Police Bhavan Kalaburagi

Police Bhavan Kalaburagi

Monday, December 9, 2019

BIDAR DISTRICT DAILY CRIME UPDATE 09-12-2019


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 09-12-2019

ಮಂಠಾಳ ಪೊಲೀಸ್ ಠಾಣೆ ಯು.ಡಿ.ಆರ್ ನಂ. 94/2019, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಸುರೇಖಾ ಗಂಡ ಲಹು ಜಾಧವ ವಯ: 42 ವರ್ಷ, ಜಾತಿ: ಎಎಸ್.ಸಿ ದಲಿತ, ಸಾ: ಧಾಮುರಿ, ತಾ: ಬಸವಕಲ್ಯಾಣ ರವರ ಹಿರಿಯ ಮಗನಾದ ಮನೋಜ ವಯ: 25 ವರ್ಷ ಈತನು ಹುಟ್ಟಿದ್ದಾಗಿನಿಂದ ಆತನ ಎರಡು ಕಾಲುಗಳು ಸ್ವಲ್ಪ ಓರೆಯಾಗಿದ್ದು, ಸರಿಯಾಗಿ ನಡೆಯಲು ಮತ್ತು ಮಾತನಾಡಲೂ ಸಹ ಬರುತ್ತಿರಲಿಲ್ಲಾ ಮತ್ತು ಇತ್ತಿಚಿಗೆ ಸುಮಾರು ದಿವಸಗಳಿಂದ ಹೊಟ್ಟೆ ಬೇನೆಯಿಂದ ಬಳಲುತ್ತಿದ್ದನು, ಹೀಗಿರುವಲ್ಲಿ ದಿನಾಂಕ 05-12-2019 ರಂದು 0700 ಗಂಟೆಯಿಂದ ದಿನಾಂಕ 07-12-2019 ರಂದು 1800 ಗಂಟೆಯ ಮದ್ಯಾವಧಿಯಲ್ಲಿ ಫಿರ್ಯಾದಿಯವರ ಮಗ ಮನೋಜ ಈತನು ತನಗೆ ಆಗುತ್ತಿದ್ದ ಹೊಟ್ಟೆನೋವು ತಾಳಲಾರದೇ ನೋವಿನಲ್ಲಿ ಕೊರಗುತ್ತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮೂರ ಪಕ್ಕದ ಕೆರೆಯಲ್ಲಿ ಬ್ರಿಡ್ಜ್ ಹತ್ತಿರ ನೀರಿನಲ್ಲಿ ಬಿದ್ದು ನೀರು ಕುಡಿದು ಮೃತಪಟ್ಟಿದ್ದು ಇರುತ್ತದೆ, ಆತನ ಸಾವಿನಲ್ಲಿ ಯಾರ ಮೇಲೂ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 08-12-2019 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 115/2019, ಕಲಂ. 498(ಎ), 323, 504, 506 ಐ.ಪಿ.ಸಿ :-
ದಿನಾಂಕ 08-12-2019 ರಂದು ಫಿರ್ಯಾದಿ ಸುಜಾತಾ ಗಂಡ ಶ್ರೀಮಂತ ಜಾಂತೆ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಹಳ್ಳಿಖೇಡ[ಬಿ] ರವರ ಗಂಡನಾದ ಶ್ರೀಮಂತ ತಂದೆ ವೀರಶೆಟ್ಟಿ ಜಾಂತಿ ಸಾ: ಹಳ್ಳಿಖೇಡ[ಬಿ] ಇತನು ಸರಾಯಿ ಕುಡಿದು ಮನೆಗೆ ಬಂದು ಫಿರ್ಯಾದಿಗೆ ನೀನು ಕೆಲಸ ಮಾಡಿದ ಹಣ ಎಲ್ಲಿ ಇಡುತ್ತಿದ್ದಿ ನಿನ್ನ ತವರು ಮನೆಗೆ ಕೊಡುತ್ತಿದ್ದಿ ಸರಾಯಿ ಕುಡಿಯಲು ಹಣ ಕೇಳಿದರೆ ಕೊಡುತ್ತಿಲ್ಲಾ ಅಂತ ಅವಾಚ್ಯವಾಗಿ ಬೈದು ಕೈಯಿಂದ ಬೆನ್ನ ಮೇಲೆ ಮತ್ತು ಎದೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿ ನೀನು ನಮ್ಮ ಮನೆಯಲ್ಲಿ ಇರಬೇಡ ನಿನ್ನ ತವರು ಮನೆಗೆ ಹೋಗು ನೀನು ಒಂದು ವೇಳೆ ಇಲ್ಲೆ ಇದ್ದರೆ ನಿನಗೆ ಒಂದಲ್ಲ ಒಂದು ದಿವಸ ಹೊಡೆದು ಹಾಕುತ್ತೇನೆ ಅಂತ ಜೀವದ ಬೆದರಿಕೆ ಹಾಕಿರುತ್ತಾನೆ, ಆಗ ಅಲ್ಲಿಯೆ ಜಗಳದ ಗುಲ್ಲು ಕೇಳಿ ಬಂದ ಪಕ್ಕದ ಮನೆಯವರಾದ ಮಚೀಂದ್ರ ಸಗರ, ಚಂದ್ರಪ್ಪಾ ಸಗರ ಮತ್ತು ಮಾರುತಿ ಸಗರ ರವರು ಜಗಳವನ್ನು ನೋಡಿ ಬಿಡಿಸಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಆಕ್ರಮವಾಗಿ ನಾಡಪಿಸ್ತೂಲ ಹೊಂದಿದವನ ಬಂಧನ :
ನರೋಣಾ ಠಾಣೆ : ದಿನಾಂಕ:07/12/2019 ರಂದು ಸಂಗೋಳಗಿ (ಸಿ) ಗ್ರಾಮದಲ್ಲಿ ಸಂಗೊಳಗಿ(ಸಿ) ಕ್ರಾಸ್ ಹತ್ತಿರ ವೆಂಕಟರಾವ ತಂದೆ ರಾಮರಾವ ಬಿರಾದಾರ ಎಂಬುವವನು ತನ್ನ ಹತ್ತಿರ ನಾಡಪಿಸ್ತೂಲ್ ಇಟ್ಟುಕೊಂಡು ತಿರುಗಾಡುತ್ತಿದ್ದಾನೆ ಅಂತಾ ಬಾತ್ಮೀ ಬಂದ ಮೇರೆಗೆ ಶ್ರೀ. ಮಲ್ಲಿಕಾರ್ಜುನ.ಸಾಲಿ ಡಿ.ವೈ.ಎಸ್.ಪಿ ಆಳಂದ ಉಪ-ವಿಭಾಗ ಹಾಗು ಪಿ.ಎಸ್.ಐ. ನರೋನಾ ಠಾಣೆ , ಸಿಬ್ಬಂದಿ ಮತ್ತು ಪಂಚರೊಂದಿಗೆ ನಮ್ಮ ಇಲಾಖಾ ಜೀಪಿನಲ್ಲಿ ಸಂಗೋಳಗಿ (ಸಿ) ಗ್ರಾಮಕ್ಕೆ ಹೋದಾಗ ಸಂಗೋಳಗಿ(ಸಿ) ಕ್ರಾಸ್ ಹತ್ತಿರ ರೋಡಿನ ಮೇಲೆ ಒಬ್ಬ ವ್ಯಕ್ತಿ ನಮ್ಮ ಜೀಪನ್ನು ನೋಡಿ ಓಡಲು ಪ್ರಾರಂಭಿಸಿದಾಗ ನಾವೆಲ್ಲರೂ ಒಮ್ಮೆಲೆ ಜೀಪನಿಂದ ಇಳಿದು ಆ ವ್ಯಕ್ತಿಯನ್ನು ಹಿಡಿದು ವಿಚಾರಿಸಿದಾಗ ಆತನು ತನ್ನ ಹೆಸರು ವೆಂಕಟರಾವ ತಂದೆ ರಾಮರಾವ ಬಿರಾದಾರ, ಸಾ:ಸಂಗೋಳಗಿ(ಸಿ) ಗ್ರಾಮ ಅಂತಾ ತಿಳಿಸಿದನು. ಆತನಿಗೆ ಪಂಚರ ಸಮಕ್ಷಮದಲ್ಲಿ ಚೆಕ್ ಮಾಡಿದಾಗ ಆತನ ಪ್ಯಾಂಟಿನ ಬಲಭಾಗದ ಕೀಸೆಯಲ್ಲಿ ಒಂದು ನಾಡಪಿಸ್ತೂಲ್ ದೊರೆತಿದ್ದು. ಇದರ ಬಗ್ಗೆ ಆತನಿಗೆ ವಿಚಾರಿಸಿದಾಗ ಅವನು ಈ ಹಿಂದೆ ಮನೆಯ ಜಾಗದ ಸಂಬಂಧವಾಗಿ ತನಗು ಮತ್ತು ತಮ್ಮ ಅಣ್ಣತಮ್ಮಕಿಯವರಿಗೂ ಗಲಾಟೆಗಳಾಗಿ ಕೇಸುಗಳು ಆಗಿರುತ್ತವೆ. ಮತ್ತೆ ಜಗಳ ನಡೆಯುವ ಕಾಲಕ್ಕೆ ಇದನ್ನು ಉಪಯೋಗಿಸುವ ಉದ್ದೇಶದಿಂದ ಸದರಿ ಪಿಸ್ತೂಲನ್ನು ಮದ್ಯ ಪ್ರದೇಶದ ಒಬ್ಬ ವ್ಯಕ್ತಿಯಿಂದ 20,000/- ರೂ ಹಣ ಕೊಟ್ಟು ಖರೀದಿ ಮಾಡಿರುತ್ತೇನೆ ಅಂತಾ ತಿಳಿಸಿದನು. ಅದನ್ನು ಪರಿಶೀಲಿಸಲಾಗಿ ಅದರ ಮೇಲೆ Made In England ಅಂತಾ ಇಂಗ್ಲೀಷ ಅಕ್ಷರದಲ್ಲಿ ನಮೂದಿಸಿದ್ದು. ಸದರಿ ನಾಡಪಿಸ್ತೂಲನ್ನು ಪಂಚರ ಸಮಕ್ಷಮದಲ್ಲಿ ಆಪಾದೀತನಿಂದ ಜಪ್ತಿ ಪಡಿಸಿಕೊಂಡು, ಸದರಿಯವನನ್ನು ವಶಕ್ಕೆ ತಗೆದುಕೊಂಡು ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

Saturday, December 7, 2019

BIDAR DISTRICT DAILY CRIME UPDATE 07-12-2019


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 07-12-2019

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 64/2019, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 06-12-2019 ರಂದು ರಾಜಕುಮಾರ ತಂದೆ ಮಾರುತಿ ಸುಲ್ತೆ ಸಾ: ಚಾಂಬೋಳ ಗ್ರಾಮ, ತಾ: & ಜಿ: ಬೀದರ ರವರು ತಮ್ಮ ಪಕ್ಕದ ಮನೆಯ ಸಂದೀಪ್ ತಂದೆ ಬಾಬು ಬಸಂತಪೂರೆ ರವರ ಜೊತೆಯಲ್ಲಿ ತನ್ನ ಮೋಟಾರ ಸೈಕಲ ಮೇಲೆ ಹಾಗೂ ಫಿರ್ಯಾದಿಯ ತಮ್ಮ ಕುಪೇಂದ್ರ ತಂದೆ ಮಾರುತಿ ಮೇತ್ರೆ ಈತನು ತನ್ನ ಹೀರೋ ಫ್ಯಾಶನ್ ಪ್ರೋ ಮೋಟಾರ ಸೈಕಲ ನಂ. ಕೆಎ-38/ಆರ್-4710 ನೇದರ ಮೇಲೆ ಚಾಂಬೋಳದಿಂದ ಬೀದರಗೆ ತಮ್ಮ ತಂಗಿಯ ಹತ್ತಿರ ಆಸ್ಪತ್ರೆಗೆ ಹೋಗುತ್ತಿರುವಾಗ ಫಿರ್ಯಾದಿಯು ಚಾಂಬೋಳ ಬೀದರ ರೋಡಿನ ತಮ್ಮೂರ ಶಾಮಣ್ಣಾ ಕಲ್ಲಗೊಂಡೆ ರವರ ಹೊಲದ ಹತ್ತಿರ ಬಂದಾಗ ಎದುರುಗಡೆಯಿಂದ ಮ್ಯಾಕ್ಸಿಕ್ಯಾಬ್ ವಾಹನ ನಂ. ಕೆಎ-38/1275 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ತಮ್ಮ ಕುಪೇಂದ್ರ ಈತನ ಮೋಟಾರ ಸೈಕಲಕ್ಕೆ ಎದುರುಗಡೆಯಿಂದ ಡಿಕ್ಕಿ ಪಡಿಸಿದ್ದು, ಸದರಿ ಡಿಕ್ಕಿಯಿಂದ ಕುಪೇಂದ್ರ ಇತನ ಹಣೆಯ ಮೇಲೆ ಭಾರಿ ರಕ್ತಗಾಯ, ಗುಪ್ತಗಾಯ ಹಾಗೂ ಎಡಗಾಲಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಮಾತನಾಡಲಾರದ ಸ್ಥಿತಿಯಲ್ಲಿ ಬಿದ್ದಿದ್ದು, ಅಷ್ಟರಲ್ಲಿ ಡಿಕ್ಕಿ ಪಡಿಸಿದ ಆರೋಪಿಯು ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಫಿರ್ಯಾದಿಯು 108 ಅಂಬುಲೇನ್ಸ್ ವಾಹನಕ್ಕೆ ಕರೆಯಿಸಿ ಅದರಲ್ಲಿ ಗಾಯಗೊಂಡ ಕುಪೇಂದ್ರ ಈತನಿಗೆ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ, ಆಸ್ಪತ್ರೆಯ ವೈದ್ಯರು ಕುಪೇಂದ್ರನಿಗೆ ನೋಡಿ ಇತನಿಗೆ ತಕ್ಷಣ ಹೈದರಾಬಾದಗೆ ತೆಗೆದುಕೊಂಡು ಹೋಗಲು ತಿಳಿಸಿದ್ದರಿಂದ ಕೂಡಲೇ ಕುಪೇಂದ್ರ ಇತನಿಗೆ ಒಂದು ಖಾಸಗಿ ಅಂಬುಲೇನ್ಸನಲ್ಲಿ ಹೈದರಾಬಾದಗೆ ತೆಗೆದುಕೊಂಡು ಹೋಗಿದ್ದು ಇರುತ್ತದೆ, ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 113/2019, ಕಲಂ. ಹುಡುಗ ಕಾಣೆ :-
ದಿನಾಂಕ 06-12-2019 ರಂದು ಫಿರ್ಯಾದಿ ಮಾಣೇಮ್ಮಾ ಗಂಡ ಶರಣಪ್ಪಾ ನಿಮಾನೆ ವಯ: 45 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಮಾಣಿಕ ನಗರ, ಸದ್ಯ ಹಳ್ಳಿಖೇಡ (ಬಿ) ರವರು ಮಗನಾದ ವಿನೋದ ವಯ: 25 ವರ್ಷ ಇವನು ಬಿ.ಇ ವಿದ್ಯಾಭ್ಯಾಸ ಮಾಡಿ ಯಾವುದೆ ಕೆಲಸ ಇಲ್ಲದೆ ಮನೆಯಲ್ಲಿಯೇ ಇದ್ದನು, ಹೀಗಿರುವಾಗ ದಿನಾಂಕ 23-11-2019 ರಂದು ಮಗನಾದ ವಿನೋದ ಇತನು ಪುಣೆಕ್ಕೆ ಹೋಗಿ ಕೆಲಸ ಹುಡುಕಿಕೊಂಡು ಬರುತ್ತೇನೆಂದು ಹೇಳಿ ಹೋದವನು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾನೆ, ಅವನ ಚಹರೆ ಪಟ್ಟಿ ತೆಳ್ಳನೆಯ ಮುಖ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ, ನೇರವಾದ ಮೂಗು, ಎರಡು ಹುಬ್ಬುಗಳ ಮದ್ಯ ಹಳೆಯ ಗಾಯ ಇರುತ್ತದೆ, ಮೈಮೇಲೆ ಒಂದು ಡಾರ್ಕ ಬೂದಿ ಬಣ್ಣದ ಪಾಯಿಂಟ್ ಮತ್ತು ಒಂದು ಚಾಕಲೇಟ್ ಬಣ್ಣದ ಶರ್ಟ ಇದ್ದು, ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆಂದು ಕೊಟ್ಟ ಪಿüರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 151/2019, ಕಲಂ. 498(ಎ), 504 ಜೊತೆ 34 ಐಪಿಸಿ :-
ಫಿರ್ಯಾದಿ ಸುನೀತಾ ಗಂಡ ಸಚಿನ ಸುವರ್ಣಕಾರ ಸಾ: ಭಾತಂಬ್ರಾ ರವರ ಮದುವೆ ಸಚಿನ ತಂದೆ ಉಧವ ಇವರ ಜೋತೆ ದಿನಾಂಕ 09-05-2018 ರಂದು ಆಗಿರುತ್ತದೆ, ಮದುವೆಯಾದ ನಂತರ ಫಿರ್ಯಾದಿಯು ತನ್ನ ಗಂಡನ ಜೋತೆಯಲ್ಲಿ 6 ತಿಂಗಳು ಚೆನ್ನಾಗಿ ಸಂಸಾರ ಮಾಡಿದ್ದು, ಮದುವೆಯಾಗಿನಿಂದ ಆರೋಪಿತರಾದ ಗಂಡ 1) ಸಚಿನ ಗಂಡ ಉಧವ ಸುವರ್ಣಕಾರ, ಮಾವ 2) ಉಧವ ತಂದೆ ದಿಗಂಬರ ಸುವರ್ಣಕಾರ, ಅತ್ತೆ 3) ಸುನೀತಾ ಗಂಡ ಉದೌ ಸುವರ್ಣಕಾರ, 4) ದುರ್ಗಾ ತಂದೆ ತುಕಾರಾಮ ಪಂಚಾಳ ಸಾ: ನಳೆಗಾವ, ತಾ:  ಚಾಕೂರ ಇವರೆಲ್ಲರು ಫಿರ್ಯಾದಿಗೆ ದಿನಾಲು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡುತಿದ್ದರು, ವಿನಃ ಕಾರಣ ತವೂರು ಮನೆಗೆ ಹೊಗು ನಿನು ಚೆನ್ನಾಗಿಲ್ಲವೆಂದು ಹಿಂಸೆಯನ್ನು ಕೊಡುತ್ತಿದ್ದರು ಅಂತ ನೀಡಿದ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 06-12-2019 ರಂದು ಅರ್ಜಿ ನೀಡಿದರ ಮೇರೆಗೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.