ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಯಶ್ವಂತರಾಯ
ತಂದೆ ಹಣಮಂತರಾಯ ಬಿಸಗೊಂಡ ಸಾ : ಪಟ್ಟಣ ರವರು ದಿನಾಂಕ:-06-08-2017 ರಂದು ನಮ್ಮ ಹುಣಸಿಗಿಡದ ಹೊಲದಲ್ಲಿ ತೊಗರಿ
ಬೆಳೆಯಲ್ಲಿ ಸದಿ ಹೊಡೆಯುವ ಸಲುವಾಗಿ ಕೂಲಿ ಆಳುಗಳಿಗೆ ಹಚ್ಚಿದ್ದು, ಅದಕ್ಕೆ ನಮ್ಮ ಹೊಲಕ್ಕೆ ಹೋಗಿ
ನೋಡಿಕೊಂಡು ಬರುವ ಸಲುವಾಗಿ ಸಾಯಾಂಕಾಲ 04.30 ಗಂಟೆ ಸುಮಾರಿಗೆ ನಾನು ಮತ್ತು ಭೀಮಶ್ಯಾ ಇಬ್ಬರು ನಮ್ಮ ಗ್ರಾಮದಿಂದ ನನ್ನ
ಟಿವಿಎಸ್ ಎಕ್ಷೆಲ್ ಮೋಟರ್ ಸೈಕಲ್
ನಂ.ಕೆಎ-32-ಇಎಪ್-5572 ನೇದ್ದರ ಮೇಲೆ ಇಬ್ಬರೂ
ಕೂಡಿ ನಮ್ಮ ಹೊಲಕ್ಕೆ ಹೊರಟೇವು . ಸದರಿ ಮೋಟರ್ ಸೈಕಲ್ ನಾನು ಚಲಾಯಿಸುತ್ತಿದ್ದೇನು. ಹಿಂದುಗಡೆ
ಸ್ನೇಹಿತ ಭೀಮಶ್ಯಾ ರಾಯಗೊಂಡ ಇತನು ಕುಳಿತುಕೊಂಡಿದ್ದನು. ನಾವಿಬ್ಬರೂ ಕೂಡಿಕೊಂಡು ಸಾಯಾಂಕಾಲ್
05.30 ಗಂಟೆ ಸುಮಾರಿಗೆ ಸುಂಟನೂರ ಕ್ರಾಸ್ ಇನ್ನು ಮುಂದೆ ಇರುವಾಗಲೇ ನಮ್ಮ ಗ್ರಾಮದ ಶರಣಪ್ಪ
ಬಸಗೊಂಡರ ಸೈಕಲ್ ಮೇಲೆ ಹೊರಟಾಗ, ಅದೇ ವೇಳೇಗೆ ಎದುರುಗಡೆಯಿಂದ ಅಂದರೇ, ಆಳಂದ ರೋಡ ಕಡೆಯಿಂದ ಒಬ್ಬ
ಲಾರಿ ಕೆಎ 32 ಎ 5085 ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಅಡ್ಡಾ-ದಿಡ್ಡಿಯಾಗಿ ಅತಿವೇಗ
ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಾವಿಬ್ಬರೂ ಕುಳಿತುಕೊಂಡು ಬರುತ್ತಿದ್ದ ಮೋಟರ್
ಸೈಕಲ್ ಎದುರಿನಿಂದ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿ ತನ್ನ ಲಾರಿಯನ್ನು ಸ್ವಲ್ಪ ಮುಂದೆ
ಒಯ್ದು ನಿಲ್ಲಿಸಿದನು.ಆಗ ಈ ವಿಷಯವನ್ನು ನೋಡಿ ಅಲ್ಲಿಯೇ ಹೊಲದಲ್ಲಿ ಕೆಲಸ್ ಮಾಡುತ್ತಿದ್ದ ನಮ್ಮ
ಗ್ರಾಮದ ಭೀಮಾಶಂಕರ ಕಲಶಟ್ಟಿ ಹಾಗೂ ನಮ್ಮ ಹಿಂದೆ ಮೋಟರ್ ಸೈಕಲ್ ಮೇಲೆ ಬುರತ್ತಿದ್ದ ನಮ್ಮ ಗ್ರಾಮದ
ಮಲ್ಲೇಶಪ್ಪ ಬಸಗೊಂಡ, ಭೀಮಣ್ಣ ದೇವಗೊಂಡ ಇವರೆಲ್ಲರೂ ಬಂದು ನನಗೆ ಎಬ್ಬಿಸಿದರು. ಆಗ ನಾನು ನೋಡಿಕೊಳ್ಳಲು ನನಗೆ ಎಡ ಎದೆಗೆ ಎಡ ಸೊಂಟಕ್ಕೆ
ಗುಪ್ತಗಾಯಗಳಾಗಿದ್ದವು. ನನ್ನ ಸ್ನೇಹಿತ ಭೀಮಶ್ಯಾ ರಾಯಗೊಂಡ ಇತನಿಗೆ ನೋಡಲಾಗಿ, ತಲೆಯ ಹಿಂದುಗಡೆ,
ಎಡಗಾಲು ಮುಂಗಾಲಿಗೆ, ಎಡ ಹೆಬ್ಬರಳಿಗೆ ಭಾರಿ ರಕ್ತಗಾಯವಾಗಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ
ಮೃತಪಟ್ಟಿದ್ದನು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ
ಮಾಣಿಕೇಶ್ವರಿ ಗಂಡ ಮಹೇಶ ನಾವದಗಿ ಸಾಃ ಸಾಯಿರಾಮ ನಗರ ಜೇವರ್ಗಿ ರೋಡ ಕಲಬುರಗಿ ಇವರು ದಿನಾಂಕ
12-02-2014 ರಂದು ಮಹೇಶ ತಂದೆ ಶಿವರಾಯ ನಾವದಗಿ ಇವರೊಂದಿಗೆ ಸಂಪ್ರದಾಯದಂತೆ ಮದುವೆ ಆಗಿದ್ದು
ಮದುವೆ ಕಾಲಕ್ಕೆ ವರದಕ್ಷಿಣೆಯಾಗಿ 5 ಲಕ್ಷ ಹಣ, 10
ತೋಲೆ ಬಂಗಾರ , ಮನೆ ಬಳಕೆ ಸಾಮಾನುಗಳ ಸಲುವಾಗಿ 1 ಲಕ್ಷ 80 ಸಾವಿರ
ರೂಪಾಯಿ ಹಣವನ್ನು ಕೊಟ್ಟಿದ್ದೆವೆ ಹೀಗಿದ್ದು ಮದುವೆಯಾದ 2 ತಿಂಗಳ ನಂತರ ನನ್ನ ಗಂಡ ಮಹೇಶ ,ಅತ್ತೆ
ಮಹಾದೇವಿ , ಮಾವ ಶಿವರಾಯ ,
ನಾದನಿಯರಾದ ಸವಿತಾ ಮತ್ತು ಮಾಣಿಕೇಶ್ವರಿ @
ಮಧು ಇವರೆಲ್ಲರೂ ಸೇರಿ ನನಗೆ ವಿನಾ ಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯುವುದು ಮಾಡುತ್ತಾ
ಬಂದಿದ್ದು ಹಾಗೂ ಎಲ್ಲರೂ ಸೇರಿ 3 ಲಕ್ಷ ರೂಪಾಯಿ ಹಣ ತವರು ಮನೆಯಿಂದ ತರುವಂತೆ ಕಿರಿಕುಳ ನೀಡಲು
ಪ್ರಾರಂಭಿಸಿದರು ಹಣ ತಂದರೆ ಮಾತ್ರ ಬಾ ಅಂತಾ ಹೇಳಿದರು ಇದನ್ನು ನಾನು ನನ್ನ ತಂದೆಯವರಿಗೆ
ತಿಳಿಸಿದ್ದು ನನ್ನ ತಂದೆಯವರು ಮನೆಯಲ್ಲಿ ಇದ್ದ ಬಂಗಾರ ಹಾಗೂ ತಮ್ಮ ಮನೆ ಅಡವಿಟ್ಟು 3 ಲಕ್ಷ
ರೂಪಾಯಿ ಹೊಂದಿಸಿ ನನ್ನ ಗಂಡನಿಗೆ ಕೊಟ್ಟಿದ್ದು ನನ್ನ ಗಂಡ ಇನ್ನೂ 2 ಲಕ್ಷ ಹಣ ತೆಗೆದುಕೊಂಡು
ಬರಬೇಕು ಅಂತಾ ನನಗೆ ನನ್ನ ತವರು ಮನೆಯಲ್ಲಿಯೆ ಬಿಟ್ಟಿದ್ದರು ನಂತರ ನನ್ನ ತಂದೆ-ತಾಯಿಯವರು
ದಿನಾಂಕ 29-05-2017 ರಂದು ಬೆಳ್ಳಿಗೆ 11 ಗಂಟೆಗೆ ನನಗೆ ಕಲಬುರಗಿಯ ಶಹಬಜಾರದಲ್ಲಿ ಇರುವ ನನ್ನ
ಗಂಡನ ಮನೆಯಲ್ಲಿ ಬಿಡಬೇಕು ಅಂತಾ ಕರೆದುಕೊಂಡು ಹೋದಾಗ ನನ್ನ ಗಂಡ,ಅತ್ತೆ,
ಮಾವ, ನಾದಿನಿಯರು ಎಲ್ಲರೂ ಸೇರಿ ನಮಗೆ ಅವಾಚ್ಯ ಶಬ್ದಗಳಿಂದ
ಬೈದು ನಿನು 5 ಲಕ್ಷ ಹಣ ತಂದರೆ ಮಾತ್ರ ನಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತೆವೆ ಇಲ್ಲವಾದರೆ ನಿನಗೆ
ಖಲಾಸ ಮಾಡುತ್ತೆವೆಂದು ನನ್ನ ಗಂಡ ನನಗೆ ಕೈಯಿಂದ ಹೊಡೆದನು ಉಳಿದವರೆಲ್ಲರೂ ಕೂಡಿ ಜೀವದ ಬೇದರಿಕೆ
ಹಾಕಿ ಮನೆಯಿಂದ ಹೊರಗೆ ಹಾಕಿದರು ಆದ ಕಾರಣ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ
ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
No comments:
Post a Comment