Police Bhavan Kalaburagi

Police Bhavan Kalaburagi

Friday, May 8, 2020

BIDAR DISTRICT DAILY CRIME UPDATE 08-05-2020

  
 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ:  08-05-2020

ಮೆಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 36/2020 ಕಲಂ 32, 34 ಕೆ.ಇ. ಕಾಯ್ದೆ :-
ದಿನಾಂಕ: 07-05-2020 ರಂದು 1000 ಪಿಎಸ್ಐ ರವರು ಗಂಟೆಗೆ   ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಬಂದಿದೇನೆಂದ್ದರೆ, ಬಸವನ ವಾಡಿ ಕ್ರಾಸ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಸಾರಾಯಿ ಮಾರಾಟ ಮಾಡಲು ಒಯುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ  ಬಸವನವಾಡಿ ಕ್ರಾಸ ಹತ್ತಿರ  ರೋಡಿಗೆ 1100 ಗಂಟೆಗೆ ಹೋಗಿ ನೋಡಿದಾಗ ಬಸವನ ವಾಡಿ  ಹತ್ತಿರ ಒಂದು ಮೋಟಾರ ಸೈಕಲ್ ಮೇಲೆ ಮಧ್ಯದಲ್ಲಿ ಒಂದು ಬಿಳಿಯ ಪ್ಲಾಸ್ಟಿಕ ಚೀಲ ಇಟ್ಟುಕೊಂಡು  ಇಬ್ಬರೂ ಬರುತ್ತಿದ್ದು, ಅವರಿಗೆ   ಕೈಮಾಡಲು ಅವರು ಮೋಟಾರ ಸೈಕಲ ನಿಲ್ಲಿಸಿದ್ದು ಅವರ ಹೆಸರು ಮತ್ತು ವಿಳಾಸ ವಿಚಾರಿಸಿದಾಗ 1. ತುಳಸಿರಾಮ ತಂದೆ ಕಂಟೆಪ್ಪ ಬಿರಾದಾರ 60 ವರ್ಷ ಜಾ: ಕೋಳಿ ಉ: ಕೂಲಿ ಕೆಲಸ ಸಾ: ಕಾಸರ ತೂಗಾಂವ ವಾಡಿ ಅಂತ ಹೇಳಿದ್ದು,   ಹಿಂದೆ ಕುಳಿತವನ ಹೆಸರು ವಿಚಾರಿಸಲು ಭಗವಾನ ತಂದೆ ಬಾಲಾಜಿ ವಾಂಜರಖೇಡೆ 26 ವರ್ಷ ಜಾ: ಮರಾಠಾ ಉ: ಟ್ರಾಕ್ಟರ ಚಾಲಕ ಸಾ; ಕಾಸರ ತೂಗಾಂವ ವಾಡಿ ಅಂತ ಹೇಳಿದ್ದು,  ಅವರ  ಮೋಟಾರ ಸೈಕಲ ನಂ ಕೆಎ 38 ಕೆ 9641 ಮತ್ತು ಅವರ ಹತ್ತಿರವಿದ್ದ 90 ಎಮ್.ಎಲ್. ಸಾಮಥ್ರ್ಯವುಳ್ಳ 50 ಪ್ಲಾಸ್ಟಿಕ ಬಾಟಲಗಳಿದ್ದು, ಅದರ ಅ:ಕಿ; 1516/- ರೂ ನೇದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.


ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 20/2020 ಕಲಂ 271 ಐಪಿಸಿ ಹಾಗು ಕಲಂ 7 ಕೋಟ್ಪಾ  ಸಿಗರೇಟ್ ಆಂಡ್ ಅದರ್ ಟೋಬೋಕೋ ಪ್ರೋಡ್ಯಾಕ್ಸ ಎಕ್ಟ 2003 :-

ದಿನಾಂಕ 07/05/2020  ರಂದು 1415 ಗಂಟೆ ಸುಮಾರಿಗೆ ಬೀದರನಿಂದ ಔರಾದ ಕಡೆಗೆ ಅಶೋಕ್ ಲಿಲ್ಯಾಂಡ್ ಗೂಡ್ಸ್ ಪಿಕಪ್ ವಾಹನ ನಂ. ಕೆಎ-38/ಎ-2877 ನೇದ್ದರಲ್ಲಿ ಪಾನಮಸಾಲ (ಗುಟಕಾ) ಸಾಗಣಿಕೆ ಮಾಡುತ್ತಿದ್ದಾರೆ. ಅಂತಾ ಪಿಎಸ್ಐ ರವರಿಗೆ ಖಚಿತ ಬಾತ್ಮಿ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ ಮರಖಲ್ ಗ್ರಾಮದ ಭಗತಸಿಂಗ್ ಚೌಕ್ ಹತ್ತಿರ ಬೀದರ ಕಡೆಯಿಂದ ಬರುತ್ತಿದ್ದ ಅಶೋಕ್ ಲಿಲ್ಯಾಂಡ್ ಗೂಡ್ಸ್ ಪಿಕಪ್ ವಾಹನ ನಂ. ಕೆಎ-38/ಎ-2877 ನೇದರ ಮೇಲೆ 1430 ಗಂಟೆಗೆ ದಾಳಿ ಮಾಡಿ  ಸ್ಥಳಕ್ಕೆ ಡಾ|| ಸಂತೋಷ ಕಾಳೆ ಡಿ.ಓ. ಜಿಲ್ಲಾ ಅಂಕೀತ ಅಧಿಕಾರಿಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಬೀದರ ರವರಿಗೆ ಫೋನ್ ಮಾಡಿ ಬರಮಾಡಿಕೊಂಡು. ಆರೋಪಿತರಾದ 1) ಅಬ್ದುಲ್ ಖಯುಮ ತಂದೆ ಎಮ್ ಡಿ ಖುಷರ್ಿದ ಪಂಜಾರ ಸಾ|| ಸಿಂಧೆಗಲ್ಲಿ ಔರಾದ (ಬಾ) ಹಾಗು 2) ಗ್ಯಾನೋಬಾ ತಂದೆ ನಾರಾಯಾಣರಾವ ಸಂಗನಾಳೆ ಸಾ|| ಔರಾದ (ಬಾ) ರವರನ್ನ ದಸ್ತಗಿರಿ ಮಾಡಿಕೊಂಡು ವಾಹನದಲ್ಲಿ ಸಾಗಾಣಿಕೆ ಮಾಡುತ್ತಿದ್ದ ಮುದ್ದೆಮಾಲು  ಒಟ್ಟು 10 ರಟ್ಟಿನ ಕಾಟನ್ಗಳಲ್ಲಿನ ವಿ-1 ತಂಬಾಕು ಅ. ಕೀ. 60,000/- ರೂ ದಷ್ಟು ಹಾಗು 10 ಗೋಣಿ ಚೀಲ ವಿಮಲ್ ಪಾನ ಮಸಾಲಾಚ ಅ. ಕೀ. 2,40,000/- ರೂ ದಷ್ಟು ಬೆಲೆಯುಳ್ಳದನ್ನು ಹಾಗು ಅಶೋಕ್ ಲಿಲ್ಯಾಂಡ್ ಗೂಡ್ಸ್ ಪಿಕಪ್ ವಾಹನ ನಂ. ಕೆಎ-38/ಎ-2877 ಅ. ಕೀ, 4,00,000/- ರೂ ದಷ್ಟು ಬೇಲೆಯುಳ್ಳದ್ದು ಜಪ್ತಿ ಮಾಡಿಕೊಂಡು ಲಾಕಡೌನ ಅವಧಿಯಲ್ಲಿ ಸದರಿ ವಿಮಲ್ ಪಾನ ಮಸಾಲ ಮತ್ತು ತಂಬಾಕುಗಳನ್ನು ತಿಂದು ಉಗಳಿದಲ್ಲಿ ಕರೋನ ಸಾಂಕ್ರಮಿಕ ರೋಗ ಹರಡುವ ಸಾಧ್ಯತೆ ಇರುತ್ತದೆ. ಎಂದು ಸರಕಾರ ಸಾಗಾಣಿಗೆ ನಿಷೇಧ ಇದ್ದರು ಇವರು ಅದರ ಉಲಂಘನೆ ಮಾಡಿದ್ದರಿಂದ  ಆರೋಪಿತರಿಗೆ ದಸ್ತಗಿರಿ ಮಾಡಿಕೊಂಡು ಕಲಂ 271 ಐಪಿಸಿ ಹಾಗು ಕಲಂ 7 ಕೋಪ್ಟಾ, ಸಿಗರೇಟ್ ಆಂಡ್ ಅದರ್ ಟೋಬೋಕೋ ಪ್ರೋಡ್ಯಾಕ್ಸ ಎಕ್ಟ 2003 ಅಡಿಯಲ್ಲಿ ಪ್ರಕಣದ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ. 

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂಖ್ಯೆ 41/2020 ಕಲಂ 87 ಕೆಪಿ ಕಾಯ್ದೆ ;-

ದಿನಾಂಕ 07-05-2020 ರಂದು 1430 ಗಂಟೆಗ ಪಿಎಸ್ಐ ರವರು ಔರಾದ(ಬಿ) ಪೊಲೀಸ ಠಾಣೆಯಲ್ಲಿದ್ದಾಗ ತಹಸಿಲ್ ತಾಂಡಾದ ಆಚೆಗೆ ಔರಾದ ಶೀವಾರದಲ್ಲಿ ಹೋಗುವ ರೋಡಿನ ಪಕ್ಕದಲ್ಲಿ  ಕೆಲವು ಜನರು ಸೇರಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುತ್ತಾರೆ ಎಂದು ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ನೋಡಿದಾಗ ಬೇವಿನ ಮರದ ಕೆಳಗೆ  6 ಜನರು ಗೊಲಾಗಿ ಕುಳಿತು ಇಸ್ಪೇಟ ಎಲೆಗಳಿಂದ ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಅನ್ನುವ ಜೂಜಾಟ ಆಡುತ್ತಿದ್ದನ್ನು ನೋಡಿ ಖಚೀತ ಪಡಿಸಿಕೊಂಡು ಸದರಿ ದಾಳಿ ಮಾಡಿ ಹಿಡಿದುಕೊಂಡು  ಹೆಸರು ವಿಳಾಸ ವಿಚಾರಿಸಿ ಅಂಗ  ಪರೀಶಿಲಿಸಿ ನೋಡಲು 1) ಓಂಕಾರ ತಂದೆ ಗಂಗಾಧರ ಢೋಂಪರೆ ವಯ 24 ವರ್ಷ ಇತನ ಹತ್ತಿರ ನಗದು ಹಣ 960/-ರೂ. 2) ವಿಠಲ ತಂದೆ ಶಿವಾಜಿರಾವ ಸುಸಲಾದೆ ವಯ 30 ವರ್ಷ ಇತನ ಹತ್ತಿರ ನಗದು ಹಣ 790/-ರೂ. 3) ರಾಜು ತಂದೆ ಮಾನಸಿಂಗ ಚೌಹಾಣ ವಯ 28 ಇತನ ಹತ್ತಿರ ನಗದು ಹಣ 650/-ರೂ 4) ಸಿದ್ದಲಿಂಗ ತಂದೆ ಬಸವರಾಜ ಮಡ್ಡೆ ವಯ 30 ವರ್ಷ  ಹತ್ತಿರ ನಗದು ಹಣ 1350/-ರೂ 5) ವಿಕಾಸ ತಂದೆ ಸುಭಾಷ ಗಾಯಕವಾಡ ವಯ 30 ವರ್ಷ ಇತನ ಹತ್ತಿರ ನಗದು ಹಣ 320/-ರೂ ಇದ್ದವು 6) ಪ್ರಮೋದ ತಂದೆ ಲಕ್ಷ್ಮೀಣ ಪಾಟೀಲ್ ವಯ 23 ವರ್ಷ ಇತನ ಹತ್ತಿರ ನಗದು ಹಣ 840/-ರೂ ಇದ್ದವು ನಂತರ ಎಲ್ಲರ ಮಧ್ಯ ಇರುವ ಸ್ಥಳ ಪರೀಶೀಲಿಸಿ ನೋಡಲು ನಗದು ಹಣ 2340/-ರೂ, ಹಾಗೂ 52 ಇಸ್ಪೇಟ ಎಲೆಗಳು ಇದ್ದು  ಹೀಗೆ ಒಟ್ಟು ನಗದು ಹಣ 7250/-ರೂ ಹಾಗೂ 52 ಇಸ್ಪೇಟ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮನ್ನಾಏಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 36/2020 ಕಲಂ 32, 34 ಕೆ.ಇ. ಕಾಯ್ದೆ;- 

ದಿನಾಂಕ 07/05/2020 ರಂದು 1300 ಗಂಟೆಗೆ ಶ್ರೀಮತಿ ಸುನೀತಾ ಪಿಎಸ್ ಐ (ಕಾಸು) ರವರಿಗೆ  ಬನ್ನಳ್ಳಿ ಗ್ರಾಮದ ವಾಲ್ಮೀಕಿ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ಚೀಲದಲ್ಲಿ ವಿಸ್ಕಿ ಬಾಟಲಗಳು ಇಟ್ಟು ಸಾರ್ವಜನಿಕರಿಂದ ಹಣ ಪಡೆದು ಮಾರಾಟ ಮಾಡುತ್ತೀದ್ದಾನೆ. ಅಂತಾ ಖಚಿತ ಬಾತ್ಮೀ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಬನ್ನಳ್ಳಿ ಗ್ರಾಮಕ್ಕೆ ಹೋಗಿ  ನೋಡಿದಾಗ ತೀಪ್ಪಣ್ಣಾ ತುಕಾರಾಮ ಇವರ ಮನೆಯ ಮುಂದೆ ಸಾರ್ವಜನೀಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ತನ್ನ ಬಳಿ ಇದ್ದ ಬೀಳಿ ಖಾಲಿ ಚಿಲದಿಂದ ವಿಸ್ಕಿ ಬಾಟಲಗಳನ್ನು ತೆಗೆದು ಸಾರ್ವಜನೀಕರಿಂದ ಹಣ ಪಡೆದು ಮಾರಾಟಾ ಮಾಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ  ಮಾಡಿ ವಿಸ್ಕಿ ಮಾರಾಟಾ ಮಾಡುತ್ತಿದ್ದ ವ್ಯಕ್ತಿ ಸಮವಸ್ತ್ರದಲ್ಲಿದ್ದ ಪೊಲೀಸರಿಗೆ ನೋಡಿ ಆ ವ್ಯಕ್ತಿ ಹಾಗು ಖರೀದಿ ಮಾಡುತ್ತಿದ್ದ ಸಾರ್ವಜನಿಕರು ಓಡಿ ಹೊದರು ಅಲ್ಲಿಯೇ ಬಿಟ್ಟು ಹೊದ ಚಿಲದಲ್ಲಿ   1) ಓರಿಜನಲ್ ಚಾಯಸ್ಸ 180 ಎಮ್ ಎಲ್ ಕಾಗದ ಪುಟದಿಂದ ತೈಯಾರಿಸಿದ 13 ವಿಸ್ಕಿ ಬಾಟಲಗಳು ಇದ್ದು ಅವುಗಳ ಕಿಮ್ಮತ್ತು 785=00 ರೂಪಾಯಿ ಹಾಗು 2) ಯು.ಎಸ್ ವಿಸ್ಕಿ 90 ಎಮ್ ಎಲ್ ವುಳ್ಳ 15 ಬಾಟಲಗಳು ಇದ್ದು ಇವುಗಳ ಕಿಮ್ಮತ್ತು 460=00 ರೂ ಹೀಗೆ ಒಟ್ಟು 1245=00 ರೂ ಬೇಲೆ ಬಾಳುವ ವಿಸ್ಕಿ ಇದ್ದು ವಿಸ್ಕಿ ಬಾಟಲಗಳನ್ನು ಮಾರಾಟಾ ಮಾಡುತ್ತಿದ್ದ ಓಡಿ ಹೊದ ವ್ಯಕ್ತಿಯ ಹೆಸರು ಮತ್ತು ವಿಳಾಸ ತೀಳಿದುಕೋಳ್ಳಲ್ಲು ಸದರಿಯವನ ಹೇಸರು ಧೂಳಪ್ಪಾ ತಂದೆ ತುಕಾರಾಮ ಖಾನಾಪುರೆ ವಯ:30 ವರ್ಷ ಜಾ:ಕಬ್ಬಲಿಗ ಉ: ಕೂಲಿ ಕೇಲಸ ಸಾ: ಬನ್ನಳ್ಳಿ  ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Thursday, May 7, 2020

BIDAR DISTRICT DAILY CRIME UPDATE 07-05-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 07-05-2020

ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 51/2020 ಕಲಂ 3 & 7 ಇ.ಸಿ. ಕಾಯ್ದೆ ;-
ದಿನಾಂಕ 05/05/2020 ರಂದು 2145 ಗಂಟೆಗೆ ಶ್ರೀ ಅರುಣಕುಮಾರ, ಆಹಾರ ನಿರೀಕ್ಷಕರು, ತಹಸೀಲ ಕಛೇರಿ ಬೀದರ ರವರು ಠಾಣೆಗೆ ಹಾಜರಾಗಿ ತಮ್ಮದೊಂದು ದೂರು ಅರ್ಜಿ ಜೊತೆ ಜಪ್ತಿ ಪಂಚನಾಮೆಯನ್ನು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶವೆನೆಂದರ ದಿನಾಂಕ 05/05/2020 ರಂದು   ಖಚಿತ ಬಾತ್ಮಿ ಮೇರೆಗೆ ಪಂಚರ ಸಮಕ್ಷಮ ಕೊಳಾರ ಕೈಗಾರಿಕಾ ಪ್ರದೇಶದಲ್ಲಿನ ಅಮ್ಮ ಎಂಟರಪ್ರೈಸೆಸ ಎಂಬ ಹೆಸರಿನ ಕಂಪನಿಯ ಮೇಲೆ ದಾಳಿ ಮಾಡಿ ಅಲ್ಲಿ ಸಂಗ್ರಹಿಸಿ ಇಟ್ಟಿದ್ದ 28660 ಕೆಜಿ ಅಕ್ಕಿ ಮತ್ತು ಅಂದಾಜು 7500 ಕೆಜಿ ಗೋಧಿಯನ್ನು ಮತ್ತು ಕೃತ್ಯಕ್ಕೆ ಬಳಸಲಾಗುತ್ತಿದ್ದ ಒಂದು ಮಹಿಂದ್ರಾ ಮ್ಯಾಕ್ಸ್ ಪಿಕ್ ಅಪ್ ವಾಹನ ಸಂಖ್ಯೆ ಎಪಿ-28/ಟಿಬಿ-8292 ನೇದನ್ನು ಜಪ್ತಿಪಡಿಸಿಕೊಂಡಿದ್ದು, ಜಪ್ತಿಪಡಿಸಿಕೊಳ್ಳಲಾದ ಅಕ್ಕಿ ಮತ್ತು ಗೋಧಿಯನ್ನು ಬಾಡಿಗೆಗೆ ಪಡೆದುಕೊಳ್ಳಲಾದ ಲಾರಿ ನಂ-ಲಾರಿ ನಂ-ಎಪಿ-31/ಟಿಟಿ-9183, ಲಾರಿ ನಂ-ಎಮ್ವೈಐ-3105 ಮತ್ತು ಲಾರಿ ನಂ-ಎಪಿ-13/ಎಕ್ಸ-3353 ನೇದವುಗಳಲ್ಲಿ ಲೋಡ್ ಮಾಡಿಕೊಂಡು ಈ ಬಗ್ಗೆ ಒಂದು ವಿವರವಾದ ಜಪ್ತಿ ಪಂಚನಾಮೆಯನ್ನು ತಯಾರಿಸಿದ್ದು, ಕಾರಣ ಮುದ್ದೆಮಾಲನ್ನು ಅಕ್ಕಿ ಮತ್ತು ಗೋಧಿ, ಶ್ಯಾಂಪಲ ಅಕ್ಕಿ ಮತ್ತು ಗೋಧಿ ಮತ್ತು ಮಹಿಂದ್ರಾ ಮ್ಯಾಕ್ಸ ವಾಹನವನ್ನು ನಿಮ್ಮ ವಶಕ್ಕೆ ಪಡೆದುಕೊಂಡು ಪಡಿತರ ಅಕ್ಕಿ ಮತ್ತು ಗೋಧಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡಿದ್ದ ಅಮ್ಮ ಎಂಟರಪ್ರೈಸೆಸ್ ನೇದರ ಪ್ರೋಪರೇಟರ/ಮಾಲಿಕರ ವಿರುಧ್ಧ ಕಲಂ 3 & 7 ಇ.ಸಿ ಎಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಲು ತಮ್ಮಲ್ಲಿ ಕೋರಿದೆ ಎಂದು ಇರುವ ದೂರನ್ನು ಪಡೆದುಕೊಂಡು ಸದರಿ ದೂರಿನ ಸಾರಾಂಶದ ಆಧಾರದ ಮೇಲೆ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 51/2020 ಕಲಂ 3 & 7 ಇ.ಸಿ ಎಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 115/2020 ಕಲಂ 379 ಐಪಿಸಿ :-

ದಿನಾಂಕ 06/05/2020 ರಂದು 10:00 ಗಂಟೆಗೆ ಫಿರ್ಯಾದಿ ಸೂರ್ಯಕಾಂತ ತಂದೆ ಮಾಣಿಕಪ್ಪಾ ಮೇತ್ರೆ ಸಾ:ಕುಂಟಾ ಸಿಸರ್ಿ ರವರು ತಮ್ಮ ಹಿರೋ ಹೊಂಡಾ ಸ್ಪ್ಲೇಂಡರ ಪಲ್ಸ ಮೋಟಾರ ಸೈಕಲ ನಂ ಕೆ.ಎ 39 ಹೆಚ್ 3239 ನೇದ್ದನ್ನು ಭಾಲ್ಕಿಯ ಧೂಳಪೇಟ ಏರಿಯಾದಲ್ಲಿ ಇವರ ಮನೆ  ಹತ್ತಿರ ಜನ ಸಂದಣಿ ಬಹಳ ಇರುವದರಿಂದ ವಾಮನರಾವ ರವರ ಮನೆಯ ಹತ್ತಿರ ಮೋಟಾರ ಸೈಕಲ ನಿಲ್ಲಿಸಿ  ಮದ್ಯಾಹ್ನ 1 ಗಂಟೆಗೆ ಮನೆಯಿಂದ ಹೋರಗೆ ಬಂದು ನೋಡಲು   ಮೋಟಾರ ಸೈಕಲ ಇರಲಿಲ್ಲಾ  ಎಲ್ಲಾ ಕಡೆ ಹುಡುಕಾಡಿ ನೋಡಲು ಮೋಟಾರ ಸೈಕಲ ಸಿಕ್ಕಿರುವದಿಲ್ಲ   ದಿನಾಂಕ 05/05/2020 ರಂದು ಮುಂಜಾನೆ 9 ಗಂಟೆಗೆ  ವಾಮನರಾವ ರವರ ಮನೆಯ ಹತ್ತಿರ ಮೋಟಾರ ಸೈಕಲ ನಿಲ್ಲಿಸಿ ಹೋಗುವದನ್ನು ನೋಡಿ ಯಾರೋ ಅಪರಿಚೀತ ಕಳ್ಳರು ಅ:ಕಿ: 24,000 ರೂ ಬೆಲೆಯ ನನ್ನ ಮೋಟಾರ ಸೈಕಲ ನಂ ಕೆ.ಎ 39 ಹೆಚ್ಚ 3239 ನೆದನ್ನು ಕಳವು ಮಾಡಿಕೊಂಡು ಹೊಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 36/2020 ಕಲಂ 279, 338, 304(ಎ) ಐಪಿಸಿ :-


ದಿನಾಂಕ 05/05/2020  ರಂದು ಫಿರ್ಯಾದಿ ಗೌತಮ ತಂದೆ ಘಾಳೆಪ್ಪಾ ವಯ: 27 ವರ್ಷ, ಉ: ವಡಗಾಂವ ವೈನ್ಸ್ ಮ್ಯಾನೆಜರ್  ಸಾ: ಜನವಾಡ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಇವರ ಜೊತೆ ನಮ್ಮೂರ ಪ್ರಕಾಶ ತಂದೆ ಮೋಹನ ಕಾಂಬಳೆ ಈ ತನು ಕೂಡ ಅದೇ ವೈನ್ಸ ಶಾಪನಲ್ಲಿ ನಾಲ್ಕು ತಿಂಗಳಿಂದ ಕೆಲಸ ಮಾಡುತ್ತಿದ್ದು ಮತ್ತು ಇನ್ನೊಬ್ಬ ವ್ಯಕ್ತಿಯಾದ ಶಿವಕುಮಾರ ತಂದೆ ರಾಜೆಪ್ಪಾ ಸಾ!! ಕುಂಬಾರ ಚಿಂಚೋಳಿ ಈತನು ಕೂಡ ಅದೆ ವೈನ್ಸನಲ್ಲಿ ಕೆಲಸ ಮಾಡುತ್ತಿರುತ್ತಾನೆ    ಹೀಗಿರುವಾಗ  ರಾತ್ರಿ 0800 ಗಂಟೆ ಸುಮಾರಿಗೆ  ವಡಗಾಂವ್ ಜೈಭವಾನಿ ವೈನ್ಸನ್ನು ಮುಚ್ಚಿ ಜನವಾಡಗೆ ಹೊಗಲು ಫಿರ್ಯಾದಿ ಮ್ತು ಅಶೋಕ ಕಂದಗೊಳ ಇಬ್ಬರು ಕಾರ್ ನಂ. ಎಮ್ ಎಚ್ 01 ಎ ಎನ್ 7635 ನೇದರಲ್ಲಿ ಕುಳಿತು ಹೋಗುವಾಗ   ಹಿಂದೆ ಇವರ ವೈನ್ಸ ಶಾಪನಲ್ಲಿ  ಕೆಲಸ ಮಾಡಿತ್ತಿದ್ದ ಪ್ರಕಾಶ ಹಾಗು ಶಿವಕುಮಾರ ಇಬ್ಬರು ಮೋಟರ್ ಸೈಕಲ್ ನಂ. ಕೆಎ 38 ಎಸ್ 9996 ನೇದರ ಮೇಲೆ ಕುಳಿತು ಪ್ರಕಾಶ ನಡೆಸುತ್ತಿದ್ದು, ಅವರು ಸಹ ಜನವಾಡ ಕಡೆಗೆ ಬರುತ್ತಿದ್ದು ನಂತರ ರಾತ್ರಿ 0800 ಸುಮಾರಿಗೆ ಶಿವಕುಮಾರ ಈತನು ವಡಗಾಂವ್ ಕೌಠಾ ರಸ್ತೆಯ ಬೇಲೂರ ಶಿವಾರದಲ್ಲಿ ಬರುವ ಅರಣ್ಯ ಪ್ರದೇಶದ ಹತ್ತಿರ ಬಂದು ಬ್ರಿಜ್ ಹತ್ತಿರ  ಬಂದು ಬಿದ್ದಿರುತ್ತೇವೆ ಅಂತ ತಿಳಿಸಿದ ತಕ್ಷಣ ಫಿರ್ಯಾದಿ ಮತ್ತು ಅಶೋಕ ಇಬ್ಬರು ಕಾರನ್ನು ಹಿಂದಕ್ಕೆ ತಿರುಗಿಸಿ ಘಟನಾ ಸ್ಥಳಕ್ಕೆ ಹೋಗಿ ನೊಡಿದಾಗ ಪ್ರಕಾಶ ಈತನು ಮಾತನಾಡಲಿಲ್ಲ ಶಿವಕುಮಾರ ಈತನು ಮಾತಾಡಿದ್ದು ವಿಚಾರಿಸಿದಾಗ ಪ್ರಕಾಶ ವಯ: 25 ವರ್ಷ, ಈತನು ಮೋಟಾರ್ ಸೈಕಲ್ ಅನ್ನು ಅತಿವೇಗದಿಂದ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಒಮ್ಮೇಲೆ ಹಿಡಿತ ತಪ್ಪಿ ರೋಡಿನ ಎಡಗಡೆ ಬಿದ್ದಿದ್ದು ಅಂತ ತಿಳಿಸಿದಾಗ ಪ್ರಕಾಶ ಈತನಿಗೆ ನೋಡಿದ್ದು ಎಡಗಡೆ ಕಣ್ಣಿನ ಕೆಳಗೆ ಮೂಗಿನ ಹತ್ತಿರ ಭಾರಿ ಪೆಟ್ಟಾಗಿ ರಕ್ತಗಾಯವಾಗಿದ್ದು  ಚಿಕಿತ್ಸೆ ಕುರಿತು ಕಾರಿನಲ್ಲಿ ಹಾಕಿಕೊಂಡು ಬೀದರ ಬ್ರಿಮ್ಸ್ ಆಸ್ಪತ್ರೆಗೆ ತಂದು ಸೇರಿಸಿದ್ದು ಚಿಕಿತ್ಸೆ ಕಾಲಕ್ಕೆ ರಾತ್ರಿ 10;30 ಗಂಟೆಗೆ ಪ್ರಕಾಶ ಮೃತಪಟ್ಟಿರುತ್ತಾನೆ. ಗಾಯಗೊಂಡ ಶಿವಕುಮಾರ ಈತನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದಗೆ ಕಳುಹಿಸಿರುತ್ತಾರೆ.   ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Wednesday, May 6, 2020

BIDAR DISTRICT DAILY CRIME UPDATE 06-05-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 06-05-2020
ಮುಡಬಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 34/2020 ಕಲಂ 302 ಜೊತೆ 149 ಐಪಿಸಿ ;-
ದಿನಾಂಕ: 05-05-2020 ರಂದು 1900 ಗಂಟೆಗೆ ಫಿರ್ಯಾದಿ ಎಮ್.ಡಿ. ಮಸ್ತಾನ ತಂದೆ ಚಾಂದಸಾಬ ಝಂಡಾ ವಯ 32 ವರ್ಷ ಉ: ಕೂಲಿ ಕೆಲಸ ಸಾ: ಹರಸೂರ ತಾ: ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಂಶವೆನೆಂದರೆ  ಇವರ ಅಕ್ಕ ಹಫೀಜಾ ಮತ್ತು ಭಾವ ಬಾಬುಮೀಯ್ಯಾ ಇವರು 40 ವರ್ಷಗಳಿಂದ ಮುಂಬೈಯಲ್ಲಿ ಕೂಲಿ ಮಾಡಿಕೊಂಡು ವಾಸವಾಗಿರುತ್ತಾರೆ. ಅವರ ಮಗಳು ಅಫಸಾನಾ ಇವಳಿಗೆ ಸುಮಾರು 10 ವರ್ಷಗಳ ಹಿಂದೆ ಹಣಮಂತವಾಡಿ ಗ್ರಾಮದ ಚಾಂದಪಾಶಾ  ಇವರಿಗೆ ಕೋಟ್ಟು ಮದುವೆ ಮಾಡಿದ್ದು ಅವರಿಗೆ 3 ಮಕ್ಕಳು ಇರುತ್ತಾರೆ. ಅಫಸಾನಾ ಇವಳ ಗಂಡ ಕಾಯಿಲೆಯಿಂದ ದಿನಾಂಕ: 24-04-2020 ರಂದು ಮೃತ ಪಟ್ಟಿರುತ್ತಾನೆ. ಅಫಸಾನಾ ಇವಳು ತನ್ನ 3 ಮಕ್ಕಳೊಂದಿಗೆ ಹಣಮಂತವಾಡಿ ಗ್ರಾಮದಲ್ಲಿ ಇದ್ದಳು. ಅಫಸಾನಾ ಇವಳ ಗಂಡ ತೀರಿಕೊಂಡ ನಂತರ ಸ್ವಸಾಯ ಸಂಘದಿಂದ ತನ್ನ ಗಂಡ ತೀರಿಕೊಂಡ ನಂತರ ಬರುವ ಮಾಪಿ ಲೋನ ಹಣ ಬರುವದಿದ್ದು ಆ ಹಣದಲ್ಲಿ ನನಗು ಪಾಲು ಬೇಕು ಅಂತ ಅಫಸಾನಾ ಇವಳಿಗೆ ಅವಳ ಭಾವ ಮದರಸಾಬ ಮತ್ತು ಅವನ ಹೆಂಡತಿ ರಿಯಾನಾ ಹಾಗು ಅವರ ಮಗ ನಬಿ ಮತ್ತು ಗಲ್ಲಿಯ ದಸ್ತೆಗಿರ ಹಾಗೂ ಚಹಾ ಅಂಗಡಿಯವನ ಮಗನಾದ ಬಾಬಾ ಇವರೆಲ್ಲರೂ ಹಣದಲ್ಲಿ ನಮಗೆ ಪಾಲು ಕೊಡದ್ದಿದರೆ ನಿನಗೆ ಕೊಲೆ ಮಾಡಿಬಿಡುತ್ತೆವೆ ಅಂತ ಹೆದರಿಸುತ್ತಿದ್ದರು ಈ ವಿಷಯವನ್ನು ಅಫಸಾನಾ ಇವಳು ಫಿರ್ಯಾದಿ ಅಕ್ಕ ಹಾಗೂ  ತಾಯಿ ಹಾಫೀಜಾ ಇವಳಿಗೆ ಫೋನ ಮೂಲಕ ತಿಳಿಸಿರುತ್ತಾಳೆ. ದಿನಾಂಕ: 04-05-2020 ರಂದು ಸಾಯಂಕಾಲ ದಿಂದ ರಾತ್ರಿಯವರೆಗೆ ಅಫಸಾನಾ ಇವಳಿಗೆ ಹಣದ ಪಾಲಿನ ಬಗ್ಗೆ ಜಗಳ ತೇಗೆದು ನಿನು ಪಾಲು ಕೊಡದ್ದಿದರೆ ನಾವೇಲ್ಲರು ಸೇರಿ ನಿನಗೆ ಇವತ್ತೆ ಖತಮ ಮಾಡಿ ಬಂದ ಹಣ ನಾವು ಹಂಚಿಕೊಳ್ಳುತ್ತೆವೆ. ಅಂತ ಜಗಳಮಾಡಿದ್ದನ್ನು ದಿನಾಂಕ: 05-05-2020 ರಂದು ಮುಂಜಾನೆ 9-00 ಗಂಟೆಗೆ ಅಫಸಾನಾ ಇವಳು ತನ್ನ ತಾಯಿಗೆ ಫೋನ ಮೂಲಕ ತಿಳಿಸಿರುತ್ತಾಳೆ. ಸಂಶಯ ಬಂದ ಮೇರೆಗೆ ಹಣಮಂತವಾಡಿ ಗ್ರಾಮಕ್ಕೆ ಹೋಗಿ ನೊಡಿದಾಗ  ಅಫಸಾನಾ ಇವಳು ತನ್ನ ಮನೆಯ ತಗಡಿನ ಶೇಡಿನಲ್ಲಿ ಒಳಗೆ ಸತ್ತು ಬಿದ್ದಿರುತ್ತಾಳೆ ಮತ್ತು ತಗಡದ ಕೇಳಗಿನ ಕಬ್ಬಿಣದ ದಂಟೆಗೆ ಒಂದು ನೇಣು ಹಾಕಿಕೊಂಡಂತೆ ಸೀರೆ ಜೋತು ಬಿದ್ದಿರುತ್ತದೆ. ಘಟನೆಯ ಬಗ್ಗೆ ಗಲ್ಲಿಯ ಮಹೇಬುಬ ಇತನಿಗೆ ವಿಚಾರಿಸಿದಾಗ ಇವನು ತಿಳಿಸಿದೆನೆಂದರೆ ಮುಂಜಾನೆ 11:30 ಗಂಟೆ ಸುಮಾರಿಗೆ ರಿಯಾನಾ ಮತ್ತು ಮದರಸಾಬ ಇವರು ಕೂಗಿದಾಗ ಅಫಸಾನಾ ಇವಳ ಮನೆಗೆ ಹೋಗಿ ಮನೆಯಲ್ಲಿ ನೊಡಿದಾಗ ಅಫಸಾನಾ ಇವಳು ನೇಣುಹಾಕಿಕೊಂಡಿರುವುದು ಕಂಡು ನನ್ನ ಮಗ ಕುತ್ತಿಗೆಯ ನೇಣು ತೆಗೆದು ನೇಲಕ್ಕೆ ಮಲಗಿಸಿ ನೋಡಲು ಅಫಸಾನಾ ಇವಳು ಮೃತ್ತ ಪಟ್ಟಿರುತ್ತಾಳೆ ಅಂತ ತಿಳಿಸಿರುತ್ತಾನೆ. ಅಫಸಾನಾ ಇವಳಿಗೆ ತನ್ನ ಗಂಡ ಮೃತ್ತ ಪಟಿರುವುದರಿಂದ ಸಂಘದಿಂದ ಬರುವ ಮಾಪಿ ಲೋನನ ಹಣದಲ್ಲಿ ಪಾಲು ಕೊಡುವ ಬಗ್ಗೆ ಮದರಸಾಬ ಮತ್ತು ಆತನ ಹೆಂಡತಿ ರಿಯಾನಾ ಹಾಗೂ ಮಗ ನಬಿ ಮತ್ತು ಗಲ್ಲಿಯ ದಸ್ತೆಗೀರ ಹಾಗೂ ಬಾಬಾ ಇವರೆ ಕೂಡಿಕೊಂಡು ನಮ್ಮ ಅಕ್ಕನ ಮಗಳಾದ ಅಫಸಾನಾ ಇವಳಿಗೆ ಹಣದ ಪಾಲು ಕೊಡುವುದಿಲ್ಲಾ ಅಂತ ಅವಳಿಗೆ ನೇಣು ಹಾಕಿ ಕೊಲೆ ಮಾಡಿರುತ್ತಾರೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.                                                      

BIDAR DISTRICT DAILY CRIME UPDATE 06-05-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 06-05-2020
ಮುಡಬಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 34/2020 ಕಲಂ 302 ಜೊತೆ 149 ಐಪಿಸಿ ;-
ದಿನಾಂಕ: 05-05-2020 ರಂದು 1900 ಗಂಟೆಗೆ ಫಿರ್ಯಾದಿ ಎಮ್.ಡಿ. ಮಸ್ತಾನ ತಂದೆ ಚಾಂದಸಾಬ ಝಂಡಾ ವಯ 32 ವರ್ಷ ಉ: ಕೂಲಿ ಕೆಲಸ ಸಾ: ಹರಸೂರ ತಾ: ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಂಶವೆನೆಂದರೆ  ಇವರ ಅಕ್ಕ ಹಫೀಜಾ ಮತ್ತು ಭಾವ ಬಾಬುಮೀಯ್ಯಾ ಇವರು 40 ವರ್ಷಗಳಿಂದ ಮುಂಬೈಯಲ್ಲಿ ಕೂಲಿ ಮಾಡಿಕೊಂಡು ವಾಸವಾಗಿರುತ್ತಾರೆ. ಅವರ ಮಗಳು ಅಫಸಾನಾ ಇವಳಿಗೆ ಸುಮಾರು 10 ವರ್ಷಗಳ ಹಿಂದೆ ಹಣಮಂತವಾಡಿ ಗ್ರಾಮದ ಚಾಂದಪಾಶಾ  ಇವರಿಗೆ ಕೋಟ್ಟು ಮದುವೆ ಮಾಡಿದ್ದು ಅವರಿಗೆ 3 ಮಕ್ಕಳು ಇರುತ್ತಾರೆ. ಅಫಸಾನಾ ಇವಳ ಗಂಡ ಕಾಯಿಲೆಯಿಂದ ದಿನಾಂಕ: 24-04-2020 ರಂದು ಮೃತ ಪಟ್ಟಿರುತ್ತಾನೆ. ಅಫಸಾನಾ ಇವಳು ತನ್ನ 3 ಮಕ್ಕಳೊಂದಿಗೆ ಹಣಮಂತವಾಡಿ ಗ್ರಾಮದಲ್ಲಿ ಇದ್ದಳು. ಅಫಸಾನಾ ಇವಳ ಗಂಡ ತೀರಿಕೊಂಡ ನಂತರ ಸ್ವಸಾಯ ಸಂಘದಿಂದ ತನ್ನ ಗಂಡ ತೀರಿಕೊಂಡ ನಂತರ ಬರುವ ಮಾಪಿ ಲೋನ ಹಣ ಬರುವದಿದ್ದು ಆ ಹಣದಲ್ಲಿ ನನಗು ಪಾಲು ಬೇಕು ಅಂತ ಅಫಸಾನಾ ಇವಳಿಗೆ ಅವಳ ಭಾವ ಮದರಸಾಬ ಮತ್ತು ಅವನ ಹೆಂಡತಿ ರಿಯಾನಾ ಹಾಗು ಅವರ ಮಗ ನಬಿ ಮತ್ತು ಗಲ್ಲಿಯ ದಸ್ತೆಗಿರ ಹಾಗೂ ಚಹಾ ಅಂಗಡಿಯವನ ಮಗನಾದ ಬಾಬಾ ಇವರೆಲ್ಲರೂ ಹಣದಲ್ಲಿ ನಮಗೆ ಪಾಲು ಕೊಡದ್ದಿದರೆ ನಿನಗೆ ಕೊಲೆ ಮಾಡಿಬಿಡುತ್ತೆವೆ ಅಂತ ಹೆದರಿಸುತ್ತಿದ್ದರು ಈ ವಿಷಯವನ್ನು ಅಫಸಾನಾ ಇವಳು ಫಿರ್ಯಾದಿ ಅಕ್ಕ ಹಾಗೂ  ತಾಯಿ ಹಾಫೀಜಾ ಇವಳಿಗೆ ಫೋನ ಮೂಲಕ ತಿಳಿಸಿರುತ್ತಾಳೆ. ದಿನಾಂಕ: 04-05-2020 ರಂದು ಸಾಯಂಕಾಲ ದಿಂದ ರಾತ್ರಿಯವರೆಗೆ ಅಫಸಾನಾ ಇವಳಿಗೆ ಹಣದ ಪಾಲಿನ ಬಗ್ಗೆ ಜಗಳ ತೇಗೆದು ನಿನು ಪಾಲು ಕೊಡದ್ದಿದರೆ ನಾವೇಲ್ಲರು ಸೇರಿ ನಿನಗೆ ಇವತ್ತೆ ಖತಮ ಮಾಡಿ ಬಂದ ಹಣ ನಾವು ಹಂಚಿಕೊಳ್ಳುತ್ತೆವೆ. ಅಂತ ಜಗಳಮಾಡಿದ್ದನ್ನು ದಿನಾಂಕ: 05-05-2020 ರಂದು ಮುಂಜಾನೆ 9-00 ಗಂಟೆಗೆ ಅಫಸಾನಾ ಇವಳು ತನ್ನ ತಾಯಿಗೆ ಫೋನ ಮೂಲಕ ತಿಳಿಸಿರುತ್ತಾಳೆ. ಸಂಶಯ ಬಂದ ಮೇರೆಗೆ ಹಣಮಂತವಾಡಿ ಗ್ರಾಮಕ್ಕೆ ಹೋಗಿ ನೊಡಿದಾಗ  ಅಫಸಾನಾ ಇವಳು ತನ್ನ ಮನೆಯ ತಗಡಿನ ಶೇಡಿನಲ್ಲಿ ಒಳಗೆ ಸತ್ತು ಬಿದ್ದಿರುತ್ತಾಳೆ ಮತ್ತು ತಗಡದ ಕೇಳಗಿನ ಕಬ್ಬಿಣದ ದಂಟೆಗೆ ಒಂದು ನೇಣು ಹಾಕಿಕೊಂಡಂತೆ ಸೀರೆ ಜೋತು ಬಿದ್ದಿರುತ್ತದೆ. ಘಟನೆಯ ಬಗ್ಗೆ ಗಲ್ಲಿಯ ಮಹೇಬುಬ ಇತನಿಗೆ ವಿಚಾರಿಸಿದಾಗ ಇವನು ತಿಳಿಸಿದೆನೆಂದರೆ ಮುಂಜಾನೆ 11:30 ಗಂಟೆ ಸುಮಾರಿಗೆ ರಿಯಾನಾ ಮತ್ತು ಮದರಸಾಬ ಇವರು ಕೂಗಿದಾಗ ಅಫಸಾನಾ ಇವಳ ಮನೆಗೆ ಹೋಗಿ ಮನೆಯಲ್ಲಿ ನೊಡಿದಾಗ ಅಫಸಾನಾ ಇವಳು ನೇಣುಹಾಕಿಕೊಂಡಿರುವುದು ಕಂಡು ನನ್ನ ಮಗ ಕುತ್ತಿಗೆಯ ನೇಣು ತೆಗೆದು ನೇಲಕ್ಕೆ ಮಲಗಿಸಿ ನೋಡಲು ಅಫಸಾನಾ ಇವಳು ಮೃತ್ತ ಪಟ್ಟಿರುತ್ತಾಳೆ ಅಂತ ತಿಳಿಸಿರುತ್ತಾನೆ. ಅಫಸಾನಾ ಇವಳಿಗೆ ತನ್ನ ಗಂಡ ಮೃತ್ತ ಪಟಿರುವುದರಿಂದ ಸಂಘದಿಂದ ಬರುವ ಮಾಪಿ ಲೋನನ ಹಣದಲ್ಲಿ ಪಾಲು ಕೊಡುವ ಬಗ್ಗೆ ಮದರಸಾಬ ಮತ್ತು ಆತನ ಹೆಂಡತಿ ರಿಯಾನಾ ಹಾಗೂ ಮಗ ನಬಿ ಮತ್ತು ಗಲ್ಲಿಯ ದಸ್ತೆಗೀರ ಹಾಗೂ ಬಾಬಾ ಇವರೆ ಕೂಡಿಕೊಂಡು ನಮ್ಮ ಅಕ್ಕನ ಮಗಳಾದ ಅಫಸಾನಾ ಇವಳಿಗೆ ಹಣದ ಪಾಲು ಕೊಡುವುದಿಲ್ಲಾ ಅಂತ ಅವಳಿಗೆ ನೇಣು ಹಾಕಿ ಕೊಲೆ ಮಾಡಿರುತ್ತಾರೆ.  ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.                                                      

Monday, May 4, 2020

BIDAR DISTRICT DAILY CRIME UPDATE 04-05-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 04-05-2020

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 60/2020 ಕಲಂ 32, 34 ಕರ್ನಾಟಕ  ಅಬಕಾರಿ ಕಾಯ್ದೆ :-

ದಿನಾಂಕ:03/05/2020 ರಂದು 10;30 ಗಂಟೆಗೆ  ನಾನು ಪಿ.ಎಸ.ಐ [ಕಾ&ಸು] ಪೊಲೀಸ್ ಠಾಣೆಯಲ್ಲಿರುವಾಗ ಭಾತ್ಮಿದಾರರಿಂದ ಪೋನ್ ಮುಖಾಂತರ ಖಚಿತ ಭಾತ್ಮಿ ತಿಳಿದುಬಂದಿದ್ದೆನೆಂದರೆ ಬಸವಕಲ್ಯಾಣ ನಗರದ ಪರತಾಪೂರ ರಸ್ತೆಯ ಬದಿಯಲ್ಲಿರುವ ರೆಡ್ಡಿ ಧಾಭಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು  ತಮ್ಮ  ಹತ್ತಿರ ಕಳ್ಳಭಟ್ಟಿ ಸರಾಯಿವುಳ್ಳ ಬಿಳಿ ಬಣ್ಣದ ಕ್ಯಾನ್ ಇಟ್ಟುಕೊಂಡು ಸಾರ್ವಜನಿಕರಿಗೆ ಅನಧಿಕೃತವಾಗಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾರೆ ಎಂದು ಪೋನ್ ಮುಖಾಂತರ ಖಚಿತ ಭಾತ್ಮಿಬಂದ ಮೇರೆಗೆ  ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಇಬ್ಬರನ್ನು ಹಿಡಿದು ವಿಚಾರಿಸಲು  1]ಮಹ್ಮದ ಶಬ್ಬಿರ ತಂದೆ ಮಹ್ಮದ ಯುಸುಫ್ ತಾಂಬೊಲೆವಾಲೆ ವಯಸ್ಸು:39 ವರ್ಷ ಜಾತಿ:ಮುಸ್ಲಿಂ  2] ರಾಜು ತಂದೆ ರೋಪಹಿದಾಸ ಗಾಯಕವಾಡ ವಯಸ್ಸು:35 ವರ್ಷ ಜಾತಿ: ಎಸ್.ಸಿ ದಲಿತ  ಇವರುಗಳಿಂದ  05 ಲೀಟರ   ಕಳ್ಳಭಟ್ಟಿ ಸರಾಯಿ   ಅಂದಾಜು ಕಿಮ್ಮತ್ತು 1500/-ರೂ ನೇದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 ಬಸವಕಲ್ಯಾಣ ಗ್ರಾಮೀಣ ಪೊಲೀಸ್  ಠಾಣೆ ಯು.ಡಿ.ಆರ್. ಸಂಖ್ಯೆ 05/2020 ಕಲಂ 174 ಸಿಆರ್ಪಿಸಿ :-

ದಿನಾಂಕ 03-05-2020 ರಂದು 1900 ಗಂಟೆಗೆ ಫಿರ್ಯಾದಿ ಅಸ್ಮಾ ಬೇಗಂ ಗಂಡ ಮಹ್ಮದ ಅಜರೋದ್ದಿನ ಮೋಮಿನ ವಯ 28 ವರ್ಷ ಉದ್ಯೋಗ ಮನೆ ಕೆಲಸ ಸಾ: ರಾಜೇಶ್ವರ ಗ್ರಾಮ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ನಿಡಿದರ ಸಾರಾಂಶವೆನೆಂದರೆ   ಇವರ ಗಂಡ ಮಹ್ಮದ ಅಜರೋದ್ದಿನ ಇವರು ಹುಮನಾಬಾದ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಅಟೆಂಡರ ಕೆಲಸ ಮಾಡುತ್ತಾರೆ.  ದಿನಾಂಕ 03-05-2020 ರಂದು ಸಾಯಾಂಕಾಲ 1700 ಗಂಟೆಗೆ ಇವರ ಪತಿ ಮಹ್ಮದ ಅಜರೋದ್ದಿನ ಇವರು ಮನೆಯ ಅಂಗಳದಲ್ಲಿ ನಿಂತಿದರು ಇದೆ ವೇಳಗೆ ಗಾಳಿ ದೂಳು ಬಂದಿದ್ದರಿಂದ ಅಂಗಳದಲ್ಲಿ ಹಾಕಿದ ಕರೆಂಟ ವೈರ ಅಕಷ್ಮಿಕವಾಗಿ ಕಟ್ ಆಗಿ ಅಜರೋದ್ದಿನ ಇವರ ಎಡಗೈ   ಮೇಲೆ ಬಿದ್ದರಿಂದ ಇವರಿಗೆ ಕರೆಂಟ ಹತ್ತಿ ಅಲ್ಲೆ ಅಂಗಳದಲ್ಲಿ ಬಿದ್ದಾಗ ಚಿಕಿತ್ಸೆ ಕುರಿತು ಬಸವಕಲ್ಯಾಣ ಪಟ್ಟಣ ನ್ಯೂ ರೀಫಾ ಖಾಸಗಿ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೆ ಫಿರ್ಯಾದಿ ಪತಿ ಮಹ್ಮದ ಅಜರೋದ್ದಿನ ವಯ: 35 ವರ್ಷ  ಇವರು   ದಿನಾಂಕ 03-05-2020 ರಂದು 1800 ಗಂಟೆಗೆ ನ್ಯೂ ರೀಫಾ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.  

Sunday, May 3, 2020

BIDAR DISTRICT DAILY CRIME UPDATE 03-05-2020


ದಿನಂಪ್ರತಿ  ಅಪರಾಧಗಳ ಮಾಹಿತಿ ದಿನಾಂಕ: 03-05-2020
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 57/2020 ಕಲಂ 379 ಐಪಿಸಿ :-
ದಿನಾಂಕ 02/05/2020 ರಂದು 2000 ಗಂಟೆಗೆ ಫಿರ್ಯಾದಿ ಅಶೋಕ ತಂದೆ ರೇವಪ್ಪಾ ಬಿರಾದಾರ ಕಿರಿಯ ಇಂಜಿನಿಯರ ವಿಭಾಗಿಯ ಕಛೇರಿ ಜೇಸ್ಕಾಂ ಹುಮನಾಬಾದ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ   ಜೇಸ್ಕಾಂದ ಟಿ.ಸಿ (ಪರಿವರ್ತಕ) ಗಳು ರಿಪೇರಿ ಕುರಿತು ಖಾಸಗಿ ಕಂಪನಿಯಾದ ಹುಮನಾಬಾದ ಇಂಡಸ್ಟ್ರೀಯಲ ಏರಿಯಾದಲ್ಲಿರುವ ಸನ್ಮತಿ ರಿಪೇರಿಂಗ ಕಂಪನಿಯವರಿಗೆ ಗುತ್ತಿಗೆ ಕೊಟ್ಟಿದ್ದು ಇರುತ್ತದೆ ಆ ಕಂಪನಿಯಲ್ಲಿ ಹಣಮಂತ ಹೇರಾಪೂರ ಅಂತಾ ಮ್ಯಾನೇಜರ ಇರುತ್ತಾರೆ. ಈಗ ಕೆಲವು ದಿವಗಳ ಹಿಂದೆ ನಮ್ಮ ಜೇಸ್ಕಾಂದಿಂದ ಟಿ.ಸಿ ಗಳು ರಿಪೇರಿ ಕುರಿತು ಕೊಟ್ಟಿದ್ದು  ಫಿಯರ್ಾದಿರವರು ದಿನಾಂಕ 30/04/2020 ರಂದು ರಿಪೇರಿ ಸೆಂಟರಗೆ ಹೋಗಿ ನೋಡಲು ಎಲ್ಲ ಟಿ.ಸಿ ಗಳು ಇದ್ದವು, ದಿನಾಂಕ 02/05/2020 ರಂದು ಮುಂಜಾನೆ 1100 ಗಂಟೆಗೆ ಫಿಯರ್ಾದಿಯ ಹಾಗು ದಶರಥ ಸಹಾಯಕ ಸ್ಟೋರ ಕೀಪರ ಇಬ್ಬರು ಸೇರಿ ರಿಪೇರಿ ಸೆಂಟರಗೆ ಹೋಗಿ ನೋಡಲು  ಇವರು  ಕೊಟ್ಟ ಟಿ.ಸಿ ಗಳ ಪೈಕಿ ಎರಡು 25 ಕೆ.ವಿ.ಎ., ಟಿ.ಸಿ ಇರಲಿಲ್ಲ ಯಾರೋ ಅಪರಿಚಿತ ಕಳ್ಳರು ಹುಮನಾಬಾದ ಇಂಡಸ್ಟ್ರೀಯಲ ಏರಿಯಾದಲ್ಲಿರುವ ಸನ್ಮತಿ ರಿಪೇರಿಂಗ ಕಂಪನಿಯ ಶೆಡ್ಡದಲ್ಲಿ ಇದ್ದ 25 ಕೆ.ವಿ.ಎ. ಯ ಎರಡು ಟಿ.ಸಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ 25 ಕೆ.ವಿ.ಎ ಯ ಎರಡು ಟಿ.ಸಿಯ ಅಂದಾಜು ಕಿಮ್ಮತ್ತ 1,17,400/- ರೂಪಾಯಿ ಇರುತ್ತದೆ. ಕಾರಣ ದಿನಾಂಕ 30/04/2020 ರಿಂದ ದಿನಾಂಕ 02/05/2020 ರಂದು ಮಧ್ಯಾಹ್ನ 1100 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಹುಮನಾಬಾದ ಇಂಡಸ್ಟ್ರೀಯಲ ಏರಿಯಾದಲ್ಲಿರುವ ಸನ್ಮತಿ ರಿಪೇರಿಂಗ ಕಂಪನಿಯ ಶೆಡ್ಡದಲ್ಲಿಯ 25 ಕೆ.ವಿ.ಎ ಯ ಎರಡು ಟಿ.ಸಿ ಕಳವು ಮಾಡಿಕೊಂಡು ಹೋಗಿರುತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 32, 34 ಕರ್ನಾಟಕ ಅಬಕಾರಿ ಕಾಯ್ದೆ:-

ದಿನಾಂಕ 02/05/2020 ರಂದು 1500 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿರುವಾಗ  ಗೌರ ತಾಂಡಾ ಕ್ರಾಸ್ ಹತ್ತಿರ ಒಬ್ಬ ವ್ಯಕ್ತಿ ಕಳ್ಳಭಟ್ಟಿ ಸಾರಾಯಿ ತನ್ನ ಅಧಿನದಲ್ಲಿಟ್ಟುಕೊಂಡು ಮಾರಾಟ ಮಾಡಲು ಸಾಗಾಟ ಮಾಡುತಿದ್ದಾನೆಂದು ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಬೇಲೂರ ಮಾರ್ಗವಾಗಿ ಗೌರ ತಾಂಡಾ ಕ್ರಾಸ್ ಹತ್ತಿರ ಹೋಗಿ ನೋಡಿದಾಗ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ಬಿಳಿ ಪ್ಲಾಸ್ಟಿಕ್ ಡಬ್ಬಿ ಇಟ್ಟುಕೊಂಡು ನಿಂತಿರುವುದನ್ನು ನೋಡಿ  ಅವನ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಆತನ ಹೆಸರು ಮತ್ತು ವಿಳಾಸ ವಿಚಾರಿಸಲು ತಿಳಿಸಿದ್ದೆನೆಂದರೆ,  ಮೋಹನ ತಂದೆ ಲಕ್ಷ್ಮಣ ಪವಾರ ವಯ 42 ವರ್ಷ, ಜಾತಿ ಲಂಬಾಣಿ, ಉ: ಕೂಲಿ ಕೆಲಸ ಸಾ: ಗೌರ ತಾಂಡಾ ಅಂತ ತಿಳಿಸಿರುತ್ತಾನೆ. ಮುಂದುವರೆದು ನಾನು ಮೋಹನ ಈತನಿಗೆ ನಿನ್ನ ಹತ್ತಿರವಿರುವ ಪ್ಲಾಸ್ಟಿಕ ಡಬ್ಬಿಯಲ್ಲಿ ಎನು ಇದೆ ಅಂತ ವಿಚಾರಿಸಲಾಗಿ ಪ್ಲಾಸ್ಟಿಕ್ ಡಬ್ಬಿಯಲ್ಲಿ ಕಳ್ಳಭಟ್ಟಿ ಸಾರಾಯಿ ಇರುವುದಾಗಿ ತಿಳಿಸಿರುತ್ತಾನೆ.   ಸರಕಾರದ ಪರವಾನಿಗೆ ಇಲ್ಲದೆ, ಅನಧಿಕೃತವಾಗಿ ನನ್ನ ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗ ತಿಳಿಸಿರುತ್ತಾನೆ.   ಅವನ ಹತ್ತಿರವಿದ್ದ ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿನ ಅಂದಾಜು 5 ಲೀಟರ ಕಳ್ಳಭಟ್ಟಿ ಸಾರಾಯಿ ಅಂದಾಜು ಕಿಮ್ಮತ್ತು 500/- ರೂಪಾಯಿಗಳು  ಬೆಲೆ ಉಳ್ಳದು ಪಂಚರ ಸಮಕ್ಷಮ  ಜಪ್ತಿ ಹಾಗು ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡು  ಆರೋಪಿತನ ವಿರುದ್ದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 110/2020 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 02/05/2020 ರಂದು 16:00 ಗಂಟೆಗೆ ಪಿಎಸ್ಐ ರವಠಾಣೆಯಲ್ಲಿದ್ದಾಗ ಭಾಲ್ಕಿಯ ಭೀಮನಗರದಲ್ಲಿ ಖೂಲ್ಲಾ ಜಾಗೆಯಲ್ಲಿ ಕೆಲವು ಜನರು  ಕುಳಿತುಕೊಂಡು ಪರೆಲ ಎಂಬ ನಸೀಬಿನ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೋಗಿ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಒಬ್ಬೋಬ್ಬರ ಹೆಸರು ಮತ್ತು ವಿಳಾಸ ವಿಚಾರಿಸಲು ತಮ್ಮ ಹೆಸರು 1] ಶರಣಪ್ಪಾ ತಂದೆ ತುಳಸಿರಾಮ ಭಾವಿಕಟ್ಟಿ, ವಯ-53 ವರ್ಷ,  2] ಮೊಹ್ಮದ ಗೋರೆ ತಂದೆ ಮಹೆಬೂಬಸಾಬ ಗೋರೆ, ವಯ: 32 ವರ್ಷ  3] ರಾಹುಲ ತಂದೆ ಚಂದ್ರಪ್ಪಾ ಮದನ, ವಯ: 28 ವರ್ಷ,  4] ಪ್ರದೀಪ ತಂದೆ ಪ್ರಕಾಶ ಸಿಂಧನಕೇರೆ, ವಯ: 26 ವರ್ಷ   5] ವಿಶಾಲ ತಂದೆ ರಾಜಕುಮಾರ ಮೇತ್ರೆ, ವಯ: 20 ವರ್ಷ   6] ಮಾರುತಿ ತಂದೆ ಶಿವರಾಮ ಸಿಂಗೆ, ವಯ-45 ವರ್ಷ,   ಇಸ್ಪೆಟ ಜೂಜಾಟದಲ್ಲಿ ತೋಡಗಿಸಿದ ಒಟ್ಟು ನಗದು ಹಣ 3110 ರೂ ಹಾಗು 52 ಇಸ್ಪೇಟ ಎಲೆಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.