Police Bhavan Kalaburagi

Police Bhavan Kalaburagi

Saturday, August 5, 2017

Yadgir District Reported Crimes


                                   Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 155/2017 ಕಲಂ 78(3) ಕೆ.ಪಿ ಎಕ್ಟ್ 1963;- ದಿನಾಂಕ 04/08/2017 ರಂದು 11 ಎಎಂಕ್ಕೆ ಮಾನ್ಯ ನ್ಯಾಯಾಲಯದಿಂದ ಶ್ರೀ ಗಂಗಾಧರ ಪಿಸಿ-398 ರವರು ಪ್ರಕರಣ ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಬಂದಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ನಿನ್ನೆ ದಿನಾಂಕ:03/08/2017 ರಂದು 4:00 ಪಿಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿಯ ಬಂಡಿಗೇರಾ ಓಣಿಯಲ್ಲಿ  ಚಂದ್ರಕಾಂತ ಮಡಿವಾಳ ಈತನು ತಮ್ಮ ಮನೆಯ ಮುಂದಿನ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಅಂಕಿಗಳನ್ನು ಬರೆದುಕೊಳ್ಳುತ್ತಿರುವುದಾಗಿ  ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ರವಿ ರಾಠೋಡ ಪಿ.ಸಿ. 269, ಕರುಣೇಶ ಪಿಸಿ-406, ರವರು ಹಾಗೂ ಇಬ್ಬರೂ ಪಂಚರಾದ 1) ಗೋಮರಾಮ ತಂ. ಗಣೇಶಜಿ ಗಾಂಶಿ 2) ಶಿವಲಾಲ ತಂ. ಗೌರವ ಬಂಜಾಡ ಸಾಃ ಯಾದಗಿರಿ ರವರನ್ನು ಬರಮಾಡಿಕೊಂಡು ಸದರಿ ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ಮಟ್ಕಾ ದಾಳಿ ಮಾಡುವ ಬಗ್ಗೆ ತಿಳಿಸಿ, ಜಪ್ತಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡು ಸರಕಾರಿ ಜೀಪ ನಂ. ಕೆಎ 33 ಜಿ 0075 ನೇದ್ದರಲ್ಲಿ 4-30 ಪಿಎಂಕ್ಕೆ ಠಾಣೆಯಿಂದ ಹೊರಟು ಬಂಡಿಗೇರಾದ ಪಿರಗಾಸಾಬ ಗುಡಿ ಹತ್ತಿರ ಮರೆಯಲ್ಲಿ ಜೀಪನ್ನು ನಿಲ್ಲಿಸಿ, ಅಲ್ಲಿಂದ ನಡೆದುಕೊಂಡು ಹೋಗಿ ನಿಂತು ನೋಡಲಾಗಿ ಒಬ್ಬನು ಮನೆಯ ಮುಂದೆ ನಿಂತು ಹೋಗಿ ಬರುವ ಸಾರ್ವಜನಿಕರಿಗೆ 1/- ರೂ. ಗೆ 80/- ರೂ. ಗೆಲ್ಲಿರಿ ಮಟ್ಕಾ ನಂಬರಗಳನ್ನು ಬರೆಸಿರಿ ಅಂತಾ ಕರೆದು ಅವರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು 5 ಪಿ.ಎಮ್ ಕ್ಕೆ ಅವನ ಮೇಲೆ ದಾಳಿ ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತಮ್ಮ ಹೆಸರು ಚಂದ್ರಕಾಂತ ತಂ. ಆಶಪ್ಪ ಮಡಿವಾಳ ವಃ 49 ಜಾಃ ಮಡಿವಾಳ ಉಃ ಮಟ್ಕಾ ಬರೆದುಕೊಳ್ಳುವುದು ಸಾಃ ಬಂಡಿಗೇರಾ ಯಾದಗಿರಿ ಎಂದು ಹೇಳಿದನು. ಸದರಿಯವನ ಅಂಗಶೋಧನೆ ಮಾಡಲಾಗಿ 1) ನಗದು ಹಣ 920=00 ರೂ. ನಗದು ಹಣ, 2) ಒಂದು ಕಾರ್ಬನ ಕಂಪನಿಯ ಮೊಬೈಲ್ ಅ:ಕಿ: 500=00, 3) ಮಟ್ಕಾ ನಂಬರಗಳನ್ನು ಬರೆದ ಎರಡು ಚೀಟಿಗಳು ಅಂ.ಕಿ.00-00 ಮತ್ತು 4) ಒಂದು ಬಾಲ್ ಪೆನ್ ಅಂ.ಕಿ.00-00 ಇವುಗಳು ದೊರೆತ್ತಿದ್ದು, ಸದರಿಯವರಿಗೆ ಮಟ್ಕಾ ನಂಬರಗಳನ್ನು ಬರೆದುಕೊಂಡು ಯಾರಿಗೆ ಹೋಗಿ ಕೊಡುತ್ತಿರಿ ಎಂದು ಕೇಳಿದಾಗ ಸದರಿಯವನು ತಿಳಿಸಿದ್ದೆನೆಂದರೆ ಕಿಟ್ಟಿ ಬಗಲಿ ಹಿರೇ ಅಗಸಿ ಯಾದಗಿರಿ ಎಂಬುವವನು ನನಗೆ ಮಟಕಾ ಬರೆದುಕೊಳ್ಳಲು ದುಡ್ಡುಕೊಡುತ್ತಿದ್ದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುವಂತೆ ತಿಳಿಸಿದ್ದರಿಂದ ನಾನು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದು ಕಿಟ್ಟಿ ಬಗಲಿ ಈತನು ಮಟಕಾ ಪಟ್ಟಿ ಮತ್ತು ಹಣವನ್ನು ಸಾಯಂಕಾಲ ಬಂದು ನನ್ನಿಂದ ತೆಗೆದುಕೊಂಡು ಹೋಗುತ್ತಾನೆ ಎಂದು ತಿಳಿಸಿದನು. ಇಬ್ಬರು ಮಟಕಾ ಅಂಕಿ ಸಂಖ್ಯೆ ಜೂಜಾಟದಲ್ಲಿ ತೊಡಗಿದ ಬಗ್ಗೆ ಖಾತ್ರಿಯಾಯಿತು. ಸದರಿ ಜಪ್ತಿ ಪಂಚನಾಮೆಯನ್ನು 5 ಪಿಎಂ ದಿಂದ 06-00 ಪಿಎಂದವರೆಗೆ ಬರೆದು ಮುಗಿಸಿದ್ದು ನಂತರ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ 6-30 ಪಿಎಂಕ್ಕೆ ಬಂದು ಸದರಿ ಜಪ್ತಿ ಪಂಚನಾಮೆಯನ್ನು ಈ ಜ್ಞಾಪನದೊಂದಿಗೆ ಹಾಜರಪಡಿಸುತ್ತಿದ್ದು, ಮಾನ್ಯ ನ್ಯಾಯಾಲಯದ ಪರವಾನಿಗೆ ಮೇಲಿಂದ ಠಾಣೆ ಗುನ್ನೆ ನಂ.155/2017 ಕಲಂ.78(3) ಕೆ.ಪಿ.ಆಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 82/2017 ಕಲಂ 406, 420 ಐಪಿಸಿ;-  I under signed Smt Vasanti. V. Karni branch manager SBI B’gudi request you that our branch is having SB a/c of the name of Mr. Syed Younus S/o Syed Khasim. The a/c holder has presented two cheques No. 1) 142824 Rs. 3,30,000 and 2) 142821 Rs. 5,00,000 pertaining to ICICI bank Gulbarga, for credit to his SB a/c. Branch has sent these cheques to Super Market Branch Gulbarga based on advice of Super Market Branch our branch credited the proceeds to payees SB a/c. The payee has withdrawn the amount of total Rs. 8,30,000 on date:12/07/2016 at 12.30 Pm.
