Police Bhavan Kalaburagi

Police Bhavan Kalaburagi

Saturday, May 18, 2019

KALABURAGI DIST REPORTED CRIMES


ರಾಘವೇಂದ್ರ ನಗರ ಠಾಣೆ:
ಕಳವು ಪ್ರಕರಣ: ಶ್ರೀ ವೀರಶೇಟ್ಟಿ ತಂದೆ ಮಾಣಿಕರಾವ ಪಾಟೀಲ ಸಾಃ ವಿಶ್ವರಾದ್ಯ ಕಾಲೋನಿ  ಕಲಬುರಗಿ ರವರು ಠಾಣೆಗೆ ಹಾಜರಾಗಿ ದಿನಾಂಕಃ 14.05.2019 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ ನಮ್ಮ ಮನೆಯಲ್ಲಿ ಊಟ ಮಾಡಿಕೊಂಡು ನಮ್ಮ ಮನೆಗೆ ಸರಿಯಾಗಿ ಬಾಗಿಲಗಳಿಗೆ ಚಿಲಕ ಹಾಕಿಕೊಂಡು ನಮ್ಮ ಮನೆಯ ಮೇಲಗಡೆ ಮಲಗಿ ಕೊಂಡಿರುತ್ತೇವೆ. ಮದ್ಯ ರಾತ್ರಿ ಅಂದರೆ ದಿನಾಂಕಃ 15.05.2019 ರಂದು 03.00 ಗಂಟೆಯ ಸುಮಾರಿಗೆ ನಮ್ಮ ಮನೆಯ ಪಕ್ಕದ ಮನೆಯವರಾದ ಸಂತೋಷ ತಂದೆ ಬಸವರಾಜ ಪಾಟೀಲ ಇವರು ಮೂತ್ರ ವಿಸರ್ಜನೆ ಮಾಡುವ ಸಮಯದಲ್ಲಿ ಯಾರೋ ನಮ್ಮ ಮನೆಯ ಬಾಗಿಲಿಗೆ ಹಾಕಿರುವ ಚಿಲಕ ಮುರಿಯುತ್ತಿರುವದನು ನೋಡಿ  ನಮ್ಮಗೆ ಬಂದು ಎಬ್ಬಿಸಿದ್ದಾಗ ನಾವು ಹೋಗಿ ನೋಡುವಷ್ಟರಲ್ಲೆ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲಿಗೆ ಹಾಕಿರುವ ಕೀಲಿ ಮುರಿದ್ದು  ಮನೆಯಲ್ಲಿರುವ ಅಲಮಾರ ಮುರಿದ್ದು ಅಲಮಾರಿಯಲ್ಲಿಟ್ಟಿರುವ 1) ಒಂದು ಬಂಗಾರದ ಲಾಕೇಟ್ 07 ಗ್ರಾಂ ಅಃಕಿಃ 21,000, 2) ಮೂರು  ಉಂಗುರುಗಳು 9 ಗ್ರಾಂ ಅಃಕಿಃ 18,000, 3) ಎರಡು ಜೊತೆ ಕಿವಿಯೋಲೆ 10 ಗ್ರಾಂ ಅಃಕಿಃ 30,00, 4) ಒಂದು ಬಂಗಾರದ ಪದಕ 1 ಗ್ರಾಂ ಅಃಕಿಃ 3000, 5) ಬೆಳ್ಳಿಯ ಉಡದಾರ 2 ತೋಲೆ ಅಃಕಿಃ 600 ರೂ, 6) ಬೆಳ್ಳಿಯ ಖಡಗ್ಗ 2 ತೋಲೆ 5 ಗ್ರಾಂ ಅಃಕಿಃ 700, ಇತರೆ ಬೆಳ್ಳಿಯ ಸಾಮಾನಗಳು  5 ತೋಲೆ 5 ಗ್ರಾಂ ಅಃಕಿಃ 1500 ರೂ, 1500 ನಗದು ಹಣ ಹೀಗೆ ಒಟ್ಟು 2 ತೋಲೆ 7 ಗ್ರಾಂ ಬಂಗಾರದ ಆಭರಣ ಅಃಕಿಃ 72,000 ರೂ ಹಾಗೂ 10 ತೋಲೆ ಬೇಳ್ಳಿ ಆಬರಣಗಳು ಅಃಕಿಃ 2800 ರೂ ಮತ್ತು ನಗದು ಹಣ 1500 ರೂ  ಎಲ್ಲಾ ಸೇರಿ 76,300 ರೂ ಬೆಲೆ ಬಾಳುವದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನ ಮಾಡಿಕೊಂಡು ಹೋದವರ ವಿರುದ್ಧ ಕಾನೂನು ಕ್ರಮ ಜರಗಿಸಿ ನಮ್ಮ ವಸ್ತಗಳು ನಮ್ಮ ದೂರಕಿಸಿಕೊಡುವಂತೆ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ನರೋಣಾ ಪೊಲೀಸ್ ಠಾಣೆ:
ಅಪಘಾತ ಪ್ರಕರಣ : ದಿನಾಂಕ:17/05/2019 ರಂದು ಶ್ರೀಮತಿ ಸುರೇಖಾ ಗಂಡ ಅನೀಲ್ ಚವ್ಹಾಣ್ ಸಾ:ನರೋಣಾ ತಾಂಡಾ ನಂ-1 (ಕುಶಪ್ಪನತಾಂಡಾ) ಇವರು ಠಾಣೆಗೆ ಹಾಜರಾಗಿ ನನ್ನ ಗಂಡ ಅನೀಲ್ ತಂದೆ ಟೀಕು ಚವ್ಹಾಣ್ ಇವರು ಇಂದು ಬೆಳಿಗ್ಗೆ ಕೂಲಿ ಕೆಲಸಕ್ಕೆ ಅಂತಾ ಬೋದನ ಗ್ರಾಮಕ್ಕೆ ಹೋಗಿರುತ್ತಾರೆ. ನಾನು ಮತ್ತು ನನ್ನ ಮಗಳಾದ ಅಂಜಲಿ ಇಬ್ಬರು ನಮ್ಮ ಮನೆಯ ಹತ್ತಿರ ಇರುವ ಗಣಪತಿ ಚವ್ಹಾಣ್ ಇವರ ಮನೆಯ ಪಕ್ಕದಲ್ಲಿ ಬ್ಯಾರಲನಲ್ಲಿ ಸಂಗ್ರಹಿಸಿ ಇಟ್ಟಿದ್ದ, ಟ್ಯಾಂಕರ್ ನೀರು ತರಲು ಹೋಗಿರುತ್ತೇವೆ. ನಾನು ಮತ್ತು ನನ್ನ ಮಗಳು ನೀರು ತಗೆದುಕೊಂಡು ನಮ್ಮ ಮನೆ ಕಡೆಗೆ ಬರುತ್ತಿರುವಾಗ ತಾಂಡಾದೋಳಗಿನಿಂದ ವಿಷ್ಣು ತಂದೆ ಮೋತಿರಾಮ್ ರಾಠೋಡ್ ಇವನು ತನ್ನ ಮೊಟಾರ್ ಸೈಕಲ್ ನಂಬರ್ ಕೆಎ32ಇಟಿ2771 ನೇದ್ದನ್ನು ಅತೀವೇಗ ದಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗಳು ಅಂಜಲಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಲ್ಲಿ ಅಂಜಲಿ ಇವಳ ತಲೆಗೆ ಭಾರಿ ಒಳಪೆಟ್ಟಾಗಿ ಬಾಯಿ ಯಿಂದ ಕವಿ ಯಿಂದ ಮೂಗಿನಿಂದ ರಕ್ತ ಹೊರಬಂದು ಒದ್ದಾಡುತ್ತಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ, ಕಾರಣ ನನ್ನ ಮಗಳು ಅಂಜಲಿಗೆ ಮೊಟಾರ್ ಸೈಕಲ್ ಅಪಘಾತ ಪಡಿಸಿ ಓಡಿ ಹೋದ ವಿಷ್ಣು ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಶಹಾಬಾದ ಪೊಲೀಸ್ ಠಾಣೆ:
ಸುಲಿಗೆ ಪ್ರಕರಣ: ದಿನಾಂಕ: 17/05/2019 ರಂದು ಶ್ರೀ ಶರಣಯ್ಯ ತಂದೆ ಶಿವಕುಮಾರ ಮಠಪತಿ ಸಾ: ಡೊಣ್ಣೂರ ಇವರು ಠಾಣೆಗೆ ಹಾಜರಾಗಿ ದಿನಾಂಕ: 16/05/2019 ರಂದು ಕಲಬುರಗಿ ನಂದಿನಿ ಕೆ ಎಮ್ ಫ ಅಪೀಸದಿಂದ ನಂದಿನಿ ಹಾಲು ಮತ್ತು ಇತರೆ ನಂದಿನಿ ಸಾಮಗ್ರಿಗಳನ್ನು 407 ಟೆಂಪೊ ನಂಬರ ಕೆ ಎ 25 ಬಿ 5758 ನೇದ್ದರಲ್ಲಿ  ಹಾಕಿಕೊಂಡು ಸೇಲ್ಸಮ್ಯಾನ ಶರಣಯ್ಯ ಸ್ವಾಮಿ ಇತನೊಂದಿಗೆ ಶಹಾಬಾದ ಮಾರ್ಗವಾಗಿ ಯಾದಗೀರಿಗೆ ಹೋಗಿ ಹಾಲು ಮತ್ತು ಮೊಸರು ಸರಬರಾಜು ಮಾಡಿ ನಂದಿನಿ ಪಾರ್ಲರ ಮತ್ತು ಏಜೆನ್ಸಿರವರಿಂದ ಕಲೇಕ್ಷನ ಹಣ  ಹೀಗೆ ಒಟ್ಟು 108499/- ರೂಪಾಯಿಗಳನ್ನು ಒಂದು ಬ್ಯಾಗನಲ್ಲಿ ಹಾಕಿಕೊಂಡು ಯಾದಗೀರಿಯಿಂದ ವಾಡಿ ಶಹಾಬಾದ ಮಾರ್ಗವಾಗಿ ಕಲಬುರಗಿಗೆ ಹೋಗುತ್ತಿದ್ದಾಗ ಭಂಕೂರ ಕ್ರಾಸ ದಾಟಿ ಮುಂದೆ  ಹೋಗುತ್ತಿದ್ದಾಗ ಇಂದು ನಮ್ಮ ಹಿಂದುಗಡೆಯಿಂದ  ಎರಡು ಮೋಟಾರ ಸೈಕಲಗಳ ಮೇಲೆ  ನಾಲ್ಕು ಜನರು ಬಂದು ನಮ್ಮ 407 ಟೆಂಪೋ ವಾಹನಕ್ಕೆ ತಡೆದು ನನಗೆ ಮತ್ತು ಚಾಲಕ ಬಸವರಾಜ ಹುಂಡೇಕರಗೆ ಹಿಡಿದು ಎಳೆದಾಡಿ ನಮಗೆ ಹೊಟ್ಟೆಗೆ ಮತ್ತು ಬೆನ್ನಿನ ಮೇಲೆ ಮತ್ತು ಮುಖದ ಮೇಲೆ ಹೊಡೆದು ನನ್ನ ಹತ್ತಿರ ಇದ್ದ ಹಣದ ಬ್ಯಾಗ ಹಾಗೂ ನನ್ನ ಮೊಬೈಲ ಮತ್ತು ನನ್ನ ಡ್ರೈವರನ ಮೊಬೈಲಕಸಿದುಕೊಂಡು ಅವರು ತಂದಿರುವ ಮೋಟಾರ ಸೈಕಲ ಮೇಲೆ ಕುಳಿತುಕೊಂಡು ಕಲಬುರಗಿಗೆ ಕಡೆಗೆ ಓಡಿ ಹೋದರು ಗಾಬರಿಯಲ್ಲಿ ಮೋಟಾರ ಸೈಕಲ ನಂಬರ ನೋಡಿರುವುದಿಲ್ಲಾ ಕಾರಣ ನಮ್ಮ ಟೆಂಪೋ ನಿಲ್ಲಿಸಿ ನಮಗೆ ಹೊಡೆ ಬಡೆ ಮಾಡಿ ಅಂಜಿಸಿ ನಮ್ಮ ಹತ್ತಿರ ಇದ್ದ ನಗದು ಹಣ 108499/- ರೂಪಾಯಿಗಳು ಇದ್ದ ಬ್ಯಾಗ ಹಾಗೂ ನನ್ನ ಮೊಬೈಲ ಅ.ಕಿ 5000/- ರೂ ಮತ್ತು ಡ್ರೈವರ ಹತ್ತಿರ ಇದ್ದ ಮೊಬೈಲ ಕಸಿದುಕೊಂಡು ಹೋದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಶಹಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೇವರ್ಗಿ ಪೊಲೀಸ್ ಠಾಣೆ:
ಹಲ್ಲೆ ಪ್ರಕರಣ: ದಿನಾಂಕ; 17/05/2019 ರಂದು ಶ್ರೀ ಮಹ್ಮದ್ ಖಾಲೀದ್ ತಂದೆ ಅಬ್ದುಲ್ ಸತ್ತಾರ ಸಾಬ್ ಗುತ್ತೆದಾರ ಸಾ; ಜೇವರಗಿ ಈತನಿಗೆ ದಿನಾಂಕ; 13/05/2019 ರಂದು ತನ್ನ ಲಾರಿ ಚಲಾಯಿಸುಕೊಂಡು ಹೋಗುತ್ತಿರುವಾಗ ಜೇವರ್ಗಿಯ ರಿಲಾಯನ್ಸ ಪೆಟ್ರೋಲ್ ಬಂಕ್ ಹತ್ತಿರ ಪೀರಪ್ಪ ತಂದೆ ಬಸಪ್ಪ ಯಾತನೂರ, ಗಂಗಾಧರ ತಂದೆ ನಿಂಗಣ್ಣ ವಿಭೂತಿ, ಗೊಲ್ಲಾಳಪ್ಪ ತಂದೆ ಬಸಪ್ಪ, ಶ್ರೀಕಾಂತ ತಂದೆ ಬಸಪ್ಪ ಮತ್ತು ಆತನ ಸಂಗಡಿಗರು ಬಂದು ಬಿಳಿ ವಿನಾಕಾರಣ ನಮ್ಮ ಹತ್ತಿರ ಹಪ್ತಾ ನೀಡುವಂತೆ ಕೇಳುತ್ತಾ , ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ನಮ್ಮ ಏರಿಯಾದಲ್ಲಿ ಬಂದು ನಮಗೆ ಹಪ್ತಾ ಕೊಡದೆ ಹೋಗುತ್ತೀರಿ. ಹಪ್ತಾ ಕೊಡು ಇಲ್ಲದಿದ್ದರೆ ಗಾಡಿ ಬಿಡಲ್ಲ” ಎಂದು ನಮ್ಮ ಜೊತೆ ಜಗಳ ತೆಗೆದು ನನ್ನ ಮತ್ತು ನಮ್ಮ ಡ್ರೈವರ್ ಅಂಬರೀಶನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆ. ನನಗೆ ಎದೆಗೆ ಮತ್ತು ಗುಪ್ತಾಂಗಕ್ಕೆ ಹೊಡೆದಿರುತ್ತಾರೆ.  ಅಷ್ಟರಲ್ಲಿ ರೌಫ್ ಹವಲ್ದಾರ ಮತ್ತು ಶರಣು ಡಿಂಕೆ ರವರು ಬಂದು ಬಿಡಿಸಿರುತ್ತಾರೆ. ಕಾರಣ ಸದರಿ ಪೀರಪ್ಪ ತಂದೆ ಬಸಪ್ಪ ಯಾತನೂರ ಗಂಗಾಧರ ತಂದೆ ನಿಂಗಣ್ಣ ಮತ್ತು ಇವರ ಸಂಗಡಿಗರ ವಿರುದ್ದ ಕ್ರಮ ಕೈಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

Thursday, May 16, 2019

KALABURAGI DISTRICT REPORTED CRIMES

ಹಲ್ಲೆ ಮಾಡಿ ಹಣ ಕಿತ್ತುಕೊಂಡು ಹೋದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ದೇವಿಂದ್ರಪ್ಪ ತಂದೆ ಯಂಕಪ್ಪ ಕಾಶಿರಾಜ್ ಸಾಃ ಹೋಸಕೇರಾ ತಾಃ ಶಹಾಪೂರ ಜಿಃ ಯಾದಗಿರ ರವರು  ದಿನಾಂಕ 15/05/2019 ರಂದು ಮುಂಜಾನೆ 10.00 ಗಂಟೆಯ ಸುಮಾರಿಗೆ ಪೂಜ್ಯ ದೊಡ್ಡಪ್ಪ ಅಪ್ಪ ಕಾಲೇಜಿನಲ್ಲಿ ನನ್ನ ಸಂದರ್ಶನ (ಇಂಟರವಿವ್ಯೂ) ಇದ್ದ ಪ್ರಯುಕ್ತ ನಾನು ಮತ್ತು ನನ್ನ ಗೆಳೆಯನಾದ ಸಿದ್ದಪ್ಪ ತಂದೆ ಪರಮಣ್ಣ ಕವಲ್ದಾರ ಸಾಃ ರಾಜಾಪೂರ(ಬಿ) ತಾಃ ಶಹಾಪೂರ ಇಬ್ಬರು ಕೂಡಿಕೊಂಡು ನನ್ನ ಗೆಳೆಯನ ಕಾರ ನಂ ಕೆಎ-36 ಎ-7140 ನೆದ್ದರಲ್ಲಿ ಮುಂಜಾನೆ 8.30 ಗಂಟೆಯ ಸುಮಾರಿಗೆ ನಮ್ಮೂರಿನಿಂದ ಹೊರಟಿದ್ದು, ನಾನು ಬರುವಾಗ ಸಂಗಡ ನಗದು ಹಣ 1,00,000/-ರೂಪಾಯಿ ಒಂದು ಬ್ಯಾಗಿನಲ್ಲಿ ಹಾಕಿ ಅದನ್ನು ಕಾರಿನ ಮುಂಭಾಗದ ಡಿಕ್ಕಿಯಲ್ಲಿಟ್ಟುಕೊಂಡು ಕಲಬುರಗಿ ಬಂದು ಕಲಬುರಗಿಯಲ್ಲಿ ಇಂಟರವಿವ್ಯೂ ಕೊಟ್ಟು ನಂತರ ಅದೇ ಕಾರಿನಲ್ಲಿ ಕಲಬುರಗಿಯಿಂದ ನಮ್ಮೂರಿಗೆ ಹೊರಟಿದ್ದು, ಮದ್ಯಾಹ್ನ 1.00 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೇದ್ದಾರಿ 218ರ ಕೆಂದ್ರ ಕಾರಾಗೃಹದ ಎದುರುಗಡೆ ಇರುವ ದಾಬಾದಲ್ಲಿ ಊಟಕ್ಕೆಂದು ರೈಸ್ ಪಾರ್ಸಲ್ ಕಟ್ಟಿಸಿಕೊಂಡು ನಂತರ ಅಲ್ಲಿಂದ ಅಂದಾಜು 2.00  ಕಿ.ಮೀ ದೂರು ಬಂದು ಅಂದರೆ ಪಾಣೆಗಾಂವ ಕ್ರಾಸ ಎದುರುಗಡೆ ರೋಡಿನ ಪಕ್ಕದಲ್ಲಿರುವ ಒಂದು ಹೊಲದಲ್ಲಿನ ಬೇವಿನ ಮರದಡಿ ಕುಳಿತು ಊಟ ಮಾಡಿದರಾಯಿತ್ತು ಅಂತಾ ಅಂದುಕೊಂಡು ಬೇವಿನ ಮರದಡಿ ಕಾರ ನಿಲ್ಲಿಸಿ ನಾನು ಮತ್ತು ನನ್ನ ಗೆಳೆಯನಾದ ಸಿದ್ದಪ್ಪ ತಂದೆ ಪರಮಣ್ಣ ಇಬ್ಬರು ಕುಳಿತು ಊಟ ಮಾಡುತ್ತಿದ್ದಾಗ ಸಮಯ ಸುಮಾರು 1.30 ಪಿ.ಎಮದ ಸುಮಾರಿಗೆ ಯಾರೋ ಇಬ್ಬರು ಅಪರಿಚಿತರು ಒಂದು ಕಪ್ಪು ಬಣ್ಣದ ಪಲ್ಸರ ಮೋಟಾರ ಸೈಕಲ ಮೇಲೆ ತಮ್ಮ ಮುಖಕ್ಕೆ ದಸ್ತಿ (ಕರಚೀಫ್) ಕಟ್ಟಿಕೊಂಡು ನಾವಿದ್ದಲ್ಲಿಗೆ ಬಂದು ನಮಗೆ ನೀವು ಯಾರು ಇಲ್ಲಿ ಯಾಕೆ ಕುಳಿತ್ತಿದ್ದಿರಿ ಏನು ಮಾಡುತ್ತಿದ್ದಿರಿ ಅಂತಾ ಕೇಳಿದಾಗ ನಾವು ಅವರಿಗೆ ಊಟ ಮಾಡುತ್ತಿದ್ದೇವೆ ಅಂತಾ ಹೇಳಿದೇವು ನಂತರ ಅವರು ತಮ್ಮ ಹತ್ತಿರ ಇದ್ದ ಚಾಕು ತೋರಿಸಿ ನಿಮ್ಮ ಕಿಸೆಯಲ್ಲಿ ಏನೇನು ಇದೆ ತೆಗೆರಿ ಅಂತಾ ಹೇಳಿದರು ನಾವು ನಮ್ಮ ಹತ್ತಿರ ಏನು ಇಲ್ಲ ಅಂತಾ ಹೇಳಿದಾಗ ಅವರು ನಮ್ಮ ಕಿಸೆಯಲ್ಲಿ ಜಬರದಸ್ತಿಯಿಂದ ಕೈ ಹಾಕಿ ಚೆಕ್ಕ ಮಾಡಿದರು. ಅವರಲ್ಲೊಬ್ಬನು ಸಿದ್ದಪ್ಪನ ಹತ್ತಿರ ಇದ್ದ ನಗದು ಹಣ 400/-ರೂ ಜಬರದಸ್ತಿಯಿಂದ ಕಿತ್ತಿಕೊಂಡನು. ನಂತರ ಇನ್ನೋಬ್ಬನು ನನ್ನ ಕಿಸೆಯಲ್ಲಿದ್ದ ನಗದು ಹಣ 600/-ರೂ ಜಬರದಸ್ತಿಯಿಂದ ಕಿತ್ತಿಕೊಂಡನು. ನಂತರ ಕಾರಿನ ಡೋರ್ ತೆಗಿರಿ ಅಂತಾ ಹೇಳಿ ಅವರು ನಮ್ಮ ಕಾರಿನ ಡೋರ್ ತೆಗೆದರು ಕಾರಿನ ಮುಂಭಾದ ಡಿಕ್ಕಿಯಲ್ಲಿದ್ದ ಹಣದ ಬ್ಯಾಗ ತೆಗೆದುಕೊಳ್ಳಲು ಹೊದಾಗ ನಾನು ಹಣವಿದ್ದ ಬ್ಯಾಗನು ಕಸಿದುಕೊಳ್ಳಲು ಹೊದಾಗ ಅವರು 1,00,000/-ರೂಪಾಯಿ ಹಣವಿದ್ದ ಬ್ಯಾಗನ್ನು ನನ್ನಿಂದ ಜಬರದಸ್ತಿಯಿಂದ ಕಿತ್ತಿಕೊಂಡರು, ನಂತರ ಅವರು ನನ್ನ ಕೈ ಬೆರಳಲ್ಲಿದ್ದ  ಬಂಗಾರ ಉಂಗುರು ಕೊಡು ಅಂತಾ ಜಬರದಸ್ತಯಿಂದ ಕಿತ್ತಿಕೊಳ್ಳಲು ಬಂದಾಗ ನಾನು ತಡೆದು ಉಂಗುರು ಕೊಡುವುದಿಲ್ಲ ಅಂದಿದ್ದಕ್ಕೆ ಅವರುಗಳು ಅಲ್ಲೆ ಬಿದಿದ್ದ ಕಲ್ಲುಗಳು ತೆಗೆದುಕೊಂಡು ನನ್ನ ಬೆನ್ನಿಗೆ, ಕಾಲಿಗೆ, ಭುಜಕ್ಕೆ ಹೊಡೆದರು. ನಂತರ ಅವರು ಅದೇ ಪಲ್ಸರ ಮೋಟಾರ ಸೈಕಲ ಮೇಲೆ ಹೊಲದಲ್ಲಿನ ಕಾಲು ದಾರಿಯಿಂದ ಹೊದರು. ಗಾಬರಿಯಲ್ಲಿ ಮೋಟಾರ ಸೈಕಲ ನಂಬರ ನೋಡಿರುವುದಿಲ್ಲ. ಅವರು ಕನ್ನಡ ಮಾತಾಡುತ್ತಿದ್ದು, ಸದೃಡವಾಗಿದ್ದು, ಅಂದಾಜು ವಯಾ 25-35 ವಯಸ್ಸಿನವರಿರಬಹುದು ನಾವು ಅವರಿಗೆ ನೋಡಿದ್ದಲ್ಲಿ ಗುರ್ತಿಸುತ್ತೇವೆ. ನನಗೆ ಅಷ್ಟೇನು ಪೆಟ್ಟಾಗದ ಕಾರಣ ಆಸ್ಪತ್ರೆಗೆ ಹೊಗುವುದಿಲ್ಲ. ದಿನಾಂಕ 15/05/2019 ರಂದು 1.30 ಪಿ.ಎಮಕ್ಕೆ ರಾಷ್ಟ್ರೀಯ ಹೆದ್ದಾರಿ 218ರ ಪಾಣೆಗಾಂವ ಕ್ರಾಸ ಎದುರುಗಡೆ ಇರುವ ಹೊಲದಲ್ಲಿನ ಬೇವಿನ ಮರದಡಿ ನಾವು ಊಟ ಮಾಡಲು ಕುಳಿತಾಗ ಇಬ್ಬರು ಅಪರಿಚಿತರು ಮೋಟಾರ ಸೈಕಲ ಮೇಲೆ  ಬಂದು ನಮಗೆ ಹೊಡೆ ಬಡೆ ಮಾಡಿ ನಮ್ಮಿಂದ ನಗದು ಹಣ 1,01,000/-ರೂ ಜಬರದಸ್ತಿಯಿಂದ ಕಿತ್ತಿಕೊಂಡು ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ.ದತ್ತು  ರವರು .ರಾಜು ತಂದೆ ಗೋಪಾಲ ಜಮಾದಾರ ಸಾ:ಮಡಕಿತಾಂಡ ಇವರ ಹೊಲವನ್ನು ನಾನು ಕಡತಿ ಹಾಕಿಕೊಂಡಿದ್ದು ಸದರಿ ಹೊಲದಲ್ಲಿ ಕಬ್ಬು ಖಾಕಿರುತ್ತೇನೆ. ಇದರ ಬಾಜು ಹಣಮಂತ ತಂದೆ ಗುಂಡಪ್ಪಾ ಧನಗರ ಸಾ:ದಮ್ಮೂರ ಇವರ ಹೊಲ ಇರುತ್ತದೆ, ಸದರಿ ಹೊಲ ನಮ್ಮ ಅಣ್ಣನಾದ ಬಳಿರಾಮ್ ತಂದೆ ಧನಸಿಂಗ್ ಚವ್ಹಾಣ್ ಕಡತಿ ಹಾಕಿಕೊಂಡಿದ್ದು ಹೊಲದಲ್ಲಿ ಅಲಸಂದಿ ಬೆಳೆ ಹಾಕಿರುತ್ತಾರೆ.  ನಾನು ದಿನಾಂಕ: 15/05/2019 ರಂದು ಬೆಳಿಗ್ಗೆ 0830ರ ಸುಮಾರಿಗೆ ನಾನು ಕಡತಿಹಾಕಿಕೊಂಡ ರಾಜು ಇವರ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ, ಹಣಮಂತನ ಹೊಲದಲ್ಲಿ ನಮ್ಮ ತಾಂಡಾದ 1)ತುಕಾರಾಮ್ ತಂದೆ ಧನಸಿಂಗ್ ಚವ್ಹಾಣ್ ಹಾಗೂ ಆತನ ಹೆಂಡತಿ 2)ಪುತಳಾಬಾಯಿ ಗಂಡ ತುಕಾರಾಮ್ ಚವ್ಹಾಣ್,  ಇವರು ತಮ್ಮ ಕುರಿದನಗಳನ್ನು ಬಿಟ್ಟಿದ್ದು, ನಾನು ನೋಡಿ ಅಲ್ಲಿಗೆ ಅವರಿಗೆ ಹೀಗೆ ಬೆಳೆಯಲ್ಲಿ ಕುರಿ ದನ ಬಿಡುವುದು ಸರಿಯಲ್ಲ ಅಂತಾ ಹೇಳಿದಕ್ಕೆ ಅವರಿಬ್ಬರು ನನ್ನ ಸಂಗಡ ಬಾಯಿ ಬಡೆದು, ನನ್ನೊಂದಿಗೆ ಜಗಳ ಮಾಡಿ ತುಕಾರಾಮ್ ನನಗೆ ರಂಡಿಮಗನೆ, ಭೋಸಡಿಮಗೆ ಅಂತಾ ಬೈದು ತಲೆಯ ಮೇಲಿನ ಕುದಲು ಹಿಡಿದು ಒಂದು ಕಲ್ಲು ತಗೆದುಕೊಂಡು ತನ್ನ ಕೈಯಲ್ಲಿ ಹಿಡಿದು ನಿನಗೆ ಬಿಡಂಗಿಲ್ಲ ಸೂಳೆ ಮಗನೆ ಅಂತಾ ಬೈಯುತ್ತ ನನ್ನ ಹೊಟ್ಟೆಯ ಮೇಲೆ ಜೋರಾಗಿ ಗುದ್ದಿ ಗುದ್ದಿ ಭಾರಿ ಗುಪ್ತಗಾಯ ಪಡಿಸಿದನು. ಆಗ ಆತನ ಹೆಂಡತಿ ಪುತಳಬಾಯಿ ಇವಳು ಈ ಹಟ್ಯಾ ಭಾಡಕೋಗಾ ಭಹಳ ಸೊಕ್ಕು ಬಂದಾದ ಅಂತಾ ಬೈದು ಕಲ್ಲಿನಿಂದ ಬೆನ್ನಮೇಲೆ ಜೋರಾಗಿ 2-3 ಸಲ ಗುದ್ದಿದಳು ನನಗೆ ಹೊಟ್ಟೆ ಬೆನ್ನಿಗೆ ಭಾರಿ ಒಳಪೆಟ್ಟಾಗಿ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದಾಗ, ಅದೇ ವೇಳೆಗೆ ನನ್ನ ಅಣ್ಣ ಬಳಿರಾಮ ಹಾಗೂ ಆತನ ಮಗ ಯುವರಾಜ್, ಇಬ್ಬರು ಹೊಲಕ್ಕೆ ಬಂದಿದ್ದು, ಅವರೂ ಕೂಡ ಈ ಘಟನೆಯನ್ನು ಸ್ವಲ್ಪ ಧೂರದಿಂದ ನೋಡಿ ನಮ್ಮ ಕಡೆ ಬರುವುದನ್ನು ನೋಡಿ ತುಕಾರಾಮ್ ಹಾಗೂ ಪುತಳಬಾಯಿ ಇವರು ನನಗೆ ಹೊಡೆಬಡೆ ಮಾಡುವುದನ್ನು ಬಿಟ್ಟು ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, May 12, 2019

KALABURAGI DOST REPORTED CRIME

ನರೋಣಾ ಪೊಲೀಸ್ ಠಾಣೆ:
ಜೂಜುಕೋರರ ಬಂಧನ:  ದಿನಾಂಕ 11/05/2019 ರಂದು ಠಾಣಾ ಸರಹದ್ದಿನ ಕಮಲಾನಗರ ಹನುಮಾನ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಜೂಜಾಟಕ್ಕೆ ಹಣ ಪಣಕಿಟ್ಟು ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯ ನ್ಯಾಯಾಧೀಶರು ಆಳಂದ ರವರ ಅನುಮತಿ ಪಡೆದುಕೊಂಡು ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಆಳಂದ ರವರ ಮಾರ್ಗದರ್ಶನದಂತೆ ಪಂಚರಾದ 1)ಶ್ರೀ.ಚಂದ್ರಕಾಂತ ತಂದೆ ಭೀಮಶ್ಯಾ ಪರೀಟ್‌, ವಯಾ:45 ವರ್ಷ, ಜಾತಿ:ಮಡಿವಾಳ, ಉ:ಕೂಲಿಕೆಲಸ, ಸಾ:ನರೋಣಾ ಗ್ರಾಮ ಮತ್ತು  2)ಶ್ರಿಮಂತ ತಂದೆ ಶಂಕ್ರಪ್ಪಾ ಡೆಂಕಿ, ವಯಾ:55 ವರ್ಷ, ಜಾತಿ:ಲಿಂಗಾಯತ, ಉ:ಹೊಟಲಕೆಲಸ, ಸಾ:ನರೋಣಾ ಗ್ರಾಮ ಇವರನ್ನು ನಾನು ಮತ್ತು ಎ.ಎಸ್.ಐ ರುಕ್ಮೊದ್ದಿನ ಹಾಗೂ ಸಿಬ್ಬಂದಿಯವರಾದ 1)ಬಸವರಾಜ ಸಿಪಿಸಿ-1206, 2)ಆನಂದ ಸಿಪಿಸಿ-1258, 3)ಸತೀಶ ಸಿಪಿಸಿ-1004, 4)ಪ್ರದೀಪಕುಕಮಾರ ಸಿಪಿಸಿ-095, 5)ಭೀಮಾಆಶಂಕರ ಸಿಹೆಚ್‌‌ಸಿ-401, 6)ದ್ಯಾವಪ್ಪಾ ಸಿಪಿಸಿ-942,  7)ದಯಾಂದ ಸಿಹೆಚ್‌‌ಸಿ-21 ರವರೆಲ್ಲರೂ ಬಾತ್ಮಿ ಬಂದ ಕಮಲಾನಗರದ ಹನುಮಾನ ದೇವಸ್ಥಾನದ ಕಟ್ಟೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ  ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 09 ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಪಣಕ್ಕೆ ಹಣ ಹಚ್ಚಿ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾನು ಹಾಗೂ ಸಿಬ್ಬಂದಿಯವರು ಕೂಡಿ ಸದರಿ ಜೂಜುಕೋರರ ಮೇಲೆ ದಾಳಿ ಮಾಡಿ ಅವರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1)ಹರಿ ತಂದೆ ಲಾಲು ಲಾಠೋಡ್‌, ಸಾ:ಸಾವಳಗಿ(ಕೆ)ತಾಂಡಾ, ಈತನ ಹತ್ತಿರ 700/- ನಗದು ಹಣ 2)ಗೇಮು ತಂದೆ ಲಕ್ಷ್ನಣ ಚವ್ಹಾಣ ಸಾ:ಸಾವಳಗಿ (ಕೆ) ತಾಂಡಾ, ಅಂತಾ ಹೇಳಿದ್ದು ಈತನ ಹತ್ತಿರ 610/- ನಗದು ಹಣ, 3)ಶಿವರಾಚಪ್ಪಾ ತಂದೆ ಚಂದ್ರಕಾಂತ ಬಿರಾದಾರ, ಸಾ:ಕಮಲಾನರ, ಈತನ ಹತ್ತಿರ 480/- ನಗದು ಹಣ 4)ಬಸವರಾಜ ತಂದೆ ರೇವಣಸಿದ್ದಪ್ಪಾ ಬಿರಾದಾರ, ಸಾ:ಕಮಲಾನಗರ ಗ್ರಾಮ, ಈತನ ಹತ್ತಿರ 420/- ನಗದು ಹಣ 5)ಶರಣಬಸಪ್ಪಾ ತಂದೆ ಶ್ರೀಮಂತರಾವ ಬಿರಾದಾರ, ಸಾ:ಕಮಲಾನಗರ, ಈತನ ಹತ್ತಿರ 1070/- ನಗದು ಹಣ 6)ಶಿವರಾಜ ತಂದೆ ಕಲ್ಯಾಣಪ್ಪಾ ಬಿರಾದಾರ, ಸಾ:ಕಮಲಾನಗರ, ಈತನ ಹತ್ತಿರ 430/- ನಗದು ಹಣ 7)ದಿಲೀಪಕುಮಾರ ತಂದೆ ಶರಣಬಸಪ್ಪಾ ಮೂಲಗೆ, ಸಾ:ಕಮಲಾನಗರ, ಈತನ ಹತ್ತಿರ 910/- ನಗದು ಹಣ 8)ನಿಜಲಿಂಗಪ್ಪಾ ತಂದೆ ಕುಪೇಂದ್ರ ವಾಗ್ದರ್ಗಿ, ಸಾ:ಕಮಲಾನಗರ ಈತನ 440/- ನಗದು ಹಣ ಅಲ್ಲದೆ ಪಣದಲ್ಲಿ ಜೂಜಿಗೆ ಇಟ್ಟ ಹಣ 320 ರೂ ಹಾಗು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಇಸ್ಪಿಟ ಎಲೆಗಳನ್ನು ಎಣಿಸಿ ನೊಡಲಾಗಿ 52 ಇಸ್ಪಿಟ ಎಲೆಗಳು ಹೀಗೆ ಒಟ್ಟು ನಗದು ಹಣ 5380/- ರೂಪಾಯಿ ಮತ್ತು 52 ಇಸ್ಪಿಟ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ವಶಕ್ಕೆ ತೆಗೆದುಕೊಂಡಿದ್ದು, ದಾಳಿ ಕಾಲಕ್ಕೆ ಒಬ್ಬ ವ್ಯಕ್ತಿ ಓಡಿಹೋಗಿದ್ದು ಆತನ ಹೆಸರು ವಿಚಾರಿಸಲಾಗಿ 9)ಸಿದ್ರಾಮಪ್ಪಾ ತಂದೆ ಚನ್ನಬಸಪ್ಪಾ ಜಿಂಗೆ, ಸಾ:ಕಮಲಾನಗರ ಅಂತಾ ತಿಳಿಸಿದ್ದು ಈ ಬಗ್ಗೆ ಪಂಚನಾಮೆಕೈಕೊಂಡು ಸದರಿ ಆರೋಪಿತರ ವಿರುದ್ದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಸಂಚಾರಿ ಠಾಣೆ-1:
ಅಪಘಾತ ಪ್ರಕರಣ: ದಿನಾಂಕ 11-05-2019 ರಂದು ವಿದ್ಯಾ ನಗರದಲ್ಲಿರುವ ಕೃಷ್ಣ ಮಂದಿರಕ್ಕೆ ಹೋಗುವ ಕುರಿತು ಮೋಟಾರ ಸೈಕಲ ನಂಬರ ಕೆಎ-32/ಇಎಮ್-7048 ನೇದ್ದರ ಹಿಂದುಗಡೆ ನನ್ನ ಹೆಂಡತಿಯಾದ ವಸೂದಾ ಇವರನ್ನು ಕೂಡಿಸಿಕೊಂಡು ನಮ್ಮ ಮನೆಯಿಂದ ನಾನು ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುವಾಗ ಸಿಐಬಿ ಕಾಲೋನಿ ಹತ್ತಿರ ಜಿಡಿಎ ಲೇಔಟನಲ್ಲಿ ರೋಡ ಎಡಗಡೆಯಿಂದ ಹೋಗುವಾಗ ಟಂ ಟಂ ಗೂಡ್ಸ ನಂ ಕೆಎ-32/ಸಿ-7237 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಹೆಂಡತಿಗೆ ಭಾರಿಗಾಯಗೊಳಿಸಿ ತನ್ನ ಟಂ ಟಂ ವಾಹನ ಸಮೇತ ಓಡಿ ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಛಾರಿ ಠಾಣೆ-1 ರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಫರಹತಾಬಾದ ಪೊಲೀಸ್ ಠಾಣೆ:
ಹಲ್ಲೆ ಪ್ರಕರಣ: ದಿನಾಂಕ:11.05.2019 ರಂದು ಅನ್ವರಬೀ ಗಂಡ ಮೌಲಾ ಪಟೇಲ ಸಾ: ಕಾಡನಾಳ ಗ್ರಾಮ ತಾ:ಜಿ:ಕಲಬುರಗಿ ಇವರು ದೂರು ಸಲ್ಲಿಸಿದ ಸಾರಾಂಶವೆನಂದರೆ. ನಾನು ಮತ್ತು ನನ್ನ ಮಗ ಬಾಬಾಪಟೇಲ ತಂದೆ ಮೌಲಾಪಟೆಲ ಇವರು ಸರ್ವೇ ನಂ.49/3 ನೇದ್ದರಲ್ಲಿ ಗಳೆ ಹೋಡೆಯುತ್ತಿರುವಾಗ ನಮ್ಮ ಗ್ರಾಮದವರಾದ ಖಾಸಿಂ ಪಟೆಲ ತಂದೆ ಸಾಹೇಬ ಪಟೆಲ ಇವನು ವಿನಾಃಕಾರಣ ಅವಾಚ್ಯ ಶಬ್ದಗಳಿಂಧ ಬಯ್ದು ನಮ್ಮ ಹೋಲದಲ್ಲಿಂದ ದಾರಿ ಯಾಕೆ ಹಾಕಿದ್ದರಿ ಅಂತಾ ಅಂದವನೆ ಕಲ್ಲಿನಿಂದ ನನಗೆ ಬೆನ್ನ ಮೇಲೆ ಹಾಗೂ ಎಡಗೈ, ಬಲಗೈ ಮೇಲೆ ಹೋಡೆದಿರುತ್ತಾನೆ. ನಂತರ ನಜೀರ ಪಟೆಲ ತಂದೆ ಸಾಹೇಬ ಪಟೇಲ ಈತನು ಬಡಿಗೆಯಿಂದ ನನ್ನ ತಲೆಯ ಮೇಲೆ ಜೋರಾಗಿ ಹೋಡೆದು ರಕ್ತಗಾಯ ಮಾಡಿರುತ್ತಾನೆ. ನನ್ನ ಮಗ ಬಾಬಾ ಪಟೆಲ ಈತನು ಬಿಡಿಸಲು ಬಂದಾಗ ಆತನಿಗೆ ಜಹೀರ ಪಟೆಲ ತಂದೆ ಸಾಹೇಬ ಪಟೆಲ ಹಾಗೂ ಆಸಿಫ್ ಪಟೆಲ ತಂದೆ ಸಾಹೇಬ ಪಟೆಲ ಇವರು ನನ್ನ ಮಗನಿಗೆ ಬಡಿಗೆಯಿಂದ ಹಾಗೂ ಕಲ್ಲಿನಿಂದ ತೋಡೆಯ ಮೇಲೆ ಬೆನ್ನ ಮೇಲೆ ಹೋಡೆದು ಗುಪ್ತಗಾಯ ಮಾಡಿರುತ್ತಾರೆ. ನಮ್ಮ ಊರಿನ ಶಿವಶರಣಪ್ಪ ತಂದೆ ಹಣಮಂತರಾಯ ಪ್ಯಾಟ್ಲಿ ಇವರು ಪರಮಾನಂದ ಜಗಳ ಮಾಡಿ ಹೋಡೆಯುವುದನ್ನು ನೋಡಿ ಅವರು ಬಂದು ಜಗಳ ಬಿಡಿಸಿದ್ದು. ಆಗ ಸದರಿ ಆರೋಪಿತನು ನಮಗೆ ಇದೆ ಜಾಗದಲ್ಲಿ ಕೋಲೆ ಮಾಡಿ ಬಿಡುತ್ತೇವೆ ಎಂದು ಹೆದರಿಸಿರುತ್ತಾರೆ  ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಅಶೋಕ ನಗರ ಪೊಲೀಸ್ ಠಾಣೆ:


ಹಲ್ಲೆ ಪ್ರಕರಣ: ಶ್ರೀ ಅನಿಲಕುಮಾರ ತಂದೆ ಶಿವಲಿಂಗಪ್ಪ ಫರತಾಬಾದ ಉ: ಕಿರಾಣಿ ಅಂಗಡಿ ಸಾ|| ಸಿರನೂರ ಇತನ ದಿನಾಂಕ:09.05.2019 ರಂದು ಸಾಯಂಕಾಲ 04:00 ಗಂಟೆ ಸುಮಾರಿಗೆ ವಡ್ಡರಗಲ್ಲಿಯಿಂದ ಕೇಂದ್ರ ಬಸ್ ನಿಲ್ದಾಣದ ಮಾರ್ಗವಾಗಿ ನಡೆದುಕೊಂಡು ಬರುತ್ತಿರುವಾಗ ಬಸ್ ಡಿಪೋ ಹತ್ತಿರ ಬರುತ್ತಿದ್ದಂತೆ, ಎದರುಗಡೆಯಿಂದ 1) ಬಸವರಾಜ ಜೆಮಶೆಟ್ಟಿ 2) ರಾಜಕುಮಾರ ಜೆಮಶೆಟ್ಟಿ 3) ಶ್ರೀಶೈಲ್ ಜೆಮಶೆಟ್ಟಿ ಮತ್ತು 4) ಶಿವುಕುಮಾರ ಜೆಮಶೆಟ್ಟಿ ಇವರುಗಳು ಎರಡು ದ್ವಿ-ಚಕ್ರ ವಾಹನಗಳ ಮೇಲೆ ಬಂದವರೆ ನನ್ನ ಹತ್ತಿರ ವಾಹನ ನಿಲ್ಲಿಸಿ ಬಸವರಾಜ ಇತನು ನನಗೆ ತಡೆದು ನಿಲ್ಲಿಸಿ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಅವಾಚ್ಯ ಶಬ್ದಗಳಿಂದ ಬಯ್ದು  ನನ್ನ ಕಪಾಳಕ್ಕೆ ಹೊಡೆದಿರುತ್ತಾನೆ, ರಾಜಕುಮಾರನು ತನ್ನ ಕೈಯಲ್ಲಿದ್ದ ಚಾಕುವಿನಿಂದ ನನಗೆ ಹೊಡೆಯಲು ಬಂದಾಗ ನನ್ನ ಎಡಗೈಯಿಂದ ಅವನ ಕೈಯಲ್ಲಿದ್ದ ಚಾಕುವನ್ನು ಹಿಡಿದಾಗ ನನ್ನ ಎಡಗೈಗೆ ರಕ್ತಗಾಯ ಆಗಿರುತ್ತದೆ. ನಂತರ ಶ್ರೀಶೈಲ್ ಇತನು ತನ್ನ ಕೈಯಿಂದ ನನ್ನ ಹೊಟ್ಟೆಗೆ ಹೊಡೆದಾಗ ನಾನು ಕೆಳಗೆ ಬಿದ್ದಾಗ ಶಿವುಕುಮಾರ ಇತನು ಅಲ್ಲಿಯೇ ಇದ್ದ ಕಲ್ಲಿನಿಂದ ನನ್ನ ಬಲಗಡೆ ಕಾಲಿಗೆ ಹೊಡೆದಿರುತ್ತಾನೆ. ನನ್ನ ಚಿಕ್ಕಪ್ಪ ಅಮೃತ ಪಾಟೀಲ್ ಮತ್ತು ಅವರ ಸ್ನೇಹಿತ ಶಿವುಕುಮಾರ ದೊಡ್ಡಮನಿ ಇಬ್ಬರು ಬಂದು ಜಗಳ ಬಿಡಿಸಿ ನನಗೆ ಉಪಚಾರಕ್ಕಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಹಳೆಯ ವೈಷಮ್ಯದಿಂದ ನನ್ನೊಂದಿಗೆ ಜಗಳಕ್ಕೆ ಬಿದ್ದು, ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈ ಹಾಗೂ ಕಲ್ಲು ಮತ್ತು ಚಾಕುವಿನಿಂದ ಹೊಡೆಬಡೆ ಮಾಡಿದವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.

Friday, May 10, 2019

KALABURAGI DISTRICT REPORTED CRIMES


ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 09-05-2019 ರಂದು ಕೂಡಿಗನೂರ ಗ್ರಾಮದ ಭೀಮಾ ನದಿಯಲ್ಲಿ ಅಕ್ರಮವಾಗಿ ಟ್ರಾಕ್ಟರದಲ್ಲಿ ಮರಳು ತುಂಬುತ್ತಿದ್ದಾರೆ ಎಂದು ಮಾಹಿತಿ ಬಂದ ಮೇರೆಗೆ ಸಿ.ಪಿ.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೂಡಿಗನೂರ ಗ್ರಾಮದ ನದಿಯಲ್ಲಿ ಹೋಗಿ ನೋಡಲಾಗಿ ಭೀಮಾ ನದಿಯಲ್ಲಿ ಒಂದು ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು, ಆಗ ನಾವು ಟ್ಯಾಕ್ಟರ ಹತ್ತಿರ ಹೋಗುತ್ತಿದ್ದಂತೆ ಸದರಿ ಟ್ಯಾಕ್ಟರ ಚಾಲಕ ನಮ್ಮನ್ನು ನೋಡಿ ತನ್ನ ಟ್ರಾಕ್ಟರನಲ್ಲಿದ್ದ ಮರಳನ್ನು ನದಿಯಲ್ಲೆ ಡಂಪ ಎತ್ತಿ ಓಡಿ ಹೋದನು. ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರದಲ್ಲಿದ್ದ ಮರಳು ಡಂಪ ಆಗಿ ಕೆಳಗೆ ಬಿದ್ದತ್ತು. ನಂತರ ಸದರಿ ಟ್ಯಾಕ್ಟರ ಹತ್ತಿರ ಹೋಗಿ ಚೆಕ್ ಮಾಡಿ ನೋಡಲು ಜಾನ ಡಿಯರ್ ಕಂಪನಿಯ ಟ್ರ್ಯಾಕ್ಟರ ಇದ್ದು ಪಾಸಿಂಗ್ ನಂಬರ ಹಾಕಿರದಿರುವದಿಲ್ಲ ಅದರ ಎಂಜಿನ ನಂಬರ:PY3029D110566 ಚೆಸ್ಸಿ ನಂಬರ-3029DPY01 ಇರುತ್ತದೆ. ಟ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಟ್ರ್ಯಾಕ್ಟರ ಅಂದಾಜು ಕಿಮ್ಮತ್ತು 500000/- ರೂ ಆಗಬಹುದು. ನಂತರ ಸದರಿ ಟ್ರ್ಯಾಕ್ಟರನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ 01 : ಶ್ರೀ ಕಲ್ಲಪ್ಪ ತಂದೆ ಶಿವಲಿಂಗಪ್ಪಾ ಹುಡಗಿಕರ ಸಾ : ಹಸರಗುಂಡಗಿ ತಾ : ಚಿಂಚೋಳಿ  ರವರು ದಿನಾಂಕ 09-05-2019 ರಂದು ಬೆಳಿಗ್ಗೆ ತಾನು ಮತ್ತು ತಮ್ಮೂರಿನ ದೊಂಡೆರಾವ ಹಾಗೂ ಅವರ ಮಗ ಅರುಣಕುಮಾರ ಮೂರು ಜನರು ಕೂಡಿಕೊಂಡು ಕಲಬುರಗಿ ಕಾಮರೆಡ್ಡಿ ಆಸ್ಪತ್ರೆಯಲ್ಲಿ   ಉಪಚಾರ ಕುರಿತು ಸೇರಿಕೆಯಾಗಿದ್ದ ನನ್ನ ಮಗಳ ಗಂಡನಾದ ಮಲ್ಲಿಕಾರ್ಜುನ ಇತನಿಗೆ ಮಾತನಾಡಿಸುವ ಸಲುವಾಗಿ ನಮ್ಮೂರಿನಿಂದ ಬಸ್ಸ ಮೂಲಕ ನೆಹರು ಗಂಜಗೆ ಬಂದು ಅಲ್ಲಿಂದ ಸಿಟಿ ಬಸ್ಸ ಮೂಲಕ ಕಾಮರೆಡ್ಡಿ ಆಸ್ಪತ್ರೆ ಹತ್ತೀರ ಇಳಿದು ಎಸ.ವಿ ಪಿ ಸರ್ಕಲ ಮತ್ತು ಆರ,ಪಿ ಸರ್ಕಲ ಮುಖ್ಯ ರಸ್ತೆಯ ಮೇಲೆ ಹೋಗಿ ಬರುವ ವಾಹನಗಳನ್ನು ನೋಡಿಕೊಂಡು ಕಾಮರೆಡ್ಡಿ ಆಸ್ಪತ್ರೆಗೆ ನಡೆದುಕೊಂಡು ರಸ್ತೆ ದಾಟುತ್ತೀರುವಾಗ ಕಾಮರೆಡ್ಡಿ ಆಸ್ಪತ್ರೆ ಹತ್ತೀರ ರೋಡ ಮೇಲೆ ಮೋಟಾರ ಸೈಕಲ ನಂ ಕೆಎ-32/ಇಡಿ-5182 ನೇದ್ದರ ಸವಾರ ಸಿದ್ರಾಮ ಇತನು ಆರ.ಪಿ ಸರ್ಕಲ ಕಡೆಯಿಂದ ಎಸ.ವಿ.ಪಿ ಸರ್ಕಲ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿದ್ದು ಸಿದ್ರಾಮ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ 01 ರಲ್ಲಿ ಪ್ರಕರಣ ದಾಖಲಾಗಿದೆ.

Thursday, May 9, 2019

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 08-05-2019 ರಂದು ಕೂಡಿಗನೂರ ಗ್ರಾಮದ ಭೀಮಾ ನದಿಯಲ್ಲಿ ಅಕ್ರಮವಾಗಿ ಟ್ರಾಕ್ಟರದಲ್ಲಿ ಮರಳು ತುಂಬುತ್ತಿದ್ದಾರೆ ಎಂದು ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೂಡಿಗನೂರ ಗ್ರಾಮದ ನದಿಯಲ್ಲಿ ಹೋಗಿ ನೋಡಲಾಗಿ ಭೀಮಾ ನದಿಯಲ್ಲಿ ಒಂದು ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು, ಆಗ ನಾವು ಟ್ಯಾಕ್ಟರ ಹತ್ತಿರ ಹೋಗುತ್ತಿದ್ದಂತೆ ಸದರಿ ಟ್ಯಾಕ್ಟರ ಚಾಲಕ ನಮ್ಮನ್ನು ನೋಡಿ ತನ್ನ ಟ್ರಾಕ್ಟರನಲ್ಲಿದ್ದ ಮರಳನ್ನು ನದಿಯಲ್ಲೆ ಡಂಪ ಎತ್ತಿ ಓಡಿ ಹೋದನು. ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರದಲ್ಲಿದ್ದ ಮರಳು ಡಂಪ ಆಗಿ ಕೆಳಗೆ ಬಿದ್ದತ್ತು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರ ಹತ್ತಿರ ಹೋಗಿ ಚೆಕ್ ಮಾಡಿ ನೋಡಲು ಜಾನ ಡಿಯರ್ ಕಂಪನಿಯ ಟ್ರ್ಯಾಕ್ಟರ ಇದ್ದು ಪಾಸಿಂಗ್ ನಂಬರ ಎಮ್.ಹೆಚ್-13 ಎ.ಜೆ-9900 ಅಂತ ಇದ್ದು ಅದರ ಎಂಜಿನ ನಂಬರ:PY3029D208835 ಇರುತ್ತದೆ. ಟ್ಯಾಕ್ಟರ ಟ್ರೈಲಿಗೆ ನಂಬರ ಹಾಕಿರುವುದಿಲ್ಲ. ಟ್ರ್ಯಾಕ್ಟರ ಅಂದಾಜು ಕಿಮ್ಮತ್ತು 500000/- ರೂ ಆಗಬಹುದು. ನಂತರ ಸದರಿ ಟ್ರ್ಯಾಕ್ಟರನ್ನು ಜಪ್ತಿಮಾಡಿಕೊಂಡು  ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ದಿನಾಂಕ 08/05/2019 ರಂದು ಬೆಳ್ಳಿಗೆ ನನ್ನ ಗಂಡನು ನನ್ನ ಹಿರಿಯ ಮಗಳಾದ ಕಾದಂಬರಿಯ ವಿವಾಹದವನ್ನು ಮುಂದಿನ ದಿನಗಳಲ್ಲಿ ಮಾಡುವುದು ಫೀಕ್ಸ ಆಗಿದ್ದರಿಂದ ಅದಕ್ಕೆ ಲಗ್ನ ಸಲುವಾಗಿ ಬೆಳಗುಂಪಾ ಗ್ರಾಮದಲ್ಲಿ ವಾಸವಾಗಿರುವ ತನ್ನ ಸಂಬಂದಿಕರಾದ ಶರಣಪ್ಪ ತಂದೆ ಬಸಲಿಂಗಪ್ಪ ಹಡಪದ ಇವರ ಹತ್ತಿರ ದುಡ್ಡು ಕೇಳಿ ಬರುತ್ತೆನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾನೆ ದಿನಾಂಕ 08/05/19 ರಂದು 11-00 ಎ.ಎಂ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳಾದ ಕಾದಂಬರಿ, ಕಾವೇರಿ ಎಲ್ಲರು ಮನೆಯಲ್ಲಿದ್ದಾಗ ಬೆಳಗುಂಪಾ ಗ್ರಾಮದ ನಮ್ಮ ಸಂಬಂಧಿಕರಾದ ಶರಣಪ್ಪ ತಂದೆ ಬಸಲಿಂಗಪ್ಪ ಹಡಪದ ಇವರು ನನಗೆ ಫೋನ ಮಾಡಿ ತಿಳಿಸಿದ್ದೆನೆಂದರೆ ನಿನ್ನ ಗಂಡ ಸುಭಾಷ ಇವನು ಗುಂಡಗುರ್ತಿ  ಕ್ರಾಸ ದಿಂದ ಬೆಳಗುಂಪಾ ಗ್ರಾಮದ ಕಡೆಗೆ ಬರುವ ಸಂಬಂಧ ಗುಂಡಗುರ್ತಿ ಕ್ರಾಸದಿಂದ ಸೋನಾಲಿಕಾ ಕಂಪನಿಯ ನೀಲಿ ಬಣ್ಣದ ಟ್ರ್ಯಾಕ್ಟರ ಇಂಜನ ಹಾಗೂ ಅದಕ್ಕೆ ಜೋಡಣೆ ಮಾಡಿದ ಕೆಂಪು ಬಣ್ಣದ ಟ್ರ್ಯಾಲಿ ಇಂಜನ ಹಾಗೂ ಟ್ರ್ಯಾಲಿಗೆ ನಂಬರ ಇರದ ಟ್ರ್ಯಾಲಿಗೆ ಕೆಂಪು ಬಣ್ಣ ದಿಂದ ಭಾಗ್ಯವಂತಿ ಟ್ರ್ಯಾಲರ ಬರೆದಿದ್ದು ಟ್ರ್ಯಾಲಿಯಲ್ಲಿ ಕುಳಿತು ಹೋಗುವಾಗ ಟ್ರ್ಯಾಕ್ಟರ ಚಾಲಕನು ತನ್ನ  ಟ್ರ್ಯಾಕ್ಟರ ಅನ್ನು ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಗುಂಡಗುರ್ತಿ ಕ್ರಾಸ ಇನ್ನು 01 ಕಿ.ಮೀ ಅಂತರದಿಂದ ರೋಡಿನ ಎಡ ಭಾಗಕ್ಕೆ ಟ್ರ್ಯಾಕ್ಟರ ಚಾಲಕನು ಸ್ಪಿಡ ಚಲಾಯಿಸಿಕೊಂಡು ಹೋಗಿದ್ದರಿಂದ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ  ಮೇಲಿಂದ ಕೆಳಗೆ ಬಿದ್ದು ತಲೆ ಹಿಂಬದಿಯಲ್ಲಿ ಭಾರಿ ರಕ್ತ ಗಾಯ, ಬಲಗಾಲಿನ ಮುಂಡಿಗೆ ಭಾರಿ ಗುಪ್ತ ಗಾಯವಾಗಿ, ಕಾಲು ಮುರಿದಿರುತ್ತದೆ ಮತ್ತು ಮುಖಕ್ಕೆ ತರಚಿದ ಗಾಯಗಳಾಗಿ, ಮುಗಿನಿಂದ ರಕ್ತ ಸೋರಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಸದರಿ ರಸ್ತೆ ಅಪಘಾತ ಪಡಿಸಿದ ಒಂದು ಸೋನಾಲಿಕಾ ಕಂಪನಿಯ ನೀಲಿ ಬಣ್ಣದ ನಂಬರ ಇರದ ಟ್ರ್ಯಾಕ್ಟರ ಇಂಜನ ಹಾಗೂ ಅದಕ್ಕೆ ಜೋಡಣೆ ಮಾಡಿದ ಕೆಂಪು ಬಣ್ಣದ ಟ್ರ್ಯಾಲಿ ಅದರ ಮೇಲೆ ಕೆಂಪು ಬಣ್ಣ ದಿಂದ ಭಾಗ್ಯವಂತಿ ಟ್ರ್ಯಾಲರ ಅಂತಾ ಬರೆದಿದ್ದು ಟ್ರ್ಯಾಲಿಯಲ್ಲಿ ಕುಡಿಸಿಕೊಂಡು ಚಾಲಕನು ಟ್ರ್ಯಾಲಿಯನ್ನು ಅತೀ ವೇಗ ಹಾಗೂ ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಗುಂಡಗುರ್ತಿ ಕ್ರಾಸದಿಂದ 1 ಕಿಮೀ ಅಂತರದ ರೋಡಿನ ಎಡ ಭಾಗಕ್ಕೆ ಟ್ರ್ಯಾಕ್ಟರ ಮೇಲಿಂದ ಕೆಳಗೆ ಬಿದ್ದು ಮೃತ ಪಟ್ಟಿರುತ್ತಾನೆ ಅಂತಾ ಕಾರಣ ಸದರಿ ಚಾಲಕ ಹಾಗೂ ಟ್ರ್ಯಾಕ್ಟರ ಪತ್ತೆ ಹಚ್ಚಿ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ಭೀಮಬಾಯಿ ಗಂಡ ಸುಭಾಷ ಸಾ : ನೆಲೋಗಿ ತಾ : ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.