ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 06-08-2021
ಕುಶನೂರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 09/2021, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಹಣಮಂತರಾವ ತಂದ ಶಂಕರರಾವ ಗಾದಗೆ ವಯ 48 ವರ್ಷ, ಜಾತಿ: ಮರಾಠಾ, ಸಾ: ರಕ್ಷಾಳ (ಕೆ) ರವರ ತಂದೆ ಶಂಕರರಾವ ವಯ: 70 ವರ್ಷ ರವರು ಜಮಿನಿನಲ್ಲಿ ಬೀಜ ಬಿತ್ತನೆ ಹಾಗೂ ಗೊಬ್ಬರದ ಖರೀದಿಗಾಗಿ ಪಿ.ಕೆ.ಪಿ.ಎಸ್ ಬ್ಯಾಂಕ್ ಠಾಣಾ ಕುಶನೂರದಲ್ಲಿ 50,000/- ರೂ. ಸಾಲ ಮಾಡಿರುತ್ತಾರೆ ಹಾಗೂ ಪರಿಚಯದವರರಿಂದ ಮತ್ತು ಖಾಸಗಿ ಜನರಿಂದ ಕೈ ಸಾಲ ಮಾಡಿರುತ್ತಾರೆ, ಇಗ ಈ ವರ್ಷದಲ್ಲಿ ಜಮಿನಿನಲ್ಲಿ ಬಿತ್ತನೆ ಮಾಡಿದ್ದು ಇತ್ತಿಚೇಗೆ ಭಾರಿ ಮಳೆ ಆಗಿದ್ದರಿಂದ ಜಮೀನು ಚೌವಾಳಿ ಹಿಡಿದು ಬೇಳೆಗಳು ಒಣಗಿರುತ್ತವೆ, ತಂದೆಯವರು ಜಮೀನಿನಲ್ಲಿ ನೀರು ನಿಂತು ಚೌಳಿ ಹಿಡಿದು ಬೆಳೆ ಒಣಗಿರುವುದರಿಂದ ಸಾಲ ಹೀಗೆ ತಿರಿಸಬೇಕೆಂದು ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 05-08-2021 ರಂದು ಹೊಲಕಕೆ ಹೋಗಿ ಈಔಖಿIS ಹೆಸರಿನ ವಿಷದ ಕುಡಿದ ಪ್ರಯುಕ್ತ ಅವರಿಗೆ ಕೂಡಲೇ ಸಂತಪೂರ ಸರಕಾರಿ ಆಸ್ಪತ್ರೆಗೆ ತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ದಾರಿಮದ್ಯ ಫಿರ್ಯಾದಿಯವರ ತಂದೆಯವರು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ (ರೈತ ಆತ್ಮಹತ್ಯ) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಸಂಚಾರ ಪೊಲೀಸ ಠಾಣೆ ಅಪರಾಧ ಸಂ. 70/2021, ಕಲಂ. 279, 304 (ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 05-08-2021 ರಂದು ಫಿರ್ಯಾದಿ ಮಾಣಿಕ ತಂದೆ ಬಸವರಾಜ ಮೋಳಕೇರಿ ಸಾ: ಗಡವಂತಿ ಗ್ರಾಮ, ತಾ: ಹುಮನಾಬಾದ ರವರ ಹೆಂಡತಿಯ ತಮ್ಮ ಆಕಾಶ ತಂದೆ ನಾಗಪ್ಪಾ ಕಣಜೆ ವಯ: 24 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ರಾಜೋಳಾ ಇತನು ರಾಜೋಳಾ ಗ್ರಾಮದಿಂದ ಘೋಡವಾಡಿ ಗ್ರಾಮಕ್ಕೆ ಶಿವಾರೆಡ್ಡಿ ತಂದೆ ಗುಂಡಾ ರೆಡ್ಡಿ ರವರ ಕಾರ್ಯಕ್ರಮಕ್ಕೆ ಹೋಗಲು ತಮ್ಮೂರ ಪ್ರಶಾಂತ ತಂದೆ ತುಕ್ಕಾರಡ್ಡಿ ರವರ ಟ್ಯಾಕ್ಟರ್ ನಂ. ಕೆಎ-56/ಟಿ-0538 ಮತ್ತು ಟ್ರಾಲಿ ನಂ. ಕೆ.ಎ-56/0539 ನೇದರಲ್ಲಿ ಹೋಗುವಾಗ ರಾಜೋಳ- ಘಾಟಬೋರಾಳ ರೋಡಿನ ಮೇಲೆ ಘಾಟಬೋರಾಳ ಶಿವಾರದ ಶ್ರೀಮಂತ ರೆಡ್ಡಿ ರವರ ಹೋಲದ ಹತ್ತಿರ ಪ್ರಶಾಂತ ಇತನು ತನ್ನ ಟ್ರಾಕ್ಟರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುವಾಗ ಟ್ರಾಲಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಆಕಾಶ ತಂದೆ ನಾಗಪ್ಪಾ ಈತನು ಟ್ರಾಕ್ಟರ ಟ್ರಾಲಿಯಿಂದ ರೋಡಿನ ಮೇಲೆ ತಲೆ ಕೆಳಗೆ ಮಾಡಿ ಬಿದ್ದ ಪ್ರಯುಕ್ತ ಆತನ ತಲೆಗೆ ಭಾರಿ ರಕ್ತಗಾಯ, ಎಡಗಣ್ಣಿನ ಕೆಳಗಡೆ ಭಾರಿ ರಕ್ತಗಾಯ ಹಾಗೂ ಎಡಕಿವಿಯಿದ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಚಾಲಕ ಪ್ರಶಾಂತ ಈತನು ಟ್ರಾಕ್ಟರ ಸ್ಥಳದಲ್ಲಿಯೇ ನಿಲ್ಲಿಸದೇ ಟ್ರಾಕ್ಟರ ಸಮೇತ ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯದಿಯವರ ಮೌಖಿಕ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 142/2021, ಕಲಂ. 457, 380 ಐಪಿಸಿ :-
ದಿನಾಂಕ 04-08-2021 ರಂದು 1900 ಗಂಟೆಯಿಂದ ದಿನಾಂಕ 05-08-2021 ರಂದು 0800 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿ ಶೋಭಾ ಗಂಡ ಮಾಧವರಾವ ಗೊರನಾಳೆ ವಯ: 45 ವರ್ಷ, ಜಾತಿ: ಮರಾಠಾ, ಸಾ: ತಪಶ್ಯಾಳ, ತಾ: ಔರಾದ, ಸದ್ಯ: ಭಾಟ ನಗರ ಭಾಲ್ಕಿ ರವರ ಮನೆಯ ಬಾಗಿಲಿನ ಕೀಲಿ ಮುರಿದ್ದು ಮನೆಯಲ್ಲಿ ಪ್ರವೇಶ ಮಾಡಿ ಮನೆಯ ಕೋಣೆಯ ನೆಂಟಲಿನ ಮೇಲೆ ಸ್ಟೀಲ ಡಬ್ಬಿಯಲ್ಲಿಟ್ಟಿರುವ 1) 7 ಗ್ರಾಂ. ಬಂಗಾರದ ಒಂದು ಜೊತೆ ಹೂ ಮತ್ತು ಝುಮಕಾ ಅ.ಕಿ 34,580/- ರೂ., 2) ಒಂದು ಗ್ರಾಂ. ಬಂಗಾರದ ಎರಡು ಕಿವಿಯಲ್ಲಿನ ಹೂವಗಳು ಅ.ಕಿ 4,900/- ರೂ., 3) 10 ಗ್ರಾಂ. ಬಂಗಾರದ ಒಂದು ಗುಂಡಿನ ಸರಾ ಅ.ಕಿ 49,400/- ರೂ., 4) 5 ಗ್ರಾಂ. ಬಂಗಾರದ 2 ಝುಮಕಾಗಳು ಅ.ಕಿ 24,700/- ರೂ. ಹೀಗೆ ಎಲ್ಲಾ ಸೇರಿ ಒಟ್ಟು 1,13,580/- ಬೆಲೆ ಬಾಳುವ ವಡವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 52/2021, ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ ಮತ್ತು ಕಲಂ. 273 ಐಪಿಸಿ :-
ದಿನಾಂಕ 05-08-2021 ರಂದು ಜಹಿರಾಬಾದ ಕಡೆಯಿಂದ ಒಂದು ಕಾರಿನಲ್ಲಿ ಅನಧಿಕೃತವಾಗಿ ಸೆಂಧಿ ಸಾಗಿಸುತ್ತಿರುವ ಬಗ್ಗೆ ಶಿವಪ್ಪ ಮೇಟಿ ಪಿ.ಎಸ್.ಐ (ಕಾ.ಸು) ಮಾರ್ಕೆಟ ಪೊಲೀಸ್ ಠಾಣೆ, ಬೀದರ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂqÀÄ, ತಮ್ಮ ಸಿಬ್ಬಂದಿವಯರೊಡನೆ ಬೀದರ ನಗರದ ಶಾಹಪುರ ಗೇಟ ಬಸ್ಸ ನಿಲ್ದಾಣದ ಹತ್ತಿರ ಹೋಗಿ ದಾರಿ ಕಾಯುವಾಗ ಜಹಿರಾಬಾದ ಕಡೆಯಿಂದ ಒಂದು ಬಿಳಿ ಬಣ್ಣದ ಮಾರುತಿ ಇರಟಿಗಾ ಕಾರ ನಂ. ಎಂ.ಹೆಚ್-12/ಕೆ.ವಾಯೆ-7831 ನೇದು ಬರುವದನ್ನು ನೋಡಿ ಸದರಿ ಕಾರನ್ನು ನಿಲ್ಲಿಸಿ ಕಾರಿನಲ್ಲಿದ್ದ ವ್ಯಕ್ತಿಗಳ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ 1) ಸಂಬಾಜಿ ತಂದೆ ಭೀವಾಜಿ ಕಾಂಬಳೆ ವಯ: 45 ವರ್ಷ, ಜಾತಿ: ಮಾಂಗರವಾಡಿ, ಸಾ: ಗಾಂಧಿ ನಗರ ಉದಗೀರ, ಜಿ: ಲಾತೂರ, 2) ರಾಜಕುಮಾgÀ ತಂದೆ ಮರೆಪ್ಪಾ ಕಿವುಂಡೆ ವಯ: 50 ವರ್ಷ, ಜಾತಿ: ಎಸ್.ಸಿ, ಸಾ: ಗಾಂಧಿ ನಗರ ಉದಗೀರ, 3) ತಾನಾಜಿ ತಂದೆ ಬಾಲಾಜಿ ಮಾನೆ ವಯ: 21 ವರ್ಷ, ಜಾತಿ: ಕೈಕಾಡಿ, ಸಾ: ದೇವರ್ಜನ ಗ್ರಾಮ, ತಾ: ಉದಗೀರ, ಜಿ: ಲಾತೂರ, 4) ವಸಂತಾಬಾಯಿ ಗಂಡ ಅಂಕುಶ ಉಪಾಧ್ಯಾಯ ವಯ: 45 ವರ್ಷ, ಜಾತಿ: ಮಾಂಗರವಾಡಿ, ಸಾ: ರೈಲ್ವೆ ನಿಲ್ದಾಣದ ಹತ್ತಿರ ಗೋಪಾಳ ನಗರ ಉದಗೀರ ಹಾಗೂ 5) ಛಾಯಾಬಾಯಿ ಗಂಡ ನಿವರ್ತಿ ಕಸಬೆ ವಯ: 50 ವರ್ಷ, ಜಾತಿ: ಮಾಂಗರವಾಡಿ, ಸಾ: ಗಾಂಧಿ ನಗರ ಉದಗೀರ ಅಂತಾ ತಿಳಿಸಿರುತ್ತಾರೆ, ನಂತರ ಪಿಎಸ್ಐ ರವರು ಪಂಚರ ಸಮಕ್ಷಮ ಸದರಿ ಕಾರಿನಲ್ಲಿ ಪರಿಶೀಲಿಸಿ ನೋಡಲಾಗಿ ಅದರಲ್ಲಿ ಪ್ಲಾಸ್ಟಿಕ ಕ್ಯಾನಗಳು ಹಾಗೂ ಪ್ಲಾಸ್ಟಿಕ ಬಾಟಲಗಳು ಇದ್ದು ಇವುಗಳಲ್ಲಿ ಏನಿದೆ ಎಂದು ವಿಚಾರಿಸಲಾಗಿ ಇದರಲ್ಲಿ ಸೆಂಧಿ ಇರುತ್ತದೆ ಅಂತಾ ತಿಳಿಸಿರುತ್ತಾರೆ, ನಂತರ ಪ್ಲಾಸ್ಟಿಕ ಕ್ಯಾನಗಳು ಮತ್ತು ಪ್ಲಾಸ್ಟಿಕ ಬಾಟಲಗಳು ಕಾರಿನಿಂದ ಕೆಳಗೆ ತೆಗೆದು ಪರಿಶೀಲಿಸಲಾಗಿ 1) 20 ಲೀಟರಿನ ನಾಲ್ಕು ಬಿಳಿ ಪ್ಲಾಸ್ಟಿಕ ಕ್ಯಾನಗಳಲ್ಲಿ ಪ್ರತಿ ಕ್ಯಾನಿನಲ್ಲಿ 20 ಲೀಟರನಂತೆ ಒಟ್ಟು 80 ಲೀಟರ ಸೆಂಧಿ, 2) 10 ಲೀಟರಿನ ನಾಲ್ಕು ಬಿಳಿ ಪ್ಲಾಸ್ಟಿಕ ಕ್ಯಾನಗಳಲ್ಲಿ ಪ್ರತಿ ಕ್ಯಾನಿನಲ್ಲಿ 10 ಲೀಟರನಂತೆ 40 ಲೀಟರ ಸೆಂಧಿ, 3) 5 ಲೀಟರಿನ ಒಂದು ಕ್ಯಾನಿನಲ್ಲಿ 5 ಲೀಟರ ಸೆಂಧಿ, 4) ಒಂದು ಕ್ಯಾರಿ ಬ್ಯಾಗದಲ್ಲಿ 5 ಲೀಟರ ಸೆಂಧಿ, 5) 2 ಲೀಟರಿನ 9 ಬಾಟಲಗಳಲ್ಲಿ ಪ್ರತಿ ಬಾಟಲನಲ್ಲಿ 2 ಲೀಟರನಂತೆ 18 ಲೀಟರ ಸೆಂಧಿ, 6) ಒಂದು ಲೀಟರಿನ 7 ಬಾಟಲಗಳಲ್ಲಿ ಪ್ರತಿ ಬಾಟಲಿನಲ್ಲಿ ಒಂದು ಲೀಟರನಂತೆ 7 ಲೀಟರ ಸೇಂಧಿ ಇರುತ್ತದೆ, ಹೀಗೆ ಒಟ್ಟು 155 ಲೀಟರ ಸೆಂಧಿ ಇದ್ದು ಒಟ್ಟು ಸೆಂಧಿಯ ಅ.ಕಿ 7,750/- ರೂ. ಇದ್ದು, ನಂತರ ಸದರಿ ಸೆಂಧಿ ಕ್ಯಾನಗಳು ಹಾಗೂ ಬಾಟಲಳಗಳನ್ನು ಹಾಗೂ ಸದರಿ ಕಾರ ಅ.ಕಿ 6,00,000/- ರೂ., ಮತ್ತು ಕಾರಿನಲ್ಲಿದ್ದ ಸಂಭಾಜಿ ಇವನ ಒಂದು ಸ್ಯಾಮಸಂಗ ಮೊಬೈಲ್ ಅ.ಕಿ 2000/- ರೂ, ತಾನಾಜೀ ಇತನ ರೆಡಮಿ ಮೊಬೈಲ್ ಅ.ಕಿ 4000/- ರೂ. ನೇದವುಗಳನ್ನು ಜಪ್ತಿ ಮಾಡಿ ಆರೋಪಿತರಿಗೆ ವಶಕ್ಕೆ ಪಡೆದು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಖಟಕಚಿಂಚೋಳಿ ಪೊಲೀಸ್ ಠಾಣೆ ಅಪರಾಧ ಸಂ. 59/2021, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 05-08-2021 ರಂದು ಬಾಜೋಳಗಾ ಕ್ರಾಸ್ ಹತ್ತಿರವಿರುವ ಶಿವಾಜಿ ಚೌಕ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಹುಲೇಪ್ಪ ಪಿ.ಎಸ್.ಐ ಖಟಕ ಚಿಂಚೋಳಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಬಾಜೋಳಗಾ ಕ್ರಾಸ್ ಹತ್ತಿರ ಹೋಗಿ ಬಾಜೋಳಗಾ ಕ್ರಾಸ್ ಹತ್ತಿರ ಇರುವ ಒಂದು ಹೊಟೇಲ ಮರೆಯಾಗಿ ನಿಂತು ನೋಡಲು ಬಾಜೋಳಗಾ ಕ್ರಾಸ್ ಗೆ ಇವರು ಶಿವಾಜಿ ಚೌಕ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿ ತಾನಾಜಿತಂದೆ ಜೈಸಿಂಗ್ ಜಾಧವ ವಯ: 32 ವರ್ಷ, ಜಾತಿ: ಲಂಬಾಣಿ, ಸಾ: ನಾವದಗಿ ತಾಂಡಾ ಇತನು 01/- ರೂಪಾಯಿಗೆ 90/- ರೂಪಾಯಿ ಕೊಡುತ್ತೇವೆ ಮಟಕಾ ಇದು ನಸೀಬಿನ ಆಟ ಇರುತ್ತದೆ ಅಂತ ಜೋರಾಗಿ ಚೀರಿ ಜನರಿಂದ ಹಣ ಪಡೆದು ಮಟಕಾ ಚಿಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು ಆತನ ಅಂಗ ಜಪ್ತಿ ಮಾಡಿ ನೋಡಲಾಗಿ ಸದರಿಯವನ ಶರ್ಟಿನ ಜೇಬಿನಲ್ಲಿ 1 ಮಟಕಾ ನಂಬರವುಳ್ಳ ಚೀಟಿ, 790/- ರೂ. ನಗದು ಹಣ, 1 ಬಾಲಪೇನ್ ಹಾಗೂ ಒಂದು ಕಪ್ಪು ಬಣ್ಣದ ಒಪ್ಪೊ ಕಂಪನಿಯ ಸ್ಮಾರ್ಟ್ ಪೋನ ಅ.ಕಿ 5000/- ರೂ. ನೇದವುಗಳು ದೊರತ್ತಿದ್ದು, ಸದರಿಯವುಗಳನ್ನು ಜಪ್ತಿ ಮಾಡಿಕೊಂಡು, ನಂತರ ಸದರಿ ಆರೋಪಿಗೆ ಈ ಮಟಕಾ ಚೀಟಿ ಬರೆದುಕೊಳ್ಳಲು ಯಾವುದಾರರು ಇಲಾಖೆಯಿಂದ ಅನುಮತಿ ತೆಗೆದುಕೊಂಡಿದ್ದಿಯಾ? ಮತ್ತು ನೀನು ಮಟಕಾ ಚೀಟಿ ಬರೆದುಕೊಂಡು ಯಾರಿಗೇ ನೀಡುತ್ತಿಯಾ ಅಂತ ವಿಚಾರಿಸಲು ಸದರಿಯವನು ನಾನು ಯಾವುದೆ ಇಲಾಖೆಯಿಂದ ಅನುಮತಿ ಪಡೆದುಕೊಂಡಿರುವುದಿಲ್ಲ ಮತ್ತು ನಾನು ಈ ಮಟಕ ಚೀಟಿಗಳನ್ನು ಬರೆದುಕೊಂಡು ನಂತರ ಮಟಕಾ ಚೀಟಿ ಹಾಗೂ ಅದರಿಂದ ಬಂದ ಹಣವನ್ನು ಮದಕಟ್ಟಿ ಗ್ರಾಮದ ಹಾಗೂ ಶಿವಕುಮಾರ ತಂದೆ ರೆವಣಪ್ಪಾ ಹಜನಾಳೆ ಸಾ: ಮದಕಟ್ಟಿ ಇತನಿಗೆ ನೀಡುತ್ತೆನೆ ಅಂತ ತಿಳಿಸಿರುತ್ತಾನೆ, ನಂತರ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 100/2021, ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ ಜೊತೆ 273 ಐಪಿಸಿ :-
