Police Bhavan Kalaburagi

Police Bhavan Kalaburagi

Sunday, August 16, 2020

BIDAR DISTRICT DAILY CRIME UPDATE 16-08-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 16-08-2020

 

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 62/2020, ಕಲಂ. 302 ಜೊತೆ 34 ಐಪಿಸಿ :-

ಫಿರ್ಯಾದಿ ವೈಜಿನಾಥ ತಂದೆ ರಾಮರಾವ ಮಚಕುರಿ ವಯ: 52 ವರ್ಷ, ಜಾತಿ: ಕೋಳಿ, ಸಾ: ಮುಂಗನಾಳ ಮಚಕುರಿ ರವರ ತಮ್ಮನಾದ ದೇವರಾವ ತಂದೆ ರಾಮರಾವ ಮಚಕುರಿ ಇತನು ಹೊಲದ ಬಗ್ಗೆ ಜಗಳ ಮಾಡಿದ್ದು ಅಲ್ಲದೇ ಆತನ ಹೆಂಡತಿ ಲಕ್ಷ್ಮೀಬಾಯಿ ಗಂಡ ದೇವರಾವ, ಮಕ್ಕಳಾದ ಪ್ರದೀಪ ತಂದೆ ದೇವರಾವ, ಗೋರಖ ತಂದೆ ರಾಮರಾವ ಭಾಂಜೆ, ಸಂದೀಪ ತಂದೆ ದೇವರಾವ ರವರು ಕೂಡಿ ಕೊಲೆ ಮಾಡುವುದಾಗಿ ಬೇದರಿಕೆ ಹಾಕುತ್ತಿದ್ದರು, ಸಂಬಂಧ ಫಿರ್ಯಾದಿಯು ಹೊಲ ಅಳತೆ ಮಾಡಲು ಅರ್ಜಿ ಸಲ್ಲಿಸಿದ್ದು ಈಗ 8-10 ದಿವಸಗಳ ಹಿಂದೆ ತಹಸಿಲ್ ಕಛೇರಿಯಿಂದ ಭೂಮಾಪಕರು ಬಂದಿದ್ದು ತಮ್ಮ ಘುನಾಥ ತಂದೆ ರಾಮರಾವ ಇತನು ಮೃತಪಟ್ಟಿದ್ದರಿಂದ ಹೊಲ ಅಳತೆ ಮಾಡದೇ ಮರಳಿ ಹೋಗಿರುತ್ತಾರೆ. ನಂತರ ಇಗ 5-6 ದಿವಸಗಳ ಹಿಂದೆ ತಮ್ಮ ದೇವರಾವ ಹಾಗು ಆತನ ಹೆಂಡತಿ ಮಕ್ಕಳು ಫಿರ್ಯಾದಿಯೊಂದಿಗೆ ಹೊಲ ಸರ್ವೇ ನಂ. 90 ರಲ್ಲಿ 8 ಎಕರೆ 2 ಗುಂಟೆ ಜಮೀನು ಇದ್ದು ಅದರಲ್ಲಿ ದೇವರಾವ ಇತನಿಗೂ ಕೂಡ ಜಮೀನು ಬಂದಿದ್ದು ತನ್ನ ಹೆಸರಿಗೆ ಮಾಡಿಕೊಡುವಂತೆ ಜಗಳ ತಕರಾರು ಮಾಡಿ ಕೊಲೆ ಬೇದರಿಕೆ ಹಾಕಿರುತ್ತಾರೆ, ನಂತರ ದಿನಾಂಕ 14-08-2020 ರಂದು ತಮ್ಮನ ಹೆಂಡತಿ ಲಕ್ಷ್ಮೀಬಾಯಿ ಗಂಡ ದೇವರಾವ ಇವಳು ಔರಾದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಿಂದ ಪ್ರಕರಣ ದಾಖಲಾಗಿದ್ದು ಇರುತ್ತದೆ ಬಗ್ಗೆ ಫಿರ್ಯಾದಿಗೆ ಠಾಣೆಗೆ ಕರೆಯಿಸಿ ಜಗಳ ಮಾಡದಂತೆ ತಿಳಿಸಿದ್ದರಿಂದ ಫಿರ್ಯಾದಿಯು ಒಪ್ಪಿಕೊಂಡು ಬಂದಿರುತ್ತಾರೆ, ಫಿರ್ಯಾದಿಯ ಮಗನಾದ ಸಂತೊಷ ಇತನು ಹೈದ್ರಾಬಾದಿನಿಂದ 4 ದಿವಸಗಳ ಹಿಂದೆ ಮನೆಗೆ ಬಂದಿರುತ್ತಾನೆ, ನಂತರ ಮ್ಮೂರ ದತ್ತು ತಂದೆ ಭೂಜಂಗರಾವ ಇಂದ್ರಾಕಾರ್ ಇವರು ಕರೆ ಮಾಡಿ ಸಂತೊಷ ಇತನಿಗೆ ಕರೋನಾ ಬಂದಿದ್ದರಿಂದ ಗಾಬರಿಗೊಂಡು ಬಂದಿರುತ್ತಾನೆ ಅಂತ ಹೇಳಿದ್ದರಿಂದ ಮಗನಾದ ಸಂತೊಷ ಇತನಿಗೆ ಹೊಲ ಸರ್ವೇ ನಂ. 90 ರಲ್ಲಿರುವ ತಗಡದ ಶೇಡ್ಡಿನಲ್ಲಿ ಇಟ್ಟಿದ್ದು, ಅಂದು ದಿನಾಂಕ 14-08-2020 ರಂದು 1800 ಗಂಟೆ ಸುಮಾರಿಗೆ ಫಿರ್ಯಾದಿಯವರ ಹೆಂಡತಿ ಸಕ್ಕುಬಾಯಿ ಇವಳು ಮಗನಿಗೆ ಊಟ ಕೊಟ್ಟು ಮನೆಗೆ ಬಂದಾಗ ಆರೋಪಿತರಾದ ದೇವರಾವ, ಆತನ ಹೆಂಡತಿ ಲಕ್ಷ್ಮೀಬಾಯಿ, ಮಕ್ಕಳಾದ ಸಂದೀಪ, ಪ್ರದೀಪ ರವರು ನಿನಗೆ ನಿನ್ನ ಮಗ ಸಂತೊಷನಿಗೆ ಕೊಲೆ ಮಾಡುತ್ತೇವೆ ಅಂತಾ ಹೇಳಿದ್ದು, ಅಲ್ಲದೆ  ಸಂದೀಪ  ತಂದೆ ದೇವರಾವ, ಪ್ರದೀಪ ತಂದೆ ದೇವರಾವ ಇವರ ಗೆಳೆಯರಾದ ಮ್ಮೂರ ಗೋರಖ ತಂದೆ ರಾಮರಾವ ಭಾಂಜೆ, ಮುರುಳಿ ತಂದೆ ರಾಮರಾವ ಬಾಂಜೆ, ನಾಗು ತಂದೆ ರಾಮರಾವ ಭಾಂಜೆ, ರಾಮರಾವ ತಂದೆ ಪುಂಡಾಜಿ ಭಾಂಜೆ, ಖಂಡು ತಂದೆ ಕೇರಬಾ ಕಾರಬಾರಿ, ತಾನಾಜಿ ತಂದೆ ಖಂಡು ಕಾರಬಾರಿ ರವರು ಸೇರಿ ಫಿರ್ಯಾದಿಗೆ ಮತ್ತು ಫಿರ್ಯಾದಿಯ ಮಗನಿಗೆ ಕೊಲೆ ಮಾಡುವುದಾಗಿ ಬೇದರಿಕೆ ಹಾಕಿರುತ್ತಾರೆ, ಹೀಗಿರುವಾಗ ದಿನಾಂಕ 15-08-2020 ರಂದು 0600 ಗಂಟೆ ಸುಮಾರಿಗೆ ಫಿರ್ಯಾದಿಯು ಮನೆಯಲ್ಲಿರುವ ಎಮ್ಮೆ ಹೊಡೆದುಕೊಂಡು ಹೊಲಕ್ಕೆ ಬಂದು ಮಗನಿಗೆ ಬಿಸ್ಕೀಟ ಕೊಡಲು ಅಂತ ಕೊಟ್ಟಿಗೆಗೆ ಹೋದಾಗ ಮಗ ಪಲಂಗದ ಹತ್ತಿರ ತಲೆ ಉತ್ತರಕ್ಕೆ ಕಾಲು ದಕ್ಷಿಣಕ್ಕೆ ಇದ್ದು ಮೈಯಲ್ಲ ರಕ್ತವಾಗಿದ್ದನ್ನು ನೋಡಿ ಗಾಬರಿಗೊಂಡು ಭಾಗಾದಿ ದಿಗಂಬರ ತಂದೆ ವಿಠಲರಾವ ಮಚಕೂರಿ ಇತನಿಗೆ ಕರೆದು ಇಬ್ಬರು ಸಮೀಪ ಹೋಗಿ ನೋಡಲು ಮಗನ ಕುತ್ತಿಗೆ ಕೊಯ್ದ ಭಾರಿ ಗಾಯವಾಗಿದ್ದು ಅಂಗಿಗೆ ರಕ್ತವಾಗಿದ್ದು ಮೃತಪಟ್ಟಿದ್ದು ಇರುತ್ತದೆ, ಫಿರ್ಯಾದಿಯವರ ಮಗ ಸಂತೊಷ ಇತನಿಗೆ ಆರೋಪಿತರಾದ ದೇವರಾವ, ಆತನ ಹೆಂಡತಿ ಮಕ್ಕಳು ಮತ್ತು ಮ್ಮೂರ ಗೋರಖ ಭಾಂಜೆ, ಮುರಳಿ ಭಾಂಜೆ, ನಾಗೂ ಭಾಂಜೆ, ರಾಮರಾವ ಭಾಂಜೆ, ಖಂಡು ಕಾರಬಾರಿ, ತಾನಾಜಿ ಕಾರಬಾರಿ ರವರು ಕೂಡಿ ಕೊಲೆ ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಂತಾಕಿ ಪೊಲೀಸ್ ಠಾಣೆ ಅಪರಾಧ ಸಂ. 38/2020, ಕಲಂ. 306, 504 ಜೊತೆ 34 ಐಪಿಸಿ :-

ದಿನಾಂಕ 14-08-2020 ರಂದು 2100 ಗಂಟೆಗೆ ಫಿರ್ಯಾದಿ ಶಂಕರ ತಂದೆ ಲಾಲಪ್ಪಾ ಸಾ: ಚಿಕ್ಲಿ(ಜೆ), ತಾ: ಔರಾದ(ಬಿ) ರವರ ಮಗನಾದ ಭೀಮರಾವ ತಂದೆ ಶಂಕರ ಇತನು ನೇಣು ಹಾಕಿಕೊಂಡಿದ್ದು ಇದಕ್ಕೆ ಕಾರಣ ಮಗನ ಹೆಂಡತಿಯ ಸಹೋದರರಾದ ಚಂದ್ರಕಾಂತ ತಂದೆ ವೈಜಿನಾಥ ಮತ್ತು ನೀಲಕಂಠ ತಂದೆ ವೈಜಿನಾಥ ಇವರಿಬ್ಬರು ಭೀಮರಾವ ಇತನಿಗೆ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ, ಭೀಮರಾವ ಇತನು ಬೆಂಗಳೂರಿನಲ್ಲಿ ಅಡಿಗೆ ಕೆಲಸ ಮಾಡುತ್ತಿದ್ದನು, ಅವನಿಗೆ 25 ದಿನಗಳ ಹಿಂದೆ ಊರಿಗೆ ಬಾ ಎಂದು ಹೆದರಿಸಿರುತ್ತಾರೆ, ಭೀಮರಾವ ಇತನ ಹೆಂಡತಿ ತನ್ನ ತವರ ಮನೆಯಲ್ಲಿ ವಾಸವಿದ್ದು, ಆದರೆ ಭೀಮರಾವ ಇತನು ಆತ್ಮಹತ್ಯೆ ಮಾಡಿಕೊಂಡಿರುವ ದಿವಸ ಹೆಂಡತಿ ಚಿಕ್ಲಿ ಗ್ರಾಮದಲ್ಲಿ ಅಂಗನವಾಡಿಗೆ ಬಂದ್ದಿದ್ದು, ಭೀಮರಾವ ಇತನು ತನ್ನ ಹೆಂಡತಿ ಮತ್ತು ಮಗಳನ್ನು ನೋಡಲು ಅಂಗನವಾಡಿಗೆ ಹೋದಾಗ ಹೆಂಡತಿ ಮಗಳನ್ನು ಭೇಟಿಯಾಗಲು ಬೀಡಲಿಲ್ಲಾ ಮತ್ತು ನನ್ನ ನಿನ್ನ ನಡುವೆ ಯಾವುದೆ ಸಂಬಂಧವಿಲ್ಲಾ, ಇನ್ನೊಂದು ಸಾರಿ ಭೇಟಿಯಾಗಲು ಯತನ್ನಿಸಿದರೆ ನನ್ನ ಅಣ್ಣಂದಿರು ಸುಮ್ಮನೆ ಬೀಡುವುದಿಲ್ಲ ಎಂದು ಹೆಂದರಿಸಿದಳು, ಈ ವಿಚಾರಗಳಿಂದ ಮಾನಸಿಕವಾಗಿ ತೊಂದರೆಗೊಂಡು ಭೀಮರಾವ ಇತನು ಆತ್ಮಹತ್ಯೆಗೆ ಶರಣಾಗಿದ್ದಾನೆ, ತನ್ನ ಮಗನ ಸಾವಿಗೆ ಅವನ ಹೆಂಡತಿ ಮತ್ತು ಅವಳ ಅಣ್ಣಂದಿರು ಕಾರಣ ಎಂದು ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 105/2020, ಕಲಂ. 3 & 7 ಇ.ಸಿ ಕಾಯ್ದೆ :-

ದಿನಾಂಕ 15-08-2020 ರಂದು ಬಸವಕಲ್ಯಾಣ ನಗರದ ಅಡತ ಬಜಾರದಲ್ಲಿ ಚೀರಡೆ ವೈನ್ ಶಾಪ ಹಿಂದುಗಡೆ ಲಾರಿ ನಂ. ಕೆ.-28/ಸಿ-7679 ಮತ್ತು ಲಾರಿ ನಂ. ಎಂ.ಹೆಚ್-04/.ಎಲ್-7785 ನೇದರಲ್ಲಿ ಅನಧೀಕೃತವಾಗಿ ಸರಕಾರದ ವಿವಿಧ ಯೋಜನೆ ಅಡಿಯಲ್ಲಿ ಸರಬರಾಜಾಗುವ ಅಕ್ಕಿ ಲೋಡ ಮಾಡಿಕೊಂಡು ಮಹಾರಾಷ್ಟ್ರ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದಾರೆಂದು ಫಿರ್ಯಾದಿ ರಾಮರತನ ತಂದೆ ಆರ್ಯಭಾನ ದೇಗಲೆ ಆಹಾರ ನಿರೀಕ್ಷಕರು ತಹಸೀಲ್ ಕಛೇರಿ ಬಸವಕಲ್ಯಾಣ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಫಿರ್ಯಾದಿಯವರು ಮತ್ತು ಆಹಾರ ನಿರೀಕ್ಷಕರಾದ ರಾಜೇಂದ್ರ ಕುಮಾರ ತಹಸೀಲ್ ಕಛೇರಿ ಬಸವಕಲ್ಯಾಣ ಇಬ್ಬರು ಕೂಡಿಕೊಂಡು ಪೊಲೀಸರ ಸಹಾಯ ಕುರಿತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಗೆ ಬಂದು ಪೊಲೀಸ್ ಠಾಣೆಯಲ್ಲಿ ಇಬ್ಬರು ಸಿಬ್ಬಂದಿಯವರೊಂದಿಗೆ ಹಾಗೂ ಇಬ್ಬರು ಪಂಚರನ್ನು ಬರಮಾಡಿಕೊಂಡು ಎಲ್ಲರೂ ಬಸವಕಲ್ಯಾಣ ನಗರದ ಗಾಂಧಿ ಚೌಕದಿಂದ ಹೊರಟು ಬಸವಕಲ್ಯಾಣ ನಗರದ ಚಿರಡೆ ವೈನ್ ಶಾಪ ಹಿಂದುಗಡೆ ಹೋಗಿ ನೋಡಲು ಬಾತ್ಮಿಯಂತೆ 2 ಲಾರಿಗಳು ನಿಂತಿರುವುದನ್ನು ನೋಡಿ ಸದರಿ 2 ಲಾರಿಗಳ ಮೇಲೆ ದಾಳಿ ಮಾಡಿ ಪರಿಶೀಲಿಸಿ ನೋಡಲು ಅಶೋಕ ಲೇಲ್ಯಾಂಡ್ ಲಾರಿ ನಂ. ಕೆ.-28/ಸಿ-7679 ನೇದು ಇದ್ದು ಲಾರಿ ಹತ್ತಿರ ಇದ್ದ ಒಬ್ಬ ವ್ಯಕ್ತಿ ಓಡಿ ಹೋಗಿದ್ದು ಸದರಿ ಲಾರಿಯ ಕ್ಯಾಬಿನದಲ್ಲಿದ್ದ ವ್ಯಕ್ತಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಎಂ.ಡಿ ಅದನಾನ ತಂದೆ ಆಸೀಫ್ ಹಾಜಿ ವಯ: 20 ವರ್ಷ, ಜಾತಿ: ಮುಸ್ಲಿಂ, ಸಾ: ಖಿಲ್ಲಾಗಲ್ಲಿ ಬಸವಕಲ್ಯಾಣ ಎಂದು ತಿಳಿಸಿದ್ದು, ನಂತರ ಆತನಿಗೆ ಲಾರಿಯಲ್ಲಿ ಏನಿದೆ? ಎಂದು ವಿಚಾರಿಸಿಲು ಲಾರಿಯಲ್ಲಿ ಅಕ್ಕಿ ಲೋಡ ಇದೆ ಎಂದು ತಿಳಿಸಿರುತ್ತಾನೆ, ತದನಂತರ ಅವನಿಗೆ ಸದರಿ ಅಕ್ಕಿ ಲೋಡಿಗೆ ಸಂಬಂಧಿಸಿದ ಕಾಗದ ಪತ್ರಗಳು ಇದ್ದರೆ ಹಾಜರು ಪಡಿಸಲು ಸೂಚಿಸಿದಾಗ ನನ್ನ ಹತ್ತಿರ ಯಾವುದೇ ರೀತಿಯ ಕಾಗದ ಪತ್ರಗಳು ಇರುವುದಿಲ್ಲಾ ಎಂದು ತಿಳಿಸಿರುತ್ತಾನೆ, ಓಡಿ ಹೊದ ವ್ಯಕ್ತಿ ಬಗ್ಗೆ ವಿಚಾರಿಸಿದಾಗ ಬಸವರಾಜ ತಂದೆ ವೀರಪ್ಪಾ ಹಳಕೆ ವಯ: 42 ವರ್ಷ, ಜಾತಿ: ಲಿಂಗಾಯತ ರೆಡ್ಡಿ, ಸಾ: ಬೆಂಕಿಪಳ್ಳಿ, ತಾ: ಚಿಂಚೋಳಿ ಎಂದು ಹಾಗೂ ಸದರಿ ಅಕ್ಕಿ ಲೋಡ್ ನಮಗೆ ಸಂಬಂಧಿಸಿದ್ದು ಇರುತ್ತದೆ ಎಂದು ತಿಳಿಸಿದಾಗ ಪಂಚರೊಂದಿಗೆ ಲಾರಿಯಲ್ಲಿ ನೋಡಲು ಸರಕಾರದಿಂದ ವಿವಿಧ ಯೋಜನೆ ಅಡಿಯಲ್ಲಿ ಸರಬರಾಜಾಗುವ 50 ಕೆ.ಜಿ ತೂಕದ 340 ಅಕ್ಕಿ ತುಂಬಿದ ಪ್ಲಾಸ್ಟಿಕ್ ಚೀಲಗಳಿದ್ದು ಪ್ರತಿ ಕೆ.ಜಿ ಅಕ್ಕಿಗೆ 27/- ರೂ ಯಂತೆ ಒಟ್ಟು 4,59,000/- ರೂ ಬೆಲೆಯ ಅಕ್ಕಿ  ಮತ್ತು ಲಾರಿ ನಂ. ಕೆ.-28/ಸಿ-7679 ನೇದ್ದರ ಅ.ಕಿ 10,00,000/- ರೂ ಹೀಗೆ ಒಟ್ಟು 14,59,000/- ರೂ ಬೆಲೆಯ ಸ್ವತ್ತನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಮತ್ತು ಸದರಿ ಲಾರಿ ಹಿಂದುಗಡೆ ನಿಲ್ಲಿಸಿದ ಲಾರಿಯನ್ನು ಪರಿಶೀಲಿಸಿ ನೋಡಲು ಅಶೋಕ ಲೇಲ್ಯಾಂಡ್ ಲಾರಿ ನಂ. ಎಂ.ಹೆಚ್-04/.ಎಲ್-7785 ನೇದ್ದು ಇದ್ದು, ಸದರಿ ಲಾರಿಯ ಕ್ಯಾಬಿನದಲ್ಲಿದ್ದ ಲಾರಿ ಚಾಲಕನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ರತ್ನದೀಪ ತಂದೆ ಸೂರ್ಯಕಾಂತ ಮೋರೆ ವಯ: 23 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಗೋರಚಿಂಚೊಳಿ, ತಾ: ಭಾಲ್ಕಿ ಎಂದು ತಿಳಿಸಿದಾಗ ಆತನಿಗೆ ಲಾರಿಯಲ್ಲಿ ಏನಿದೆ? ಎಂದು ವಿಚಾರಿಸಿಸಲು ಲಾರಿಯಲ್ಲಿ ಅಕ್ಕಿ ಲೋಡ ಇದೆ ಎಂದು ತಿಳಿಸಿದಾಗ ಅವನಿಗೆ ಸದರಿ ಅಕ್ಕಿ ಲೋಡಿಗೆ ಸಂಬಂಧಿಸಿದ ಕಾಗದ ಪತ್ರಗಳು ಇದ್ದರೆ ಹಾಜರು ಪಡಿಸಲು ಸೂಚಿಸಿದಾಗ ನನ್ನ ಹತ್ತಿರ ಯಾವುದೇ ರೀತಿಯ ಕಾಗದ ಪತ್ರಗಳು ಇರುವುದಿಲ್ಲಾ, ಸದರಿ ಅಕ್ಕಿ ಲೋಡ ಅಂಬಾದಾಸ ತಂದೆ ಚಂದ್ರಕಾಂತ ಮಕಾಜಿ ಸಾ: ನಾರಾಯಣಪೂರ ರೋಡ ಬಸವಕಲ್ಯಾಣ ಇತನಿಗೆ ಸಂಬಂಧಪಟ್ಟಿದ್ದು ಬಸವಕಲ್ಯಾಣದಿಂದ ಮಹಾರಾಷ್ಟ್ರಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ ಎಂದು ತಿಳಿಸಿದಾಗ ಪಂಚರೊಂದಿಗೆ ಲಾರಿಯಲ್ಲಿ ನೋಡಲು ಸರಕಾರದಿಂದ ವಿವಿಧ ಯೋಜನೆ ಅಡಿಯಲ್ಲಿ ಸರಬರಾಜಾಗುವ 50 ಕೆ.ಜಿ ತೂಕದ 460 ಅಕ್ಕಿ ತುಂಬಿದ ಪ್ಲಾಸ್ಟಿಕ್ ಚೀಲಗಳಿದ್ದು ಪ್ರತಿ ಕೆ.ಜಿ ಅಕ್ಕಿಗೆ 27/- ರೂ ಯಂತೆ ಒಟ್ಟು 6,21,000/- ರೂ. ಬೆಲೆಯ ಅಕ್ಕಿ ಮತ್ತು ಲಾರಿ ನಂ. ಎಂ.ಹೆಚ್-04/.ಎಲ್-7785 ನೇದ್ದರ ಅ.ಕಿ 10,00,000/- ರೂ. ಹೀಗೆ ಒಟ್ಟು 16,21,000/- ರೂ. ಬೆಲೆಯ ಸ್ವತ್ತನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತ ಕೊಟ್ಟ ದೂರಿನ ಮೇರೆಗೆ ಆರೋಪಿತರಾದ ಎಂ.ಡಿ ಅದನಾನ, ರತ್ನದೀಪ, ಬಸವರಾಜ ತಂದೆ ವೀರಪ್ಪಾ ತ್ತು ಅಂಬಾದಾಸ ತಂದೆ ಚಂದ್ರಕಾಂತ ಇವರುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

Saturday, August 15, 2020

BIDAR DISTRICT DAILY CRIME UPDATE 15-08-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 15-08-2020

 

ಸಿ.ಇ.ಎನ್ ಕ್ರೈಂ ಪೊಲೀಸ ಠಾಣೆ ಅಪರಾಧ ಸಂಖ್ಯೆ 10/2020 ಕಲಂ 419, 420 ಐಪಿಸಿ ಮತ್ತು ಕಲಂ 66(ಡಿ) ಐ.ಟಿ ಆಕ್ಟ್ :-

 

ದಿನಾಂಕ : 14/08/2020 ರಂದು 1830 ಗಂಟೆಗೆ ಫಿರ್ಯಾದಿ ಶ್ರೀ ಲಾಲಪ್ಪಾ ತಂದೆ ಬಕ್ಕಪ್ಪಾ ಭವಾನಿ ವಯ: 42 ವರ್ಷ ಜಾ: ಎಸ್.ಸಿ ಹೊಲಿಯ ಉ: ಯರನಳ್ಳಿ ಪಂಚಾಯತ ಬಿಲ್ ಕಲೆಕ್ಟರ್ ಮು: ಓಡವಾಡ (ವಾಲದೊಡ್ಡಿ) ತಾ: ಜಿ: ಬೀದರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೇನೆಂದರೆ, ಈಗ ಸುಮಾರು 9 ತಿಂಗಳ ಹಿಂದೆ ನಾಪತೋಲನಲ್ಲಿ ಚಹಾ ಕುಡಿಯುವ ಕಪ್ ಗಳು ಆರ್ಡರ ಮಾಡಿ ಅವುಗಳು ಬಂದ ನಂತರ  ಇಷ್ಟವಾಗಲಿಲ್ಲದರಿಂದ ಅವುಗಳನ್ನು ಮರಳಿ ಕಳುಹಿಸಿದ್ದು  ನಂತರ ದಿನಾಂಕ : 23/07/2020 ರಂದು ನಾಪತೋಲ ಕಂಪನಿಯಿಂದ ಫೀರ್ಯಾದಿಗೆ ಒಂದು ಸ್ಪೀಡ ಪೋಸ್ಟ ಮೂಲಕ ಒಂದು ಪತ್ರ ಬಂದಿದ್ದು, ಅದರಲ್ಲಿ ನಾಪತೋಲ ಕಂಪನಿಯ ಹುಟ್ಟು ಹಬ್ಬದ ಪ್ರಯುಕ್ತ ನಡೆಸಲಾದ ಡ್ರಾ ನಲ್ಲಿ  ನಿಮಗೆ 12 ಲಕ್ಷ ಬಹುಮಾನ ಬಂದಿದೆ, ಸದರಿ ಹಣ ಪಡೆಯಲು ಮೊಬೈಲ ಸಂ: 8929915137 ನೇದ್ದಕ್ಕೆ ಕರೆ ಅಥವಾ ವಾಟ್ಸಾಪ್ ಮೆಸೆಜ ಮಾಡುವಂತೆ ಹಾಗು ಬಹುಮಾನದ ನಿಯಮಾವಳಿಗಳು ಇದ್ದು, ಅದರೊಂದಿಗೆ ಬಹುಮಾನದ ಸ್ಕ್ರ್ಯಾಚ್ ಕುಪನ್ ಕಳುಹಿಸಿದ್ದು, ಕುಪನ್ ಸ್ಕ್ರ್ಯಾಚ್  ಮಾಡಿ ನೋಡಲು 12 ಲಕ್ಷ ಬಹುಮಾನ ಗೆದ್ದ ಬಗ್ಗೆ ಇದ್ದಿತ್ತು ಮತ್ತು ಅದರಲ್ಲಿ   ಬ್ಯಾಂಕ ಖಾತೆಯ ವಿವರ, ಆಧಾರ ಕಾರ್ಡ, ಪ್ಯಾನ ಕಾರ್ಡ ಸಂಖ್ಯೆಗಳು ಭರ್ತಿ ಮಾಡಿ ವಾಟ್ಸಾಪ್ ಗೆ ಕಳುಹಿಸುವಂತೆ ತಿಳಿಸಿದ್ದು ಇತ್ತು.  ಮರುದಿವಸ ದಿನಾಂಕ : 24/07/2020 ರಂದು ಸದರಿ ಪತ್ರದಲ್ಲಿನ ಮೊಬೈಲ ಸಂ: 8929915137 ನೇದ್ದಕ್ಕೆ ಫೀರ್ಯಾದಿಯು ಕರೆ ಮಾಡಿದಾಗ ನಾಪತೋಲ ಕಂಪನಿಯವರೆಂದು ಒಬ್ಬ ವ್ಯಕ್ತಿ ಹಿಂದಿಯಲ್ಲಿ ಮಾತಾಡಿ ನೀವು ಗೆದ್ದ ಬಹುಮಾನದ ಹಣ 7-8 ದಿವಸಗಳ ಒಳಗಾಗಿ ಪಡೆಯಬೇಕು ಇಲ್ಲದಿದ್ದರೆ ಹಣ ವಾಪಸ ಹೋಗುತ್ತವೆ ಅಂತ ಹೇಳಿದರು. ಆಗ ನಾನು ಅವರಿಗೆ ನಮಗೆ ಹಿಂದಿ ಸರಿಯಾಗಿ ಮಾತನಾಡಲು ಬರುವುದಿಲ್ಲ ಎಂದು ಹೇಳಿದಾಗ ಅವನು ನಮ್ಮ ಕಂಪನಿಯ ಕನ್ನಡದಲ್ಲಿ ಮಾತಾಡುವವರು 2-3 ದಿವಸಗಳಲ್ಲಿ ನಿಮಗೆ ಕರೆ ಮಾಡಿ ಎಲ್ಲಾ ವಿಷಯ ವಿವರವಾಗಿ ತಿಳಿಸುತ್ತಾರೆ ಅಂತ ಹೇಳಿದರು. ನಂತರ ದಿನಾಂಕ : 28/07/2020 ರಂದು ಮೊಬೈಲ ಸಂ: 9073407894 ರಿಂದ ಕರೆ ಮಾಡಿ ನಾಪ್ತೊಲ್ ಕಂಪನಿಯವರೆಂದು ಕನ್ನಡದಲ್ಲಿ ಮಾತಾಡಿ ನೀವು ಡ್ರಾನಲ್ಲಿ ಗೆದ್ದ 12 ಲಕ್ಷ ಹಣ ಪಡೆಯಬೇಕಾದರೆ, ನೀವು ರಾಜ್ಯ ಸಕರ್ಾರದ 24,000/- ರೂಪಾಯಿ ಮತ್ತು ಕೇಂದ್ರ ಸಕರ್ಾರದ 51,200/- ರೂಪಾಯಿ ಟ್ಯಾಕ್ಸ ಕಟ್ಟಬೇಕಾಗುತ್ತದೆ, ಹಣ ಪಾವತಿಸಿದ ನಂತರ 12 ಲಕ್ಷ ರೂಪಾಯಿ ನಿಮ್ಮ ಖಾತೆಗೆ ಜಮಾ ಮಾಡುತ್ತೇವೆ ಎಂದು ತಿಳಿಸಿ   ವಾಟ್ಸಾಪ್ ಗೆ ಗೂಗಲ ಪೇ ಮತ್ತು ಫೋನ ಪೇ ಸಂ: 7838185448 ಮತ್ತು ಎಸ್.ಬಿ.ಐ ಬ್ಯಾಂಕ ಖಾತೆ ಸಂ: 32035464488(ಐ.ಎಫ್.ಎಸ್.ಸಿ ಕೋಡ : ಎಸ್.ಬಿ.ಐ.ಎನ್ 0018985, ಶುಭಜೀತ ಅಧಿಕಾರಿ) ನೇದ್ದು ಕಳುಹಿಸಿದರು. ಆಗ ಫಿರ್ಯಾದಿಯು ಅದೆ ದಿವಸ ಎಸ್.ಬಿ.ಐ ಬ್ಯಾಂಕಿಗೆ ಹೋಗಿ ಮೇಲೆ ತಿಳಿಸಿದ ಬ್ಯಾಂಕ ಖಾತೆ ಸಂ: 32035464488 ನೇದ್ದಕ್ಕೆ 24,000/- ರೂ ಜಮಾ ಮಾಡಿದ್ದು, ನಂತರ ಮರುದಿವಸ ಸದರಿ ವ್ಯಕ್ತಿ ಪುನಃ ಕರೆ ಮಾಡಿ ಇನ್ನು 51,200/- ರೂ ಪಾವತಿಸಲು ಹೇಳಿ  ನನ್ನ ಮೊಬೈಲಿಗೆ ಸದರಿ ಹಣ ಪಾವತಿಸದರಿಂದ 12 ಲಕ್ಷ ರೂಪಾಯಿ ನನ್ನ ಖಾತೆಗೆ ಜಮಾ ಆಗುವುದು ನಿಂತಿದೆ ಎಂದು ಮೆಸೇಜ ಕಳುಹಿಸಿದರು. ಆಗ ಫಿರ್ಯಾದಿಯು ದಿನಾಂಕ : 29/07/2020 ರಂದು ಖಾತೆಗೆ 51,200/- ರೂ ಜಮಾ ಮಾಡಿರುತ್ತಾರೆ  ದಿನಾಂಕ : 30/07/2020 ರಂದು ಫಿರ್ಯಾದಿ ಮೊಬೈಲಿಗೆ ಎನ್.ಓ.ಸಿ ಮತ್ತು ಎಲ್.ಪಿ.ಸಿ ಯ 1,02,400/- ರೂ ಪಾವತಿಸದರಿಂದ ನಿಮ್ಮ ಖಾತೆಯಲ್ಲಿ 12 ಲಕ್ಷ ರೂಪಾಯಿ ಹೋಲ್ಡ ಆಗಿರುತ್ತವೆ ಅಂತ ಸಂದೇಶ ಬಂದಿದ್ದರಿಂದ ಫಿರ್ಯಾದಿಯು ಸದರಿ ವ್ಯಕ್ತಿಗೆ ಕರೆ ಮಾಡಿದಾಗ ಸದರಿ 1,02,400/- ರೂ ಹಣ ಕೂಡಲೆ ಜಮಾ ಮಾಡಿದರೆ, ನೀವು ಗೆದ್ದ 12 ಲಕ್ಷ ರೂಪಾಯಿ ನಿಮ್ಮ ಖಾತೆಯಲ್ಲಿ ಜಮಾ ಆಗುತ್ತವೆ ಅಂತ ಹೇಳಿದನು. ಆಗ ಫಿರ್ಯಾದಿರವರು ಶ್ರೀ ಕಾಶಿನಾಥ ಭಾವಿಕಟ್ಟಿ ರವರಲ್ಲಿ ಹೋಗಿ ಸದರಿ ಬಹುಮಾನ ಗೆದ್ದ ಬಗ್ಗೆ ವಿವರವಾಗಿ ಹೇಳಿ ವಿಚಾರಿಸಲು ಅವರು ನನಗೆ ಇವೆಲ್ಲಾ ಮೋಸ ಇರುತ್ತದೆ, ಎಂದು ಹೇಳಿದಾಗ ಫೀರ್ಯಾದಿಯು ಸದರಿ ವ್ಯಕ್ತಿಗೆ ಕರೆ ಮಾಡಿ ನಮಗೆ ಯಾವುದೆ ಬಹುಮಾನದ ಹಣ ಬೇಕಾಗಿಲ್ಲ, ನಮ್ಮ ಹಣ ನಮಗೆ ವಾಪಸ್ಸ ಕೊಡಿ ಎಂದು ಕೇಳಿದಾಗ ಅವನು ತೆರಿಗೆ ಇಲಾಖೆಗೆ ಪತ್ರ ಬರೆದು ನಿಮ್ಮ ಹಣ ಮರಳಿ ನಿಮಗೆ ಹಾಕುತ್ತೇವೆ ಅದಕ್ಕೆ ಒಂದೆರಡು ದಿವಸ ಸಮಯ ಬೇಕಾಗುತ್ತದೆ ಎಂದು ತಿಳಿಸಿದನು. ನಂತರ ಮರು ದಿವಸ ಫಿರ್ಯಾದಿಯು ಸದರಿ ಮೊಬೈಲ ಸಂಖ್ಯೆಗಳಾದ : 9073407894 ಮತ್ತು 8929915137 ನೇದ್ದವುಗಳಿಗೆ ಕರೆ ಮಾಡಿದರೆ ಅವು ಸ್ವಿಚ್ ಆಫ್ ಆಗಿದ್ದವು. ಆ ನಂತರ ಸುಮಾರು ದಿವಸಗಳ ವರೆಗೆ ಸದರಿ ಮೊಬೈಲ ಸಂಖ್ಯೆಗಳಿಗೆ ಕರೆ ಮಾಡಿ ಮಾತಾಡಲು ಪ್ರಯತ್ನಿಸಿದ್ದು, ಆದರೆ ಅವುಗಳು ಬಂದ ಆಗಿರುತ್ತವೆ. ಯಾರೊ ಅಪರಿಚಿತ ವಂಚಕ ವ್ಯಕ್ತಿಗಳು ನ್ಯಾಪತೋಲ ಕಂಪನಿಯವರೆಂದು ಹೇಳಿ ನನಗೆ ನಾಪತೋಲನಲ್ಲಿ 12 ಲಕ್ಷ ಬಹುಮಾನ ಗೆದ್ದಿದ್ದೇನೆ ಅಂತ ಸುಳ್ಳು ಪತ್ರ ಕಳುಹಿಸಿ ಅದರ ಮುಖಾಂತರ ನನ್ನ ಮಾಹಿತಿಗಳು ಪಡೆದುಕೊಂಡು ನಾನು ಗೆದ್ದ ಬಹುಮಾನದ ಹಣ ಪಡೆಯಬೇಕೆಂದರೆ, ಟ್ಯಾಕ್ಸಗಳು ಕಟ್ಟಬೇಕಾಗುತ್ತದೆ ಎಂದು ಹೇಳಿ ನಂಬಿಸಿ ನನ್ನಿಂದ 75,200/- ರೂ ಹಾಕಿಸಿಕೊಂಡು ಮೋಸ ಮಾಡಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 36/2020 ಕಲಂ 379 ಐಪಿಸಿ :-

ದಿನಾಂಕ 14/08/2020 ರಂದು 1900 ಗಂಟೆಗೆ ಫಿರ್ಯಾದಿ ಅನೀಲಕುಮಾರ ತಂದೆ ಬಸವರಾಜ ರಾಠೋಡ ವಯ-31  || ಸಹಾಯಕ ಅಭಿಯಂತರರು ಕೆ.ಐ.ಎ.ಡಿ.ಬಿ ಬೀದರ ರವರು ಠಾಣೆಗೆ ಹಾಜರಾಗಿ ಒಂದು ದೂರು ನೀಡಿದ್ದು ಸಾರಾಂಶವೆನೆಂದರೆ  ಬೀದರ ಕೋಳಾರ ಕೈಗಾರಿಕಾ ಪ್ರದೇಶದ 2 ನೇ ಹಂತದಲ್ಲಿರುವ ರಸ್ತೆ ಸಂ 2/2,1/1,2/8 ರಲ್ಲಿ ಹೊಂದಿಕೊಂಡಿರುವ ಬೆಳ್ಳುರಾ ಗ್ರಾಮದ  ಸರ್ವೇ ನಂ. 8,20/11,20/17,20/12 ರಲ್ಲಿ ಒಟ್ಟು 34 ವಿದ್ಯುತ ಕಂಬಗಳಿಗೆ 2017-18 ನೇ ಸಾಲಿನಲ್ಲಿ ಎಚ್.ಟಿ ಮತ್ತು ಎಲ್.ಟಿ ಅಲುಮಿನಿಯಂ  ವಿದ್ಯುತ ತಂತಿಯನ್ನು ಅಳವಡಿಸಿದ್ದು ಇರುತ್ತದೆ.    ದಿನಾಂಕ 08,09/08/2020 ರ ರಾತ್ರಿ ವೇಳೆಯಲ್ಲಿ ಕೆ.ಐ.ಎ.ಡಿ.ಬಿ ಕೈಗಾರಿಕೆ ಪ್ರದೇಶದಲ್ಲಿನ 34 ಕಂಬಳಗಳ ವಿದ್ಯುತ ತಂತಿ ಯಾರೋ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೊಗಿರುತ್ತಾರೆ  ಅಂತಾ ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

Friday, August 14, 2020

BIDAR DISTRICT DAILY CRIME UPDATE 14-08-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 14-08-2020

 

ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 92/2020 ಕಲಂ 302 ಐಪಿಸಿ :-

ದಿನಾಂಕ 13/08/2020 ರಂದು 21;00 ಗಂಟೆಗೆ ಫಿರ್ಯಾದಿ ಶ್ರೀ ನಿಲೇಶ ತಂದೆ ಮಾದವರಾವ ಕುಲಕರ್ಣಿ ಸಾ: ಸಿ.ಎಮ.ಸಿ ಕಾಲೋನಿ ಮೈಲೂರ ಬೀದರ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ ಫಿರ್ಯಾದಿಯು ಬೀದರ ಝೀರಾ ಕನವೆನಷನ್ ಹಾಲದಲ್ಲಿ ಮ್ಯಾನೇಜರ ಅಂತಾ ಕೆಲಸ ಮಾಡಿಕೊಂಡಿದ್ದು ಇವರ ಕನವೆನಷನ್ ಹಾಲಿನ ಹಿಂದುಗಡೆ ಕಂಪೌಂಡಗೆ ಹತ್ತಿ ಚಿಕ್ಕಪೇಟದಿಂದ ಗುರುದ್ವಾರಾ ಕಡೆಗೆ ಹಾಯ್ದು ಹೋಗುವ ರಸ್ತೆಯಿಂದ ಶಿವಮಂದಿರ ದಿಂದ ಕೆ.ಹೆಚ.ಬಿ ಕಾಲೋನಿ ಕಡೆಗೆ ಬರುವ ರೋಡ ಇರುತ್ತದೆ.   ಝಿರಾ ಕನವಿನಷನ್ ಹಾಲದಲ್ಲಿ ಬಾಬುಸಿಂಗ ಅಂತಾ ವಾಚಮೆನ ಇರುತ್ತಾರೆ.  ಹೀಗಿರುವಲ್ಲಿ   ದಿನಾಂಕ 13/08/2020 ರಂದು ಅಂದಾಜು ಸಾಯಂಕಾಲ 6;13 ಗಂಟೆ ಸುಮಾರಿಗೆ   ವಾಚಮೆನ ಆದ ಬಾಬುಸಿಂಗ ಇತನು   ಫೊನ ಮಾಡಿ ತಿಳಿಸಿದೆನೆಂದರೆ,   ಕನವೆನಷನ್ ಹಾಲ ಕಂಪೌಂಡ ಗೊಡೆಯ ಪಕ್ಕದಲ್ಲಿ ಗಣೇಶ ಮಂದಿರ ಹಾಗೂ ಶಿವಮಂದಿರ ರೋಡಿನ ಬದಿಯಲ್ಲಿ ಒಂದು ಅಪರಿಚಿತ ವ್ಯಕ್ತಿಯ ಮೃತದೇಹ ಬಿದ್ದಿರುತ್ತದೆ ಅಂತಾ ತಿಳಿಸಿದ ಕೂಡಲೇ  ಸ್ಥಳಕ್ಕೆ ಬಂದು  ನೋಡಲು ಒಬ್ಬ ಅಪರಿಚಿತ ವ್ಯಕ್ತಿ ಅಂದಾಜು ವಯ 40-45 ವಯಸ್ಸಿನ ವ್ಯಕ್ತಿಯನ್ನು ಯಾರೋ ಅಪರಿಚಿತರು  ು ದಿನಾಂಕ 13/08/2020 ರಂದು ಬೆಳಿಗ್ಗೆ 05;00 ಗಂಟೆಯಿಂದ ಸಾಯಂಕಾಲ 6;00 ಗಂಟೆಯ ಮದ್ಯ ಅವಧಿಯಲ್ಲಿ ಯಾವುದೋ ದುರುದ್ದೇಶದಿಂದ ಸದರಿ ವ್ಯಕ್ತಿಯ ಕುತ್ತಿಗೆಗೆ ಬೆಲ್ಟನಿಂದ ಸುತ್ತಿ ಕೊಲೆ ಮಾಡಿ ಬಿಸಾಡಿರುತ್ತಾರೆ. ಸದರಿ ಮೃತ ದೇಹವು ಬೋರಲಾಗಿ ಬಿದ್ದಿದ್ದು ಮೈಮೇಲೆ ಒಂದು ನೀಲಿ ಬಣ್ಣದ ಹೂವಿನ ಚಿತ್ರಗಳು ಇರುವ ಶರ್ಟ, ನಾಸಿ ಬಣ್ಣದ ಅಂಡರವೇರ ಫೀಕಾಕ ನೀಲಿ ಬಣ್ಣದ ಝೀನ್ಸ ಪ್ಯಾಂಟ ಇದ್ದು ಸೊಂಟದಿಂದ ತೊಡೆಯ ವರೆಗೆ ಕಳಚಿದ್ದು ಇರುತ್ತದೆ. ಕುತ್ತಿಗೆಯ ಮೇಲೆ ಬೆಲ್ಟದಿಂದ ಬಿಗಿದು ಕೊಲೆ ಮಾಡಿದ್ದು ಇರುತ್ತದೆ.  ಪ್ರಕರಣ ದಾಖಲಿಸಿ ತನಿಖೆ ಕೈಕೋಳ್ಳಲಾಗಿದೆ.

ಮೆಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 62/2020 ಕಲಂ 379 ಐಪಿಸಿ :-       

ದಿನಾಂಕ 13-08-2020 ರಂದು 1215 ಗಂಟೆಗೆ ಫಿರ್ಯಾದಿ ಶ್ರೀ ವೆಂಕಟ ತಂದೆ ವೈಜಿನಾಥ ಜಾಧವ ವಯ: 50 ವರ್ಷ ಜಾ: ಮರಾಠಾ ಉ: ಒಕ್ಕಲುತನ ಸಾ: ಅಟ್ಟರಗಾ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಂಶವೆನೆಂದರೆ.  ಫೀರ್ಯಾದಿಯು ಒಕ್ಕಲುತನ ಕೆಲಸ ಮಾಡಿಕೊಂಡಿದ್ದು ಇವರ  ಬಳಿ ಎರಡು ಆಕಳು ಮತ್ತು ಅವುಗಳ  ಕರುಗಳು ಹಾಗೂ  ಒಂದು ಎಮ್ಮೆ ಸೇರಿ ಒಟ್ಟು 06 ದನಗಳು ಇರುತ್ತವೆ. ಸದರಿ ದನಗಳನ್ನು ಇವರ   ಶಿವಾರದಲ್ಲಿರುವ   ಹೊಲ ಸವರ್ೇ ನಂ 35 ರಲ್ಲಿ ದಿನಾಲು ಕಟ್ಟುತ್ತಿದ್ದು ದಿನಾಂಕ: 07/08/2020 ರಂದು   ದನಗಳನ್ನು ಹೊಲದಲ್ಲಿ ಮೇಯಿಸಿ ಸಾಯಂಕಾಲ ಹೊಲದಲ್ಲಿ ಇರುವ  ತಗಡದ ಶೆಡ್ಡಿನ ಮುಂದೆ  ಕಟ್ಟಿದ್ದು  ಹೊಲದಿಂದ ಊಟಕ್ಕೆಂದು ರಾತ್ರಿ 8:00 ಗಂಟೆಗೆ ಮನೆಗೆ ಬಂದಿದ್ದು ಇರುತ್ತದೆ.  ನಂತರ ಮರಳಿ ದಿನಾಂಕ: 08/08/2020 ರಂದು ನಸುಕಿನ ಜಾವ 0400  ಗಂಟೆಗೆ   ಹೊಲಕ್ಕೆ ಹೋದಾಗ ನಮ್ಮ ಹೊಲದಲ್ಲಿ ತಗಡದ ಶೆಡ್ಡಿನ ಮುಂದೆ ಖುಲ್ಲಾಜಾಗೆಯಲ್ಲಿ ಕಟ್ಟಿದ  ಎಮ್ಮೆ ಇದ್ದಿರಲಿಲ್ಲ.   ಅಂದಾಜು 10 ವರ್ಷದ್ದು, ಕರಿಬೂದು ಬಣ್ಣದು ಅಂದಾಜು ಕಿ: 40,000/- ರೂ ಇರುತ್ತದೆ.  ಸದರಿ ನನ್ನ ಎಮ್ಮೆಯ ಹಗ್ಗ ಕಟ್ಟಿದ ಜಾಗದಿಂದ ಹಗ್ಗ ಕತ್ತರಿಸಿ   ಎಮ್ಮೆಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಧನ್ನೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 114/2020 ಕಲಂ 457, 380 ಐಪಿಸಿ :-

ದಿನಾಂಕ 13/08/2020 ರಂದು  1700  ಗಂಟೆಗೆ ಫಿರ್ಯಾದಿ ಬಾಲಾಜಿ ತಂದೆ ಶ್ರೀಪತರಾವ ಕರಡ್ಯಾಳೆ ವಯಃ 52 ವರ್ಷ ಜಾತಿಃ ಮರಾಠಾ ಉಃ ಒಕ್ಕಲುತನ ಮುಃ ಅಮದಾಬಾದ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸದರ ಸಾರಾಂಶವೆನೆಂದರೆ   ಫಿರ್ಯಾದಿಯು ಅಮದಾಬಾದ ಗ್ರಾಮ ಶಿವಾರದ ಸರ್ವೆ ನಂ 9  ನೇದರಲ್ಲಿ ಹೊಲಕ್ಕೆ ಹೋಗಿ ಕೆಲಸ ಮಾಡಿಕೊಂಡು ಮನೆಗೆ ಬರುತ್ತಿದ್ದು ಪ್ರತಿ ದಿನದಂತೆ ದಿನಾಂಕ 24/07/2020 ರಂದು ಮುಂಜಾನೆ 9-00 ಗಂಟೆಯ   ಹೊಲಕ್ಕೆ ಹೋಗಿ ಸಾಯಂಕಾಲ 6-30 ಗಂಟೆಯ ವರೆಗೆ  ಹೊಲದಲ್ಲಿ ಕೆಲಸ ಮಾಡಿ ಕೆಲವೊಂದು ಸಾಮಾನುಗಳು   ಶೆಡ್ಡನಲ್ಲಿ ಇಟ್ಟು ಮರಳಿ ಮನೆಗೆ ಬಂದಿದ್ದು ಇರುತ್ತದೆ.    ಹೀಗಿರುವಲ್ಲಿ ದಿನಾಂಕ 25/07/2020 ರಂದು ಮುಂಜಾನೆ  1100 ಗಂಟೆಯ ಸುಮಾರಿಗೆ   ಹೊಲದ ಶೆಡ್ಡನಲ್ಲಿರುವ ಗಟಾರ (ಸ್ಪ್ರೇತರಲು ಹೋದಾಗ ಅಲ್ಲಿ ಶೇಡ್ಡಿನ  ಕೀಲಿ ಮುರಿದು ಯಾರೋ ಅಪರಿಚಿತ ಕಳ್ಳರು ಅದರಲ್ಲಿದ್ದ ಸಾಮಾನುಗಳು 1) 20 ಲೀಟರವುಳ್ಳ ಸಿಂಗಲ್ ಪಿಸ್ಟನ್ ಹೆಚ್.ಡಿ.ಪಿ ಸ್ಪೇರ್ ಅ.ಕಿ-19800/- 2)  ತ್ರಿಪಿಸ್ಟನ್ ಹೆಚ್.ಡಿ.ಪಿ, ಹೊಂಡಾ ಕಂಪನಿಯ (ತ್ರಿ.ಹೆಚ್.ಪಿ.ಕಿ-38,000/- 3) ಹೊಂಡಾ ಕಂಪನಿಯ ಫೋರ್ಟೇಬಲ್ ಪಂಪ್ ಅ.ಕಿ/ 22,000  4) ಡಿ..ಪಿ ಗೊಬ್ಬರ 50 ಕೆ.ಜಿವುಳ್ಳ ಪ್ರತಿ ಬ್ಯಾಗಗೆ 1300/- ರೂ.ಗಳು ಒಟ್ಟು 10 ಬ್ಯಾಗಗಳು ಅ.ಕಿ-13,000/- 5) .ಪಿ.ಎಲ್ ಕಂಪನಿಯ ಗೊಬ್ಬರ 50 ಕೆ.ಜಿವುಳ್ಳ 10 ಬ್ಯಾಗಗಳು ಇದರ ಪ್ರತಿ ಬ್ಯಾಗಿನ ಬೆಲೆ 900/- ಒಟ್ಟು 9000 ರೂ.ಗಳು 6) ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಔಷಧ ಫೇಮ್ 1 ಲೀಟರ್ ಇದ್ದು ಅದರ ಅ.ಕಿ 16000 ರೂ.ಗಳು 7) ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಔಷಧ ನೆಟಿಯೋ 2 ಕೆ.ಜಿ ಇದ್ದು ಪ್ರತಿ ಕೆ.ಜಿಗೆ 7000 ಇದ್ದು 2 ಕೆ.ಜಿ ಗೆ 14000/ರೂ.ಗಳು ಆಗುತ್ತದೆ. ಹೀಗೆ ಒಟ್ಟು 1,31,800 ರೂ.ಗಳು ಬೆಲೆವುಳ್ಳು ಸಾಮಾನುಗಳು ಯಾರೋ  ಅಪರಿಚಿತ ಕಳ್ಳರು  ಶೇಡ್ಡಿನ ಕೀಲಿ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 ಔರಾದ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 61/2020 ಕಲಂ 78(3) ಕೆ.ಪಿ. ಕಾಯ್ದೆ :-

ದಿನಾಂಕ 13-08-2020 ರಂದು 1130 ಗಂಟೆಗೆ ಎಎಸ್ಐ ರವರು  ಠಾಣೆಯಲ್ಲಿದ್ದಾಗ ಔರಾದ(ಬಿ) ಪಟ್ಟಣದ ಕಮೀಟಿ ಹಾಲ  ಹತ್ತಿರ ರೋಡಿನ ಮೇಲೆ ಒಬ್ಬ ವ್ಯೆಕ್ತಿ ಮಟಕಾ ಚೀಟಿ ಬರೆದುಕೊಡುತ್ತಾ ಅಕ್ರಮ ಚಟುವಟಿಕೆಯಲ್ಲಿ ತೊಡಗಿರುತ್ತಾನೆ ಎಂದು ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಕಮೀಟಿ ಹಾಲ ಹತ್ತಿರ ಹೋಗಿ   ನೋಡಲು ಒಬ್ಬ ವಕ್ತಿಯು ಹೋಗಿ ಬರುವ ಸಾರ್ವಜನಿಕರಿಗೆ ಕೂಗಿ ಕೂಗಿ ಕರೆದು ಅದೃಷ್ಟ ಸಂಖ್ಯೆಗೆ ಹಣ ಹಚ್ಚ್ಚಿದರೆ 1/-ರೂ ಗೆ 80/-ರೂ 10 ರೂ ಗೆ 800/-ರೂ ಕೊಡುತ್ತೇವೆ ಎಂದು ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅನ್ನುವ ಅಂಕಿ ಸಂಖ್ಯೆಯ ಚೀಟಿಗಳು ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚಿತಪಡಿಸಿಕೊಂಡು ಸದರಿ ಅದೃಷ್ಟ ಸಂಖ್ಯೆಗೆ ಹಣ ಪಡೆದುಕೊಳ್ಳುತ್ತಿದ್ದವನು ಸ್ಥಳದಿಂದ ಓಡಿ ಹೋಗುವ ಸಂಭವ ಕಂಡು ಬಂದಿರುವ   ದಾಳಿ ಮಾಡಿದಾಗ  ಅದೃಷ್ಟ ಸಂಖ್ಯೆಗೆ ಹಣ ಕೊಡುತ್ತಿದ್ದ ಜನರು ಅಲ್ಲಿಂದ ಓಡಿ ಹೋಗಿರುತ್ತಾರೆ. ಸದರಿ ಹಣ ಪಡೆದುಕೊಳ್ಳುತ್ತಿದ್ದ ವ್ಯಕ್ತಿಗೆ ಹಿಡಿದುಕೊಂಡು ಹೆಸರು ವಿಳಾಸ ವಿಚಾರಿಸಿ ಅಂಗ ಪರಿಶೀಲನೆ ಮಾಡಿ ನೋಡಲು ತನ್ನ ಹೆಸರು ಯುನುಸಮಿಯಾ ತಂದೆ ಇಸ್ಮಾಯಿಲಸಾಬ ಶೇಖ ವಯ:60ವರ್ಷ ಉ: ಹೊಟೆಲ ಕೆಲಸ ಸಾ; ಹನುಮಾನ ಮಂದಿರ ಹತ್ತಿರ ಔರಾದ ಅಂತ ತಿಳಿಸಿದ್ದು ಈತನ ಹತ್ತಿರ ನಗದು ಹಣ 1800/-ರೂ ,ಅಂಕಿ ಸಂಖ್ಯೆ ಬರೆದ 1 ಮಟಕಾ ಚೀಟಿ ,ಒಂದು ಪೆನ್ನು ಮತ್ತು ಸ್ಯಾಮಸಂಗ ಕಂಪನಿಯ ಮೋಬೈಲ ಇದ್ದವು ಸದರಿಯವನು ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಸಾರ್ವಜನಿಕರಿಂದ ಅಂಕಿ ಸಂಖ್ಯೆ ಮೇಲೆ ಹಣ ಪಡೆದುಕೊಂಡು ಅದೃಷ್ಟದ ಆಟದ ಮಟಕಾ ಚೀಟಿಗಳು ಬರೆದುಕೊಳ್ಳುತ್ತಿದ್ದ ಬಗ್ಗೆ ತಿಳಿಸಿರುತ್ತಾನೆ. ಹೀಗೆ ನಗದು ಹಣ 1800/-ರೂ. 1 ಮಟಕಾ ಚೀಟಿ 1 ಪೆನ್ನು ಮತ್ತು ಸ್ಯಾಮಸಂಗ ಕಂಪನಿಯ ಮೋಬೈಲ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.