ವರದಕ್ಷಣೆ ಕಿರುಕಳ ಪ್ರಕರಣ
:
ಜೇವರಗಿ ಠಾಣೆ : ಶ್ರೀಮತಿ
ಪಾತೀಮಾ ಗಂಡ ಅಬ್ದುಲ್ ಪಟೇಲ ಮದ್ದರಕಿ ಸಾಃ ಮಾರಡಗಿ (ಎ.ಎಸ್.) ತಾಃ ಜೇವರಗಿ ರವರನ್ನು
ಸುಮಾರು 5 ವರ್ಷಗಳ ಹಿಂದೆ ಮಾರಡಗಿ (ಎಸ್.ಎ) ಗ್ರಾಮದ ಅಬ್ದುಲ್ ಪಟೇಲ
ಇತನ್ನೊಂದಿಗೆ ನನ್ನ ಮದುವೆಯಾಗಿರುತ್ತದೆ. ಮದುವೆಯಾದ ನಂತರ ನಾನು ನನ್ನ ಗಂಡನ್ನೊಂದಿಗೆ ಗಂಡನ
ಮನೆಯಲ್ಲಿಯೇ ಇದ್ದು ಸಂಸಾರ ಮಾಡುತ್ತಾ ಬಂದಿರುತ್ತೆನೆ ನಮಗೆ ಲಾಲಬೀ ಎಂಬುವ ಒಂದು ಹೆಣ್ಣು ಮಗು
ಇರುತ್ತದೆ. ಮದುವೆಯ ಕಾಲಕ್ಕೆ ನನ್ನ ತವರು ಮನೆಯರು ನನ್ನ ಗಂಡನಿಗೆ ಬೆಲೆ ಬಾಳುವ 1) ಮಂಚ, ಗಾದಿ, 2) ಏರಕೂಲರ್,
3) ಪ್ರೀಜ 4) ಅಲಮಾರಿ ( ಟಿಜೋರಿ) 5) ಎರಡು ಹಾಂಡೆಗಳು 6) ಎರಡು ನಳ ಪಾತ್ರೆಗಳು, 7) ಎರಡು ತಾಮ್ರದ ಕೊಡಗಳು, ಹಾಗೂ ಮನೆಯ ಬಳಕೆ ಇತರೆ ಸಾಮಾನು
ಕೊಟ್ಟಿದ್ದು ಇರುತ್ತದೆ. ಮದುವೆಯಾದ ನಂತರ ಸುಮಾರು 3 ವರ್ಷಗಳವರೆಗೆ
ನನ್ನ ಗಂಡನು ನನಗೆ ಸರಿಯಾಗಿಯೇ ನೊಡಿಕೊಂಡಿರುತ್ತಾನೆ, ನಂತರ
ನನ್ನ ಗಂಡನು ಮದುವೆಯಲ್ಲಿ ನನಗೆ ವರದಕ್ಷೀಣೆ ಹಣ ಕೊಟ್ಟಿರುವುದಿಲ್ಲಾ ನೀನು ತವರು ಮನೆಯಿಂದ 5,00,000/-
( ಐದು ಲಕ್ಷ) ರೂಪಾಯಿ ವರದಕ್ಷೀಣೆ ಹಣ ತೆಗೆದುಕೊಂಡು ಬರುವಂತೆ ದಿನಾಲು
ಮನೆಯಲ್ಲಿ ಅವಾಚ್ಯವಾಗಿ ಬೈಯುವುದು ಹೊಡೆಯುವುದು ಮಾಡುತ್ತಾ ಬಂದಿರುತ್ತಾನೆ,
ಅಲ್ಲದೆ ನನ್ನ ಮಾವ ಅಮೀರಪಟೇಲ ಅತ್ತೆ ಜೈನಾಬೀ ಗಂಡ ಅಮೀರಪಟೇಲ ಮದ್ದರಕಿ,
ನನ್ನ ಗಂಡ ಅಕ್ಕ ಮಾಬಣ್ಣಿ ಗಂಡ ಜಾಫರ ಅಲಿ ಸಾಃ ಗಂವ್ಹಾರ, ಮತ್ತು ಅವಳ ಗಂಡ ಜಾಪರ್ ಅಲಿ ಇವರೆಲ್ಲರೂ ಕೂಡಿ ನನಗೆ ವರದಕ್ಷಣೆ ಹಣ ತೆಗೆದುಕೊಂಡು
ಬರುವಂತೆ ಅವಾಚ್ಯವಾಗಿ ಬೈಯುವುದು ಹೊಡೆಯುವುದು ಮಾಡುತ್ತಾ ಬಂದಿರುತ್ತಾರೆ, ಅವರು ಕೊಡುವ ತ್ರಾಸ್ ತಾಳಲಾರದೆ ನಾನು ನನ್ನ ತವರು ಮನೆಯವರಿಗೆ ಹೇಳಿದಾಗ
ನನ್ನ ತಂದೆ ಮತ್ತು ತಾಯಿ ಹಾಗೂ ನಮ್ಮೂರ ಪ್ರಮುಖರು ಕೂಡಿಕೊಂಡು ನನ್ನ ಗಂಡನ ಮನೆಗೆ ಬಂದು
ನನ್ನ ಗಂಡನಿಗೆ ಮತ್ತು ನನ್ನ ಗಂಡನ ಮನೆಯವರಿಗೆ ಬುದ್ದಿ ಮಾತು ಹೇಳಿ ನನ್ನ ಗಂಡನಿಗೆ 50 ಗ್ರಾಮ ಚಿನ್ನದ ಆಭರಣಗಳು, ಮತ್ತು 25,000/- (ಇಪ್ಪತ್ತೈದು ಸಾವಿರ ರೂಪಾಯಿಗಳು) ನನ್ನ ತಂದೆ ಕೊಟ್ಟಿರುತ್ತಾರೆ,
ಆದರೂ ಸಹ ನನ್ನ ಗಂಡ ಮತ್ತು ನನ್ನ ಗಂಡನ ಮನೆಯವರು ನನಗೆ ಬಹಳ ತ್ರಾಸ್
ಕೊಡುತ್ತಿದ್ದರು, ನಾನು ಮನೆಯ ಮರ್ಯಾದೆಗೆ ಅಂಜಿ ಮತ್ತು ನನ್ನ
ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಸುಮ್ಮನಿದ್ದೆನು, ಆದರೂ ಅವರು
ನನಗೆ ಹಣ ತವರುಂತೆ ಬಹಳ ತ್ರಾಸ್ ಕೊಡುತ್ತಿದ್ದಾಗ ನಾನು ಈಗ 6 ತಿಂಗಳ
ಹಿಂದೆ ನನ್ನ ಮಗಳೊಂದಿಗೆ ನನ್ನ ತವರು ಮನೆ ಯಲಗೊಡ ಗ್ರಾಮಕ್ಕೆ ಬಂದು ನನ್ನ ತಂದೆ ತಾಯಿಯವರ
ಹತ್ತಿರ ಇದ್ದೆನು. ನನ್ನ ಗಂಡನು ಮತ್ತು ಅವರ ಮನೆಯವರು ನನಗೆ ಕರೆಯಲು ಬರಲಾರದಕ್ಕೆ ನಾನು
ದಿ. 01-08-2017 ರಂದು ಮುಂಜಾನೆ ನನ್ನ ತಂದೆ ಹಾಗೂ ನನ್ನ
ಅಣ್ಣನಾದ ಮೈಹಿಬೂಬ ಪಟೇಲ ಮತ್ತು ನಮ್ಮೂರ ಮೈಹಿಬೂಬ ಪಟೇಲ ಪೊಲೀಸ್ ಬಿರಾದಾರ, ಭೀಮಣ್ಣ ನಾಯ್ಕೊಡಿ ಇವರೊಂದಿಗೆ ನನ್ನ ಗಂಡನ ಮನೆಗೆ ಮುಂಜಾನೆ 11.00 ಗಂಟೆಯ ಸುಮಾರಿಗೆ ಹೋದಾಗ, ಅಲ್ಲಿ ನನ್ನ ಗಂಡನಾದ 1)
ಅಬ್ದುಲ್ ಪಟೇಲ ತಂದೆ ಅಮೀರ ಪಟೇಲ ಮಾವ 2) ಅಮೀರಪಟೇಲ
ಅತ್ತೆಯಾದ 3) ಜೈನಾಬೀ ಗಂಡ ಅಮೀರಪಟೇಲ ಮದ್ದರಕಿ, ನನ್ನ ಗಂಡ ಅಕ್ಕ 4) ಮಾಬಣ್ಣಿ ಗಂಡ ಜಾಫರ ಅಲಿ ಸಾಃ ಗಂವ್ಹಾರ,
ಮತ್ತು ಅವಳ ಗಂಡ 5) ಜಾಪರ್ ಅಲಿ ಇವರೆಲ್ಲರೂ
ಕೂಡಿಕೊಂಡು ಬಂದು ನನಗೆ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಅವರಿಗೆ ನನಗೆ ಯಾಕೇ
ಬೈಯುವುತ್ತಿದ್ದಿರಿ ಎಂದು ಕೇಳಿದಕ್ಕೆ ನನ್ನ ಗಂಡನು ನನಗೆ ಏ ರಂಡಿ ಇಷ್ಟು ದಿವಸ ತವರು ಮನೆಯಲ್ಲಿ
ಇದ್ದು ಇವತ್ತು ಬಂದಿದಿ ನಿನಗೆ ಐದು ಲಕ್ಷ ವರದಕ್ಷಣಿ ಹಣ ತೆಗೆದುಕೊಂಡು ಬಾ ಎಂದು ಹೇಳಿದರೆ ತವರು
ಮನೆಗೆ ಹೋಗಿದ್ದಿ ಬೊಸಡಿ ಎಂದು ಕೈಯಿಂದ ಕಪಾಳದ ಮೇಲೆ ಹೊಡೆದಿರುತ್ತಾನೆ, ಅತ್ತೆಯಾದ ಜೈನಾಬೀ ಇವಳು ಈ ರಂಡಿಗೆ ಹೊಡೆದು ಸಾಯಿಸಿ ಬಿಡು ನಿನಗೆ ಬೇರೆ ಮದುವೆ
ಮಾಡಿಸುತ್ತೆನೆ ಎಂದು ಬೈಯ್ದು ಕೈಯಿಂದ ಬೇನ್ನು ಮೇಲೆ ಹೊಡೆದಿರುತ್ತಾಳೆ, ಮಾಬಣ್ಣಿ ಇವಳು ಈ ರಂಡಿ ವರದಕ್ಷಿಣೆ ಹಣ ತರುವವರೆಗೆ ಅವಳು ತವರು ಮನೆಯಲ್ಲಿಯೇ ಬಿಡು
ಎಂದು ನನ್ನ ಗಂಡನಿಗೆ ಹೇಳುತ್ತಾ ನನ್ನ ತಲೆಯ ಮೇಲಿನ ಕೂದಲು ಹಿಡಿದು ಜಗ್ಗಿರುತ್ತಾಳೆ, ಜಾಫರ ಅಲಿ ಇತನು ನನ್ನ ಮೈ ಮೇಲಿನ ಬಟ್ಟೆ ಹಿಡಿದು ಜಗ್ಗಿ ಕಾಲಿನಿಂದ ಸೊಂಟದ ಮೇಲೆ
ಒದ್ದಿರುತ್ತಾನೆ, ನಾನು ಚೀರಾಡುತ್ತಿದ್ದಾಗ ನನ್ನ ಮಾವ ಅಮೀರ
ಪಟೇಲ ಇತನು ಇವಳಿಗೆ ಮನೆಯಲ್ಲಿ ಹಾಕಿರಿ ಒಂದು ಗತಿ ಕಾಣಿಸೊಣ ಎಂದು ಹೇಳಿದಾಗ ನನ್ನ ತಂದೆ ಹಾಗೂ
ನನ್ನ ಅಣ್ಣ ಮತ್ತು ನನ್ನ ಜೊತೆ ಬಂದ ಮೈಹಿಬೂಬ ಪಟೇಲ ಪೊಲೀಸ್ ಬಿರಾದಾರ, ಭೀಮಣ್ಣ ನಾಯ್ಕೊಡಿ ಇವರು ಬಂದು ನನಗೆ ಹೊಡೆಯುವುದು ಬಿಡಿಸಿಕೊಂಡಿರುತ್ತಾರೆ, ಮತ್ತು ಅವರೆಲ್ಲರೂ ವರದಕ್ಷಣೆ ಹಣ ತೆಗೆದುಕೊಂಡು ಬರದಿದ್ದರೆ ನೀನ್ನ ಜೀವ ಸಹಿತ
ಬಿಡುವುದಿಲ್ಲಾ ಎಂದು ಜೀವದ ಬೇದರಿಕೆ ಹಾಕಿರುತ್ತಾರೆ, ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಸಕೀನಾ ಪಟೆಲ ಗಂಡ ದಾದಾ ಪಟೆಲ್ ಸಾ:ಮನೆ ನಂ. 11-1041/120ಎ ಎಮ್ಎಸ್ಕೆ ಮಿಲ್ ಮದಿನಾ ಕಾಲೋನಿ ಕಲಬುರಗಿ ಇವರ ಹತ್ತಿರ ಸುಮಾರು ದಿನಗಳ ಹಿಂದೆ ಹಣದ ಅಡಚಣೆ ಇದ್ದಾಗ ತಮಗೆ ಪರಿಚಯದವರಾದ 1) ಉಸ್ಮಾನ ಡಾಂಗೆ 2) ಸಾದೀಕ್ ಫರೀದ ಇವರು ತಲಾ 10,00,000/- ರೂಗಳು ಪಡೆದುಕೊಂಡಿದ್ದು, ಅದನ್ನು ಕೇಳಲು ಹೋದಾಗ ಅವರಿಬ್ಬರು ತಮಗೆ ಪರಿಚಯದವನಾದ ಚಿದಾನಂದ ತಂದೆ ದೌಲಪ್ಪಾ ಕೊಳ್ಳಿ ಇವರ ಹತ್ತಿರ ಕರೆದುಕೊಂಡು ಹೋಗಿ ನನಗೆ 15,42,000/-ರೂಗಳು ಕೊಡಿಸಿರುತ್ತಾರೆ. ನಂತರ ನನಗೆ, ನೀವು ನಿಮ್ಮ ಮನೆಯನ್ನು ಚಿದಾನಂದ ಇವರಿಗೆ ಮಾರ್ಟಗೆಜ ಮಾಡಿಸಿಕೊಡು ನಿಮ್ಮ 20,00,000/- ರೂಗಳು ನಮ್ಮ ಹತ್ತಿರ ಇರುತ್ತವೆಯಲ್ಲ ನಾವು ಬಿಡಿಸಿ ಕೊಡುತ್ತೆವೆ ಅಂತ ಹೇಳಿ ನನ್ನ ಮನೆ ನಂ. 11-1041/120ಎ ಎಮ್ಎಸ್ಕೆ ಮಿಲ್ ಮದಿನಾ ಕಾಲೋನಿ ಕಲಬುರಗಿ ನೇದ್ದನು ಮಾರ್ಟಗೇಜ ಮಾಡಿಕೊಟ್ಟಿದ್ದು ಇರುತ್ತದೆ. ಆದ್ದರಿಂದ ಕಲಬುರಗಿಯ ಸಬ್ ರಜೀಸ್ಟರರ ಕಛೆರಿಯಲ್ಲಿ ಮಾರ್ಟಗೇಜ ಮಾಡಿಕೊಟ್ಟಿರುತ್ತನೆ. ಉಸ್ಮಾನ ಡಾಂಗೆ ಇವರು ನನಗೆ ನಿಮಗೆ ಕೊಡಬೇಕಾದ ಹಣವನ್ನು ಚಿದಾನಂದ ಇವರಿಗೆ ಕೊಟ್ಟು ನಿಮ್ಮ ಮನೆಯ ಸೆಲ್ಡೀಡ್ನ್ನು ಕ್ಯಾನ್ಸಲ್ ಮಾಡಿಕೊಡುತ್ತೆವೆ ಅಂತ ಹೇಳಿರುತ್ತಾರೆ.ದಿನಾಂಕ:31/07/2017 ರಂದು ಸಾಯಂಕಾಲ 7:30 ಗಂಟೆಗೆ ನಾನು ಮನೆಯಲ್ಲಿದ್ದಾಗ ಚಿದಾನಂದ ಕೊಳ್ಳಿ , ಉಸ್ಮಾನ ಡಾಂಗೆ, ಸಾದೀಕ ಫರೀದ ಸುಂಬಡ, ಮಹಾರಾಜ ಜಮಾದಾರ, ಮಹ್ಮದ ಇಕ್ಬಾಲ್, ಮಾರುತಿ ತಂದೆ ಅಂಬಾಜಿ ಸಂಗಡ 15 ಜನರು ಕೂಡಿಕೊಂಡು ಬಂದು ನಮ್ಮ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿನ ಸಾಮಾನುಗಳನ್ನು ಬಿಸಾಕುತ್ತಿದ್ದಾಗ ನಾನು ಅವರಿಗೆ ಇದು ನೀವು ಮಾಡುವದು ಸರಿಯಲ್ಲ ಅಂತ ಹೇಳುತ್ತಿದಾಗ ಅವರೆಲ್ಲರೂ ನನಗೆ ಅವಾಚ್ಯವಾಗಿ ಬೈಯುತ್ತಾ ಅವರಲ್ಲಿ ಉಸ್ಮಾನ ಡಾಂಗೆ, ಚಿದಾನಂದ, ಮಹಾರಾಜ ಜಮಾದಾರ ಇವರು ನನ್ನ ಕೈಹಿಡಿದು ಕಪಾಳ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾರೆ. ನಂತರ ಅವರೆಲ್ಲರೂ ನನಗೆ ನೀನು ನಮಗೆ ಹಣ ಕೊಡದೆಯಿದ್ದರೆ ನಿನ್ನ ಮನೆಯನ್ನು ಕಬ್ಜಾ ಮಾಡಿತ್ತೆವೆ. ಇಲ್ಲವಾದರೆ ಇತ್ತಿಚೆಗೆ ಆದ ಮುದಾಸ್ಸಿರ ಇತನ ಕೊಲೆ ಆದ ಹಾಗೆ ನಿನಗೆ ಬಿಡುವದಿಲ್ಲ ಅಂತ ಜೀವದ ಭಯ ಹಾಕಿರುತ್ತಾರೆ. ಇಲ್ಲ ನಮ್ಮ ಹಣ ಕೊಡು ಅಂತ ಹೇಳಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :.
ಅಫಜಲಪೂರ ಠಾಣೆ : ದಿನಾಂಕ 28-07-2017 ರಂದು ರಾತ್ರಿ 12:30 ಗಂಟೆಗೆ ನಾನು ಶೌಚಕ್ಕೆಹೋದಾಗ ಮೋಹನ ತಂದೆ ನಾಗು ಜಾಧವ ಹಾಗೂ ವಿಜಯತಂದೆ ನಾಮದೇವ ರಾಠೋಡ ಇಬ್ಬರು ಕರಜಗಿ ತಾಂಡಾ ಇದ್ದು, ನನ್ನನ್ನು ಅನಾಮತ್ತಾಗಿ ಎತ್ತಿ ಟಾಟಾ ಇಂಡಿಕಾ ವಾಹನದಲ್ಲಿ ತೂರಿ ಹಾಕಿ ಅಫರಿಚಿತ ಸ್ಥಳಗಳಿಗೆ ಕರೆದುಕೊಂಡು ಹೋಗಿ, ನನಗೆ ಕೈ ಹಿಡಿದು ಏಳೆದು ನಮ್ಮ ಜೋತೆ ಸಹಕರಿಸು ಇಲ್ಲದಿದ್ದರೆ ನಿನಗೆ ಜೀವಸಹಿತ ಬಿಡುವುದಿಲ್ಲ ಎಂದು ಹಾಗೂ ಈ ವಿಷುಯ ಎಲ್ಲಿಯೂ ಯಾರಿಗೂ ಹೇಳಬೇಡ ಒಂದು ವೇಳೆ ಹೇಳೀದರೆ ನಿನ್ನನ್ನು ಹೊಡೆದು ಎಸೆದು ಹೋಗುವುದಾಗಿ ಬೇದರಿಸಿದ್ದಾರೆ. ನೀನು ನಿನ್ನ ತಂದೆ ತಾಯಿಗೆ ತಿಳಿಸಬೇಡ, ತಿಳಿಸಿದರೆ ನಿನ್ನ ಸ್ಥೀತಿ ಕೇಡುತ್ತದೆ ಎಂದು ಹಾಗೂ ಪೊಲೀಸರೇದರೂ ಕೂಡಾ ಏನು ಹೇಳಬೇಡ ಎಂದು. ಒಂದು ವೇಳೆ ಹೇಳೀದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಎಂದು ಬೇದರಿಸಿರುತ್ತಾರೆ. ಅಂತಾ ಶ್ರೀಮತಿ ಗೀತಾ ಗಂಡ ಸುನೀಲ ರಾಠೋಡ ಸಾ|| ಕರಜಗಿ ತಾಂಡಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment