Police Bhavan Kalaburagi

Police Bhavan Kalaburagi

Tuesday, December 15, 2020

BIDAR DISTRICT DAILY CRIME UPDATE 15-12-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 15-12-2020

 

ನೂತನ ನಗರ ಪೊಲೀಸ್ ಠಾಣೆ ಬೀದರ ಅಪರಾಧ ಸಂ. 139/2020, ಕಲಂ. 143, 147, 341, 427 ಜೊತೆ 149 ಐಪಿಸಿ ಮತ್ತು ಕಲಂ. 3(2) () ಆಪ್ ದಿ ಪ್ರೆವೆನಷನ್ ಆಪ್ ಡ್ಯಾಮೆಜ್ ಟು ಪಬ್ಲಿಕ್ ಪ್ರಾಪರ್ಟಿ ಕಾಯ್ದೆ 1984 :-

ಸುಮಾರು 4 ದಿವಸಗಳಿಂದ ಕರ್ನಾಟಕ ರಾಜ್ಯ ಸರಕಾರದಲ್ಲಿ ಸಾರಿಗೆ ಸಂಸ್ಥೆಯಿಂದ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ಸಾರಿಗೆ ಸಂಸ್ಥೆಯ ಎಲ್ಲಾ ನೌಕರರು ಮುಷ್ಕರ ಹಮ್ಮಿಕೊಂಡಿದ್ದು ಇರುತ್ತದೆ, ನಂತರ ಸಾಯಂಕಾಲ ಸಾರಿಗೆ ಸಂಸ್ಥೆಯ ಪದಾದಿಕಾರಿಗಳು ಮತ್ತು ಸರಕಾರದ ಮಧ್ಯ ಒಪ್ಪಂದ ಆಗಿರುವುದರಿಂದ ಮುಷ್ಕರ ಹಿಂಪಡೆದಿರುವುದಾಗಿ ತಿಳಿಸಿರುವ ವಿಷಯ ಫಿರ್ಯಾದಿ ಸಿದ್ರಾಮಪ್ಪ ತಂದೆ ಖೊಬ್ರೆಪ್ಪ ಆಲೂರೆ ವಯ: 37 ವರ್ಷ,  ಜಾತಿ: ಲಿಂಗಾಯತ, : ಕೆ.ಎಸ್.ಆರ್.ಟಿ.ಸಿ ಯಲ್ಲಿ ಚಾಲಕ/ನಿರ್ವಾಹಕ ಕಲಬುರ್ಗಿ ಘಟಕ-1, ಸಾ: ತಂಬಾಕವಾಡಿ, ತಾ: ಆಳಂದ ರವರಿಗೆ ಗೊತ್ತಾಗಿರುತ್ತದೆ, ಹೀಗಿರುವಲ್ಲಿ ದಿನಾಂಕ 14-12-2020 ರಂದು 0600 ಗಂಟೆಗೆ ದಿನನಿತ್ಯದಂತೆ ಫಿರ್ಯಾದಿಯವರು ತಮ್ಮ ಡಿಪೊದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಾಗ ಡಿಪೊ ಮ್ಯಾನೇಜರವರು ಫಿರ್ಯಾದಿಗೆ ಬಸ್ ನಂ. ಕೆಎ-32/ಎಫ್-2309 ನೇದ್ದರ ಮೇಲೆ ಚಾಲಕ ಮತ್ತು ನಿರ್ವಾಕನಾಗಿ ಬಸವಂತ ಬ್ಯಾಚ್ ನಂ. 3308 ರವರಿಗೆ ಕಲಬುರ್ಗಿಯಿಂದ ಬೀದರ ಹೋಗಲು ಕರ್ತವ್ಯಕ್ಕೆ ನೇಮಕ ಮಾಡಿ ದೇಶ ಮಾಡಿದ ಮೇರೆಗೆ ಇಬ್ಬರು ಸದರಿ ಬಸ್ಸಿನಲ್ಲಿ ಕಲಬುರ್ಗಿ ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಕೂಡಿಸಿಕೊಂಡು ಹುಮನಾಬಾದ ಹಳ್ಳಿಖೇಡ [ಬಿ] ಮಾರ್ಗವಾಗಿ ಬೀದರಗೆ ಬರುವಾಗ ಬೀದರ ನಗರದ ಬರಿದಶಾಹಿ ಗಾರ್ಡನ್ ಮುಂಭಾಗದಿಂದ ಬರುತ್ತಿರುವಾಗ ಗಾರ್ಡನ ಒಳಗಡೆಯಿಂದ ಅಪರಿಚಿತ 4-5 ಜನರು ಸಮಾನ ಉದ್ದೇಶದಿಂದ ಅಕ್ರಮ ಕೂಟ ರಚಿಸಿಕೊಂಡು ತಮ್ಮ - ತಮ್ಮ ಕೈಯಲ್ಲಿ ಕಲ್ಲು ಹಿಡಿದುಕೊಂಡು ಬಂದು ಬಸ್ಸಿನ ಮುಂದೆ ಹೋಗದಂತೆ ತಡೆದು ಮುಷ್ಕರ ಇದೆ ಏಕೆ ಕರ್ತವ್ಯಕ್ಕೆ ಬಂದಿದ್ದಿರಿ ಅಂತ ಫಿರ್ಯಾದಿಯವರೊಂದಿಗೆ ವಾದ-ವಿವಾದ ಮಾಡಿ ನಂತರ ಕಲ್ಲು ತೆಗೆದುಕೊಂಡು ಸಾರ್ವಜನಿಕ ಆಸ್ತಿಯಾಗಿರುವ ಸರಕಾರಿ ಬಸ್ಸಿಗೆ ಕಲ್ಲಿನಿಂದ ಬಸ್ಸಿನ ಮುಂಭಾಗದ ಕನ್ನಡಿ ಮತ್ತು ಹಿಂಭಾಗದ ಕನ್ನಡಿಗೆ ಹೊಡೆದು ಒಡೆದು ಹಾಕಿ ಅಂದಾಜು 30,000/- ರೂ. ಹಾನಿ ಮಾಡಿ ಓಡಿ ಹೋಗಿರುತ್ತಾರೆ, ನಂತರ ಫಿರ್ಯಾದಿಯು ತಮ್ಮ ಬಸ್ಸಿನ ಸಮೇತ ಬೀದರ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ವಿಚಾರಿಸಲಾಗಿ ಬಸ್ಸಿಗೆ ತಡೆದು ಕಲ್ಲಿನಿಂದ ಹೊಡೆದು ಹಾನಿ ಮಾಡಿದವರ ಹೆಸರುಗಳು 1] ಸಂಜಯ ತಂದೆ ರಾಮಚಂದರ ಠಾಕೂರ ಬೀದರ ಘಟಕ-2 ನೇದ್ದರಲ್ಲಿ ಚಾಲಕ, 2] ಅಶೋಕ ಚಾಲಕ, 3] ಜಗನ್ನಾಥ ಚಾ/ನಿ ಡಿಪೊ-1, 4] ಶಾಂತು ಚಾ/ನಿ ಡಿಪೋ-1 ಹಾಗೂ 5] ರಾಹುಲ ಕಂಟಿ ಚಾ/ನಿ ಬೀದರ ಘಟಕ-2 ಅಂತ ಗೊತ್ತಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹಳ್ಳಿಖೇಡ(ಬಿ) ಪೊಲೀಸ ಠಾಣೆ ಅಪರಾಧ ಸಂ. 152/2020, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 14-12-2020 ರಂದು ಹಳ್ಳಿಖೇಡ (ಬಿ) ಪೊಲೀಸ ಠಾಣೆಯ ವ್ಯಾಪ್ತಿಯ ದುಬಲಗುಂಡಿ ಗ್ರಾಮದ ಶಿವಾರ ಶಿವಪ್ಪಾ ಚೀಲಾ ರವರ ಹೊಲದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗಾದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ 3 ಎಲೆಯ ನಸೀಬಿನ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ ನಿಂಗಪ್ಪಾ ಮಣ್ಣೂರ ಪಿ.ಎಸ್. ಹಳ್ಳಿಖೇಡ(ಬಿ) ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ದುಬಲಗುಂಡಿ ಗ್ರಾಮದ ಶಿವಪ್ಪಾ ಚೀಲಾ ರವರ ಹೊಲದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಶಿವಪ್ಪಾ ಚೀಲಾ ರವರ ಹೊಲದ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗಾದಲ್ಲಿ ಆರೋಪಿತರಾದ 1) ವೀರಪ್ಪಾ ತಂದೆ ಬಂಡೇಪ್ಪಾ ಮುಸ್ತಾರಿ ವಯ: 61 ವರ್ಷ, ಜಾತಿ: ಲಿಂಗಾಯತ, ಇತನು ಹಾಗು ಇನ್ನೂ 6 ಜನ ಎಲ್ಲರು ಸಾ: ದುಬಲಗುಂಡಿ ಇವರೆಲ್ಲರೂ ಗೋಲಾಕಾರವಾಗಿ ಕುಳಿತು ಇಸ್ಪಿಟ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತರ ಮೇಲೆ ದಾಳಿ ಮಾಡಿ 7 ಜನ ಆರೋಪಿತರನ್ನು ಹಿಡಿದುಕೊಂಡು ಅವರಿಂದ ಜೂಜಾಟಕ್ಕೆ ಸಂಬಂಧಪಟ್ಟ ಒಟ್ಟು 23,950/- ರೂ. ನಗದು ಹಣ ಹಾಗೂ 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Saturday, December 12, 2020

BIDAR DISTRICT DAILY CRIME UPDATE 12-12-2020

 

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 12-12-2020

ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 47/2020 ಕಲಂ 279, 337, 304 () ಐಪಿಸಿ ಜೊತೆ 187 ಐಎಮ್.ವಿ. ಕಾಯ್ದೆ :- 

ದಿನಾಂಕ: 11-12-2020 ರಂದು ಫಿರ್ಯಾದಿ ಗೌಸೋದ್ದಿನ್ @ ಫಯಾಜ್ ತಂದೆ ನಜೀಮೋದ್ದಿನ್@ಮುನ್ನಾಪಾಶಾ ವಯ||20 ವರ್ಷ  ಜಾ||ಮುಸ್ಲಿಂ ಉ||ಕೂಲಿ ಸಾ|| ಮನೆ ನಂ 17-02-102 ಮೈಲೂರ  ರೋಡ ಗಾಂಧಿ ನಗರ ಕಾಲೋನಿ ಬೀದರ ರವರು ನೀಡಿದ ಫಿರ್ಯಾದಿಯ ಸಾರಾಂಶವೆನೆಂದರೆ ದಿನಾಂಕ:11-12-2020 ರಂದು ಬರೂರು ಗ್ರಾಮದಲ್ಲಿ ಮಾವನ ಮಗನಾದ ಮೋಯೀಜ್ ಈತನ ಮದುವೆ ಇದ್ದ ಕಾರಣ ಮನೆಯಿಂದ ಮೋ.ಸೈ.ಹೀರೋ ಸ್ಪ್ಲೆಂಡರ್ ನಂ ಕೆಎ-38-ಎಲ್-5696 ನೇದರ ಮೇಲೆ ಫಿರ್ಯಾದಿ ಮತ್ತು  ತಮ್ಮನಾದ ರಿಯಾಜೋದ್ದಿನ ಮತ್ತು ನಮ್ಮ ಸಂಬಂಧಿಯಾದ ಸರ್ಫರಾಜ್ ಅಲಿ ಮೂವರು ಸೇರಿಕೊಂಡು ಮನೆಯಿಂದ 11:15 ಗಂಟೆಗೆ ಬಿಟ್ಟು ಮೋ.ಸೈ ನಾನು ಚಲಾಯಿಸುತ್ತಿದ್ದು   ಹಿಂದೆ ಸರ್ಫರಾಜ್ ಮತ್ತ ಅವನ ಹಿಂದೆ ರಿಯಾಜೋದ್ದಿನ್ ಕುಳಿತುಕೊಂಡು ಬರೂರು ಗ್ರಾಮಕ್ಕೆ ಹೋಗುವಾಗ 12:00 ಗಂಟೆಯ ಸುಮಾರಿಗೆ   ಮೋ.ಸೈ ನಾಗೂರಾ ಗ್ರಾಮದ ಹತ್ತಿರ ತಿರುವಿನಲ್ಲಿ ಬಂದಾಗ ಎದುರಿನಿಂದ ಒಂದು ಟ್ರ್ಯಾಕ್ಟರ್ ಚಾಲಕನು ತನ್ನ ವಾಹನವನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು  ಫಿರ್ಯಾದಿಯ ಮೋ.ಸೈ ನಂ. ಕೆ.-38-ಎಲ್-5696 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ 3 ಜನರು ಕೆಳಗೆ ಬಿದ್ದಿದ್ದು   ಎಡ ಮೊಳಕಾಲಿಗೆ ತರಚಿದ ಗಾಯವಾಗಿರುತ್ತದೆ. ಮತ್ತು ಎಡ ಮುಂಗಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ. ಮತ್ತು ಸರ್ಫರಾಜ್ ಇವನಿಗೆ ನೋಡಲಾಗಿ ಎಡ ಮುಂಗೈ ಹತ್ತಿರ ಮತ್ತು ಎಡ ಮೊಳಕಾಲು ಹತ್ತಿರ ತರಚಿದ ರಕ್ತಗಾಯವಾಗಿದ್ದು, ಮತ್ತು ಹೊಟ್ಟೆಗೆ ಗುಪ್ತಗಾಯ ವಾಗಿರುತ್ತದೆ. ಮತ್ತು ನಮ್ಮ ತಮ್ಮ ರಿಯಾಜೋದ್ದಿನ್ ಈತನಿಗೆ ನೋಡಲಾಗಿ ಆತನಿಗೆ ಬಲ ತೊಡೆಯ ಹತ್ತಿರ ಬಾರಿ ರಕ್ತಗಾಯ ವಾಗಿದ್ದು ಮತ್ತು ಕಾಲು ಮುರಿದಂತೆ ಕಾಣುತ್ತಿದ್ದು ಮೂಗಿನಿಂದ ಭಾರಿ ರಕ್ತ ಸೋರುತ್ತಿದ್ದು, ಅವನು ಮಾತನಾಡದ ಸ್ಥಿತಿಯಲ್ಲಿ ಇರಲಿಲ್ಲಾ   108 ಅಂಬುಲೆನ್ಸ್ ಮೂಲಕ  ಬೀದರ ಸರಕಾರಿ ಆಸ್ಪತ್ರೆಗೆ ಸೇರೆಸಿದಾಗ ವೈದ್ಯರು ರಿಯಾಜೋದ್ದಿನ್ ಈತನಿಗೆ  ಪರೀಕ್ಷೀಸಿ ಮದ್ಯಹ್ನ 13:20 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 234/2020 ಕಲಂ 457, 380 ಐಪಿಸಿ :-

ದಿನಾಂಕ 11/12/2020 ರಂದು 12:30 ಗಂಟೆಗೆ ಫಿಯರ್ಾದಿ ಶ್ರೀಮತಿ ಸವಿತಾ ಗಂಡ ಸಂಗಮೇಶ ಪೌಶೆಟ್ಟೆ ವಯ 37 ವರ್ಷ ಜಾತಿ ಲಿಂಗಾಯತ   ಸಾ: ಡೊಣಗಾಪೂರ ಸದ್ಯ ಲೇಕ್ಚರರ ಕಾಲೋನಿ ಭಾಲ್ಕಿ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ ಇವರ ಅಕ್ಕ ಬಾಡಿಗೆ ಮನೆಯಲ್ಲಿರುವ ಮನೆಯ ಬಾಗಿಲದ ಕೀಲಿ ಮುರಿದಿದ್ದು ಸಂದುಕಿನಲ್ಲಿ ಇಟ್ಟಿದ್ದ 5 ಗ್ರಾಂ ಬಂಗಾರದ ಝುಮಕಾ ಅ/ಕಿ 25000 ರೂಪಾಯಿ, 5 ಗ್ರಾಂ ಬಂಗಾರದ ಗುಂಡಿನ ಮಣಿಗಳು ಅ/ಕಿ 25000 ರೂಪಾಯಿ, 18 ತೋಲೆ ಬೇಳ್ಳಿಯ ಚೈನಗಳು ಅ/ಕಿ 7200 ರೂಪಾಯಿ ಹೀಗೆ ಒಟ್ಟು ಎಲ್ಲಾ ಸೆರಿ 57200 ರೂಪಾಯಿ ದಷ್ಟು ದಿನಾಂಕ 10/12/2020 ರಂದು ರಾತ್ರಿ ಸಮಯ ಯಾರೋ ಅಪರಿಚಿತ ಕಳ್ಳರು ಮನೆಗೆ ಕಿಲಿ ಇರುವದನ್ನು ನೋಡಿ ಕೀಲಿ ಮುರಿದು ಮನೆಯಲ್ಲಿ ಹೋಗಿ ಸಂದುಕಿನಲ್ಲಿ ಇಟ್ಟಿದ್ದ ಬಂಗಾರ ಮತ್ತು ಬೆಳ್ಳಿಯ ಓಡವೆಗಳು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Friday, December 11, 2020

BIDAR DISTRICT DAILY CRIME UPDATE 11-12-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 11-12-2020

 

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 51/2020, ಕಲಂ. 379 ಐಪಿಸಿ :-

ದಿನಾಂಕ 04-11-2020 ರಂದು 2300 ಗಂಟೆಯಿಂದ ದಿನಾಂಕ 05-11-2020 ರಂದು 0230 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಹರಿಪ್ರಸಾದ ತಂದೆ ರಮೇಶ ಸಾಗರ ವಯ: 22 ವರ್ಷ, ಜಾತಿ: ಎಸ್.ಸಿ ಹೋಲಿಯಾ, ಸಾ: ಗಾದಗಿ ರವರ ಹೊಂಡಾ ಸೈನ ಡಿಕ್ಸ ಮೋಟಾರ ಸೈಕಲ ನಂ. ಕೆಎ-38/ಎಕ್ಸ-3647, ಚಾಸಿಸ್ ನಂ. ಎಂ.ಇ.4.ಜೆ.ಸಿ.851.ಹೆಚ್.ಎಲ್.ಜಿ.037657, ಇಂಜಿನ್ ನಂ. ಜೆ.ಸಿ.85.ಇ.ಜಿ.0090712, ಬಣ್ಣ ಕೆಂಪು ಬಣ್ಣ ಹಾಗೂ ಅ.ಕಿ 99.790/- ರೂ. ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-12-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 81/2020, ಕಲಂ. 379 ಐಪಿಸಿ :-

ದಿನಾಂಕ 25-11-2020 ರಂದು ರಾತ್ರಿ 12:30 ಗಂಟೆಯಿಂದ ಮುಂಜಾನೆ 06:00 ಗಂಟೆಮಧ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ವಿರೇಶ ತಂದೆ ರಮೇಶ ಧನಸಿರೆ ಸಾ: ಮರಖಲ ಗ್ರಾಮ, ತಾ: ಜಿ: ಬೀದರ ರವರು ತಮ್ಮ ಮನೆಯ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ನಿಲ್ಲಿಸಿದ ನ್ನ ಹೊಂಡಾ ಶೈನ್ ಮೋಟಾರ ಸೈಕಲ್ ನಂ. ಕೆಎ-38/ವ್ಹೀ-8413, ಅ.ಕಿ 30,000/- ರೂ. ನೇದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-12-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 138/2020, ಕಲಂ. 379 ಐಪಿಸಿ :-

ದಿನಾಂಕ 04-07-2020 ರಂದು 1430 ಗಂಟೆಯಿಂದ 1600 ಗಂಟೆಯ ಅವಧಿಯಲ್ಲಿ ಬೀದರ ಅಂಬೇಡ್ಕರ ಸರ್ಕಲ ರೋಡಿನಲ್ಲಿರುವ ಎಸ್.ಬಿ. ಬ್ಯಾಂಕ ಎದುರಿಗೆ ನಿಲ್ಲಿಸಿದ ಫಿರ್ಯಾದಿ ರಾಜಕುಮಾರ ಕೊಡ್ಡೆಕ ತಂದೆ ಶಿರೊಮಣಿ ಕೊಡ್ಡೆಕರ ಸಾ: ಕಾನನ ಕಾಲೋನಿ ಮಂಗಲಪೇಟ ಬೀದರ ರವರ ಹೀರೊ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ ನಂ. ಕೆಎ-38/ಯು-9795, ಚಾಸಿಸ್ ನಂ. ಎಮ್.ಬಿ.ಎಲ್.ಹೆಚ್.ಎ.ಆರ್.074.ಜೆ.ಹೆಚ್.ಎ.24289, ಇಂಜಿನ್ ನಂ. ಹೆಚ್.ಎ.10.ಎ.ಜಿ.ಜೆ.ಹೆಚ್.ಎ.27739, ಮಾಡಲ್: 2018,  ಬಣ್ಣ: ಕಪ್ಪು ಬಣ್ಣ ಹಾಗೂ ಅ.ಕಿ 25,000/- ರೂ. ಬೆಲೆ ಬಾಳುವುದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 10-12-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.