋಟಾರ ಸೈಕಲ್ ನಂ. ಎಂಎಚ್-14/ಸಿಎಚ್-5732 ನೇದರ ಚಾಲಕನಾದ ಆರೋಪಿ ಮಹಾದೇವ ತಂದೆ ಧನಾಜಿ ತಿರಂಗೆ ಸಾ: ಮುರ್ಕಿ, ತಾ: ಲನಗರ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಮೋಟಾರ ಸೈಕಲಗೆ ಡಿಕ್ಕಿ ಹೊಡೆದಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಗೆ ಎಡಗಾಲ ತೊಡೆಗೆ ಮೂಳೆ ಮುರಿದು ಭಾರಿ ಗುಪ್ತಗಾಯ, ಎಡಗಾಲ ಬೆರಳುಗಳಿಗೆ, ಎಡಗಾಲ ಮೊಣಕಾಲಿಗೆ, ಎಡಗೈ ಮೊಣಕೈಗೆ ರಕ್ತಗಾಯಗಳು ಆಗಿರುತ್ತವೆ ಹಾಗೂ ಫಿರ್ಯಾದಿಯವರ ತಂದೆ ಗೌತಮ ರವರಿಗೆ ಎಡಗಾಲ ಪಾದದ ಮೇಲೆ ಭಾರಿ ರಕ್ತಗಾಯ, ಗಾಲ ಮೊಣಕಾಲ ಕೆಳಗೆ ರಕ್ತಗಾಯ, ಎಡಗೈ ಮೊಣಕೈಗೆ ತರಚಿದ ಗಾಯವಾಗಿರುತ್ತದೆ, ಎಡಗೈ ತೋರಬೆರಳು ಹಾಗೂ ಉಂಗುರು ಬೆರಳುಗಳಿಗೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಆರೋಪಿಗೆ ಎಡಗಾಲ ಮೊಣಕಾಲ ಕೆಳಗೆ ಮೂಳೆ ಮುರಿದು ಭಾರಿ ಗುಪ್ತಗಾಯ, ಎಡಗೈ ಹೆಬ್ಬರಳಿಗೆ, ಅಂಗೈಯಲ್ಲಿ ರಕ್ತಗಾಯ, ಎಡಗಾಲ ಹೆಬ್ಬೆರಳಿಗೆ ರಕ್ತಗಾಯವಾಗಿರುತ್ತದೆ ಹಾಗೂ ಆರೋಪಿಯ ಮೊಟಾರ ಸೈಕಲ್ ಮೇಲೆ ಹಿಂದ ಕುಳಿತು ಬರುತ್ತಿದ್ದ ಶಾಹಜಿ ತಂದೆ ವೆಂಕಟರಾವ ಜಾಧವ ಸಾ: ಮುರ್ಕಿ, ತಾ: ಲನಗರ ಈತನಿಗೆ ಎಡಗಾಲ ಕಿರುಬೆರಳಿಗೆ ರಕ್ತಗಾಯ, ಬಲಗಾಲ ಮೊಣಕಾಲಿಗೆ ತರಚಿದ ಗಾಯವಾಗಿರುತ್ತದೆ, ಆಗ ಮೋಟಾರ ಸೈಕಲ್ ಮೇಲೆ ಬರುತ್ತಿದ್ದ ಜನರು ಘಟನೆಯನ್ನು ನೋಡಿ ಗಾಯಗೊಂಡವರಿಗೆ ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಸಂತಪುರ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದರಿಂದ ಎಲ್ಲರೂ ಸಂತಪೂರ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಕುರಿತು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 139/2021, ಕಲಂ. 457, 380 ಐಪಿಸಿ :-

ದಿನಾಂಕ 03-08-2021 ರಂದು 1930 ಗಂಟೆಯಿಂದ ದಿನಾಂಕ 04-08-2021 ರಮದು 0915 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಸುರೇಶ ತಂದೆ ಮಾಣಿಕಪ್ಪಾ ಭೂರೆ ಜಾತಿ: ಲಿಂಗಾಯತ, ಎಪಿಎಂಸಿ ಅಂಗಡಿ ಸಂ. 196, ಸಾ: ಹಿರೆಮಠ ಗಲ್ಲಿ ಭಾಲ್ಕಿ ರವರ ಅಂಗಡಿಯ ಹಿಂದಿನ ಚನಲ್ ಗೆಟನ ಕಿಲಿ ಮುರಿದು ಹಿಂದಿನ ಬಾಗಿಲು ಕೊಂಡಿ ಮುರಿದು ಅಂಗಡಿಯಲ್ಲಿದ್ದ 13 ತೊಗರಿ ತುಂಬಿದ ಚೀಲಗಳು ಅ.ಕಿ 83,200/- ರೂ. ನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 140/2021, ಕಲಂ. 379 ಐಪಿಸಿ :-

ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಫಿರ್ಯಾದಿ ಗಿರಿಧರ ತಂದೆ ವಿಠಲ ರಾವ್ ಬಿರಾದರ ಸಾ: ತೆಲಗಾಂವ, ಸದ್ಯ: ಬಾಲಾಜಿ ನಗರ ಭಾಲ್ಕಿ ರವರು ತನ್ನ ಹಿರೋ ಹೊಂಡಾ ಮೋಟಾರ್ ಸೈಕಲ್ ನಂ. ಕೆಎ-39/ಜೆ-7275, ಚಾಸಿಸ್ ನಂ. MBLHA10EZAHL38112, ಇಂಜಿನ್ ನಂ. HA10EFAHL33269 ಹಾಗೂ ಅ.ಕಿ 25,000/- ರೂ. ನೇದನ್ನು ಬಾಲಾಜಿ ನಗರದಲ್ಲಿರುವ ತನ್ನ ಮನೆಯ ಮುಂದೆ ನಿಲ್ಲಿಸಿರುವುದನ್ನು ದಿನಾಂಕ 03-08-2021 ರಂದು 2225 ಗಂಟೆಯಿಂದ ದಿನಾಂಕ 04-08-2021 0600 ಗಂಟೆಯ ಮಧ್ಯಾವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: