ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ
06-08-2017
ಚಿಟಗುಪ್ಪಾ
ಪೊಲೀಸ ಠಾಣೆ ಗುನ್ನೆ ನಂ. 140/2017, ಕಲಂ. 447, 427, 504 ಜೊತೆ 34 ಐಪಿಸಿ :-
ಫಿರ್ಯಾದಿ ಗುಂಡಾರಡ್ಡಿ
ತಂದೆ ಭೀಮರಡ್ಡಿ ನಾಗೇನಕೇರಾ ಸಾ: ಉಡಬಾಳ ಗ್ರಾಮ ರವರಿಗೆ ಉಡಬಾಳ ಗ್ರಾಮದ ಶಿವರಾದಲ್ಲಿ ಹೊಲ
ಸರ್ವೆ ನಂ. 243 ನೇದರಲ್ಲಿ 6 ಎಕರೆ ಜಮೀನು ಇರುತ್ತದೆ, ಫಿರ್ಯಾದಿಯ ಹೊಲದ ಕಟ್ಟೆಗೆ ಹತ್ತಿ ತಮ್ಮೂರ
ಶ್ರೀಮಂತ ತಂದೆ ಶಂಕರಾವ ಮೀಶೆನ್ದಾರ ರವರ ಹೊಲ ಇರುತ್ತದೆ, ಇಬ್ಬರ ಹೊಲದ ಮದ್ಯ ಇರುವ ಕಟ್ಟೆಯ
ಮೇಲೆ ಹುಣಸೆ ಗಿಡ, ಮಾವಿನ ಗಿಡ, ಬಬಲಿ ಗಿಡ,
ಅತ್ತಿ
ಗಿಡ ಮತ್ತು ಸುಬಬುಲ್ ಗಿಡ ಇರುತ್ತವೆ, ಈ ಗಿಡಗಳು ಫಿರ್ಯಾದಿಯ ಹೊಲದ ಸರ್ವೆಯಲ್ಲಿ ಬರುತ್ತವೆ, ಆದರೆ
ಶ್ರೀಮಂತ ರವರು ಈ ಮೊದಲು ಸದರಿ ಗಿಡಗಳು ನಮ್ಮ ಹೊಲದಲ್ಲಿ ಬರುತ್ತವೆ ಅಂತ ಕಡಿಯಲು ಬಂದಾಗ ಫಿರ್ಯಾದಿಯು
ಅವರಿಗೆ ಸದರಿ ಗಿಡಗಳು ನನ್ನ ಸರ್ವೆದಲ್ಲಿ ಬರುತ್ತವೆ ನೀನು ಕಡಿಯಬೇಡ ಒಂದು ವೇಳೆ ನೀನು
ಕಡಿಯುವುದಾದರೆ ನಿನ್ನ ಹೊಲ ಸರ್ವೆ ಮಾಡಿಸಿಕೊಂಡು ನಿನ್ನ ಹೊಲದಲ್ಲಿ ಬಂದರೆ ಕಡಿದುಕೊಳ್ಳು ಅಂತ ಅಂದಿದ್ದಕ್ಕೆ
ಒಪ್ಪಿಕೊಂಡಿರುತ್ತಾನೆ, ಹೀಗಿರುವಾಗ ದಿನಾಂಕ 03-08-2017 ರಂದು ಫಿರ್ಯಾದಿಯು ತಮ್ಮ ಹೊಲಕ್ಕೆ
ಹೋದಾಗ ಆರೋಪಿತರಾದ 1) ಶ್ರೀಮಂತ ತಂದೆ ಶಂಕರಾವ ಮಿಶೆನ್ದಾರ, 2) ಕಿಶನರಾವ ತಂದೆ ಶಂಕರಾವ ಮಿಶೆನ್ದಾರ,
3) ನಾಗೇಂದ್ರ ತಂದೆ ಶಂಕರಾವ ಮಿಶೆನ್ದಾರ, 4) ದಯಾನಂದ ತಂದೆ ಶಂಕರಾವ ಮಿಶೆನ್ದಾರ ಮತ್ತು 5) ರವಿ
ತಂದೆ ಶಂಕರಾವ ಮಿಶೆನ್ದಾರ ಎಲ್ಲರೂ ಸಾ: ಉಡಬಾಳ ಇವರೆಲ್ಲರೂ ತಮ್ಮ ಹೊಲದಲ್ಲಿರುವ ಗೀಡಗಳನ್ನು ಕಡಿಸಿ
ಒಂದು ಟ್ರ್ಯಾಕ್ಟರ್ ಟ್ರ್ಯಾಲಿ ನಂ. ಕೆಎ-39/ಟಿ-1798/1799 ನೇದರಲ್ಲಿ ತುಂಬಿರುತ್ತಾರೆ,
ಫಿರ್ಯಾದಿಯು ಹೋಗಿ ನೊಡಿ ಫಿರ್ಯಾದಿಯ ಹೊಲದಲ್ಲಿದ್ದ ಶ್ರೀಮಂತ,
ಕಿಶನರಾವ,
ನಾಗೇಂದ್ರ, ದಯಾನಂದ ಮತ್ತು ರವಿ
ಮಿಶೆನ್ದಾರ ರವರಿಗೆ ನಮ್ಮ ಹೊಲದಲ್ಲಿದ್ದ ಗಿಡಗಳನ್ನು ಏಕೆ ಕಡಿದಿರುತ್ತಿರಿ ಅಂತ ಕೇಳಲು
ಅವರೆಲ್ಲರು ಫಿರ್ಯಾದಿಗೆ ಈ ಗಿಡಗಳು ನಮ್ಮ ಹೊಲದಲ್ಲಿ ಬರುತ್ತವೆ ಅದಕ್ಕೆ ನಾವು ಕಡಿದಿರುತ್ತೇವೆ
ನೀ ಯಾರು ಕೇಳುವವ ಅಂತ ಅವಾಚ್ಯವಾಗಿ ಬೈದಿರುತ್ತಾರೆ, ನಂತರ ಫಿರ್ಯಾದಿಯು ಇವರ ಜೋತೆ ತಕರಾರು
ಮಾಡಿಕೊಳ್ಳುವುದು ಬೇಡ ಅಂತ ಅಂದು ಅಲ್ಲಿಂದ ಮನೆಗೆ ಹೋಗಿದ್ದು, ಅವರು ಟ್ರ್ಯಾಕ್ಟರನಲ್ಲಿ ತುಂಬಿದ
ಕಟ್ಟಿಗೆಯನ್ನು ಅಲ್ಲಿಯೆ ಫಿರ್ಯಾದಿಯ ಹೊಲದಲ್ಲಿ ಖಾಲಿ ಮಾಡಿ ಹೋಗಿರುತ್ತಾರೆ, ಫಿರ್ಯಾದಿಯ ಹೊಲ
ಸರ್ವೆ ನಂ. 243 ನೇದರಲ್ಲಿರುವ 2 ಹುಣಸಿನ ಗಿಡ ಅ.ಕಿ 14,000/- ರೂ., 2 ಮಾವಿನ ಗಿಡ ಅ.ಕಿ 15,000/-
ರೂ., 1 ಬಬಲಿ ಗಡ ಅ.ಕಿ 4000/- ರೂ., 4 ಸುಬಬುಲ್ ಗಿಡಗಳು ಅ.ಕಿ 14,000/- ರೂ. ಮತ್ತು 1
ಅತ್ತಿ ಗಿಡ 3000/- ರೂ. ಹಿಗೆ ಒಟ್ಟು 50,000/- ರೂ. ಬೆಲೆ ಬಾಳುವ ಗಿಡಗಳನ್ನು ಸದರಿ ಆರೋಪಿತರು
ಫಿರ್ಯಾದಿಯ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಹೊಲದಲ್ಲಿ ಬೆಳೆದಿರುವ ಅಂದಾಜು 50,000/- ರೂ.
ಬೆಲೆ ಬಾಳುವ ಗಿಡಗಳು ಕಡಿದು ಹಾನಿ ಮಾಡಿರುತ್ತಾರೆ ಮತ್ತು ಕೇಳಲು ಹೋದರೆ ಅವಾಚ್ಯವಾಗಿ
ಬೈದಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ದಿನಾಂಕ 05-08-2017 ರಂದು
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೇಮಳಖೇಡಾ ಪೊಲೀಸ್ ಠಾಣೆ ಗುನ್ನೆ
ನಂ. 96/2017, ಕಲಂ. 379 ಐಪಿಸಿ :-
ಫಿರ್ಯಾದಿ ತುಕಾರಾಮ ತಂದೆ
ವೀರಪ್ಪಾ ಮೇತ್ರೆ ವಯ: 64 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಚಾಂಗಲೇರಾ
ರವರಿಗೆ ಅಲಿಪೂರ ಶಿವಾರದಲ್ಲಿ ಹಿರಿಯರಿಂದ ಬಂದ ಆಸ್ತಿ ಹೊಲ ಸರ್ವೆ ನಂ. 16 ರಲ್ಲಿ 7
ಎಕರೆ
4 ಗುಂಟೆ
ಜಮೀನು ಇದ್ದು, ಅದು ಫಿರ್ಯಾದಿಯ ಅಣ್ಣ ತಮ್ಮಂದಿರಾದ ನಾಗಪ್ಪಾ,
ಈಶ್ವರ
ಹಾಗೂ ಫಿರ್ಯಾದಿಯ ಹೆಸರಿನಲ್ಲಿ ಒಟ್ಟಿಗೆಯಾಗಿ ಇರುತ್ತದೆ, ಆ ಜಮೀನು ಮೂವರು ಪಾಲು ಮಾಡಿಕೊಂಡು ತಮ್ಮ
ಪಾಲಿಗೆ ಬಂದ ಜಿಮೀನು ತಾವು ಸಾಗುವಳಿ ಮಾಡಿಕೊಂಡು ಉಪಜೀವಿಸುತ್ತಾರೆ, ಈಗ ಎರಡು ವರ್ಷಗಳ ಹಿಂದೆ ಹೊಲದ
ಕಟ್ಟೆಗೆ ಇದ್ದ ಹೊಸ ಜಮೀನಿನಲ್ಲಿ ಒಂದು ಬೊರವೆಲ್ ಹೊಡೆಸಿ ಎರಡು ವರ್ಷಗಳಿಂದ ಶಾಮರಾವ ಎಂಬ ಲಮಾಣಿ
ಸಾ: ದೇವಗಿರಿ ತಾಂಡಾದವರಿಗೆ ಬೆಳೆಯಲ್ಲಿ ಪಾಲಿನಿಂದ ಹಚ್ಚಿದ್ದು ಅವನು ಆ ಜಮೀನು ಉಳುಮೆ
ಮಾಡುತ್ತಿದ್ದಾನೆ, ದಿನಾಂಕ 04, 05-08-2017
ರ
ಮಧ್ಯರಾತ್ರಿಯಲ್ಲಿ ಯಾರೋ ಕಳ್ಳರು ಹೊಲದಲ್ಲಿ ಮೋಟಾರಗೆ ಅಳವಡಿಸಿದ ಸ್ಟಾಟರ ಅದರ ಹೆಸರು ಮೋಟಾರ ಸ್ಟಾಟರ್
ಪ್ಯಾರಾಗನ್ ಪಿ.ಇ
-1 ನಂ.
330992 ಅ.ಕಿ
1200/- ರೂ. ಗಳು ನೇದನ್ನು ಕಳವು
ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment