Police Bhavan Kalaburagi

Police Bhavan Kalaburagi

Thursday, September 26, 2019

KALABURAGI DISTRICT REPORTED CRIMES


ಕಳವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಮುತ್ತಪ್ಪ ತಂದೆ ನಿಂಗಪ್ಪ ದಿಡ್ಡಿಮನಿ ಸಾ|| ಯಡ್ರಾಮಿ ತಾ|| ಯಡ್ರಾಮಿ ರವರದು ಎರಡು ಮನೆಗಳಿರುತ್ತವೆ ಅವು ಅಕ್ಕ ಪಕ್ಕ ಇದ್ದು ಹಳೆ ನಮ್ಮ ಮನೆಯ ಟ್ರಂಕಿನಲ್ಲಿ ನಾವು 1] 10 ಗ್ರಾಮಿನ ಒಂದು ಬಂಗಾರದ ಬೋರಮಾಳ 2] 5 ಗ್ರಾಮಿನ 3 ಬಂಗಾರದ ಬೋರಮಾಳ 3]  5 ಗ್ರಾಮಿನ ಒಂದು ಬಂಗಾರದ ಜೀರಾಮನಿ 4] 5 ಗ್ರಾಮಿನ ಒಂದು ಜೊತೆ ಬಂಗಾರದ ಜುಮಕಿ & ಬೆಂಡೋಲಿ 5] 5 ಗ್ರಾಮಿನ 3 ಸಣ್ಣು ಮಕ್ಕಳ ಬಂಗಾರದ ಉಂಗುರ ಹಾಗೂ 6] ನಗದು ಹಣ 40,000/- ರೂ ಬಂಗಾರ ಸಾಮಾನುಗಳನ್ನು ಹಳೆಯ ಮನೆಯ ಒಳಗಿನ ಕೋಣೆಯಲ್ಲಿಟ್ಟು ಟ್ರಂಕಿಗೆ ಕೀಲಿ ಹಾಕಿ ಹೊರಗಿನ ಕೋಣೆಯಲ್ಲಿ ನಿನ್ನೆ ದಿನಾಂಕ: 24-09-2019 ರಂದು ರಾತ್ರಿ 10-00 ಗಂಟೆಯ ನಮ್ಮ ತಾಯಿ ಶಾಂತಬಾಯಿ ಮತ್ತು ನಮ್ಮ ಅಕ್ಕ ಇವರು ಮನೆಗೆ ಕೀಲಿ ಹಾಕದೇ ಮಲಗಿಕೊಂಡಿದರು, ಹೊಸ ಮನೆಯಲ್ಲಿ ನಾನು ನಮ್ಮ ತಮ್ಮಂದಿರರಾದ ಬಸವರಾಜ ಮತ್ತು ಮಡಿವಾಳಪ್ಪ ರವರು ಕೂಡಿಕೊಂಡು ಮಲಗಿದೇವು, ದಿನಾಂಕ: 25-09-2019 ರಂದು 5-00 ಗಂಟೆಯ ಸುಮಾರಿಗೆ ನಮ್ಮ ತಾಯಿ ಶಾಂತಬಾಯಿ ಇವರು ಒಮ್ಮೇಲೆ ಚಿರಾಡುತ್ತಾ ಅಳುತ್ತಿದ್ದರು ನಾವು ಗಾಬರಿಗೊಂಡು ಹಳೆಯ ಮನೆಯ ಒಳಗಿನ ಕೋಣೆಗೆ ನಾನು ತಮ್ಮಂದಿರರಾದ ಬಸವರಾಜ ಮತ್ತು ಮಡಿವಾಳಪ್ಪ ನಮ್ಮ ಅಕ್ಕ ಲಕ್ಕಮ್ಮ ಎಲ್ಲರೂ ಕೂಡಿ ಒಳಗಡೆ ಹೋಗಿ ನೋಡಲಾಗಿ ಟ್ರಂಕಿನಲ್ಲಿದ ಒಟ್ಟು 1,68,000/- ರೂ ಮೌಲ್ಯ ಬಂಗಾರ ಸಾಮಾನುಗಳು ಮತ್ತು ನಗದು ಹಣ ನಿನ್ನೆ ದಿನಾಂಕ 24-09-2019 ರಂದು 10-00 ಗಂಟೆಯಿಂದ ದಿನಾಂಕ: 25-09-2019 ರಂದು ಬೆಳಗೆ 5-00 ಎ.ಎಂ ಮದ್ಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಒಳಗಡೆ ಹೋಗಿ  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ,  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, September 25, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ: 23/09/2019  ರಂದು  ಬೆಳಿಗ್ಗೆ ನನ್ನ  ತಂದೆಯು ಟಿ ವಿ ಎಸ್ ಎಕ್ಸ್ ಎಲ್ ಮೊ ಸೈ ನಂ  ಕೆ ಎ - 32 ಎಸ್- 9203 ನೇದ್ದರ ಮೇಲೆ ಕಿರಾಣಿ ಸಾಮಾನು ತರುತ್ತೇನೆ ಅಂತಾ ಹೇಳಿ  ಶಹಾಬಾದಕ್ಕೆ ಹೋಗಿದ್ದರು.  12-30 ಪಿ ಎಮ್ ಕ್ಕೆ ನನಗೆ ಮಾಲಗತ್ತಿ ಹತ್ತಿರದ ಪಾನ್ ಡಬ್ಬಿಯ ಆನಂದ ಕೊಳ್ಳಿ ಇತನು ಫೋನ್ ಮಾಡಿ  ತಮ್ಮ ತಂದೆಯವರು ನಡೆಸಿಕೊಂಡು ಬರುತ್ತಿದ್ದ ಮೋ ಸೈ  ಟಿ ವಿ ಎಸ್ ಎಕ್ಸ್ ಎಲ್ ಕ್ಕೆ ಮಾಲಗತ್ತಿ ಕ್ರಾಸ್ ಹತ್ತಿರ ರಸ್ತೆ ಅಪಘಾವಾಗಿದೆ ಅಂತಾ ತಿಳಿಸಿರುತ್ತಾರೆ. ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ  ಕುಟುಂಬದವರಾದ ತಾಯಿ ಗುಂಡಮ್ಮ, ತಮ್ಮ ರಾಜಕುಮಾರ ಮತ್ತು ಸುರೇಶ ಮಿರಾಜ್ ಕರ್  ಶಹಾಬಾದ ಹಾಗೂ  ಆನಂದಕೊಳ್ಳಿ ಮಲ್ಲಿಕಾರ್ಜುನ ಇಡಗಿ ಇದ್ದರು.  ರಸ್ತೆಯ ಎಡಬದಿಗೆ ಬಿದ್ದ ನಮ್ಮ ತಂದೆಯನ್ನು ನೋಡಲಾಗಿ ಅವರ ಎಡಕಾಲಿಗೆ ಭಾರಿ ಗುಪ್ತ ಪೆಟ್ಟಾಗಿದ್ದು ಮತ್ತು ತಲೆಗೆ ಮುಖಕ್ಕೆ ಪೆಟ್ಟಾಗಿ ಬಾಯಿ, ಕಿವಿ, ಮತ್ತು  ಮೂಗಿನಿಂದ ರಕ್ತ ಬಂದು ಮೃತಪಟ್ಟಿದ್ದರು ಅಲ್ಲೆ ಇದ್ದ  ಆನಂದ ಮಿರಾಜ್ ಕರ್  ಮತ್ತು ಮಲ್ಲಿಕಾರ್ಜುನ ಇಟಗಿ ಇವರಿಗೆ ವಿಚಾರಿಸಲು ಗೊತ್ತಾಗಿದ್ದೇನೆಂದರೆ 12-30 ಪಿ ಎಮ್ ಸುಮಾರಿಗೆ ನಿಮ್ಮ ತಂದೆಯವರು ಟಿ ವಿ ಎಸ್ ಎಕ್ಸ್ ಎಲ್ ಮೊ ಸೈ ನಂ ಕೆ ಎ - 32 ಎಸ್ – 9203 ನೇದ್ದರ ಮೇಲೆ ಕಿರಾಣಿ ಸಾಮಾನು ತೆಗೆದುಕೊಂಡು ಬರುವಾಗ ಕ್ರಾಸ್ ಹತ್ತಿರ ಟರ್ನ್ ಮಾಡಿಕೊಂಡು ನಡೆದಾಗ ರಾವೂರು ರಸ್ತೆ ಕಡೆಯಿಂದ ಒಬ್ಬ ಮೊ ಸೈ ಚಾಲಕ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಿಮ್ಮ  ತಂದೆಯವರ ಮೊ ಸೈ ಕ್ಕೆ ಡಿಕ್ಕಿಪಡಿಸಿದ್ದರಿಂದ  ನಿಮ್ಮ ತಂದೆಯವರ ಎಡಗಾಲಿಗೆ ಭಾರಿ ಗುಪ್ತಪೆಟ್ಟಾಗಿದ್ದು ನೆಲಕ್ಕೆ ಬಿದ್ದು ಮೃತಪಟ್ಟಿರುತ್ತಾರೆ. ಮತ್ತು ಡಿಕ್ಕಿಪಡಿಸಿದವನ  ಹೆಸರು ಮತ್ತು ವಿಳಾಸ ತಿಳಿದಿರುವುದಿಲ್ಲಾ ಡಿಕ್ಕಿಪಡಿಸಿದವನ  Super Splendar   ಮೊ ಸೈ  ನಂ ಕೆ ಎ 32 ಇ ಸಿ 1372 ಇರುತ್ತದೆ ಅಂತಾ ಮಾಹಿತಿ ನೀಡಿದ್ದುರುತ್ತಾರೆ ಅಂತಾ ಶ್ರೀ ನಾಗೇಂದ್ರ ತಂದೆ ಬಸಣ್ಣ ಸಾ: ಮಾಲಗತ್ತಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಮಹಾಂತೇಶ ತಂದೆ ಬಂಡೇಪ್ಪ ಬಿರಾದಾರ ಸಾ|| ಯಡ್ರಾಮಿ ತಾ|| ಯಡ್ರಾಮಿ ರವರ  ಮನೆಯ ಪಕ್ಕದಲ್ಲಿ ನಮ್ಮ ತಮ್ಮಂದಿರರಾದ ಬಸವರಾಜ ಬಿರಾದಾರ, ಈರಣ್ಣ ಬಿರಾದಾರ ಇವರ ಮನೆಗಳು ಇರುತ್ತವೆ, ನಮ್ಮ ಮನೆಯ ಅಲ್ಮಾರಿಯಲ್ಲಿ 1,35,000/- ರೂ ನಗದು ಹಣ, ಮತ್ತು ಬೆಳ್ಳಿಯ ಸಾಮಾನುಗಳಾದ ಬೆಳ್ಳಿಯ ತಾಟ, ಗ್ಲಾಸ್, ಪೂಜಾ ಮಾಡುವ ಆರ್ತಿ ಸಟ್, ಹೀಗೆ ಒಟ್ಟು ಒಂದು ಕೇ.ಜಿ ಯಷ್ಟನ್ನು ಅಲ್ಮಾರಿಯಲ್ಲಿ ಇಟ್ಟಿದ್ದು ಇರುತ್ತದೆ, ನಿನ್ನೆ ದಿನಾಂಕ 23-09-2019 ರಂದು ನನ್ನ ಮಗಳು ಸವಿತಾ ಇವಳ ಡಿಲೆವರಿ (ಹೆರಿಗೆ) ಸಲುವಾಗಿ ನಮ್ಮ ಮನೆಯ ಬಾಗಿಲಗೆ ಕೀಲಿ ಹಾಕಿಕೊಂಡು ನಾನು ನನ್ನ ಹೆಂಡತಿ ಇಬ್ಬರು ಕೂಡಿ ಕಲಬುರಗಿಗೆ ದವಾಖಾನೆಗೆ ಹೋಗಿದ್ದೇವು, ಇಂದು ದಿನಾಂಕ 25-09-2019 ರಂದು ಬೆಳಿಗ್ಗೆ 03;30 ಗಂಟೆ ಸುಮಾರಿಗೆ ನಮ್ಮ ತಮ್ಮ ಈರಣ್ಣ ಇವರು ನನಗೆ ಫೋನ ಮಾಡಿ ನಾನು ಇಂದು ರಾತ್ರಿ ವೇಳೆಯಲ್ಲಿ 01;00 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆ ಮಾಡಲು ಎದ್ದಾಗ ನಿಮ್ಮ ಮನೆಯ ಬಾಗಿಲ ಕೀಲಿ ಹಾಕಿದ್ದಿತ್ತು, ನಂತರ ಇದೀಗ ಪುನಹ  ಮತ್ತೆ ಮೂತ್ರ ವಿಸರ್ಜನೆ ಮಾಡಲು ಎದ್ದು ನೋಡಿದಾಗ ನಿಮ್ಮ ಮತ್ತು ಬಸವರಾಜ ಬಿರಾದಾರ ರವರ ಮನೆಯ ಬಾಗಿಲ ಕೊಂಡಿಯನ್ನು ಯಾರೋ ಕಳ್ಳರು ಮುರಿದು ಬಾಗಿಲ ತೆರೆದಿರುತ್ತಾರೆ, ನೀವು ಬೇಗ ಬನ್ನಿ ಅಂತಾ ಹೇಳಿದ ಕೂಡಲೆ ನಾನು ನನ್ನ ಹೆಂಡತಿ ಇಬ್ಬರು ಕೂಡಿ ಮನೆಗೆ ಬಂದು ನಂತರ ನಮ್ಮ ತಮ್ಮಂದಿರಾದ ಈರಪ್ಪ, ಬಸವರಾಜ, ನಾಗಣ್ಣ ಬಿರಾದಾರ, ರವರು ಕೂಡಿ ನಮ್ಮ ಮನೆಯೊಳಗೆ ಹೋಗಿ ನೋಡಿದಾಗ ನಮ್ಮ ಅಲ್ಮಾರಿಯ ಬಾಗಿಲ ತೆರೆದಿತ್ತು, ಅದರಲ್ಲಿದ್ದ ಬಟ್ಟೆ ಬರೆಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ಅಲ್ಮಾರಿಯಲ್ಲಿ ನಾವು ಇಟ್ಟಿದ 1,35,000/- ರೂ ನಗದು ಹಣ, ಮತ್ತು ಬೆಳ್ಳಿಯ ಸಾಮಾನುಗಳಾದ ಬೆಳ್ಳಿಯ ತಾಟ, ಗ್ಲಾಸ್, ಪೂಜಾ ಮಾಡುವ ಆರ್ತಿ ಸಟ್, ಹೀಗೆ ಒಟ್ಟು ಒಂದು ಕೇ.ಜಿ ಬೆಳ್ಳಿ ಅ;ಕಿ; 30,000/- ರೂ ರಷ್ಟು ಇರಲಿಲ್ಲಾ,  ನಂತರ ನಮ್ಮ ತಮ್ಮ ಬಸವರಾಜ ರವರಿಗೆ ವಿಚಾರಿಸಲಾಗಿ ಅವರ ಮನೆಯ ಅಲ್ಮಾರಿಯಲ್ಲಿದ್ದ 05 ಗ್ರಾಂ ಬಂಗಾರದ ಸಣ್ಣು ಮಕ್ಕಳ ಚೈನ ಅ;ಕಿ; 15,000/- ರೂ,  ತಲಾ 02 ಗ್ರಾಮಿನ 2 ಉಂಗುರು ಅ;ಕಿ; 10,000/- ರೂ, ನಗದು ಹಣ 30,000/- ರೂ, ನಮ್ಮ ಮತ್ತು ನಮ್ಮ ತಮ್ಮನ ಬಂಗಾರದ ಸಾಮಾನುಗಳು ಹಾಗು ಬೆಳ್ಳಿಯ ಸಾಮಾನುಗಳು ಮತ್ತು ನಗದ ಹಣ ಹೀಗೆ ಒಟ್ಟು 2,20,000/- ರೂ ಕಿಮ್ಮತ್ತನಿವುಗಳನ್ನು ಯಾರೋ ಕಳ್ಳರು ಇಂದು ದಿನಾಂಕ 25-09-2019 ರಂದು 01;00 ಎ.ಎಂ ದಿಂದ 03;30 ಎ.ಎಂ ಮದ್ಯದಲ್ಲಿ ಯಾರೋ ಕಳ್ಳರು ನಮ್ಮ ಮತ್ತು ನಮ್ಮ ತಮ್ಮನ ಮನೆಯ ಬಾಗಿಲ ಕೊಂಡಿಯನ್ನು ಮುರಿದು ಅಲ್ಮಾರಿಯಲ್ಲಿದ್ದ ನಗದು ಹಣ ಮತ್ತು ಬಂಗಾರ, ಬೆಳ್ಳಿಯ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ರೇವೂರ ಠಾಣೆ : ಶ್ರೀ ದಾನಯ್ಯ ತಂದೆ ಈರಯ್ಯ ಹಿರೇಮಠ ಸಾ||ಕುಮ್ಮನ ಶಿರಸಗಿ ತಾ||ಜೇವರ್ಗಿ. ರವರ ಹೆಸರಿನಲ್ಲಿ ಹಿರೋ ಕಂಪನಿಯ ಸ್ಲೆಂಡರ್ ಪ್ಲಸ್ ಮೋಟರ ಸೈಕಲ್ ಇದ್ದು ಅದರ ನಂ KA32-EP-5513 ಅದರ ಚಸ್ಸಿ ನಂ MBLHA10CGGHL43724 ಇಂಜನ್ ನಂ HA10ERGHL44793 ಅಂತಾ ಇರುತ್ತದೆ. ರೇವೂರ (ಬಿ) ಗ್ರಾಮದ ನನಗೆ ಪರಿಚಯಸ್ಥರಾದ ಬಂಡೇಪ್ಪಾ ತಂದೆ ಬಸ್ಸಣ್ಣ ಮಾಳಗೆ ರವರ ಹತ್ತಿರ ನನಗೆ ಕೆಲಸವಿದ್ದ ನಿಮೀತ್ಯ ನಾನು ದಿ:19/08/2019 ರಂದು ಸಾಯಂಕಾಲ 04:00 ಗಂಟೆ ಸುಮಾರಿಗೆ ನನ್ನ ಮೋಟರ ಸೈಕಲ ಮೇಲೆ ರೇವೂರ (ಬಿ) ಗ್ರಾಮಕ್ಕೆ ಬಂದು ಬಂಡೇಪ್ಪಾ ಅವರಿಗೆ ಭೇಟಿಯಾಗಿ ಮರಳಿ ನಮ್ಮ ಗ್ರಾಮಕ್ಕೆ ಹೋಗಬೇಕೆಂದಾಗ ರಾತ್ರಿಯಾಗಿದ್ದರಿಂದ ನಾನು ಬಂಡೇಪ್ಪಾರವರ ಮೆನೆಯಲ್ಲಿ ಬಂಡೇಪ್ಪಾರವರೊಂದಿಗೆ ಉಟ ಮಾಡಿ 10:30 ಗಂಟೆ ಸುಮಾರಿಗೆ ಮಲಗಿಕೊಂಡಿರುತ್ತವೆ. ನನ್ನ ಮೋಟರ ಸೈಕಲ ಬಂಡೇಪ್ಪಾ ರವರ ಮನೆಯ ಮುಂದೆ ನಿಲ್ಲಿಸಿದ್ದು  ದಿನಾಂಕ:20/08/2019 ರಂದು ಬೆಳಿಗ್ಗೆ 05:00 ಗಂಟೆ ಸುಮಾರಿಗೆ ಎದ್ದು ನನ್ನ ಮೋಟರ ಸೈಕಲ ನೋಡಲಾಗಿ ನಾನು ನಿಲ್ಲಿಸಿದ್ದ ಜಾಗದಲ್ಲಿ ನನ್ನ ಮೋಟರ ಸೈಕಲ ಇರಲಿಲ್ಲ. ನಾನು ಬಂಡೇಪ್ಪಾ ಹಾಗೂ ಅವರ ತಮ್ಮನಾದ ಕಲ್ಯಾಣಿ ರವರಿಗೆ ಎಬ್ಬಿಸಿ ವಿಚಾರಿಸಲಾಗಿ ತಮಗೆ ಗೋತ್ತಿರುವುದಲ್ಲಾ ಅಂತಾ ತಿಳಿಸಿದ್ದು, ನಂತರ ನಾನು ಬಂಡೇಪ್ಪಾ, ಕಲ್ಯಾಣಿ ಹಾಗೂ ರೇವೂರ (ಬಿ) ಗ್ರಾಮದ ಬಸವರಾಜ ಬಶೆಟ್ಟಿ ಎಲ್ಲರು ಕೂಡಿ ರೇವೂರ ಗ್ರಾಮದಲ್ಲಿ ವಿಚಾರಿಸಿ ನಂತರ ಅತನೂರ, ಮಲ್ಲಾಬಾದ, ಮಹಾರಾಷ್ಟ್ರದ ದುಧನಿ ಪಟ್ಟಣಕ್ಕೆ ಹೋಗಿ ವಿಚಾರಿಸಲಾಗಿ ನನ್ನ ಮೋಟರ ಸೈಕಲ ಬಗ್ಗೆ ಯಾವುದೇ ಮಾಹಿತಿ ದೊರೆತ್ತಿರವುದಲ್ಲಾ. ನಾನು ನಮ್ಮ ಗ್ರಾಮಕ್ಕೆ ಹೋಗಿ ನನ್ನ ಮನೆಯವರಿಗೆ ಹಾಗು ನಮ್ಮ ಸಂಭಂದಿಕರಿಗೆ ನನ್ನ ಮೋಟರ ಸೈಕಲ ಬಗ್ಗೆ ವಿಚಾರಿಸಿದ್ದು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ ಯಾರೋ ಕಳ್ಳರು ನನ್ನ ಮೊಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 25-09-2019


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 25-09-2019

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 96/2019, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 24-09-2019 ರಂದು ರೋಹಿತ ತಂದೆ ಪ್ರಕಾಶ ಜಾಧವ, ವಯ: 11 ವರ್ಷ, ಜಾತಿ: ಲಮಾಣಿ, ಸಾ: ಮುದೋಳ ಥಾಂಡಾ ಈತನು ಸಾಯಿ ಸ್ಕೂಲ ಕಡೆಯಿಂದ ಜನವಾಡ ರೋಡ ಮುಖಾಂತರ ಹಾಸ್ಟಲ್ ಕಡೆಗೆ ಬರುತ್ತಿರುವಾಗ, ರಿಲಾಯನ್ಸ ಪೆಟ್ರೋಲ ಪಂಪ ಹತ್ತಿರ ಎದುರಿನಿಂದ ಮೊಟಾರ ಸೈಕಲ ನಂ. ಕೆಎ-38/ವಿ-8845 ನೇದ್ದರ ಸವಾರನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿ, ಮೊಟಾರ ಸೈಕಲ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಪರಿಣಾಮ ರೋಹಿತ ಈತನಿಗೆ ಬಲಗಾಲ ಪಾದದ ಮೇಲೆ ಭಾರಿ ರಕ್ತಗಾಯ, ಬಲಗಣ್ಣಿಗೆ, ಬಲ ಗಲ್ಲಕ್ಕೆ ತರಚಿದ ಗಾಯವಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ನೂತನ ನಗರ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 134/2019, ಕಲಂ. 306 ಐಪಿಸಿ :-
ಫಿರ್ಯಾದಿ ಉಮಾರಾವ ತಂದೆ ವಿಠಲರಾವ ರಾಠೋಡ, ವಯ: 53 ವರ್ಷ, ಜಾತಿ: ಎಸ್.ಸಿ ಲಂಬಾಣಿ, ಸಾ: ಘಾಟಬೋರಳ ತಾಂಡಾ ರವರು ಕೆಲಸಕ್ಕೆ ಹೋದಾಗ ಫಿರ್ಯಾದಿಯವರ ಚಿಕ್ಕಪ್ಪನ ಮಗನಾದ ಸಂತೋಷ ತಂದೆ ಪುರು ರಾಠೋಡ, ವಯ: 35 ವರ್ಷ ಈತನು ಫಿರ್ಯಾದಿಯು ಮನೆಯಲ್ಲಿ ಇಲ್ಲದ ಸಮಯದಲ್ಲಿ ಫಿರ್ಯಾದಿಯ ಮನೆಯಲ್ಲಿ ಹೆಂಡತಿ ಒಬ್ಬಳೆ ಇರುವಾಗ ಬರುವುದು ಹೋಗುವುದು ಮಾಡುತ್ತಿದ್ದನ್ನು ಸದರಿ ವಿಷಯ ಹೆಂಡತಿ ಕವಿತಾ ಇವಳು ಫಿರ್ಯಾದಿಗೆ ತಿಳಿಸಿದಾಗ ಫಿರ್ಯಾದಿಯು ಸಂತೋಷ ಇತನಿಗೆ ನಮ್ಮ ಮನೆಯಲ್ಲಿ ನನ್ನ ಹೆಂಡತಿ ಒಬ್ಬಳೆ ಇದ್ದಾಗ ಏಕೆ ಮನೆಗೆ ಹೋಗುತ್ತಿದ್ದಿ ಅದು ಸರಿಯಿಲ್ಲ ಅಂತ ತಿಳಿಸಿದರೂ ಸಹ ಸಂತೋ ಇತನು ಮನೆಗೆ ನಿರಂತರ ಬರುತ್ತಿದ್ದನು, ಈ ವಿಷಯದಲ್ಲಿ ಕವಿತಾ ಇಕೆಯು ತನ್ನ ಮನಸ್ಸಿಗೆ ಬೇಜಾರು ಮಾಡಿಕೊಳ್ಳುತ್ತಿದ್ದಳು ಹಾಗು ಸಂತೋಷ ಈತನು ಈ ವಿಷಯದ ಬಗ್ಗೆ ಯಾರಿಗಾದರೂ ಹೇಳಿದರೆ ನಿಮಗೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುತ್ತಾನೆ, ಕಾರಣ ಈ ಬಗ್ಗೆ ತಾಂಡಾದಲ್ಲಿ ಫಿರ್ಯಾದಿಯು ಸಂತೋಷ ಈತನಿಗೆ ಕರೆಯಿಸಿ ತಾಂಡಾದ ಜನರ ಮುಂದೆ ಪಂಚಾಯತಿ ಹಾಕಿದಾಗ ಇನ್ನು ಮುಂದೆ ನಮ್ಮ ಮನೆಗೆ ಯಾವಾಗಲೂ ಬರುವುದಿಲ್ಲ ಅಂತ ಒಪ್ಪಿಕೊಂಡಿದ್ದು ಇರುತ್ತದೆ, ಅದಾದ ನಂತರ ಸಹ ಮನೆಯಲ್ಲಿ ಹೆಂಡತಿ ಒಬ್ಬಳೇ ಇರುವಾಗ ಮನೆಗೆ ಬಂದು ನನ್ನೊಂದಿಗೆ ಬಾ ನಾವಿಬ್ಬರೂ ಬೇರೆ ಕಡೆ ಹೋಗಿ ಮದುವೆ ಮಾಡಿಕೊಳ್ಳೊಣ ಎಂದು ಹೆಂಡತಿಗೆ ಸಂತೋಷ ಈತನು ಕಿರಕುಳ ನೀಡುತ್ತಿದ್ದನು, ಹೀಗಿರುವಾಗ ದಿನಾಂಕ 24-09-2019 ರಂದು ಫಿರ್ಯಾದಿಯು ಎಂದಿನಂತೆ ಮನೆಯಿಂದ ಕೆಲಸಕ್ಕೆ ಹೋದಾಗ ಫಿರ್ಯಾದಿಯ ಹೆಂಡತಿಯು ಆರೋಪಿ ಸಂತೋಷ ಈತನು ತನ್ನೊಂದಿಗೆ ಮದುವೆ ಮಾಡಿಕೊಳ್ಳಲು ನೀಡುತ್ತಿದ್ದ ಕಿರಕುಳ ತಾಳಲಾರದೇ ಮನೆಯಲ್ಲಿ ಹಾಲಿನಲ್ಲಿನ ಛತ್ತಿನ ಕಬ್ಬಿಣದ ಕೊಂಡಿಗೆ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Tuesday, September 24, 2019

BIDAR DISTRICT DAILY CRIME UPDATE 24-09-2019


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-09-2019

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 16/2019, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಕಂಠೆಪ್ಪಾ ತಂದೆ ಶರಣಪ್ಪಾ ಬಿರಾದಾ ಸಾ: ಕುದಮುಡ, ತಾ: ಕಮಲಾಪೂರ, ಜಿ: ಕಲಬುರ್ಗಿ ರವರ ಮಗ ಹಾಗು ಸೊಸೆಯಾದ ಅನಿತಾ ಇಬ್ಬರು ಹಬ್ಬಕ್ಕೆ ಅಂತ ಪೂನಾದಿಂದ ಬಂದು ಸೊಸೆಗೆ ಹುಮನಾಬಾದದಿಂದ ಕಮಲಾಪೂರಕ್ಕೆ ಬಸ್ಸಿಗೆ ಕೂಡಿಸಿ ಮಗ ದಿನಾಂಕ 22-09-2019 ರಂದು ಬಸವಕಲ್ಯಾಣಕ್ಕೆ ಹೋಗಿರುತ್ತಾನೆ, ನಂತರ ಫಿರ್ಯಾದಿಗೆ ಗೊತ್ತಾಗಿದ್ದೆನೆಂದರೆ ಮಗನಾದ ಶರಣಬಸಪ್ಪ ಬಿರಾದಾರ ಇತನು ಬಸವಕಲ್ಯಾಣ ನಗರದ ಬಸವ ಮಹಾಮನೆ ಹತ್ತಿರ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ನಂತರ ದಿನಾಂಕ 23-09-2019 ರಂದು ಭೂಷಣ ರವರು ಕರೆ ಮಾಡಿ ತಿಳಿಸಿದ್ದು ನಾನು ಮತ್ತು ಸೋಸೆಯಾದ ಅನಿತಾ, ಮಗನಾದ ರೇವಣಸಿದ್ದಪ್ಪಾ ಮತ್ತು ನಮ್ಮೂರ ಜನರಾದ ಸಿದ್ರಾಮಪ್ಪಾ, ಕಲ್ಲಪ್ಪಾ, ಸೂರ್ಯಕಾಂತ ಮತ್ತು ಮಲ್ಲಿಕಾರ್ಜುನ ರವರೆಲ್ಲರೂ ಕೂಡಿಕೊಂಡು ಬಸವಕಲ್ಯಾಣಕ್ಕೆ ಬಂದು ಬಸವಕಲ್ಯಾಣ ನಗರದ ಬಸವ ಮಹಾಮನೆ ಹತ್ತಿರ ಹೋಗಿ ನೋಡಲು ಮಗನಾದ ಶರಣಬಸಪ್ಪ ಬಿರಾದಾರ ಇತನು ಒಂದು ಬೇವಿನ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ಮಗ ಜೀವದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ಮಗನಾದ ಶರಣಬಸಪ್ಪ ಇತನ ಸಾವಿನ ಬಗ್ಗೆ ಯಾರ ಮೇಲು ಯಾವುದೇ ರೀತಿಯ ಸಂಶಯ ಇರುವುದಿಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 85/2019, ಕಲಂ. 143, 504, 307, 302 ಜೊತೆ 149 ಐಪಿಸಿ :-
ದಿನಾಂಕ 21-09-2019 ರಂದು ಫಿರ್ಯಾದಿ ಲಕ್ಷ್ಮೀ ಗಂಡ ಪ್ರಭಾಕರ ವಾಗ್ಲೆ ವಯ: 50 ವರ್ಷ, ಜಾತಿ: ಎಸ್.ಸಿ ಮಾದಿಗ, ¸Á: ಅಗ್ರಿಕಲ್ಚರ್ ಕಾಲೋನಿ ಬೀದರ ರವರ ಮಗನಾದ ಸಾವನಕುಮಾರ ವಾಗ್ಲೆ ತಂದೆ ಪ್ರಭಾರಕರ ವಾಗ್ಲೆ ವಯ: 28 ವರ್ಷ, ಸಾ: ಅಗ್ರಿಕಲ್ಚರ್ ಕಾಲೋನಿ ಗುಂಪಾ ಹತ್ತಿರ ಬೀದರ ಇತನು ಕಳೆದ ನಾಲ್ಕು ಐದು ವರ್ಷದ ಹಿಂದೆ ಶಾಹಗಂಜನ ವಸಂತಮಾಲಾ ಇಕೆಯೊಂದಿಗೆ ಪ್ರಿತಿಸಿ ಮದುವೆ ಮಾಡಿಕೊಂಡಿದ್ದು, ಸಾವನ ಇತನು ಸಾಮಾಜಿಕ ಕಾರ್ಯಗಳಲ್ಲಿ ಇರುವುದರಿಂದ ಆಗಾUÀ ಮನೆಗೆ ಬರಲು ತಡವಾಗತ್ತದೆ, ತಡವಾದಾಗಲೆಲ್ಲಾ ಸೋಸೆ ಮಗನೊಂದಿಗೆ ಜಗಳವಾಡಿ ನೀನು ಸುಳ್ಳು ಹೇಳುತ್ತಿದ್ದಿ ಬೇರೆ ಹೆಣ್ಣಿನೊಂದಿಗೆ ನಿನ್ನ ಸಂಬಂಧ ಇದೆ ಅದಕ್ಕೆ ನೀನು ತಡವಾಗಿ ಬಂದು ಸುಳ್ಳು ನೆಪ ಹೇಳುತ್ತಿ ಎಂದು ಜಗಳ ತೆಗೆದಾಗ ಸೊಸೆಯ ತಂದೆ, ತಾಯಿ, ಸಂಬಂಧಿಕರು ಬಂದು ಫಿರ್ಯಾದಿಯೊಂದಿಗೆ ಜಗಳವಾಡುತ್ತಿದ್ದರು, ಇಂದಲ್ಲಾ ನಾಳೆ ಸರಿಯಾಗಬಹುದೆಂದು ಸುಮ್ಮನಾಗಿದ್ದು, ಕಳೆದ ಒಂದು ತಿಂಗಳ ಹಿಂದೆ ಸೊಸೆಯ ತಾಯಿ ಇಂದುಮತಿಗೆ ಹುಷಾರ ಇಲ್ಲದೆ ಇರುವುದರಿಂದ ಸೊಸೆ ಹೋಗಿ ಬರುತ್ತೇನೆ ಎಂದು ಹೇಳಿದ್ದರಿಂದ ಫಿರ್ಯಾದಿಯು ಅದಕ್ಕೂ ಸ್ವಲ್ಪ ದಿವಸ ತನ್ನ ತಾಯಿ, ತಂದೆಯೊಂದಿಗೆ ಇದ್ದು ನಮ್ಮೊಂದಿಗೆ ಸರಿಯಾಗಿ ಇರಬಹುದೆಂದು ತಿಳಿದು ಸಾವನ ಇವನೆ ಒಯ್ದು ಬಿಟ್ಟು ಬಂದಿರುತ್ತಾನೆ, ಹೀಗಿರುವಾಗ ದಿನಾಂಕ 21-09-2019 ರಂದು ಸಾವನ ಇವನು ಫಿರ್ಯಾದಿಗೆ ಕರೆ ಮಾಡಿ ಮಮ್ಮಿ ನನ್ನ ಹೆಂಡತಿ ನನಗೆ ಕರೆ  ಮಾಡಿ ಬಾಯಿಗೆ ಬಂದಂತೆ ಬೈಯುತ್ತಿದ್ದಾಳೆ ನಿಮಗೆ ಬಿಡುವುದಿಲ್ಲಾವೆಂದು ಬೆದರಿಕೆ ºÁಕುತ್ತಿದ್ದಾಳೆ ಎಂದು ಹೇಳಿದ್ದು ಫಿರ್ಯದಿಯು ತನ್ನ ಸೊಸೆಗೆ ಕರೆ ಮಾಡಿ ಯಾಕೆ ಬೈಯುತ್ತಿದ್ದಿ ಅವನು ಮೊದಲೆ ಕೆಸ್ ಆಗಿದ್ದರಿಂದ ಟೆನಷನ್ದಲ್ಲಿದ್ದಾನೆ ನಿನ್ಯಾಕೆ ಬೈದಾಡುತ್ತಿದ್ದಿ ಎಂದು ಹೇಳಿದಾಗ ವಸಂತಮಾಲಾ ಇವಳು ಫಿರ್ಯಾದಿಗೂ ಸಹ ಬಾಯಿಗೆ ಬಂದಂತೆ ಬೈದು ನಿನಗೆ ಬಿಡುವುದಿಲ್ಲಾವೆಂದು ಹೇಳಿ ಕರೆಯನ್ನು ಕಟ್ ಮಾಡಿರುತ್ತಾಳೆ, ಪುನ್ಹ ರಾತ್ರಿ ಸಾವನ ಇತನು ಕರೆ ಮಾಡಿ ನನ್ನ ಹೆಂಡತಿ ನನಗೆ ಕರೆ ಮಾಡಿ ಬೈಯುತ್ತಿದ್ದಾಳೆ ನೀನು ಮಾತಾಡು ಎಂದು ಕರೆಯನ್ನು ಕಾನ್ಫರೆನ್ಸನಿಂದ ಫೋನಿಗೆ ಹಚ್ಚಿ ಕೊಟ್ಟಾಗ ಫಿರ್ಯಾದಿಯು ಮಾತಾಡುವಷ್ಟರಲ್ಲಿ ಬಾಯಿಗೆ ಬಂದಂತೆ ಬೈದು ಮುಂದಿನಿಂದ ಬಾ ನಿನ್ನ ಬಳಿ ಎಷ್ಟು ಮಂದಿ ಹರಾ ನೊಡತಾ ಎಲ್ಲರಿಗೂ ಜೈಲಿಗೆ ಹಾಕತಾ ಎಂದು ಬೈಯುತ್ತಿದ್ದಾಗ ಸಾವನ ಇತನು ಆಯಿತು ಮಮ್ಮಿ ಅವಳು ಇದ್ದಲಿಗೆ ಹೋಗುತ್ತೇನೆ ಎಂದು ಹೇಳಿ ಕರೆ ಕಟ್ ಮಾಡಿದ್ದು, ರಾತ್ರಿ 2230 ಗಂಟೆ ಸುಮಾರಿಗೆ ಮಗ ಅವಿನಾಶ ಇವನು ಫಿರ್ಯಾದಿಗೆ ಕರೆ ಮಾಡಿ ಅಣ್ಣ ಸಾವನ ಇವನಿಗೆ ಆರೋಪಿತರಾದ ಅವನ ಹೆಂಡತಿ ವಸಂತಮಾಲಾ, ಭಾವ ಯೇಸು, ಮಾವ ಮನೋಹರ, ಅತ್ತೆ ಇಂದುಮತಿ ಹಾಗೂ ಅವರ ಸಂಬಂಧಿಕ ಅನಿಲ ಎನ್ನುವರು ಕೂಡಿ ಅಣ್ಣನ ಕೊಲೆ ಮಾಡುವ ಉದ್ದೇಶದಿಂದ ಬಡಿಗೆ, ರಾಡನಿಂದ ಅತ್ತಿಗೆಯ ಮನೆಯಲ್ಲಿ ಹೊಡೆದಿರುತ್ತಾರೆ ಭಾರಿ ರಕ್ತಗಾಯಗಳಾಗಿ, ಮೈಯಲ್ಲಾ ರಕ್ತ ಆಗಿ ಬೀದರ ಸರಕಾರಿ ಆಸ್ಪತ್ರೆಗೆ ಎಮರಜೆನ್ಸಿ ವಾರ್ಡನಲ್ಲಿ ದಾಖಲು ಮಾಡಿರುತ್ತಾರೆ ಎಂಬ ವಿಷಯವನ್ನು ನನಗೆ ನೋಹಾನ್ ತಂದೆ ಮುಲ್ತಾನಿ ಮತ್ತು ಜಾರ್ಜ ಎನ್ನುವವರು ತಿಳಿಸಿದ್ದಾರೆ ಎಂದು ಹೇಳಿದಾಗ ಫಿರ್ಯಾದಿಯು ಕೂಡಲೆ ಮನೆಯಿಂದ ಬೀದರ ಸರಕಾರಿ ಆಸ್ಪತ್ರೆಗೆ ಬಂದು ನೋಡಲು ಅಲ್ಲಿನ ಎಮರಜೆನ್ಸಿ ವಾರ್ಡಲ್ಲಿ ಸಾವನ ಇತನು ಚಿಕಿತ್ಸೆ ಪಡೆಯುತ್ತಿದ್ದು ಅವನು ಬೇಹೋಷ ಇದ್ದು ಅವನಿಗೆ ನೋಡಲು ಅವನ ತಲೆಗೆ, ಮುಖಕ್ಕೆ, ರಾಡ್, ಬಡಿಗೆಯಿಂದ ಹೊಡೆದಂತೆ ಭಾರಿ ರಕ್ತಗಾಯಗಳು ಇದ್ದು, ನಂತರ ವೈದ್ಯರು ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಕ್ಕೆ ಕಳುಹಿಸಿದಾಗ ಫಿರ್ಯಾದಿ ಮತ್ತು ಸಂಬಂಧಿ ಜೀವನ ಕೂಡಿ ಅಂಬುಲೆನ್ಸನಲ್ಲಿ ಸಿಟಿಜನ್ ಆಸ್ಪತ್ರೆಗೆ ತಂದು ದಾಖಲಿಸಿ ಇನ್ನು ಹೆಚ್ಚಿನ ಚಿಕಿತ್ಸೆ ಕುರಿತು ಓಮನಿ ಆಸ್ಪತ್ರೆಗೆ ತಂದು ದಾಖಲಿಸಿದ್ದು ಇರುತ್ತದೆ, ನಂತರ ಸಾವನಕುಮಾರ ವಾಗ್ಲೆ ಇವನು ಚಿಕಿತ್ಸೆ ಕಾಲಕ್ಕೆ ಗುಣ ಆಗಲಾರದೆ ಓಮನಿ ಆಸ್ಪತ್ರೆ ಕುಕಟಪಲ್ಲಿ ಹೈದ್ರಾಬಾದದಲ್ಲಿ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಿ.ಇ.ಎನ್ ಕ್ರೈಂ ಪೊಲೀಸ ಠಾಣೆ ಬೀದರ ಅಪರಾಧ ಸಂ. 30/2019, ಕಲಂ. 419, 420 ಐಪಿಸಿ ಮತ್ತು 66(ಸಿ) (ಡಿ) ಐ.ಟಿ. ಕಾಯ್ದೆ :-
ಫಿರ್ಯಾದಿ ರಾಮಕೃಷ್ಣ ತಂದೆ ಅಂಬ್ರೇಶರಾವ ಘನಾತೆ ಸಾ: ದರ್ಜಿಗಲ್ಲಿ ಬೀದರ ರವರು ಎಸ್.ಬಿ.ಐ ಬ್ಯಾಂಕ ಉಸ್ಮಾನ ಗಂಜ ಬ್ರ್ಯಾಂಚ್ನಲ್ಲಿ ಉಳಿತಾಯ ಖಾತೆ ಸಂ. 62468199636 ನೇದ್ದು ಹೊಂದಿದ್ದು, ಸದರಿ ಖಾತೆಗೆ ಫಿರ್ಯಾದಿಯು ಡೇಬಿಟ್ ಕಾರ್ಡ ನಂ. 5211 0800 2272 3999 ನೇದ್ದನ್ನು ಹೊಂದಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 21-09-2019 ರಂದು ಮುಂಜಾನೆ 0800 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ಡೇಬಿಟ್ ಕಾರ್ಡ ತೆಗೆದುಕೊಂಡು ಹಣ ಡ್ರಾ ಮಾಡುವ ಸಲುವಾಗಿ ಬೀದರ ಡಿಸಿಸಿ ಬ್ಯಾಂಕ ಹತ್ತಿರ ಇರುವ ಐ.ಸಿ.ಐ.ಸಿ.ಐ ಬ್ಯಾಂಕನ ಎ.ಟಿ.ಎಮ್ ಸೆಂಟರನಲ್ಲಿ ಹೋಗಿ ತನ್ನ ಎ.ಟಿ.ಎಮ್ ಕಾರ್ಡನ್ನು ಮಶೀನಿನಲ್ಲಿ ಹಾಕುವಾಗ ಹಿಂದಿನಿಂದ ಒಬ್ಬ ಅಪರಿಚಿತ ವ್ಯಕ್ತಿ ಅಲ್ಲಿಗೆ ಬಂದು “ಓ ಐಸಾ ನಹೀ ಡಾಲನಾ” ಅಂತಾ ಸುಳ್ಳು ಹೇಳಿ, ಫಿರ್ಯಾದಿಯ ಗಮನ ಬೇರೆ ಕಡೆ ಸೆಳೆದು, ಅವನು ಫಿರ್ಯಾದಿಯ ಡೇಬಿಟ್ ಕಾರ್ಡನ್ನು ತಾನು ಇಟ್ಟುಕೊಂಡು ಅವನ ಹತ್ತಿರ ಇದ್ದ ಅದೆ ತರಹದ ಇನ್ನೊಂದು ಎ.ಟಿ.ಎಮ್ ಕಾರ್ಡನ್ನು ಫಿರ್ಯಾದಿಗೆ ನೀಡಿ ಅಲ್ಲಿಂದ ಹೋಗಿರುತ್ತಾನೆ, ನಂತರ ಫಿರ್ಯಾದಿಯು ಸದರಿ ಎ.ಟಿ.ಎಮ್ ಕಾರ್ಡ ಮಶೀನಿನಲ್ಲಿ ಹಾಕಿ 2-3 ಸಲ ಹಣ ತೆಗೆಯಲು ಪ್ರಯತ್ನಿಸಿದಾಗ ಹಣ ಬಂದಿರುವುದಿಲ್ಲ ಆಗ ಫಿರ್ಯಾದಿಯು ಎ.ಟಿ.ಎಮ್ ಮಶೀನನಲ್ಲಿ ಏನಾದರು ತೊಂದರೆ ಇರಬಹುದು ಅಂತ ತಿಳಿದು ಅಲ್ಲಿಂದ ಎ£ï.ಎಸ್.ಎಸ್.ಕೆ ಕಾರ್ಖಾನೆಗೆ ಕರ್ತವ್ಯಕ್ಕೆ ಹೋಗುವಾಗ 0816 ಗಂಟೆಯ ಸುಮಾರಿಗೆ ಫಿರ್ಯಾದಿಯ ಅಕೌಂಟದಿಂದ 20,000/- ವಿತ್ ಡ್ರಾಲ್ ಆದ ಬಗ್ಗೆ ಮತ್ತು 20,000/- ಅಮರೇಶ ಎಂಬುವವರ ಅಕೌಂಟಿಗೆ ಟ್ರಾನ್ಸಫರ ಆದ ಬಗ್ಗೆ ಸಂದೇಶ ಬಂದಿರುತ್ತವೆ, ಕಾರಣ ಫಿರ್ಯಾದಿಯ ಗಮನ ಬೇರೆ ಕಡೆ ಸೆಳೆದು ಮೋಸದಿಂದ ಫಿರ್ಯಾದಿಯ ಓರಿಜಿನಲ್ ಎ.ಟಿ.ಎಮ್ ಕಾರ್ಡ ತೆಗೆದುಕೊಂಡು ಫಿರ್ಯಾದಿಯ ಅಕೌಂಟದಿಂದ ಒಟ್ಟು 40,000/- ರೂ ತೆಗೆದುಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-09-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 65/2019, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 23-09-2019 ರಂದು ಬೀದರ ನಗರದ ಶಹಾ ಗಂಜ್ ಕಮಾನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತು ಹೊಗಿ ಬರುವ ಜನರಿಗೆ ಕರೆದು ನಮ್ಮ ಹತ್ತಿರ ಮಟಕಾ ಜೂಜಾಟ ಆಡಿದರೆ 1/- ರೂ ಗೆ 90/- ರೂ ಕೂಡುತ್ತೇವೆ ಅಂತ ಕುಗಿ ಕರೆದು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದುಕೊಡುತ್ತಿದ್ದಾರೆ ಅಂತ ಪ್ರಭಾಕರ ಪಾಟೀಲ್ ಪಿ.ಎಸ್.ಐ ಬೀದರ ನಗರ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಶಹಾ ಗಂಜ ಕಮಾನ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಆರೋಪಿತರಾದ 1) ಪ್ರಭು ತಂದೆ ಗಣಪತಿ ವಯ: 44 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಫತ್ತೆಪೂರ, ತಾ: ಜಿ: ಬೀದರ ಹಾಗೂ 2) ಆಬೇದ ತಂದೆ ಸಿರಾಜ ಅಹ್ಮದ ವಯ: 24 ವರ್ಷ, ಜಾತಿ: ಮುಸ್ಲಿಂ, ಸಾ: ಮನೆ ನಂ. 1-1-47 ದರ್ಗಾಪೂರಾ ಬೀದರ ಇವರಿಬ್ಬರು ಸಾರ್ವಜನಿಕ ಸ್ಥಳದಲ್ಲಿ ನಿಂತು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದುಕೊಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸದರಿ ಆರೋಪಿತರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರಿಗೆ ಹಿಡಿಯಲು ಆಬೇದ ಇತನು ಓಡಿ ಹೋಗಿರುತ್ತಾನೆ, ನಂತರ ಮಟಕಾ ಜೂಜಾಟದಲ್ಲಿ ತೊಡಗಿಸಿದ ನಗದು ಹಣ 1130/- ರೂ ಮತ್ತು ಒಂದು ಬಾಲ ಪೆನ್ನು, ಎರಡು ಮಟಕಾ ಚೀಟಿ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.