Police Bhavan Kalaburagi

Police Bhavan Kalaburagi

Saturday, August 29, 2020

BIDAR DISTRICT DAILY CRIME UPDATE 29-08-2020

                          ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 29-08-2020

 ಗಾಂದಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 130/2020 ಕಲಂ 379 ಐಪಿಸಿ :-

ದಿನಾಂಕ 28/08/2020 ರಂದು 1100 ಗಂಟೆಗೆ ಫಿರ್ಯಾದಿ ಶ್ರೀ ಕೃಷ್ಣಮುರ್ತಿ ತಂದೆ ಸಂಗಯ್ಯಾ ಬಚ್ಚಾ ವಯ-50 ವರ್ಷ ಜಾ/ ಕೊಂಮಟಿ (ಆರ್ಯ ವೈಶ್ಯ) ಉ-ಎ.ಪಿ.ಎಂ.ಸಿ. ಗಾಂಧಿಗಂಜ ದಲ್ಲಿ ತೇರಿಗೆ ವಸೂಲಿ ಸಾ/ ಮನೆ ನಂ, 3-2-99 ಬ್ರಹ್ಮನವಾಡಿ ಬೀದರ ನಿವಾಸಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ ಇವರ ಹತ್ತಿರ ಒಂದು ಹಿರೊ ಸ್ಪ್ಲೆಂಡರ ಪ್ಲಸ  ದ್ವಿ-ಚಕ್ರ ವಾಹನ ಇದ್ದು ಅದರ ನೊಂದಣಿ ಸಂ, ಕೆ.ಎ-38ಯು-0931   ಅದರ ಮಾದರಿ 2016 ಕಪ್ಪು ಬಣ್ಣದು ಇದ್ದು  ಅಂ. ಕಿ 28000/- ರೂ ಇರುತ್ತದೆ  ಅದನ್ನು ದಿನಾಂಕ 24/07/2020 ರಂದು ಮುಂಜಾನೆ 1100 ಗಂಟೆಗೆ  ದಿನ ನಿತ್ಯದ  ಕೆಲಸಕ್ಕೆ ಗಾಂಧಿಗಂಜ ಎ.ಪಿ.ಎಂ.ಸಿ. ಗೆ ಬಂದು ಎ.ಪಿ.ಎಂ.ಸಿ ವಾಹನ ಪಾಕರ್ಿಂಗ ಜಾಗೆಯಲ್ಲಿ  ನಿಲ್ಲಿಸಿ ಕರ್ತವ್ಯಕ್ಕೆ ಹೊಗಿದ್ದು ಮರಳಿ 1200 ಗಂಟೆಗೆ ಬಂದು ನೊಡಿದಾಗ ಇವರ ವಾಹನವು ನಿಲ್ಲಿಸಿದ ಜಾಗೆಯಲ್ಲಿ    ಇರಲಿಲ್ಲಾ ಗಾಬರಿ ಗೊಂಡು  ಅಕ್ಕಪಕ್ಕದ ಜನರಿಗೆ ವಿಚಾರಿಸಲು ಯಾವದೆ ಮಾಹಿತಿ ಸಿಕ್ಕಿರುವದಿಲ್ಲಾ ಯಾರೊ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂಖ್ಯೆ 68/2020 ಕಲಂ 457, 380, 427 ಐಪಿಸಿ :-

 

ದಿನಾಂಕ: 28/08/2020 ರಂದು 12:05 ಗಂಟೆಗೆ ಶ್ರೀ ಬಸವರಾಜ ತಂದೆ ಸಂಗಪ್ಪಾ ಚಿಕಲೆ ಸರಕಾರಿ ಪೋಲಟೇಕ್ನೀಕ ಕಾಲೇಜ ಔರಾದ ಬಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಸಲ್ಲಿಸದರ ಸಾರಾಂಶವೆನೆಂದರೆ ಫಿರ್ಯಾದಿಯು ಸುಮಾರು 8 ವರ್ಷದಿಂದ ಔರಾದ ಬಿ ಪಾಲಟಿಕ್ನಿಕ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸುತಿದ್ದು ಅದೆ ರೀತಿ   ಕಾಲೇಜಿನಲ್ಲಿ ಸುಮಾರು 11 ಜನ ಉಪನ್ಯಾಸಕರು,7 ಜನ ಕಛೇರಿಯ ಸಿಬ್ಬಂದಿಯವರು,13 ಜನ ಗುತ್ತಿಗೆ ಆಧಾರದ ಮೇಲೆ ಡಿ.ಗ್ರೂಪ್ ಸಿಬ್ಬಂದಿ ಕೆಲಸ ಮಾಡುತ್ತಾರೆ. ದಿನಾಂಕ:27/08/2020 ರಂದು ಫಿಯರ್ಾದಿಯು  ಒಂದು ದಿವಸ ರಜೆಯ ಮೇಲೆ ಇದ್ದು ನಮ್ಮ ಕಾಲೇಜಿನಲ್ಲಿ ಎಲ್ಲಾ ಸಿಬ್ಬಂದಿಯವರು ದಿನ ನಿತ್ಯದಂತೆ ಬೆಳಿಗ್ಗೆ 10 ಗಂಟೆಗೆ ತಮ್ಮ ತಮ್ಮ ಕರ್ತವ್ಯಕ್ಕೆ ಬಂದು ತಮ್ಮ ಕರ್ತವ್ಯ ನಿರ್ವಹಿಸಿಕೊಂಡು ಸಾಯಂಕಾಲ 5:30 ಗಂಟೆಯ ಸುಮಾರಿಗೆ ಎಲ್ಲರು ಹೋಗುತ್ತಾರೆ. ಅದೆ ರೀತಿ ಡಿ.ಗ್ರೂಪ ಸಿಬ್ಬಂದಿಯವರಾದ ರವೀಂದ್ರ, ಅರವಿಂದ, ಗಣೇಶ, ಸುರ್ಯಕಾಂತ, ಗೊರಖನಾಥ, ಶ್ರೀಕಾಂತ ಇವರುಗಳು ಪಾಳಿ ಪ್ರಕಾರ ಕಾಲೇಜನಲ್ಲಿ ರಾತ್ರಿ ಹಗಲು ಕಾವಲುಗಾರ ಅಂತ ಕೆಲಸ ಮಾಡಿಕೊಂಡು ಇರುತ್ತಾರೆ. ನಂತರ ರಾತ್ರಿ 8:57 ಗಂಟೆಯ ಸುಮಾರಿಗೆ ರವೀಂದ್ರ ಭಾಲ್ಕೆ ಕಾವಲುಗಾರ ಇವನ ದೂರವಾಣಿ ಮುಖಾಂತರ ತಿಳಿಸಿದ್ದು ನಾನು ಕರ್ತವ್ಯಕ್ಕೆ ಬಂದಾಗ ನಿಮ್ಮ ಕೋಣೆಯ ಬಾಗಿಲವನ್ನು ಕೊಂಡಿ ಮುರಿದಿದ್ದು ಬಾಗಿಲು ತೆರೆದಿದ್ದು   ಒಳಗೆ ಕೆಲವು ಸಾಮಾನುಗಳು ನೇಲಕ್ಕೆ ಬಿದ್ದಿದ್ದು ಇರುತ್ತದೆ. ಯಾರೋ ಅಪರಿಚಿತ ಕಳ್ಳರು ಬಂದು ಬಾಗಿಲು ಕೊಂಡಿ ಮುರಿದು ಒಳಗೆ ಹೋಗಿರುತ್ತಾರೆ ಅಂತ ತಿಳಿಸಿರುತ್ತಾರೆ.  ದಿನಾಂಕ:28/0/2020 ರಂದು ಬೆಳಿಗ್ಗೆ 0600 ಗಂಟೆಗೆ ಫಿರ್ಯಾದಿ ಮತ್ತು ವಿಜಯಕುಮಾರ ಜಾಧವ,ಗಂಗಪ್ಪಾ ಹಣಮಶೇಟ್ಟೆ ರವರು ಬಂದು ಕಾಲೇಜಿನಲ್ಲಿ ಹೋಗಿ ನೊಡಿದಾಗ   ಕೋಣೆ ಬಾಗಿಲು ಕೊಂಡಿ ಮುರಿದು ಒಳಗೆ ಇದ್ದ 1] ಸಿ.ಸಿ ಟಿ.ವಿಯ ಕ್ಯಾಮರಾದ ಡಿ.ವಿ.ಅರ್.2] ಎರಡು ಸಿಪಿಯು 3]ಒಂದು ಮೊನೀಟರ್ ಗಳು ಯಾರೊ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಹಾಗು ಒಂದು ಎಲ್.ಜಿ  ಕಂಪನಿಯ ಎಲ್.ಇ.ಡಿ 32 ಇಂಚ ಮಾನಿಟರ ಒಡೆದು ಬಿಸಾಡಿ ಲುಕ್ಸಾನ ಮಾಡಿರುತ್ತಾರೆ. ಕಾಲೇಜಿನಲ್ಲಿದ್ದ 1] ಸಿ.ಸಿ ಟಿ.ವಿಯ ಕ್ಯಾಮರಾದ ಡಿ.ವಿ.ಅರ್ ಅ:ಕೀ=40,120/-ರೂ, 2] ಎರಡು ಸಿಪಿಯು ಹಾಗೂ ಒಂದು ಮೊನೀಟರ್ ಅ:ಕಿ:-55000/-ರೂ ಒಟ್ಟು ಕಳುವಾದ ಕಿಮ್ಮತ್ತು 95.120/-ರೂಗಳು ಮತ್ತು ಒಂದು ಎಲ್.ಜಿ  ಕಂಪನಿಯ ಎಲ್.ಇ.ಡಿ 32 ಇಂಚ ಮಾನಿಟರ ಒಡೆದು ಬಿಸಾಡಿ ಲುಕ್ಸಾನ ಅದ  ಅ:ಕಿ:-32450/-ರೂ ಆಗಿರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 ಬೀದರ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 83/2020 ಕಲಂ 379 ಐಪಿಸಿ :-

ದಿನಾಂಕ 28/08/2020 ರಂದು 16:30 ಗಂಟೆಗೆ ಫಿರ್ಯಾದಿ ಶ್ರೀ ಎಂ.ಎ ಅಕ್ರಮ ತಂದೆ ಎಂ.ಎ ಖಾಲಿಕ್ ವಯ:31 ವರ್ಷ ಜಾ:ಮುಸ್ಲಿಂ ಉ: ವ್ಯಾಪಾರ ಸಾ: ಮನೆ ನಂ 5-2-93 ಬಾರೂಧ ಗಲ್ಲಿ ಬೀದರ ರವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸದರ ಸಾರಾಂಶವೆನೆಂದರೆ ಫಿರ್ಯಾದಿಯು ಟ್ರಾಕ್ಟರ್ ಇಟ್ಟುಕೊಂಡು ವ್ಯವಹಾರ  ಮಾಡುತ್ತಿದ್ದು ಇದರೊಂದಿಗೆ ಮನೆಯಲ್ಲಿ ಆಡು ಸಾಕಾಣಿಕೆ ಮಾಡಿಕೊಂಡಿದ್ದು ಇವರ ಹತ್ತಿರ 3 ಆಡುಗಳು ಇದ್ದು ಅವು ಪ್ರತಿ ದಿನ ನನ್ನ ಮನೆಯ ಮುಂದೆ ಕಟ್ಟುತ್ತೇನೆ. ದಿನಾಂಕ 27/08/2020 ರಂದು ರಾತ್ರಿ   ಆಡುಗಳು ಎಂದಿನಂತೆ ಮನೆಯ ಮುಂದೆ ಕಟ್ಟಿ ರಾತ್ರಿ ಎಲ್ಲರೂ ಮಲಗಿಕೊಂಡು ನಂತರ ದಿನಾಂಕ 28/08/2020 ರಂದು ನಸುಕಿನ ಜಾವ ಅಂದಾಜು 5:30 ಗಂಟೆ ಸುಮಾರಿಗೆ  ಮನೆಯ ಮುಂದೆ ಆಟೊ ಹೊಗುವ ಶಬ್ದ ಕೇಳಿ   ಮನೆಯಿಂದ ಹೊರಗಡೆ ಬಂದು ನೋಡಲು ಒಂದು ಆಟೋದಲ್ಲಿ 3 ಜನರಿದ್ದು  ಮನೆಯ ಮುಂದೆ ಕಟ್ಟಿದ 3 ಆಡುಗಳು ಅಂದಾಜು 15,000/ರೂ ಬೆಲೆ ಬಾಳುವ ಆಡುಗಳು ಆಟೋದಲ್ಲಿ ಹಾಕಿಕೊಂಡು ಆಟೋ ಓಡಿಸಿಕೊಂಡು ಹೋಗಿರುತ್ತಾರೆ   ಆಟೋಕ್ಕೆ ಹಿಡಿಯಲು ಬೆನ್ನು ಹತ್ತಿದ್ದಾಗ ಆಟೋ ಓಡಿಸಿಕೊಂಡು ಹೋಗುತ್ತಿರುವದ್ದನ್ನು ನೋಡಿ ಅದರ ನಂಬರ ನೋಡಿದ್ದು ಕೆಎ-38/9919 ನೇದ್ದು  ಇರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 114/2020 ಕಲಂ 286, 338 ಐಪಿಸಿ 3 & 4 ಎಕ್ಸ್.ಪ್ಲೊಸಿವ್ ಕಾಯ್ದೆ ;-

ದಿನಾಂಕ 28/08/2020 ರಂದು 1700 ಗಂಟೆಗೆ ಭಾಲ್ಕಿ ಸರಕಾರಿ ಆಸ್ಪತ್ರೆಯಿಂದ ಗಾಯಾಳು ಶ್ರೀ ಸಂಜುಕುಮಾರ ಸೂರ್ಯವಂಶಿ ರವರ ಎಂ.ಎಲ್.ಸಿ. ಪತ್ರ ಸ್ವೀಕರಿಸಿಕೊಂಡು ಆಸ್ಪತ್ರೆಗೆ ಭೆಟಿ ನೀಡಿ ಅಲ್ಲಿ ಹಾಜರಿದ್ದ ಸಂಜುಕುಮಾರ ತಂದೆ ಬಾಬುರಾವ ಸೂರ್ಯವಂಶಿ ವಯ 40 ವರ್ಷ ಜಾ; ಎಸ್.ಸಿ. ಮಾದಿಗ ಸಾ; ಸಿದ್ದಾರ್ಥನಗರ ಭಾಲ್ಕಿ. ರವರಿಗೆ ವಿಚಾರಣೆ ಮಾಡಲು ಸದರಿಯವರು  ದಿನಾಂಕ 28/08/2020 ರಂದು ಹಚಿಕಮಟ ಗ್ರಾಮದ ಶ್ರೀ ನಾಗಶೇಟ್ಟಿ ತಂದೆ ಕಾಶಿನಾಥ ಪಾಟೀಲ್ ರವರು ಹೊಲದಲ್ಲಿ ಕಟ್ಟುತಿದ್ದ ಮನೆಯ ಸೆಂಟ್ರಿಂಗ ಕೆಲಸಕ್ಕೆ ಹೋಗಿರುತ್ತಾರೆ. ನಂತರ ಮಧ್ಯಾಹ್ನ ಇವರು ಮತ್ತು ನಾಗಶೇಟ್ಟಿ ಪಾಟೀಲ ಮತ್ತು ಶ್ರೀಮಂತ ಪಾಟೀಲ್ ಹಾಗೂ ಇತರರು   ಹೊಲದಲ್ಲಿರುವ ತಗಡದ ಶೇಡ್ಡಿನಲ್ಲಿ ಕುಳಿತಿದಾಗ 3 ಪಿ.ಎಂ. ಗಂಟೆಯ ಸುಮಾರಿಗೆ ಕಾರಾಂಜಾ ಕಾಲುವೆ ಹತ್ತಿರ ಸರಕಾರದಿಂದ ಗುತ್ತಿಗೆ ಪಡೆದು ಎತನಿರಾವರಿಯ ಕೆಲಸ ನಿರ್ವಹಿಸುತ್ತಿದ್ದ ಸೈಟ ಮ್ಯಾನೇಂಜರ್ ಈತನು ಕೆಲಸ ವೇಳೆಯಲ್ಲಿ ಗುಂಡಿಯಲ್ಲಿ ಯಾವುದೆ ಅನುಮತಿ ಪಡೆಯದೆ  ಸ್ಪೋಟಕ ಶೇಲ್ (ಜಲಾಯಟಿನ ) ಬಳಸಿ ಒಮ್ಮೇಲೆ ಸ್ಪೋಟ ಮಾಡಿದಾಗ ಗುಂಡಿಯಲ್ಲಿನ ಕಲ್ಲು ಹಾರಿ ತಗಡದ ಒಳಗಡೆ ಬಂದು ಇವರ ಹೊಟ್ಟೆಯ ಮೇಲೆ ಹತ್ತಿ ರಕ್ತಗಾಯವಾಗಿರುತ್ತದೆ. ಆಗ ಕೂಡಲೇ ಸಿಬ್ಬಂದಿಯವರಾದ ಶ್ರೀ ಮಹೇಶ ಸಿಪಿಸಿ-1908, ಶ್ರೀ ಭಾಗವತ ಸಿಪಿಸಿ-1880 ರವರಿಗೆ ಕರೆದುಕೊಂಡು ಹಚ್ಚಿಕಮಟ ಗ್ರಾಮದ ಘಟನೆ ಸ್ಥಳಕ್ಕೆ ಭೆಟಿ ನೀಡಿ ಪರಿಶೀಲಿಸಿದಾಗ ಅಲ್ಲಿ ಕಾರಂಜಾ ಕಾಲುವೆಗೆ ಸರಕಾರದಿಂದ ಗುತ್ತಿಗೆ ಪಡೆದುಕೊಂಡು ಮಾಂಜ್ರಾ ನದಿಯಿಂದ ಏತ ನೀರಾವರಿ ( ಲಿಫ್ಟ ಇರಿಗೇಶನ) ಕೆಲಸ ಮಾಡುತಿದ್ದ ಸೈಟ ಮ್ಯಾನೇಂಜರ್ ಯಾವುದೇ ಅನುಮತಿ ಪಡೆಯದೆ ಗುಂಡಿಯಲ್ಲಿ  ಸ್ಪೋಟಕ ಶೆಲ್ (ಜಲಾಯಿಟಿನ) ಸ್ಪೋಟಕ ವಸ್ತು ಅಳವಡಿಸಿ ಸ್ಪೋಟ ಮಾಡಿರುತ್ತಾನೆ ಎಂದು ಘಟನೆ ಸ್ಥಳದಿಂದ ಕಂಡು ಬಂದಿರುತ್ತದೆ. ಮತ್ತು ಘಟನೆ ಸ್ಥಳದಲ್ಲಿ ಒಂದು ಲಾರಿ ನಂ.ಎಪಿ-39/ಸಿ.ಝೇಡ-3548  ನೇದ್ದನ್ನು ನಿಂತಿದ್ದು ಸದರಿ ಲಾರಿಯ ಕ್ಯಾಬಿನ ಸುಟ್ಟು ಹೊಗಿರುತ್ತದೆ. ಸ್ಥಳದಲ್ಲಿ 1) 23 ಎಕ್ಪಪ್ಲೋಸಿವ ಪಾಕೆಟ್ (ಐಡಲ್ ಬುಸ್ಟ್) 83 ಎಮ್.ಎಮ್. 2.78 ಕೆ.ಜಿ. ಅ.ಕಿ. 5000/- , 2] ಸೆಫ್ಟಿ ಕೆಪ್-1 ಅ.ಕಿ. 500/- 3] ಎಲೆಕ್ಟ್ರಾನಿಲ್ ಡಿಟೊನೆಟರ್-8 ಅ.ಕಿ. ಅ;ಕಿ; 5000/- ರೂ  ಸ್ಥಳದಲ್ಲಿ ಕಂಡು ಬಂದಿರುತ್ತವೆ.  ನಂತರ ಸದರಿ ಕಾರಂಜಾ ಕಾಲುವೆಯ ಎತನಿರಾವರಿ ಕೆಲಸವು ಓಷಿಯನ್ ಕನಸ್ಟ್ರಕ್ಷನ್ ಇಂಡಿಯಾ ಪ್ರೈ.ಲಿ. ಮಂಗಳೂರು  ಕಂಪನಿ ನಿರ್ವಹಿಸುತಿದ್ದು ಅದರ ಸೈಟ ಮ್ಯಾನೇಂಜರ ಹೆಸರು ಆಶೀಫ ತಂದೆ ಹೈದರಅಲಿ ಸಾ; ಹೊಸುರ ತಾ; ತಿರ್ಥಹಳ್ಳಿ ಜಿಲ್ಲೆ ಶಿವಮೊಗ್ಗ ಅಂತ ಗೋತ್ತಾಗಿರುತ್ತದೆ.   ಆದ್ದರಿಂದ ಹಚಿಕಮಟ ಗ್ರಾಮದ ಶಿವಾರದಲ್ಲಿ ಕಾರಂಜಾ ಕಾಲುವೆಗೆ ಏತ ನೀರಾವರಿ ಯೋಜನೆಯ ಕೆಲಸ ನಿರ್ವಹಿಸುತಿದ್ದ  ಸದರಿ   ಕಂಪನಿ ಹಾಗು ಸೈಟ ಮ್ಯಾನೇಂಜರ ಆಶೀಫ ತಂದೆ ಹೈದರಅಲಿ ಸಾ; ಹೊಸುರ ತಾ; ತಿರ್ಥಹಳ್ಳಿ ಜಿಲ್ಲೆ ಶಿವಮೊಗ್ಗ ಈತನು ಯಾವುದೆ ಅನುಮತಿ ಪಡೆಯದೆ ಅನಧಿಕೃತವಾಗಿ ಗುಂಡಿಯಲ್ಲಿ  ಸ್ಪೋಟಕ ಶೆಲ್ (ಜಲಾಯಿಟಿನ) ಸ್ಪೋಟಕ ವಸ್ತು ಅಳವಡಿಸಿ ಸ್ಪೋಟ ಮಾಡಿದರಿಂದ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Friday, August 28, 2020

BIDAR DISTRICT DAILY CRIME UPDATE 28-08-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 28-08-2020

 

ಮನ್ನಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 05/2020, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 27-08-2020 ರಂದು ಫಿರ್ಯಾದಿ ವಿಠಲ ರೆಡ್ಡಿ ತಂದೆ ವೆಂಕಟರೆಡ್ಡಿ ನಾನಾಪುರ ಸಾ: ಬರೂರ ರವರ ಹೆಂಡತಿಯಾದ ಸರೆಮ್ಮಾ ಗಂಡ ವಿಠಲರೆಡ್ಡಿ ಹಾಗೂ ಸಂಬಂಧಿಕರಾದ ಸುಮಿತ್ರಾ ಗಂಡ ರಾಮರೆಡ್ಡಿ ಹಾಗೂ ಶೋಬಮ್ಮಾ ಹಾಗೂ ಲಕ್ಷ್ಮಮ್ಮ ಇವರೆಲ್ಲರೂ ಕೂಡಿಕೊಂಡು ಸಂಬಂಧಿಯಾದ ಲಚಮ್ಮಾ ರೆಡ್ಡಿ ತಂದೆ ಬೋಜರೆಡ್ಡಿ ನಾನಾಪುರ ರವರ ಹೋಲ ಸರ್ವೆ ನಂ. 63 ನೇದರಲ್ಲಿ ಹೆಸರು ಬೆಳೆ ಕಟಾವು ಮಾಡಲು ಹೋದಾಗ ಫಿರ್ಯಾದಿಯವರ ಹೆಂಡತಿಗೆ ಹೋಲದಲ್ಲಿ ಆಕಸ್ಮಿಕವಾಗಿ ಹಾವು ಬಲಗಾಲು ಹಿಮ್ಮಡಿ ಮೇಲೆ ಕಚ್ಚಿದ್ದರಿಂದ ಅವರಿಗೆ ಚಿಕಿತ್ಸೆಗಾಗಿ ಬೀದರ ಜಿಲ್ಲಾ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ವೈದ್ಯಾಧೀಕಾರಿಗಳು ಪರಿಕ್ಷಿಸಿ ಮ್ರತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 15/2020, ಕಲಂ. 174 ಸಿ.ಆರ್.ಪಿ.ಸಿ :-

ಸುಮಾರು 5-6 ತಿಂಗಳಿಂದ ಫಿರ್ಯಾದಿ ವೆಂಕಪ್ಪಾ ತಂದೆ ಲಕ್ಷ್ಮಣ ವಾಡೆಕರ ವಯ: 50 ವರ್ಷ, ಜಾತಿ: ವಡ್ಡರ, ಸಾ: ಕನಕಟ್ಟಾ ರವರ ತಂದೆಯವರು ಮಾನಸಿಕ ಅಸ್ವಸ್ಥರಾಗಿದ್ದು, ಆಗಾಗ ಮನೆಯಿಂದ ಯಾರಿಗೂ ಹೇಳಿದೆ ಹೊರಗಡೆ ಹೋಗಿದ್ದರು ಹೊರಗಡೆ ಹೊದಾಗಲೆಲ್ಲಾ ಅಣ್ಣ-ತಮ್ಮಂದಿರು ಮತ್ತು ಮಕ್ಕಳು ಎಲ್ಲರೂ ಕೂಡಿ ಹುಡಕಾಡಿ ಮನೆಗೆ ಕರೆದುಕೊಂಡು ಬರುತಿದ್ದರು, ಹೀಗಿರುವಾಗ ದಿನಾಂಕ 25-08-2020 ರಂದು ಫಿರ್ಯಾದಿಯವರ ತಂದೆಯಾದ ಲಕ್ಷ್ಮಣ ತಂದೆ ತಿಪ್ಪಣ್ಣಾ ವಾಡೆಕರ ರವರು ಮನೆಯಿಂದ ಯಾರಿಗೂ ಹೇಳದೆ ಹೋದಾಗ ದಿನಾಂಕ 26-08-2020 ರಂದು ತಂದೆಯವರೆಗೆ ಹುಡಕಾಡಿದ್ದು, ನಂತರ ದಿನಾಂಕ 27-08-2020 ರಂದು ಕೂಡ ಎಲ್ಲರೂ ಕೂಡಿ ಅವರಿಗೆ ಹುಡಕಾಡುವಾಗ ತಮ್ಮೂರ ಗಣಪತಿ ತಂದೆ ನಾಗಪ್ಪಾ ಕೊರಿಯಾರ ಇವರು ಫಿರ್ಯಾದಿಗೆ ರಾಜೋಳ ಶಿವಾರದಲ್ಲಿ ಸುರೇಶ ತಂದೆ ಮಲ್ಲಿಕಾರ್ಜುನ ಖಪ್ಲೆ ರವರ ಹೊಲದ ಕಟ್ಟೆ ಹತ್ತಿರ ಒಂದು ಹೆಣ ಬಿದಿದ್ದೆ ಜನರು ಜಮಾ ಆಗಿರುತ್ತಾರೆಂದು ತಿಳಿಸಿದ ಕೂಡಲೆ ಫಿರ್ಯಾದಿಯು ಹೋಗಿ ನೋಡಲು ಹೆಣ ತಂದೆಯವರದ್ದೆ ಇದ್ದು ಮುಖಕ್ಕೆ ದೆಹಕ್ಕೆ ಎಲ್ಲಾ ಕಡೆ ಹುಳಗಳು ಆಗಿದ್ದು, ಸದರಿಯವರು ಮಾನಸಿಕ ಅಸ್ವಸ್ಥರಾಗಿ ಅವರಿಗೆ ರಕ್ತದ ಒತ್ತಡ, ಸಕ್ಕರೆ ಕಾಯಿಲೆಗಳು ಇದ್ದವು ಅಲ್ಲದೆ ವಯಸ್ಸು ಕೂಡಾ ಆಗಿರುವುದರಿಂದ ದಿನಾಂಕ 25-08-2020 ರಂದು 2000 ಗಂಟೆಯ ಅವಧಿಯಲ್ಲಿ ತಮ್ಮೂರಿನ ಸುರೇಶ ಖಪ್ಲೆ ರವರ ಹೊಲದ ಬಂದಾರಿ ಹತ್ತಿರ ಮೃತಪಟ್ಟಿರುತ್ತಾರೆ, ತನ್ನ ತಂದೆಯವರ ಸಾವಿನಲ್ಲಿ ನನ್ನದು ಯಾವುದೇ ದೂರು ಅಥವಾ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 63/2020, ಕಲಂ. 279, 337, 338 ಐಪಿಸಿ :-

ದಿನಾಂಕ 27-08-2020 ರಂದು ಫಿರ್ಯಾದಿ ಸುರೇಶ ತಂದೆ ಶಂಕರ ಚನಪನೋರ್ ಸಾ: ವಾಂಜರಿ ಹುಮನಾಬಾದ, ಜಿಲ್ಲೆ: ಬೀದರ ರವರು ತನ್ನ 06 ವರ್ಷದ ಮಗ ವೀರೇಶ ಇಬ್ಬರೂ ಕೂಡಿಕೊಂಡು ಕಾಯಿಪಲ್ಲೆ ತೆಗೆದುಕೊಂಡು ಹೋಗಲು ವಾಂಜರಿ ಕಡೆಯಿಂದ ರೋಡಿನ ಬದಿಯಲ್ಲಿ ಕಾಲ ನಡಿಗೆಯಲ್ಲಿ ನಡೆದುಕೊಂಡು ಥೇರ್ ಮೈದಾನ ಕಡೆಗೆ ಬರುತ್ತಿರುವಾಗ ಇಂಡಿಕ್ಯಾಶ್ ಎ.ಟಿ.ಎಮ್ ಹತ್ತಿರ ಬಂದಾಗ ಅದೇ ಸಮಯಕ್ಕೆ ಹಿಂದಿನಿಂದ ಅಂದರೆ ಕಲ್ಲೂರ ಕಡೆಯಿಂದ ಮೋಟಾರ್ ಸೈಕಲ್ ಸಂ. ಕೆಎ-39/ಜೆ-1182 ನೇದರ ಚಾಲಕನಾದ ಆರೋಪಿ ನಮೋ ತಂದೆ ಸಂತೋಷ ಮೇಲದೊಡ್ಡಿ ಸಾ: ಎಮ್.ಪಿ ಗಲ್ಲಿ ಹುಮನಾಬಾದ ಇವನು ತನ್ನ ಮೋಟಾರ್ ಸೈಕಲ ಮೇಲೆ ಅನಿರುದ್ಧ ತಂದೆ ಅರವಿಂದ ಕುಲಕರ್ಣಿ ಸಾ: ಎಮ್.ಪಿ ಗಲ್ಲಿ ಹುಮನಾಬಾದ ಇವನಿಗೆ ಕೂಡಿಸಿಕೊಂಡು ತನ್ನ ಮೋಟಾರ್ ಸೈಕಲನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ರೋಡಿನ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೀರೇಶ ಇವನಿಗೆ ಡಿಕ್ಕಿ ಹೊಡೆದು ಅಪಘಾತ ಪಡೆಸಿ ತನ್ನ ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿರುತ್ತಾನೆ, ಕಾರಣ ಸದರಿ ಅಪಘಾತದಿಂದ ವೀರೇಶ ಇವನಿಗೆ ನೋಡಲಾಗಿ ಹಣೆಗೆ, ಬಲಗಡೆ ಕಪಾಳಕ್ಕೆ ತೀವ್ರ ರಕ್ತಗಾಯ, ಬಲಗಡೆ ಕಣ್ಣಿಗೆ ಗುಪ್ತಗಾಯ ಮತ್ತು ಹೊಟ್ಟೆಯ ಬಲಗಡೆಗೆ ತರಚಿದ ಗಾಯಗಳು ಆಗಿರುತ್ತವೆ, ನಮೋ ಇವನಿಗೆ ನೋಡಲಾಗಿ ಬಲಗಡೆ ಕಪಾಳಕ್ಕೆ ತರಚಿದ ಗಾಯ ಮತ್ತು ಬಲಗೈ ಮೊಣಕೈ ಕೆಳಗೆ ತೀವ್ರ ಗುಪ್ತಗಾಯವಾಗಿರುತ್ತದೆ, ಅನಿರುದ್ದ ಇವನಿಗೆ ನೋಡಲಾಗಿ ಹಣೆಯ ಎಡಗಡೆಗೆ ರಕ್ತಗಾಯ, ಎಡಗೈ ಮೊಣಕೈಗೆ ಮತ್ತು ಎರಡು ಮೊಣಕಾಲಗಳಿಗೆ ತರಚಿದ ಗಾಯಗಳು ಆಗಿರುತ್ತವೆ, ನಂತರ ಮೂವರು ಗಾಯಾಳುಗಳಿಗೆ ಒಂದು ಆಟೋದಲ್ಲಿ ಕೂಡಿಸಿಕೊಂಡು ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ. 67/2020, ಕಲಂ. 78(3) ಕೆ.ಪಿ ಕಾಯ್ದೆ :- 

ದಿನಾಂಕ 27-08-2020 ರಂದು ಗೌರ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚಿಟಿ ಬರೆದುಕೊಳ್ಳುತ್ತಿದ್ದಾನೆಂದು ಗೌತಮ ಪಿಎಸ್ಐ ಹುಲಸೂರ ಪೊಲೀಸ ಠಾಣೆ ರವರಿಗೆ ಖಚಿತವಾದ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಗೌರ ಗ್ರಾಮದ ಆಸ್ಪತ್ರೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಗೌರ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಅಂಬ್ರಿಷ ತಂದೆ ಅಣ್ಣಾರಾವ ಮೂಲಗೆ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಹಳ್ಳಿಖೇಡ [ಕೆ], ಸದ್ಯ: ಗೌರ ಗ್ರಾಮ, ಇತನು ಒಂದು ರೂಪಾಯಿಗೆ 90/- ರೂಪಾಯಿ ಕೊಡುವದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚಿಟಿ ಬರೆದುಕೊಳ್ಳುತಿರುವದನ್ನು ನೋಡಿ ಆತನ ಮೇಲೆ ದಾಳಿ ನಡೆಸಿ ಹಿಡಿದುಕೊಂಡು ಆತನಿಂದ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ 1 ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನ ಹಾಗು ನಗದು ಹಣ 840/- ರೂಪಾಯಿಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 108/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 27-08-2020 ರಂದು ಬಸವಕಲ್ಯಾಣ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಸುನೀಲಕುಮಾರ್ ಪಿಎಸ್‍ಐ (ಕಾ&ಸೂ) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಿಎಸಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಗೌಸ ಖುರೇಶಿ ತಂದೆ ಉಸ್ಮಾನ ಖುರೇಶಿ ವಯ: 32 ವರ್ಷ, ಜಾತಿ: ಮುಸ್ಲಿಂ, ಸಾ: ಅಮೀಪರೆಟ ಕಾಲೋನಿ ಬಸವಕಲ್ಯಾಣ ಹಾಗೂ ಎಂ.ಡಿ ಇಲಾಹಿ ತಂದೆ ಫಕೀರಾಬ ಮಸೂಲ್ದಾರ  ವಯ: 23 ವರ್ಷ, ಜಾತಿ: ಮುಸ್ಲಿಂ, ಸಾ: ಖಡಿಝಂಡಾ ಆಶ್ರಯ ಕಾಲೋನಿ ಬಸವಕಲ್ಯಾಣ ಇವರಿಬ್ಬರು ನಿಂತುಕೊಂಡು ಸಾರ್ವಜನಿಕರಿಗೆ 1/- ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುವುದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಇಬ್ಬರಿಗೂ ಹಿಡಿದುಕೊಂಡು ಅವರಿಂದ ಒಟ್ಟು ನಗದು ಹಣ 20,040/- ರೂ. 04 ಮಟಕಾ ಚೀಟಿಗಳು ಹಾಗೂ 02 ಬಾಲ್ ಪೆನ್ ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 181/2020, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 27-08-2020 ರಂದು ಪಾಪವ್ವ ನಗರದ ಅಂಬೇಡ್ಕರ ವೃತ್ತದ ಹತ್ತಿರ ಇಬ್ಬರು ತಮ್ಮ ಹತ್ತಿರ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದೆ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುವ ಕುರಿತು ತಮ್ಮ ವಶದಲ್ಲಿ ಇಟ್ಟುಕೊಂಡು ಕುಳಿತಿದ್ದಾನೆಂದು ಅಮರ ಕುಲಕರ್ಣಿ ಪಿಎಸ್ಐ ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಪಾಪವ್ವ ನಗರದಲ್ಲಿ ಅಂಬೇಡ್ಕರ ವೃತ್ತದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಪಾಪವ್ವ ನಗರದ ಅಂಬೇಡ್ಕರ ವೃತ್ತದ ಹತ್ತಿರ ಆರೋಪಿತರಾದ 1) ಶಾಲಿವಾನ ತಂದೆ ನಾಗಪ್ಪಾ ರಾಮಲೆ, ಸಾ: ಪಾಪವ್ವ ನಗರ ಭಾಲ್ಕಿ, 2) ಗೈಬು ತಂದೆ ಗೋವಿಂದ ಸಿಂಧೆ, ಸಾ: ಸಾಯಿ ನಗರ ಭಾಲ್ಕಿ ಇವರಿಬ್ಬರು ತಮ್ಮ ವಶದಲ್ಲಿ ಒಂದು ಚೀಲದ ಗಂಟು ಇಟ್ಟುಕೊಂಡು ಕುಳಿತಿರುವುದನ್ನು ನೋಡಿ ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಅವರ ವಶದಲ್ಲಿದ್ದ ಪ್ಲಾಟಿಕ ಗೋಣಿ ಚೀಲ ಪರಿಶೀಸಿಲಿಸಲು ತಲಾ 90 ಎಂ.ಎಲ ವುಳ್ಳ ಯು.ಎಸ. ವಿಸ್ಕಿಯ 6 ಪ್ಲಾಸ್ಟಿಕ ಬಾಟಲಗಳು ಒಂದರ ಬೆಲೆ 35.13 ಪೈಸೆ ಮತ್ತು ತಲಾ 90 ಎಂ.ಎಲ ವುಳ್ಳ ಓರಿಜಿನಲ ಚಾಯಸ ವಿಸ್ಕಿಯ 41 ಪೌಚಗಳು ಒಂದರ ಬೆಲೆ 35.13 ಪೈಸೆ. ಹೀಗೆ ಒಟ್ಟು ಎಲ್ಲಾ ಸೇರಿ ಅ.ಕಿ 1651/- ರೂ. ದಷ್ಟು ಇರುತ್ತದೆ, ನಂತರ ಸದರಿ ಆರೋಪಿತರಿಗೆ ಮದ್ಯ ತಮ್ಮ ವಶದಲ್ಲಿ ಇಟ್ಟುಕೊಂಡ ಬಗ್ಗೆ ಸಂಬಂಧಪಟ್ಟ ಇಲಾಖೆಯವರಿಂದ ಪಡೆದ ಯಾವುದಾರು ಅನುಮತಿ ಪತ್ರ ಇದ್ದಲ್ಲಿ ಹಾಜರು ಪಡಿಸುವಂತೆ ತಿಳಿಸಿದಾಗ ತಮ್ಮ ಹತ್ತಿರ ಯಾವದೆ ಅನುಮತಿ ಪತ್ರ ಇರುವದಿಲ್ಲಾ ಅಂತ ತಿಳಿಸಿದ್ದರಿಂದ ಪಂಚರ ಸಮಕ್ಷಮ ಅವರ ವಶದಲ್ಲಿ ದೋರೆತ ಎಲ್ಲಾ ಮದ್ಯವನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.