            Later on these cheques were returned to branch unpaid, with insufficient funds by post. Branch has repeatedly called on the customer to pay back the amount. But payee is not lifting the phone and absconding. So that the payee has defrauded by not depositing the money. So we request your kind selves to book an FIR like criminal misappropriation and cheating of funds and help the bank in tracing the customer and refunding the money.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 148/2017 ಕಲಂ: ಕಲಂ: 447, 323,324,504,506 ಐಪಿಸಿ;-ದಿನಾಂಕ 04/08/2017 ರಂದು 05-30 ಪಿ.ಎಂಕ್ಕೆ ಫಿಯರ್ಾದಿ ಅಜರ್ಿದಾರರಾದ ಲಕ್ಷ್ಮೀಬಾಯಿ ಗಂಡ ಮಲ್ಲಣ್ಣ ದಂಡಗೋಳ ವ|| 40 ಜಾ|| ಲಿಂಗಾಯತ ರಡ್ಡಿ ಉ|| ಕೂಲಿ ಸಾ|| ನಗನೂರ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಅಜರ್ಿ ಸಾರಾಂಶವೇನಂದರೆ ಇಂದು ದಿನಾಂಕ: 04/08/2017 ರಂದು 3 ಪಿಎಮ್ ಸುಮಾರಿಗೆ ನಾನು ನಮ್ಮ ಹೊಲ ಸವರ್ೇ ನಂಬರ 383 ನೇದ್ದರಲ್ಲಿ ಇದ್ದಾಗ ನನ್ನ ಮೈದುನನ ಮಗನಾದ ಗುರುನಾಥರಡ್ಡಿ ತಂದೆ ಶಾಂತರಡ್ಡಿ ದಂಡಗೋಳ ಈತನು ನಮ್ಮ ಹೊಲದಲ್ಲಿ ಬಂದು ಏನಲೇ ರಂಡಿ ಲಕ್ಷ್ಮೀ ನಮ್ಮ ಹೊಲದಲ್ಲಿ ಯ್ಯಾಕೆ ಬಂದಿದಿ ಅಂತ ಅಂದಾಗ ಸದರಿ ಹೊಲ ನನ್ನ ಪಾಲಿಗೆ ಬಂದಿದ್ದು ಮತ್ತು ನನ್ನ ಹೆಸರಿಲೆ ಇದೆ ಅಂದಾಗ ಈ ಸೂಳೆಯದು ಸೊಕ್ಕು ಬಹಾಳ ಆಗಿದೆ ಅಂತ ಅಂದವನೇ ತನ್ನ ಕೈಯಲ್ಲಿದ್ದ ಬಿದಿರಿನ ಬಡಿಗೆಯಿಂದ ನನ್ನ ತೆಲೆಗೆ ಹೊಡೆಯಲು ಬಂದಾಗ ನಾನು ನನ್ನ ಎಡಗೈ ಅಡ್ಡ ತಂದಾಗ ಸದರಿಯವನು ನನ್ನ ಎಡಗೈ ಹಸ್ತಕ್ಕೆ ಬಡಿಗೆಯಿಂದ ಹೊಡೆದು ರಕ್ತಗಾಯ ಪಡಿಸಿದನು ಆಗ ನಾನು ಸತ್ತೆನೆಪ್ಪೋ ಅಂತ ನೆಲಕ್ಕೆ ಬಿದ್ದಾಗ ಅದೇ ಬಡಿಗೆಯಿಂದ ನನ್ನ ಎಡಗಾಲ ಚಪ್ಪಿಗೆ ಹೊಡೆದು ಗುಪ್ತಗಾಯ ಪಡಿಸುತ್ತಿದ್ದಾಗ ನಾನು ಕೆಳಗೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಪಕ್ಕದ ಹೊಲದಲ್ಲಿದ್ದ ದೇವಪ್ಪ ಪೂಜಾರಿ ಈತನು ಬಂದು ಸದರಿಯವನು ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡನು. ನಂತರ ಸದರಿಯವನು ನನಗೆ ಹೊಡೆಯುವದನ್ನು ಬಿಟ್ಟು ಸೂಳೆ ಇವತ್ತು ಇಷ್ಟಕ್ಕೆ ಬಿಟ್ಟಿದ್ದೇನೆ ಮುಂದೆ ನಿನ್ನ ಜೀವ ನನ್ನ ಕೈಯಲ್ಲಿದೆ ಅಂತ ಜೀವದ ಬೆದರಿಕೆ ಹಾಕಿ ಹೋಗಿದ್ದು.  ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 148/2017 ಕಲಂ: 447,323,324,504,506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 129-2017 ಕಲಂ 87  ಕೆ.ಪಿ ಯಾಕ್ಟ;- ದಿನಾಂಕ:04/08/2017 ರಂದು 18.20 ಗಂಟೆಯ ಸುಮಾರಿಗೆ ಆರೋಪಿತರು  ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ನಶೀಭದ ಇಸ್ಪೀಟ ಜೂಜಾಟವನ್ನು ಆಡುತ್ತಿದ್ದಾಗ ಪಿಯರ್ಾದಿ ಮತ್ತು ಸಿಬ್ಬಂದಿಯವರಾದ ಎ.ಎಸ್.ಐ (ೆಎಂ) ಹೆಚ್.ಸಿ-130, 58, 133 ಪಿ.ಸಿ-292, 152, 290, 233  ರವರೊಂದಿಗೆ ದಾಳಿ ಮಾಡಿದ್ದು ಐದು ಸಿಕ್ಕಿದ್ದು ಆರೋಪಿತರಿಂದಾ ಮತ್ತು ಖಣದಿಂದಾ ಒಟ್ಟು  4300=00 ರೂ ನಗದು ಹಣ, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 242/2017 ಕಲಂ  143.147.323.324.354.504.506 ಸಂಗಡ 149 ಐಪಿಸಿ;- ದಿನಾಂಕ : 04/08/2017 ರಂದು 1-30 ಪಿ,ಎಂ ಕ್ಕೆ ಠಾಣೆಗೆ ಪಿಯರ್ಾದಿದಾರರಾದ ಶ್ರೀಮತಿ ಲಕ್ಷ್ಮೀ ಗಂಡ ನಿಂಗಪ್ಪ ವಯ|| 33 ಉ|| ಕೂಲಿ ಜಾ|| ಪ,ಜಾತಿ ಸಾ|| ತಳವಾರಗೇರಾ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಸಲ್ಲಿಸಿದ ಸಾರಾಂಶವೆನೇಂದರೆ. ನಾನು ನನ್ನ ಗಂಡ ಮತ್ತು ಮಕ್ಕಳೊಂದಿಗೆ ಕೂಲಿ ನಾಲಿ ಮಾಡಿಕೊಂಡು ಉಪಜೀವಿಸುತ್ತಿದ್ದ್ದು ಇರುತ್ತದೆ. ಹೀಗಿರುವಾಗ ದಿನಾಂಕ 29/07/2017 ರಂದು ಬೆಳಗ್ಗೆ 10.30 ಗಂಟೆಗೆ ತಳವಾರಗೇರಾ ಗ್ರಾಮದ ನಮ್ಮ ಜಾಗದ ಹತ್ತಿರ ಬಂದು 2/24 ಪ್ಲಾಟಿನಲ್ಲಿ ಮನೆ ಕಟ್ಟುವ ಸ್ಥಳಕ್ಕೆ ಈ ಕೆಳಗಿನವರಾದ 1) ತಿಪ್ಪಮ್ಮ ಗಂಡ ಹಣಮಂತ ದೊಡ್ಡಮನಿ 2) ಶರಣಪ್ಪ ತಂದೆ ಹಣಮಂತ 3) ಬಸಪ್ಪ ತಂದೆ ಹಣಮಂತ 4) ವೀರಭದ್ರಪ್ಪ ತಂದೆ ರಾಮಚಂದ್ರ 5) ಸುಭಾಶ್ಚಂದ್ರ ತಂದೆ ನಾಗಪ್ಪ 6) ನಂದಮ್ಮ ಗಂಡ ಭೀಮಪ್ಪ 7) ಹಣಮಂತ ತಂದೆ ಹಣಮಂತ ಇವರುಗಳು ಬಂದವರೆ ನಮ್ಮ ತಕರಾರು ಇದೆ ಜಾಗಕ್ಕೆ ಏನು ಮಾಡುತ್ತಿದ್ದಿರಿ ಎಂದು ನಮ್ಮ ಮನಗೆ ನುಗ್ಗಿದರು ಯಾಕ ಸಲ್ಲಿಸಿದ್ದಿರಿ ನಮ್ಮ ಜಾಗಕ್ಕೆ ಎಂದೆ ಯಾಕ ಇಲ್ಲಿ ಮನೆ ಕಟ್ಟುತ್ತಿಲೇ ಸೂಳಿ ಎಂದು ತಿಪ್ಪಮ್ಮ ಬಂದು ನನ್ನ ಬಲ ಕಪಾಳಕ್ಕೆ ಹೊಡೆದಳು ಯಾಕೆ ಹೋಡೆಯುತ್ತಿದ್ದಿ ಅನ್ನುವಷ್ಟರಲ್ಲಿ ಶರಣಪ್ಪನು ನನ್ನ ಕೂದಲು ಹಿಡಿದು ಎಳೆಯುತ್ತಾ ಅಂಗಳಕ್ಕೆ ತಂದು ನೆಲಕ್ಕೆ ದಬ್ಬಿದ ದಬ್ಬಿದ ರಬಸದಲ್ಲಿ ಅಯ್ಯಯ್ಯಪ್ಪೋ ಎಂದು ನೆಲಕ್ಕೆ ಬಿದ್ದೆ ಬಿಡಬ್ಯಾಡಿರಿ ಬೋಸಡಿಗೆ ಸೀರೆ ಬಿಚ್ಚಿ ಹೋಡೆಯಿರಿ ಎಂದವನೆ ಬಸಪ್ಪ ಹಾಗೂ ಹಣಮಂತ ಸೀರೆ ಹಿಡಿದು ಜಗ್ಗಾಡಿ ನೆಲಕ್ಕೆ ಕೆಡವಿ ನಮ್ಮ ಮಕ್ಕಳೆದುರೆ ಕಾಲಿನಿಂದ ಒದೆಯುತ್ತ ಹೊಡೆ ಬಡೆ ಮಾಡುತ್ತಿದ್ದರೆ ವೀರಭದ್ರ , ಸುಬಾಶ್ಚಂದ್ರ ದಬ್ಬಾಡುತ್ತಿದ್ದರು ನಾನು ಬಿಡರಪ್ಪೋ ನಾನೇನು ತಪ್ಪು ಮಾಡಿದ್ದಿನಿ ಎಂದರು ಕೇಳದೆ ನಿನ್ನ ಸೋಕ್ಕು ಬಹಳ ಅದ ಸೂಳಿ ಅನ್ನುತ್ತ ಅವಾಚ್ಯವಾಗಿ ಬೈಯುತ್ತ ಮೇಲ್ಕಾಣಿಸಿದವರು ಓದೆಯುತ್ತ ಹೋಡೆ ಬಡೆ ಮಾಡುತ್ತಿದ್ದರು ನಾನು ಜೋರಾಗಿ ಕಿರಿಚಾಡುವದನ್ನು ಕೇಳಿ ಪಕ್ಕದ ಮನೆಯವರಾದ 1) ಮರೆಪ್ಪ ತಂದೆ ಅಮರಪ್ಪ 2) ನಾಗಮ್ಮ ಗಂಡ ಬಸಪ್ಪ ಇವರು ಹೆಣ್ಣು ಮಗಳಿಗೆ ಎನು ಹೋಡೆಯುತ್ತಿರಿ ಬಿಡರಿ ಎಂದು ಬಿಡಿಸಿದರು ಆದರು ಈ ಸೂಳಿನ ಉಳಿಸುವದಿಲ್ಲ ಎಂದು ಬೈಯ್ದಾಡುತ್ತ ಹೊದರು. ಇಲ್ಲದಿದ್ದರೆ ನನ್ನನ್ನು ಜೀವ ಸಹಿತ ಉಳಿಸುತ್ತಿರಲಿಲ್ಲ. ಈ ಬಗ್ಗೆ ನಾವು ನಮ್ಮ ಮನೆಯಲ್ಲಿ ವಿಚಾರ ಮಾಡಿ ಇಂದು ದಿನಾಂಕ 04/08/2017 ರಂದು ಠಾಣೆಗೆ ತಡವಾಗಿ ಬಂದು ಪಿಯರ್ಾದಿ ಸಲ್ಲಿಸುತ್ತಿದ್ದೆವೆ.   ಕಾರಣ ದಯಾಪರರಾದ ತಾವುಗಳು ನನ್ನ ಕೂದಲಿಡಿದೆಳೆದಾಡಿ ಸೀರೆ ಜಗ್ಗಾಡಿ ನೆಲಕ್ಕೆ ಹಾಕಿ ಅವಾಚ್ಯವಾಗಿ ಬೈಯುತ್ತ ಹೋಡೆ ಬಡೆ ಮಾಡಿದ ಮೇಲ್ಕಾಣಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಪಿಯರ್ಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 242/2017 ಕಲಂ ಃ 143.147.323.324.354.504.506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೋಂಡು ತನಿಖೆ ಕೈ ಕೊಂಡೆನು.
 

No comments: