Police Bhavan Kalaburagi
Friday, August 24, 2012
GULBARGA DISTRICT
Raichur District Reported Crimes
BIDAR DISTRICT DAILY CRIME UPDATE 24-08-2012
Thursday, August 23, 2012
GULBARGA DISTRICT REPORTED CRIME
Raichur District Reported Crimes
BIDAR DISTRICT DAILY CRIME UPDATE 23-08-2012
ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 23-08-2012
ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಯು.ಡಿ.ಆರ್. ನಂ. 8/12 ಕಲಂ 174 ಸಿಆರ್ಫಿಸಿ:-
ದಿನಾಂಕ 22-08-2012 ರಂದು 1000 ಗಂಟೆಗೆ ಫಿರ್ಯಾದಿ ಶ್ರೀ ಸುಧಾಕರ ತಂದೆ ದಿಗಂಬರ ತಪಸ್ಯಾಳ ಸಾ: ಶಮಶಾಪೂರವಾಡಿ ರವರು ನೀಡಿದ ಫಿಯರ್ಾದಿನ ಸಾರಾಂಶವೇನೆಂದರೆ ದಿನಾಂಕ 22-08-2012 ರಂದು ಮುಂಜಾನೆ 9 ಗಂಟೆಯ ಸುಮಾರಿಗೆ ಶಮಶಾಪೂರವಾಡಿಯ ಜಗದೀಶ ಖಂಡ್ರೆ ರವರ ಹೊಲದ ಹತ್ತಿರದಿಂದ ದನಗಳನ್ನು ಮೇಯಿಸುತ್ತಾ ಮುಂದೆ ಕಟ್ಟೆಯ ಪಕ್ಕದ ಬೆಳೆಯಲ್ಲಿ ಒಂದು ಅಪರೀಚಿತ ಗಂಡು ವ್ಯಕ್ತಿಯ ಶವ ಬಿದ್ದಿತ್ತು ನೋಡಲು ಮೃತ ಅಪರೀಚಿತನ ವಯಸ್ಸು ಅಂದಾಜು 60-65 ಇರಬಹುದು. ಮೃತನ ಮೈಮೇಲೆ ಒಂದು ಬಿಳಿ ಧೂತುರ, ಬಿಳಿ ಫುಲ್ ಅಂಗಿ, ಕಾವಿ ಬಣ್ಣದ ಅಂಡರವೇರ್ ಹಾಗೂ ಕೊರಳಲ್ಲಿ ರುದ್ರಾಕ್ಷಿ ಸರ ಮತ್ತು ಕೀವಿ ಕೇಳುವ ಮಷಿನ ಇತ್ತು ಹಾಗೂ ಮೃತನ ಬಾಜು ಒಂದು ನೀರಿನ ಬಾಟಲಿ ಮತ್ತು ಒಂದು ಬೆಳಗೆ ಹೊಡೆಯುವ ಕೀಟ ನಾಶಕ ಔಷದಿಯ ಡಬ್ಬಿ ಬಿದ್ದಿತ್ತು. ಸದರಿ ಮೃತನು ಕೀಟ ನಾಶಕ ಔಷದಿ ಸೇವಿಸಿ ರಾತ್ರಿ ವೇಳೆಯಲ್ಲಿ ದಿನಾಂಕ 21,22-08-2012 ರಂದು ಮಧ್ಯ ರಾತ್ರಿಯಲ್ಲಿ ಮೃತ ಪಟ್ಟಿರಬಹುದು ಅಂತಾ ನೀಡಿರುವ ಫಿಯರ್ಾದಿನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.ಭಾಲ್ಕಿ ನಗರ ಪೊಲಿಸ ಠಾಣೆ ಗುನ್ನೆ ನಂ. 125/12 ಕಲಂ 457, 380 ಐಪಿಸಿ :-
ದಿನಾಂಕ 22/08/2012 ರಂದು 1100 ಗಂಟೆಗೆ ಫಿರ್ಯಾದಿ ಶ್ರೀಮತಿ ಲಕ್ಷ್ಮಿಬಾಯಿ ಗಂಡ ಭೀಮರಾವ ಕರಕಲೆ ವಯ 35 ವರ್ಷ ಜಾತಿ ಮರಾಠಾ ಉ: ಜಾಧವ ಆಸ್ಪತ್ರೆಯಲ್ಲಿ ಆಯಾ ಅಂತಾ ಕೆಲಸ ಸಾ: ಭಾಟ ಕಾಲೋನಿ ಭಾಲ್ಕಿ ರವರು ಠಾಣೆಗೆ ಹಾಜರಾಗಿ ಮೌಖಿಕ ಹೇಳಿಕೆ ನೀಡಿರುವ ದೂರಿನ ಸಾರಾಂಶವೆನಂದರೆ ದಿನಾಂಕ 21/08/2012 ರಂದು 1800 ಗಂಟೆಗೆ ಮನೆಗೆ ಬೀಗ ಹಾಕಿ ಕೊಂಡು ಜಾಧವ ಆಸ್ಪತ್ರೆಗೆ ಆಯಾ ಕೆಲಸಕ್ಕೆ ಹೋಗಿ ರಾತ್ರಿ ಅಲ್ಲಿಯೆ ಉಳಿದು ದಿನಾಂಕ 22/08/2012 ರಂದು 0630 ಗಂಟೆಗೆ ಮನೆಗೆ ಬಂದು ನೋಡಲು ಮನೆಯ ಬಾಗಿಲು ಕೇಡುವಿದ್ದು ಕಬ್ಬಿಣದ ಪೆಟ್ಟಿಗೆಯಲ್ಲಿಟ್ಟಿರುವಂತಹ ನಗದು ಹಣ 7000/- ರೂ 2) ಬಂಗಾರದ 5 ಗ್ರಾಂ ಝೂಮಕಾ ಅ.ಕಿ. 10000/- ರೂ 3) ಬಂಗಾರದ ಎರಡು ತಾಳಿ ಅ.ತು. 3 ಗ್ರಾಂ ಅ.ಕಿ. 6000/- 4) ಬಂಗಾರದ ನತನಿ 1/2 ಗ್ರಾಂ ಅ.ಕಿ. 1000/- ರೂ 5) ಬೆಳ್ಳಿ ಕಾಲುಂಗುರ ಎರಡು ಜೋತೆ ಅ.ತು. 2 ತೊಲೆ ಅ.ಕಿ. 500/- ರೂ ಹೀಗೆ ಒಟ್ಟು 24500/- ರೂ ಬೆಲ್ಲೆ ಉಳ್ಳದು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿ ಕೊಂಡು ಹೋಗಿರುತ್ತಾರೆ. ಅಂತಾ ಕೊಟ್ಟ ಫಿಯರ್ಾದು ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ದಿನೂತನ ನಗರ ಪೊಲೀಸ್ ಠಾಣೆ ಗುನ್ನೆ ನಂ. 203/12 ಕಲಂ 354, 504, 448, 506 ಐ.ಪಿ.ಸಿ. :-
ದಿನಾಂಕ 22-08-2012 ರಂದು 1300 ಗಂಟೆಗೆ ಫಿರ್ಯಾದಿ ಸುಜಾತಾ ಗಂಡ ದಿ. ಅಶೋಕ ಅಪ್ಪೆ, ವಯ: 30 ವರ್ಷ ಸಾ|| ಕೆ.ಐ.ಎ.ಡಿ.ಬಿ. ಕಾಲೋನಿ ನೌಬಾದರವರು ಠಾಣೆಗೆ ಹಾಜರಾಗಿ ನೀಡಿರುವ ಮೌಖಿಕ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ 22-08-2012 ರಂದು 1010 ಗಂಟೆಗೆ ನಾನು ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ನನಗೆ ಮೇಲಿಂದ ಮೇಲೆ ಫೋನ ಖಾಂತರ ದಿನಾಲು ಮಿಸ್ಸಕಾಲ ಮಾಡುವುದು, ಮತ್ತು ಕರೆ ಮಾಡಿ ತೊಂದರೆ ಕೊಡುತ್ತಿರುವ ತಾನಾಜಿರಾವ ತಂದೆ ಯಾದವರಾವ ಬಿರಾದಾರ, ವಯ: 27 ವರ್ಷ, ಜಾತಿ: ಮರಾಠ, ಉ: ಕಂಪನಿಯಲ್ಲಿ ಕೆಲಸ ಸಾ: ನೀಲಮನಳ್ಳಿ ತಾ|| ಭಾಲ್ಕಿ ಜಿ: ಬೀದರ, ಇತನು ಒಮ್ಮೀಂದ ವ್ಮ್ಮೇಲೆ ಅಕ್ರಮವಾಗಿ ನಮ್ಮ ಮನೆಯ ಗೃಹ ಪ್ರವೇಶ ಮಾಡಿ ನನ್ನ ಕೈಯಿ ಹಿಡಿದು ನನಗೆ ಜಿಂಝಾ ಮುಷ್ಟಿ ಮಾಡಿ ನನಗೆ ಅವಾಚ್ಯ ಶಬ್ದಗಳಿಂದ ಬ್ಶೆದು ನನ್ನ ಹಿಂದೆ ನಡಿ ಅಂತಾ ಕೈ ಹಿಡಿದು ನನಗೆ ಹೆದರಿಸಿ ನಿನ್ನ ಮಕ್ಕಳಿಗೆ ಕಿಡ್ನ್ಯಾಪ ಮಾಡುತ್ತೇನೆ ಅಂತಾ ಬೆದರಿಸಿ ಅವಾಚ್ಯ ಬ್ದಗಳಿಂದ ಬ್ಯೆಯ್ದು ನನಗೆ ಅವಮಾನ ಮಾಡಿರುತ್ತಾನೆ. ಹೀಗೆ ಮಾಡುತ್ತಿರುವಾಗ ನಮ್ಮ ತಂದೆಯವರಾದ ಲಕ್ಷ್ಮಣ ತಂದೆ ಪ್ರಭು, ಮತ್ತು ರಮೇಶ ತಂದೆ ನರಸಿಂಗ ಸಾ|| ಸುಕ್ಕಲತೀರ್ಥ ಇವರು ಬರುವಷ್ಟರಲ್ಲಿ ಸದರಿಯವನು ಓಡಿ ಹೋಗಿರುತ್ತಾನೆ. ಆದ್ದರಿಂದ ಸದರಿಯವನ ಮೇಲೆ ನೂನುಕ್ರಮ ಜರುಗಿಸಲು ವಿನಂತಿ ಅಂತಾ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.ಗಾಂಧಿ ಗಂಜ ಪೊಲೀಸ್ ಠಾಣೆ ಗುನ್ನೆ ನಂ. 132/12 ಕಲಂ 498 (ಎ), 494,323,504,506 ಜೊತೆ. 34 ಐಪಿಸಿ ಮತ್ತು. 3&4 ಡಿ.ಪಿ. ಎಕ್ಟ್ .1961 ;-
ದಿನಾಂಕ: 16-02-2004 ರಂದು ಫಿಯರ್ಾದಿ ಸವರ್ಾಮಂಗಲಾ ಸಾ/ ಆದರ್ಶ ಕಾಲೋನಿ ರವರ ಮದುವೆಯು ರಾಜಶೇಖೆ ತಂದೆ ಚಂದ್ರಯ್ಯಾ ಮಠಪತಿ ಸಾ: ಭಾಲ್ಕಿ ರವರ ಜೊತೆಯಲ್ಲಿ ಆಗಿದ್ದು ಮದುವೆ ಸಮಯದಲ್ಲಿ ವರದಕ್ಷಿಣೆ ರೂಪದಲ್ಲಿ 4 ಲಕ್ಷ ರೂ. ಒಂದು ತೋಲೆ ಬಂಗಾರ ಕೊಟ್ಟಿದ್ದು ಇರುತ್ತದೆ. ಕೆಲವು ದಿವಸಗಳವರೆಗೆ ಫಿಯರ್ಾದಿತಗಳಿಗೆ ಅತ್ತೆ ಮನೆಯವರು ಸರಿಯಾಗಿ ನಡೆಯಿಸಿಕೊಂಡು ನಂತರ ಫಿಯರ್ಾದಿಯ ಗಂಡ ರಾಜಶೇಖರ, ಅತ್ತೆ ಬಸಮ್ಮಾ, ನಾದಿನಿ ಸವಿತಾ ಇವರೆಲ್ಲರೂ ಕೂಡಿಕೊಂಡು ಇನ್ನೂ ಹೆಚ್ಚು ವರದಕ್ಷಿನೆ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕೂಳ ಕೋಡುತ್ತಾ ಬಂದಿದ್ದು ಫಿಯರ್ಾದಿತಳು ಹೆರಿಗೆಗೆಂದು ತವರು ಮನೆಗೆ ಬಂದಾಗ ಈ ಅವಧಿಯಲ್ಲಿ ಅವಲ ಗಮಡ ರಾಜಶೇಖರ ಇವರು ಚಂದ್ರಕಲಾ ಎಂಬ ಮಹಿಳೆಯ ಜೊತೆಯಲ್ಲಿ 3 ನೇ ಮದುವೆ ಮಾಡಿಕೊಂಡಿರುತ್ತಾರೆ ಮತ್ತು ಫಿಯರ್ಾದಿತಳು ಅವಳ ಗಂಡ ಅತ್ತೆ ಮತ್ತು ನಾದಿನಿ ಇವರ ಬೇಡಿಕೆ ಪೂರೈಸಿರುವುದಿಲ್ಲಾ ಮತ್ತು ಫಿಯರ್ಾದಿತಳು ನ್ಯಾಯಲಯದಲ್ಲಿ ತನ್ನ ಗಂಡನ ವಿರುದ್ಧ ಡೊಮೆಸ್ಟಿಕ್ ವೈಲೆನ್ಸ್ ಮತ್ತು ಮೆಂಟೆನೆನ್ಸ್ ಕೇಸ್ ಮಾಡಿರುವುದರಿಂದ ಫಿಯರ್ಾದಿತಳಿಗೆ ಮತ್ತು ಅವರ ತಾಯಿ ತಂದೆಯವರಿಗೆ ಜೀವದ ಬೇದರಿಕೆ ಹಾಕುತ್ತಾ ಬಂದಿದ್ದು ದಿ: 21-08-2012 ರಂದು 1400 ಗಂಟೆಗೆ ಅವಳ ಗಂಡ ರಾಜಶೇಖರ, ಅತ್ತೆ, ನಾದಿನಿ ರವರೆಲ್ಲರೂ ಕೂಡಿ ಅವಳ ತವರು ಮನೆಗೆ ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಗುನ್ನೆ ನಂ. 117/12 ಕಲಂ 32, 34 ಕೆ.ಇ. ಕಾಯ್ದೆ :-
ದಿನಾಂಕ:22-08-2012 ರಂದು 1900 ಗಂಟೆಗೆ ಕಪ್ಪರಗಾಂವ ಗ್ರಾಮದಲ್ಲಿ ಆರೋಪಿತ ಮಹೆಬೂಬ ತಂದೆ ಅಜಗರ ಬೇಗ್ ಕಲ್ಯಾಣವಾಲೆ ವಯ: 32 ವರ್ಷ, ಇತನು ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾಗ ಆತನ ಮೇಲೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಅವನ ವಶದಿಂದ 180 ಎಮ್.ಎಲ್. 25 ಯು.ಎಸ್. ವಿಸ್ಕಿ ಬಾಟಲ್ ಅಂ.ಕಿ. 1100/- ರೂ. ನೇದ್ದು ಜಪ್ತಿ ಮಾಡಿಕೊಂಡಿದ್ದು ಆತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
GULBARGA DISTRICT REPORTED CRIMES
Wednesday, August 22, 2012
Raichur District Reported Crimes
BIDAR DISTRICT DAILY CRIME UPDATE 22-08-2012
GULBARGA DIST REPORTED CRIMES
ಗ್ರಾಮೀಣ ಠಾಣೆ : ಶ್ರೀ ಬಕ್ಕಣ್ಣಾ ತಂದೆ ಗುಂಡಪ್ಪ ಕೋಡ್ಡಿನ ಸಾ: ಉಡಬಾಳ ತಾ: ಹುಮ್ನಾಬಾದ ಹಾ:ವ: ಪಂಡಿತ ದೀನ ದಯಾಳ ಕಾಲೋನಿ ಗುಲಬರ್ಗಾ ರವರು, ದಿ: 21-08-12 ರಂದು ಸಂಜೆ 7-00 ಗಂಟೆ ಸುಮಾರಿಗೆ ನನ್ನ ಟಿವಿಎಸ್ ಗಾಡಿ ಕೆಎ 33 ಜೆ 5721 ನೇದ್ದರಲ್ಲಿ ಹುಮನಾಬಾದಕ್ಕೆ ಹೋಗಿ ಮರಳಿ ಮನೆಯ ಕಡೆ ಎಡ ಬದಿ ರೋಡ ಸೈಡ ಹಿಡಿದುಕೊಂಡು ರುಕುಂತೋಲಾ ದರ್ಗಾ ಇನ್ನೂ ಫರ್ಲಾಂಗ ಸ್ವಲ್ಪ ಮುಂದೆ ಇರುವಂತೆ ಒಂದು ದಾಲಮಿಲ್ಲ ಹೆಸರು ಗೊತ್ತಿಲ್ಲಾ ಎದುರಿನ ರೋಡಿನ ಮೇಲೆ ಹೊರಟಾಗ ಎದುರುನಿಂದ ರುಕುಂತೋಲಾ ದರ್ಗಾ ಕಡೆಯಿಂದ ಆಟೋ ರಿಕ್ಷಾ ಕೆಎ 32 ಬಿ 3038 ಚಾಲಕ ಅಟೋವನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಬಂದು ನನ್ನ ಮೋಟಾರ ಸೈಕಲಿಗೆ ಅಪಘಾತಪಡಿಸಿ ಗಾಯಗೊಳಿಸಿ, ಆಟೋ ಅಲ್ಲಿಯೇ ನಿಲ್ಲಿಸಿ ಓಡಿಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಗುನ್ನೆ ಸಂಖ್ಯೆ 272/12 ಕಲಂ 279, 338 ಐಪಿಸಿ ಸಂ. 187 ಎಂ.ವಿ.ಎಕ್ಟ ಪ್ರಕಾರ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಹರೀಶ ತಂದೆ ಚಂದಪ್ಪ ದೊಡಮನಿ ಸಾ: ಕಾಂತ ಕಾಲೋನಿ ಗುಲಬರ್ಗಾ ರವರು, ದಿನಾಂಕ 20-08-12 ರಂದು ಸಾಯಂಕಾಲ 7-30 ಗಂಟೆಗೆ ಆರ್.ಪಿ ಸರ್ಕಲ ದಿಂದ ರಾಮಮಂದಿರ ರೋಡ ಮೇಲೆ ಯಾತ್ರಿಕ ನಿವಾಸ ಎದುರಿನ ಬಿ.ಹೆಚ್ ಪಾಟೀಲ ಆಸ್ಪತ್ರೆ ಎದುರುಗಡೆ ವಿಜಯಕುಮಾರ ತಂದೆ ರಾಮಣ್ಣಾ ಸಾಗರ ಈತನು ತನ್ನ ಮೋಟಾರ ಸೈಕಲ ನಂ ಕೆಎ-39 ಜೆ-3912 ನೇದ್ದರ ಮೇಲೆ ನನ್ನನ್ನು ಕೂಡಿಸಿಕೊಂಡು ರಾಮಮಂದಿರದಿಂದ ಮನೆಗೆ ಬರುವಾಗ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದ್ದಾಗ ನಾನು ನಿಧಾನವಾಗಿ ಚಲಾಯಿಸಿಲು ತಿಳಿಸಿದರು ಕೂಡಾ ಕೇಳದೆ ಅತೀವೇಗದಿಂದ ಚಲಾಯಿಸಿ ಎದುರುಗಡೆ ಬರುತ್ತಿರುವ ಮೋಟಾರ ಸೈಕಲನ್ನು ನೋಡಿ ಕಟ್ ಹೊಡಿದು ಒಮ್ಮೆಲೆ ಬ್ರೇಕ ಹಾಕಿ ಮೋ/ಸೈಕಲ ಕೆಳಗೆ ಕೆಡುವಿದರಿಂದ ವಿಜಯಕುಮಾರ ತಂದೆ ರಾಮಣ್ಣಾ ಸಾಗರ ನು ಕೆಳಗಡೆ ಬಿದ್ದು ತಲೆಗೆ ಭಾರಿ ಪೆಟ್ಟು ಬಿದ್ದು ಸ್ಥಳದಲ್ಲಿ ಮಾತನಾಡಲಿಕ್ಕೆ ಬರುತ್ತಿರಲಿಲ್ಲಾ ತಾವು ಮುಂದಿನ ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಗುನ್ನೆ ಸಂಖ್ಯೆ 85/12 ಕಲಂ: 279,338 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಾಗಿದೆ.
ಮಹಿಳಾ ಪೊಲೀಸ ಠಾಣೆ : ಶ್ರೀಮತಿ ಅನಿತಾ ಗಂಡ ಬಸವರಾಜ ಠಣಕೆದಾರ ಸಾ : ಬಾಲಾಜಿ ನಗರ ಗುಲಬರ್ಗಾ ರವರು, ನನ್ನ ಮದುವೆಯನ್ನು ದಿನಾಂಕ 28.06.2012 ರಂದು ಸಂಪ್ರದಾಯದಂತೆ ಹಿರಿಯರೆಲ್ಲರೂ ಕೂಡಿಕೊಂಡು ಬಸವರಾಜ ತಂದೆ ಮಲ್ಲಪ್ಪಾ ಠಣಕೆದಾರ ಸಾ: ಹತ್ತಿಗುಡೂರ ತಾ: ಶಹಾಪುರ ಹಾ:ವ: ನಂದೀಶ್ವರ ಕಾಲೋನಿ ಬೀದರ.ಇತನೊಂದಿಗೆ ಮದುವೆ ಮಾಡಿದ್ದು ಮದುವೆ ಕಾಲಕ್ಕೆ 6 ತೊಲೆ ಬಂಗಾರ ಮತ್ತು 4 ಲಕ್ಷ ರೂಪಾಯಿ ಕೊಟ್ಟಿದ್ದು ಇರುತ್ತದೆ. ಮದುವೆಯಾದಾಗಿನಿಂದಲೂ ನನ್ನ ಗಂಡ ನನ್ನೋಂದಿಗೆ ಜಗಳ ತೆಗೆದು ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಾ ಬಂದಿರುತ್ತಾನೆ ನನಗೆ ನೀನು ಇಷ್ಟವಿಲ್ಲ ಮತ್ತು ಇನ್ನು 10 ಲಕ್ಷ ರೂಪಾಯಿ ಹಣ ನಿಮ್ಮ ತಂದೆ ಕಡೆಯಿಂದ ತೆಗೆದುಕೊಂಡು ಬರಬೇಕೆಂದು ಜಗಳ ತೆಗೆಯುತ್ತಿದ್ದನು. ಹೀಗಿದ್ದು ದಿನಾಂಕ 20.08.2012 ರಂದು ರಾತ್ರಿ 10 ಗಂಟೆಗೆ ಬಾಲಾಜಿನಗರದಲ್ಲಿರುವ ನಮ್ಮ ಚಿಕ್ಕಪ್ಪನ ಮನೆಗೆ ಬಂದು ಸಿಕ್ಕಾಪಟ್ಟೆ ಗಲಾಟೆ ಮಾಡಿ ನಿನ್ನನ್ನು ಜೀವ ಸಹಿತ ಬಿಡುವದಿಲ್ಲಾ ಏಕೆಂದರೆ ನೀನು ನಾನು ಹೇಳಿದ ವಿಷಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲಾ ನಿನಗೆ ತಕ್ಕ ಪಾಠ ಕಲಿಸುತ್ತೆನೆಂದು ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ಕೊಟ್ಟು ಜೀವದ ಬೆದರಿಕೆ ಹಾಕಿ ಹೊರಟು ಹೋದನು. ಕಾರಣ ನನಗೆ ಮದುವೆಯಾದಾಗಿನಿಂದಲೂ ತವರು ಮನೆಯಿಂದ 10 ಲಕ್ಷ ರೂಪಾಯಿ ತರುವಂತೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಟ್ಟ ನನ್ನ ಗಂಡ ಬಸವರಾಜ ಇತನ ಮೇಲೆ ಕಾನೂನು ಕ್ರಮ ಕೈಗೊಳ್ಳ ಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಪೊಲೀಸ ಠಾಣೆಯಲ್ಲಿ ಗುನ್ನೆ ಸಂಖ್ಯೆ 59/2012 ಕಲಂ 498(ಎ) 506 ಐ.ಪಿ.ಸಿ ಮತ್ತು 3 & 4 ಡಿ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಾಗಿದೆ.
