Police Bhavan Kalaburagi

Police Bhavan Kalaburagi

Sunday, July 30, 2017

Kalaburagi District Reported Crimes.

±ÀºÁ¨ÁzÀ £ÀUÀgÀ ¥ÉưøÀ oÁuÉ : ದಿನಾಂಕ: 29/07/2017 ರಂದು ಸಾಯಂಕಾಲ 7-00 ಗಂಟೆಗೆ ಶ್ರೀ ಮಲ್ಲಿಕಾರ್ಜುನ ಉಪ ತಹಸೀಲ್ದಾರರು ನಾಡ ಕಾರ್ಯಲಯ ಶಹಾಬಾದ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಗಣಕಿಕೃತ ಮಾಡಿಸಿದ ಪಿರ್ಯಾದಿ ಅರ್ಜಿ ನೀಡಿದ್ದು ಅದರ ಸಾರಂಶವೆನೆಂದರೆ. ಮಾನ್ಯ ಸಹಾಯಕ ಆಯುಕ್ತರು ಸೇಡಂ ರವರ ಮೌಖಿಕ ಆದೇಶದಂತೆ ದಿನಾಂಕ: 15/07/2017 ರಂದು ಬೆಳ್ಳಿಗೆ 11-00 ಗಂಟೆಗೆ ಮಾಹಿತಿ ತಿಳಿಸಿದನೆಂದರೆ ಹೊನಗುಂಟಾ ಗ್ರಾಮದ ಸೀಮಾತರದಲ್ಲಿ ಸರ್ವೆ ನಂಬರ ಉಳ್ಳ ಜಮೀನುಗಳಲ್ಲಿ ಆಕ್ರಮ ಹಾಗೂ ಕಳ್ಳತನದಿಂದ ಕಾಗಿಣಾ ನದಿಯಿಂದ ಮರಳು ಹೊರ ತೆಗೆದು ಮಾರಾಟ ಮಾಡುವ ಉದ್ದೇಶದಿಂದ ಮರಳು ಸಂಗ್ರಹಿಸಿ ಇಟ್ಟಿರುವುದಾಗಿ ತಿಳಿದು ಬಂದಿದ್ದು ದಾಳಿ ಮಾಡಿ ಕ್ರಮ ಕೈಗೊಳ್ಳಿ ಅಂತಾ ಅದೇಶದ ಮೇರೆಗೆ ನಾನು ಶಹಾಬಾದ ನಗರ ಠಾಣೆಯ ಶ್ರೀ ಕಲ್ಯಾಣಿ ಎ.ಎಸ್.ಐ , ಸಂಜುಕುಮಾರ ಸಿಪಿಸಿ 1098, ಲೊಕೋಪಯೋಗಿ ಇಲಾಖೆಯ ಶ್ರೀ ಸಾಹೇಬರಾವ ಸುಪರವೈಜರ ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರಾದ ಶ್ರೀ ಮಹ್ಮದ ಸುಬಾನ ಎಲ್ಲಾರೂ ಕೂಡಿ ಹೊನಗುಂಟಾ ಗ್ರಾಮಕ್ಕೆ 11-30 ಗಂಟೆಗೆ ಹೋಗಿ ಹೊನಗುಂಟಾ ಗ್ರಾಮದ ಗ್ರಾಮ ಲೇಖಪಾಲಕರಾದ ಮೋತಿಲಾಲರವರೊಂದಿಗೆ ವಿವಿಧ  ಸರ್ವೆ ನಂಬರ ಜಮೀನಿನಲ್ಲಿ  ಕಾಗಿನಾ ನದಿಯಿಂದ ಮರಳು ಕಳ್ಳತನದಿಂದ ಸಂಗ್ರಹಿಸಿಟ್ಟಿದನು ನೊಡಿ ಖಚಿತ ಪಡಿಸಿಕೊಂಡು ಆಕ್ರರ ಬೇಗಂ ಗಂಡ ಮಹ್ಮದ ಅಜಿಮೋದ್ದಿನ ಇವರ ಜಮೀನ ಸರ್ವೆ ನಂಬರ 343/ಈ 2 ನೇದ್ದರಲ್ಲಿ ಸಂಗ್ರಹಿಸಿ 36 ಕ್ಯೂಬಿಕ ಮೀಟರಸ್ ಮರಳು , ಮತ್ತು ಸರಕಾರಿ ಪರಂಪೋಕ ( ಹುಣಚೆ ಗಿಡ ಹತ್ತಿರ ) ಸರ್ವೆ ನಂಬರ 350 ರಲ್ಲಿ 18 ಕ್ಯೂಬಿಕ ಮೀಟರ್ಸ ಮರಳು, ಸರಕಾರಿ ಪಡಾ - ಬೀಳು ( ರುದ್ರಭೂಮಿ ಹತ್ತಿರ ) ಸರ್ವೆ ನಂಬರ 354 ರಲ್ಲಿ 18 ಕ್ಯೂಬಿಕ ಮೀಟರ್ಸ ಮರಳು , ಸರಕಾರಿ ಗಾಯರಾಣ ( ಬೀರಲಿಂಗ ದೇವಸ್ತಾನ ಹತ್ತಿರ ) ಸರ್ವೆ ನಂಬರ 141 ರಲ್ಲಿ 09 ಕ್ಯೂಬಿಕ ಮೀಟರ್ಸ ಮರಳು ಸಂಗ್ರಹಿಸಿದ್ದು ಒಟ್ಟು 81 ಕ್ಯೂಬಿಕ ಮೀಟರ್ಸ ಅ.ಕಿ 56,700 -00 ಮರಳು ದಾಳಿ ಮಾಡಿ ಜಪ್ತಿ ಪಡಿಸಿಕೊಂಡು ಮಾನ್ಯ ಸಹಾಯಕ ಆಯುಕ್ಥರು ಸೇಡಂ ರವರ ಮೌಖಿಕ ಆದೇಶದ ಮೇರೆಗೆ ಲೊಕೋಪಯೋಗಿ ಇಲಾಖೆ ಚಿತ್ತಾಪೂರ ರವರಿಗೆ ಹಸ್ತಾಂತರಿಸಲಾಗಿರುತ್ತದೆ. ಕಾರಣ ಆಕ್ರಮ ಹಾಗೂ ಕಳ್ಳತನದಿಂದ ಕಾಗಿಣಾ ನದಿಯಿಂದ ಮರಳ ತೆಗೆದು ಮಾರಾಟ ಮಾಡುವ ಉದ್ದೇಶದಿಂದ ಮರಳು ಸಂಗ್ರಹಿಸಿ ಇಟ್ಟಿದ ಜಮೀನಿನ ಭೂ ಮಾಲಿಕರ ಮೇಲೆ ಮತ್ತು ಸರಕಾರಿ ಜಮೀನು ಆಗಿದ್ದಲಿ ಚಕ್ಕ ಬಂದಿ ಸಹಾಯದಿಂದ ಮರಳು ಹಾಕಿದವರ ಹೆಸರುಗಳನ್ನು ಪತ್ತೆ ಹಚ್ಚಿ ಕಲಂ 379 ಐಪಿಸಿ ಸಂಗಡ 4 (1ಎ) , 21 (1)  ಎಮ್.ಎಮ್.ಅರ್.ಡಿ ಆಕ್ಟ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲು ಕೋರಲಾಗಿದೆ ಅಂತಾ ಇದ್ದ ಅರ್ಜಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 136/2017 ಕಲಂ 379 ಐಪಿಸಿ ಮತ್ತು 4 (1ಎ) 21 (1) ಎಮ್.ಎಮ್.ಅರ್.ಡಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು ಬಗ್ಗೆ ವರದಿ..

ಜೇವರಗಿ ಪೊಲೀಸ್ ಠಾಣೆ :  ದಿ 29.07.2017 ರಂದು ರಾತ್ರಿ 8.30 ಗಂಟೆಗೆ ಪೀರ್ಯಾದಿದಾರನು ಠಾಣೆಗೆ ಹಾಜರಾಗಿ ದೂರು ಅರ್ಜಿ ಸಲ್ಲಿಸಿದ ಸಾರಾಂಶವೆನೆಂದರೆ ಅರ್ಜಿದಾರನಾದ ನಾನು ಅಭಿಮನ್ಯು ತಂದೆ ಮುಕಪ್ಪ ತಳಗೇರಿ ವಯಾ|| 26  ವರ್ಷ ಜಾ|| ಬೇಡರ  ಸಾ|| ನರಿಬೋಳ ಇದ್ದು ದಿನಾಂಕ 27.07.2017 ರಂದು ಮದ್ಯಾಹ್ನ 12 ಗಂಟೆಗೆ ನಾನು ಪಾಲಿಗೆ ಮಾಡಿದ ನಮ್ಮೂರ ಸಿಮಾಂತರ ಹೋಲ ಸರ್ವೆ ನಂ 222 ವಿಸ್ತೀರ್ಣ 07 ಎಕೆರೆ 09 ಗುಂಟೆ ಶರಣಪ್ಪ ತಂದೆ ತಿಪ್ಪಣ್ಣ ತಳವಾರ ಇವರ ಹೋಲ ಪಾಲಿಗೆ ಮಾಡಿದ್ದು ನಾನು ದಿನ ಮುಂಜಾನೆ ಪಾಲಿಗೆ ಮಾಡಿದ ಹೋಲಕ್ಕೆ ಬಿತ್ತಲಿಕ್ಕೆ ಹೋದಾಗ ಸದರಿ ನಮ್ಮೂರಿನವರಾದ 1) ಮರೆಣ್ಣ ತಂದೆ ತಿಪ್ಪಣ್ಣ ತಳವಾರ 2) ಶಿವಲಿಂಗಮ್ಮ ಗಂಡ ಮರೆಣ್ಣ ತಳವಾರ ಮತ್ತು ಅವರ ಮಕ್ಕಳಾದ 3) ಮಲ್ಲಿಕಾರ್ಜುನ ತಂದೆ ಮರೆಣ್ಣ ತಳವಾರ 4) ಸುರೇಶ ತಂದೆ ಮರೆಣ್ಣ ತಳವಾರ ಇವರೆಲ್ಲರು ಕುಡಿಕೊಂಡು ಬಂದು ಹೋಲದ ಪಕ್ಕದಲ್ಲಿ ನೀರಾವರಿ ಕಾಲುವೆ ಇದ್ದು ಅದರ ನೀರು ನೀನು ಕುಡಿದರೆ ನೀನು ಬೇಡ ಜಾತಿಯವನು ನೀನು ಕುಡಿದ ನೀರು ನಾವು  ಕುಡಿಯಬೇಕೆನಮ್ಮ ಮನೆಯಲ್ಲಿ ನಮಗೆ ಬರಲಿಕ್ಕೆ ಬಿಡುವದಿಲ್ಲ ಅಂತಹದರಲ್ಲಿ ನೀನು ನಮ್ಮ ತಮ್ಮನ ಹೋಲ ಪಾಲಿಗೆ ಮಾಡುತ್ತಿ ಬ್ಯಾಡ ಸುಳಮಗನೆ ಎಂದು ಜಾತಿ ಎತ್ತಿ ಅವಾಚ್ಯವಾಗಿ ಬೈಯ್ಯುತ್ತಾ ನನ್ನ ಹಾಗು ನನ್ನ ತಮ್ಮನ ಮದ್ಯ ಹೋಲದ ಕೇಸುಗಳು ನಡೆದಿರುತ್ತವೆ ನೀನು ಎಕೆ ಪಾಲಿಗೆ ಮಾಡಿರುವೆ ? ಎಂದು ನನ್ನನು  ಕೇಳಿರುತ್ತಾರೆ ಆಗ ನಾನು ನಿಮ್ಮ ತಮ್ಮ ಹೋಲ ಪಾಲಿಗೆ ಹಚ್ಚಿದ್ದಾನೆ ನನಗೆ ಜಾತಿ ಎತ್ತಿ ಬೈಬೇಡ ಎಂದಾಗ ರಂಡಿ ಮಗಂದು ಬಾಳ ಅಗಿದೆ ಎಂದು ಹೇಳುತ್ತಾ ಮರೆಣ್ಣನು ನನ್ನನ್ನು ತೆಕ್ಕೆಯಲ್ಲಿ ಹಿಡಿದಿರುತ್ತಾನೆ. ಆಗ ಅವನ ಹೆಂಡತಿ ಆದ ಶಿವಲಿಂಗಮ್ಮ ಇವಳು ಬೇಡ ಸೂಳೆಮಗನದ್ದು ಬಹಾಳ ಆಗಿದೆ ಎಂದು ಕೈಯಿಂದ ನನ್ನ ಕಪಾಳಕ್ಕೆ ಹೋಡೆದಿರುತ್ತಾಳೆ ಆಗ ಅವನ ಮಕ್ಕಳಾದ ಮಲ್ಲಿಕಾರ್ಜುನ ಮತ್ತು ಸುರೇಶ ಇವರಿಬ್ಬರು ಕೂಡಿಕೊಂಡು ಬಂದು ಕಟ್ಟಿಗೆ ಯಿಂದ ನನ್ನ ಎರಡು ಕಾಲುಗಳಿಗೆ ಹೊಡೆದಿರುತ್ತಾರೆ ಕಾಲಿನಿಂದ ನನ್ನ ಎದೆಗೆ ಮತ್ತು ಹೋಟ್ಟೆಗೆ ಒದ್ದಿರುತ್ತಾರೆ ಆಗ ಎಲ್ಲರು ಕೂಡಿಕೊಂಡು ನನಗೆ ಹೋಡೆಯುತ್ತಿರುವಾಗ ನಾನು ಚೀರಾಡುವದನ್ನು ಕೇಳಿ ಪಕ್ಕದ ಹೋಲದಲ್ಲಿ ಕೆಲಸ ಮಾಡುತಿದ್ದ ನಾಗಪ್ಪ ತಂದೆ ಸಾಯಿಬಣ್ಣ ಲಾಡ್ಲಾಪುರ ದೇವಪ್ಪ ತಂದೆ ನಾಗಪ್ಪ ಡೋರೆಗೋಳ ಅಬ್ದುಲ ತಂದೆ ಮಶಾಕ ತೆಲಗಣಿ  ನಾಗಣ್ಣ ತಂದೆ ಶಿವಶರಣಪ್ಪ ಹದನೂರ, ಶರಣಪ್ಪ ತಂದೆ ಸಿದ್ದಪ್ಪ ಮಾಡಗಿ ಎಲ್ಲರು ಬಂದು ಜಗಳ ಬಿಡಿಸಿರುತ್ತಾರೆ. ನನ್ನ ಮೈ ಬಹಳ ನೋವಾಗಿದ್ದರಿಂದ  ಮನೆಯಲ್ಲಿ ವಿಚಾರ ಮಾಡಿಕೊಂಡು ಇಂದು ಜೇವರಗಿ ಸರಕಾರಿ ಆಸ್ಫತ್ರೆಗೆ ಬಂದು ಉಪಚಾರ ಪಡೆದುಕೊಂಡು ತಡವಾಗಿ ಠಾಣೆಗೆ ಬಂದು ಅರ್ಜಿ ಸಲ್ಲಿಸಿರುತ್ತೇನೆ, ಮಗನೆ ಬ್ಯಾಡ ಸಲ ಜೀವಂತ ಉಳಿದಿರುವಿ ಮುಂದೆ ನಿನಗೆ ಖಲಾಸ ಮಾಡದೇ ಬಿಡುವದಿಲ್ಲ ಅಂತಾ ನನಗೆ ಜಾತಿ ನಿಂದನೆ ಮತ್ತು ಅವಾಚ್ಯ ಶಬ್ದಗಳಿಂದ ಬೈದು ನನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಂಡು ನನಗೆ ನ್ಯಾಯ ವದಗಿಸಬೇಕೆಂದು ವಿನಂತಿ ಕೊಟ್ಟ ದೂರು ಅರ್ಜಿ ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ  185/2017 ಕಲಂ 323 324 504 506 ಸಂ 34 ಐಪಿಸಿ ಮತ್ತು ಕಲಂ 3 (1) ( r) ಎಸ್.ಸಿ./ಎಸ್.ಟಿ. ಎಕ್ಟ್ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ಬಗ್ಗೆ ವರದಿ. 

No comments: