Police Bhavan Kalaburagi

Police Bhavan Kalaburagi

Tuesday, March 17, 2020

BIDAR DISTRICT DAILY CRIME UPDATE 17-03-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 17-03-2020

ಬಗದಲ ಪೊಲೀಸ ಠಾಣೆ ಅಪರಾಧ ಸಂ. 22/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 16-03-2020 ರಂದು ಖೇಣಿ ರಂಜೊಳ ಗ್ರಾಮದ ಲಕ್ಷ್ಮೀ ಗುಡಿ ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಕೆಲವು ಜನರು ಹಣ ಪಣಕ್ಕೆ ಹಚ್ಚಿ ಪಣ ತೊಟ್ಟು ಅಂದರ ಬಾಹರ ನಸೀಬಿನ ಜೂಜಾಟ ಆಡುತ್ತಿದ್ದಾರೆಂದು ಮೆಹಬೂಬ ಪಿ.ಎಸ್. [.ವಿ] ಬಗದಲ್ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಖೇಣಿ ರಂಜೋಳ ಗ್ರಾಮಕ್ಕೆ ಹೋಗಿ ಲಕ್ಷ್ಮೀ ಮಂದಿರ ಹತ್ತಿರದಿಂದ ಮರೆಯಾಗಿ ನೋಡಲು ಅಲ್ಲಿ ಖೇಣಿ ರಂಜೋಳ ಗ್ರಾಮದ ಲಕ್ಷ್ಮೀ ಗುಡಿ ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಆರೋಪಿತರಾದ 1) ಮಲ್ಲಿಕಾರ್ಜುನ ತಂದೆ ಅಡೇಪ್ಪಾ ಕಂದಗೊಳ ವಯ: 58 ವರ್ಷ, ಜಾತಿ: ಲಿಂಗಾಯತ, 2) ನಾಗೇಂದ್ರ ತಂದೆ ರೇವಣಯ್ಯಾ ನಿಗೋರೆ ವಯ: 35 ವರ್ಷ, ಜಾತಿ: ಸ್ವಾಮಿ, 3) ನಾಗೇಶ ತಂದೆ ರಘುನಾಥ ಮೇತ್ರೆ ವಯ: 30 ವರ್ಷ, ಜಾತಿ: ಎಸ್.ಟಿ ಗೊಂಡ, 4) ಅನೀಲಕುಮಾರ ತಂದೆ ಬಸವಣಪ್ಪಾ ವಯ: 40 ವರ್ಷ, ಜಾತಿ: ಲಿಂಗಾಯತ, 5) ಮಸ್ತಾನ ತಂದೆ ನಜೀರಸಾಬ ಚಿದ್ರಿ ವಯ: 40 ವರ್ಷ, ಜಾತಿ: ಮುಸ್ಲಿಂ, 6) ವಿಶ್ವನಾಥ ತಂದೆ ಬಸವರಾಜ ಹೊಳಕುಂದಿ ವಯ: 30 ವರ್ಷ, ಜಾತಿ: ಲಿಂಗಾಯತ, 7) ಶಿವಶರಣಯ್ಯಾ ತಂದೆ ವೀರಯ್ಯಾ ಸ್ವಾಮಿ ವಯ: 50 ವರ್ಷ, ಜಾತಿ: ಸ್ವಾಮಿ, 8) ನಾಗರಡ್ಡಿ ತಂದೆ ಲಿಂಗಪ್ಪಾ ಚಿಟ್ಟಾ ವಯ: 50 ವರ್ಷ, ಜಾತಿ: ಲಿಂಗಾಯತ ರಡ್ಡಿ, 9) ಈಶ್ವರಯ್ಯಾ ತಂದೆ ಶಂಕರಯ್ಯಾ ಮಠಮತಿ ವಯ: 45 ವರ್ಷ, ಜಾತಿ: ಸ್ವಾಮಿ, 10) ಸದಾನಂದ ತಂದೆ ಶರಣಪ್ಪಾ ಮಡಿವಾಳ ವಯ: 35 ವರ್ಷ, ಜಾತಿ: ಅಗಸ, 11) ವೈಜಿನಾಥ ತಂದೆ ಸಿದ್ರಾಮಪ್ಪಾ ನಾಟಿಕರ ವಯ: 45 ವರ್ಷ, ಜಾತಿ: ಎಸ್.ಟಿ ಟೊಕರಿ ಕೊಳಿ, 12) ವಿರಶೆಟ್ಟಿ ತಂದೆ ಸಿದ್ರಾಮಪ್ಪಾ ಹಳ್ಳಿಖೇಡ ವಯ: 40 ವರ್ಷ, ಜಾತಿ: ಲಿಂಗಾಯತ ಹಾಗೂ 13) ಅನೀಲಕುಮಾರ ತಂದೆ ಮಡೇಪ್ಪಾ ಮಜೀಗೆ ವಯ: 39 ವರ್ಷ, ಜಾತಿ: ಲಿಂಗಾಯತ, ಎಲ್ಲರೂ ಸಾ: ಖೇಣಿ ರಂಜೊಳ  ಇವರೆಲ್ಲರೂ ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ನಸೀಬಿನ ಜೂಜಾಟ ಆಟುತ್ತಿರುವಾಗ ಏಕ ಕಾಲಕ್ಕೆ ದಾಳಿ ಮಾಡಿ ಅವರಿಂದ ಒಟ್ಟು ನಗದು ಹಣ 15,650/- ರೂ. ಮತ್ತು 52 ಇಸ್ಪೀಟ ಎಲೆಗಳನ್ನು ತಾಬೇಗೆ ತೆಗೆದುಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 37/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 16-03-2020 ರಂದು ಬಸವಕಲ್ಯಾಣ ನಗರದ ಖಡಿಝಂಡಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಹಣ ಹಚ್ಚಿ ಪಣ ತೊಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆಂದು ಸುನಿಲಕುಮಾರ ಪಿ.ಎಸ್. (ಕಾ & ಸೂ) ಬಸವಕಲ್ಯಾಣ ನಗರ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಖಡಿಝಂಡಾ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಬಸವಕಲ್ಯಾಣ ನಗರದ ಖಡಿಝಂಡಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಸಲಿಮ ತಂದೆ ಮಹೆಬೂಬಸಾಬ ಜಮಾದಾರ ವಯ: 39 ವರ್ಷ, ಜಾತಿ: ಮುಸ್ಲಿಂ, ಸಾ: ಶಾಹ ಹುಸೇನ ಗಲ್ಲಿ ಬಸವಕಲ್ಯಾಣ, 2) ಮಹ್ಮದ ತಾಹೇರ ತಂದೆ ಮಹೆಬೂಬಸಾಬ ಸಿಕಂದರ್ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಖಡಿಝಂಡಾ ಆಶ್ರಯ ಕಾಲೋನಿ ಬಸವಕಲ್ಯಾಣ, 3) ಅಮ್ಜದ್ ತಂದೆ ಮೈನೋದ್ದಿನ್ ನಾಯಿಕವಾಡಿ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಖಡಿಝಂಡಾ ಆಶ್ರಯ ಕಾಲೋನಿ ಬಸವಕಲ್ಯಾಣ ಹಾಗೂ 4) ಫಿರಾಸತ ಅಲಿ ತಂದೆ ಅಬ್ದುಲ್ ರಹೆಮಾನ ನೀಲಂಗೆವಾಲೆ ವಯ: 19 ವರ್ಷ, ಜಾತಿ: ಮುಸ್ಲಿಂ, ಸಾ: ಖಡಿಝಂಡಾ ಆಶ್ರಯ ಕಾಲೋನಿ ಬಸವಕಲ್ಯಾಣ ಇವರೆಲ್ಲರೂ ಕುಳಿತು ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರುವುದನ್ನು ನೋಡಿ ಒಮ್ಮೆಲೆ ದಾಳಿ ಮಾಡಿ ಹಿಡಿದುಕೊಂಡು ಅವರಿಂದ ಒಟ್ಟು ನಗದು ಹಣ 1800/- ರೂ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Monday, March 16, 2020

BIDAR DISTRICT DAILY CRIME UPDATE 16-03-2020

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 16-03-2020

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 34/2020, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 15-03-2020 ರಂದು ಫಿರ್ಯಾದಿ ಫಯಿಮುದಾ ಬೇಗಂ ಗಂಡ ಸೈಯ್ಯದ ಶಾಕೀರ, ವಯ: 42 ವರ್ಷ, ಜಾತಿ: ಮುಸ್ಲಿಂ, ಸಾ: ಬಾರೂದ ಗಲ್ಲಿ ಬೀದರ ರವರು ತನ್ನ ಮಗನಾದ ಸೈಯ್ಯದ ಪರ್ವೆಜ್ ತಂದೆ ಸೈಯ್ಯದ ಶಾಕೀರ, ವಯ: 18 ವರ್ಷ, ಸಾ: ಬಾರೂದ ಗಲ್ಲಿ ಬೀದರ ಇಬ್ಬರು ಕೂಡಿಕೊಂಡು ಖಾಸಗಿ ಕೆಲಸ ಕುರಿತು ಬಾರುದ ಗಲ್ಲಿಯ ಮನೆಯಿಂದ ದುಲ್ಹನ ದರ್ವಾಜ-ಆಲ್ ಅಮೀನ ಕಾಲೇಜ ರೋಡ ಮುಖಾಂತರ ಹೋಗಲು ಬಾರುದ ಗಲ್ಲಿಯ ಕ್ರಾಸ ಹತ್ತಿರ ಬಂದಾಗ ದುಲ್ಹನ ದರ್ವಾಜ ಕಡೆಯಿಂದ ಮೊಟಾರ ಸೈಕಲ ನಂ. ಕೆಎ-38/ಕೆ-0818 ನೇದ್ದರ ಚಾಲಕನಾದ ಆರೋಪಿಯು ತನ್ನ ಮೊಟಾರ ಸೈಕಲನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಮಾಡಿ ಮೊಟಾರ ಸೈಕಲನ್ನು ನಿಲ್ಲಿಸಿದಂತೆ ಮಾಡಿ ಆಲ್ ಅಮೀನ ಕಾಲೇಜ ಕಡೆಗೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಎಡಗಾಲ ಮೊಳಕಾಲ ಹತ್ತಿರ ಭಾರಿ ಗುಪ್ತಗಾಯ ಮತ್ತು ಎರಡು ಭುಜದ ಹತ್ತಿರ ಗುಪ್ತಗಾಯವಾಗಿರುತ್ತದೆ, ಆಗ ಮಗನಾದ ಸೈಯ್ಯದ ಪರ್ವೇಜ್ ಈತನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂ. 20/2020, ಕಲಂ. 304(ಎ) ಐಪಿಸಿ :-
ದಿನಾಂಕ 14-03-2020 ರಂದು ಫಿರ್ಯಾದಿ ಪ್ರಶಾಂತಂದೆ ನಾಗಶೇಟ್ಟಿ ಮುಚಳಂಬೆ ಸಾ: ಚಟನಾಳ ರವರ ಅಣ್ಣನಾದ ರಾಜಕುಮಾರ ತಂದೆ ನಾಗಶೆಟ್ಟಿ ಮುಚಳಂಬೆ ಸಾ: ಚಟನಾಳ ಇತನು ಟ್ರ್ಯಾಕ್ಟರ ನಂ. .ಪಿ-02/.-4927 ನೇದನ್ನು ತೆಗೆದುಕೊಂಡು ಮ್ಮ ಜಮಿನಿನಲ್ಲಿ ಗೊಬ್ಬರ ಹೋಡೆಯುತ್ತೆನೆಂದು ಹೋಗಿ ಟ್ರ್ಯಾಕ್ಡರ ಟ್ರ್ಯಾಲಿಯ ಜಾಕ ಎತ್ತಿ ಗೊಬ್ಬರು ಕೇಳಗೆ ಚೆಲ್ಲುವಾಗ ಜಾಕ ಕೆಳಗೆ ಇಳೆಯದಿದ್ದಾಗ ಟ್ರ್ಯಾಕ್ಟರ ಜಾಕ ಇಳಿಸುವ ಕಾರ್ಯಚರಗೆ ಚಾಲು ಇಟ್ಟು ಟ್ರಾಲಿಯ ಕೆಳಗೆ ಹೋಗಿ ಜಾಕಿಗೆ ಎನಾಗಿದೆ ಅಂತ ಬಗ್ಗಿ ನೋಡಿದಾಗ ಟ್ರ್ಯಾಲಿ ಜಾಕ ಒಮ್ಮಲ್ಲೆ ಕೆಳಗೆ ಬಂದು ಣ್ಣನ ಎಡಪಾಳ ಕುತ್ತಿಗೆಗೆ ಭಾರಿಗಾಯಗೊಂಡು ಮೃತಪಟ್ಟಿದ್ದು ಇರುತ್ತದೆ ಅಂತ ಕೊಟ್ಟ ಪಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 15-03-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 32/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 15-03-2020 ರಂದು ತಳವಾಡ (ಕೆ) ಗ್ರಾಮದ ಶರಣಪ್ಪಾ ಮೇತ್ರೆ ರವರ ಹೊಲದ ಹತ್ತಿರ  ಸಾರ್ವಜನಿಕ ರೋಡಿನಲ್ಲಿ ಕೆಲವು ಜನರು ಇಸ್ಪೀಟ ಜೂಜಾಠ ಆಡುತ್ತಿದ್ದಾರೆ ಅಂತ ಹುಲಗೇಶ ಪಿ.ಎಸ್.. ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು ತಮ್ಮ ಸಿಬ್ಬಂದಿಯವರೊಡನೆ ತಳವಾಡ (ಕೆ) ಗ್ರಾಮದ ಶರಣಪ್ಪಾ ಮೇತ್ರೆ ರವರ ಹೊಲದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಮಹೇಬೂಬ ತಂದೆ ಮೌಲಾನಾ ಕೌಠೆ ವಯ: 26 ವರ್ಷ, ಜಾತಿ: ಮುಸ್ಲಿಂ, ಸಾ: ಕಣಜಿ, 2) ಆಕಾಶ ತಂದೆ ಶಾಮರಾವ ತಾಮಗ್ಯಾಳೆ ವಯ: 23 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಚೌಡಿಗಲ್ಲಿ ಭಾಲ್ಕಿ, 3) ಸಚೀನ ತಂದೆ ಪ್ರಕಾಶ ಬಿರಾದಾರ ವಯ: 20 ವರ್ಷ, ಜಾತಿ: ಲಿಂಗಾಯತ, ಸಾ: ಲಾಧಾ ಹಾಗೂ 4) ಅಮರ ತಂದೆ ಧನರಾಜ ಗೌಂಡಗಾವೆ ವಯ: 24 ವರ್ಷ, ಜಾತಿ: ಲಿಂಗಾಯತ, ಸಾ: ಮದಕಟ್ಟಿ ಇವರೆಲ್ಲರು ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಪರೇಲ ಎಂಬ ನಸಿಬಿನ ಜೂಜಾಟ ಆಡುತ್ತಿರುವಾಗ ಸದರಿ ಆರೋಪಿತರ ಮೇಲೆ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದುಕೊಂಡು ಅವರಿಂದ ಒಟ್ಟು 52 ಇಸ್ಪೀಟ ಎಲೆಗಳು ಹಾಗೂ 10,600/- ರೂ. ನಗದು ಹಣ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Sunday, March 15, 2020

BIDAR DISTRICT DAILY CRIME UPDATE 15-03-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 15-03-2020

ಚಿಟಗುಪ್ಪಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 03/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಪ್ರಭಾವತಿ  ಗಂಡ ಧರ್ಮಣ್ಣಾ ರಂಜೆರಿಕರ, ವಯ: 25 ವರ್ಷ, ಜಾತಿ: ಕಬ್ಬಲಿಗ, ಸಾ: ಚೀನಕೇರಾ ರವರ ಗಂಡನಾದ ಧರ್ಮಣ್ಣಾ ತಂದೆ ಮಾರುತಿ ರಂಜೆರಿಕರ ವಯ: 28 ವರ್ಷ ರವರು ಸರಾಯಿ ಕುಡಿಯುವ ಚಟ್ಟವುಳ್ಳವರಾಗಿದ್ದು, ಹೀಗಿರುವಾಗ ದಿನಾಂಕ 14-03-2020 ರಂದು ಗಂಡ ಸರಾಯಿ ಕುಡಿದ ಅಮಲಿನಲ್ಲಿ ಯಾವುದೋ ಕ್ರೀಮಿನಾಶಕ ಔಷಧಿ ಕುಡಿದು ಮ್ಮೂರ ಹನುಮಾನ ಮಂದಿರ ಹತ್ತಿರ ಬಿದ್ದಿರುವ ವಿಷಯ ಗುರುತಾಗಿ ಫಿರ್ಯಾದಿ ಹಾಗೂ ಅತ್ತಿಗೆ ಲಕ್ಷ್ಮೀಬಾಯಿ ಹಾಗೂ ತಮ್ಮ ಹಣಮಂತ ರವರೆಲ್ಲರೂ ನೋಡಿ ಗಂಡನಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಹುಮನಾಬಾದ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ವೈದ್ಯರಿಗೆ ತೊರಿಸಿ ಅವರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಬೀದರಗೆ ತಂದು ದಾಖಲು ಮಾಡಿದಾಗ ವೈದ್ಯರು ಗಂಡನಿಗೆ ಪರಿಶೀಲಿಸಿ ಇವರು ದಾರಿಮಧ್ಯದಲ್ಲಿ ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ, ತನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೆಯು ಯಾವುದೇ ತರಹದ ಸಂಶಯವಿರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ದಿನಾಂಕ 15-03-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.