ದಿನಾಂಕ 05-08-2021 ರಂದು ಸೇವಾದಾಸ ತಾಂಡಾ ಎಕಂಬಾದಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟ-ಖರೀದಿ ಮಾಡುತ್ತಿದ್ದಾರೆಂದು ಮಂಜನಗೌಡ ಪಾಟೀಲ ಪಿಎಸ್ಐ ಔರಾದ(ಬಿ) ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಸೇವಾದಾಸ ಎಕಂಬಾ ತಾಂಡಾಕ್ಕೆ ಹೋಗಿ ತಾಂಡಾದಲ್ಲಿ ಮರೆಯಾಗಿ ಮರೆಯಾಗಿ ನಿಂತು ನೋಡಲು ಎಕಂಬಾ ಸೇವಾದಾಸ ತಾಂಡಾದ ಕಡೆಯಿಂದ ಆರೋಪಿ ಅರುಣ ತಂದೆ ಕಾಶಿರಾಮ ರಾಠೋಡ ವಯ: 30 ವರ್ಷ, ಜಾತಿ: ಲಂಬಾಣಿ, ಸಾ: ಸೇವಾದಾಸ ತಾಂಡಾ ಇತನು ತನ್ನ ಹೆಗಲಿನ ಮೇಲೆ ಪ್ಲಾಸ್ಟೀಕ್ ಚೀಲವನ್ನು ಹೊತ್ತಿಕೊಂಡು ಹೋಗುವುದನ್ನು ನೋಡಿ ಪಂಚರ ಸಮಕ್ಷಮ ಅವನ ಮೇಲೆ ದಾಳಿ ಮಾಡಿ ಹಿಡಿದು ಅವನ ವಶದಲ್ಲಿನ ಪ್ಲಾಸ್ಟೀಕ ಚೀಲವನ್ನು ಪರಿಶೀಲಿಸಿ ನೋಡಲು ಅದರಲ್ಲಿ ಕಳ್ಳ ಭಟ್ಟಿ ಸರಾಯಿ ತುಂಬಿದ ಒಂದು ಲೀಟರಿನ 16 ಲೀಟರ ನಷ್ಟು ಕಳ್ಳ ಭಟ್ಟಿ ಸರಾಯಿ ಇದ್ದು ಆತನಿಗೆ ಇದನ್ನು ಎಲ್ಲಿಂದ ತಂದಿರುವೆ ಹಾಗೂ ನಿನ್ನ ಹತ್ತಿರ ಸಾರಾಯಿ ಸಾಗಿಸಲು ಅನುಮತಿ ಇರುತ್ತದೆಯೆ? ಎಂದು ವಿಚಾರಿಸಿದಾಗ ತನ್ನ ಹತ್ತಿರ ಸರಾಯಿ ಸಾಗಿಸಲು ಯಾವುದೇ ಪರವಾನಿಗೆ ಇರುವುದಿಲ್ಲ ಹಾಗೂ ಇದನ್ನು ಎಕಂಬಾ ಗ್ರಾಮದಲ್ಲಿ ಜನರಿಗೆ ಒಂದು ಲಿಟರಗೆ 200/- ರೂ ಯಂತೆ ಮಾರಾಟ ಮಾಡಲು ಸಾಗಿಸಿಕೊಂಡು ಹೆÆೕಗತ್ತಿದ್ದೇನೆ ಎಂದು ತಿಳಿಸಿರುತ್ತಾನೆ, ನಂತರ ಸದರಿ 16 ಪ್ಲಾಸ್ಟೀಕ ಬಾಟಲ ಸರಾಯಿ ಅ.ಕಿ 3200/- ರೂ. ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 32/2021, ಕಲಂ. 498(ಎ), 323, 324, 504, 506 ಜೊತೆ 34 ಐಪಿಸಿ :-
ದಿನಾಂಕ 15-05-2019 ರಂದು ಉದಗೀರದ ರಘುಕುಲ ಮಂಗಲ ಕಾರ್ಯಲಯ ಫಂಕ್ಷನ್ ಹಾಲ್ದಲ್ಲಿ ಫಿರ್ಯಾದಿ ಅಭಿಲಾಷಾ ಗಂಡ ಏಕನಾಥ ಶಿಂಧೆ ವಯ: 22 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಶಿವಾನಗರ ಕಾಲೋನಿ, ಔರಾದ(ಬಿ), ಸದ್ಯ: ಮೆಹಕರ್ ತಾ: ಭಾಲ್ಕಿ ರವರ ತಾಯಿ ಹಾಗೂ ಗುರು ಹಿರಿಯರು ಕೂಡಿ ಏಕನಾಥ ತಂದೆ ಅಶೋಕ ಶಿಂಧೆ, ಕ್ಲರ್ಕ ಟ್ರೇಜೆರಿ ಕಚೇರಿ ಔರಾದ ಸದ್ಯ ಕಮಲನಗರ ಇವರೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ, ಮದುವೆಯಾದ ನಂತರ 3 ತಿಂಗಳು ತನ್ನ ಗಂಡನ ಮನೆಯಲ್ಲಿ ಅತ್ತೆ ಶಾರಮ್ಮಾ ಇವರೊಂದಿಗೆ ಇರುವಾಗ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು, ನಂತರ ಗಂಡ & ಅತ್ತೆ ಇಬ್ಬರೂ ವಿನಾಃ ಕಾರಣ ಜಗಳ ತೆಗೆದು ನೀನು ಚೆನ್ನಾಗಿಲ್ಲಾ ಅಂತ ಅವಾಚ್ಯವಾಗಿ ಬೈಯುತ್ತಿದ್ದರು, ನೀನು ಬೇರೆ ಗಂಡಸರನ್ನು ನೋಡುತ್ತಿಯಾ ಅಂತ ಸುಳ್ಳು ಆರೋಪ ಮಾಡಿ ಹೊಡೆ ಬಡೆ ಮಾಡುತ್ತಿದ್ದರು, ಮನೆಯಲ್ಲಿ ಅಡುಗೆ ಮಾಡಿದರೆ ಅಡಿಗೆ ಚೆನ್ನಾಗಿ ಇಲ್ಲಾ ಅಂತ ಅಂದು ಹಿಯ್ಯಾಳಿಸುತ್ತಿದ್ದರು, ಬಟ್ಟೆ ಒಗೆಯಲು ಹೋದರೆ ನೀನು ಬೇರೆ ಗಂಡಸರನ್ನು ನೋಡುತ್ತಿಯಾ ಅಂತ ಅಂದು ಮನೆಯಲ್ಲಿದ್ದ ಪ್ಲಾಸ್ಟಿಕ್ ಬಕೇಟ್ನಿಂದ ಗಂಡ, ಅತ್ತೆ ಹೊಡೆಯುತ್ತಿದ್ದರು, ಒಬ್ಬಳನ್ನೆ ಒಂದು ಕೋಣೆಯಲ್ಲಿ ಬೀಗ ಹಾಕಿ ಸಂಜೆಯವರೆಗೆ ಊಟ ಕೊಡದೇ ಹಿಂಸೆ ಮಾಡುತ್ತಿದ್ದರು, ಗಂಡನ ತಮ್ಮನಾದ ಓಂಕಾರ ಇತನು ಕೂಡ ಮನೆಯಲ್ಲಿಯೇ ಇರುತ್ತಿದ್ದನ್ನು, ಅವನು ಕೂಡ ಫಿರ್ಯಾದಿಯ ಅಡುಗೆ ಮತ್ತು ಮನೆ ಕೆಲಸಕ್ಕೆ ಹೆಸರು ಇಡುತ್ತಿದ್ದನು, ಗಂಡ ಹೊಡೆಯುತ್ತಿರುವಾಗ ಇಕೆಗೆ ಒದ್ದು ಮನೆಯಿಂದ ಹೊರ ಹಾಕು ಅಂತ ಹೇಳುತ್ತಿದ್ದನು, ಗಂಡ ಮದುವೆಯಾದ 3 ತಿಂಗಳು ಮಾತ್ರ ಚೆನ್ನಾಗಿದ್ದು ನಂತರ ನನಗೆ ತೊಂದರೆ ಇದೆ ಅಂತ ಹೇಳಿ ಫಿರ್ಯಾದಿಯೊಂದಿಗೆ ಮಲಗುತ್ತಿರಲಿಲ್ಲ ಮತ್ತು ಫಿರ್ಯಾದಿಯ ಮೇಲೆ ಸಂಶಯ ಮಾಡುತ್ತಿದ್ದನು, ಒಂದು ವರ್ಷದ ಹಿಂದೆ ಫಿರ್ಯಾದಿಯ ತೊಂದರೆ ಕುರಿತು ಮೇಹಕರ ಮತ್ತು ಔರಾದ ಹಿರಿಯರು, ತಾಯಿ, ದೊಡ್ಡಪ್ಪ ಇವರು ವಿಚಾರಿಸಿದಾಗ ಗಂಡ ಇನ್ನು ಮುಂದೆ ಸರಿಯಾಗಿ ನೋಡಿಕೋಳ್ಳುತ್ತೆನೆ ಅಂತ ಹೇಳಿ ಫಿರ್ಯಾದಿಗೆ ಕರೆದುಕೊಂಡು ಹೋಗಿ ಒಂದು ತಿಂಗಳು ಸರಿಯಾಗಿ ಇದ್ದು, ನಂತರ ನೀನು ಹಿರಿಯರನ್ನು ಸೇರಿಸಿ ನನ್ನ ಮರ್ಯಾದೆ ತೆಗೆದಿದ್ದಿ ಅಂತ ಪದೇ ಪದೇ ಹೇಳುತ್ತಾ ಮೊದಲಿನಂತೆ ಗಂಡ, ಅತ್ತೆ, ಮೈದುನನಾದ ಎಲ್ಲರೂ ಸೇರಿ ನೀನು ತವರು ಮನೆಗೆ ಹೋಗು ಅಂತ ಹೊಡೆ-ಬಡೆ ಮಾಡುತ್ತಾ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು, ಸುಮಾರು ಒಂದು ವರ್ಷಗಳ ಹಿಂದೆ ಗಂಡ ಫಿರ್ಯಾದಿಗೆ ಹೊಡೆದು ಮೆಹಕರದಲ್ಲಿರುವ ತಾಯಿಯ ಮನೆಗೆ ತಂದು ಬಿಟ್ಟು ತಾಯಿಗೆ ಇವಳ ಆರೋಗ್ಯ ಸರಿ ಇಲ್ಲಾ ಆಸ್ಪತ್ರೆಗೆ ತೋರಿಸಿ ಅಂತ ಹೇಳಿ ಹೋಗಿರುತ್ತಾನೆ, ಫಿರ್ಯಾದಿಯ ಗಂಡನಿಗೆ ಹೊರಗಡೆ ಬೇರೆ ಹೆಣ್ಣಿನೊಂದಿಗೆ ಅನೈತಿಕ ಸಂಬಂಧ ಇರುವ ಬಗ್ಗೆ ಸಂಶಯ ಇರುತ್ತದೆ, ಹೀಗಿರುವಾಗ ಫಿರ್ಯಾದಿ ಹಾಗೂ ತಾಯಿ ಹಕ್ ಕಾಲೋನಿಯಲ್ಲಿ ತಮ್ಮ ಭಾವನಾದ ಕಿರಣಕುಮಾರ ಇವರು ಬಾಡಿಗೆಯಿಂದ ಉಳಿದ ಮನೆಗೆ ಬಂದಿದ್ದು, ಬೀದರ ನಗರದ ಹಕ್ ಕಾಲೋನಿಯಲ್ಲಿರುವ ಭಾವನಾದ ಕಿರಣಕುಮಾರ ಹಾಗೂ ಔರಾದ ಗ್ರಾಮದಲ್ಲಿರುವ ಚಿಕ್ಕಮ್ಮನ ಮಗನಾದ ಬಸವರಾಜ ಇವರು ಕೂಡಿ ಫಿರ್ಯಾದಿಯ ಸಂಸಾರ ಸರಿ ಮಾಡಲು ಗಂಡನ ಮನೆಯವರಿಗೆ ಕರೆಯಿಸಿದಾಗ ದಿನಾಂಕ 18-07-2021 ರಂದು ಗಂಡ, ಅತ್ತೆ, ಮೈದುನ ಕೂಡಿ ಭಾವನ ಮನೆಗೆ ಬಂದಿರುತ್ತಾರೆ, ಗಂಡನ ಮನೆಯವರಿಗೆ ಭಾವ ಹಾಗೂ ಮಗನಾದ ಬಸವರಾಜ ಇವರು ಕೂಡಿ ಅಭೀಲಾಷ ಇವಳಿಗೆ ಕರೆದುಕೊಂಡು ಹೋಗಿರಿ, ನಾವು ಅವಳಿಗೆ ಎಲ್ಲಾ ರೀತಿ ಒಳ್ಳೆಯ ಬುದ್ಧಿವಾದ ಹೇಳಿದ್ದೆವೆ ಅಂತ ಅಂದಾಗ ಇದೆಲ್ಲಾ ಆಗಲ್ಲಾ ನಾವು ಅವಳಿಗೆ ಕರೆದುಕೊಂಡು ಹೋಗಲ್ಲಾ, ಆಕೆ ನಮಗೆ ಬೇಡ, ಡೈವರ್ಸ ಕೊಡಿ ಈ ಸಂಬಂಧ ಮುರಿದು ಹಾಕಿ ನಾವು ಬೇರೆ ಮದುವೆ ಮಾಡಿಕೊಳ್ಳುತ್ತೆವೆ ಅಂತ ಅವಾಚ್ಯವಾಗಿ ಬೈದು ನಿಂದಿಸಿ, ನಮಗೆ ಕೋರ್ಟ್ ಪೊಲೀಸರು ಎಲ್ಲಾ ಗೊತ್ತು, ನೀವೇನಾದರು ಪೊಲೀಸ ಕೇಸ್ ಮಾಡಿಸಿದ್ರೆ ನಿಮಗೆ ನೋಡ್ಕುತಿವಿ, ನಿಮ್ಮನ್ನು ಜೀವ ಸಮೇತ ಬಿಡುವುದಿಲ್ಲಾ ಅಂತಾ ಜಗಳ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 05-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 52/2021, ಕಲಂ. 279, 337, 338 ಐಪಿಸಿ ಜೋತೆ 187 ಐಎಂವಿ ಕಾಯ್ದೆ :-
ದಿನಾಂಕ 05-08-2021 ರಂದು ಫಿರ್ಯಾದಿ ಆನಂದ ತಂದೆ ನರಸಿಂಗ್ ಟಿಳೆಕರ ಸಾ: ಸಂತಪೂರ, ತಾ: ಔರಾದ ರವರ ಸಂತಪೂರನಿಂದ ಬೀದರಗೆ ತನ್ನ ಪದವಿ ಪರೀಕ್ಷೆ ಬರೆಯುವ ಕುರಿತು ಬಂದಿದ್ದು, ಪರೀಕ್ಷೆ ಮುಗಿಸಿ ಮರಳಿ ಮನೆಗೆ ಹೋಗಲು ಬೀದರನ ಜನವಾಡಾ ರಸ್ತೆ ವಾಟರ್ ಟ್ಯಾಂಕ್ ಹತ್ತಿರ ನಿಂತಾಗ ಗೇಳೆಯ ಹೊನ್ನಿಕೇರಿ ಗ್ರಾಮದ ಬಸವರಾಜ ತಂದೆ ರಾಜಕುಮಾರ ಇವನು ಸಹ ಪರೀಕ್ಷೆ ಬರೆದು ತನ್ನ ಮೋಟಾರ ಸೈಕಲ್ ನಂ. ಕೆಎ-38/ಕ್ಯೂ-1233 ನೇದನ್ನು ತೆಗೆದುಕೊಂಡು ಜೊನ್ನಿಕೇರಿಗೆ ಹೋಗುವಾಗ ಸದರಿ ಮೋಟಾರ್ ಸೈಕಲನ ಹಿಂದೆ ಫಿರ್ಯಾದಿಗೆ ಕೂಡಿಸಿಕೊಂಡು ಸಂತಪೂರಗೆ ಹೋಗುವಾಗ ಬೀದರ ಔರಾದ ರೋಡಿನ ಜನವಾಡಾ ಗ್ರಾಮದ ಕೃಷಿ ವಿಜ್ಞಾನ ಕೇಂದ್ರದ ಹತ್ತಿರ ಇರುವಾಗ ಎದುರಿನಿಂದ ಆಟೋ ನಂ. ಕೆಎ-38/9916 ನೇದರ ಚಾಲಕನಾದ ಆರೋಪಿಯು ತನ್ನ ಆಟೋವನ್ನು ಅತಿವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕುಳಿತ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ತನ್ನ ಆಟೋ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಎಡ ಕಪಾಳದ ಮೇಲೆ ತರಚಿದ ರಕ್ತಗಾಯ, ಎಡಭುಜದ ಮೇಲೆ ತರಚಿದ ರಕ್ತಗಾಯ, ಎಡಗೈ ಮುಂಗೈ ಹತ್ತಿರ ತರಚಿದ ರಕ್ತಗಾಯ, ಎಡಮೋಣಕಾಲು ಡಬ್ಬಿಯ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ ಹಾಗೂ ಬಸವರಾಜ ಇತನ ತಲೆಯ ಮೇಲೆ ಭಾರಿ ರಕ್ತಗಾಯ, ಎಡಗಾಲಿನ ತೊಡೆಯ ಹತ್ತಿರ ರಕ್ತಗಾಯವಾಗಿರುತ್ತದೆ ಹಾಗೂ ಆಟೋದಲ್ಲಿದ್ದ ವ್ಯಕ್ತಿ ವೈಜಿನಾಥ ತಂದೆ ಶಂಕರ ಟಿಡಿಬಿ ಕಾಲೋನಿ ಬೀದರ ಇತನ ಎಡ ಮೋಣಕಾಲು ಡಬ್ಬಿಯ ಹತ್ತಿರ ರಕ್ತಗಾಯ, ಬಲಗಾಲಿನ ಹಿಮ್ಮಡಿಯ ಹತ್ತಿರ ರಕ್ತಗಾಯ, ಎರಡು ಹುಬ್ಬಿನ ಮದ್ಯ ಹಣೆಯ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ, ಘಟನೆಯ ಹಿಂದೆ ಬರುತ್ತಿದ್ದ ತಮ್ಮೂರ ರವಿ ತಂದೆ ಮಾರುತಿ ಟಿಳೆಕರ ಹಾಗೂ ಚಂದ್ರಕಾಂತ ಪಾಟೀಲ್ ರವರು ಕಣ್ಣಾರೆ ನೋಡಿ ಗಾಯಗೊಂಡವರಿಗೆ 108 ಅಂಬುಲೇನ್ಸ್ ನಲ್ಲಿ ಬೀದರ ಸರಕಾರಿ ಆಸ್ಪತ್ರೆಯಲ್ಲಿ ತಂದು ದಾಖಲು ಮಾಡಿರುತ್ತಾರೆ, ನಂತರ ಚಂದ್ರಕಾಂತ ಪಾಟೀಲ್ ಹಾಗೂ ರವಿ ಟಿಳೆಕರ ರವರು ವೈಧ್ಯರ ಸಲಹೆ ಮೇರೆಗೆ ಬಸವರಾಜ ರವರಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಗೆ ತೆಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 93/2021, ಕಲಂ. 279, 337, 338 ಐಪಿಸಿ :-
ದಿನಾಂಕ 05-08-2021
ರಂದು ಫಿರ್ಯಾದಿ ಸಂತೋಷ ಮುಕಿಯಾ ತಂದೆ ಶ್ರೀರಾಮಧೇಲ ಮುಕಿಯಾ, ಸಾ: ನೊಟೇಗಾ, ತಾ: ಬೀರೋಲ, ಜಿ: ದುರ್ಬಂಗಾ, ರಾಜ್ಯ: ಬಿಹಾರ ರವರು ಸುಜೀತ ಮುಕಿಯಾ, ಅರುಣ ಮುಕಿಯಾ, ಶಿವಕುಮಾರ ಮುಕಿಯಾ ರವರು ನ್ಯಾನಶೇಲ್ ಹೆದ್ದಾರಿ ಬೀದರ - ಉದಗೀರ ರೋಡಿನ ಪಕ್ಕದಲ್ಲಿ ಸಂಗಮ ಬ್ರೀಜ ಹತ್ತಿರ ಆಳಂದಿ ಶಿವಾರದಲ್ಲಿ ರೋಡಿನ ಕೆಲಸ ಮಾಡುತ್ತಿರುವಾಗ ಭಾಲ್ಕಿ ಕಡೆಯಿಂದ ಮೋಟಾರ ಸೈಕಲ್ ನಂ. ಎಂ.ಎಚ್.-14/ಜಿ-ಟಿ- 9069 ನೇದರ ಚಾಲಕನಾದ ಆರೋಪಿ ನವನಾಥ ತಂದೆ ನರಸಿಂಗ ಸಾ: ಕಮಲನಗರ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ
ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿರುತ್ತಾನೆ, ಸದರಿ ಘಟನೆಯಿಂದ ಸುಜೀತ ಮುಕಿಯಾ ಇವರ ಬಲಗಾಲ ಮೋಳಕಾಲ
ಕೆಳಗೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಫಿರ್ಯಾದಿಗೆ ಎಡಗಡೆ ಸೊಂದದ ಮೇಲೆ ಹಾಗೂ ಮೋಟಾರ ಸೈಕಲ್
ಮೇಲೆ ಬಂದ ಇಬ್ಬರಿಗೆ ಹಣೆಯ ಮೇಲೆ ತಲೆಯ ಮೇಲೆ ಗಾಯವಾದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ
ಸಾರಾಂಶದ ಮೇರೆಗ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment